Koha-Library-Management-System/C2/Add-an-Item-type/Kannada
From Script | Spoken-Tutorial
Time | Narration |
00:01 | Koha interface ನಲ್ಲಿ, How to add an Item type ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:08 | ಈ ಟ್ಯುಟೋರಿಯಲ್ ನಲ್ಲಿ ನಾವು, Item types ಮತ್ತು Item type ಅನ್ನು ಹೇಗೆ ಸೇರಿಸುವುದು ಇವುಗಳ ಬಗ್ಗೆ ಕಲಿಯುವೆವು. |
00:17 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
Ubuntu Linux Operating System 16.04 ಮತ್ತು Koha ಆವೃತ್ತಿ 16.05 ಇವುಗಳನ್ನು ಬಳಸುತ್ತಿದ್ದೇನೆ. |
00:30 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಲೈಬ್ರರಿ ಸೈನ್ಸ್ ಅನ್ನು ತಿಳಿದಿರಬೇಕು. |
00:36 | ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು Koha ಅನ್ನು ನಿಮ್ಮ ಸಿಸ್ಟಂ ನಲ್ಲಿ ಇನ್ಸ್ಟಾಲ್ ಮಾಡಿರಬೇಕು. |
00:42 | ಮತ್ತು, Koha ದಲ್ಲಿ ನೀವು Admin ಆಕ್ಸೆಸ್ ಅನ್ನು (access) ಹೊಂದಿರಬೇಕು. ಇಲ್ಲದಿದ್ದಲ್ಲಿ, ದಯವಿಟ್ಟು ಈ ವೆಬ್ಸೈಟ್ ನಲ್ಲಿ Koha spoken tutorial ಸರಣಿಯನ್ನು ನೋಡಿ. |
00:52 | ಈಗ ನಾವು ಆರಂಭಿಸೋಣ. ನಾನು Koha ಇಂಟರ್ಫೇಸ್ ಗೆ ಬದಲಾಯಿಸುತ್ತೇನೆ. |
00:58 | ನಾವು ಒಂದು Superlibrarian Bella ಅನ್ನು ಕ್ರಿಯೇಟ್ ಮಾಡಿದ್ದೆವು ಎಂದು ನೆನಪಿಸಿಕೊಳ್ಳಿ |
01:03 | ನಾವು ಈಗ username Bella ಮತ್ತು ಅವಳ ಪಾಸ್ವರ್ಡ್ ನೊಂದಿಗೆ ಲಾಗ್-ಇನ್ ಮಾಡುವೆವು. |
01:08 | ಈಗ ನಾವು ' Koha ಇಂಟರ್ಫೇಸ್' 'ನ ಒಳಗಡೆ, Superlibrarian Bella ಎಂದು ಇದ್ದೇವೆ. |
01:14 | ನಾವು ಮುಂದುವರಿಯುವ ಮುನ್ನ, Item Types ಎಂದರೇನು ಇದನ್ನು ಮೊದಲು ತಿಳಿಯೋಣ. |
01:20 | Item types ಸಾಮಾನ್ಯವಾಗಿ Books, Journals, CDs/DVDs ಗಳಂತಹ ಲೈಬ್ರರಿ ಯಲ್ಲಿರುವ ವಸ್ತುಗಳನ್ನು ಸೂಚಿಸುತ್ತವೆ. |
01:31 | Koha ದಲ್ಲಿಯ ಪ್ರತಿಯೊಂದು Item type , ಅದಕ್ಕಾಗಿಯೆ ನಿಗದಿ ಮಾಡಿದ ಒಂದು Collection code ಅನ್ನು ಹೊಂದಿದೆ. |
01:37 | ಈ ಕೋಡ್, ಆ Item type ಅನ್ನು ಮಾತ್ರ ಗುರುತಿಸುತ್ತದೆ. |
01:42 | ನಾವು ಒಂದು ಹೊಸ item type ಅನ್ನು ಸೇರಿಸಲು ಕಲಿಯೋಣ. |
01:46 | Koha Home ಪೇಜ್ ನಲ್ಲಿ, Koha Administration ಮೇಲೆ ಕ್ಲಿಕ್ ಮಾಡಿ. |
01:52 | Basic parameters ಎಂಬ ವಿಭಾಗಕ್ಕೆ ಹೋಗಿ ಮತ್ತು Item Types ಮೇಲೆ ಕ್ಲಿಕ್ ಮಾಡಿ. |
01:59 | Item types administration ಪೇಜ್ ನ ಮೇಲ್ತುದಿಯಲ್ಲಿರುವ, ' New Item Type' ಬಟನ್ ಅನ್ನು ಕ್ಲಿಕ್ ಮಾಡಿ. |
02:06 | Item type ಫೀಲ್ಡ್ ನಲ್ಲಿ, ನೀವು ಸೇರಿಸಬೇಕೆಂದಿರುವ ಹೊಸ item type ಗಾಗಿ, ಕೋಡ್ ಅನ್ನು ನಮೂದಿಸಿ. |
02:13 | ನಾನು Ref ಎಂದು ಟೈಪ್ ಮಾಡುವೆನು. |
02:17 | Description ಫೀಲ್ಡ್, item type ನ ವಿವರಣೆ ಆಗಿದೆ. |
02:22 | ಆದ್ದರಿಂದ ಇಲ್ಲಿ ನಾನು "Reference" ಎಂದು ಟೈಪ್ ಮಾಡುವೆನು. Search category ಫೀಲ್ಡ್ ಅನ್ನು ನಾನು ಹಾಗೇ ಬಿಡುತ್ತೇನೆ. |
02:30 | ಆಮೇಲೆ Choose an icon: ಇದೆ. |
02:33 | bridge ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
02:37 | ಇಲ್ಲಿ, ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ, item type ಗೆ ಸಂಬಂಧಿಸುವ ಐಕಾನ್ ಮೇಲೆ ಕ್ಲಿಕ್ ಮಾಡಿ. |
02:45 | ನಾನು ಈ Reference ಐಕಾನ್ ಅನ್ನು ಆಯ್ಕೆಮಾಡುವೆನು. |
02:49 | ನಂತರ, ನಾವು Hide in OPAC: ಹೇಗೆ ಸಹಾಯ ಮಾಡುತ್ತದೆ ಎಂದು ಕಲಿಯುವೆವು. |
02:54 | ಒಂದು ಪುಸ್ತಕವು ಹಾನಿಗೊಳಗಾಗಿದೆ (damaged) ಮತ್ತು ಬೈಂಡಿಂಗ್ ಗಾಗಿ ಇಟ್ಟುಕೊಳ್ಳಬೇಕಾಗಿದೆ ಎನ್ನೋಣ. |
03:02 | ಅಂತಹ ಸಂದರ್ಭಗಳಲ್ಲಿ, Hide in OPAC ಆಯ್ಕೆಯು, ಎಲ್ಲಾ ಬಳಕೆದಾರರಿಗೆ ಆ ಪುಸ್ತಕವು ಕಾಣದಂತೆ ಮಾಡುತ್ತದೆ. |
03:11 | ನಿಮ್ಮ ಅವಶ್ಯಕತೆಗೆ ಅನುಸಾರವಾಗಿ, Hide in OPAC: ಚೆಕ್-ಬಾಕ್ಸ್ ಅನ್ನು ಗುರುತಿಸಿ ಅಥವಾ ಹಾಗೇ ಬಿಡಿ. ನಾನು ಚೆಕ್-ಬಾಕ್ಸ್ ಅನ್ನು ಖಾಲಿ ಬಿಡುತ್ತೇನೆ. |
03:21 | ಲೈಬ್ರರಿಯಲ್ಲಿ ಇರಿಸಲಾದ ಆದರೆ 'circulate' ಮಾಡದ itemsಗಾಗಿ 'Not for loan' ಆಯ್ಕೆಯನ್ನು ಬಳಸಿ. |
03:29 | ಉದಾಹರಣೆಗೆ: Reference books, Rare books , Dictionary ಇತ್ಯಾದಿ. |
03:36 | ನಾನು ಈ ಚೆಕ್-ಬಾಕ್ಸ್ ಅನ್ನು ಖಾಲಿ ಬಿಡುತ್ತೇನೆ. |
03:40 | ನೀವು ಬಯಸಿದರೆ, ಚಾರ್ಜ್ ಮಾಡಲು Rental charge field ನಲ್ಲಿ ನೀವು ಮೊತ್ತವನ್ನು ನಮೂದಿಸಬಹುದು.
ಲೈಬ್ರರಿಯಲ್ಲಿ ನಿರ್ದಿಷ್ಟವಾದ item ಗಳಿಗೆ, ಕನಿಷ್ಠ ಬಾಡಿಗೆ ಶುಲ್ಕವನ್ನು ವಿಧಿಸಬೇಕಾಗಬಹುದು. |
03:51 | ಹೆಚ್ಚಿನ ಐಟಂ ಗಳಿಗೆ, ಬಾಡಿಗೆ ಶುಲ್ಕವನ್ನು ವಿಧಿಸುವ ಅಗತ್ಯವಿಲ್ಲ. ಹೀಗಾಗಿ ನಾನು ಯಾವುದೇ ಶುಲ್ಕವನ್ನು ನಮೂದಿಸುವುದಿಲ್ಲ. |
04:00 | ಒಂದುವೇಳೆ, ನೀವು ಶುಲ್ಕವನ್ನು ನಮೂದಿಸಲು ಬಯಸಿದರೆ, ಸಮಂಜಸವಾದ ಸಂಖ್ಯೆಯನ್ನು ಮಾತ್ರ ನಮೂದಿಸಲು ನೆನಪಿಡಿ. |
04:07 | ನಂತರ, 'Checkin message:' ಎಂಬ ಟೆಕ್ಸ್ಟ್-ಫೀಲ್ಡ್ ಇದೆ. |
04:11 | Checkin message, ಒಂದು ನಿರ್ದಿಷ್ಟ item ನ ವಿಧವನ್ನು ಅವಲಂಬಿಸಿದೆ. |
04:16 | ಆಯ್ಕೆಗಳು ಹೀಗಿರಬಹುದು- Book , Serial, Cds/DVDs, Bound Volume, Microfilm ಇತ್ಯಾದಿ. |
04:26 | Checkin message: ಫೀಲ್ಡ್ ನಲ್ಲಿ, ನಾನು Bound Volume ಎಂದು ಟೈಪ್ ಮಾಡುವೆನು. |
04:32 | ಇದರ ನಂತರ Checkin message type: ಇದೆ. |
04:36 | item type ಅನ್ನು ಆಧರಿಸಿ, item ಗಾಗಿ Message (ಮೆಸೇಜ್) ಅಥವಾ Alert ಅನ್ನು (ಅಲರ್ಟ್) ಆಯ್ಕೆಮಾಡಿ. |
04:42 | ನೆನಪಿಡಿ, ಈ ನಿರ್ದಿಷ್ಟ ಐಟಂಗೆ ಚೆಕ್-ಇನ್ ಗಳನ್ನು ಮಾಡಿದಾಗ, ಆಯ್ದ ಆಯ್ಕೆಯ ಪ್ರಕಾರ, ಒಂದು ಮೆಸೇಜ್ ಅಥವಾ ಎಚ್ಚರಿಕೆಯನ್ನು ಪ್ರದರ್ಶಿಸಲಾಗುತ್ತದೆ. |
04:53 | ನಾನು Message ಅನ್ನು ಆಯ್ಕೆಮಾಡುವೆನು. |
04:56 | ನಂತರ SIP media type (ಸಿಪ್ ಮೀಡಿಯಾ ಟೈಪ್) ಇದೆ.
ನಿಮ್ಮ ಲೈಬ್ರರಿಯಲ್ಲಿ, ಸಾರ್ಟರ್ (sorter) ಅಥವಾ ಲಾಕರ್ (locker) ಸೌಲಭ್ಯವನ್ನು ಬಳಸುತ್ತಿದ್ದರೆ ಮಾತ್ರ SIP media type ಅನ್ವಯವಾಗುತ್ತದೆ. |
05:07 | ಆದ್ದರಿಂದ ಇಲ್ಲಿ, SIP media type ಅನ್ನು ನಾನು ಹಾಗೇ ಬಿಡುತ್ತೇನೆ. |
05:11 | ನಿಮಗೆ ಬೇಕೆನಿಸಿದರೆ, Summary ಫೀಲ್ಡ್ ನಲ್ಲಿ, ಆಯಾ item ನ ಸಾರಾಂಶವನ್ನು ಬರೆಯಿರಿ. |
05:18 | ನಾನು ಹೀಗೆ ಟೈಪ್ ಮಾಡುವೆನು -
Item type- Reference Facilitate- Self check out/return. |
05:25 | ಕೊನೆಯದಾಗಿ, Save changes ಬಟನ್ ಮೇಲೆ ಕ್ಲಿಕ್ ಮಾಡಿ. |
05:30 | Item types administration ಎಂಬ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. |
05:35 | ಹೊಸ item type ಗಾಗಿ ತುಂಬಿದ ಎಲ್ಲಾ ವಿವರಗಳು, Item types administration ಪೇಜ್ ನಲ್ಲಿ ಕೋಷ್ಟಕದ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ. |
05:45 | ಗಮನಿಸಬೇಕಾದ ಕೆಲವು ಮುಖ್ಯ ಅಂಶಗಳು - |
05:49 | item types ಗೆ ಅಸೈನ್ ಮಾಡಿದ Collection codes ಗಳನ್ನು ಎಡಿಟ್ ಮಾಡಲು ಸಾಧ್ಯವಿಲ್ಲ. |
05:54 | item type ನ ವಿವರಣೆಯನ್ನು ಎಡಿಟ್ ಮಾಡಬಹುದು. ಒಮ್ಮೆ ಲೈಬ್ರರಿ ಯಲ್ಲಿಯ items ಗಳು item type ಅನ್ನು ಬಳಸಿದ ನಂತರ, ಅದನ್ನು ಡಿಲೀಟ್ ಮಾಡಲು ಸಾಧ್ಯವಿಲ್ಲ. |
06:05 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
06:08 | ಸಂಕ್ಷಿಪ್ತವಾಗಿ,
ಈ ಟ್ಯುಟೋರಿಯಲ್ ನಲ್ಲಿ ನಾವು - Item types ಮತ್ತು ಒಂದು Item type ಅನ್ನು ಹೇಗೆ ಸೇರಿಸುವುದು ಎಂಬುದರ ಬಗ್ಗೆ ಕಲಿತಿದ್ದೇವೆ. |
06:18 | ಅಸೈನ್ಮೆಂಟ್ ಗಾಗಿ – ಒಂದು ಹೊಸ item- Book ಮತ್ತು Serial ಅನ್ನು ನಿಮ್ಮ ಲೈಬ್ರರಿ ಗೆ ಸೇರಿಸಿ. |
06:25 | ಈ ಲಿಂಕ್ ನಲ್ಲಿರುವ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಡೌನ್ಲೋಡ್ ಮಾಡಿ ವೀಕ್ಷಿಸಿ. |
06:33 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣ ಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
06:43 | ದಯವಿಟ್ಟು ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡುಗಳೊಂದಿಗೆ ಈ ಫೋರಂ ನಲ್ಲಿ ಪೋಸ್ಟ್ ಮಾಡಿ. |
06:47 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಧನಸಹಾಯವನ್ನು ಪಡೆದಿದೆ. ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಲಿಂಕ್ ನಲ್ಲಿ ಲಭ್ಯವಿದೆ. |
06:59 | ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ.
ಧನ್ಯವಾದಗಳು. |