Koha-Library-Management-System/C2/Add-an-Item-type/Kannada

From Script | Spoken-Tutorial
Jump to: navigation, search
Time Narration
00:01 Koha interface ನಲ್ಲಿ, How to add an Item type ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:08 ಈ ಟ್ಯುಟೋರಿಯಲ್ ನಲ್ಲಿ ನಾವು, Item types ಮತ್ತು Item type ಅನ್ನು ಹೇಗೆ ಸೇರಿಸುವುದು ಇವುಗಳ ಬಗ್ಗೆ ಕಲಿಯುವೆವು.
00:17 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux Operating System 16.04 ಮತ್ತು Koha ಆವೃತ್ತಿ 16.05 ಇವುಗಳನ್ನು ಬಳಸುತ್ತಿದ್ದೇನೆ.

00:30 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಲೈಬ್ರರಿ ಸೈನ್ಸ್ ಅನ್ನು ತಿಳಿದಿರಬೇಕು.
00:36 ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು Koha ಅನ್ನು ನಿಮ್ಮ ಸಿಸ್ಟಂ ನಲ್ಲಿ ಇನ್ಸ್ಟಾಲ್ ಮಾಡಿರಬೇಕು.
00:42 ಮತ್ತು, Koha ದಲ್ಲಿ ನೀವು Admin ಆಕ್ಸೆಸ್ ಅನ್ನು (access) ಹೊಂದಿರಬೇಕು. ಇಲ್ಲದಿದ್ದಲ್ಲಿ, ದಯವಿಟ್ಟು ಈ ವೆಬ್ಸೈಟ್ ನಲ್ಲಿ Koha spoken tutorial ಸರಣಿಯನ್ನು ನೋಡಿ.
00:52 ಈಗ ನಾವು ಆರಂಭಿಸೋಣ. ನಾನು Koha ಇಂಟರ್ಫೇಸ್ ಗೆ ಬದಲಾಯಿಸುತ್ತೇನೆ.
00:58 ನಾವು ಒಂದು Superlibrarian Bella ಅನ್ನು ಕ್ರಿಯೇಟ್ ಮಾಡಿದ್ದೆವು ಎಂದು ನೆನಪಿಸಿಕೊಳ್ಳಿ
01:03 ನಾವು ಈಗ username Bella ಮತ್ತು ಅವಳ ಪಾಸ್ವರ್ಡ್ ನೊಂದಿಗೆ ಲಾಗ್-ಇನ್ ಮಾಡುವೆವು.
01:08 ಈಗ ನಾವು ' Koha ಇಂಟರ್ಫೇಸ್' 'ನ ಒಳಗಡೆ, Superlibrarian Bella ಎಂದು ಇದ್ದೇವೆ.
01:14 ನಾವು ಮುಂದುವರಿಯುವ ಮುನ್ನ, Item Types ಎಂದರೇನು ಇದನ್ನು ಮೊದಲು ತಿಳಿಯೋಣ.
01:20 Item types ಸಾಮಾನ್ಯವಾಗಿ Books, Journals, CDs/DVDs ಗಳಂತಹ ಲೈಬ್ರರಿ ಯಲ್ಲಿರುವ ವಸ್ತುಗಳನ್ನು ಸೂಚಿಸುತ್ತವೆ.
01:31 Koha ದಲ್ಲಿಯ ಪ್ರತಿಯೊಂದು Item type , ಅದಕ್ಕಾಗಿಯೆ ನಿಗದಿ ಮಾಡಿದ ಒಂದು Collection code ಅನ್ನು ಹೊಂದಿದೆ.
01:37 ಈ ಕೋಡ್, ಆ Item type ಅನ್ನು ಮಾತ್ರ ಗುರುತಿಸುತ್ತದೆ.
01:42 ನಾವು ಒಂದು ಹೊಸ item type ಅನ್ನು ಸೇರಿಸಲು ಕಲಿಯೋಣ.
01:46 Koha Home ಪೇಜ್ ನಲ್ಲಿ, Koha Administration ಮೇಲೆ ಕ್ಲಿಕ್ ಮಾಡಿ.
01:52 Basic parameters ಎಂಬ ವಿಭಾಗಕ್ಕೆ ಹೋಗಿ ಮತ್ತು Item Types ಮೇಲೆ ಕ್ಲಿಕ್ ಮಾಡಿ.
01:59 Item types administration ಪೇಜ್ ನ ಮೇಲ್ತುದಿಯಲ್ಲಿರುವ, ' New Item Type' ಬಟನ್ ಅನ್ನು ಕ್ಲಿಕ್ ಮಾಡಿ.
02:06 Item type ಫೀಲ್ಡ್ ನಲ್ಲಿ, ನೀವು ಸೇರಿಸಬೇಕೆಂದಿರುವ ಹೊಸ item type ಗಾಗಿ, ಕೋಡ್ ಅನ್ನು ನಮೂದಿಸಿ.
02:13 ನಾನು Ref ಎಂದು ಟೈಪ್ ಮಾಡುವೆನು.
02:17 Description ಫೀಲ್ಡ್, item type ನ ವಿವರಣೆ ಆಗಿದೆ.
02:22 ಆದ್ದರಿಂದ ಇಲ್ಲಿ ನಾನು "Reference" ಎಂದು ಟೈಪ್ ಮಾಡುವೆನು. Search category ಫೀಲ್ಡ್ ಅನ್ನು ನಾನು ಹಾಗೇ ಬಿಡುತ್ತೇನೆ.
02:30 ಆಮೇಲೆ Choose an icon: ಇದೆ.
02:33 bridge ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
02:37 ಇಲ್ಲಿ, ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ, item type ಗೆ ಸಂಬಂಧಿಸುವ ಐಕಾನ್ ಮೇಲೆ ಕ್ಲಿಕ್ ಮಾಡಿ.
02:45 ನಾನು ಈ Reference ಐಕಾನ್ ಅನ್ನು ಆಯ್ಕೆಮಾಡುವೆನು.
02:49 ನಂತರ, ನಾವು Hide in OPAC: ಹೇಗೆ ಸಹಾಯ ಮಾಡುತ್ತದೆ ಎಂದು ಕಲಿಯುವೆವು.
02:54 ಒಂದು ಪುಸ್ತಕವು ಹಾನಿಗೊಳಗಾಗಿದೆ (damaged) ಮತ್ತು ಬೈಂಡಿಂಗ್ ಗಾಗಿ ಇಟ್ಟುಕೊಳ್ಳಬೇಕಾಗಿದೆ ಎನ್ನೋಣ.
03:02 ಅಂತಹ ಸಂದರ್ಭಗಳಲ್ಲಿ, Hide in OPAC ಆಯ್ಕೆಯು, ಎಲ್ಲಾ ಬಳಕೆದಾರರಿಗೆ ಆ ಪುಸ್ತಕವು ಕಾಣದಂತೆ ಮಾಡುತ್ತದೆ.
03:11 ನಿಮ್ಮ ಅವಶ್ಯಕತೆಗೆ ಅನುಸಾರವಾಗಿ, Hide in OPAC: ಚೆಕ್-ಬಾಕ್ಸ್ ಅನ್ನು ಗುರುತಿಸಿ ಅಥವಾ ಹಾಗೇ ಬಿಡಿ. ನಾನು ಚೆಕ್-ಬಾಕ್ಸ್ ಅನ್ನು ಖಾಲಿ ಬಿಡುತ್ತೇನೆ.
03:21 ಲೈಬ್ರರಿಯಲ್ಲಿ ಇರಿಸಲಾದ ಆದರೆ 'circulate' ಮಾಡದ itemsಗಾಗಿ 'Not for loan' ಆಯ್ಕೆಯನ್ನು ಬಳಸಿ.
03:29 ಉದಾಹರಣೆಗೆ: Reference books, Rare books , Dictionary ಇತ್ಯಾದಿ.
03:36 ನಾನು ಈ ಚೆಕ್-ಬಾಕ್ಸ್ ಅನ್ನು ಖಾಲಿ ಬಿಡುತ್ತೇನೆ.
03:40 ನೀವು ಬಯಸಿದರೆ, ಚಾರ್ಜ್ ಮಾಡಲು Rental charge field ನಲ್ಲಿ ನೀವು ಮೊತ್ತವನ್ನು ನಮೂದಿಸಬಹುದು.

ಲೈಬ್ರರಿಯಲ್ಲಿ ನಿರ್ದಿಷ್ಟವಾದ item ಗಳಿಗೆ, ಕನಿಷ್ಠ ಬಾಡಿಗೆ ಶುಲ್ಕವನ್ನು ವಿಧಿಸಬೇಕಾಗಬಹುದು.

03:51 ಹೆಚ್ಚಿನ ಐಟಂ ಗಳಿಗೆ, ಬಾಡಿಗೆ ಶುಲ್ಕವನ್ನು ವಿಧಿಸುವ ಅಗತ್ಯವಿಲ್ಲ. ಹೀಗಾಗಿ ನಾನು ಯಾವುದೇ ಶುಲ್ಕವನ್ನು ನಮೂದಿಸುವುದಿಲ್ಲ.
04:00 ಒಂದುವೇಳೆ, ನೀವು ಶುಲ್ಕವನ್ನು ನಮೂದಿಸಲು ಬಯಸಿದರೆ, ಸಮಂಜಸವಾದ ಸಂಖ್ಯೆಯನ್ನು ಮಾತ್ರ ನಮೂದಿಸಲು ನೆನಪಿಡಿ.
04:07 ನಂತರ, 'Checkin message:' ಎಂಬ ಟೆಕ್ಸ್ಟ್-ಫೀಲ್ಡ್ ಇದೆ.
04:11 Checkin message, ಒಂದು ನಿರ್ದಿಷ್ಟ item ನ ವಿಧವನ್ನು ಅವಲಂಬಿಸಿದೆ.
04:16 ಆಯ್ಕೆಗಳು ಹೀಗಿರಬಹುದು- Book , Serial, Cds/DVDs, Bound Volume, Microfilm ಇತ್ಯಾದಿ.
04:26 Checkin message: ಫೀಲ್ಡ್ ನಲ್ಲಿ, ನಾನು Bound Volume ಎಂದು ಟೈಪ್ ಮಾಡುವೆನು.
04:32 ಇದರ ನಂತರ Checkin message type: ಇದೆ.
04:36 item type ಅನ್ನು ಆಧರಿಸಿ, item ಗಾಗಿ Message (ಮೆಸೇಜ್) ಅಥವಾ Alert ಅನ್ನು (ಅಲರ್ಟ್) ಆಯ್ಕೆಮಾಡಿ.
04:42 ನೆನಪಿಡಿ, ಈ ನಿರ್ದಿಷ್ಟ ಐಟಂಗೆ ಚೆಕ್-ಇನ್ ಗಳನ್ನು ಮಾಡಿದಾಗ, ಆಯ್ದ ಆಯ್ಕೆಯ ಪ್ರಕಾರ, ಒಂದು ಮೆಸೇಜ್ ಅಥವಾ ಎಚ್ಚರಿಕೆಯನ್ನು ಪ್ರದರ್ಶಿಸಲಾಗುತ್ತದೆ.
04:53 ನಾನು Message ಅನ್ನು ಆಯ್ಕೆಮಾಡುವೆನು.
04:56 ನಂತರ SIP media type (ಸಿಪ್ ಮೀಡಿಯಾ ಟೈಪ್) ಇದೆ.

ನಿಮ್ಮ ಲೈಬ್ರರಿಯಲ್ಲಿ, ಸಾರ್ಟರ್ (sorter) ಅಥವಾ ಲಾಕರ್ (locker) ಸೌಲಭ್ಯವನ್ನು ಬಳಸುತ್ತಿದ್ದರೆ ಮಾತ್ರ SIP media type ಅನ್ವಯವಾಗುತ್ತದೆ.

05:07 ಆದ್ದರಿಂದ ಇಲ್ಲಿ, SIP media type ಅನ್ನು ನಾನು ಹಾಗೇ ಬಿಡುತ್ತೇನೆ.
05:11 ನಿಮಗೆ ಬೇಕೆನಿಸಿದರೆ, Summary ಫೀಲ್ಡ್ ನಲ್ಲಿ, ಆಯಾ item ನ ಸಾರಾಂಶವನ್ನು ಬರೆಯಿರಿ.
05:18 ನಾನು ಹೀಗೆ ಟೈಪ್ ಮಾಡುವೆನು -

Item type- Reference

Facilitate- Self check out/return.

05:25 ಕೊನೆಯದಾಗಿ, Save changes ಬಟನ್ ಮೇಲೆ ಕ್ಲಿಕ್ ಮಾಡಿ.
05:30 Item types administration ಎಂಬ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.
05:35 ಹೊಸ item type ಗಾಗಿ ತುಂಬಿದ ಎಲ್ಲಾ ವಿವರಗಳು, Item types administration ಪೇಜ್ ನಲ್ಲಿ ಕೋಷ್ಟಕದ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ.
05:45 ಗಮನಿಸಬೇಕಾದ ಕೆಲವು ಮುಖ್ಯ ಅಂಶಗಳು -
05:49 item types ಗೆ ಅಸೈನ್ ಮಾಡಿದ Collection codes ಗಳನ್ನು ಎಡಿಟ್ ಮಾಡಲು ಸಾಧ್ಯವಿಲ್ಲ.
05:54 item type ನ ವಿವರಣೆಯನ್ನು ಎಡಿಟ್ ಮಾಡಬಹುದು. ಒಮ್ಮೆ ಲೈಬ್ರರಿ ಯಲ್ಲಿಯ items ಗಳು item type ಅನ್ನು ಬಳಸಿದ ನಂತರ, ಅದನ್ನು ಡಿಲೀಟ್ ಮಾಡಲು ಸಾಧ್ಯವಿಲ್ಲ.
06:05 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
06:08 ಸಂಕ್ಷಿಪ್ತವಾಗಿ,

ಈ ಟ್ಯುಟೋರಿಯಲ್ ನಲ್ಲಿ ನಾವು - Item types ಮತ್ತು ಒಂದು Item type ಅನ್ನು ಹೇಗೆ ಸೇರಿಸುವುದು ಎಂಬುದರ ಬಗ್ಗೆ ಕಲಿತಿದ್ದೇವೆ.

06:18 ಅಸೈನ್ಮೆಂಟ್ ಗಾಗಿ – ಒಂದು ಹೊಸ item- Book ಮತ್ತು Serial ಅನ್ನು ನಿಮ್ಮ ಲೈಬ್ರರಿ ಗೆ ಸೇರಿಸಿ.
06:25 ಈ ಲಿಂಕ್ ನಲ್ಲಿರುವ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಡೌನ್ಲೋಡ್ ಮಾಡಿ ವೀಕ್ಷಿಸಿ.
06:33 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣ ಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
06:43 ದಯವಿಟ್ಟು ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡುಗಳೊಂದಿಗೆ ಈ ಫೋರಂ ನಲ್ಲಿ ಪೋಸ್ಟ್ ಮಾಡಿ.
06:47 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಧನಸಹಾಯವನ್ನು ಪಡೆದಿದೆ. ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಲಿಂಕ್ ನಲ್ಲಿ ಲಭ್ಯವಿದೆ.
06:59 ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14