Drupal/C3/Table-of-Fields-with-Views/Kannada

From Script | Spoken-Tutorial
Revision as of 20:26, 20 July 2017 by NaveenBhat (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 Table of Fields with Viewsನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು fields ಗಳ table ಅನ್ನು ರಚನೆ ಮಾಡುವುದನ್ನು ಕಲಿಯುತ್ತೇವೆ.
00:12 ಈ ಟ್ಯುಟೋರಿಯಲ್ ಗಾಗಿ ನಾನು

Ubuntu Linux Operating System Drupal 8 ಮತ್ತು Firefox ವೆಬ್ ಬ್ರೌಸರ್ ಗಳನ್ನು ಉಪಯೋಗಿಸಿದ್ದೇನೆ.

00:23 ನೀವು ನಿಮಗೆ ಇಷ್ಟವಾದ ವೆಬ್ ಬ್ರೌಸರ್ ಅನ್ನು ಉಪಯೋಗಿಸಬಹುದು.
00:27 ನಾವು ಈಗ ಫೀಲ್ಡ್ ಗಳ Table ಎಂದರೇನು ಎಂದು ನೋಡೋಣ.
00:31 ಈಗ ನಾವು ಮುಂಬರುವ ಇವೆಂಟ್ ಗಳ ಪಟ್ಟಿಯನ್ನು ಡಿಸ್ಪ್ಲೇ ಮಾಡಬಯಸುತ್ತೇವೆ ಅಂದುಕೊಳ್ಳೋಣ.
00:38 ಇಲ್ಲಿ ಬಳಕೆದಾರರು ಇವೆಂಟ್ ಗಳ ಕೆಲವು ಮಾಹಿತಿ ಮತ್ತು ಅದರ ದಿನಾಂಕವನ್ನು ನೋಡಬಹುದು.
00:45 ಇಲ್ಲಿ ತೋರಿಸಿರುವ ಫೀಲ್ಡ್ ಗಳು 'Events' Content type ನಲ್ಲಿವೆ.
00:50 ಇಲ್ಲಿ ನಾವು ಕೆಲವು ಇವೆಂಟ್ ಗಳ ಕೆಲವು ಫೀಲ್ಡ್ ಗಳನ್ನು ಮಾತ್ರ ಡಿಸ್ಪ್ಲೇ ಮಾಡುತ್ತಿದ್ದೇವೆ.
00:55 ಅದರಲ್ಲೂ ಇಲ್ಲಿ ನಾವು ಪ್ರಸ್ತುತ ಸಮಯದ ನಂತರದ ದಿನಾಂಕವನ್ನು ಹೊಂದಿರುವ ಇವೆಂಟ್ ಗಳನ್ನು ಮಾತ್ರ ಡಿಸ್ಪ್ಲೇ ಮಾಡುತ್ತಿದ್ದೇವೆ.
01:02 ಬೇರೆ ಪ್ರೊಗ್ರಾಂ ಗಳಲ್ಲಿ ಈ ರೀತಿ ಆಯ್ಕೆ ಮಾಡಿಕೊಂಡಿರುವ ಕಂಟೆಂಟ್ ಗಳ ಪಟ್ಟಿಯನ್ನು Reports ಅಥವಾ Query Results, ಎಂದೂ ಕರೆಯುತ್ತಾರೆ.
01:11 ಈಗ ನಾವು fieldಗಳ table ಗೆ ಒಂದು view ಅನ್ನು ರಚನೆ ಮಾಡೋಣ.
01:16 ಈಗ ನಾವು ಮೊದಲೇ ತಯಾರಿಸಿದ ವೆಬ್ ಸೈಟ್ ಅನ್ನು ತೆರೆಯೋಣ.
01:21 Shortcuts ಗೆ ಹೋಗಿ , ನಂತರ Views ನಲ್ಲಿ Add new view ಅನ್ನು ಕ್ಲಿಕ್ ಮಾಡಿ.
01:28 ನಾವು ಇದನ್ನು "Upcoming Events" ಎಂದು ಹೆಸರಿಸೋಣ. ಈಗ Content of type ಅನ್ನು "All" ಇಂದ "Events"ಗೆ ಬದಲಿಸೋಣ.
01:37 ನಾವು ಇದೇ ರೀತಿ ಯಾವುದೇ Content type ಗೆ ಅಂದರೆ– Log entries, Files, Content revisions, Taxonomy terms, Users, Custom blocks ಮುಂತಾದವುಗಳಿಗೂ ಮಾಡಬಹುದು.
01:50 ಈಗ sorted by ಆಯ್ಕೆಯನ್ನು Newest first ಎಂದೇ ಇಡೋಣ.
01:55 Create a page ನ ಮೇಲೆ ಚೆಕ್ ಮಾಡಿ ಮತ್ತು Display format, ನಲ್ಲಿ "Table" of fields ಅನ್ನು ಆಯ್ಕೆ ಮಾಡಿಕೊಳ್ಳಿ.
02:03 Items to display ನಲ್ಲಿ ಡಿಫಾಲ್ಟ್ ಬೆಲೆಯಾದ 10 ಅನ್ನು ಹಾಗೆ ಇಡೋಣ.
02:09 ನಂತರ Use a pager ಮತ್ತು Create a menu link. ಗಳ ಮೇಲೂ ಕೂಡ ಚೆಕ್ ಅನ್ನು ಮಾಡೋಣ.
02:17 Menu ವಿನ ಅಡಿಯಲ್ಲಿ , "Main navigation" ಅನ್ನು ಆಯ್ಕೆಮಾಡಿಕೊಳ್ಳೋಣ ಮತ್ತು Link text ಅನ್ನು "Upcoming Events"ಎಂದು ಕರೆಯೋಣ.
02:28 ಈಗ ನಮ್ಮ ಮೆನು ಸರಿಯಾಗಿ ಜೋಡಿಸಲ್ಪಟ್ಟಿಲ್ಲ ಇದನ್ನು ಶೀಘ್ರದಲ್ಲಿ ಮಾಡೋಣ.
02:34 Save and edit ನ ಮೇಲೆ ಕ್ಲಿಕ್ ಮಾಡಿ.
02:37 ಈಗ 5 ಪ್ರಶ್ನೆಗಳತ್ತ ಗಮನ ಹರಿಸೋಣ.

Display ಯು "page" ಎಂದಿದೆ.

02:42 FORMAT ಇದು "table" ಎಂದಿದೆ..
02:45 FIELDS, ನಡಿಯಲ್ಲಿ "Title" ಎಂದಿದೆ.
02:48 FILTER CRITERIA ದಲ್ಲಿ ನಮಗೆ ಕೇವಲ "Upcoming events" ಬೇಕು ಹಾಗಾಗಿ ನಾವು ಅದನ್ನು ಬದಲಿಸಬೇಕು.
02:55 SORT CRITERIA ಇದು ಕೂಡ ತಪ್ಪಾಗಿದೆ ಏಕೆಂದರೆ ನಮಗೆ Published date ನ ಬದಲು Event date ಬೇಕು.
03:03 ಪ್ರಾರಂಭಿಸುವ ಮೊದಲು Save ಮೇಲೆ ಕ್ಲಿಕ್ ಮಾಡಿ.
03:06 ಮಧ್ಯದಲ್ಲಿ ನಾವು ನಮ್ಮ PAGE SETTINGS ಅನ್ನು ಹೊಂದಿದ್ದೇವೆ.
03:10 ಇಲ್ಲಿ Path, Menu, Access Permission ಗಳಿವೆ ಮತ್ತು ಈಗ ಲ್ಯಾಂಡಿಗ್ ಪೇಜ್ ಗೆ ಎಲ್ಲರೂ ಎಕ್ಸೆಸ್ ಪರ್ಮಿಶನ್ ಅನ್ನು ಹೊಂದಿದ್ದಾರೆ.
03:20 ಇಲ್ಲಿ Add ಬಟನ್ ಮೇಲೆ ಕ್ಲಿಕ್ ಮಾಡಿದರೆ HEADER ಅಥವಾ FOOTER ಅನ್ನು ಸೇರಿಸಬಹುದು.
03:27 ಇಲ್ಲಿ ಫಲಿತಾಂಶ ಇಲ್ಲದಿದ್ದರೆ ಏನು ಮಾಡಬೇಕೆಂದು ಸೇರಿಸಬಹುದು.
03:31 ಇಲ್ಲಿ ಒಂದು page ನಲ್ಲಿ ಎಷ್ಟು ಇಮೇಜ್ ಗಳನ್ನು ತೋರಿಸಬೇಕೆಂದು ನಿರ್ಧರಿಸಬಹುದು.
03:36 ಮತ್ತು ಅಲ್ಲಿ ಕೆಳಭಾಗದಲ್ಲಿ pager ಇದೆಯೇ ಇಲ್ಲವೇ, ಅಥವಾ View ನ ಕೆಳಭಾಗದಲ್ಲಿ Read More link ಗೆ ಇಲ್ಲವೇ ಎಂದು ನಿರ್ಧರಿಸಬಹುದು.
03:44 ADVANCED ಟ್ಯಾಬ್ ನಡಿಯಲ್ಲಿ ಇರುವ ಅಂಶಗಳನ್ನು ನಾವು ಈ ಟ್ಯುಟೋರಿಯಲ್ ನಲ್ಲಿ ಸೇರಿಸುವುದಿಲ್ಲ.
03:50 ನಾವು ಈಗಾಗಲೆ Events ಮತ್ತು User Groups ಗಳನ್ನು ಜೋಡಿಸಿದ್ದೇವೆ.
03:54 ನಾವು ನಮ್ಮEvents ಗಳನ್ನು ಸ್ಪೋನ್ಸ್ ರ್ ಮಾಡುತ್ತಿರುವ User Groups ಗಳಿಂದ ಮಾಹಿತಿಗಳನ್ನು ತೆಗೆದುಕೊಳ್ಳಬಹುದು ಮತ್ತು ಈ View ನಲ್ಲಿ ಹಾಕಬಹುದು.
04:03 ನಾವು ರಚನೆ ಮಾಡಿದ RELATIONSHIPS ಮತ್ತು CONTEXT ಗಳಿಂದ ಇದನ್ನು ಮಾಡಬಹುದು.
04:10 ಈಗ ನಮ್ಮ ಟೇಬಲ್ ನಲ್ಲಿ ಅವಶ್ಯಕವಾದ ಫೀಲ್ಡ್ ಗಳನ್ನು ಸೇರಿಸೋಣ.
04:15 Add ಮೇಲೆ ಕ್ಲಿಕ್ ಮಾಡಿ ಮತ್ತು ನೀವು Event Date ಫೀಲ್ಡ್ ಸಿಗುವವರೆಗೂ ಸ್ಕ್ರೋಲ್ ಮಾಡಿ.
04:21 Content type name ಅನ್ನು ಉಪಯೋಗಿಸಿ ನನ್ನ ಫೀಲ್ಡ್ ಗಳಿಗೆ ಎಚ್ಚರಿಗೆಯಿಂದ ಹೆಸರು ಕೊಡುತ್ತೇನೆ.
04:27 ಹಾಗಾಗಿ ನಾನು ಅವುಗಳನ್ನು Views ನಲ್ಲಿ ನಂತರ ಹುಡುಕಬಹುದು.
04:32 Event Date ನ ಮೇಲೆ ಚೆಕ್ ಮಾಡಿ ಮತ್ತು Apply ಯನ್ನು ಕ್ಲಿಕ್ ಮಾಡಿ.
04:37 ಇಲ್ಲಿ ನಾವು ಕೆಲವು ಸೆಟ್ಟಿಂಗ್ ಗಳನ್ನು ಆರಿಸಿಕೊಳ್ಳೋಣ.
04:41 ಈಗ ಇಲ್ಲಿ , Create a label ಮತ್ತು Place a colon ಆಯ್ಕೆಗಳು ಚೆಕ್ ಆಗಿವೆ.
04:47 Date format ಅನ್ನು ಡಿಫಾಲ್ಟ್ ಆಗೇ ಬಿಡೋಣ. ಅಂದರೆ "medium date" ಆಗೇ ಬಿಡೋಣ.
04:53 ಈಗ ಅವೆಲ್ಲದರ ಕುರಿತು ಚಿಂತಿಸಬೇಡಿ.
04:57 ಮತ್ತು ಕೊನೆಯಲ್ಲಿ Apply all displays ಬಟನ್ ಅನ್ನು ಕ್ಲಿಕ್ ಮಾಡಿ.
05:02 ನಾವು ಈಗ ಎರಡು column ಗಳಾದ - TITLE ಮತ್ತು EVENT DATE ಗಳನ್ನು ಹೊಂದಿದ್ದೇವೆ.
05:08 ಈಗ ನಮ್ಮ ಮುಂದಿನ ಫೀಲ್ಡ್ ಅನ್ನು ಸೇರಿಸೋಣ. Add ಅನ್ನು ಕ್ಲಿಕ್ ಮಾಡಿ ಮತ್ತು ಈ ಸಲ ನೀವು Event Logo ಆಯ್ಕೆ ಸಿಗುವವರೆಗೂ ಸ್ಕ್ರೋಲ್ ಮಾಡಿ.
05:17 ಅದನ್ನು ಆಯ್ಕೆ ಮಾಡಿಕೊಂಡು Apply ಅನ್ನು ಕ್ಲಿಕ್ ಮಾಡಿ.
05:21 ಈ ಸಲ Create a label ಆಯ್ಕೆಯನ್ನು ಅನ್ ಚೆಕ್ ಮಾಡಿ.
05:25 "Thumbnail" ನ Image style ಅನ್ನು ಆಯ್ಕೆ ಮಾಡಿಕೊಳ್ಳೋಣ.
05:30 ನಂತರ Link image to ಡ್ರಾಪ್ ಡೌನ್ ನಡಿಯಲ್ಲಿ "Content" ಅನ್ನು ಆಯ್ಕೆ ಮಾಡಿಕೊಳ್ಳಿ.
05:36 ಮುಂದಿನ ಟ್ಯುಟೋರಿಯಲ್ ಗಳಲ್ಲಿ ನಾವು ಈ ಲೇ ಔಟ್ ಗೆ ಹೊಸ Image style ಅನ್ನು ರಚನೆ ಮಾಡುವುದನ್ನು ಕಲಿಯೋಣ. ಆದರೆ ಈಗ "Thumbnail" ಅನ್ನು ಆಯ್ಕೆ ಮಾಡಿಕೊಳ್ಳೋಣ.
05:45 Apply ಅನ್ನು ಕ್ಲಿಕ್ ಮಾಡಿ. ಈಗ preview ನಲ್ಲಿ , ನಾವು ಪ್ರತಿಯೊಂದೂ Event ಗೂ devel, ನಿಂದ ರಚನೆಯಾದ thumbnails ಅನ್ನು ನೋಡಲೇ ಬೇಕು.
05:55 ಮತ್ತೆ ಹಿಂದಿರುಗಿ Add ಮೇಲೆ ಇನ್ನೊಮ್ಮೆ ಕ್ಲಿಕ್ ಮಾಡೋಣ. ಈ ಸಲ ಸ್ಕ್ರೋಲ್ ಮಾಡಿ ಒಮ್ಮೆಲೇ ಒಂದಕ್ಕಿಂತ ಹೆಚ್ಚು field ಗಳನ್ನು ಆರಿಸಿಕೊಳ್ಳಿ.
06:04 Event Topics ಮತ್ತು Event Website ಗಳನ್ನು ಆಯ್ಕೆ ಮಾಡಿಕೊಳ್ಳಿ ಮತ್ತು ನಂತರ Apply all displays ಬಟನ್ ಮೇಲೆ ಕ್ಲಿಕ್ ಮಾಡಿ.
06:13 ಮುಂದಿನ ಪುಟದಲ್ಲಿ ಎಲ್ಲವನ್ನು ಹೇಗಿದೆಯೋ ಹಾಗೇ ಬಿಟ್ಟು Apply ಅನ್ನು ಕ್ಲಿಕ್ ಮಾಡಿ.
06:18 ಗಮನಿಸಿ ನಾವು ಈಗ Views ನಲ್ಲಿ ಎರಡು ಫೀಲ್ಡ್ ಗಳನ್ನು ಒಟ್ಟಿಗೆ ಸೆಟ್ ಮಾಡಬಹುದು ಮತ್ತು ಪ್ರತಿಯೊಂದೂ ಅದರದೇ ಆದ Settings ಸ್ಕ್ರೀನ್ ಅನ್ನು ಹೊಂದಿರುತ್ತದೆ.
06:27 ಇನ್ನೊಮ್ಮೆ Apply all displays' ಮೇಲೆ ಕ್ಲಿಕ್ ಮಾಡಿ.
06:32 ಈಗ ನಾವು EVENT TOPICS ಮತ್ತು EVENT WEBSITE ಗಳನ್ನು ಹೊಂದಿದ್ದೇವೆ.
06:37 ಇಲ್ಲಿ ನಾವು ನಮ್ಮ title, date, topics ಮತ್ತು website ಗಳನ್ನು ಹೊಂದಿದ್ದೇವೆ ಈಗ Save ಮೇಲೆ ಕ್ಲಿಕ್ ಮಾಡೋಣ.
06:45 ನಿಮ್ಮ ಕೆಲಸವನ್ನು ಆಗಿಂದಾಗ ಸೇವ್ ಮಾಡುವುದು ಉತ್ತಮ ಹವ್ಯಾಸ.
06:49 ಈಗ ಪರೀಕ್ಷಿಸೋಣ. ನಮ್ಮ Display ಒಂದು Pageಆಗಿದೆ.
06:53 ನಮ್ಮ FORMAT ಒಂದು Tableಆಗಿದೆ.
06:56 ನಮ್ಮ FIELD ಗಳು ಸೆಟ್ ಆಗಿವೆ.
06:59 FILTER CRITERIA ಮತ್ತು SORT CRITERIA ಗಳು ಇನ್ನೂ ತಪ್ಪಾಗಿವೆ.
07:04 FILTER CRITERIA, ವನ್ನು ಸೇರಿಸಲು Add ಬಟನ್ ಅನ್ನು ಕ್ಲಿಕ್ ಮಾಡಿ.
07:08 Event Date ಸಿಕ್ಕುವವರೆಗೂ ಸ್ಕ್ರೋಲ್ ಮಾಡಿ ನಂತರ Event Date ಅನ್ನು ಆಯ್ಕೆ ಮಾಡಿಕೊಂಡು Apply ಅನ್ನು ಕ್ಲಿಕ್ ಮಾಡಿ.
07:17 ಈ ಪರದೆ ತುಂಬಾ ಮುಖ್ಯ.
07:20 Operator ಡ್ರಾಪ್ ಡೌನ್ ನಡಿಯಲ್ಲಿ , "Is greater than or equal to" ಅನ್ನು ಆಯ್ಕೆ ಮಾಡಿಕೊಳ್ಳೋಣ.
07:26 Value type ನಡಿಯಲ್ಲಿ ನೀವು ಇವತ್ತಿನ ದಿನಾಂಕವನ್ನಿಟ್ಟರೆ ಅದರಿಂದ ಅನನುಕೂಲವಾಗುತ್ತದೆ.
07:32 ನಾವು ಪ್ರತಿನಿತ್ಯವೂ ಹೊಸ ದಿನಾಂಕವನ್ನು ಇಡಬೇಕಾಗುತ್ತದೆ. ಆದರೆ ನಾವು "An offset of the current time..." ಆಯ್ಕೆಯನ್ನು ಆರಿಸಿಕೊಳ್ಳಬಹುದು.
07:40 ಮತ್ತು Value ಫೀಲ್ಡ್ ನಲ್ಲಿ “now” ಎಂದು ಟೈಪ್ ಮಾಡಿ.
07:45 ಅಂದರೆ ಪ್ರಸ್ತುತ ಸಮಯದ ನಂತರದ ಇವೆಂಟ್ ಗಳು ಮಾತ್ರ ಪ್ರದರ್ಶಿಸಲ್ಪಡುತ್ತವೆ.
07:51 ಪ್ರಸ್ತುತ ಸಮಯ ಅಂದರೆ ನಾವು ರಚಿಸುತ್ತಿರುವ ಸಮಯವಲ್ಲ, ಅದು ಬಳಕೆದಾರ ನೋಡುವಾಗಿನ ಸಮಯ.
07:59 ಹಾಗಾಗಿ ಬಳಕೆದಾರ ಕೇವಲ ಮುಂಬರುವ ಇವೆಂಟ್ ಗಳನ್ನು ಮಾತ್ರ ನೋಡುತ್ತಾನೆ.
08:03 Apply ಮೇಲೆ ಕ್ಲಿಕ್ ಮಾಡಿ.
08:05 devel ನಿಂದ ರಚಿಸಲ್ಪಟ್ಟ ಡಮ್ಮಿ ಕಂಟೆಂಟ್ ಗಳು ಯಾವುದೇ ಮುಂಬರುವ ದಿನಾಂಕಗಳನ್ನು ತೋರಿಸದೇ ಇರುವುದನ್ನು ನೋಡಬಹುದು.
08:13 ನಮ್ಮ View ಗಳು ಸರಿಯಾಗಿ ಕೆಲಸ ಮಾಡುತ್ತವೆ ಎಂದು ಖಚಿತ ಪಡಿಸಿಕೊಳ್ಳಲು ನಾವು ಕೆಲವು ಇವೆಂಟ್ ಗಳನ್ನು ನಾವೇ ಅಪ್ಡೇಟ್ ಮಾಡೋಣ.
08:20 ಇನ್ನು ಕೆಲವು ಇವೆಂಟ್ ಗಳನ್ನು ಹುಡುಕಿ ಮತ್ತು Event Date ಅನ್ನು ಯಾವುದಾದರು ಮುಂಬರುವ ದಿನಾಂಕಕ್ಕೆ ಬದಲಿಸಿ.
08:25 Content ಗೆ ಹೋಗಿ Filter ಅನ್ನು Events Type ಗೆ ಅನ್ನು ಬದಲಿಸಿ
08:31 ಯಾವುದಾದರೂ ಇವೆಂಟ್ ಅನ್ನು ಆರಿಸಿಕೊಂಡು Edit ಮೇಲೆ ಕ್ಲಿಕ್ ಮಾಡಿ.ದಿನಾಂಕ ವನ್ನು ಮುಂಬರುವ ದಿನಾಂಕಕ್ಕೆ ಬದಲಿಸಿ.
08:39 ಈಗ Save ಮೇಲೆ ಕ್ಲಿಕ್ ಮಾಡಿ.
08:42 ಟ್ಯುಟೋರಿಯಲ್ ಅನ್ನು ನಿಲ್ಲಿಸಿಕೊಂಡು 6 ಅಥವಾ 7 ಇವೆಂಟ್ ಗಳನ್ನು ಅಪ್ ಡೇಟ್ ಮಾಡಿ.
08:49 ಅದನ್ನು ಮಾಡಿದ ಮೇಲೆ ಟ್ಯುಟೋರಿಯಲ್ ಗೆ ಹಿಂದಿರುಗಿ.
08:53 Shortcuts ಗೆ ಹೋಗಿ. Views ಮೇಲೆ ಕ್ಲಿಕ್ ಮಾಡಿ. Upcoming Events ಅನ್ನು ಹುಡುಕಿ Edit ಮೇಲೆ ಕ್ಲಿಕ್ ಮಾಡಿ.
09:01 ಈಗ ನಾವು ಆಗಲೇ ಬಿಟ್ಟುಬಂದ view ವನ್ನು ಎಡಿಟ್ ಮಾಡಲು ಹೋಗೋಣ.
09:06 ಪ್ರಿವಿವ್ಯೂ ವನ್ನು ನೋಡಲು ಕೆಳಗೆ ಸ್ಕ್ರೋಲ್ ಮಾಡಿ.
09:10 ಈಗ ನಾವು ನಮ್ಮ Event Date ಅನ್ನು greater than or equal to now ಆಗಿ ಪರಿವರ್ತಿಸಿ ಸರಿಯಾಗಿ ಫಿಲ್ಟರ್ ಮಾಡಿದ್ದೇವೆ.
09:17 ನಂತರ ನಾವು SORT CRITERIA ವನ್ನು ಚೆಕ್ ಮಾಡೋಣ.
09:22 ಡಿಫಾಲ್ಟ್ ಆಗಿ Drupal ಕಂಟೆಂಟ್ ಅನ್ನು ಆಥರಿಂಗ್ ದಿನಾಂಕದ ಅವರೋಹಣ ಕ್ರಮದಲ್ಲಿ ಜೋಡಿಸಿರುತ್ತದೆ.
09:30 Event ಗಳು , Event Date ನ ಆರೋಹಣ ಕ್ರಮದಲ್ಲಿರುವುದು ಉಪಯುಕ್ತ.
09:37 ಅದನ್ನು ಬದಲಿಸಲು, Authored on ನ ಮೇಲೆ ಕ್ಲಿಕ್ ಮಾಡಿ ಮತ್ತು Remove ಅನ್ನು ಕ್ಲಿಕ್ ಮಾಡಿ.
09:44 Add ಅನ್ನು ಕ್ಲಿಕ್ ಮಾಡಿ. ಮತ್ತು ಇನ್ನೊಮ್ಮೆ Event Date ಸಿಗುವವರೆಗೂ ಸ್ಕ್ರೋಲ್ ಮಾಡಿ.
09:51 Apply ಅನ್ನು ಕ್ಲಿಕ್ ಮಾಡಿ.
09:53 ಈಗ Order ನಡಿಯಲ್ಲಿ , Sort ascending ಅನ್ನು ಆರಿಸಿಕೊಳ್ಳಿ. ಅದು ನಮ್ಮ ಇವೆಂಟ್ ಗಳನ್ನು ಇವತ್ತಿನಿಂದ ಮುಂದೆ ಜೋಡಿಸುತ್ತದೆ.
10:03 Apply ಅನ್ನು ಕ್ಲಿಕ್ ಮಾಡಿ.
10:05 ಈಗ ನಾವು ನಮ್ಮ ಇವೆಂಟ್ ಗಳನ್ನು ಅಪ್ ಡೇಟ್ ಮಾಡಿದ್ದೇವೆ ಮತ್ತು Sort Criteria ವನ್ನು ಸರಿಯಾಗಿ ಸೆಟ್ ಮಾಡಿದ್ದೇವೆ.
10:11 ನಾವು ಈ ರೀತಿಯಾಗಿ ಪಟ್ಟಿಯಾಗಿರುವುದನ್ನು ನೋಡಲು ಸಾಧ್ಯವಾಗಬೇಕು.
10:16 ಮುಂಬರುವ ಎಲ್ಲಾ ಇವೆಂಟ್ ಗಳೂ EVENT DATE ನ ಕ್ರಮಕ್ಕನುಗುಣವಾಗಿ ಜೋಡಿಸಲ್ಪಟ್ಟಿವೆ.
10:23 ಮುಂದೆ ಹೋಗುವ ಮೊದಲು Save ಅನ್ನು ಕ್ಲಿಕ್ ಮಾಡಿದ್ದೀರೆಂದು ಖಚಿತ ಪಡಿಸಿಕೊಳ್ಳಿ.
10:27 ಹಾಗಾಗಿ ಈ ನಿರ್ದಿಷ್ಟವಾದ View ನಲ್ಲಿ ನಾವು ಈಗ ಇನ್ನೊಂದನ್ನು ಮಾಡಲು ಹೊರಟಿದ್ದೇವೆ.
10:32 ಈಗ TITLE ಮತ್ತು Logo ಕಾಲಮ್ ಗಳನ್ನು ಸೇರಿಸೋಣ ಮತ್ತು TITLE ಮತ್ತು EVENT DATE ಗಳನ್ನು ಸಾರ್ಟ್ ಮಾಡಲಾಗುವಂತೆ ಮಾಡೋಣ.
10:41 ನಾವು ಇದನ್ನು ಮಾಡಿದಾಗ, ಬಳಕೆದಾರ TITLE ಮೇಲೆ ಕ್ಲಿಕ್ ಮಾಡಿದರೆ ಅದರ ಪ್ರಕಾರ ಸಾರ್ಟ್ ಮಾಡುಲು ಸಾಧ್ಯವಾಗುತ್ತದೆ.
10:48 ಮೇಲಕ್ಕೆ ಸ್ಕ್ರೋಲ್ ಮಾಡಿ. FORMAT > Table ಮೇಲೆ ತನ್ನು ಮತ್ತು ಅದರ ಮುಂದೆ ಇರುವ Settings ಅನ್ನು ಕ್ಲಿಕ್ ಮಾಡಿ.
10:57 Content Event Logo, ನಲ್ಲಿ COLUMNಡ್ರಾಪ್ ಡೌನ್ ಅನ್ನು "Title" ಗೆ ಬದಲಿಸಿ.
11:03 ಇಲ್ಲಿ SEPARATOR, ಗೆ ಬರಿ line break ಅನ್ನು ಇಡಿ.
11:08 Title ಮತ್ತು Event Date ಕಾಲಮ್ ಗಳನ್ನು SORTABLE ನಲ್ಲಿ Ascending order ಎಂದು ಸೆಟ್ ಮಾಡಿ ಮತ್ತು Apply ಅನ್ನು ಕ್ಲಿಕ್ ಮಾಡಿ.
11:17 ಹಾಗಾಗಿ ಈಗ ನಮ್ಮ Title ಮತ್ತು logo ಗಳೆರಡೂ ಒಂದೇ ಕಾಲಮ್ ನಲ್ಲಿವೆ ಮತ್ತು TITLE ಮತ್ತು EVENT DATE ಗಳೆರಡನ್ನೂ ಸಾರ್ಟ್ ಮಾಡಬಹುದು.
11:26 ಈಗ Title ಪದವನ್ನು Event Name ಗೆ ಬದಲಿಸೋಣ.
11:31 "Title" ನ ಮೇಲೆ ಕ್ಲಿಕ್ ಮಾಡಿ ಮತ್ತು Label ನಲ್ಲಿ "Title" ಪದವನ್ನು "Event Name" ಗೆ ಬದಲಿಸಿ ನಂತರ

Apply ಅನ್ನು ಕ್ಲಿಕ್ ಮಾಡಿ.

11:40 ಪ್ರಿವಿವ್ಯೂ ಭಾಗಕ್ಕೆ ಸ್ಕ್ರೋಲ್ ಮಾಡಿ. ನಮ್ಮ Event Name ಮತ್ತು logo ಮತ್ತು date ಎಲ್ಲವೂ ಸೆಟ್ ಆಗಿವೆ.
11:48 ಮುಂದಿನ ಟ್ಯುಟೋರಿಯಲ್ ಗಳಲ್ಲಿ ನಮ್ಮ ಲೋಗೋ ದ ಗಾತ್ರವನ್ನು ಬದಲಿಸಿ ಅದು ಇನ್ನು ಚೆನ್ನಾಗಿ ಕಾಣುವಂತೆ ಮಾಡುವುದನ್ನು ಕಲಿಯೋಣ.
11:55 ಈಗ Save ಅನ್ನು ಕ್ಲಿಕ್ ಮಾಡಿ ಮತ್ತು ನಮ್ಮ View ವನ್ನು ಪರೀಕ್ಷಿಸಿಕೊಳ್ಳೋಣ.
11:59 Homepage ಗೆ ಹೋಗಲು Back to site ನ ಮೇಲೆ ಕ್ಲಿಕ್ ಮಾಡಿ
12:03 Upcoming Events ನ ಮೇಲೆ ಕ್ಲಿಕ್ ಮಾಡಿ.
12:06 ನೀವು ಮುಂಬರುವ ಎಲ್ಲ ಇವೆಂಟ್ ಗಳೂ ಟೇಬಲ್ ನಲ್ಲಿ ಚೆನ್ನಾಗಿ ಜೋಡಿಸಿರುವುದನ್ನು ನೋಡಬೇಕು.
12:13 ಮತ್ತು ನೀವು Event Name ಮತ್ತು Event Date ಗಳ ಆಧಾರದ ಮೇಲೆ ಸಾರ್ಟ್ ಮಾಡಬಹುದು ಎನ್ನುವುದನ್ನೂ ನೋಡಬಹುದು.
12:20 ಇದರೊಂದಿಗೆ ನಾವು ನಮ್ಮ ಮೊದಲ Table View ಅನ್ನು ಪೂರ್ಣಗೊಳಿಸಿದ್ದೇವೆ.
12:24 ಈಗ ಸಾರಾಂಶವನ್ನು ನೋಡೋಣ.
12:26 ಈ ಟ್ಯುಟೋರಿಯಲ್ ನಲ್ಲಿ ನಾವು fields ಗಳ table ಅನ್ನು ರಚನೆ ಮಾಡುವುದನ್ನು ಕಲಿತಿದ್ದೇವೆ.
12:41 ಈ ವಿಡಿಯೋವನ್ನು Acquia ಮತ್ತು OSTraining ನಿಂದ ಪಡೆದುಕೊಳ್ಳಲಾಗಿದೆ ಮತ್ತು Spoken Tutorial Project, IIT Bombay ಅವರಿಂದ ಪರಿಷ್ಕರಿಸಲಾಗಿದೆ.
12:51 ಈ ಲಿಂಕ್ ನಲ್ಲಿರುವ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ವಿಕಲ್ಪದ ಕುರಿತು ಸಾರಾಂಶವನ್ನು ಕೊಡುತ್ತದೆ.
12:58 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪ ತಂಡವು ಇದರ ಕಾರ್ಯಾಗಾರವನ್ನು ಏರ್ಪಡಿಸುತ್ತದೆ ಮತ್ತು ಪ್ರಮಾಣಪತ್ರವನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮಗೆ ಬರೆಯಿರಿ
13:07 Spoken Tutorial Project ಇದು NMEICT, Ministry of Human Resource Development

ಮತ್ತು NVLI, Ministry of Culture ಭಾರತ ಸರ್ಕಾರ- ಇವುಗಳಿಂದ ಪ್ರಾಯೋಜಿತವಾಗಿದೆ.

13:19 ಅನುವಾದ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ ಉಪ್ಪಿನ ಪಟ್ಟಣ. ಧನ್ಯವಾದಗಳು.

Contributors and Content Editors

NaveenBhat