User:NaveenBhat
From Script | Spoken-Tutorial
Time | Narration |
00:02 | ಜಾವಾದಲ್ಲಿ If else constructs ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು |
00:09 | conditional statements ನ ಕುರಿತು |
00:11 | conditional statement ಗಳ ವಿಧ ಗಳು ಮತ್ತು |
00:13 | ಜಾವಾ ಪ್ರೋಗ್ರಾಂ ನಲ್ಲಿ conditional statement ಗಳನ್ನು ಹೇಗೆ ಉಪಯೋಗಿಸುವುದು ಎಂದು ಕಲಿಯುತ್ತೇವೆ. |
00:18 | ಈ ಟ್ಯುಟೋರಿಯಲ್ ಗಾಗಿ ನಾವು
Ubuntu v 11.10 JDK 1.6 ಮತ್ತು Eclipse 3.7.0. ಗಳನ್ನು ಉಪಯೋಗಿಸುತ್ತೇವೆ. |
00:27 | ಈ ಟ್ಯುಟೋರಿಯಲ್ ಅನ್ನು ಅರ್ಥಮಾಡಿಕೊಳ್ಳಲು ನೀವು |
00:31 | ಜಾವಾದಲ್ಲಿ Arithmetic, Relational ಮತ್ತು Logical ಆಪರೇಟರ್ ಗಳ ಕುರಿತು ಜ್ಞಾನವನ್ನು ಹೊಂದಿರಬೇಕು. |
00:35 | ತಿಳಿದಿರದಿದ್ದಲ್ಲಿ ನಮ್ಮ ಈ ವೆಬ್ ಸೈಟ್ ಅನ್ನು ನೋಡಿ. [1] |
00:42 | Conditional statements- ನೀವು ನಿಮ್ಮ ಕೋಡ್ ನಲ್ಲಿ ಬೇರೆ ಬೇರೆ ನಿರ್ಧಾರಗಳಿಗೆ ಬೇರೆ ಬೇರೆ ಕ್ರಿಯೆಯನ್ನು ಮಾಡಬೇಕಾಗಬಹುದು. |
00:48 | ಅಂತಹ ಸಂದರ್ಭದಲ್ಲಿ ನೀವು conditional statements ಗಳನ್ನು ಉಪಯೋಗಿಸಬಹುದು. |
00:52 | ಕಂಡಿಷನಲ್ ಸ್ಟೇಟ್ ಮೆಂಟ್ ಇದು ಪ್ರೋಗ್ರಾಮ್ ನ ಎಕ್ಸಿಕ್ಯೂಶನ್ ನ ಫ್ಲೋ ವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. |
00:57 | ಜಾವಾದಲ್ಲಿ ನಾವು ಈ ಕೆಳಗಿನ ಕಂಡಿಷನಲ್ ಸ್ಟೇಟ್ ಮೆಂಟ್ ಗಳನ್ನು ಹೊಂದಿದ್ದೇವೆ. |
01:01 | If ಸ್ಟೇಟ್ ಮೆಂಟ್ ,If...Else ಸ್ಟೇಟ್ ಮೆಂಟ್ |
01:03 | If...Else if ಸ್ಟೇಟ್ ಮೆಂಟ್ |
01:05 | Nested If ಸ್ಟೇಟ್ ಮೆಂಟ್ , Switch ಸ್ಟೇಟ್ ಮೆಂಟ್ |
01:08 | ಈ ಟ್ಯುಟೋರಿಯಲ್ ನಲ್ಲಿ ನಾವು If, If...Else ಮತ್ತು If...Else If ಸ್ಟೇಟ್ ಮೆಂಟ್ ಗಳ ಕುರಿತು ವಿವರವಾಗಿ ತಿಳಿಯುತ್ತೇವೆ. |
01:15 | if statement: if ಸ್ಟೇಟ್ ಮೆಂಟ್ ಅನ್ನು ಒಂದು ಕಂಡಿಷನ್ ನ ಆಧಾರದ ಮೇಲೆ ಒಂದು ಸ್ಟೇಟ್ ಮೆಂಟ್ ಗಳ ಗುಂಪನ್ನು ಎಕ್ಸಿಕ್ಯೂಟ್ ಮಾಡಲು ಉಪಯೋಗಿಸುತ್ತೇವೆ. |
01:22 | ಇದನ್ನು single conditional statement ಎಂದು ಕರೆಯುತ್ತಾರೆ. |
01:26 | If ಸ್ಟೇಟ್ ಮೆಂಟ್ ನ ಸಿಂಟ್ಯಾಕ್ಸ್ : |
01:28 | if ಸ್ಟೇಟ್ ಮೆಂಟ್ ನಲ್ಲಿ ಕಂಡಿಷನ್ ಟ್ರ್ಯೂ ಆಗಿದ್ದರೆ ಆ ಬ್ಲಾಕ್ ಎಕ್ಸಿಕ್ಯೂಟ್ ಆಗುತ್ತದೆ. |
01:34 | ಕಂಡಿಷನ್ ಫಾಲ್ಸ್ ಆಗಿದ್ದರೆ, ಆ ಬ್ಲಾಕ್ ಅನ್ನು ಬಿಟ್ಟು ಮುಂದೆ ಹೋಗುತ್ತದೆ ಮತ್ತು ಆ ಬ್ಲಾಕ್ ಎಕ್ಸಿಕ್ಯೂಟ್ ಆಗುವುದಿಲ್ಲ. |
01:40 | ಈಗ ನಾವು if ಸ್ಟೇಟ್ ಮೆಂಟ್ ಅನ್ನು ಹೇಗೆ ಉಪಯೋಗಿಸಬಹುದು ಎಂದು ಅರ್ಥ ಮಾಡಿಕೊಳ್ಳಲು ಒಂದು ಉದಾಹರಣೆಯನ್ನು ನೋಡೋಣ. |
01:45 | ಹಾಗಾಗಿ ಈಗ eclipse ಗೆ ಹೋಗೋಣ. |
01:48 | ನಾವು ಈಗ ಒಬ್ಬ ವ್ಯಕ್ತಿಯು Minor ಎಂದು ತಿಳಿಯಲು ಒಂದು ಪ್ರೋಗ್ರಾಮ್ ಅನ್ನು ಬರೆಯೋಣ. |
01:53 | ನಾನು ಈಗಾಗಲೆ Person ಎಂಬ ಕ್ಲಾಸ್ ಅನ್ನು ರಚಿಸಿದ್ದೇನೆ. |
01:56 | ಈಗ main method ನಲ್ಲಿ , int. ಟೈಪ್ ನ ‘age’ ಎಂಬ ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡೋಣ. |
02:02 | ಅದಕ್ಕಾಗಿ main method ನಲ್ಲಿ : int ಸ್ಪೇಸ್ age ಸಮ 20 ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ. |
02:14 | ಈಗ ನಾವು ಕೆಳಗಿನ ರೀತಿಯಲ್ಲಿ If ಸ್ಟೇಟ್ ಮೆಂಟ್ ಅನ್ನು ಬರೆಯುತ್ತೇವೆ. |
02:18 | ಮುಂದಿನ ಸಾಲಿನಲ್ಲಿ if ಬ್ರ್ಯಾಕೆಟ್ ನಲ್ಲಿ age < 21 ಎಂದು ಟೈಪ್ ಮಾಡಿ, ಕರ್ಲಿ ಬ್ರ್ಯಾಕೆಟ್ ಅನ್ನು ತೆರೆದು ಎಂಟರ್ ಅನ್ನು ಒತ್ತಿ, |
02:30 | ಇಲ್ಲಿ ನಾವು age ಇದು 21 ಕ್ಕಿಂತ ಕಡಿಮೆಯೇ ಎಂದು ಪರೀಕ್ಷಿಸುತ್ತಿದ್ದೇವೆ. |
02:34 | ಬ್ರ್ಯಾಕೆಟ್ ನ ಒಳಗಿರುವುದೆಲ್ಲವೂ if ಬ್ಲಾಕ್ ನಲ್ಲಿ ಬರುತ್ತದೆ. |
02:38 | ಹಾಗಾಗಿ ಬ್ರ್ಯಾಕೆಟ್ ನೊಳಗೆ |
02:41 | System ಡಾಟ್ out ಡಾಟ್ println ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿThe person is Minor ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ. |
02:56 | ಇಲ್ಲಿ age ಇದು 21, ಕ್ಕಿಂತ ಚಿಕ್ಕದಾಗಿದ್ದರೆ ಆಗ “The person is minor” ಎಂದು ಡಿಸ್ಪ್ಲೇ ಆಗುತ್ತದೆ. |
03:03 | ಫೈಲ್ ಅನ್ನು save ಮಾಡಿ ಮತ್ತು run ಮಾಡಿ. |
03:08 | ನಾವು "The person is minor" ಎಂಬ ಫಲಿತಾಂಶವನ್ನು ಪಡೆಯುತ್ತೇವೆ. |
03:14 | ಈ ಉದಾಹರಣೆಯಲ್ಲಿ ವ್ಯಕ್ತಿಯ ವಯಸ್ಸನ್ನು 20 ಎಂದುಕೊಂಡಿದ್ದೇವೆ ಇದು 21 ಕ್ಕಿಂತ ಚಿಕ್ಕದು. |
03:20 | ಹಾಗಾಗಿ “The person is minor” ಎಂಬ ಫಲಿತಾಂಶವನ್ನು ಪಡೆಯುತ್ತೇವೆ. |
03:24 | ಈಗ ನಾವು if...else ಸ್ಟೇಟ್ ಮೆಂಟ್ ಅನ್ನು ಕಲಿಯೋಣ. |
03:27 | ಪರ್ಯಾಯ ಹೇಳಿಕೆಗಳನ್ನು ಎಕ್ಸಿಕ್ಯೂಟ್ ಮಾಡಲು If...Else ಸ್ಟೇಟ್ ಮೆಂಟ್ ಅನ್ನು ಉಪಯೋಗಿಸುತ್ತೇವೆ. |
03:31 | ಇವುಗಳು ಒಂದು ಕಂಡಿಷನ್ ಅನ್ನು ಆಧರಿಸಿರುತ್ತವೆ. |
03:34 | ಈಗ ನಾವು If…Else statement. ನ ಸಿಂಟ್ಯಾಕ್ಸ್ ಅನ್ನು ನೋಡೋಣ. |
03:38 | ಕಂಡಿಷನ್ true ಆಗಿದ್ದರೆ ಸ್ಟೇಟ್ ಮೆಂಟ್ ಅಥವಾ ಕೋಡ್ ನ ಬ್ಲಾಕ್ ಎಕ್ಸಿಕ್ಯೂಟ್ ಆಗುತ್ತದೆ. |
03:44 | ಇಲ್ಲವಾದರೆ ಇನ್ನೊಂದು ಸ್ಟೇಟ್ ಮೆಂಟ್ ಅಥವಾ ಕೋಡ್ ಬ್ಲಾಕ್ ಎಕ್ಸಿಕ್ಯೂಟ್ ಆಗುತ್ತದೆ. |
03:49 | ಈಗ ನಾವು If…else ಸ್ಟೇಟ್ ಮೆಂಟ್ ಅನ್ನು ಪ್ರೋಗ್ರಾಂ ನಲ್ಲಿ ಹೇಗೆ ಉಪಯೋಗಿಸುವುದು ಎಂದು ನೋಡೋಣ. |
03:54 | ಅದಕ್ಕಾಗಿ eclipse ಗೆ ಹೋಗೋಣ. |
03:57 | ಈಗ ನಾವು ಒಂದು ವ್ಯಕ್ತಿಯು ಅಪ್ರಾಪ್ತನೇ ಅಥವಾ ವಯಸ್ಕನೇ ಎಂದು ಗುರುತಿಸಲು ಒಂದು ಪ್ರೋಗ್ರಾಂ ಅನ್ನು ಬರೆಯೋಣ. |
04:03 | ಅದಕ್ಕಾಗಿ main method ನಲ್ಲಿ int age ಸಮ 25 ಎಂದು ಟೈಪ್ ಮಾಡಿ. |
04:12 | ನಂತರ if ಬ್ಯ್ರಾಕೆಟ್ ನಲ್ಲಿ age ದೊಡ್ಡದು ಚಿಹ್ನೆ 21 ಎಂದು ಟೈಪ್ ಮಾಡಿ. |
04:19 | ಕರ್ಲಿ ಬ್ರ್ಯಾಕೆಟ್ ನಲ್ಲಿ System ಡಾಟ್ out ಡಾಟ್ println ಬ್ರ್ಯಾಕೆಟ್ ನಲ್ಲಿ The person is Major. ಎಂದು ಟೈಪ್ ಮಾಡಿ. |
04:28 | ನಂತರ ಮುಂದಿನ ಸಾಲಿನಲ್ಲಿ, |
04:32 | else ಎಂದು ಟೈಪ್ ಮಾಡಿ, ಕರ್ಲಿ ಬ್ರ್ಯಾಕೆಟ್ ನಲ್ಲಿ |
04:38 | System ಡಾಟ್ out ಡಾಟ್ println ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿ The person is Minor ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ. |
04:51 | ಇಲ್ಲಿ age ಇದು 21 ಕ್ಕಿಂತ ಚಿಕ್ಕದಾಗಿದ್ದರೆ, “The person is Minor” ಎಂದು ಡಿಸ್ಪ್ಲೇ ಆಗುತ್ತದೆ. |
04:58 | ಇಲ್ಲವಾದಲ್ಲಿ “The person is Major” ಎಂದು ಡಿಸ್ಪ್ಲೇ ಆಗುತ್ತದೆ. |
05:02 | ಈಗ ನಾವು ಪ್ರೋಗ್ರಾಮ್ ಅನ್ನು save ಮಾಡಿ run ಮಾಡೋಣ.. |
05:07 | ನಾವು: "The person is Major" ಎಂಬ ಫಲಿತಾಂಶವನ್ನು ಪಡೆಯುತ್ತೇವೆ. |
05:11 | ಇಲ್ಲಿ ವ್ಯಕ್ತಿಯ ವಯಸ್ಸು 25, ಇದು 21 ಕ್ಕಿಂತ ದೊಡ್ಡದು . |
05:17 | ಹಾಗಾಗಿ ಪ್ರೋಗ್ರಾಂ “The person is Major” ಎಂಬ ಫಲಿತಾಂಶವನ್ನು ಕೊಡುತ್ತದೆ. |
05:22 | If…Else If ಸ್ಟೇಟ್ ಮೆಂಟ್: If…Else If ಸ್ಟೇಟ್ ಮೆಂಟ್ ಅನ್ನು ಹಲವು ಸ್ಟೇಟ್ ಮೆಂಟ್ ಗಳ ಸೆಟ್ ಗಳನ್ನು ಎಕ್ಸಿಕ್ಯೂಟ್ ಮಾಡಲು ಉಪಯೋಗಿಸುತ್ತಾರೆ. |
05:29 | ಇವುಗಳು ಕೊಟ್ಟಿರುವ ಎರಡು ಕಂಡಿಷನ್ ಅನ್ನು ಆಧರಿಸಿವೆ. |
05:33 | ನಿಮ್ಮ ಅವಶ್ಯಕತೆಗೆ ತಕ್ಕಂತೆ ನೀವು ಇನ್ನು ಕಂಡಿಷನ್ ಅನ್ನು ಸೇರಿಸಬಹುದು. |
05:38 | ಇದನ್ನು branching ಎಂದೂ ಕರೆಯುತ್ತಾರೆ ಅಥವಾ ಡಿಸಿಷನ್ ಮೇಕಿಂಗ್ ಸ್ಟೇಟ್ ಮೆಂಟ್ ಎಂದೂ ಕರೆಯುತ್ತಾರೆ. |
05:43 | ಈಗ If…Else If ಸ್ಟೇಟ್ ಮೆಂಟ್ ನ ಸಿಂಟ್ಯಾಕ್ಸ್ ಅನ್ನು ನೋಡೋಣ. |
05:48 | If ಸ್ಟೇಟ್ ಮೆಂಟ್ ಮೊದಲು condition 1 ಅನ್ನು ಪರೀಕ್ಷಿಸುತ್ತದೆ. |
05:53 | condition 1 ಟ್ರ್ಯೂ ಆಗಿದ್ದರೆ statement-or-block 1 code ಅನ್ನು ಎಕ್ಸಿಕ್ಯೂಟ್ ಮಾಡುತ್ತದೆ. |
05:59 | ಇಲ್ಲವಾದಲ್ಲಿ, ಅದು condition 2 ಅನ್ನು ಪರೀಕ್ಷಿಸುತ್ತದೆ |
06:02 | condition 2 ಟ್ರ್ಯೂ ಆಗಿದ್ದರೆ statement-or-block 2 ಅನ್ನು ಎಕ್ಸಿಕ್ಯೂಟ್ ಮಾಡುತ್ತದೆ. |
06:09 | ಇಲ್ಲವಾದಲ್ಲಿ statement 3 ಅಥವಾ block code 3 ಅನ್ನು ಎಕ್ಸಿಕ್ಯೂಟ್ ಮಾಡುತ್ತದೆ. |
06:13 | ಇದೇ ರೀತಿಯಲ್ಲಿ ನಾವು If…Else ಬ್ಲಾಕ್ ಗಳಿಂದ ನಾವು ಕೋಡ್ ಅನ್ನು ವಿಸ್ತರಿಸಬಹುದು. |
06:17 | ಈ ಬ್ಲಾಕ್ ಗಳು ಅನೇಕ ಕಂಡಿಷನ್ ಗಳನ್ನು ಹೊಂದಿರಬಹುದು. |
06:20 | ಟ್ರ್ಯೂ ಕಂಡಿಷನ್ ಸಿಗುವವರೆಗೂ ಸಂಬಂಧಿತ ಕೋಡ್ ಎಕ್ಸಿಕ್ಯೂಟ್ ಆಗುತ್ತದೆ., |
06:25 | ಎಲ್ಲ ಕಂಡಿಷನ್ ಗಳೂ ಫಾಲ್ಸ್ ಆಗಿದ್ದರೆ, ಕೊನೆಯ Else ಭಾಗ ಎಕ್ಸಿಕ್ಯೂಟ್ ಆಗುತ್ತದೆ. |
06:30 | ಈಗ ನಾವು ಪ್ರೋಗ್ರಾಂ ನಲ್ಲಿ If…Else If statement ಅನ್ನು ಹೇಗೆ ಉಪಯೋಗಿಸುವುದು ಎಂದು ನೋಡೋಣ. |
06:35 | ಹಾಗಾಗಿ Eclipse ಅನ್ನು ತೆರೆಯಿರಿ. |
06:37 | ನಾನು ಈಗಾಗಲೇ Student ಎಂಬ ಹೆಸರಿನ ಕ್ಲಾಸ್ ಅನ್ನು ರಚಿಸಿದ್ದೇನೆ. |
06:40 | ಈಗ ವಿದ್ಯಾರ್ಥಿಯ ಗ್ರೇಡ್ ಅನ್ನು ಕಂಡುಹಿಡಿಯಲು ಒಂದು ಪ್ರೋಗ್ರಾಂ ಅನ್ನು ಬರೆಯೋಣ. |
06:44 | ಇದು ಶೇಕಡಾ ಅಂಕವನ್ನು ಅವಲಂಬಿಸಿರುತ್ತದೆ. |
06:47 | ಹಾಗಾಗಿ main method ನಲ್ಲಿ int ಸ್ಪೇಸ್ testScore ಸಮ 70 ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ. |
06:58 | testScore ಹೆಸರಿನ ವೇರಿಯೇಬಲ್ ಅನ್ನು ಶೇಕಡಾ ಅಂಕವನ್ನು ಪಡೆಯಲು ಉಪಯೋಗಿಸುತ್ತೇವೆ. |
07:05 | ಮುಂದಿನ ಸಾಲಿನಲ್ಲಿ , if ಬ್ರ್ಯಾಕೆಟ್ ನಲ್ಲಿ testScore ಚಿಕ್ಕದು ಚಿಹ್ನೆ 35 then ಎಂದು ಟೈಪ್ ಮಾಡಿ, ಕರ್ಲಿ ಬ್ರ್ಯಾಕೆಟ್ ನಲ್ಲಿ System ಡಾಟ್ out ಡಾಟ್ println ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿ C grade ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ. |
07:28 | 'testScore' 35 ಕ್ಕಿಂತ ಕಡಿಮೆಯಾಗಿದ್ದರೆ ಆಗ ಪ್ರೋಗ್ರಾಮ್ "C Grade" ಎಂದು ಡಿಸ್ಪ್ಲೇ ಮಾಡುತ್ತದೆ. |
07:34 | ಮುಂದಿನ ಸಾಲಿನಲ್ಲಿ else ಎಂದು ಟೈಪ್ ಮಾಡಿ. |
07:37 | ಮುಂದಿನ ಸಾಲಿನಲ್ಲಿ if ಬ್ರ್ಯಾಕೆಟ್ ನಲ್ಲಿ testScore ದೊಡ್ಡದು ಅಥವಾ ಸಮ 35 AND (&&) testScore ಚಿಕ್ಕದು ಅಥವಾ ಸಮ 60. ಎಂದು ಟೈಪ್ ಮಾಡಿ ಮತ್ತು ಈ ಪೂರ್ಣ ಕಂಡಿಷನ್ ಅನ್ನು ಬ್ರ್ಯಾಕೆಟ್ ನಲ್ಲಿಡಿ. ಕರ್ಲಿ ಬ್ರ್ಯಾಕೆಟ್ ಅನ್ನು ತೆರೆದು ಎಂಟರ್ ಅನ್ನು ಒತ್ತಿ. |
08:03 | System ಡಾಟ್ out ಡಾಟ್ println ಬ್ರ್ಯಾಕೆಟ್ ನಲ್ಲಿ B grade ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ. |
08:13 | ಇಲ್ಲಿ ಪ್ರೋಗ್ರಾಮ್ ಎರಡನೇ ಕಂಡಿಶನ್ ಅನ್ನು Else If ವಿಭಾಗದಲ್ಲಿ ಪರೀಕ್ಷಿಸುತ್ತದೆ. |
08:18 | 'testScore' ಇದು 35 ಮತ್ತು 60 ರ ಮಧ್ಯೆಯಿದ್ದರೆ ಇದು "B Grade" ಎಂದು ಡಿಸ್ಪ್ಲೇ ಮಾಡುತ್ತದೆ. |
08:24 | ಮುಂದಿನ ಸಾಲಿನಲ್ಲಿ else ಎಂದು ಟೈಪ್ ಮಾಡಿ ಬ್ರ್ಯಾಕೆಟ್ ನಲ್ಲಿ System ಡಾಟ್ out ಡಾಟ್ println ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿ A grade ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ. |
08:42 | ಅಂತಿಮವಾಗಿ ಎರಡು ಕಂಡಿಷನ್ ಗಳೂ ಫಾಲ್ಸ್ ಆಗಿದ್ದರೆ, ಪ್ರೋಗ್ರಾಂ “A Grade" ಎಂದು ಡಿಸ್ಪ್ಲೇ ಮಾಡುತ್ತದೆ. |
08:48 | ಈಗ save ಸೇವ್ ಮಾಡಿ ಈ ಕೋಡ್ ಅನ್ನು run ಮಾಡೋಣ. |
08:51 | ನಾವು A Grade ಎಂದು ಫಲಿತಾಂಶವನ್ನು ಪಡೆಯುತ್ತೇವೆ. |
08:55 | ಈ ಪ್ರೋಗ್ರಾಂ ನಲ್ಲಿ ವಿದ್ಯಾರ್ಥಿಯ 'testScore' ನ ಬೆಲೆಯು 70 ಆಗಿದೆ. |
09:00 | ಹಾಗಗಿ ಫಲಿತಾಂಶವು “A Grade” ಎಂದು ಡಿಸ್ಪ್ಲೇ ಆಗುತ್ತದೆ. |
09:02 | ಈಗ testScore ಅನ್ನು 55 ಎಂದು ಬದಲಿಸೋಣ. |
09:07 | ಈಗ ಈ ಪ್ರೋಗ್ರಾಂ ಅನ್ನು save ಮಾಡಿ run ಮಾಡೋಣ. |
09:10 | ಈ ಉದಾಹರಣೆಯಲ್ಲಿ ಫಲಿತಾಂಶವು “B Grade”ಎಂದು ಡಿಸ್ಪ್ಲೇ ಆಗುತ್ತದೆ. |
09:16 | ನಾವು ಕಂಡಿಷನ್ ಗಳ ಸಂಖ್ಯೆಯನ್ನು ಕೂಡ ಹೆಚ್ಚಿಸಬಹುದು. |
09:19 | ಈಗ “B grade” ನ ಫಲಿತಾಂಶದ ವಿಭಾಗದ ನಂತರ ಇನ್ನೊಂದು ಕಂಡಿಶನ್ ಅನ್ನು ಸೇರಿಸೋಣ. |
09:23 | ಹಾಗಾಗಿ ಇಲ್ಲಿ
else, ಎಂದು ಟೈಪ್ ಮಾಡಿ ಮುಂದಿನ ಸಾಲಿನಲ್ಲಿ if ಬ್ರ್ಯಾಕೆಟ್ ನಲ್ಲಿ testScore ದೊಡ್ಡದು ಅಥವಾ ಸಮಚಿಹ್ನೆ 60 AND (&&) testScore ಚಿಕ್ಕದು ಅಥವಾ ಸಮಚಿಹ್ನೆ 70. ಎಂದು ಟೈಪ್ ಮಾಡಿ, |
09:47 | ಕರ್ಲಿ ಬ್ರ್ಯಾಕೆಟ್ ತೆರೆದು Enter ಅನ್ನು ಒತ್ತಿ, System ಡಾಟ್ out ಡಾಟ್ println ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿ O grade ಎಂದುಟೈಪ್ ಮಾಡಿ ಸೆಮಿಕೋಲನ್ ಹಾಕಿ. |
10:01 | ಇಲ್ಲಿ 'testScore' ನ ಬೆಲೆಯು 60 ಮತ್ತು 70 ರ ನಡುವೆ ಇದ್ದರೆ, ಪ್ರೋಗ್ರಾಮ್ "O Grade" ಎಂದು ಡಿಸ್ಪ್ಲೇ ಮಾಡುತ್ತದೆ. |
10:07 | ಈಗ ವಿದ್ಯಾರ್ಥಿಯ testScore ಅನ್ನು 70 ಎಂದು ಬದಲಿಸಿ. |
10:12 | ಈಗ ಈ ಪ್ರೋಗ್ರಾಂ ಅನ್ನು save ಮಾಡಿ run ಮಾಡೋಣ. |
10:15 | ನಾವು ಈ ರೀತಿಯಾದ ಫಲಿತಾಂಶವನ್ನು ಪಡೆಯುತ್ತೇವೆ. |
10:17 | ಪ್ರೋಗ್ರಾ ಮ್ ಫಲಿತಾಂಶವನ್ನು “O grade”ಎಂದು ಡಿಸ್ಪ್ಲೇ ಮಾಡುತ್ತದೆ. |
10:20 | ಅದು ಮೊದಲಿನಂತೆ “A grade” ಅನ್ನು ಡಿಸ್ಪ್ಲೇ ಮಾಡುವುದಿಲ್ಲ. |
10:23 | ಪ್ರೋಗ್ರಾಂ testScore ನ ಬೆಲೆಯು 70 ಕ್ಕಿಂತ ಹೆಚ್ಚಾಗಿದ್ದರೆ “A grade” ಅನ್ನು ಡಿಸ್ಪ್ಲೇ ಮಾಡುತ್ತದೆ. |
10:28 | conditional structures ಅನ್ನು ಕೋಡಿಂಗ್ ಮಾಡುವಾಗ: |
10:30 | ಸ್ಟೇಟ್ ಮೆಂಟ್ ಅನ್ನು ಕೊನೆಗೊಳಿಸುವಾಗ ಸೆಮಿಕೋಲನ್ ಹಾಕುವುದನ್ನು ಯಾವಗಲೂ ಮರೆಯಬೇಡಿ. |
10:35 | ಆದರೆ ಕಂಡಿಷನ್ ನ ನಂತರ ಸೆಮಿಕೋಲನ್ ಅನ್ನು ಸೇರಿಸಬೇಡಿ.. |
10:40 | ಕೋಡ್ ಬ್ಲಾಕ್ ಅನ್ನು ಕರ್ಲಿ ಬ್ರ್ಯಾಕೆಟ್ ನಲ್ಲಿ ಯೇ ಇಡಿ. |
10:43 | ಬ್ಲಾಕ್ ಕೇವಲ ಒಂದೇ ಸ್ಟೇಟ್ ಮೆಂಟ್ ಅನ್ನು ಹೊಂದಿದ್ದರೆ ಕರ್ಲಿ ಬ್ರ್ಯಾಕೆಟ್ ನಿಮ್ಮ ಆಯ್ಕೆಗೆ ಬಿಟ್ಟಿದ್ದು. |
10:49 | ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. |
10:51 | ಈ ಟ್ಯುಟೋರಿಯಲ್ ನಲ್ಲಿ ನಾವು |
10:53 | * conditional statements ಗಳನ್ನು ವಿವರಿಸಿದ್ದೇವೆ. |
10:56 | ಕಂಡಿಷನಲ್ ಸ್ಟೇಟ್ ಮೆಂಟ್ ಗಳ ವಿಧಗಳನ್ನು ಪಟ್ಟಿ ಮಾಡಿದ್ದೇವೆ. |
10:59 | if, if...else ಮತ್ತು if...else if ಸ್ಟೇಟ್ ಮೆಂಟ್ ಗಳನ್ನು ಜಾವಾ ಪ್ರೋಗ್ರಾಂ ನಲ್ಲಿ ಉಪಯೋಗಿಸಿದ್ದೇವೆ. |
11:04 | ಈಗ if, if...else ಮತ್ತು if...else if ಸ್ಟೇಟ್ ಮೆಂಟ್ ಗಳನ್ನು ಉಪಯೋಗಿಸಿ ಒಂದು ಜಾವಾ ಪ್ರೊಗ್ರಾಂ ಅನ್ನುಬರೆಯುವ ಅಸೈನ್ ಮೆಂಟ್ ಅನ್ನು ತೆಗೆದುಕೊಳ್ಳಿ. |
11:12 | if ಸ್ಟೇಟ್ ಮೆಂಟ್ ಅನ್ನು ಉಪಯೋಗಿಸಿ ಎರಡು ಬೆಲೆಗಳನ್ನು ಹೋಲಿಕೆ ಮಾಡಲು ಜಾವಾ ಪ್ರೋಗ್ರಾಂ ಅನ್ನು ಬರೆಯಿರಿ. |
11:17 | ಕೊಟ್ಟ ಸಂಖ್ಯೆಯು ಸಮಸಂಖ್ಯೆಯೇ ಅಥವಾ ಬೆಸ ಸಂಖ್ಯೆಯೆ ಎಂದು ಕಂಡು ಹಿಡಿಯಲು ಜಾವಾ ಪ್ರೋಗ್ರಾಂ ಅನ್ನು ಬರೆಯಿರಿ ಸುಳಿವು: if...else ಸ್ಟೇಟ್ ಮೆಂಟ್ ಅನ್ನು ಉಪಯೋಗಿಸಿ. |
11:23 | ಮೂರುಸಂಖ್ಯೆಗಳಲ್ಲಿ ದೊಡ್ಡ ಸಂಖ್ಯೆಯನ್ನು ಕಂಡುಹಿಡಿಯಲು ಜಾವಾ ಪ್ರೋಗ್ರಾಂ ಅನ್ನು ಬರೆಯಿರಿ ಸುಳಿವು: if...else if ಸ್ಟೇಟ್ ಮೆಂಟ್ ಅನ್ನು ಉಪಯೋಗಿಸಿ. |
11:29 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಕುರಿತು ಹೆಚ್ಚಿನ ವಿಷಯವನ್ನು ತಿಳಿಯಲು |
11:32 | ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋಗಳನ್ನು ನೋಡಿ. |
11:35 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಕುರಿತು ತಿಳಿಸಿಕೊಡುತ್ತದೆ. |
11:38 | ನೀವು ಒಳ್ಳೆಯ ಬ್ಯಾಂಡ್ ವಿಡ್ತ್ ಹೊಂದಿಲ್ಲದಿದ್ದಲ್ಲಿ ಡೌನ್ ಲೋಡ್ ಮಾಡಿ ನೋಡಿಕೊಳ್ಳಬಹುದು. |
11:42 | ಸ್ಪೋಕನ್ ಟ್ಯುಟೋರಿಯಲ್ ತಂಡವು : |
11:44 | ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ. |
11:47 | ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗೆ contact ಎಟ್ spoken ಹೈಫನ್ tutorial ಡಾಟ್ org. ಗೆ ಬರೆಯಿರಿ. |
11:56 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಟಾಕ್ ಟು ಎ ಟೀಚರ್ ನ ಒಂದು ಭಾಗವಾಗಿದೆ. |
12:00 | ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD,ಭಾರತ ಸರ್ಕಾರದಿಂದ ಪ್ರಮಾಣಿತವಾಗಿದೆ. |
12:06 | ಇದರ ಕುರಿತು ಹೆಚ್ಚಿನ ವಿವರಗಳು spoken ಹೈಫನ್ tutorial ಡಾಟ್ org ಸ್ಲ್ಯಾಶ್ NMEICT ಹೈಫನ್Intro ನಲ್ಲಿ ದೊರೆಯುತ್ತದೆ. |
12:15 | ಈ ಸ್ಕ್ರಿಪ್ಟ್ ಅನ್ನು TalentSprint ನಿಂದ ಪಡೆದುಕೊಳ್ಳಲಾಗಿದೆ. ಅನುವಾದ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ ಉಪ್ಪಿನ ಪಟ್ಟಣ. ಧನ್ಯವಾದಗಳು. |