Drupal/C3/Table-of-Fields-with-Views/Kannada
From Script | Spoken-Tutorial
| Time | Narration |
| 00:01 | Table of Fields with Viewsನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
| 00:07 | ಈ ಟ್ಯುಟೋರಿಯಲ್ ನಲ್ಲಿ ನಾವು fields ಗಳ table ಅನ್ನು ರಚನೆ ಮಾಡುವುದನ್ನು ಕಲಿಯುತ್ತೇವೆ. |
| 00:12 | ಈ ಟ್ಯುಟೋರಿಯಲ್ ಗಾಗಿ ನಾನು
Ubuntu Linux Operating System Drupal 8 ಮತ್ತು Firefox ವೆಬ್ ಬ್ರೌಸರ್ ಗಳನ್ನು ಉಪಯೋಗಿಸಿದ್ದೇನೆ. |
| 00:23 | ನೀವು ನಿಮಗೆ ಇಷ್ಟವಾದ ವೆಬ್ ಬ್ರೌಸರ್ ಅನ್ನು ಉಪಯೋಗಿಸಬಹುದು. |
| 00:27 | ನಾವು ಈಗ ಫೀಲ್ಡ್ ಗಳ Table ಎಂದರೇನು ಎಂದು ನೋಡೋಣ. |
| 00:31 | ಈಗ ನಾವು ಮುಂಬರುವ ಇವೆಂಟ್ ಗಳ ಪಟ್ಟಿಯನ್ನು ಡಿಸ್ಪ್ಲೇ ಮಾಡಬಯಸುತ್ತೇವೆ ಅಂದುಕೊಳ್ಳೋಣ. |
| 00:38 | ಇಲ್ಲಿ ಬಳಕೆದಾರರು ಇವೆಂಟ್ ಗಳ ಕೆಲವು ಮಾಹಿತಿ ಮತ್ತು ಅದರ ದಿನಾಂಕವನ್ನು ನೋಡಬಹುದು. |
| 00:45 | ಇಲ್ಲಿ ತೋರಿಸಿರುವ ಫೀಲ್ಡ್ ಗಳು 'Events' Content type ನಲ್ಲಿವೆ. |
| 00:50 | ಇಲ್ಲಿ ನಾವು ಕೆಲವು ಇವೆಂಟ್ ಗಳ ಕೆಲವು ಫೀಲ್ಡ್ ಗಳನ್ನು ಮಾತ್ರ ಡಿಸ್ಪ್ಲೇ ಮಾಡುತ್ತಿದ್ದೇವೆ. |
| 00:55 | ಅದರಲ್ಲೂ ಇಲ್ಲಿ ನಾವು ಪ್ರಸ್ತುತ ಸಮಯದ ನಂತರದ ದಿನಾಂಕವನ್ನು ಹೊಂದಿರುವ ಇವೆಂಟ್ ಗಳನ್ನು ಮಾತ್ರ ಡಿಸ್ಪ್ಲೇ ಮಾಡುತ್ತಿದ್ದೇವೆ. |
| 01:02 | ಬೇರೆ ಪ್ರೊಗ್ರಾಂ ಗಳಲ್ಲಿ ಈ ರೀತಿ ಆಯ್ಕೆ ಮಾಡಿಕೊಂಡಿರುವ ಕಂಟೆಂಟ್ ಗಳ ಪಟ್ಟಿಯನ್ನು Reports ಅಥವಾ Query Results, ಎಂದೂ ಕರೆಯುತ್ತಾರೆ. |
| 01:11 | ಈಗ ನಾವು fieldಗಳ table ಗೆ ಒಂದು view ಅನ್ನು ರಚನೆ ಮಾಡೋಣ. |
| 01:16 | ಈಗ ನಾವು ಮೊದಲೇ ತಯಾರಿಸಿದ ವೆಬ್ ಸೈಟ್ ಅನ್ನು ತೆರೆಯೋಣ. |
| 01:21 | Shortcuts ಗೆ ಹೋಗಿ , ನಂತರ Views ನಲ್ಲಿ Add new view ಅನ್ನು ಕ್ಲಿಕ್ ಮಾಡಿ. |
| 01:28 | ನಾವು ಇದನ್ನು "Upcoming Events" ಎಂದು ಹೆಸರಿಸೋಣ. ಈಗ Content of type ಅನ್ನು "All" ಇಂದ "Events"ಗೆ ಬದಲಿಸೋಣ. |
| 01:37 | ನಾವು ಇದೇ ರೀತಿ ಯಾವುದೇ Content type ಗೆ ಅಂದರೆ– Log entries, Files, Content revisions, Taxonomy terms, Users, Custom blocks ಮುಂತಾದವುಗಳಿಗೂ ಮಾಡಬಹುದು. |
| 01:50 | ಈಗ sorted by ಆಯ್ಕೆಯನ್ನು Newest first ಎಂದೇ ಇಡೋಣ. |
| 01:55 | Create a page ನ ಮೇಲೆ ಚೆಕ್ ಮಾಡಿ ಮತ್ತು Display format, ನಲ್ಲಿ "Table" of fields ಅನ್ನು ಆಯ್ಕೆ ಮಾಡಿಕೊಳ್ಳಿ. |
| 02:03 | Items to display ನಲ್ಲಿ ಡಿಫಾಲ್ಟ್ ಬೆಲೆಯಾದ 10 ಅನ್ನು ಹಾಗೆ ಇಡೋಣ. |
| 02:09 | ನಂತರ Use a pager ಮತ್ತು Create a menu link. ಗಳ ಮೇಲೂ ಕೂಡ ಚೆಕ್ ಅನ್ನು ಮಾಡೋಣ. |
| 02:17 | Menu ವಿನ ಅಡಿಯಲ್ಲಿ , "Main navigation" ಅನ್ನು ಆಯ್ಕೆಮಾಡಿಕೊಳ್ಳೋಣ ಮತ್ತು Link text ಅನ್ನು "Upcoming Events"ಎಂದು ಕರೆಯೋಣ. |
| 02:28 | ಈಗ ನಮ್ಮ ಮೆನು ಸರಿಯಾಗಿ ಜೋಡಿಸಲ್ಪಟ್ಟಿಲ್ಲ ಇದನ್ನು ಶೀಘ್ರದಲ್ಲಿ ಮಾಡೋಣ. |
| 02:34 | Save and edit ನ ಮೇಲೆ ಕ್ಲಿಕ್ ಮಾಡಿ. |
| 02:37 | ಈಗ 5 ಪ್ರಶ್ನೆಗಳತ್ತ ಗಮನ ಹರಿಸೋಣ.
Display ಯು "page" ಎಂದಿದೆ. |
| 02:42 | FORMAT ಇದು "table" ಎಂದಿದೆ.. |
| 02:45 | FIELDS, ನಡಿಯಲ್ಲಿ "Title" ಎಂದಿದೆ. |
| 02:48 | FILTER CRITERIA ದಲ್ಲಿ ನಮಗೆ ಕೇವಲ "Upcoming events" ಬೇಕು ಹಾಗಾಗಿ ನಾವು ಅದನ್ನು ಬದಲಿಸಬೇಕು. |
| 02:55 | SORT CRITERIA ಇದು ಕೂಡ ತಪ್ಪಾಗಿದೆ ಏಕೆಂದರೆ ನಮಗೆ Published date ನ ಬದಲು Event date ಬೇಕು. |
| 03:03 | ಪ್ರಾರಂಭಿಸುವ ಮೊದಲು Save ಮೇಲೆ ಕ್ಲಿಕ್ ಮಾಡಿ. |
| 03:06 | ಮಧ್ಯದಲ್ಲಿ ನಾವು ನಮ್ಮ PAGE SETTINGS ಅನ್ನು ಹೊಂದಿದ್ದೇವೆ. |
| 03:10 | ಇಲ್ಲಿ Path, Menu, Access Permission ಗಳಿವೆ ಮತ್ತು ಈಗ ಲ್ಯಾಂಡಿಗ್ ಪೇಜ್ ಗೆ ಎಲ್ಲರೂ ಎಕ್ಸೆಸ್ ಪರ್ಮಿಶನ್ ಅನ್ನು ಹೊಂದಿದ್ದಾರೆ. |
| 03:20 | ಇಲ್ಲಿ Add ಬಟನ್ ಮೇಲೆ ಕ್ಲಿಕ್ ಮಾಡಿದರೆ HEADER ಅಥವಾ FOOTER ಅನ್ನು ಸೇರಿಸಬಹುದು. |
| 03:27 | ಇಲ್ಲಿ ಫಲಿತಾಂಶ ಇಲ್ಲದಿದ್ದರೆ ಏನು ಮಾಡಬೇಕೆಂದು ಸೇರಿಸಬಹುದು. |
| 03:31 | ಇಲ್ಲಿ ಒಂದು page ನಲ್ಲಿ ಎಷ್ಟು ಇಮೇಜ್ ಗಳನ್ನು ತೋರಿಸಬೇಕೆಂದು ನಿರ್ಧರಿಸಬಹುದು. |
| 03:36 | ಮತ್ತು ಅಲ್ಲಿ ಕೆಳಭಾಗದಲ್ಲಿ pager ಇದೆಯೇ ಇಲ್ಲವೇ, ಅಥವಾ View ನ ಕೆಳಭಾಗದಲ್ಲಿ Read More link ಗೆ ಇಲ್ಲವೇ ಎಂದು ನಿರ್ಧರಿಸಬಹುದು. |
| 03:44 | ADVANCED ಟ್ಯಾಬ್ ನಡಿಯಲ್ಲಿ ಇರುವ ಅಂಶಗಳನ್ನು ನಾವು ಈ ಟ್ಯುಟೋರಿಯಲ್ ನಲ್ಲಿ ಸೇರಿಸುವುದಿಲ್ಲ. |
| 03:50 | ನಾವು ಈಗಾಗಲೆ Events ಮತ್ತು User Groups ಗಳನ್ನು ಜೋಡಿಸಿದ್ದೇವೆ. |
| 03:54 | ನಾವು ನಮ್ಮEvents ಗಳನ್ನು ಸ್ಪೋನ್ಸ್ ರ್ ಮಾಡುತ್ತಿರುವ User Groups ಗಳಿಂದ ಮಾಹಿತಿಗಳನ್ನು ತೆಗೆದುಕೊಳ್ಳಬಹುದು ಮತ್ತು ಈ View ನಲ್ಲಿ ಹಾಕಬಹುದು. |
| 04:03 | ನಾವು ರಚನೆ ಮಾಡಿದ RELATIONSHIPS ಮತ್ತು CONTEXT ಗಳಿಂದ ಇದನ್ನು ಮಾಡಬಹುದು. |
| 04:10 | ಈಗ ನಮ್ಮ ಟೇಬಲ್ ನಲ್ಲಿ ಅವಶ್ಯಕವಾದ ಫೀಲ್ಡ್ ಗಳನ್ನು ಸೇರಿಸೋಣ. |
| 04:15 | Add ಮೇಲೆ ಕ್ಲಿಕ್ ಮಾಡಿ ಮತ್ತು ನೀವು Event Date ಫೀಲ್ಡ್ ಸಿಗುವವರೆಗೂ ಸ್ಕ್ರೋಲ್ ಮಾಡಿ. |
| 04:21 | Content type name ಅನ್ನು ಉಪಯೋಗಿಸಿ ನನ್ನ ಫೀಲ್ಡ್ ಗಳಿಗೆ ಎಚ್ಚರಿಗೆಯಿಂದ ಹೆಸರು ಕೊಡುತ್ತೇನೆ. |
| 04:27 | ಹಾಗಾಗಿ ನಾನು ಅವುಗಳನ್ನು Views ನಲ್ಲಿ ನಂತರ ಹುಡುಕಬಹುದು. |
| 04:32 | Event Date ನ ಮೇಲೆ ಚೆಕ್ ಮಾಡಿ ಮತ್ತು Apply ಯನ್ನು ಕ್ಲಿಕ್ ಮಾಡಿ. |
| 04:37 | ಇಲ್ಲಿ ನಾವು ಕೆಲವು ಸೆಟ್ಟಿಂಗ್ ಗಳನ್ನು ಆರಿಸಿಕೊಳ್ಳೋಣ. |
| 04:41 | ಈಗ ಇಲ್ಲಿ , Create a label ಮತ್ತು Place a colon ಆಯ್ಕೆಗಳು ಚೆಕ್ ಆಗಿವೆ. |
| 04:47 | Date format ಅನ್ನು ಡಿಫಾಲ್ಟ್ ಆಗೇ ಬಿಡೋಣ. ಅಂದರೆ "medium date" ಆಗೇ ಬಿಡೋಣ. |
| 04:53 | ಈಗ ಅವೆಲ್ಲದರ ಕುರಿತು ಚಿಂತಿಸಬೇಡಿ. |
| 04:57 | ಮತ್ತು ಕೊನೆಯಲ್ಲಿ Apply all displays ಬಟನ್ ಅನ್ನು ಕ್ಲಿಕ್ ಮಾಡಿ. |
| 05:02 | ನಾವು ಈಗ ಎರಡು column ಗಳಾದ - TITLE ಮತ್ತು EVENT DATE ಗಳನ್ನು ಹೊಂದಿದ್ದೇವೆ. |
| 05:08 | ಈಗ ನಮ್ಮ ಮುಂದಿನ ಫೀಲ್ಡ್ ಅನ್ನು ಸೇರಿಸೋಣ. Add ಅನ್ನು ಕ್ಲಿಕ್ ಮಾಡಿ ಮತ್ತು ಈ ಸಲ ನೀವು Event Logo ಆಯ್ಕೆ ಸಿಗುವವರೆಗೂ ಸ್ಕ್ರೋಲ್ ಮಾಡಿ. |
| 05:17 | ಅದನ್ನು ಆಯ್ಕೆ ಮಾಡಿಕೊಂಡು Apply ಅನ್ನು ಕ್ಲಿಕ್ ಮಾಡಿ. |
| 05:21 | ಈ ಸಲ Create a label ಆಯ್ಕೆಯನ್ನು ಅನ್ ಚೆಕ್ ಮಾಡಿ. |
| 05:25 | "Thumbnail" ನ Image style ಅನ್ನು ಆಯ್ಕೆ ಮಾಡಿಕೊಳ್ಳೋಣ. |
| 05:30 | ನಂತರ Link image to ಡ್ರಾಪ್ ಡೌನ್ ನಡಿಯಲ್ಲಿ "Content" ಅನ್ನು ಆಯ್ಕೆ ಮಾಡಿಕೊಳ್ಳಿ. |
| 05:36 | ಮುಂದಿನ ಟ್ಯುಟೋರಿಯಲ್ ಗಳಲ್ಲಿ ನಾವು ಈ ಲೇ ಔಟ್ ಗೆ ಹೊಸ Image style ಅನ್ನು ರಚನೆ ಮಾಡುವುದನ್ನು ಕಲಿಯೋಣ. ಆದರೆ ಈಗ "Thumbnail" ಅನ್ನು ಆಯ್ಕೆ ಮಾಡಿಕೊಳ್ಳೋಣ. |
| 05:45 | Apply ಅನ್ನು ಕ್ಲಿಕ್ ಮಾಡಿ. ಈಗ preview ನಲ್ಲಿ , ನಾವು ಪ್ರತಿಯೊಂದೂ Event ಗೂ devel, ನಿಂದ ರಚನೆಯಾದ thumbnails ಅನ್ನು ನೋಡಲೇ ಬೇಕು. |
| 05:55 | ಮತ್ತೆ ಹಿಂದಿರುಗಿ Add ಮೇಲೆ ಇನ್ನೊಮ್ಮೆ ಕ್ಲಿಕ್ ಮಾಡೋಣ. ಈ ಸಲ ಸ್ಕ್ರೋಲ್ ಮಾಡಿ ಒಮ್ಮೆಲೇ ಒಂದಕ್ಕಿಂತ ಹೆಚ್ಚು field ಗಳನ್ನು ಆರಿಸಿಕೊಳ್ಳಿ. |
| 06:04 | Event Topics ಮತ್ತು Event Website ಗಳನ್ನು ಆಯ್ಕೆ ಮಾಡಿಕೊಳ್ಳಿ ಮತ್ತು ನಂತರ Apply all displays ಬಟನ್ ಮೇಲೆ ಕ್ಲಿಕ್ ಮಾಡಿ. |
| 06:13 | ಮುಂದಿನ ಪುಟದಲ್ಲಿ ಎಲ್ಲವನ್ನು ಹೇಗಿದೆಯೋ ಹಾಗೇ ಬಿಟ್ಟು Apply ಅನ್ನು ಕ್ಲಿಕ್ ಮಾಡಿ. |
| 06:18 | ಗಮನಿಸಿ ನಾವು ಈಗ Views ನಲ್ಲಿ ಎರಡು ಫೀಲ್ಡ್ ಗಳನ್ನು ಒಟ್ಟಿಗೆ ಸೆಟ್ ಮಾಡಬಹುದು ಮತ್ತು ಪ್ರತಿಯೊಂದೂ ಅದರದೇ ಆದ Settings ಸ್ಕ್ರೀನ್ ಅನ್ನು ಹೊಂದಿರುತ್ತದೆ. |
| 06:27 | ಇನ್ನೊಮ್ಮೆ Apply all displays' ಮೇಲೆ ಕ್ಲಿಕ್ ಮಾಡಿ. |
| 06:32 | ಈಗ ನಾವು EVENT TOPICS ಮತ್ತು EVENT WEBSITE ಗಳನ್ನು ಹೊಂದಿದ್ದೇವೆ. |
| 06:37 | ಇಲ್ಲಿ ನಾವು ನಮ್ಮ title, date, topics ಮತ್ತು website ಗಳನ್ನು ಹೊಂದಿದ್ದೇವೆ ಈಗ Save ಮೇಲೆ ಕ್ಲಿಕ್ ಮಾಡೋಣ. |
| 06:45 | ನಿಮ್ಮ ಕೆಲಸವನ್ನು ಆಗಿಂದಾಗ ಸೇವ್ ಮಾಡುವುದು ಉತ್ತಮ ಹವ್ಯಾಸ. |
| 06:49 | ಈಗ ಪರೀಕ್ಷಿಸೋಣ. ನಮ್ಮ Display ಒಂದು Pageಆಗಿದೆ. |
| 06:53 | ನಮ್ಮ FORMAT ಒಂದು Tableಆಗಿದೆ. |
| 06:56 | ನಮ್ಮ FIELD ಗಳು ಸೆಟ್ ಆಗಿವೆ. |
| 06:59 | FILTER CRITERIA ಮತ್ತು SORT CRITERIA ಗಳು ಇನ್ನೂ ತಪ್ಪಾಗಿವೆ. |
| 07:04 | FILTER CRITERIA, ವನ್ನು ಸೇರಿಸಲು Add ಬಟನ್ ಅನ್ನು ಕ್ಲಿಕ್ ಮಾಡಿ. |
| 07:08 | Event Date ಸಿಕ್ಕುವವರೆಗೂ ಸ್ಕ್ರೋಲ್ ಮಾಡಿ ನಂತರ Event Date ಅನ್ನು ಆಯ್ಕೆ ಮಾಡಿಕೊಂಡು Apply ಅನ್ನು ಕ್ಲಿಕ್ ಮಾಡಿ. |
| 07:17 | ಈ ಪರದೆ ತುಂಬಾ ಮುಖ್ಯ. |
| 07:20 | Operator ಡ್ರಾಪ್ ಡೌನ್ ನಡಿಯಲ್ಲಿ , "Is greater than or equal to" ಅನ್ನು ಆಯ್ಕೆ ಮಾಡಿಕೊಳ್ಳೋಣ. |
| 07:26 | Value type ನಡಿಯಲ್ಲಿ ನೀವು ಇವತ್ತಿನ ದಿನಾಂಕವನ್ನಿಟ್ಟರೆ ಅದರಿಂದ ಅನನುಕೂಲವಾಗುತ್ತದೆ. |
| 07:32 | ನಾವು ಪ್ರತಿನಿತ್ಯವೂ ಹೊಸ ದಿನಾಂಕವನ್ನು ಇಡಬೇಕಾಗುತ್ತದೆ. ಆದರೆ ನಾವು "An offset of the current time..." ಆಯ್ಕೆಯನ್ನು ಆರಿಸಿಕೊಳ್ಳಬಹುದು. |
| 07:40 | ಮತ್ತು Value ಫೀಲ್ಡ್ ನಲ್ಲಿ “now” ಎಂದು ಟೈಪ್ ಮಾಡಿ. |
| 07:45 | ಅಂದರೆ ಪ್ರಸ್ತುತ ಸಮಯದ ನಂತರದ ಇವೆಂಟ್ ಗಳು ಮಾತ್ರ ಪ್ರದರ್ಶಿಸಲ್ಪಡುತ್ತವೆ. |
| 07:51 | ಪ್ರಸ್ತುತ ಸಮಯ ಅಂದರೆ ನಾವು ರಚಿಸುತ್ತಿರುವ ಸಮಯವಲ್ಲ, ಅದು ಬಳಕೆದಾರ ನೋಡುವಾಗಿನ ಸಮಯ. |
| 07:59 | ಹಾಗಾಗಿ ಬಳಕೆದಾರ ಕೇವಲ ಮುಂಬರುವ ಇವೆಂಟ್ ಗಳನ್ನು ಮಾತ್ರ ನೋಡುತ್ತಾನೆ. |
| 08:03 | Apply ಮೇಲೆ ಕ್ಲಿಕ್ ಮಾಡಿ. |
| 08:05 | devel ನಿಂದ ರಚಿಸಲ್ಪಟ್ಟ ಡಮ್ಮಿ ಕಂಟೆಂಟ್ ಗಳು ಯಾವುದೇ ಮುಂಬರುವ ದಿನಾಂಕಗಳನ್ನು ತೋರಿಸದೇ ಇರುವುದನ್ನು ನೋಡಬಹುದು. |
| 08:13 | ನಮ್ಮ View ಗಳು ಸರಿಯಾಗಿ ಕೆಲಸ ಮಾಡುತ್ತವೆ ಎಂದು ಖಚಿತ ಪಡಿಸಿಕೊಳ್ಳಲು ನಾವು ಕೆಲವು ಇವೆಂಟ್ ಗಳನ್ನು ನಾವೇ ಅಪ್ಡೇಟ್ ಮಾಡೋಣ. |
| 08:20 | ಇನ್ನು ಕೆಲವು ಇವೆಂಟ್ ಗಳನ್ನು ಹುಡುಕಿ ಮತ್ತು Event Date ಅನ್ನು ಯಾವುದಾದರು ಮುಂಬರುವ ದಿನಾಂಕಕ್ಕೆ ಬದಲಿಸಿ. |
| 08:25 | Content ಗೆ ಹೋಗಿ Filter ಅನ್ನು Events Type ಗೆ ಅನ್ನು ಬದಲಿಸಿ |
| 08:31 | ಯಾವುದಾದರೂ ಇವೆಂಟ್ ಅನ್ನು ಆರಿಸಿಕೊಂಡು Edit ಮೇಲೆ ಕ್ಲಿಕ್ ಮಾಡಿ.ದಿನಾಂಕ ವನ್ನು ಮುಂಬರುವ ದಿನಾಂಕಕ್ಕೆ ಬದಲಿಸಿ. |
| 08:39 | ಈಗ Save ಮೇಲೆ ಕ್ಲಿಕ್ ಮಾಡಿ. |
| 08:42 | ಟ್ಯುಟೋರಿಯಲ್ ಅನ್ನು ನಿಲ್ಲಿಸಿಕೊಂಡು 6 ಅಥವಾ 7 ಇವೆಂಟ್ ಗಳನ್ನು ಅಪ್ ಡೇಟ್ ಮಾಡಿ. |
| 08:49 | ಅದನ್ನು ಮಾಡಿದ ಮೇಲೆ ಟ್ಯುಟೋರಿಯಲ್ ಗೆ ಹಿಂದಿರುಗಿ. |
| 08:53 | Shortcuts ಗೆ ಹೋಗಿ. Views ಮೇಲೆ ಕ್ಲಿಕ್ ಮಾಡಿ. Upcoming Events ಅನ್ನು ಹುಡುಕಿ Edit ಮೇಲೆ ಕ್ಲಿಕ್ ಮಾಡಿ. |
| 09:01 | ಈಗ ನಾವು ಆಗಲೇ ಬಿಟ್ಟುಬಂದ view ವನ್ನು ಎಡಿಟ್ ಮಾಡಲು ಹೋಗೋಣ. |
| 09:06 | ಪ್ರಿವಿವ್ಯೂ ವನ್ನು ನೋಡಲು ಕೆಳಗೆ ಸ್ಕ್ರೋಲ್ ಮಾಡಿ. |
| 09:10 | ಈಗ ನಾವು ನಮ್ಮ Event Date ಅನ್ನು greater than or equal to now ಆಗಿ ಪರಿವರ್ತಿಸಿ ಸರಿಯಾಗಿ ಫಿಲ್ಟರ್ ಮಾಡಿದ್ದೇವೆ. |
| 09:17 | ನಂತರ ನಾವು SORT CRITERIA ವನ್ನು ಚೆಕ್ ಮಾಡೋಣ. |
| 09:22 | ಡಿಫಾಲ್ಟ್ ಆಗಿ Drupal ಕಂಟೆಂಟ್ ಅನ್ನು ಆಥರಿಂಗ್ ದಿನಾಂಕದ ಅವರೋಹಣ ಕ್ರಮದಲ್ಲಿ ಜೋಡಿಸಿರುತ್ತದೆ. |
| 09:30 | Event ಗಳು , Event Date ನ ಆರೋಹಣ ಕ್ರಮದಲ್ಲಿರುವುದು ಉಪಯುಕ್ತ. |
| 09:37 | ಅದನ್ನು ಬದಲಿಸಲು, Authored on ನ ಮೇಲೆ ಕ್ಲಿಕ್ ಮಾಡಿ ಮತ್ತು Remove ಅನ್ನು ಕ್ಲಿಕ್ ಮಾಡಿ. |
| 09:44 | Add ಅನ್ನು ಕ್ಲಿಕ್ ಮಾಡಿ. ಮತ್ತು ಇನ್ನೊಮ್ಮೆ Event Date ಸಿಗುವವರೆಗೂ ಸ್ಕ್ರೋಲ್ ಮಾಡಿ. |
| 09:51 | Apply ಅನ್ನು ಕ್ಲಿಕ್ ಮಾಡಿ. |
| 09:53 | ಈಗ Order ನಡಿಯಲ್ಲಿ , Sort ascending ಅನ್ನು ಆರಿಸಿಕೊಳ್ಳಿ. ಅದು ನಮ್ಮ ಇವೆಂಟ್ ಗಳನ್ನು ಇವತ್ತಿನಿಂದ ಮುಂದೆ ಜೋಡಿಸುತ್ತದೆ. |
| 10:03 | Apply ಅನ್ನು ಕ್ಲಿಕ್ ಮಾಡಿ. |
| 10:05 | ಈಗ ನಾವು ನಮ್ಮ ಇವೆಂಟ್ ಗಳನ್ನು ಅಪ್ ಡೇಟ್ ಮಾಡಿದ್ದೇವೆ ಮತ್ತು Sort Criteria ವನ್ನು ಸರಿಯಾಗಿ ಸೆಟ್ ಮಾಡಿದ್ದೇವೆ. |
| 10:11 | ನಾವು ಈ ರೀತಿಯಾಗಿ ಪಟ್ಟಿಯಾಗಿರುವುದನ್ನು ನೋಡಲು ಸಾಧ್ಯವಾಗಬೇಕು. |
| 10:16 | ಮುಂಬರುವ ಎಲ್ಲಾ ಇವೆಂಟ್ ಗಳೂ EVENT DATE ನ ಕ್ರಮಕ್ಕನುಗುಣವಾಗಿ ಜೋಡಿಸಲ್ಪಟ್ಟಿವೆ. |
| 10:23 | ಮುಂದೆ ಹೋಗುವ ಮೊದಲು Save ಅನ್ನು ಕ್ಲಿಕ್ ಮಾಡಿದ್ದೀರೆಂದು ಖಚಿತ ಪಡಿಸಿಕೊಳ್ಳಿ. |
| 10:27 | ಹಾಗಾಗಿ ಈ ನಿರ್ದಿಷ್ಟವಾದ View ನಲ್ಲಿ ನಾವು ಈಗ ಇನ್ನೊಂದನ್ನು ಮಾಡಲು ಹೊರಟಿದ್ದೇವೆ. |
| 10:32 | ಈಗ TITLE ಮತ್ತು Logo ಕಾಲಮ್ ಗಳನ್ನು ಸೇರಿಸೋಣ ಮತ್ತು TITLE ಮತ್ತು EVENT DATE ಗಳನ್ನು ಸಾರ್ಟ್ ಮಾಡಲಾಗುವಂತೆ ಮಾಡೋಣ. |
| 10:41 | ನಾವು ಇದನ್ನು ಮಾಡಿದಾಗ, ಬಳಕೆದಾರ TITLE ಮೇಲೆ ಕ್ಲಿಕ್ ಮಾಡಿದರೆ ಅದರ ಪ್ರಕಾರ ಸಾರ್ಟ್ ಮಾಡುಲು ಸಾಧ್ಯವಾಗುತ್ತದೆ. |
| 10:48 | ಮೇಲಕ್ಕೆ ಸ್ಕ್ರೋಲ್ ಮಾಡಿ. FORMAT > Table ಮೇಲೆ ತನ್ನು ಮತ್ತು ಅದರ ಮುಂದೆ ಇರುವ Settings ಅನ್ನು ಕ್ಲಿಕ್ ಮಾಡಿ. |
| 10:57 | Content Event Logo, ನಲ್ಲಿ COLUMNಡ್ರಾಪ್ ಡೌನ್ ಅನ್ನು "Title" ಗೆ ಬದಲಿಸಿ. |
| 11:03 | ಇಲ್ಲಿ SEPARATOR, ಗೆ ಬರಿ line break ಅನ್ನು ಇಡಿ. |
| 11:08 | Title ಮತ್ತು Event Date ಕಾಲಮ್ ಗಳನ್ನು SORTABLE ನಲ್ಲಿ Ascending order ಎಂದು ಸೆಟ್ ಮಾಡಿ ಮತ್ತು Apply ಅನ್ನು ಕ್ಲಿಕ್ ಮಾಡಿ. |
| 11:17 | ಹಾಗಾಗಿ ಈಗ ನಮ್ಮ Title ಮತ್ತು logo ಗಳೆರಡೂ ಒಂದೇ ಕಾಲಮ್ ನಲ್ಲಿವೆ ಮತ್ತು TITLE ಮತ್ತು EVENT DATE ಗಳೆರಡನ್ನೂ ಸಾರ್ಟ್ ಮಾಡಬಹುದು. |
| 11:26 | ಈಗ Title ಪದವನ್ನು Event Name ಗೆ ಬದಲಿಸೋಣ. |
| 11:31 | "Title" ನ ಮೇಲೆ ಕ್ಲಿಕ್ ಮಾಡಿ ಮತ್ತು Label ನಲ್ಲಿ "Title" ಪದವನ್ನು "Event Name" ಗೆ ಬದಲಿಸಿ ನಂತರ
Apply ಅನ್ನು ಕ್ಲಿಕ್ ಮಾಡಿ. |
| 11:40 | ಪ್ರಿವಿವ್ಯೂ ಭಾಗಕ್ಕೆ ಸ್ಕ್ರೋಲ್ ಮಾಡಿ. ನಮ್ಮ Event Name ಮತ್ತು logo ಮತ್ತು date ಎಲ್ಲವೂ ಸೆಟ್ ಆಗಿವೆ. |
| 11:48 | ಮುಂದಿನ ಟ್ಯುಟೋರಿಯಲ್ ಗಳಲ್ಲಿ ನಮ್ಮ ಲೋಗೋ ದ ಗಾತ್ರವನ್ನು ಬದಲಿಸಿ ಅದು ಇನ್ನು ಚೆನ್ನಾಗಿ ಕಾಣುವಂತೆ ಮಾಡುವುದನ್ನು ಕಲಿಯೋಣ. |
| 11:55 | ಈಗ Save ಅನ್ನು ಕ್ಲಿಕ್ ಮಾಡಿ ಮತ್ತು ನಮ್ಮ View ವನ್ನು ಪರೀಕ್ಷಿಸಿಕೊಳ್ಳೋಣ. |
| 11:59 | Homepage ಗೆ ಹೋಗಲು Back to site ನ ಮೇಲೆ ಕ್ಲಿಕ್ ಮಾಡಿ |
| 12:03 | Upcoming Events ನ ಮೇಲೆ ಕ್ಲಿಕ್ ಮಾಡಿ. |
| 12:06 | ನೀವು ಮುಂಬರುವ ಎಲ್ಲ ಇವೆಂಟ್ ಗಳೂ ಟೇಬಲ್ ನಲ್ಲಿ ಚೆನ್ನಾಗಿ ಜೋಡಿಸಿರುವುದನ್ನು ನೋಡಬೇಕು. |
| 12:13 | ಮತ್ತು ನೀವು Event Name ಮತ್ತು Event Date ಗಳ ಆಧಾರದ ಮೇಲೆ ಸಾರ್ಟ್ ಮಾಡಬಹುದು ಎನ್ನುವುದನ್ನೂ ನೋಡಬಹುದು. |
| 12:20 | ಇದರೊಂದಿಗೆ ನಾವು ನಮ್ಮ ಮೊದಲ Table View ಅನ್ನು ಪೂರ್ಣಗೊಳಿಸಿದ್ದೇವೆ. |
| 12:24 | ಈಗ ಸಾರಾಂಶವನ್ನು ನೋಡೋಣ. |
| 12:26 | ಈ ಟ್ಯುಟೋರಿಯಲ್ ನಲ್ಲಿ ನಾವು fields ಗಳ table ಅನ್ನು ರಚನೆ ಮಾಡುವುದನ್ನು ಕಲಿತಿದ್ದೇವೆ. |
| 12:41 | ಈ ವಿಡಿಯೋವನ್ನು Acquia ಮತ್ತು OSTraining ನಿಂದ ಪಡೆದುಕೊಳ್ಳಲಾಗಿದೆ ಮತ್ತು Spoken Tutorial Project, IIT Bombay ಅವರಿಂದ ಪರಿಷ್ಕರಿಸಲಾಗಿದೆ. |
| 12:51 | ಈ ಲಿಂಕ್ ನಲ್ಲಿರುವ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ವಿಕಲ್ಪದ ಕುರಿತು ಸಾರಾಂಶವನ್ನು ಕೊಡುತ್ತದೆ. |
| 12:58 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪ ತಂಡವು ಇದರ ಕಾರ್ಯಾಗಾರವನ್ನು ಏರ್ಪಡಿಸುತ್ತದೆ ಮತ್ತು ಪ್ರಮಾಣಪತ್ರವನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮಗೆ ಬರೆಯಿರಿ |
| 13:07 | Spoken Tutorial Project ಇದು NMEICT, Ministry of Human Resource Development
ಮತ್ತು NVLI, Ministry of Culture ಭಾರತ ಸರ್ಕಾರ- ಇವುಗಳಿಂದ ಪ್ರಾಯೋಜಿತವಾಗಿದೆ. |
| 13:19 | ಅನುವಾದ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ ಉಪ್ಪಿನ ಪಟ್ಟಣ. ಧನ್ಯವಾದಗಳು. |