BASH/C3/More-on-functions/Kannada

From Script | Spoken-Tutorial
Revision as of 14:13, 5 November 2015 by NaveenBhat (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 ಬ್ಯಾಶ್ ನಲ್ಲಿ More on functions ನ ಕುರಿತಾದ ಸ್ಪೊಕನ್-ಟ್ಯುಟೊರಿಯಲ್ ಗೆ ಮಿತ್ರರೇ ನಿಮಗೆಲ್ಲ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು
00:09
  • functionಗೆ ಆರ್ಗ್ಯುಮೆಂಟ್ ಅನ್ನು ಪಾಸ್ ಮಾಡುವುದು,
00:11
  • function ನ ಒಳಗೆ local variable ಅನ್ನು ಡಿಫೈನ್ ಮಾಡುವುದು ಮತ್ತು
00:16
  • function ನಲ್ಲಿ global variable ಅನ್ನು ಡಿಫೈನ್ ಮಾಡುವುದನ್ನು
00:19 ಕೆಲವು ಉದಾಹರಣೆಗಳೊಂದಿಗೆ ಕಲಿಯುತ್ತೇವೆ.
00:23 ಈ ಟ್ಯುಟೋರಿಯಲ್ ಅನ್ನು ತಿಳಿದುಕೊಳ್ಳಲು ಬ್ಯಾಶ್ ನಲ್ಲಿ ಶೆಲ್ ಸ್ಕ್ರಿಪ್ಟಿಂಗ್ ನ ಕುರಿತು ಕಲಿತಿರಬೇಕು.
00:28 ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ನಮ್ಮ ಜಾಲತಾಣವನ್ನು ಭೇಟಿಮಾಡಿ. http://www.spoken-tutorial.org
00:35 ಈ ಟ್ಯುಟೋರಿಯಲ್ ಗಾಗಿ ನಾನು
00:37
  • 'Ubuntu Linux 12.04 OS
00:42
  • GNU BASH ಆವೃತ್ತಿ 4.2 ಗಳನ್ನು ಉಪಯೋಗಿಸುತ್ತೇನೆ.
00:45 ತಿಳಿದಿರಲಿ GNU bash version 4 ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ.
00:52 ಮೊದಲು ನಾವು function ಗೆ argument ಅನ್ನು ಹೇಗೆ ಕಳುಹಿಸುವುದು ಮತ್ತು ಅದರ ಉಪಯೋಗವನ್ನು ಕಲಿಯೋಣ.
00:59 ನಾನು ಈಗ 'function_(ಅಂಡರ್ ಸ್ಕೋರ್) parameters.sh' ಎಂಬ ಫೈಲ್ ಅನ್ನು ತೆರೆಯುತ್ತೇನೆ.
01:05 ಇದು shebang line.
01:08 ನಮ್ಮfunction ನ ಹೆಸರು say_( ಅಂಡರ್ ಸ್ಕೋರ್)welcome.
01:13 ತೆರೆದ ಕರ್ಲಿ ಬ್ರ್ಯಾಕೆಟ್ ಫಂಕ್ಷನ್ ಡೆಫಿನೇಶನ್ ನ ಪ್ರಾರಂಭವಾಗಿದೆ.
01:18 '$1' (ಡಾಲರ್ ಒಂದು) ಮೊದಲ positional parameter.
01:22 '$2' (ಡಾಲರ್ ಎರಡು) ಎರಡನೆಯ positional parameter.
01:26 ಮುಚ್ಚಿದ ಕರ್ಲೀ ಬ್ರ್ಯಾಕೆಟ್ function definition ನ ಕೊನೆಯನ್ನು ಸೂಚಿಸುತ್ತದೆ.
01:30 ಇಲ್ಲಿ 'say_welcome' ಎಂಬ ಫಂಕ್ಷನ್ ಆರ್ಗ್ಯುಮೆಂಟ್ ಗಳೊಂದಿಗೆ ಕಾಲ್ ಮಾಡಲ್ಪಡುತ್ತದೆ.
01:35 ಇದರ ಸಿಂಟ್ಯಾಕ್ಸ್ - function ನ ಹೆಸರು ಅಂದರೆ "say_welcome" ನಂತರ ಡಬಲ್ ಕೋಟ್ಸ್ ನಲ್ಲಿ argument ಗಳು ಅಂದರೆ "Bash" ಮತ್ತು "learning".
01:49 ಇದೇ ರೀತಿಯಲ್ಲಿ ನಾನು ಇದೇ function ಅನ್ನು ಬೇರೆ ಆರ್ಗ್ಯುಮೆಂಟ್ ಗಳನ್ನು ಉಪಯೋಗಿಸಿ ಕಾಲ್ ಮಾಡುತ್ತೇನೆ. ಅದಕ್ಕಾಗಿ say_welcome ಸ್ಪೇಸ್ ಡಬಲ್ ಕೋಟ್ಸ್ ನಲ್ಲಿ functions in ಸ್ಪೇಸ್ ಡಬಲ್ ಕೋಟ್ಸ್ ನಲ್ಲಿ Bash.
02:05 ಫೈಲ್ ಅನ್ನು Save ಮಾಡಿ terminal ಗೆ ಹೋಗಿ.
02:08 chmod ಸ್ಪೇಸ್ ಪ್ಲಸ್ x ಸ್ಪೇಸ್ function ಅಂಡರ್ ಸ್ಕೋರ್ parameters ಡಾಟ್ sh ಎಂದು ಟೈಪ್ ಮಾಡಿ.
02:17 Enter ಅನ್ನು ಒತ್ತಿರಿ.
02:19 ಡಾಟ್ ಸ್ಲ್ಯಾಶ್ function ಅಂಡರ್ ಸ್ಕೋರ್ parameters ಡಾಟ್ sh ಎಂದು ಟೈಪ್ ಮಾಡಿ.
02:26 Enter ಅನ್ನು ಒತ್ತಿರಿ.
02:28 ನಾವು positional parameter ಗಳು function ಗೆ ಕಳುಹಿಸಿದ ಆರ್ಗ್ಯುಮೆಂಟ್ ಗಳಾಗಿ ಬದಲಾಗಿರುವುದನ್ನು ನೋಡುತ್ತೇವೆ.
02:36 ಡಾಲರ್ 1 ($1) ಇದು "Bash" ಎಂಬ ಸ್ಟ್ರಿಂಗ್ ಆಗಿಯೂ ಮತ್ತು ಡಾಲರ್ 2 ($2) ಇದು "learning" ಎಂದೂ ಬದಲಾಗಿದೆ.
02:45 ಮತ್ತೆ ಡಾಲರ್ 1 ($1) ಇದು "functions in" ಎಂದೂ ಮತ್ತು ಡಾಲರ್ 2 ($2) ಇದು "Bash" ಎಂದೂ ಬದಲಾಗಿದೆ.
02:55 ಬ್ಯಾಶ್ ನಲ್ಲಿ ವೇರಿಯೇಬಲ್ ಗಳನ್ನು local variable ಮತ್ತು global variable ಗಳಾಗಿ ಡಿಕ್ಲೇರ್ ಮಾಡಬಹುದು.
03:01 Local variable:
03:03
  • ಇದರ ಬೆಲೆಯು ಅದು ಡಿಫೈನ್ ಮಾಡಲ್ಪಟ್ಟ ಫಂಕ್ಷನ್ ನಲ್ಲಿ ಮಾತ್ರ ಮಾನ್ಯವಾಗಿರುತ್ತದೆ.
03:10
  • Local variable ಗಳನ್ನು local ಎಂಬ ಕೀವರ್ಡ್ ಅನ್ನು ಉಪಯೋಗಿಸಿ ಡಿಕ್ಲೇರ್ ಮಾಡಲಾಗುತ್ತದೆ.
03:15 Global variable:
03:17 global variable ನ ಬೆಲೆಯನ್ನು ಇಡೀ ಬ್ಯಾಶ್ ಸ್ಕ್ರಿಪ್ಟ್ ನಲ್ಲಿ ಆಕ್ಸೆಸ್ಸ್ ಮಾಡಬಹುದು.
03:24 ಈಗ ನಾವು ಒಂದು ಫಂಕ್ಷನ್ ನಲ್ಲಿ ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡುವ ಎರಡು ವಿಧಾನಗಳನ್ನು ಕಲಿಯೋಣ.
03:29 ನಾನು ಈಗ 'function_(ಅಂಡರ್ ಸ್ಕೋರ್)local.sh' ಹೆಸರಿನ ಫೈಲ್ ಅನ್ನು ತೆರೆಯುತ್ತೇನೆ.
03:35 ಇದು shebang line.
03:39 Function ನ ಹೆಸರು say_(ಅಂಡರ್ ಸ್ಕೋರ್) hello.
03:43 ಇಲ್ಲಿ first_name ಎಂಬ ವೇರಿಯೇಬಲ್ local ಕೀವರ್ಡ್ ನ ಜೊತೆಗೆ ಡಿಕ್ಲೇರ್ ಆಗಿದೆ.
03:49 ಅಂದರೆ ಇದರ ಬೆಲೆಯು say_hello ಎಂಬ ಫಂಕ್ಷನ್ ನಲ್ಲಿ ಮಾತ್ರ ಮಾನ್ಯವಾಗಿದೆ.
03:55 ಒಂದು ವೇರಿಯೇಬಲ್ ಯಾವುದೇ ಕೀವರ್ಡ್ ನ ಜೊತೆಗೆ ಡಿಕ್ಲೇರ್ ಆಗಿಲ್ಲದಿದ್ದರೆ ಅದು global variable ಎಂದು ಪರಿಗಣಿಸಲ್ಪಡುತ್ತದೆ.
04:01 ಹಾಗಾಗಿ last_name ಎಂಬ ವೇರಿಯೇಬಲ್ಅನ್ನು ಇಡೀ ಸ್ಕ್ರಿಪ್ಟ್ ನಲ್ಲಿ ಎಲ್ಲಿ ಬೇಕಾದರೂ ಆಕ್ಸೆಸ್ ಮಾಡಬಹುದು.
04:08 echo ಸಾಲು ವೇರಿಯೇಬಲ್ ಗಳ ಬೆಲೆಯನ್ನು ಡಿಸ್ಪ್ಲೇ ಮಾಡುತ್ತದೆ. ಅವು
04:12 first_name,
04:14 middle_name
04:15 ಮತ್ತು last_name.
04:17 ಇದರ ನಂತರ ನಾವು function ಅನ್ನು ಮುಗಿಸುತ್ತೇವೆ.
04:21 ಈಗ ಇಲ್ಲಿ middle_name ಎಂಬ ವೇರಿಯೇಬಲ್ ಯಾವುದೇ ಕೀವರ್ಡ್ ಇಲ್ಲದೇ ಡಿಕ್ಲೇರ್ ಆಗಿದೆ. ಹಾಗಾಗಿ ಇದರ ಬೆಲೆಯು ಇಡಿ ಸ್ಕ್ರಿಪ್ಟ್ ಗೆ global ಆಗಿದೆ.
04:30 ನಾವು ಇಲ್ಲಿ ಇನ್ನೊಮ್ಮೆ ಫಂಕ್ಷನ್ ಅನ್ನು ಕಾಲ್ ಮಾಡುತ್ತೇವೆ.
04:34 ನಾವು ಈ ಫಂಕ್ಷನ್ ಗೆ ಎರಡು ಆರ್ಗ್ಯುಮೆಂಟ್ ಗಳನ್ನು ಅಂದರೆ - “Pratik” ಮತ್ತು “Patil” ಕಳುಹಿಸುತ್ತೇವೆ.
04:41 echo ಹೇಳಿಕೆಯು ವೇರಿಯೇಬಲ್ ಗಳ ಬೆಲೆಯನ್ನು ಡಿಸ್ಪ್ಲೇ ಮಾಡುತ್ತದೆ.ಅಂದರೆ-
04:45 $first_name,
04:46 $middle_name ಮತ್ತು $last_name.
04:51 ನೆನಪಿಡಿ first_name ಇದು ಒಂದು local variable.
04:57 ಫೈಲ್ ಅನ್ನುSave ಮಾಡಿ ಮತ್ತು terminal ಗೆ ಹೋಗಿ.
05:00 'chmod ಸ್ಪೇಸ್ ಪ್ಲಸ್ x ಸ್ಪೇಸ್ function ಅಂಡರ್ ಸ್ಕೋರ್ local ಡಾಟ್sh ಎಂದು ಟೈಪ್ ಮಾಡಿ.
05:09 Enter ಅನ್ನು ಒತ್ತಿರಿ.
05:11 ಡಾಟ್ ಸ್ಲ್ಯಾಶ್ function ಅಂಡರ್ ಸ್ಕೋರ್ local ಡಾಟ್ sh ಎಂದು ಟೈಪ್ ಮಾಡಿ.
05:16 Enter ಅನ್ನು ಒತ್ತಿರಿ.
05:18 ಫಲಿತದ ಮೊದಲ ಸಾಲಿನಲ್ಲಿ "Hello Pratik K Patil" ಎಂಬ ಸಂದೇಶವು ಡಿಸ್ಪ್ಲೇ ಆಗಿರುತ್ತದೆ.
05:25 ಇಲ್ಲಿ first_name ಎಂಬ ವೇರಿಯೇಬಲ್ "Pratik" ಎಂಬ ಬೆಲೆಯನ್ನು ಹೊಂದಿದೆ ಮತ್ತು ಇದು local .
05:31 ಅಂದರೆ ಅದರ ಬೆಲೆಯು function ಸೀಮಿತವಾಗಿರುತ್ತದೆ.
05:35 ಈಗ ನಾವು ಫಂಕ್ಷನ್ ನ ಹೊರಗೆ local variable ಹೇಗೆ ವರ್ತಿಸುತ್ತದೆ ಎಂದು ನೋಡೋಣ.
05:41 ಇಲ್ಲಿ first_name ನಲ್ಲಿ ಏನೂ ಡಿಸ್ಪ್ಲೇ ಆಗಿಲ್ಲ.
05:44 ಏಕೆಂದರೆ first_name ನ ಬೆಲೆಯು ಆ ಫಂಕ್ಷನ್ ಗೆ local ಆಗಿದೆ. ಮತ್ತು ಇದರ ಬೆಲೆಯು ಫಂಕ್ಷನ್ ನ ಹೊರಗೆ ಮಾನ್ಯವಾಗಿರುವುದಿಲ್ಲ.
05:53 middle_name ಮತ್ತು last_name ಗಳ ಬೆಲೆಗಳು ಅವು global variable ಗಳಾಗಿರುವುದರಿಂದ ಡಿಸ್ಪ್ಲೇ ಆಗುತ್ತದೆ.
05:59 ವ್ಯತ್ಯಾಸ ವು ಅರ್ಥವಾಗಿದೆಯೆಂದು ಅಂದು ಕೊಳ್ಳುತ್ತೇನೆ.
06:02 ಸಾರಾಂಶವನ್ನು ನೋಡೋಣ.
06:04 ಈ ಟ್ಯುಟೋರಿಯಲ್ ನಲ್ಲಿ ನಾವು,
06:07
  • functionಗೆ argument ಗಳನ್ನು ಕಳುಹಿಸುವುದು;
  • function ನಲ್ಲಿ local variable ಅನ್ನು ಡಿಕ್ಲೇರ್ ಮಾಡುವುದು,
06:14
  • function ನಲ್ಲಿ global variable ಅನ್ನು ಡಿಕ್ಲೇರ್ ಮಾಡುವುದನ್ನು ಉದಾಹರಣೆ ಗಳೊಂದಿಗೆ ಕಲಿತಿದ್ದೇವೆ.
06:20 ಸ್ವಂತ ಅಭ್ಯಾಸಕ್ಕಾಗಿ,
06:22 ಈ ಕೆಳಗಿನ ಪ್ರೋಗ್ರಾಂ ಅನ್ನು ಬರೆಯಿರಿ..
06:23 ಎರಡು argument ಗಳನ್ನು ಪಡೆಯುವ function ಅನ್ನು ಹೊಂದಿದ್ದು ಅದು ಆ ಎರಡು ಆರ್ಗ್ಯುಮೆಂಟ್ ಗಳನ್ನು ಗುಣಿಸಬೇಕು.
06:31 (1, 2), (2, 3) ಮತ್ತು(3, 4) ಆರ್ಗ್ಯುಮೆಂಟ್ ಗಳೊಂದಿಗೆ ಮೂರು function call ಗಳನ್ನು ಮಾಡಿ.
06:39 ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ
06:43 ಅದು Spoken Tutorial projectನ ಕುರಿತು ತಿಳಿಸಿಕೊಡುತ್ತದೆ. ನಿಮ್ಮಲ್ಲಿ ಒಳ್ಳೆಯ ಬೇಂಡ್-ವಿಡ್ತ್ ಇರದಿದ್ದರೆ ಡೌನ್ಲೋಡ್ ಮಾಡಿಕೊಂಡೂ ನೋಡಬಹುದು.
06:51 The Spoken Tutorial Project Team ಇದು
  • spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ.
  • online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ
07:00 ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆಬರೆಯಿರಿ
07:07 Spoken Tutorial Projectಇದು Talk to a Teacher project ಯೋಜನೆಯ ಭಾಗವಾಗಿದೆ.
07:11 ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ. ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. http://spoken tutorial.org\NMEICT-Intro
07:26 ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ.
07:31 ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ. ಧನ್ಯವಾದಗಳು.

Contributors and Content Editors

NaveenBhat, PoojaMoolya, Pratik kamble