BASH/C3/More-on-functions/Kannada
From Script | Spoken-Tutorial
Time | Narration |
00:01 | ಬ್ಯಾಶ್ ನಲ್ಲಿ More on functions ನ ಕುರಿತಾದ ಸ್ಪೊಕನ್-ಟ್ಯುಟೊರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು |
00:09 | functionಗೆ ಆರ್ಗ್ಯುಮೆಂಟ್ ಅನ್ನು ಪಾಸ್ ಮಾಡುವುದು, |
00:11 | function ನ ಒಳಗೆ local variable ಅನ್ನು ಡಿಫೈನ್ ಮಾಡುವುದು ಮತ್ತು |
00:16 |
function ನಲ್ಲಿ global variable ಅನ್ನು ಡಿಫೈನ್ ಮಾಡುವುದನ್ನು |
00:19 | ಕೆಲವು ಉದಾಹರಣೆಗಳೊಂದಿಗೆ ಕಲಿಯುತ್ತೇವೆ. |
00:23 | ಈ ಟ್ಯುಟೋರಿಯಲ್ ಅನ್ನು ತಿಳಿದುಕೊಳ್ಳಲು ಬ್ಯಾಶ್ ನಲ್ಲಿ ಶೆಲ್ ಸ್ಕ್ರಿಪ್ಟಿಂಗ್ ನ ಕುರಿತು ಕಲಿತಿರಬೇಕು. |
00:28 | ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ನಮ್ಮ ಜಾಲತಾಣವನ್ನು ಭೇಟಿಮಾಡಿ. www.spoken-tutorial.org |
00:35 | ಈ ಟ್ಯುಟೋರಿಯಲ್ ಗಾಗಿ ನಾನು |
00:37 | 'Ubuntu Linux 12.04 OS |
00:42 | GNU BASH' ಆವೃತ್ತಿ 4.2 ಗಳನ್ನು ಉಪಯೋಗಿಸುತ್ತೇನೆ. |
00:45 | ತಿಳಿದಿರಲಿ GNU bash version 4 ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ. |
00:52 | ಮೊದಲು ನಾವು function ಗೆ argument ಅನ್ನು ಹೇಗೆ ಕಳುಹಿಸುವುದು ಮತ್ತು ಅದರ ಉಪಯೋಗವನ್ನು ಕಲಿಯೋಣ. |
00:59 | ನಾನು ಈಗ 'function_(ಅಂಡರ್ ಸ್ಕೋರ್) parameters.sh' ಎಂಬ ಫೈಲ್ ಅನ್ನು ತೆರೆಯುತ್ತೇನೆ. |
01:05 | ಇದು shebang line. |
01:08 | ನಮ್ಮfunction ನ ಹೆಸರು say_( ಅಂಡರ್ ಸ್ಕೋರ್)welcome. |
01:13 | ತೆರೆದ ಕರ್ಲಿ ಬ್ರ್ಯಾಕೆಟ್ ಫಂಕ್ಷನ್ ಡೆಫಿನೇಶನ್ ನ ಪ್ರಾರಂಭವಾಗಿದೆ. |
01:18 | '$1' (ಡಾಲರ್ ಒಂದು) ಮೊದಲ positional parameter. |
01:22 | '$2' (ಡಾಲರ್ ಎರಡು) ಎರಡನೆಯ positional parameter. |
01:26 | ಮುಚ್ಚಿದ ಕರ್ಲೀ ಬ್ರ್ಯಾಕೆಟ್ function definition ನ ಕೊನೆಯನ್ನು ಸೂಚಿಸುತ್ತದೆ. |
01:30 | ಇಲ್ಲಿ 'say_welcome' ಎಂಬ ಫಂಕ್ಷನ್ ಆರ್ಗ್ಯುಮೆಂಟ್ ಗಳೊಂದಿಗೆ ಕಾಲ್ ಮಾಡಲ್ಪಡುತ್ತದೆ. |
01:35 | ಇದರ ಸಿಂಟ್ಯಾಕ್ಸ್ - function ನ ಹೆಸರು ಅಂದರೆ "say_welcome" ನಂತರ ಡಬಲ್ ಕೋಟ್ಸ್ ನಲ್ಲಿ argument ಗಳು ಅಂದರೆ "Bash" ಮತ್ತು "learning". |
01:49 | ಇದೇ ರೀತಿಯಲ್ಲಿ ನಾನು ಇದೇ function ಅನ್ನು ಬೇರೆ ಆರ್ಗ್ಯುಮೆಂಟ್ ಗಳನ್ನು ಉಪಯೋಗಿಸಿ ಕಾಲ್ ಮಾಡುತ್ತೇನೆ. ಅದಕ್ಕಾಗಿ say_welcome ಸ್ಪೇಸ್ ಡಬಲ್ ಕೋಟ್ಸ್ ನಲ್ಲಿ functions in ಸ್ಪೇಸ್ ಡಬಲ್ ಕೋಟ್ಸ್ ನಲ್ಲಿ Bash. |
02:05 | ಫೈಲ್ ಅನ್ನು Save ಮಾಡಿ terminal ಗೆ ಹೋಗಿ. |
02:08 | chmod ಸ್ಪೇಸ್ ಪ್ಲಸ್ x ಸ್ಪೇಸ್ function ಅಂಡರ್ ಸ್ಕೋರ್ parameters ಡಾಟ್ sh ಎಂದು ಟೈಪ್ ಮಾಡಿ. |
02:17 | Enter ಅನ್ನು ಒತ್ತಿರಿ. |
02:19 | ಡಾಟ್ ಸ್ಲ್ಯಾಶ್ function ಅಂಡರ್ ಸ್ಕೋರ್ parameters ಡಾಟ್ sh ಎಂದು ಟೈಪ್ ಮಾಡಿ. |
02:26 | Enter ಅನ್ನು ಒತ್ತಿರಿ. |
02:28 | ನಾವು positional parameter ಗಳು function ಗೆ ಕಳುಹಿಸಿದ ಆರ್ಗ್ಯುಮೆಂಟ್ ಗಳಾಗಿ ಬದಲಾಗಿರುವುದನ್ನು ನೋಡುತ್ತೇವೆ. |
02:36 | ಡಾಲರ್ 1 ($1) ಇದು "Bash" ಎಂಬ ಸ್ಟ್ರಿಂಗ್ ಆಗಿಯೂ ಮತ್ತು ಡಾಲರ್ 2 ($2) ಇದು "learning" ಎಂದೂ ಬದಲಾಗಿದೆ. |
02:45 | ಮತ್ತೆ ಡಾಲರ್ 1 ($1) ಇದು "functions in" ಎಂದೂ ಮತ್ತು ಡಾಲರ್ 2 ($2) ಇದು "Bash" ಎಂದೂ ಬದಲಾಗಿದೆ. |
02:55 | ಬ್ಯಾಶ್ ನಲ್ಲಿ ವೇರಿಯೇಬಲ್ ಗಳನ್ನು local variable ಮತ್ತು global variable ಗಳಾಗಿ ಡಿಕ್ಲೇರ್ ಮಾಡಬಹುದು. |
03:01 | Local variable: |
03:03 | ಇದರ ಬೆಲೆಯು ಅದು ಡಿಫೈನ್ ಮಾಡಲ್ಪಟ್ಟ ಫಂಕ್ಷನ್ ನಲ್ಲಿ ಮಾತ್ರ ಮಾನ್ಯವಾಗಿರುತ್ತದೆ. |
03:10 | Local variable ಗಳನ್ನು local ಎಂಬ ಕೀವರ್ಡ್ ಅನ್ನು ಉಪಯೋಗಿಸಿ ಡಿಕ್ಲೇರ್ ಮಾಡಲಾಗುತ್ತದೆ. |
03:15 | Global variable: |
03:17 | global variable ನ ಬೆಲೆಯನ್ನು ಇಡೀ ಬ್ಯಾಶ್ ಸ್ಕ್ರಿಪ್ಟ್ ನಲ್ಲಿ ಆಕ್ಸೆಸ್ಸ್ ಮಾಡಬಹುದು. |
03:24 | ಈಗ ನಾವು ಒಂದು ಫಂಕ್ಷನ್ ನಲ್ಲಿ ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡುವ ಎರಡು ವಿಧಾನಗಳನ್ನು ಕಲಿಯೋಣ. |
03:29 | ನಾನು ಈಗ 'function_(ಅಂಡರ್ ಸ್ಕೋರ್)local.sh' ಹೆಸರಿನ ಫೈಲ್ ಅನ್ನು ತೆರೆಯುತ್ತೇನೆ. |
03:35 | ಇದು shebang line. |
03:39 | Function ನ ಹೆಸರು say_(ಅಂಡರ್ ಸ್ಕೋರ್) hello. |
03:43 | ಇಲ್ಲಿ first_name ಎಂಬ ವೇರಿಯೇಬಲ್ local ಕೀವರ್ಡ್ ನ ಜೊತೆಗೆ ಡಿಕ್ಲೇರ್ ಆಗಿದೆ. |
03:49 | ಅಂದರೆ ಇದರ ಬೆಲೆಯು say_hello ಎಂಬ ಫಂಕ್ಷನ್ ನಲ್ಲಿ ಮಾತ್ರ ಮಾನ್ಯವಾಗಿದೆ. |
03:55 | ಒಂದು ವೇರಿಯೇಬಲ್ ಯಾವುದೇ ಕೀವರ್ಡ್ ನ ಜೊತೆಗೆ ಡಿಕ್ಲೇರ್ ಆಗಿಲ್ಲದಿದ್ದರೆ ಅದು global variable ಎಂದು ಪರಿಗಣಿಸಲ್ಪಡುತ್ತದೆ. |
04:01 | ಹಾಗಾಗಿ last_name ಎಂಬ ವೇರಿಯೇಬಲ್ಅನ್ನು ಇಡೀ ಸ್ಕ್ರಿಪ್ಟ್ ನಲ್ಲಿ ಎಲ್ಲಿ ಬೇಕಾದರೂ ಆಕ್ಸೆಸ್ ಮಾಡಬಹುದು. |
04:08 | ಈecho ಸಾಲು ವೇರಿಯೇಬಲ್ ಗಳ ಬೆಲೆಯನ್ನು ಡಿಸ್ಪ್ಲೇ ಮಾಡುತ್ತದೆ. ಅವು |
04:12 | first_name, |
04:14 | middle_name , ಮತ್ತು last_name. |
04:17 | ಇದರ ನಂತರ ನಾವು function ಅನ್ನು ಮುಗಿಸುತ್ತೇವೆ. |
04:21 | ಈಗ ಇಲ್ಲಿ middle_name ಎಂಬ ವೇರಿಯೇಬಲ್ ಯಾವುದೇ ಕೀವರ್ಡ್ ಇಲ್ಲದೇ ಡಿಕ್ಲೇರ್ ಆಗಿದೆ. ಹಾಗಾಗಿ ಇದರ ಬೆಲೆಯು ಇಡಿ ಸ್ಕ್ರಿಪ್ಟ್ ಗೆ global ಆಗಿದೆ. |
04:30 | ನಾವು ಇಲ್ಲಿ ಇನ್ನೊಮ್ಮೆ ಫಂಕ್ಷನ್ ಅನ್ನು ಕಾಲ್ ಮಾಡುತ್ತೇವೆ. |
04:34 | ನಾವು ಈ ಫಂಕ್ಷನ್ ಗೆ ಎರಡು ಆರ್ಗ್ಯುಮೆಂಟ್ ಗಳನ್ನು ಅಂದರೆ - “Pratik” ಮತ್ತು “Patil” ಕಳುಹಿಸುತ್ತೇವೆ. |
04:41 | ಈecho ಹೇಳಿಕೆಯು ವೇರಿಯೇಬಲ್ ಗಳ ಬೆಲೆಯನ್ನು ಡಿಸ್ಪ್ಲೇ ಮಾಡುತ್ತದೆ.ಅಂದರೆ- |
04:45 | $first_name, $middle_name ಮತ್ತು $last_name. |
04:51 | ನೆನಪಿಡಿ first_name ಇದು ಒಂದು local variable. |
04:57 | ಫೈಲ್ ಅನ್ನುSave ಮಾಡಿ ಮತ್ತು terminal ಗೆ ಹೋಗಿ. |
05:00 | 'chmod ಸ್ಪೇಸ್ ಪ್ಲಸ್ x ಸ್ಪೇಸ್ function ಅಂಡರ್ ಸ್ಕೋರ್ local ಡಾಟ್sh ಎಂದು ಟೈಪ್ ಮಾಡಿ. |
05:09 | Enter ಅನ್ನು ಒತ್ತಿರಿ. |
05:11 | ಡಾಟ್ ಸ್ಲ್ಯಾಶ್ function ಅಂಡರ್ ಸ್ಕೋರ್ local ಡಾಟ್ sh ಎಂದು ಟೈಪ್ ಮಾಡಿ. |
05:16 | Enter ಅನ್ನು ಒತ್ತಿರಿ. |
05:18 | ಫಲಿತದ ಮೊದಲ ಸಾಲಿನಲ್ಲಿ "Hello Pratik K Patil" ಎಂಬ ಸಂದೇಶವು ಡಿಸ್ಪ್ಲೇ ಆಗಿರುತ್ತದೆ. |
05:25 | ಇಲ್ಲಿ first_name ಎಂಬ ವೇರಿಯೇಬಲ್ "Pratik" ಎಂಬ ಬೆಲೆಯನ್ನು ಹೊಂದಿದೆ ಮತ್ತು ಇದು local . |
05:31 | ಅಂದರೆ ಅದರ ಬೆಲೆಯು function ಗೆ ಸೀಮಿತವಾಗಿರುತ್ತದೆ. |
05:35 | ಈಗ ನಾವು ಫಂಕ್ಷನ್ ನ ಹೊರಗೆ local variable ಹೇಗೆ ವರ್ತಿಸುತ್ತದೆ ಎಂದು ನೋಡೋಣ. |
05:41 | ಇಲ್ಲಿ first_name ನಲ್ಲಿ ಏನೂ ಡಿಸ್ಪ್ಲೇ ಆಗಿಲ್ಲ. |
05:44 | ಏಕೆಂದರೆ first_name ನ ಬೆಲೆಯು ಆ ಫಂಕ್ಷನ್ ಗೆ local ಆಗಿದೆ. ಮತ್ತು ಇದರ ಬೆಲೆಯು ಫಂಕ್ಷನ್ ನ ಹೊರಗೆ ಮಾನ್ಯವಾಗಿರುವುದಿಲ್ಲ. |
05:53 | middle_name ಮತ್ತು last_name ಗಳ ಬೆಲೆಗಳು ಅವು global variable ಗಳಾಗಿರುವುದರಿಂದ ಡಿಸ್ಪ್ಲೇ ಆಗುತ್ತದೆ. |
05:59 | ವ್ಯತ್ಯಾಸ ವು ಅರ್ಥವಾಗಿದೆಯೆಂದು ಅಂದು ಕೊಳ್ಳುತ್ತೇನೆ. |
06:02 | ಸಾರಾಂಶವನ್ನು ನೋಡೋಣ. |
06:04 | ಈ ಟ್ಯುಟೋರಿಯಲ್ ನಲ್ಲಿ ನಾವು, |
06:07 | functionಗೆ argument ಗಳನ್ನು ಕಳುಹಿಸುವುದು;
function ನಲ್ಲಿ local variable ಅನ್ನು ಡಿಕ್ಲೇರ್ ಮಾಡುವುದು, |
06:14 | function ನಲ್ಲಿ global variable ಅನ್ನು ಡಿಕ್ಲೇರ್ ಮಾಡುವುದನ್ನು ಉದಾಹರಣೆ ಗಳೊಂದಿಗೆ ಕಲಿತಿದ್ದೇವೆ. |
06:20 | ಸ್ವಂತ ಅಭ್ಯಾಸಕ್ಕಾಗಿ, |
06:22 | ಈ ಕೆಳಗಿನ ಪ್ರೋಗ್ರಾಂ ಅನ್ನು ಬರೆಯಿರಿ. ಎರಡು argument ಗಳನ್ನು ಪಡೆಯುವ function ಅನ್ನು ಹೊಂದಿದ್ದು ಅದು ಆ ಎರಡು ಆರ್ಗ್ಯುಮೆಂಟ್ ಗಳನ್ನು ಗುಣಿಸಬೇಕು. |
06:31 | (1, 2), (2, 3) ಮತ್ತು(3, 4) ಆರ್ಗ್ಯುಮೆಂಟ್ ಗಳೊಂದಿಗೆ ಮೂರು function call ಗಳನ್ನು ಮಾಡಿ. |
06:39 | ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ |
06:43 | ಅದು Spoken Tutorial projectನ ಕುರಿತು ತಿಳಿಸಿಕೊಡುತ್ತದೆ. ನಿಮ್ಮಲ್ಲಿ ಒಳ್ಳೆಯ ಬೇಂಡ್-ವಿಡ್ತ್ ಇರದಿದ್ದರೆ ಡೌನ್ಲೋಡ್ ಮಾಡಿಕೊಂಡೂ ನೋಡಬಹುದು. |
06:51 | The Spoken Tutorial Project Team ಇದು spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ.
online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ |
07:00 | ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆಬರೆಯಿರಿ |
07:07 | Spoken Tutorial Projectಇದು Talk to a Teacher project ಯೋಜನೆಯ ಭಾಗವಾಗಿದೆ. |
07:11 | ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ. ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. http://spoken tutorial.org\NMEICT-Intro |
07:26 | ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ. |
07:31 | ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ. ಧನ್ಯವಾದಗಳು. |