Synfig/C3/Logo-animation/Kannada
From Script | Spoken-Tutorial
|
|
00:01 | Synfig ಅನ್ನು ಬಳಸಿ , “Logo animation” ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು, ಒಬ್ಜೆಕ್ಟ್ ನ ಪ್ರತಿಬಿಂಬ(ಮಿರರ್ ಒಬ್ಜೆಕ್ಟ್) ರಚಿಸುವುದು, |
00:10 | ಲೋಗೋ ವನ್ನು ಆನಿಮೇಟ್ ಮಾಡುವುದು, |
00:12 | Spherize effect(ಸ್ಪಿಯರೈಝ್ ಎಫೆಕ್ಟ್) ಅನ್ನು ರಚಿಸುವುದು ಇವುಗಳ ಕುರಿತು ಕಲಿಯುತ್ತೇವೆ. |
00:15 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು, :
Ubuntu Linux 14.04 ಒ.ಎಸ್. , Synfig ನ 1.0.2 ಆವೃತ್ತಿ – ಇವುಗಳನ್ನು ಬಳಸುತ್ತಿದ್ದೇನೆ. |
00:26 | ಈಗ Synfig ಅನ್ನು ತೆರೆಯೋಣ. |
00:28 | canvas ಗೆ ಹೋಗಿ, Properties ಮೇಲೆ ಕ್ಲಿಕ್ ಮಾಡಿ. |
00:31 | Image ನಡಿಯಲ್ಲಿ, Width ಅನ್ನು 1920 ಎಂದೂ, ಮತ್ತು Height ಅನ್ನು 1080 ಎಂದೂ ಬದಲಿಸಿ. |
00:40 | Other ಅನ್ನು ಕ್ಲಿಕ್ ಮಾಡಿ, Locks and Links ನಡಿಯಲ್ಲಿ ಎಲ್ಲಾ ಚೆಕ್ ಬಾಕ್ಸ್ ಗಳನ್ನು ಟಿಕ್ ಮಾಡಿ. |
00:47 | Apply ಅನ್ನು ಒತ್ತಿ, ನಂತರ OK ಯನ್ನು ಕ್ಲಿಕ್ ಮಾಡಿ. |
00:49 | ಈಗ ಮೊದಲು ಬ್ಯಾಕ್ ಗ್ರೌಂಡ್ ಅನ್ನು ರಚಿಸೋಣ. |
00:52 | Spline tool ಅನ್ನು ಆಯ್ಕೆ ಮಾಡಿ. |
00:55 | Tool options ನಡಿಯಲ್ಲಿ, Layer Type, Create a region layer ಆಪ್ಷನ್ ಆಯ್ಕೆಯಾಗಿರಬೇಕು. |
01:01 | ಇಲ್ಲಿ ತೋರಿಸಿದಂತೆ, ಅರ್ಧ ಕ್ಯಾನ್ವಾಸ್ ಅನ್ನು ಮುಚ್ಚುವಂತೆ, ಒಂದು ಲಂಬಕೋನ ತ್ರಿಕೋನವನ್ನು ಚಿತ್ರಿಸಿ. |
01:07 | ಮೊದಲನೆಯ node ಅನ್ನು ಹಿಡಿದಿಟ್ಟುಕೊಂಡು, ರೈಟ್ ಕ್ಲಿಕ್ ಮಾಡಿ, context menu ತೆರೆದುಕೊಳ್ಳುತ್ತದೆ. |
01:12 | ಮತ್ತೊಮ್ಮೆ ರೈಟ್-ಕ್ಲಿಕ್ ಮಾಡಿ ಮತ್ತು Loop Spline ಅನ್ನು ಆಯ್ಕೆ ಮಾಡಿ. ಈಗ ಲೂಪ್ ಪೂರ್ಣಗೊಂಡಿದೆ. |
01:20 | ನಂತರ, Transform tool ಅನ್ನು ಆಯ್ಕೆ ಮಾಡಿ. |
01:23 | default ಕಲರ್(ಬಣ್ಣವನ್ನು) ತುಂಬಿಸಲ್ಪಟ್ಟ, ತ್ರಿಕೋನವನ್ನು ನಾವು ಪಡೆದಿದ್ದೇವೆ. |
01:27 | ಈಗ ನಾವು Ctrl + S ಕೀಲಿಗಳನ್ನು ಒತ್ತಿ, ಫೈಲ್ ಅನ್ನುsave ಮಾಡೋಣ. |
01:32 | ನಾನು ಫೈಲ್ ನ ಡಿಫಾಲ್ಟ್ ಹೆಸರನ್ನು Logo-animation ಎಂದು ಬದಲಿಸುವೆನು. |
01:37 | ಮತ್ತು ಫೈಲ್ ಅನ್ನು Desktop ನಲ್ಲಿ ಸೇವ್ ಮಾಡುವೆನು. |
01:40 | ನೀವು ನಿಮಗೆ ಬೇಕಾದ ಯಾವ ಹೆಸರನ್ನಾದರೂ ಕೊಡಬಹುದು. |
01:44 | ಈಗ, ಈ ತ್ರಿಕೋನದ ಬಣ್ಣವನ್ನು ಬದಲಿಸೋಣ. |
01:47 | ಇದನ್ನು ಮಾಡಲು, Parameters panel ನಲ್ಲಿ, Color parameter ಅನ್ನು ಕ್ಲಿಕ್ ಮಾಡಿ. |
01:52 | ಈಗ, ಹಸಿರು ಬಣ್ಣಕ್ಕೆ ಬದಲಿಸಿ ಮತ್ತು layer ನ ಹೆಸರನ್ನು, Triangle-1 ಎಂದು ಬದಲಿಸಿ. |
02:01 | ಲೇಯರ್ ಅನ್ನು ಡುಪ್ಲಿಕೇಟ್(ನಕಲು) ಮಾಡಿ, Triangle-2 ಎಂದು ಹೆಸರಿಸಿ. |
02:06 | ಬಣ್ಣವನ್ನು ಹಳದಿಗೆ ಬದಲಿಸಿ. |
02:10 | ಈಗ Tool box ಗೆ ಹೋಗಿ, Mirror tool ಅನ್ನು ಆಯ್ಕೆ ಮಾಡಿ. |
02:14 | ಮೌಸ್ ಅನ್ನು ಕ್ಲಿಕ್ ಮಾಡಿ ಡ್ರ್ಯಾಗ್ ಮಾಡುವ ಮೂಲಕ Triangle-2 ದ ಎಲ್ಲಾ ನೋಡ್ಸ್ ಗಳನ್ನು ಆಯ್ಕೆ ಮಾಡಿ. |
02:19 | Tool options ನಲ್ಲಿ, Vertical axis ಆಯ್ಕೆಯಾಗಿರುವುದನ್ನು ಗಮನಿಸಿ. |
02:25 | ಈಗ ತ್ರಿಕೋನದ ಮೇಲಿನ ಎಡ ನೋಡ್ ಅನ್ನು ಕ್ಲಿಕ್ ಮಾಡಿ. |
02:29 | ಇಲ್ಲಿ ತೋರಿಸಿದಂತೆ, ಇದನ್ನು ಲಂಬವಾಗಿ ತಿರುಗಿಸಿ. |
02:33 | ಮತ್ತೊಮ್ಮೆ Tool options ನಲ್ಲಿ axis ಅನ್ನು Horizontal ಗೆ ಬದಲಿಸಿ. |
02:38 | ಈಗ, ತ್ರಿಕೋನದ ಕೆಳ ಎಡ ನೋಡ್ ಅನ್ನು ಕ್ಲಿಕ್ ಮಾಡಿ. |
02:41 | ಅದನ್ನು ಇಲ್ಲಿ ತೋರಿಸಿದಂತೆ ಅಡ್ಡವಾಗಿ ತಿರುಗಿಸಿ. |
02:46 | Ctrl+S ಕೀಲಿಗಳನ್ನು ಬಳಸಿ, ಫೈಲ್ ಅನ್ನು ಸೇವ್ ಮಾಡಿ. |
02:50 | ನಾನು ಮುಂದೆ ಇದನ್ನು ಹೇಳುವುದಿಲ್ಲ, ಆದರೆ ದಯವಿಟ್ಟು ನಿರ್ದಿಷ್ಟಾವಧಿಗೊಮ್ಮೆ ಸೇವ್ ಮಾಡಿಕೊಳ್ಳಿ. |
02:57 | ಈಗ ಈ ಎರಡು ತ್ರಿಕೋನಗಳನ್ನು ಆನಿಮೇಟ್ ಮಾಡೋಣ. |
03:00 | Transform tool ಅನ್ನು ಆಯ್ಕೆ ಮಾಡಿ. |
03:02 | Turn on animate editing mode ಐಕಾನ್ ಅನ್ನು ಕ್ಲಿಕ್ ಮಾಡಿ. |
03:06 | current frame ಬಾಕ್ಸ್ ನಲ್ಲಿ 20 ಎಂದು ಟೈಪ್ ಮಾಡಿ, Enter ಅನ್ನು ಒತ್ತಿ. |
03:11 | Keyframes panel ನಲ್ಲಿ ಒಂದು keyframe ಅನ್ನು ಸೇರಿಸಿ. |
03:15 | ಸೊನ್ನೆ ಫ್ರೇಮ್ ಗೆ ಹಿಂದಿರುಗಿ. |
03:17 | ಈಗ ಇಲ್ಲಿ ತೋರಿಸಿರುವಂತೆ, ಹಳದಿ ತ್ರಿಕೋನದ ಹಸಿರು ಚುಕ್ಕಿಯನ್ನು ಕ್ಲಿಕ್ ಮಾಡಿ, ಅದನ್ನು ಕ್ಯಾನ್ವಾಸ್ ನ ಹೊರಗೆ ಸರಿಸಿ. |
03:25 | ಇದೇ ರೀತಿ ಹಸಿರು ತ್ರಿಕೋನಕ್ಕೂ ಮಾಡಿ. |
03:28 | Turn off animate editing mode ಐಕಾನ್ ಅನ್ನು ಕ್ಲಿಕ್ ಮಾಡಿ. |
03:32 | Time cursor ಕರ್ಸರ್ ಅನ್ನು ೦ ಫ್ರೇಮ್ ನಿಂದ 20 ನೆಯ ಫ್ರೇಮ್ ವರೆಗೆ ಸರಿಸಿ, ಆನಿಮೇಷನ್ ಅನ್ನು ಪರೀಕ್ಷಿಸಿ. |
03:39 | ಈಗ Spoken Tutorial logo ಲೋಗೋವನ್ನು ಇಂಪೋರ್ಟ್ ಮಾಡಿಕೊಳ್ಳೋಣ. |
03:42 | ನನ್ನ Documents ಫೋಲ್ಡರ್ ನಲ್ಲಿ ಲೋಗೊ ಇದೆ. |
03:46 | ನೀವು ಈ ಲೋಗೋವನ್ನು, ಈ ಟ್ಯುಟೋರಿಯಲ್ ನೊಂದಿಗೆ ಕೊಟ್ಟಿರುವ Code files ಲಿಂಕ್ ನಲ್ಲಿ ಪಡೆಯಬಹುದು. ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿ, ಬಳಸಿ. |
03:55 | File ಗೆ ಹೋಗಿ, Import ಅನ್ನು ಕ್ಲಿಕ್ ಮಾಡಿ. |
03:59 | ನಾನು ಲೇಯರ್ ಗೆ Rotate effect ಅನ್ನು ಕೊಡುವುದರಿಂದ, logo layer ಅನ್ನು ಗ್ರುಪ್ ಮಾಡುವೆನು. |
04:05 | ಈಗ Group layer ನ ಹೆಸರನ್ನು, ST-Logo ಎಂದು ಬದಲಿಸಿ. |
04:09 | ಈಗ ಹ್ಯಾಂಡಲ್ ನ ಕಿತ್ತಳೆ ಬಣ್ಣದ ಚುಕ್ಕಿಯನ್ನು ಬಳಸಿ ಲೋಗೋದ ಅಳತೆಯನ್ನು ಕಡಿಮೆ ಮಾಡಿ. |
04:14 | Turn on animate editing mode ಐಕಾನ್ ಅನ್ನು ಕ್ಲಿಕ್ ಮಾಡಿ. |
04:18 | ಸೊನ್ನೆ ಫ್ರೇಮ್ ಗೆ ಹೋಗಿ. |
04:20 | ST-Logo group layer ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ, logo.png layer ಅನ್ನು ಆಯ್ಕೆ ಮಾಡಿ. |
04:27 | Parameters panel ನಲ್ಲಿ, Alpha amount ಅನ್ನು ಸೊನ್ನೆ ಎಂದು ಬದಲಿಸಿ. |
04:33 | ಈಗ ಲೋಗೋ ಗೆ ರೋಟೇಷನ್ ಎಫೆಕ್ಟ್ ಅನ್ನು ಕೊಡೋಣ. |
04:37 | ಅದನ್ನು ಮಾಡಲು, ಮೊದಲಿಗೆ logo.png layer ನ ಮೇಲೆ ರೈಟ್ ಕ್ಲಿಕ್ ಮಾಡಿ. |
04:41 | ನಂತರ New layer, Transform ಅನ್ನು ಕ್ಲಿಕ್ ಮಾಡಿ ಮತ್ತು ಕೊನೆಯಲ್ಲಿ Rotate ಅನ್ನು ಕ್ಲಿಕ್ ಮಾಡಿ. |
04:47 | ಈಗ 50 ನೆಯ ಫ್ರೇಮ್ ಗೆ ಹೋಗಿ. |
04:50 | Keyframes panel ನಲ್ಲಿ , ಒಂದು keyframe ಅನ್ನು ಸೇರಿಸಿ. |
04:54 | Parameters panel ನಲ್ಲಿ , rotation amount ಅನ್ನು 360 ಎಂದು ಬದಲಿಸಿ. |
05:00 | ಮತ್ತೆ logo.png layer ಅನ್ನು ಆಯ್ಕೆ ಮಾಡಿ. |
05:04 | ಈಗ 60 ನೆಯ ಫ್ರೇಮ್ ಗೆ ಹೋಗಿ. |
05:06 | ಈಗ ಇಲ್ಲಿ ತೋರಿಸಿದಂತೆ logo ವನ್ನು ಸ್ವಲ್ಪ ಮೇಲೆ ಸರಿಸಿ. |
05:10 | Turn off animate editing mode ಐಕಾನ್ ಅನ್ನು ಕ್ಲಿಕ್ ಮಾಡಿ. |
05:14 | ಲೋಗೋವನ್ನು ಡಿ-ಸೆಲೆಕ್ಟ್ ಮಾಡಲು ಕ್ಯಾನ್ವಾಸ್ ನ ಹೊರಗೆ ಕ್ಲಿಕ್ ಮಾಡಿ. |
05:18 | ಈಗ ಇಲ್ಲಿ ಅಕ್ಷರಗಳನ್ನು ಟೈಪ್ ಮಾಡೋಣ. |
05:21 | ಅದಕ್ಕಾಗಿ, Text tool ಅನ್ನು ಆಯ್ಕೆ ಮಾಡಿಕೊಂಡು, ಕ್ಯಾನ್ವಾಸ್ ನ ಮೇಲೆ ಕ್ಲಿಕ್ ಮಾಡಿ. |
05:25 | ಟೆಕ್ಸ್ಟ್ ಬಾಕ್ಸ್ ಬರುತ್ತದೆ. ಇಲ್ಲಿ ನಾನು Spoken Tutorial ಎಂದು ಟೈಪ್ ಮಾಡಿ, Ok ಅನ್ನು ಕ್ಲಿಕ್ ಮಾಡುವೆನು. |
05:34 | Parameters panel, ನಲ್ಲಿ ಟೆಕ್ಸ್ಟ್ ನ ಬಣ್ಣವನ್ನು ಕಪ್ಪು ಮತ್ತು ಸೈಜ್ ಅನ್ನು 100 ಎಂದು ಬದಲಿಸುವೆನು. |
05:43 | ನಾನು layer ನ ಹೆಸರನ್ನು Spoken Tutorial ಎಂದು ಬದಲಿಸುವೆನು. |
05:47 | Transform tool ಅನ್ನು ಕ್ಲಿಕ್ ಮಾಡಿ, ಟೆಕ್ಸ್ಟ್ ನ ಹಸಿರು ಚುಕ್ಕಿಯನ್ನು ಆಯ್ಕೆ ಮಾಡಿ. |
05:53 | ಇಲ್ಲಿ ತೋರಿಸಿದಂತೆ, ಟೆಕ್ಸ್ಟ್ ಅನ್ನು ಕೆಳಮುಖವಾಗಿ, ಕ್ಯಾನ್ವಾಸ್ ನ ಹೊರಭಾಗಕ್ಕೆ ಸರಿಸಿ. |
05:59 | Turn on animate editing mode ಐಕಾನ್ ಅನ್ನು ಕ್ಲಿಕ್ ಮಾಡಿ. |
06:02 | ಈಗ 70 ನೆಯ ಫ್ರೇಮ್ ಗೆ ಹೋಗಿ ಮತ್ತು ಟೆಕ್ಸ್ಟ್ ಅನ್ನು ಮೇಲ್ಮುಖವಾಗಿ ಸರಿಸಿ, ಲೋಗೋ ದ ಕೆಳಗೆ ಇಡಿ. |
06:09 | ಮತ್ತೊಮ್ಮೆ, Turn off animate editing mode ಐಕಾನ್ ಅನ್ನು ಕ್ಲಿಕ್ ಮಾಡಿ. |
06:14 | ಈಗ Spoken tutorial layer ಅನ್ನು ಗ್ರುಪ್ ಮಾಡಿ ಮತ್ತು ಗ್ರುಪ್ ನ ಹೆಸರನ್ನು ST-Text ಎಂದು ಬದಲಿಸಿ. |
06:21 | ST-Text group layer ನ ಡ್ರಾಪ್ ಡೌನ್ ಲಿಸ್ಟ್ ಮೇಲೆ ಕ್ಲಿಕ್ ಮಾಡಿ. |
06:25 | Spoken Tutorial layer ನ ಮೇಲೆ ಕ್ಲಿಕ್ ಮಾಡಿ ನಂತರ New layer ನ ಮೇಲೆ ಕ್ಲಿಕ್ ಮಾಡಿ. |
06:30 | ಈಗ Distortions ನ ಮೇಲೆ ಕ್ಲಿಕ್ ಮಾಡಿ , ನಂತರ Spherize ನ ಮೇಲೆ ಕ್ಲಿಕ್ ಮಾಡಿ. |
06:35 | Spherize effect ನ ಮಧ್ಯದ ಹಸಿರು ಚುಕ್ಕಿಯ ಮೇಲೆ ಕ್ಲಿಕ್ ಮಾಡಿ, ಮತ್ತು ಅದನ್ನು ಟೆಕ್ಸ್ಟ್ ನ ಆರಂಭಿಕ ತುದಿಗೆ ಎಳೆದು ತನ್ನಿ. |
06:42 | ಎಫೆಕ್ಟ್ ಅನ್ನು ದೊಡ್ಡದಾಗಿ ಮಾಡಲು, ಎಡಗಡೆಯಿರುವ ಹಸಿರು ಚುಕ್ಕಿಯ ಮೇಲೆ ಕ್ಲಿಕ್ ಮಾಡಿ, ಎಳೆಯಿರಿ. |
06:47 | ಮತ್ತೊಮ್ಮೆ Turn on animate editing mode ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
06:51 | ಈ ಬಾರಿ 100 ನೆಯ ಫ್ರೇಮ್ ಗೆ ಹೋಗಿ, ಎಫೆಕ್ಟ್ ಅನ್ನು ಕ್ಯಾನ್ವಾಸ್ ನ ಹೊರಗೆ ಸರಿಸಿ. |
06:57 | ಈಗ Turn off animate editing mode ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
07:02 | ಕೊನೆಯದಾಗಿ ನಮ್ಮ logo animation ಅನ್ನು ರೆಂಡರ್ ಮಾಡುವೆವು. ಅದಕ್ಕು ಮೊದಲು ಫೈಲ್ ಅನ್ನು ಸೇವ್ ಮಾಡಿ. |
07:08 | ಈಗ File ಗೆ ಹೋಗಿ, Render ಅನ್ನು ಕ್ಲಿಕ್ ಮಾಡಿ. |
07:11 | Extension ಅನ್ನು avi ಗೆ ಬದಲಿಸಿ ಮತ್ತು Target ಅನ್ನು ffmpeg ಎಂದು ಬದಲಿಸಿ. |
07:18 | Quality ಅನ್ನು 9 ಕ್ಕೆ ಹೆಚ್ಚಿಸಿ ಮತ್ತು Render ಅನ್ನು ಕ್ಲಿಕ್ ಮಾಡಿ. |
07:25 | ಈಗ ನಮ್ಮ ಫೈಲ್ ಅನ್ನು ಪರೀಕ್ಷಿಸೋಣ. Desktop ಗೆ ಹೋಗಿ. |
07:28 | output ನ ಮೇಲೆ ರೈಟ್ ಕ್ಲಿಕ್ ಮಾಡಿ, Firefox web browser ಅನ್ನು ಬಳಸಿ ಓಪನ್ ಮಾಡಿ. |
07:34 | ನಮ್ಮ ಲೋಗೋ ಆನಿಮೇಷನ್ ಈ ರೀತಿಯಾಗಿ ಕಾಣುತ್ತದೆ. |
07:38 | ನೀವು ನಿಮ್ಮ ಕೌಶಲ್ಯವನ್ನು ಬಳಸಿ ಬೇರೆ ವಿಧಾನದಲ್ಲಿಯೂ ತಯಾರಿಸಬಹುದು. |
07:43 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. |
07:47 | ಸಂಕ್ಷಿಪ್ತವಾಗಿ ಈ ಟ್ಯುಟೋರಿಯಲ್ ನಲ್ಲಿ ನಾವು, :
ಒಬ್ಜೆಕ್ಟ್ ನ ಪ್ರತಿಬಿಂಬ(ಮಿರರ್ ಒಬ್ಜೆಕ್ಟ್) ರಚಿಸುವುದು, |
07:53 | ಲೋಗೋ ವನ್ನು ಆನಿಮೇಟ್ ಮಾಡುವುದು,
Spherize effect(ಸ್ಪಿಯರೈಝ್ ಎಫೆಕ್ಟ್) ಅನ್ನು ರಚಿಸುವುದು ಇವುಗಳ ಕುರಿತು ಕಲಿತಿದ್ದೇವೆ. |
07:57 | ಇಲ್ಲಿ ನಿಮಗೆ ಒಂದು ಅಸೈನ್ಮೆಂಟ್ ಇದೆ. Synfig logo ಅನ್ನು ಬಳಸಿ ಒಂದು ಲೋಗೋ ಆನಿಮೇಷನ್ ಅನ್ನು ರಚಿಸಿ. |
08:03 | ಲೋಗೋ ವನ್ನು Code files ಲಿಂಕ್ ನಲ್ಲಿ ಕೊಡಲಾಗಿದೆ. |
08:08 | ನಿಮ್ಮ ಪೂರ್ಣಗೊಂಡ ಅಸೈನ್ ಮೆಂಟ್ ಈ ರೀತಿಯಾಗಿ ಕಾಣಬೇಕು. |
08:12 | ಈ ವಿಡಿಯೋ Spoken Tutorial ಪ್ರಾಜೆಕ್ಟ್ ನ ಕುರಿತು ಸಂಕ್ಷಿಪ್ತವಾಗಿ ತಿಳಿಸಿಕೊಡುತ್ತದೆ. ದಯವಿಟ್ಟು ಅದನ್ನು ನೋಡಿ. |
08:18 | ದಯವಿಟ್ಟು ಸಮಯವನ್ನೊಳಗೊಂಡ ನಿಮ್ಮ ಪ್ರಶ್ನೆಗಳನ್ನುಈ ಫೋರಮ್ ನಲ್ಲಿ ಪೋಸ್ಟ್ ಮಾಡಿ. |
08:21 | ಸ್ಪೋಕನ್ ಟ್ಯುಟೋರಿಯಲ್ಸ್ ಕಾರ್ಯಶಾಲೆಗಳನ್ನು ನಡೆಸಿ, ಪ್ರಮಾಣಪತ್ರವನ್ನು ಕೊಡುತ್ತದೆ. |
08:26 | ಹೆಚ್ಚಿನ ಮಾಹಿತಿಗಾಗಿ ನಮಗೆ ಬರೆಯಿರಿ. |
08:30 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, NMEICT, MHRD, ಭಾರತ ಸರ್ಕಾರ – ಇವರಿಂದ ಅನುದಾನವನ್ನು ಪಡೆದಿರುತ್ತದೆ. |
08:36 | ಈ ಮಿಷನ್ ನ ಕುರಿತು ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿದೆ. |
08:41 | ಅನುವಾದ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ.
ಧನ್ಯವಾದಗಳು. |