QGIS/C4/DEM-Analysis/Kannada
From Script | Spoken-Tutorial
Time | Narration |
00:01 | QGIS ನಲ್ಲಿ DEM Analysis ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು, |
00:11 | SRTM (ಎಸ್.ಆರ್.ಟಿ.ಎಂ) ಡಾಟಾ ವೈಬ್ಸೈಟ್ ನಿಂದ DEM ಡಾಟಾವನ್ನು ಡೌನ್ಲೋಡ್ ಮಾಡುವುದು, |
00:16 | DEM ನ ಹಿಲ್ಶೇ.ಡ್ ಅನ್ನು ತೋರಿಸುವುದು – ಇವುಗಳ ಕುರಿತು ಕಲಿಯುವೆವು. |
00:19 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು,
Ubuntu Linux ಒ.ಎಸ್ 16.04 ಆವೃತ್ತಿ |
00:25 | QGIS ನ 2.18 ಆವೃತ್ತಿಯನ್ನು ಮತ್ತು ಕಾರ್ಯನಿರ್ವಹಿಸುತ್ತಿರುವ ಅಂತರ್ಜಾಲ ಸಂಪರ್ಕಗಳನ್ನು ಬಳಸಿದ್ದೇನೆ. |
00:33 | ಈ ಟ್ಯುಟೊರಿಯಲ್ ಅನ್ನು ಕಲಿಯಲು ನೀವು QGIS ಇಂಟರ್ಫೇಸ್ ನ ಕುರಿತು ಕಲಿತಿರಬೇಕು. |
00:39 | ಈ ಸರಣಿಯ ಹಿಂದಿನ ಟ್ಯುಟೋರಿಯಲ್ ಗಳನ್ನು ನೋಡಲು, ಈ ಜಾಲತಾಣವನ್ನು ಭೇಟಿ ಮಾಡಿ. |
00:45 | Digital Elevation Model (ಡಿಜಿಟಲ್ ಎಲಿವೇಷನ್ ಮಾಡೆಲ್) ಅಥವಾ DEM (ಡಿ.ಇ.ಎಂ) ಇದೊಂದು ರಾಸ್ಟರ್ ಫೈಲ್ ಆಗಿದೆ. |
00:50 | ಇದು ಪ್ರತಿ ರಾಸ್ಟರ್ ಸೆಲ್ ಗೆ ಎಲಿವೇಷನ್ ಅನ್ನು ತೋರಿಸುತ್ತದೆ. |
00:55 | DEM ಗಳನ್ನು ಖಾಲಿ ಭೂಪ್ರದೇಶವನ್ನು(ಟೆರೇನ್) ಪ್ರತಿನಿಧಿಸಲು ಬಳಸಲಾಗುತ್ತದೆ. |
01:00 | ಭೂಪ್ರದೇಶವು (ಟೆರೇನ್) ಸಾಮಾನ್ಯವಾಗಿ ಸಸ್ಯವರ್ಗ ಮತ್ತು ಮಾನವ ನಿರ್ಮಿತ ವೈಶಿಷ್ಟ್ಯಗಳಿಂದ ದೂರವಿರುತ್ತದೆ. |
01:06 | DEM ಗಳನ್ನು ಒಂದು ಭೂ ಪ್ರದೇಶವನ್ನು ಎಲಿವೇಷನ್ ಗಳ ಆಧಾರದ ಮೇಲೆ ಲೆಕ್ಕಹಾಕಲು ಮತ್ತು ವಿಶ್ಲೇಷಿಸಲು ಬಳಸಲಾಗುತ್ತದೆ. |
01:14 | ಈಗ DEM ಡಾಟಾವನ್ನು ಡೌನ್ಲೋಡ್ ಮಾಡೋಣ. |
01:17 | ಇಲ್ಲಿ ಕೊಟ್ಟಿರುವ ಲಿಂಕ್ ಅನ್ನು ಯಾವುದಾದರೂ ವೆಬ್ ಬ್ರೌಸರ್ ನಲ್ಲಿ ತೆರೆಯೋಣ. |
01:21 | Shuttle radar topography mission (SRTM) data (ಷಟಲ್ ರಾಡಾರ್ ಟೊಪೋಗ್ರಫಿ ಮಿಶನ್ (ಎಸ್.ಆರ್.ಟಿ.ಎಮ್) ಡಾಟಾ) ವೆಬ್ಸೈಟ್ ತೆರೆದುಕೊಳ್ಳುತ್ತದೆ. |
01:27 | ಈ ವೆಬ್ಸೈಟ್ ನಿಂದ SRTM ಡಾಟಾವನ್ನು ಉಚಿತವಾಗಿ ಡೌನ್ಲೋಡ್ ಮಾಡಬಹುದು. |
01:32 | Download Manager ಪೇಜ್ ನಲ್ಲಿ, ಎಲಿವೇಷನ್ ಮಾದರಿಗಳನ್ನು ಟೈಲ್ಸ್ ಗಳಾಗಿ ಜೋಡಿಸಲಾಗಿದೆ. |
01:39 | Tile Size ಮತ್ತು Format ಗಳಿಗೆ ಕ್ರಮವಾಗಿ ಎರಡೆರಡು ಆಯ್ಕೆಗಳು ಲಭ್ಯವಿದೆ. |
01:44 | ನಾವು ರೇಡಿಯೋ ಬಟನ್ ಗಳನ್ನು ಕ್ಲಿಕ್ ಮಾಡುವುದರ ಮೂಲಕ ಟೈಲ್ ಸೈಜ್ ಮತ್ತು ಫಾರ್ಮ್ಯಾಟ್ ಗಳನ್ನು ಆಯ್ಕೆ ಮಾಡಬಹುದು. |
01:50 | ಪ್ರಪಂಚದ ನಕ್ಷೆಗೆ ಪೇಜ್ ಅನ್ನು ಸ್ಕ್ರೋಲ್ ಮಾಡಿ. |
01:54 | ಪ್ರಪಂಚದ ನಕ್ಷೆಯನ್ನು ಝೂಮ್ ಮಾಡಲು, ಮ್ಯಾಪ್ ನ ಎಡ ಮೂಲೆಯಲ್ಲಿರುವ + ಚಿಹ್ನೆಯನ್ನು ಬಳಸಬಹುದು. |
02:00 | Maharashtra ಟೈಲ್ ನ ಮೇಲೆ ಕ್ಲಿಕ್ ಮಾಡಿ. |
02:03 | ನಕಾಶೆಯ ಮೇಲ್ಭಾಗದ ಎಡ ಮೂಲೆಯಲ್ಲಿರುವ Search ಬಟನ್ ಅನ್ನು ಕ್ಲಿಕ್ ಮಾಡಿ. |
02:09 | Download ವಿಂಡೋ ತೆರೆದುಕೊಳ್ಳುತ್ತದೆ. |
02:12 | Description ಹೆಡಿಂಗ್ ಗೆ ಸ್ಕ್ರೋಲ್ ಮಾಡಿ.
ಕೆಳಗಡೆ ಇರುವ Download SRTM ಲಿಂಕ್ ಅನ್ನು ಕ್ಲಿಕ್ ಮಾಡಿ. |
02:20 | ಒಂದು ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ, ಅದರಲ್ಲಿ Save File ಅನ್ನು ಆಯ್ಕೆಮಾಡಿಕೊಂಡು, OK ಬಟನ್ ನ ಮೇಲೆ ಕ್ಲಿಕ್ ಮಾಡಿ. |
02:29 | ನನ್ನ ಸಿಸ್ಟಮ್ ನಲ್ಲಿ, , zip file , Downloads ಫೋಲ್ಡರ್ ನಲ್ಲಿ ಡೌನ್ಲೋಡ್ ಆಗಿದೆ. |
02:34 | zip file ಕಂಟೆಂಟ್ ಗಳನ್ನು ಎಕ್ಸ್ಟ್ರ್ಯಾಕ್ಟ್ ಮಾಡಿ. |
02:38 | ರೈಟ್ ಕ್ಲಿಕ್ ಮಾಡಿ ಮತ್ತು Extract Here ಆಯ್ಕೆಯನ್ನು ಆರಿಸಿ. |
02:43 | ಎಕ್ಸ್ಟ್ರ್ಯಾಕ್ಟ್ ಆದ ಫೋಲ್ಡರ್ ಅನ್ನು ಡಬಲ್ ಕ್ಲಿಕ್ ಮಾಡಿ.
ಇದೊಂದು DEM dataset ಆಗಿದೆ. |
02:50 | ಇಲ್ಲಿ ನಾವು ಬೇರೆ ಬೇರೆ ಎಕ್ಸ್ಟೆನ್ಷನ್ ನಲ್ಲಿರುವ ಅನೇಕ ಫೈಲ್ ಗಳನ್ನು ನೋಡಬಹುದು. |
02:55 | ಫೋಲ್ಡರ್ ಅನ್ನು ಕ್ಲೋಸ್ ಮಾಡಿ. |
02:57 | QGIS ಇಂಟರ್ಫೇಸ್ ಅನ್ನು ತೆರೆಯಿರಿ. |
03:00 | menu bar ನಲ್ಲಿ, Layer menu ವಿನ ಮೇಲೆ ಕ್ಲಿಕ್ ಮಾಡಿ. |
03:04 | ಸಬ್ ಮೆನ್ಯುವಿನಿಂದ Add Layer, ಅನ್ನು ಆಯ್ಕೆ ಮಾಡಿ, ನಂತರ Add Raster Layer ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
03:11 | Data source ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
03:14 | SRTM ವೆಬ್ಸೈಟ್ ನಿಂದ ಡೌನ್ಲೋಡ್ ಮಾಡಿದ SRTM ಫೋಲ್ಡರ್ ಗೆ ಹೋಗಿ. |
03:21 | ಫೋಲ್ಡರ್ ನ ಕಂಟೆಂಟ್ಸ್ ನಿಂದ .tif ಎಕ್ಸ್ಟೆನ್ಷನ್ ಅನ್ನು ಹೊಂದಿದ ಫೈಲ್ ಅನ್ನು ಆಯ್ಕೆ ಮಾಡಿಕೊಂಡು, Open ಬಟನ್ ಅನ್ನು ಕ್ಲಿಕ್ ಮಾಡಿ. |
03:31 | ಕ್ಯಾನ್ವಾಸ್ ನ ಮೇಲೆ ನೀವು ಟೆರೇನ್ ನ DEM ಅನ್ನು ಕಾಣಬಹುದು. |
03:36 | DEM ಇದು ಟೆರೇನ್ ನ ಕುರಿತು ಎಲ್ಲ 3D information ಅನ್ನು ಒಳಗೊಂಡಿರುತ್ತದೆ. |
03:41 | ರಾಸ್ಟರ್ ಇಮೇಜ್ ನ ಪ್ರತಿ ಪಿಕ್ಸೆಲ್ ಆ ಸ್ಥಳದ ಸರಾಸರಿ ಎಲಿವೇಷನ್ ಅನ್ನು ಪ್ರತಿನಿಧಿಸುತ್ತದೆ. ಈ ಎಲಿವೇಶನ್ ಅನ್ನು ಮೀಟರ್ ಗಳಲ್ಲಿ ಕೊಡಲಾಗಿದೆ. |
03:52 | ಗಾಢವಾದ ಪಿಕ್ಸೆಲ್ ಗಳು ಕಡಿಮೆ ಅಲ್ಟಿಟ್ಯೂಡ್ ಅನ್ನು ಹೊಂದಿರುವ ಪ್ರದೇಶವನ್ನು ಪ್ರತಿನಿಧಿಸುತ್ತದೆ. |
03:57 | ತೆಳುವಾದ ಪಿಕ್ಸೆಲ್ ಗಳು ಹೆಚ್ಚು ಅಲ್ಟಿಟ್ಯೂಡ್ ಅನ್ನು ಹೊಂದಿರುವ ಪ್ರದೇಶವನ್ನು ಪ್ರತಿನಿಧಿಸುತ್ತದೆ. |
04:02 | ಈಗ ಈ ಮ್ಯಾಪ್ ನ DEM ವಿಶ್ಲೇಷಣೆಯನ್ನು ಆರಂಭಿಸೋಣ. |
04:07 | ಮೆನ್ಯು ಬಾರ್ ನಲ್ಲಿ Raster ಮೆನ್ಯುವನ್ನು ಕ್ಲಿಕ್ ಮಾಡಿ. |
04:11 | ಡ್ರಾಪ್ ಡೌನ್ ನಿಂದ Analysis ಅನ್ನು ಕ್ಲಿಕ್ ಮಾಡಿ.
ಸಬ್ ಮೆನ್ಯುವಿನಿಂದ DEM (Terrain models) ಅನ್ನು ಕ್ಲಿಕ್ ಮಾಡಿ. |
04:19 | DEM ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
04:22 | ಇನ್ಪುಟ್ ಲೇಯರ್ ಫೀಲ್ಡ್ DEM layer ಅನ್ನು ಡಿಫಾಲ್ಟ್ ಆಯ್ಕೆಯಾಗಿ ಹೊಂದಿರುತ್ತದೆ. |
04:28 | Output file ನ ಮುಂದೆ ಇರುವ Select ಬಟನ್ ಅನ್ನು ಕ್ಲಿಕ್ ಮಾಡಿ. |
04:33 | Save the results to.. ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
04:37 | ಡಯಲಾಗ್ ಬಾಕ್ಸ್ ನಲ್ಲಿ, ಫೈಲ್ ಅನ್ನು Hillshade.tif ಎಂದು ಹೆಸರಿಸಿ. |
04:44 | ನಾನು ಇದನ್ನು Desktop ನಲ್ಲಿ ಸೇವ್ ಮಾಡುವೆನು. |
04:47 | Save ಬಟನ್ ಅನ್ನು ಕ್ಲಿಕ್ ಮಾಡಿ. |
04:50 | Hillshade ಅನ್ನು Mode ಆಯ್ಕೆಯಾಗಿ ಆರಿಸಿಕೊಳ್ಳಿ. |
04:54 | ಇಲ್ಲಿ ಡಿಫಾಲ್ಟ್ ಆಗಿ Hillshade ಈಗಾಗಲೇ ಆಯ್ಕೆಯಾಗಿದೆ. |
04:59 | Load into canvas when finished ನ ಮುಂದಿರುವ ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ. |
05:05 | ಇಲ್ಲಿ ಇದಾಗಲೇ ಡಿಫಾಲ್ಟ್ ಆಗಿ ಆಯ್ಕೆಯಾಗಿದೆ. |
05:09 | ಡಿಫಾಲ್ಟ್ ಸೆಟ್ಟಿಂಗ್ಸ್ ಗಳನ್ನು ಹಾಗೆಯೇ ಬಿಡಿ. |
05:12 | Ok ಬಟನ್ ಅನ್ನು ಕ್ಲಿಕ್ ಮಾಡಿ. |
05:15 | Processing Completed ಎಂಬ ಸಂದೇಶವನ್ನೊಳಗೊಂಡ ಒಂದು ಪಾಪ್ ಅಪ್ ಬಾಕ್ಸ್ ತೆರೆದುಕೊಳ್ಳುತ್ತದೆ.
OK ಬಟನ್ ಅನ್ನು ಕ್ಲಿಕ್ ಮಾಡಿ. |
05:22 | Qgis.bin ಡಯಲಾಗ್ ಬಾಕ್ಸ್ ನಲ್ಲಿ, OK ಬಟನ್ ಅನ್ನು ಕ್ಲಿಕ್ ಮಾಡಿ. |
05:27 | DEM ಡಯಲಾಗ್ ಬಾಕ್ಸ್ ನಲ್ಲಿ Close ಬಟನ್ ಅನ್ನು ಕ್ಲಿಕ್ ಮಾಡಿ. |
05:32 | ಈಗ, Hillshade ಎನ್ನುವ ಹೊಸ ಲೇಯರ್ Layers panel ನಲ್ಲಿ ಸೇರ್ಪಡೆಯಾಗಿದೆ. |
05:37 | ಕ್ಯಾನ್ವಾಸ್ ನ ಮೇಲೆ, Hillshade ಮೋಡ್ ನಲ್ಲಿ ರಾಸ್ಟರ್ ಮ್ಯಾಪ್ ಅನ್ನು ನೋಡುವಿರಿ. |
05:42 | ಈ ಮ್ಯಾಪ್ ಅನ್ನು, 3D ಇಮೇಜ್ ಅನ್ನು ರಚಿಸಲು, ನೆರಳು ಬೆಳಕಿನ ರೂಪದಲ್ಲಿ ರಚಿಸಲಾಗಿದೆ. |
05:48 | ಮಾದರಿಯನ್ನು ಹೆಚ್ಚು ಎದ್ದು ಕಾಣುವಂತೆ ಮಾಡಲು, ನಾವು Hillshade ಅನ್ನು ಓವರ್ಲೇ ಆಗಿ ಬಳಸುತ್ತೇವೆ. |
05:54 | ಈಗ ನಾವು ಅಸಲಿ DEM ಲೇಯರ್ ನ symbology ಯನ್ನು ಬದಲಿಸೋಣ. |
05:59 | Layers ಪ್ಯಾನಲ್ ನಲ್ಲಿ, srtm layer ಅನ್ನು ರೈಟ್ ಕ್ಲಿಕ್ ಮಾಡಿ. |
06:04 | ಕಂಟೆಕ್ಸ್ಟ್ ಮೆನ್ಯುವಿನಿಂದ Properties ಆಯ್ಕೆಯನ್ನು ಆರಿಸಿ. |
06:09 | Layer Properties ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. . |
06:13 | ಎಡ ಪ್ಯಾನಲ್ ನಿಂದ Style ಅನ್ನು ಆಯ್ಕೆ ಮಾಡಿ. |
06:17 | Band Rendering (ಬ್ಯಾಂಡ್ ರೆಂಡರಿಂಗ್) ವಿಭಾಗದಡಿಯಲ್ಲಿ, Render type ಅನ್ನು Singleband pseudocolor (ಸಿಂಗಲ್ ಬ್ಯಾಂಡ್ ಸ್ಯುಡೋಕಲರ್) ಎಂದು ಬದಲಿಸಿ. |
06:24 | Load minimum/maximum values (ಲೋಡ್ ಮಿನಿಮಮ್/ಮ್ಯಾಕ್ಸಿಮಮ್ ವ್ಯಾಲ್ಯುಸ್) ನಲ್ಲಿ , minimum/maximum ರೇಡಿಯೋ ಬಟನ್ ಅನ್ನು ಕ್ಲಿಕ್ ಮಾಡಿ. |
06:33 | Interpolation ಡ್ರಾಪ್ ಡೌನ್ ನಿಂದ Linear ಅನ್ನು ಆಯ್ಕೆ ಮಾಡಿ. |
06:37 | ಇದು ಇಲ್ಲಿ ಒಂದು ಡಿಫಾಲ್ಟ್ ಆಯ್ಕೆಯಾಗಿದೆ.
Color ಡ್ರಾಪ್ ಡೌನ್ ನಿಂದ Spectral (ಸ್ಪೆಕ್ಟ್ರಲ್) ಅನ್ನು ಆಯ್ಕೆ ಮಾಡಿ. |
06:44 | ಕೆಳಕ್ಕೆ ಸ್ಕ್ರೋಲ್ ಮಾಡಿ.
ಡ್ರಾಪ್ ಡೌನ್ ನಿಂದ Mode ಅನ್ನು Continuous ಎಂದು ಆಯ್ಕೆ ಮಾಡಿ. |
06:50 | Classify ಬಟನ್ ಅನ್ನು ಕ್ಲಿಕ್ ಮಾಡಿ. |
06:53 | 5 ಹೊಸ ಕಲರ್ ವ್ಯಾಲ್ಯುಗಳು ರಚನೆಯಾಗಿವೆ. |
06:57 | ಬಣ್ಣಗಳು, ಕನಿಷ್ಟದಿಂದ ಗರಿಷ್ಟದ ವರೆಗೆ ರಾಸ್ಟರ್ ನ ಎಲಿವೇಷನ್ ವ್ಯಾಲ್ಯುಗಳನ್ನು ಪ್ರತಿನಿಧಿಸುತ್ತದೆ. |
07:04 | Apply ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ಕೆಳಗಡೆ ಬಲ ಮೂಲೆಯಲ್ಲಿರುವ OK ಬಟನ್ ಅನ್ನು ಕ್ಲಿಕ್ ಮಾಡಿ. |
07:10 | Layers ಪ್ಯಾನಲ್ ನಲ್ಲಿ, Hillshade ಲೇಯರ್ ಅನ್ನು ನಿಷ್ಕ್ರಿಯಗೊಳಿಸಿ. |
07:14 | Hillshade ನ ಮುಂದಿರುವ ಚೆಕ್ ಬಾಕ್ಸ್ ಅನ್ನು ಅನ್ಚೆಕ್ ಮಾಡಿ. |
07:18 | ಈಗ ನೀವು ಕ್ಯಾನ್ವಾಸ್ ನ ಮೇಲೆ ಸ್ಪೆಕ್ಟ್ರಲ್ ಕಲರ್ ನಲ್ಲಿ ಮ್ಯಾಪ್ ಅನ್ನು ನೋಡಬಹುದು. |
07:24 | ಕೆಂಪು ಬಣ್ಣದ ಟೆರೇನ್ ಕನಿಷ್ಟ ಎಲಿವೇಟ್ ಆಗಿರುವ ಹಾಗು ನೀಲಿ ಬಣ್ಣವು ಹೆಚ್ಚು ಎಲಿವೇಟ್ ಆಗಿರುವ ಟೆರೇನ್ ಅನ್ನು ಸೂಚಿಸುತ್ತದೆ. |
07:30 | Hillshade layer ಅನ್ನು ಸಕ್ರಿಯಗೊಳಿಸಿ. |
07:33 | Layers Properties ಡಯಲಾಗ್ ಬಾಕ್ಸ್ ಅನ್ನು ತೆರೆಯಿರಿ. |
07:37 | ಎಡ ಪ್ಯಾನಲ್ ನಲ್ಲಿ Transparency ಅನ್ನು ಆಯ್ಕೆ ಮಾಡಿ. |
07:41 | Global transparency ಯನ್ನು ಸ್ಲೈಡರ್ ಅನ್ನು ಎಳೆಯುವುದರ ಮೂಲಕ 50% ಕ್ಕೆ ಸೆಟ್ ಮಾಡಿ. |
07:47 | Apply ಬಟನ್ ಅನ್ನೂ, ನಂತರ OK ಬಟನ್ ಅನ್ನೂ ಕ್ಲಿಕ್ ಮಾಡಿ. |
07:51 | ಮ್ಯಾಪ್ ಅನ್ನು ಝೂಮ್ ಮಾಡಿ. |
07:53 | ನೀವು ಕ್ಯಾನ್ವಾಸ್ ನ ಮೇಲೆ, ಭೂ ಪ್ರದೇಶದ ಸುಧಾರಿತ ಸ್ಥಳಾಕೃತಿಯನ್ನು (ಟೋಪೋಗ್ರಫಿ) ನೋಡಬಹುದು. |
08:00 | ಸಂಕ್ಷಿಪ್ತವಾಗಿ, |
08:03 | ಈ ಟ್ಯುಟೋರಿಯಲ್ ನಲ್ಲಿ ನಾವು,
SRTM (ಎಸ್.ಆರ್.ಟಿ.ಎಂ) ಡಾಟಾ ವೈಬ್ಸೈಟ್ ನಿಂದ DEM ಡಾಟಾವನ್ನು ಡೌನ್ಲೋಡ್ ಮಾಡುವುದು, |
08:11 | DEM ನ ಹಿಲ್ಶೇ ಡ್ ಅನ್ನು ತೋರಿಸುವುದು – ಇವುಗಳ ಕುರಿತು ಕಲಿತಿದ್ದೇವೆ. |
08:15 | ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ. |
08:17 | ರಾಸ್ಟರ್ ಮ್ಯಾಪ್ ಗೆ Slope ಮೋಡ್ ಅನ್ನು ಬಳಸಿ, ಟೆರೇನ್ ಅನ್ನು ದೃಶ್ಯೀಕರಿಸಿ. Slope ಲೇಯರ್ ನ ಸಿಂಬೋಲಜಿಯನ್ನು ಬದಲಿಸಿ. |
08:27 | ಸುಳಿವು : Mode ಅನ್ನು Slope ಎಂದು ಆಯ್ಕೆ ಮಾಡಿ ಮತ್ತು ಅದನ್ನು ಓವರ್ಲೇ ಆಗಿ ಬಳಸಿ. |
08:33 | ನಿಮ್ಮ ಪೂರ್ಣಗೊಂಡ ಅಸೈನ್ಮೆಂಟ್ ಇಲ್ಲಿ ತೋರಿಸಿರುವಂತೆ ಕಾಣಬೇಕು. |
08:38 | ಕೆಳಗಿನ ಲಿಂಕ್ನಲ್ಲಿರುವ ವೀಡಿಯೊ ಸ್ಪೋಕನ್ ಟ್ಯುಟೋರಿಯಲ್ ಯೋಜನೆಯನ್ನು ಕುರಿತು ವಿವರಿಸುತ್ತದೆ.
ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ. |
08:45 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡ, ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ನಮ್ಮ ಆನ್ಲೈನ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ.
ವಿವರಗಳಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
08:54 | ನೀವು ಪ್ರಶ್ನೆಯನ್ನು ಹೊಂದಿರುವ ನಿಮಿಷ ಮತ್ತು ಸೆಕೆಂಡ್ ಅನ್ನು ಆರಿಸಿ.
ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ. |
08:58 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗೆ NMEICT, MHRD, ಭಾರತ ಸರ್ಕಾರ ಧನಸಹಾಯ ನೀಡುತ್ತದೆ. |
09:06 | ಅನುವಾದ ಮತ್ತು ಧ್ವನಿ ಶ್ರೀ ನವೀನ ಭಟ್ಟ ಉಪ್ಪಿನಪಟ್ಟಣ. ಧನ್ಯವಾದಗಳು. |