QGIS/C4/DEM-Analysis/Kannada

From Script | Spoken-Tutorial
Jump to: navigation, search
Time Narration
00:01 QGIS ನಲ್ಲಿ DEM Analysis ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು,
00:11 SRTM (ಎಸ್.ಆರ್.ಟಿ.ಎಂ) ಡಾಟಾ ವೈಬ್ಸೈಟ್ ನಿಂದ DEM ಡಾಟಾವನ್ನು ಡೌನ್ಲೋಡ್ ಮಾಡುವುದು,
00:16 DEM ನ ಹಿಲ್ಶೇ.ಡ್ ಅನ್ನು ತೋರಿಸುವುದು – ಇವುಗಳ ಕುರಿತು ಕಲಿಯುವೆವು.
00:19 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು,

Ubuntu Linux ಒ.ಎಸ್ 16.04 ಆವೃತ್ತಿ

00:25 QGIS ನ 2.18 ಆವೃತ್ತಿಯನ್ನು ಮತ್ತು ಕಾರ್ಯನಿರ್ವಹಿಸುತ್ತಿರುವ ಅಂತರ್ಜಾಲ ಸಂಪರ್ಕಗಳನ್ನು ಬಳಸಿದ್ದೇನೆ.
00:33 ಈ ಟ್ಯುಟೊರಿಯಲ್ ಅನ್ನು ಕಲಿಯಲು ನೀವು QGIS ಇಂಟರ್ಫೇಸ್ ನ ಕುರಿತು ಕಲಿತಿರಬೇಕು.
00:39 ಈ ಸರಣಿಯ ಹಿಂದಿನ ಟ್ಯುಟೋರಿಯಲ್ ಗಳನ್ನು ನೋಡಲು, ಈ ಜಾಲತಾಣವನ್ನು ಭೇಟಿ ಮಾಡಿ.
00:45 Digital Elevation Model (ಡಿಜಿಟಲ್ ಎಲಿವೇಷನ್ ಮಾಡೆಲ್) ಅಥವಾ DEM (ಡಿ.ಇ.ಎಂ) ಇದೊಂದು ರಾಸ್ಟರ್ ಫೈಲ್ ಆಗಿದೆ.
00:50 ಇದು ಪ್ರತಿ ರಾಸ್ಟರ್ ಸೆಲ್ ಗೆ ಎಲಿವೇಷನ್ ಅನ್ನು ತೋರಿಸುತ್ತದೆ.
00:55 DEM ಗಳನ್ನು ಖಾಲಿ ಭೂಪ್ರದೇಶವನ್ನು(ಟೆರೇನ್) ಪ್ರತಿನಿಧಿಸಲು ಬಳಸಲಾಗುತ್ತದೆ.
01:00 ಭೂಪ್ರದೇಶವು (ಟೆರೇನ್) ಸಾಮಾನ್ಯವಾಗಿ ಸಸ್ಯವರ್ಗ ಮತ್ತು ಮಾನವ ನಿರ್ಮಿತ ವೈಶಿಷ್ಟ್ಯಗಳಿಂದ ದೂರವಿರುತ್ತದೆ.
01:06 DEM ಗಳನ್ನು ಒಂದು ಭೂ ಪ್ರದೇಶವನ್ನು ಎಲಿವೇಷನ್ ಗಳ ಆಧಾರದ ಮೇಲೆ ಲೆಕ್ಕಹಾಕಲು ಮತ್ತು ವಿಶ್ಲೇಷಿಸಲು ಬಳಸಲಾಗುತ್ತದೆ.
01:14 ಈಗ DEM ಡಾಟಾವನ್ನು ಡೌನ್ಲೋಡ್ ಮಾಡೋಣ.
01:17 ಇಲ್ಲಿ ಕೊಟ್ಟಿರುವ ಲಿಂಕ್ ಅನ್ನು ಯಾವುದಾದರೂ ವೆಬ್ ಬ್ರೌಸರ್ ನಲ್ಲಿ ತೆರೆಯೋಣ.
01:21 Shuttle radar topography mission (SRTM) data (ಷಟಲ್ ರಾಡಾರ್ ಟೊಪೋಗ್ರಫಿ ಮಿಶನ್ (ಎಸ್.ಆರ್.ಟಿ.ಎಮ್) ಡಾಟಾ) ವೆಬ್ಸೈಟ್ ತೆರೆದುಕೊಳ್ಳುತ್ತದೆ.
01:27 ಈ ವೆಬ್ಸೈಟ್ ನಿಂದ SRTM ಡಾಟಾವನ್ನು ಉಚಿತವಾಗಿ ಡೌನ್ಲೋಡ್ ಮಾಡಬಹುದು.
01:32 Download Manager ಪೇಜ್ ನಲ್ಲಿ, ಎಲಿವೇಷನ್ ಮಾದರಿಗಳನ್ನು ಟೈಲ್ಸ್ ಗಳಾಗಿ ಜೋಡಿಸಲಾಗಿದೆ.
01:39 Tile Size ಮತ್ತು Format ಗಳಿಗೆ ಕ್ರಮವಾಗಿ ಎರಡೆರಡು ಆಯ್ಕೆಗಳು ಲಭ್ಯವಿದೆ.
01:44 ನಾವು ರೇಡಿಯೋ ಬಟನ್ ಗಳನ್ನು ಕ್ಲಿಕ್ ಮಾಡುವುದರ ಮೂಲಕ ಟೈಲ್ ಸೈಜ್ ಮತ್ತು ಫಾರ್ಮ್ಯಾಟ್ ಗಳನ್ನು ಆಯ್ಕೆ ಮಾಡಬಹುದು.
01:50 ಪ್ರಪಂಚದ ನಕ್ಷೆಗೆ ಪೇಜ್ ಅನ್ನು ಸ್ಕ್ರೋಲ್ ಮಾಡಿ.
01:54 ಪ್ರಪಂಚದ ನಕ್ಷೆಯನ್ನು ಝೂಮ್ ಮಾಡಲು, ಮ್ಯಾಪ್ ನ ಎಡ ಮೂಲೆಯಲ್ಲಿರುವ + ಚಿಹ್ನೆಯನ್ನು ಬಳಸಬಹುದು.
02:00 Maharashtra ಟೈಲ್ ನ ಮೇಲೆ ಕ್ಲಿಕ್ ಮಾಡಿ.
02:03 ನಕಾಶೆಯ ಮೇಲ್ಭಾಗದ ಎಡ ಮೂಲೆಯಲ್ಲಿರುವ Search ಬಟನ್ ಅನ್ನು ಕ್ಲಿಕ್ ಮಾಡಿ.
02:09 Download ವಿಂಡೋ ತೆರೆದುಕೊಳ್ಳುತ್ತದೆ.
02:12 Description ಹೆಡಿಂಗ್ ಗೆ ಸ್ಕ್ರೋಲ್ ಮಾಡಿ.

ಕೆಳಗಡೆ ಇರುವ Download SRTM ಲಿಂಕ್ ಅನ್ನು ಕ್ಲಿಕ್ ಮಾಡಿ.

02:20 ಒಂದು ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ, ಅದರಲ್ಲಿ Save File ಅನ್ನು ಆಯ್ಕೆಮಾಡಿಕೊಂಡು, OK ಬಟನ್ ನ ಮೇಲೆ ಕ್ಲಿಕ್ ಮಾಡಿ.
02:29 ನನ್ನ ಸಿಸ್ಟಮ್ ನಲ್ಲಿ, , zip file , Downloads ಫೋಲ್ಡರ್ ನಲ್ಲಿ ಡೌನ್ಲೋಡ್ ಆಗಿದೆ.
02:34 zip file ಕಂಟೆಂಟ್ ಗಳನ್ನು ಎಕ್ಸ್ಟ್ರ್ಯಾಕ್ಟ್ ಮಾಡಿ.
02:38 ರೈಟ್ ಕ್ಲಿಕ್ ಮಾಡಿ ಮತ್ತು Extract Here ಆಯ್ಕೆಯನ್ನು ಆರಿಸಿ.
02:43 ಎಕ್ಸ್ಟ್ರ್ಯಾಕ್ಟ್ ಆದ ಫೋಲ್ಡರ್ ಅನ್ನು ಡಬಲ್ ಕ್ಲಿಕ್ ಮಾಡಿ.

ಇದೊಂದು DEM dataset ಆಗಿದೆ.

02:50 ಇಲ್ಲಿ ನಾವು ಬೇರೆ ಬೇರೆ ಎಕ್ಸ್ಟೆನ್ಷನ್ ನಲ್ಲಿರುವ ಅನೇಕ ಫೈಲ್ ಗಳನ್ನು ನೋಡಬಹುದು.
02:55 ಫೋಲ್ಡರ್ ಅನ್ನು ಕ್ಲೋಸ್ ಮಾಡಿ.
02:57 QGIS ಇಂಟರ್ಫೇಸ್ ಅನ್ನು ತೆರೆಯಿರಿ.
03:00 menu bar ನಲ್ಲಿ, Layer menu ವಿನ ಮೇಲೆ ಕ್ಲಿಕ್ ಮಾಡಿ.
03:04 ಸಬ್ ಮೆನ್ಯುವಿನಿಂದ Add Layer, ಅನ್ನು ಆಯ್ಕೆ ಮಾಡಿ, ನಂತರ Add Raster Layer ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
03:11 Data source ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
03:14 SRTM ವೆಬ್ಸೈಟ್ ನಿಂದ ಡೌನ್ಲೋಡ್ ಮಾಡಿದ SRTM ಫೋಲ್ಡರ್ ಗೆ ಹೋಗಿ.
03:21 ಫೋಲ್ಡರ್ ನ ಕಂಟೆಂಟ್ಸ್ ನಿಂದ .tif ಎಕ್ಸ್ಟೆನ್ಷನ್ ಅನ್ನು ಹೊಂದಿದ ಫೈಲ್ ಅನ್ನು ಆಯ್ಕೆ ಮಾಡಿಕೊಂಡು, Open ಬಟನ್ ಅನ್ನು ಕ್ಲಿಕ್ ಮಾಡಿ.
03:31 ಕ್ಯಾನ್ವಾಸ್ ನ ಮೇಲೆ ನೀವು ಟೆರೇನ್ ನ DEM ಅನ್ನು ಕಾಣಬಹುದು.
03:36 DEM ಇದು ಟೆರೇನ್ ನ ಕುರಿತು ಎಲ್ಲ 3D information ಅನ್ನು ಒಳಗೊಂಡಿರುತ್ತದೆ.
03:41 ರಾಸ್ಟರ್ ಇಮೇಜ್ ನ ಪ್ರತಿ ಪಿಕ್ಸೆಲ್ ಆ ಸ್ಥಳದ ಸರಾಸರಿ ಎಲಿವೇಷನ್ ಅನ್ನು ಪ್ರತಿನಿಧಿಸುತ್ತದೆ. ಈ ಎಲಿವೇಶನ್ ಅನ್ನು ಮೀಟರ್ ಗಳಲ್ಲಿ ಕೊಡಲಾಗಿದೆ.
03:52 ಗಾಢವಾದ ಪಿಕ್ಸೆಲ್ ಗಳು ಕಡಿಮೆ ಅಲ್ಟಿಟ್ಯೂಡ್ ಅನ್ನು ಹೊಂದಿರುವ ಪ್ರದೇಶವನ್ನು ಪ್ರತಿನಿಧಿಸುತ್ತದೆ.
03:57 ತೆಳುವಾದ ಪಿಕ್ಸೆಲ್ ಗಳು ಹೆಚ್ಚು ಅಲ್ಟಿಟ್ಯೂಡ್ ಅನ್ನು ಹೊಂದಿರುವ ಪ್ರದೇಶವನ್ನು ಪ್ರತಿನಿಧಿಸುತ್ತದೆ.
04:02 ಈಗ ಈ ಮ್ಯಾಪ್ ನ DEM ವಿಶ್ಲೇಷಣೆಯನ್ನು ಆರಂಭಿಸೋಣ.
04:07 ಮೆನ್ಯು ಬಾರ್ ನಲ್ಲಿ Raster ಮೆನ್ಯುವನ್ನು ಕ್ಲಿಕ್ ಮಾಡಿ.
04:11 ಡ್ರಾಪ್ ಡೌನ್ ನಿಂದ Analysis ಅನ್ನು ಕ್ಲಿಕ್ ಮಾಡಿ.

ಸಬ್ ಮೆನ್ಯುವಿನಿಂದ DEM (Terrain models) ಅನ್ನು ಕ್ಲಿಕ್ ಮಾಡಿ.

04:19 DEM ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
04:22 ಇನ್ಪುಟ್ ಲೇಯರ್ ಫೀಲ್ಡ್ DEM layer ಅನ್ನು ಡಿಫಾಲ್ಟ್ ಆಯ್ಕೆಯಾಗಿ ಹೊಂದಿರುತ್ತದೆ.
04:28 Output file ನ ಮುಂದೆ ಇರುವ Select ಬಟನ್ ಅನ್ನು ಕ್ಲಿಕ್ ಮಾಡಿ.
04:33 Save the results to.. ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
04:37 ಡಯಲಾಗ್ ಬಾಕ್ಸ್ ನಲ್ಲಿ, ಫೈಲ್ ಅನ್ನು Hillshade.tif ಎಂದು ಹೆಸರಿಸಿ.
04:44 ನಾನು ಇದನ್ನು Desktop ನಲ್ಲಿ ಸೇವ್ ಮಾಡುವೆನು.
04:47 Save ಬಟನ್ ಅನ್ನು ಕ್ಲಿಕ್ ಮಾಡಿ.
04:50 Hillshade ಅನ್ನು Mode ಆಯ್ಕೆಯಾಗಿ ಆರಿಸಿಕೊಳ್ಳಿ.
04:54 ಇಲ್ಲಿ ಡಿಫಾಲ್ಟ್ ಆಗಿ Hillshade ಈಗಾಗಲೇ ಆಯ್ಕೆಯಾಗಿದೆ.
04:59 Load into canvas when finished ನ ಮುಂದಿರುವ ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ.
05:05 ಇಲ್ಲಿ ಇದಾಗಲೇ ಡಿಫಾಲ್ಟ್ ಆಗಿ ಆಯ್ಕೆಯಾಗಿದೆ.
05:09 ಡಿಫಾಲ್ಟ್ ಸೆಟ್ಟಿಂಗ್ಸ್ ಗಳನ್ನು ಹಾಗೆಯೇ ಬಿಡಿ.
05:12 Ok ಬಟನ್ ಅನ್ನು ಕ್ಲಿಕ್ ಮಾಡಿ.
05:15 Processing Completed ಎಂಬ ಸಂದೇಶವನ್ನೊಳಗೊಂಡ ಒಂದು ಪಾಪ್ ಅಪ್ ಬಾಕ್ಸ್ ತೆರೆದುಕೊಳ್ಳುತ್ತದೆ.

OK ಬಟನ್ ಅನ್ನು ಕ್ಲಿಕ್ ಮಾಡಿ.

05:22 Qgis.bin ಡಯಲಾಗ್ ಬಾಕ್ಸ್ ನಲ್ಲಿ, OK ಬಟನ್ ಅನ್ನು ಕ್ಲಿಕ್ ಮಾಡಿ.
05:27 DEM ಡಯಲಾಗ್ ಬಾಕ್ಸ್ ನಲ್ಲಿ Close ಬಟನ್ ಅನ್ನು ಕ್ಲಿಕ್ ಮಾಡಿ.
05:32 ಈಗ, Hillshade ಎನ್ನುವ ಹೊಸ ಲೇಯರ್ Layers panel ನಲ್ಲಿ ಸೇರ್ಪಡೆಯಾಗಿದೆ.
05:37 ಕ್ಯಾನ್ವಾಸ್ ನ ಮೇಲೆ, Hillshade ಮೋಡ್ ನಲ್ಲಿ ರಾಸ್ಟರ್ ಮ್ಯಾಪ್ ಅನ್ನು ನೋಡುವಿರಿ.
05:42 ಈ ಮ್ಯಾಪ್ ಅನ್ನು, 3D ಇಮೇಜ್ ಅನ್ನು ರಚಿಸಲು, ನೆರಳು ಬೆಳಕಿನ ರೂಪದಲ್ಲಿ ರಚಿಸಲಾಗಿದೆ.
05:48 ಮಾದರಿಯನ್ನು ಹೆಚ್ಚು ಎದ್ದು ಕಾಣುವಂತೆ ಮಾಡಲು, ನಾವು Hillshade ಅನ್ನು ಓವರ್‌ಲೇ ಆಗಿ ಬಳಸುತ್ತೇವೆ.
05:54 ಈಗ ನಾವು ಅಸಲಿ DEM ಲೇಯರ್ ನ symbology ಯನ್ನು ಬದಲಿಸೋಣ.
05:59 Layers ಪ್ಯಾನಲ್ ನಲ್ಲಿ, srtm layer ಅನ್ನು ರೈಟ್ ಕ್ಲಿಕ್ ಮಾಡಿ.
06:04 ಕಂಟೆಕ್ಸ್ಟ್ ಮೆನ್ಯುವಿನಿಂದ Properties ಆಯ್ಕೆಯನ್ನು ಆರಿಸಿ.
06:09 Layer Properties ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. .
06:13 ಎಡ ಪ್ಯಾನಲ್ ನಿಂದ Style ಅನ್ನು ಆಯ್ಕೆ ಮಾಡಿ.
06:17 Band Rendering (ಬ್ಯಾಂಡ್ ರೆಂಡರಿಂಗ್) ವಿಭಾಗದಡಿಯಲ್ಲಿ, Render type ಅನ್ನು Singleband pseudocolor (ಸಿಂಗಲ್ ಬ್ಯಾಂಡ್ ಸ್ಯುಡೋಕಲರ್) ಎಂದು ಬದಲಿಸಿ.
06:24 Load minimum/maximum values (ಲೋಡ್ ಮಿನಿಮಮ್/ಮ್ಯಾಕ್ಸಿಮಮ್ ವ್ಯಾಲ್ಯುಸ್) ನಲ್ಲಿ , minimum/maximum ರೇಡಿಯೋ ಬಟನ್ ಅನ್ನು ಕ್ಲಿಕ್ ಮಾಡಿ.
06:33 Interpolation ಡ್ರಾಪ್ ಡೌನ್ ನಿಂದ Linear ಅನ್ನು ಆಯ್ಕೆ ಮಾಡಿ.
06:37 ಇದು ಇಲ್ಲಿ ಒಂದು ಡಿಫಾಲ್ಟ್ ಆಯ್ಕೆಯಾಗಿದೆ.

Color ಡ್ರಾಪ್ ಡೌನ್ ನಿಂದ Spectral (ಸ್ಪೆಕ್ಟ್ರಲ್) ಅನ್ನು ಆಯ್ಕೆ ಮಾಡಿ.

06:44 ಕೆಳಕ್ಕೆ ಸ್ಕ್ರೋಲ್ ಮಾಡಿ.

ಡ್ರಾಪ್ ಡೌನ್ ನಿಂದ Mode ಅನ್ನು Continuous ಎಂದು ಆಯ್ಕೆ ಮಾಡಿ.

06:50 Classify ಬಟನ್ ಅನ್ನು ಕ್ಲಿಕ್ ಮಾಡಿ.
06:53 5 ಹೊಸ ಕಲರ್ ವ್ಯಾಲ್ಯುಗಳು ರಚನೆಯಾಗಿವೆ.
06:57 ಬಣ್ಣಗಳು, ಕನಿಷ್ಟದಿಂದ ಗರಿಷ್ಟದ ವರೆಗೆ ರಾಸ್ಟರ್ ನ ಎಲಿವೇಷನ್ ವ್ಯಾಲ್ಯುಗಳನ್ನು ಪ್ರತಿನಿಧಿಸುತ್ತದೆ.
07:04 Apply ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ಕೆಳಗಡೆ ಬಲ ಮೂಲೆಯಲ್ಲಿರುವ OK ಬಟನ್ ಅನ್ನು ಕ್ಲಿಕ್ ಮಾಡಿ.
07:10 Layers ಪ್ಯಾನಲ್ ನಲ್ಲಿ, Hillshade ಲೇಯರ್ ಅನ್ನು ನಿಷ್ಕ್ರಿಯಗೊಳಿಸಿ.
07:14 Hillshade ನ ಮುಂದಿರುವ ಚೆಕ್ ಬಾಕ್ಸ್ ಅನ್ನು ಅನ್ಚೆಕ್ ಮಾಡಿ.
07:18 ಈಗ ನೀವು ಕ್ಯಾನ್ವಾಸ್ ನ ಮೇಲೆ ಸ್ಪೆಕ್ಟ್ರಲ್ ಕಲರ್ ನಲ್ಲಿ ಮ್ಯಾಪ್ ಅನ್ನು ನೋಡಬಹುದು.
07:24 ಕೆಂಪು ಬಣ್ಣದ ಟೆರೇನ್ ಕನಿಷ್ಟ ಎಲಿವೇಟ್ ಆಗಿರುವ ಹಾಗು ನೀಲಿ ಬಣ್ಣವು ಹೆಚ್ಚು ಎಲಿವೇಟ್ ಆಗಿರುವ ಟೆರೇನ್ ಅನ್ನು ಸೂಚಿಸುತ್ತದೆ.
07:30 Hillshade layer ಅನ್ನು ಸಕ್ರಿಯಗೊಳಿಸಿ.
07:33 Layers Properties ಡಯಲಾಗ್ ಬಾಕ್ಸ್ ಅನ್ನು ತೆರೆಯಿರಿ.
07:37 ಎಡ ಪ್ಯಾನಲ್ ನಲ್ಲಿ Transparency ಅನ್ನು ಆಯ್ಕೆ ಮಾಡಿ.
07:41 Global transparency ಯನ್ನು ಸ್ಲೈಡರ್ ಅನ್ನು ಎಳೆಯುವುದರ ಮೂಲಕ 50% ಕ್ಕೆ ಸೆಟ್ ಮಾಡಿ.
07:47 Apply ಬಟನ್ ಅನ್ನೂ, ನಂತರ OK ಬಟನ್ ಅನ್ನೂ ಕ್ಲಿಕ್ ಮಾಡಿ.
07:51 ಮ್ಯಾಪ್ ಅನ್ನು ಝೂಮ್ ಮಾಡಿ.
07:53 ನೀವು ಕ್ಯಾನ್ವಾಸ್ ನ ಮೇಲೆ, ಭೂ ಪ್ರದೇಶದ ಸುಧಾರಿತ ಸ್ಥಳಾಕೃತಿಯನ್ನು (ಟೋಪೋಗ್ರಫಿ) ನೋಡಬಹುದು.
08:00 ಸಂಕ್ಷಿಪ್ತವಾಗಿ,
08:03 ಈ ಟ್ಯುಟೋರಿಯಲ್ ನಲ್ಲಿ ನಾವು,

SRTM (ಎಸ್.ಆರ್.ಟಿ.ಎಂ) ಡಾಟಾ ವೈಬ್ಸೈಟ್ ನಿಂದ DEM ಡಾಟಾವನ್ನು ಡೌನ್ಲೋಡ್ ಮಾಡುವುದು,

08:11 DEM ನ ಹಿಲ್ಶೇ ಡ್ ಅನ್ನು ತೋರಿಸುವುದು – ಇವುಗಳ ಕುರಿತು ಕಲಿತಿದ್ದೇವೆ.
08:15 ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ.
08:17 ರಾಸ್ಟರ್ ಮ್ಯಾಪ್ ಗೆ Slope ಮೋಡ್ ಅನ್ನು ಬಳಸಿ, ಟೆರೇನ್ ಅನ್ನು ದೃಶ್ಯೀಕರಿಸಿ. Slope ಲೇಯರ್ ನ ಸಿಂಬೋಲಜಿಯನ್ನು ಬದಲಿಸಿ.
08:27 ಸುಳಿವು : Mode ಅನ್ನು Slope ಎಂದು ಆಯ್ಕೆ ಮಾಡಿ ಮತ್ತು ಅದನ್ನು ಓವರ್ಲೇ ಆಗಿ ಬಳಸಿ.
08:33 ನಿಮ್ಮ ಪೂರ್ಣಗೊಂಡ ಅಸೈನ್ಮೆಂಟ್ ಇಲ್ಲಿ ತೋರಿಸಿರುವಂತೆ ಕಾಣಬೇಕು.
08:38 ಕೆಳಗಿನ ಲಿಂಕ್ನಲ್ಲಿರುವ ವೀಡಿಯೊ ಸ್ಪೋಕನ್ ಟ್ಯುಟೋರಿಯಲ್ ಯೋಜನೆಯನ್ನು ಕುರಿತು ವಿವರಿಸುತ್ತದೆ.

ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ.

08:45 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡ, ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ನಮ್ಮ ಆನ್ಲೈನ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ.

ವಿವರಗಳಿಗಾಗಿ, ದಯವಿಟ್ಟು ನಮಗೆ ಬರೆಯಿರಿ.

08:54 ನೀವು ಪ್ರಶ್ನೆಯನ್ನು ಹೊಂದಿರುವ ನಿಮಿಷ ಮತ್ತು ಸೆಕೆಂಡ್ ಅನ್ನು ಆರಿಸಿ.

ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.

08:58 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗೆ NMEICT, MHRD, ಭಾರತ ಸರ್ಕಾರ ಧನಸಹಾಯ ನೀಡುತ್ತದೆ.
09:06 ಅನುವಾದ ಮತ್ತು ಧ್ವನಿ ಶ್ರೀ ನವೀನ ಭಟ್ಟ ಉಪ್ಪಿನಪಟ್ಟಣ. ಧನ್ಯವಾದಗಳು.

Contributors and Content Editors

NaveenBhat