QGIS/C2/Vector-Data-Styling/Kannada
From Script | Spoken-Tutorial
Time | Narration | ||
00:01 | QGIS ನಲ್ಲಿVector Data Styling ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. | ||
00:07 | ಈ ಟ್ಯುಟೋರಿಯಲ್ ನಲ್ಲಿ ನಾವು,
QGIS ನಲ್ಲಿ ವೆಕ್ಟರ್ ಡಾಟಾವನ್ನು ಲೋಡ್ ಮಾಡುವುದು, | ||
00:14 | Single symbol ಸ್ಟೈಲಿಂಗ್ , Categorized ಸ್ಟೈಲಿಂಗ್, ಮತ್ತು, Graduated ಸ್ಟೈಲಿಂಗ್ ಅನ್ನು ಬಳಸಿ, ವೆಕ್ಟರ್ ಡಾಟಾವನ್ನು ಸ್ಟೈಲ್ ಮಾಡುವುದು ಮತ್ತು | ||
00:25 | ಲೇಬಲಿಂಗ್ ಫೀಚರ್ ಗಳನ್ನು ಕುರಿತು ಕಲಿಯುವೆವು. | ||
00:28 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು
ಉಬಂಟು ಲಿನಕ್ಸ್ ಒ.ಎಸ್ 16.04 ಆವೃತ್ತಿ ಮತ್ತು QGIS ಆವೃತ್ತಿ 2.18 – ಇವುಗಳನ್ನು ಬಳಸುತ್ತಿದ್ದೇನೆ. | ||
00:39 | ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು QGIS ಇಂಟರ್ಫೇಸ್ ನ ಕುರಿತು ತಿಳಿದಿರಬೇಕು. | ||
00:46 | ಇಲ್ಲವಾದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ನಮ್ಮ ವೆಬ್ ಸೈಟ್ ಅನ್ನು ಭೇಟಿಮಾಡಿ. | ||
00:51 | ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು ಪ್ಲೇಯರ್ ನ ಕೆಳಗಿರುವ, Code files ಲಿಂಕ್ ನಲ್ಲಿ ಕೊಟ್ಟಿರುವ ಫೋಲ್ಡರ್ ಅನ್ನು ಡೌನ್ ಲೋಡ್ ಮಾಡಿ. | ||
01:01 | ಡೌನ್ಲೋಡ್ ಆದ ಝಿಪ್ ಫೈಲ್ ನಲ್ಲಿರುವ ಕಂಟೆಂಟ್ ಗಳನ್ನು ಎಕ್ಸ್ಟ್ರ್ಯಾಕ್ಟ್ ಮಾಡಿಕೊಳ್ಳಿ. | ||
01:05 | ಎಕ್ಸ್ಟ್ರ್ಯಾಕ್ಟ್ ಆದ ಫೋಲ್ಡರ್ ನಲ್ಲಿ, world.shp ಫೈಲ್ ಅನ್ನು ಹುಡುಕಿ. | ||
01:11 | ನಾನು ಈಗಾಗಲೇ ಕೋಡ್ ಫೈಲ್ ಅನ್ನು ಡೌನ್ಲೋಡ್ ಮಾಡಿರುವೆನು, ಎಕ್ಸ್ಟ್ರ್ಯಾಕ್ಟ್ ಮಾಡಿ ಮತ್ತುDesktop ನಲ್ಲಿ ಸೇವ್ ಮಾಡಿದ್ದೇನೆ. | ||
01:19 | code-file ಅನ್ನು ತೆರೆಯಲು, ಅದನ್ನು ಡಬಲ್ ಕ್ಲಿಕ್ ಮಾಡಿ. | ||
01:24 | world.shp ಫೈಲ್ ನ ಮೇಲೆ ರೈಟ್ ಕ್ಲಿಕ್ ಮಾಡಿ. | ||
01:29 | ಕಂಟೆಕ್ಸ್ಟ್ ಮೆನ್ಯುವಿನಿಂದ, Open with QGIS Desktop ಆಯ್ಕೆಯನ್ನು ಆರಿಸಿಕೊಳ್ಳಿ. | ||
01:36 | QGIS ಇಂಟರ್ಫೇಸ್ ತೆರೆದುಕೊಳ್ಳುತ್ತದೆ. | ||
01:39 | QGIS Tips ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. | ||
01:43 | ಡಯಲಾಗ್ ಬಾಕ್ಸ್ ಅನ್ನು ಮುಚ್ಚಲು, OK ಬಟನ್ ಅನ್ನು ಕ್ಲಿಕ್ ಮಾಡಿ. | ||
01:49 | ಡಿಫಾಲ್ಟ್ ರೀತಿಯಲ್ಲಿ, ಕ್ಯಾನ್ವಾಸ್ ನ ಮೇಲೆ ವರ್ಲ್ಡ್ ಮ್ಯಾಪ್ ಲೋಡ್ ಆಗುತ್ತದೆ. | ||
01:54 | Layers Panel ನಲ್ಲಿ, ನೀವು world ಲೇಯರ್ ಅನ್ನು ನೋಡಬಹುದು. | ||
01:58 | world ಲೇಯರ್ ಅನ್ನು ರೈಟ್ ಕ್ಲಿಕ್ ಮಾಡಿ. | ||
02:01 | ಕಂಟೆಕ್ಸ್ಟ್ ಮೆನ್ಯುವಿನಿಂದ, Open Attribute Table ಆಯ್ಕೆ ಮಾಡಿ. | ||
02:06 | ಈ ಲೇಯರ್ ಗೆ Attribute ಟೇಬಲ್ ತೆರೆದುಕೊಳ್ಳುತ್ತದೆ. | ||
02:10 | ಇಲ್ಲಿ ನಾವು, ರೋ ಮತ್ತು ಕಾಲಮ್ ಗಳಲ್ಲಿ ಆವರಿಸಿರುವ ವಿವಿಧ ಫೀಚರ್ ಗಳ ಡಾಟಾವನ್ನು ನೋಡಬಹುದು. | ||
02:18 | ADMIN ಕಾಲಮ್ ನಲ್ಲಿ ದೇಶದ ಹೆಸರನ್ನು ಕೊಡಲಾಗಿದೆ. | ||
02:22 | ಸ್ಲೈಡರ್ ಅನ್ನು ಟೇಬಲ್ ನ ಕೆಳಭಾಗದವರೆಗೆ ಎಳೆದು ತನ್ನಿ ಮತ್ತು POP_EST ಕಾಲಮ್ ಗೆ ಹೋಗಿ. | ||
02:30 | ಈ ಕಾಲಮ್ ನಲ್ಲಿ ಹಲವಾರು ದೇಶಗಳ ಜನಸಂಖ್ಯೆಯನ್ನು ಪಟ್ಟಿ ಮಾಡಲಾಗಿದೆ. | ||
02:35 | ಈಗ ನಾವು ಇಲ್ಲಿ ತೋರಿಸಿರುವ ಜನಸಂಖ್ಯೆಯ ಡಾಟಾವನ್ನು, ವರ್ಲ್ಡ್ ಮ್ಯಾಪ್ ನ ಮೇಲೆ ವಿವಿಧ ಸ್ಟೈಲ್ ಗಳನ್ನು ಬಳಸಿ ಚಿತ್ರಿಸುವೆವು. | ||
02:43 | attribute ಟೇಬಲ್ ಅನ್ನು ಕ್ಲೋಸ್ ಮಾಡಿ. | ||
02:46 | world ಲೇಯರ್ ಅನ್ನು ರೈಟ್ ಕ್ಲಿಕ್ ಮಾಡಿ. | ||
02:49 | context menu ನಿಂದ Properties ಆಯ್ಕೆಯನ್ನು ಆಯ್ಕೆ ಮಾಡಿ. | ||
02:53 | Layer Properties ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. | ||
02:57 | ಎಡ ಪ್ಯಾನಲ್ ನಿಂದ Style ಟ್ಯಾಬ್ ಅನ್ನು ಕ್ಲಿಕ್ ಮಾಡಿ. | ||
03:01 | Style ಟ್ಯಾಬ್ ನಡಿಯಲ್ಲಿ, ಹಲವಾರು ಸ್ಟೈಲ್ ಗಳು ಲಭ್ಯವಿದೆ. | ||
03:05 | ಡಯಲಾಗ್ ಬಾಕ್ಸ್ ನ ಮೇಲ್ಭಾಗದ ಎಡ ಮೂಲೆಯಲ್ಲಿರುವ ಡ್ರಾಪ್ ಡೌನ್ ಬಟನ್ ಅನ್ನು ಒತ್ತಿ. | ||
03:11 | ಇಲ್ಲಿ ನೀವು ವಿವಿಧ ಸ್ಟೈಲಿಂಗ್ ಆಯ್ಕೆಗಳನ್ನು ಕಾಣಬಹುದು. | ||
03:15 | ಈ ಟ್ಯುಟೋರಿಯಲ್ ನಲ್ಲಿ ನಾವು ಮೊದಲ ಮೂರು ಆಯ್ಕೆಗಳನ್ನು ನೋಡುವೆವು. | ||
03:19 | Single Symbol ಆಯ್ಕೆಯನ್ನು ಆರಿಸಿಕೊಳ್ಳಿ. | ||
03:22 | ಈ ಆಯ್ಕೆಯು ಸಿಂಗಲ್ ಸ್ಟೈಲ್ ಅನ್ನು ಆರಿಸಿಕೊಳ್ಳಲು ಬಿಡುತ್ತದೆ. | ||
03:27 | ಲೇಯರ್ ನ ಎಲ್ಲ ಫೀಚರ್ ಗಳಿಗೂ ಆಯ್ಕೆ ಮಾಡಿದ ಸ್ಟೈಲ್ ಅನ್ವಯವಾಗುತ್ತದೆ. | ||
03:32 | Fill ಪ್ಯಾನಲ್ ನ ಅಡಿಯಲ್ಲಿ ಲಭ್ಯವಿರುವ್, add Symbol layer ಬಟನ್ ಅನ್ನು ಕ್ಲಿಕ್ ಮಾಡಿ. | ||
03:38 | Symbol layer type ನ ಕೆಳಗೆ ಹಲವಾರು ಸ್ಟೈಲ್ ಆಯ್ಕೆಗಳು ಕಾಣಿಸುತ್ತವೆ. | ||
03:43 | ಇದು ಪಾಲಿಗನ್ (ಬಹುಭುಜಾಕೃತಿ) ಯ ಡಾಟಾ ಸೆಟ್ ಆಗಿರುವುದರಿಂದ, ನಿಮಗೆ ಎರಡು ಆಯ್ಕೆಗಳಿವೆ. | ||
03:48 | ನೀವು ಬಹುಭುಜಾಕೃತಿಯನ್ನು ಬಣ್ಣದಿಂದ ತುಂಬಿಸಬಹುದು ಮತ್ತು ನಿಮ್ಮ ಆಯ್ಕೆಯ ಶೈಲಿಯಲ್ಲಿ ತುಂಬಿಸಬಹುದು. | ||
03:55 | Outline ನ ಬಣ್ಣ, ಸ್ಟೈಲ್(ಶೈಲಿ) ಮತ್ತು ಅಗಲವನ್ನೂ ಕೂಡ ಬದಲಿಸಬಹುದು. | ||
04:02 | Fill ಡ್ರಾಪ್ ಡೌನ್ ನ ಮುಂದೆ ಇರುವ ಡ್ರಾಪ್ ಡೌನ್ ಆರೋ ವನ್ನು ಕ್ಲಿಕ್ ಮಾಡಿ. | ||
04:06 | ಬಣ್ಣದ ತ್ರಿಕೋಣ ತೆರೆದುಕೊಳ್ಳುತ್ತದೆ. | ||
04:09 | ಈ ಬಣ್ಣದ ತ್ರಿಕೋನವನ್ನು ತಿರುಗಿಸಿ ನಿಮಗೆ ಬೇಕಾದ ಬಣ್ಣವನ್ನು ಆರಿಸಿಕೊಳ್ಳಿ.
ನಾನು ನೀಲಿ ಬಣ್ಣವನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. | ||
04:17 | ಇದೇ ರೀತಿ Outline ನ ಬಣ್ಣವನ್ನು ಆರಿಸಿಕೊಳ್ಳಿ. | ||
04:21 | ನಾನು ಹಳದಿ ಬಣ್ಣವನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. | ||
04:25 | Fill style ಅನ್ನು Dense1 ಎಂದೂ, | ||
04:29 | Outline style ಅನ್ನು, solid line ಎಂದೂ ಆಯ್ಕೆ ಮಾಡಿಕೊಳ್ಳುತ್ತೇನೆ. | ||
04:33 | Outline width, ಅನ್ನು 0.46 millimeters ಗೆ ಸೆಟ್ ಮಾಡಿ. | ||
04:38 | ಇನ್ನೂ ಹಲವಾರು ಸ್ಟೈಲ್ ನ ಆಯ್ಕೆಗಳನ್ನು ನೋಡಲು ಲಭ್ಯವಿದೆ. | ||
04:43 | ಸ್ಟೈಲಿಂಗ್ ಅನ್ನು ಮುಗಿಸಿದ ನಂತರ, Layers Properties ಡಯಲಾಗ್ ಬಾಕ್ಸ್ ನ ಕೆಳಭಾಗದ ಎಡಮೂಲೆಯಲ್ಲಿರುವ OK ಬಟನ್ ಅನ್ನು ಕ್ಲಿಕ್ ಮಾಡಿ. | ||
04:52 | ಕ್ಯಾನ್ವಾಸ್ ನ ಮೇಲೆ, ನೀವು ಆಯ್ಕೆ ಮಾಡಿಕೊಂಡಿರುವ ಸ್ಟೈಲ್ ನ ಮಾದರಿಗೆ ಅನುಸಾರವಾಗಿ, ಲೇಯರ್ ಗೆ ಅನ್ವಯವಾಗಿರುವ ಹೊಸ ಸ್ಟೈಲ್ ಅನ್ನು ನೋಡುವಿರಿ. | ||
04:59 | ಈಗ ನಾವು ಪಾಪ್ಯುಲೇಷನ್ (ಜನಸಂಖ್ಯಾ) ಡಾಟಾವನ್ನು ಮ್ಯಾಪ್ ಮಾಡುವುದು ಹೇಗೆ ಎಂದು ನೋಡೋಣ. | ||
05:03 | ಪಾಪ್ಯುಲೇಷನ್ ಡಾಟಾವನ್ನು ಮ್ಯಾಪ್ ಮಾಡಲು, Single Symbol ಸ್ಟೈಲ್ ಅಷ್ಟೊಂದು ಉಪಯುಕ್ತವಲ್ಲ. | ||
05:09 | ಈಗ ಇನ್ನೊಂದು ಸ್ಟೈಲ್ ಆಯ್ಕೆಯನ್ನು ನೋಡೋಣ. | ||
05;13 | world ಲೇಯರ್ ನ ಮೇಲೆ ರೈಟ್ ಕ್ಲಿಕ್ ಮಾಡಿ, Properties ಆಯ್ಕೆಯನ್ನು ಆರಿಸಿಕೊಳ್ಳಿ. | ||
05:19 | Layers Properties ಡಯಲಾಗ್ ಬಾಕ್ಸ್ ನಲ್ಲಿ, ಈ ಬಾರಿ ನಾವು Style ಟ್ಯಾಬ್ ನಿಂದ Categorized ಅನ್ನು ಆಯ್ಕೆ ಮಾಡೋಣ. | ||
05:26 | Categorized (ಕ್ಯಾಟಗರೈಝ್ಡ್) ಎಂದರೆ, ಲೇಯರ್ ನಲ್ಲಿ ಪೀಚರ್ (ವೈಶಿಷ್ಟ್ಯ) ಗಳನ್ನು ಬಣ್ಣದ ವಿವಿಧ ಛಾಯೆಗಳಲ್ಲಿ ತೋರಿಸಲಾಗುತ್ತದೆ. | ||
05:33 | ಈ ಬಣ್ಣದ ಛಾಯೆಗಳು attribute fields ಗಳ ಅನನ್ಯವಾದ ವ್ಯಾಲ್ಯುಗಳನ್ನು ಅವಲಂಭಿಸಿವೆ. | ||
05:39 | ನಾವು ಜನಸಂಖ್ಯಾ ಡಾಟಾವನ್ನು ಮ್ಯಾಪ್ ಮಾಡಲು ಪ್ರಯತ್ನಿಸುತ್ತಿರುವುದರಿಂದ, Column ಡ್ರಾಪ್ ಡೌನ್ ನಲ್ಲಿ ನಾವು POP_EST ಅನ್ನು ಆಯ್ಕೆ ಮಾಡುವೆವು. | ||
05:48 | ಡ್ರಾಪ್ ಡೌನ್ ನಿಂದ ನಿಮ್ಮ ಆಯ್ಕೆಯ ಕಲರ್ ರ್ಯಾಂ ಪ್ ಅನ್ನು ಆಯ್ಕೆಮಾಡಿಕೊಳ್ಳಿ. ನಾನು
ನಾನು Blues ಅನ್ನು ಆಯ್ಕೆ ಮಾಡುವೆನು. | ||
05:55 | ಮಧ್ಯದ ಪ್ಯಾನಲ್ ನ ಕೆಳಭಾಗದಲ್ಲಿರುವ, Classify ಬಟನ್ ಅನ್ನು ಕ್ಲಿಕ್ ಮಾಡಿ. | ||
06:00 | ಮಧ್ಯದಲ್ಲಿರುವ ಪ್ಯಾನಲ್, ಹಲವಾರು ಕ್ಲಾಸ್ ಗಳನ್ನು ಅವುಗಳ ಸಂಬಂಧಿತ ವ್ಯಾಲ್ಯುಗಳೊಂದಿಗೆ ತೋರಿಸುತ್ತದೆ. | ||
06:07 | ಕೆಳಗಡೆ ಬಲ ಮೂಲೆಯಲ್ಲಿರುವ OK ಅನ್ನು ಒತ್ತಿ. | ||
06:11 | ವರ್ಲ್ಡ್ ಮ್ಯಾಪ್ ನಲ್ಲಿ, ಬೇರೆ ಬೇರೆ ದೇಶಗಳು, ನೀಲಿಬಣ್ಣದ ಛಾಯೆಯಲ್ಲಿ ಕಾಣಿಸುವುದನ್ನು ನೀವು ನೋಡಬಹುದು. | ||
06:17 | ಮ್ಯಾಪ್ ಅನ್ನು ಝೂಮ್ ಇನ್ ಮತ್ತು ಝೂಮ್ ಔಟ್ ಮಾಡಲು ಮೌಸ್ ನ ಮಧ್ಯದ ಗುಂಡಿಯನ್ನು ಸ್ಕ್ರೋಲ್ ಮಾಡಿ. | ||
06:22 | ತಿಳಿಬಣ್ಣಗಳು ಕಡಿಮೆ ಜನಸಂಖ್ಯೆ ಯನ್ನು ಪ್ರತಿನಿಧಿಸುತ್ತವೆ. | ||
06:26 | ಗಾಢಬಣ್ಣವು ಹೆಚ್ಚು ಜನಸಂಖ್ಯೆಯನ್ನು ಪ್ರತಿನಿಧಿಸುತ್ತದೆ. | ||
06:31 | ಮತ್ತೊಮ್ಮೆ Layers Properties ಡಯಲಾಗ್ ಬಾಕ್ಸ್ ಅನ್ನು ತೆರೆಯಿರಿ. | ||
06:37 | Style ಟ್ಯಾಬ್ ನಲ್ಲಿ, ಡ್ರಾಪ್ ಡೌನ್ ಬಟನ್ ನ ಮೇಲೆ ಕ್ಲಿಕ್ ಮಾಡಿ. | ||
06:41 | ಈಗ ನಾವು Graduated ಸಿಂಬೋಲೊಜಿಯನ್ನು ನೋಡೋಣ.
Graduated ಆಯ್ಕೆಯನ್ನು ಆರಿಸಿಕೊಳ್ಳಿ. | ||
06:48 | Graduated ಸಿಂಬೋಲೋಜಿ ಯು ಒಂದು ಕಾಲಮ್ ನಲ್ಲಿರುವ ಡಾಟಾವನ್ನು ಅನನ್ಯವಾದ ಕ್ಲಾಸ್ ಗಳಾಗಿ ವಿಭಾಗಿಸಿಸಲು ಬಿಡುತ್ತದೆ. | ||
06:55 | ನಾವು ಪ್ರತಿಯೊಂದು ಕ್ಲಾಸ್ ಗೂ ಬೇರೆ ಬೇರೆ ಸ್ಟೈಲ್ ಅನ್ನು ಆರಿಸಿಕೊಳ್ಳಬಹುದು. | ||
07:00 | Column ಡ್ರಾಪ್ ಡೌನ್ ನಲ್ಲಿ , POP_EST ಅನ್ನು ಆಯ್ಕೆ ಮಾಡಿ. | ||
07:06 | ನಾವು ಈ ಜನಸಂಖ್ಯೆಯ ಡಾಟಾವನ್ನು 3 ವಿಭಾಗಗಳಾಗಿ ವಿಂಗಡಿಸಬಹುದು, ಅಂದರೆ ಲೋ(ಕಡಿಮೆ), ಮೀಡಿಯಂ (ಮಧ್ಯಮ) ಮತ್ತು ಹೈ (ಗರಿಷ್ಟ) ಎಂದು ವಿಂಗಡಿಸಬಹುದು. | ||
07:13 | ಅದಕ್ಕಾಗಿ, Classes ಡ್ರಾಪ್-ಡೌನ್ ನಡಿಯಲ್ಲಿ 3 ಎಂದು ಆಯ್ಕೆ ಮಾಡಿ. | ||
07:18 | ನೀವು ಪ್ಯಾನಲ್ ನಲ್ಲಿ, 3 ಕ್ಲಾಸ್ ಗಳನ್ನು ಅವುಗಳ ವ್ಯಾಲ್ಯುಗಳೊಂದಿಗೆ ನೋಡಬಹುದು. | ||
07:25 | Classify ಬಟನ್ ಅನ್ನು ಕ್ಲಿಕ್ ಮಾಡಿ. | ||
07:28 | Mode ಡ್ರಾಪ್ ಡೌನ್ ನ ಮೇಲೆ ಕ್ಲಿಕ್ ಮಾಡಿ. | ||
07:31 | ಇಲ್ಲಿ ಹಲವು Mode ಆಯ್ಕೆಗಳು ಲಭ್ಯವಿದೆ. | ||
07:35 | ಇದನ್ನು ಸರಳವಾಗಿಡಲು, Quantile (ಕ್ವಾಂಟೈಲ್) ಮೋಡ್ ಅನ್ನು ಬಳಸೋಣ. | ||
07:40 | ಈ ಮೋಡ್ ಗಳು ಬೇರೆ ಬೇರೆ ಸಾಂಖ್ಯಿಕ ಆಲ್ಗಾರಿದಮ್ ಗಳನ್ನು ಬಳಸಿ, ಡಾಟಾ ವನ್ನು ಪ್ರತ್ಯೇಕ ಕ್ಲಾಸ್ ಗಳಾಗಿ ವಿಭಾಗಿಸುತ್ತವೆ. | ||
07:47 | ಗಮನಿಸಿ, Graduated ಸ್ಟೈಲ್ ನಲ್ಲಿ ಬಳಸುವ ಅಟ್ರಿಬ್ಯೂಟ್ ಯಾವಾಗಲೂ ಸಂಖ್ಯೆಯೇ ಆಗಿರಬೇಕು. | ||
07:55 | ಸಂಖ್ಯೆಯೂ ಪೂರ್ಣಸಂಖ್ಯೆ ಅಥವಾ ದಶಮಾಂಶ ವ್ಯಾಲ್ಯುವಾಗಿರಬಹುದು. | ||
08:00 | Attribute ಫೀಲ್ಡ್ ನಲ್ಲಿ String type ಅನ್ನು ಈ ಸ್ಟೈಲಿಂಗ್ ಆಯ್ಕೆಯಲ್ಲಿ ಬಳಸುವಂತಿಲ್ಲ. | ||
08:06 | OK ಬಟನ್ ಅನ್ನು ಕ್ಲಿಕ್ ಮಾಡಿ. | ||
08:10 | ಈಗ ನೀವು ಮ್ಯಾಪ್ ನಲ್ಲಿ 3 ದೇಶಗಳು ನೀಲಿಬಣ್ಣದ ಬೇರೆ ಬೇರೆ ಛಾಯೆಗಳನ್ನು ಹೊಂದಿರುವುದನ್ನು ನೋಡಬಹುದು. | ||
08:16 | ಈ ಬಣ್ಣದ ಛಾಯೆಗಳು, ಆ ರಾಷ್ಟ್ರದ ಜನಸಂಖ್ಯೆಯನ್ನು ಪ್ರತಿನಿಧಿಸುತ್ತದೆ. | ||
08:22 | Layers Panel ಪ್ಯಾನಲ್ ನಲ್ಲಿ ನೀವು ಈ ಲೇಯರ್ ನ 3 ಕ್ಲಾಸ್ ಗಳನ್ನು ನೋಡುವಿರಿ. | ||
08:27 | ಇಲ್ಲಿ ಇನ್ನೂ ಕೆಲವು ಸ್ಟೈಲಿಂಗ್ ಆಯ್ಕೆಗಳು ಲಭ್ಯವಿದೆ. | ||
08:31 | ನಾವು ಪ್ರತಿ ಕ್ಲಾಸ್ ಗೂ ಬೇರೆ ಬೇರೆ ಸ್ಟೈಲ್ ಮತ್ತು ಬಣ್ಣವನ್ನು ಆರಿಸಿಕೊಳ್ಳಬಹುದು. | ||
08:37 | ಮತ್ತೆ Layer Properties ಡಯಲಾಗ್ ಬಾಕ್ಸ್ ಅನ್ನು ತೆರೆಯಿರಿ. | ||
08:42 | Classes ಟ್ಯಾಬ್ ನಲ್ಲಿ, Symbol ಕಾಲಮ್ ನಡಿಯಲ್ಲಿ, ಬಣ್ಣವಿರುವ ಬಾಕ್ಸ್ ಅನ್ನು ಡಬಲ್ ಕ್ಲಿಕ್ ಮಾಡಿ. | ||
08:49 | Symbol Selector ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. | ||
08:53 | Color ಡ್ರಾಪ್-ಡೌನ್ ಆಯ್ಕೆಯಲ್ಲಿ, ಡ್ರಾಪ್ ಡೌನ್ ಬಾಣದ ಗುರುತಿನ ಮೇಲೆ ಕ್ಲಿಕ್ ಮಾಡಿ. ಬಣ್ಣದ ತ್ರಿಕೋನ ತೆರೆದುಕೊಳ್ಳುತ್ತದೆ. | ||
09:01 | ಬೇಕಾದ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಲು ಬಣ್ಣದ ತ್ರಿಕೋನವನ್ನು ತಿರುಗಿಸಿ. | ||
09:05 | ನಾನು ಕಡಿಮೆ ಜನಸಂಖ್ಯೆಯನ್ನು ಸೂಚಿಸಲು ಕೆಂಪು ಬಣ್ಣವನ್ನು ಆರಿಸಿಕೊಳ್ಳುತ್ತೇನೆ. | ||
09:10 | Symbol selector ಡಯಲಾಗ್ ಬಾಕ್ಸ್ ನಲ್ಲಿ OK ಬಟನ್ ಅನ್ನು ಕ್ಲಿಕ್ ಮಾಡಿ. | ||
09:15 | ಇದೇ ರೀತಿಯಾಗಿ ಉಳಿದ ಎರಡು ಕ್ಲಾಸ್ ಗಳಿಗೂ ಬಣ್ಣವನ್ನು ಬದಲಿಸಿ. | ||
09:19 | ನಾನು ಮಧ್ಯಮ (ಮೀಡಿಯಂ) ಮತ್ತು ಗರಿಷ್ಟ (ಹೈ) ಕ್ಕೆ ಹಸಿರನ್ನು ಆಯ್ಕೆ ಮಾಡುವೆನು. | ||
09:35 | Legend ಕಾಲಮ್ ನಲ್ಲಿ ಮೊದಲನೆಯ ರೋ ದ ಮೇಲೆ ಡಬಲ್ ಕ್ಲಿಕ್ ಮಾಡಿ.
ಮೊದಲನೆಯ ರೋ ಗೆ, low ಎಂದು ಟೈಪ್ ಮಾಡಿ. | ||
09:42 | ಎರಡನೆಯ ರೋ ಗೆ Medium ಎಂದೂ,
ಮತ್ತು ಮೂರನೆಯ ರೋ ಗೆ High ಎಂದೂ ಟೈಪ್ ಮಾಡಿ. | ||
09:48 | ಆಯ್ಕೆ ಮಾಡಿಕೊಂಡ ವ್ಯಾಪ್ತಿಗಳನ್ನು ಎಡಿಟ್ ಮಾಡಲು , Values ಕಾಲಮ್ನಡಿಯಲ್ಲಿ, ಮೊದಲ ರೋ ದ ಮೇಲೆ ಡಬಲ್ ಕ್ಲಿಕ್ ಮಾಡಿ. | ||
09:54 | Enter class bounds ಟೆಕ್ಸ್ಟ್ ಬಾಕ್ಸ್ ತೆರೆದುಕೊಳ್ಳುತ್ತದೆ. ನೀವು ಬಯಸಿದರೆ ನೀವು ಕನಿಷ್ಟ ವ್ಯಾಲ್ಯು ಮತ್ತು ಗರಿಷ್ಟ ವ್ಯಾಲ್ಯುವನ್ನು ಬದಲಾಯಿಸಬಹುದು. | ||
10:04 | ಈಗ ನಾವು ವ್ಯಾಲ್ಯುವನ್ನು ಬದಲಿಸದೇ ಹಾಗೇ ಬಿಡೋಣ.
OK ಬಟನ್ ಅನ್ನು ಕ್ಲಿಕ್ ಮಾಡಿ. | ||
10:10 | Layer Properties ಡಯಲಾಗ್ ಬಾಕ್ಸ್ ನಲ್ಲಿ OK ಬಟನ್ ಅನ್ನು ಕ್ಲಿಕ್ ಮಾಡಿ. | ||
10:15 | ವರ್ಲ್ಡ್ ಮ್ಯಾಪ್ ಅನ್ನು ಗಮನಿಸಿ. | ||
10:17 | ಈಗ ನಾವು ಲೋ(ಕನಿಷ್ಟ), ಮೀಡಿಯಂ( ಮಧ್ಯಮ) ಮತ್ತು ಹೈ( ಗರಿಷ್ಟ) ಜನಸಂಖ್ಯೆಯನ್ನು ತೋರಿಸಲು ಮೂರು ಬೇರೆ ಬೇರೆ ಬಣ್ಣಗಳನ್ನು ಹೊಂದಿದ್ದೇವೆ. | ||
10:24 | Layers Panel ಅನ್ನು ಗಮನಿಸಿ. | ||
10:27 | ಜನಸಂಖ್ಯಾ ಮೌಲ್ಯಗಳ ನಮ್ಮ ವ್ಯಾಖ್ಯಾನವನ್ನು ಪ್ರತಿನಿಧಿಸಲು ಸ್ಪಷ್ಟವಾಗಿ ಗುರುತಿಸಲಾದ ಕ್ಲಾಸ್ ಗಳ ಹೆಸರುಗಳು ಮತ್ತು ಬಣ್ಣಗಳಿವೆ. | ||
10:36 | ಈ ಹಿಂದಿನ ಎರಡು ಪ್ರಯತ್ನಗಳಿಗಿಂತ ಈ ಸ್ಟೈಲ್ ಇನ್ನೂ ಹೆಚ್ಚಿನ ಉಪಯುಕ್ತವಾದ , ಮ್ಯಾಪ್ ಅನ್ನು ನಮಗೆ ತೋರಿಸುತ್ತದೆ. | ||
10:42 | ಈಗ ವೆಕ್ಟರ್ ಫೈಲ್ ನಲ್ಲಿ ಬೇರೆ ಬೇರೆ ಫೀಚರ್ ಗಳನ್ನು ಲೇಬಲ್ ಮಾಡುವುದು ಹೇಗೆಂದು ನೋಡೋಣ. | ||
10:47 | ಈಗ ನಿದರ್ಶನಕ್ಕಾಗಿ ನಾವು ದೇಶಗಳ ಹೆಸರುಗಳನ್ನು ಲೇಬಲ್ ಮಾಡೋಣ. |- | 10:52 | ಮತ್ತೆ Layer Properties ಡಯಲಾಗ್ ಬಾಕ್ಸ್ ಅನ್ನು ತೆರೆಯಿರಿ. |
10:57 | ಎಡ ಪ್ಯಾನಲ್ ನಿಂದ, Labels ಟ್ಯಾಬ್ ಅನ್ನು ತೆರೆಯಿರಿ. | ||
11:01 | ಮೊದಲನೆಯ ಟೆಕ್ಸ್ಟ್ಬಾಕ್ಸ್ ಡ್ರಾಪ್ ಡೌನ್ ನಲ್ಲಿ, Show labels for this layer ಅನ್ನು ಆಯ್ಕೆ ಮಾಡಿ. | ||
11:08 | ಅಟ್ರಿಬ್ಯೂಟ್ ಟೇಬಲ್ ನಲ್ಲಿ, ADMIN ಕಾಲಮ್ ನಲ್ಲಿ ದೇಶಗಳ ಹೆಸರುಗಳ ಪಟ್ಟಿಯಿದೆ. | ||
11:14 | ಹಾಗಾಗಿ, Label with ಡ್ರಾಪ್-ಡೌನ್ ನಲ್ಲಿ, ADMIN ಅನ್ನು ಆಯ್ಕೆ ಮಾಡಿ. | ||
11:20 | style ಮೆನ್ಯುವಿನಲ್ಲಿ, Buffer ಅನ್ನು ಆಯ್ಕೆ ಮಾಡಿ. | ||
11:23 | Draw text buffer ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ. | ||
11:27 | ಅಗತ್ಯಕ್ಕೆ ತಕ್ಕಂತೆ, ಟೆಕ್ಸ್ಟ್ ನ ಗಾತ್ರವನ್ನು ಬದಲಿಸಬಹುದು. | ||
11:32 | color ಡ್ರಾಪ್-ಡೌನ್ ನಲ್ಲಿ ಬಣ್ಣವನ್ನು ಆಯ್ಕೆಮಾಡಿ. | ||
11:38 | OK ಬಟನ್ ಅನ್ನು ಕ್ಲಿಕ್ ಮಾಡಿ. | ||
11:40 | ವರ್ಲ್ಡ್ ಮ್ಯಾಪ್ ನಲ್ಲಿ ದೇಶಗಳ ಹೆಸರುಗಳು ಡಿಸ್ಪ್ಲೇ ಆಗಿರುವುದನ್ನು ನೋಡಬಹುದು. | ||
11:46 | ಸಂಕ್ಷಿಪ್ತವಾಗಿ, | ||
11:48 | ಈ ಟ್ಯುಟೋರಿಯಲ್ ನಲ್ಲಿ , ನಾವು QGIS ನಲ್ಲಿ ವೆಕ್ಟರ್ ಡಾಟಾವನ್ನು ಲೋಡ್ ಮಾಡುವುದನ್ನು, | ||
11:55 | ವೆಕ್ಟರ್ ಡಾಟಾವನ್ನು, Single symbol ಸ್ಟೈಲಿಂಗ್, Categorized ಸ್ಟೈಲಿಂಗ್, Graduated ಸ್ಟೈಲಿಂಗ್ ಅನ್ನು ಬಳಸಿ ಸ್ಟೈಲ್ ಮಾಡುವುದು ಮತ್ತು | ||
12:07 | ಲೇಬಲಿಂಗ್ ಫೀಚರ್ ಗಳ ಕುರಿತು ಕಲಿತಿದ್ದೇವೆ. | ||
12:10 | ಅಸೈನ್ಮೆಂಟ್ ಗಾಗಿ, | ||
12:12 | POP_EST ಡಾಟಾ ಸೆಟ್ ಅನ್ನು, 5 ಕ್ಲಾಸ್ ಗಳಾಗಿ ವಿಂಗಡಿಸಿ. | ||
12:19 | Graduated ಸ್ಟೈಲಿಂಗ್ ವಿಧಾನ, Equal Interval ಮೋಡ್ ಅನ್ನು ಬಳಸಿ. | ||
12:24 | ನಿಮ್ಮ ಪೂರ್ಣಗೊಂಡ ಅಸೈನ್ ಮೆಂಟ್ ಈ ರೀತಿಯಾಗಿ ಕಾಣಬೇಕು. | ||
12:29 | ಕೆಳಗಿನ ಲಿಂಕ್ನಲ್ಲಿರುವ ವೀಡಿಯೊ ಸ್ಪೋಕನ್ ಟ್ಯುಟೋರಿಯಲ್ ಯೋಜನೆಯನ್ನು ಕುರಿತು ವಿವರಿಸುತ್ತದೆ.
ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ. | ||
12;37 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡ, ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ನಮ್ಮ ಆನ್ಲೈನ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ.
ವಿವರಗಳಿಗಾಗಿ, ದಯವಿಟ್ಟು ನಮಗೆ ಬರೆಯಿರಿ. | ||
12:48 | ನೀವು ಪ್ರಶ್ನೆಯನ್ನು ಹೊಂದಿರುವ ನಿಮಿಷ ಮತ್ತು ಸೆಕೆಂಡ್ ಅನ್ನು ಆರಿಸಿ.
ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ. | ||
12:53 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗೆ NMEICT, MHRD, ಭಾರತ ಸರ್ಕಾರ ಧನಸಹಾಯ ನೀಡುತ್ತದೆ.
ಹೆಚ್ಚಿನ ವಿವರಗಳಿಗಾಗಿ, ಇಲ್ಲಿ ತೋರಿಸಿರುವ ಲಿಂಕ್ಗೆ ಭೇಟಿ ನೀಡಿ. | ||
13:05 | ಅನುವಾದ ಮತ್ತು ಧ್ವನಿ ಶ್ರೀ ನವೀನ ಭಟ್ಟ ಉಪ್ಪಿನಪಟ್ಟಣ. ಧನ್ಯವಾದಗಳು. |