QGIS/C2/Vector-Data-Styling/Kannada

From Script | Spoken-Tutorial
Jump to: navigation, search
Time Narration
00:01 QGIS ನಲ್ಲಿVector Data Styling ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು,

QGIS ನಲ್ಲಿ ವೆಕ್ಟರ್ ಡಾಟಾವನ್ನು ಲೋಡ್ ಮಾಡುವುದು,

00:14 Single symbol ಸ್ಟೈಲಿಂಗ್ , Categorized ಸ್ಟೈಲಿಂಗ್, ಮತ್ತು, Graduated ಸ್ಟೈಲಿಂಗ್ ಅನ್ನು ಬಳಸಿ, ವೆಕ್ಟರ್ ಡಾಟಾವನ್ನು ಸ್ಟೈಲ್ ಮಾಡುವುದು ಮತ್ತು
00:25 ಲೇಬಲಿಂಗ್ ಫೀಚರ್ ಗಳನ್ನು ಕುರಿತು ಕಲಿಯುವೆವು.
00:28 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು

ಉಬಂಟು ಲಿನಕ್ಸ್ ಒ.ಎಸ್ 16.04 ಆವೃತ್ತಿ ಮತ್ತು QGIS ಆವೃತ್ತಿ 2.18 – ಇವುಗಳನ್ನು ಬಳಸುತ್ತಿದ್ದೇನೆ.

00:39 ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು QGIS ಇಂಟರ್ಫೇಸ್ ನ ಕುರಿತು ತಿಳಿದಿರಬೇಕು.
00:46 ಇಲ್ಲವಾದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ನಮ್ಮ ವೆಬ್ ಸೈಟ್ ಅನ್ನು ಭೇಟಿಮಾಡಿ.
00:51 ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು ಪ್ಲೇಯರ್ ನ ಕೆಳಗಿರುವ, Code files ಲಿಂಕ್ ನಲ್ಲಿ ಕೊಟ್ಟಿರುವ ಫೋಲ್ಡರ್ ಅನ್ನು ಡೌನ್ ಲೋಡ್ ಮಾಡಿ.
01:01 ಡೌನ್ಲೋಡ್ ಆದ ಝಿಪ್ ಫೈಲ್ ನಲ್ಲಿರುವ ಕಂಟೆಂಟ್ ಗಳನ್ನು ಎಕ್ಸ್ಟ್ರ್ಯಾಕ್ಟ್ ಮಾಡಿಕೊಳ್ಳಿ.
01:05 ಎಕ್ಸ್ಟ್ರ್ಯಾಕ್ಟ್ ಆದ ಫೋಲ್ಡರ್ ನಲ್ಲಿ, world.shp ಫೈಲ್ ಅನ್ನು ಹುಡುಕಿ.
01:11 ನಾನು ಈಗಾಗಲೇ ಕೋಡ್ ಫೈಲ್ ಅನ್ನು ಡೌನ್ಲೋಡ್ ಮಾಡಿರುವೆನು, ಎಕ್ಸ್ಟ್ರ್ಯಾಕ್ಟ್ ಮಾಡಿ ಮತ್ತುDesktop ನಲ್ಲಿ ಸೇವ್ ಮಾಡಿದ್ದೇನೆ.
01:19 code-file ಅನ್ನು ತೆರೆಯಲು, ಅದನ್ನು ಡಬಲ್ ಕ್ಲಿಕ್ ಮಾಡಿ.
01:24 world.shp ಫೈಲ್ ನ ಮೇಲೆ ರೈಟ್ ಕ್ಲಿಕ್ ಮಾಡಿ.
01:29 ಕಂಟೆಕ್ಸ್ಟ್ ಮೆನ್ಯುವಿನಿಂದ, Open with QGIS Desktop ಆಯ್ಕೆಯನ್ನು ಆರಿಸಿಕೊಳ್ಳಿ.
01:36 QGIS ಇಂಟರ್ಫೇಸ್ ತೆರೆದುಕೊಳ್ಳುತ್ತದೆ.
01:39 QGIS Tips ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
01:43 ಡಯಲಾಗ್ ಬಾಕ್ಸ್ ಅನ್ನು ಮುಚ್ಚಲು, OK ಬಟನ್ ಅನ್ನು ಕ್ಲಿಕ್ ಮಾಡಿ.
01:49 ಡಿಫಾಲ್ಟ್ ರೀತಿಯಲ್ಲಿ, ಕ್ಯಾನ್ವಾಸ್ ನ ಮೇಲೆ ವರ್ಲ್ಡ್ ಮ್ಯಾಪ್ ಲೋಡ್ ಆಗುತ್ತದೆ.
01:54 Layers Panel ನಲ್ಲಿ, ನೀವು world ಲೇಯರ್ ಅನ್ನು ನೋಡಬಹುದು.
01:58 world ಲೇಯರ್ ಅನ್ನು ರೈಟ್ ಕ್ಲಿಕ್ ಮಾಡಿ.
02:01 ಕಂಟೆಕ್ಸ್ಟ್ ಮೆನ್ಯುವಿನಿಂದ, Open Attribute Table ಆಯ್ಕೆ ಮಾಡಿ.
02:06 ಈ ಲೇಯರ್ ಗೆ Attribute ಟೇಬಲ್ ತೆರೆದುಕೊಳ್ಳುತ್ತದೆ.
02:10 ಇಲ್ಲಿ ನಾವು, ರೋ ಮತ್ತು ಕಾಲಮ್ ಗಳಲ್ಲಿ ಆವರಿಸಿರುವ ವಿವಿಧ ಫೀಚರ್ ಗಳ ಡಾಟಾವನ್ನು ನೋಡಬಹುದು.
02:18 ADMIN ಕಾಲಮ್ ನಲ್ಲಿ ದೇಶದ ಹೆಸರನ್ನು ಕೊಡಲಾಗಿದೆ.
02:22 ಸ್ಲೈಡರ್ ಅನ್ನು ಟೇಬಲ್ ನ ಕೆಳಭಾಗದವರೆಗೆ ಎಳೆದು ತನ್ನಿ ಮತ್ತು POP_EST ಕಾಲಮ್ ಗೆ ಹೋಗಿ.
02:30 ಈ ಕಾಲಮ್ ನಲ್ಲಿ ಹಲವಾರು ದೇಶಗಳ ಜನಸಂಖ್ಯೆಯನ್ನು ಪಟ್ಟಿ ಮಾಡಲಾಗಿದೆ.
02:35 ಈಗ ನಾವು ಇಲ್ಲಿ ತೋರಿಸಿರುವ ಜನಸಂಖ್ಯೆಯ ಡಾಟಾವನ್ನು, ವರ್ಲ್ಡ್ ಮ್ಯಾಪ್ ನ ಮೇಲೆ ವಿವಿಧ ಸ್ಟೈಲ್ ಗಳನ್ನು ಬಳಸಿ ಚಿತ್ರಿಸುವೆವು.
02:43 attribute ಟೇಬಲ್ ಅನ್ನು ಕ್ಲೋಸ್ ಮಾಡಿ.
02:46 world ಲೇಯರ್ ಅನ್ನು ರೈಟ್ ಕ್ಲಿಕ್ ಮಾಡಿ.
02:49 context menu ನಿಂದ Properties ಆಯ್ಕೆಯನ್ನು ಆಯ್ಕೆ ಮಾಡಿ.
02:53 Layer Properties ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
02:57 ಎಡ ಪ್ಯಾನಲ್ ನಿಂದ Style ಟ್ಯಾಬ್ ಅನ್ನು ಕ್ಲಿಕ್ ಮಾಡಿ.
03:01 Style ಟ್ಯಾಬ್ ನಡಿಯಲ್ಲಿ, ಹಲವಾರು ಸ್ಟೈಲ್ ಗಳು ಲಭ್ಯವಿದೆ.
03:05 ಡಯಲಾಗ್ ಬಾಕ್ಸ್ ನ ಮೇಲ್ಭಾಗದ ಎಡ ಮೂಲೆಯಲ್ಲಿರುವ ಡ್ರಾಪ್ ಡೌನ್ ಬಟನ್ ಅನ್ನು ಒತ್ತಿ.
03:11 ಇಲ್ಲಿ ನೀವು ವಿವಿಧ ಸ್ಟೈಲಿಂಗ್ ಆಯ್ಕೆಗಳನ್ನು ಕಾಣಬಹುದು.
03:15 ಈ ಟ್ಯುಟೋರಿಯಲ್ ನಲ್ಲಿ ನಾವು ಮೊದಲ ಮೂರು ಆಯ್ಕೆಗಳನ್ನು ನೋಡುವೆವು.
03:19 Single Symbol ಆಯ್ಕೆಯನ್ನು ಆರಿಸಿಕೊಳ್ಳಿ.
03:22 ಈ ಆಯ್ಕೆಯು ಸಿಂಗಲ್ ಸ್ಟೈಲ್ ಅನ್ನು ಆರಿಸಿಕೊಳ್ಳಲು ಬಿಡುತ್ತದೆ.
03:27 ಲೇಯರ್ ನ ಎಲ್ಲ ಫೀಚರ್ ಗಳಿಗೂ ಆಯ್ಕೆ ಮಾಡಿದ ಸ್ಟೈಲ್ ಅನ್ವಯವಾಗುತ್ತದೆ.
03:32 Fill ಪ್ಯಾನಲ್ ನ ಅಡಿಯಲ್ಲಿ ಲಭ್ಯವಿರುವ್, add Symbol layer ಬಟನ್ ಅನ್ನು ಕ್ಲಿಕ್ ಮಾಡಿ.
03:38 Symbol layer type ನ ಕೆಳಗೆ ಹಲವಾರು ಸ್ಟೈಲ್ ಆಯ್ಕೆಗಳು ಕಾಣಿಸುತ್ತವೆ.
03:43 ಇದು ಪಾಲಿಗನ್ (ಬಹುಭುಜಾಕೃತಿ) ಯ ಡಾಟಾ ಸೆಟ್ ಆಗಿರುವುದರಿಂದ, ನಿಮಗೆ ಎರಡು ಆಯ್ಕೆಗಳಿವೆ.
03:48 ನೀವು ಬಹುಭುಜಾಕೃತಿಯನ್ನು ಬಣ್ಣದಿಂದ ತುಂಬಿಸಬಹುದು ಮತ್ತು ನಿಮ್ಮ ಆಯ್ಕೆಯ ಶೈಲಿಯಲ್ಲಿ ತುಂಬಿಸಬಹುದು.
03:55 Outline ನ ಬಣ್ಣ, ಸ್ಟೈಲ್(ಶೈಲಿ) ಮತ್ತು ಅಗಲವನ್ನೂ ಕೂಡ ಬದಲಿಸಬಹುದು.
04:02 Fill ಡ್ರಾಪ್ ಡೌನ್ ನ ಮುಂದೆ ಇರುವ ಡ್ರಾಪ್ ಡೌನ್ ಆರೋ ವನ್ನು ಕ್ಲಿಕ್ ಮಾಡಿ.
04:06 ಬಣ್ಣದ ತ್ರಿಕೋಣ ತೆರೆದುಕೊಳ್ಳುತ್ತದೆ.
04:09 ಈ ಬಣ್ಣದ ತ್ರಿಕೋನವನ್ನು ತಿರುಗಿಸಿ ನಿಮಗೆ ಬೇಕಾದ ಬಣ್ಣವನ್ನು ಆರಿಸಿಕೊಳ್ಳಿ.

ನಾನು ನೀಲಿ ಬಣ್ಣವನ್ನು ಆಯ್ಕೆ ಮಾಡಿಕೊಳ್ಳುತ್ತೇನೆ.

04:17 ಇದೇ ರೀತಿ Outline ನ ಬಣ್ಣವನ್ನು ಆರಿಸಿಕೊಳ್ಳಿ.
04:21 ನಾನು ಹಳದಿ ಬಣ್ಣವನ್ನು ಆಯ್ಕೆ ಮಾಡಿಕೊಳ್ಳುತ್ತೇನೆ.
04:25 Fill style ಅನ್ನು Dense1 ಎಂದೂ,
04:29 Outline style ಅನ್ನು, solid line ಎಂದೂ ಆಯ್ಕೆ ಮಾಡಿಕೊಳ್ಳುತ್ತೇನೆ.
04:33 Outline width, ಅನ್ನು 0.46 millimeters ಗೆ ಸೆಟ್ ಮಾಡಿ.
04:38 ಇನ್ನೂ ಹಲವಾರು ಸ್ಟೈಲ್ ನ ಆಯ್ಕೆಗಳನ್ನು ನೋಡಲು ಲಭ್ಯವಿದೆ.
04:43 ಸ್ಟೈಲಿಂಗ್ ಅನ್ನು ಮುಗಿಸಿದ ನಂತರ, Layers Properties ಡಯಲಾಗ್ ಬಾಕ್ಸ್ ನ ಕೆಳಭಾಗದ ಎಡಮೂಲೆಯಲ್ಲಿರುವ OK ಬಟನ್ ಅನ್ನು ಕ್ಲಿಕ್ ಮಾಡಿ.
04:52 ಕ್ಯಾನ್ವಾಸ್ ನ ಮೇಲೆ, ನೀವು ಆಯ್ಕೆ ಮಾಡಿಕೊಂಡಿರುವ ಸ್ಟೈಲ್ ನ ಮಾದರಿಗೆ ಅನುಸಾರವಾಗಿ, ಲೇಯರ್ ಗೆ ಅನ್ವಯವಾಗಿರುವ ಹೊಸ ಸ್ಟೈಲ್ ಅನ್ನು ನೋಡುವಿರಿ.
04:59 ಈಗ ನಾವು ಪಾಪ್ಯುಲೇಷನ್ (ಜನಸಂಖ್ಯಾ) ಡಾಟಾವನ್ನು ಮ್ಯಾಪ್ ಮಾಡುವುದು ಹೇಗೆ ಎಂದು ನೋಡೋಣ.
05:03 ಪಾಪ್ಯುಲೇಷನ್ ಡಾಟಾವನ್ನು ಮ್ಯಾಪ್ ಮಾಡಲು, Single Symbol ಸ್ಟೈಲ್ ಅಷ್ಟೊಂದು ಉಪಯುಕ್ತವಲ್ಲ.
05:09 ಈಗ ಇನ್ನೊಂದು ಸ್ಟೈಲ್ ಆಯ್ಕೆಯನ್ನು ನೋಡೋಣ.
05;13 world ಲೇಯರ್ ನ ಮೇಲೆ ರೈಟ್ ಕ್ಲಿಕ್ ಮಾಡಿ, Properties ಆಯ್ಕೆಯನ್ನು ಆರಿಸಿಕೊಳ್ಳಿ.
05:19 Layers Properties ಡಯಲಾಗ್ ಬಾಕ್ಸ್ ನಲ್ಲಿ, ಈ ಬಾರಿ ನಾವು Style ಟ್ಯಾಬ್ ನಿಂದ Categorized ಅನ್ನು ಆಯ್ಕೆ ಮಾಡೋಣ.
05:26 Categorized (ಕ್ಯಾಟಗರೈಝ್ಡ್) ಎಂದರೆ, ಲೇಯರ್ ನಲ್ಲಿ ಪೀಚರ್ (ವೈಶಿಷ್ಟ್ಯ) ಗಳನ್ನು ಬಣ್ಣದ ವಿವಿಧ ಛಾಯೆಗಳಲ್ಲಿ ತೋರಿಸಲಾಗುತ್ತದೆ.
05:33 ಈ ಬಣ್ಣದ ಛಾಯೆಗಳು attribute fields ಗಳ ಅನನ್ಯವಾದ ವ್ಯಾಲ್ಯುಗಳನ್ನು ಅವಲಂಭಿಸಿವೆ.
05:39 ನಾವು ಜನಸಂಖ್ಯಾ ಡಾಟಾವನ್ನು ಮ್ಯಾಪ್ ಮಾಡಲು ಪ್ರಯತ್ನಿಸುತ್ತಿರುವುದರಿಂದ, Column ಡ್ರಾಪ್ ಡೌನ್ ನಲ್ಲಿ ನಾವು POP_EST ಅನ್ನು ಆಯ್ಕೆ ಮಾಡುವೆವು.
05:48 ಡ್ರಾಪ್ ಡೌನ್ ನಿಂದ ನಿಮ್ಮ ಆಯ್ಕೆಯ ಕಲರ್ ರ್ಯಾಂ ಪ್ ಅನ್ನು ಆಯ್ಕೆಮಾಡಿಕೊಳ್ಳಿ. ನಾನು

ನಾನು Blues ಅನ್ನು ಆಯ್ಕೆ ಮಾಡುವೆನು.

05:55 ಮಧ್ಯದ ಪ್ಯಾನಲ್ ನ ಕೆಳಭಾಗದಲ್ಲಿರುವ, Classify ಬಟನ್ ಅನ್ನು ಕ್ಲಿಕ್ ಮಾಡಿ.
06:00 ಮಧ್ಯದಲ್ಲಿರುವ ಪ್ಯಾನಲ್, ಹಲವಾರು ಕ್ಲಾಸ್ ಗಳನ್ನು ಅವುಗಳ ಸಂಬಂಧಿತ ವ್ಯಾಲ್ಯುಗಳೊಂದಿಗೆ ತೋರಿಸುತ್ತದೆ.
06:07 ಕೆಳಗಡೆ ಬಲ ಮೂಲೆಯಲ್ಲಿರುವ OK ಅನ್ನು ಒತ್ತಿ.
06:11 ವರ್ಲ್ಡ್ ಮ್ಯಾಪ್ ನಲ್ಲಿ, ಬೇರೆ ಬೇರೆ ದೇಶಗಳು, ನೀಲಿಬಣ್ಣದ ಛಾಯೆಯಲ್ಲಿ ಕಾಣಿಸುವುದನ್ನು ನೀವು ನೋಡಬಹುದು.
06:17 ಮ್ಯಾಪ್ ಅನ್ನು ಝೂಮ್ ಇನ್ ಮತ್ತು ಝೂಮ್ ಔಟ್ ಮಾಡಲು ಮೌಸ್ ನ ಮಧ್ಯದ ಗುಂಡಿಯನ್ನು ಸ್ಕ್ರೋಲ್ ಮಾಡಿ.
06:22 ತಿಳಿಬಣ್ಣಗಳು ಕಡಿಮೆ ಜನಸಂಖ್ಯೆ ಯನ್ನು ಪ್ರತಿನಿಧಿಸುತ್ತವೆ.
06:26 ಗಾಢಬಣ್ಣವು ಹೆಚ್ಚು ಜನಸಂಖ್ಯೆಯನ್ನು ಪ್ರತಿನಿಧಿಸುತ್ತದೆ.
06:31 ಮತ್ತೊಮ್ಮೆ Layers Properties ಡಯಲಾಗ್ ಬಾಕ್ಸ್ ಅನ್ನು ತೆರೆಯಿರಿ.
06:37 Style ಟ್ಯಾಬ್ ನಲ್ಲಿ, ಡ್ರಾಪ್ ಡೌನ್ ಬಟನ್ ನ ಮೇಲೆ ಕ್ಲಿಕ್ ಮಾಡಿ.
06:41 ಈಗ ನಾವು Graduated ಸಿಂಬೋಲೊಜಿಯನ್ನು ನೋಡೋಣ.

Graduated ಆಯ್ಕೆಯನ್ನು ಆರಿಸಿಕೊಳ್ಳಿ.

06:48 Graduated ಸಿಂಬೋಲೋಜಿ ಯು ಒಂದು ಕಾಲಮ್ ನಲ್ಲಿರುವ ಡಾಟಾವನ್ನು ಅನನ್ಯವಾದ ಕ್ಲಾಸ್ ಗಳಾಗಿ ವಿಭಾಗಿಸಿಸಲು ಬಿಡುತ್ತದೆ.
06:55 ನಾವು ಪ್ರತಿಯೊಂದು ಕ್ಲಾಸ್ ಗೂ ಬೇರೆ ಬೇರೆ ಸ್ಟೈಲ್ ಅನ್ನು ಆರಿಸಿಕೊಳ್ಳಬಹುದು.
07:00 Column ಡ್ರಾಪ್ ಡೌನ್ ನಲ್ಲಿ , POP_EST ಅನ್ನು ಆಯ್ಕೆ ಮಾಡಿ.
07:06 ನಾವು ಈ ಜನಸಂಖ್ಯೆಯ ಡಾಟಾವನ್ನು 3 ವಿಭಾಗಗಳಾಗಿ ವಿಂಗಡಿಸಬಹುದು, ಅಂದರೆ ಲೋ(ಕಡಿಮೆ), ಮೀಡಿಯಂ (ಮಧ್ಯಮ) ಮತ್ತು ಹೈ (ಗರಿಷ್ಟ) ಎಂದು ವಿಂಗಡಿಸಬಹುದು.
07:13 ಅದಕ್ಕಾಗಿ, Classes ಡ್ರಾಪ್-ಡೌನ್ ನಡಿಯಲ್ಲಿ 3 ಎಂದು ಆಯ್ಕೆ ಮಾಡಿ.
07:18 ನೀವು ಪ್ಯಾನಲ್ ನಲ್ಲಿ, 3 ಕ್ಲಾಸ್ ಗಳನ್ನು ಅವುಗಳ ವ್ಯಾಲ್ಯುಗಳೊಂದಿಗೆ ನೋಡಬಹುದು.
07:25 Classify ಬಟನ್ ಅನ್ನು ಕ್ಲಿಕ್ ಮಾಡಿ.
07:28 Mode ಡ್ರಾಪ್ ಡೌನ್ ನ ಮೇಲೆ ಕ್ಲಿಕ್ ಮಾಡಿ.
07:31 ಇಲ್ಲಿ ಹಲವು Mode ಆಯ್ಕೆಗಳು ಲಭ್ಯವಿದೆ.
07:35 ಇದನ್ನು ಸರಳವಾಗಿಡಲು, Quantile (ಕ್ವಾಂಟೈಲ್) ಮೋಡ್ ಅನ್ನು ಬಳಸೋಣ.
07:40 ಈ ಮೋಡ್ ಗಳು ಬೇರೆ ಬೇರೆ ಸಾಂಖ್ಯಿಕ ಆಲ್ಗಾರಿದಮ್ ಗಳನ್ನು ಬಳಸಿ, ಡಾಟಾ ವನ್ನು ಪ್ರತ್ಯೇಕ ಕ್ಲಾಸ್ ಗಳಾಗಿ ವಿಭಾಗಿಸುತ್ತವೆ.
07:47 ಗಮನಿಸಿ, Graduated ಸ್ಟೈಲ್ ನಲ್ಲಿ ಬಳಸುವ ಅಟ್ರಿಬ್ಯೂಟ್ ಯಾವಾಗಲೂ ಸಂಖ್ಯೆಯೇ ಆಗಿರಬೇಕು.
07:55 ಸಂಖ್ಯೆಯೂ ಪೂರ್ಣಸಂಖ್ಯೆ ಅಥವಾ ದಶಮಾಂಶ ವ್ಯಾಲ್ಯುವಾಗಿರಬಹುದು.
08:00 Attribute ಫೀಲ್ಡ್ ನಲ್ಲಿ String type ಅನ್ನು ಈ ಸ್ಟೈಲಿಂಗ್ ಆಯ್ಕೆಯಲ್ಲಿ ಬಳಸುವಂತಿಲ್ಲ.
08:06 OK ಬಟನ್ ಅನ್ನು ಕ್ಲಿಕ್ ಮಾಡಿ.
08:10 ಈಗ ನೀವು ಮ್ಯಾಪ್ ನಲ್ಲಿ 3 ದೇಶಗಳು ನೀಲಿಬಣ್ಣದ ಬೇರೆ ಬೇರೆ ಛಾಯೆಗಳನ್ನು ಹೊಂದಿರುವುದನ್ನು ನೋಡಬಹುದು.
08:16 ಈ ಬಣ್ಣದ ಛಾಯೆಗಳು, ಆ ರಾಷ್ಟ್ರದ ಜನಸಂಖ್ಯೆಯನ್ನು ಪ್ರತಿನಿಧಿಸುತ್ತದೆ.
08:22 Layers Panel ಪ್ಯಾನಲ್ ನಲ್ಲಿ ನೀವು ಈ ಲೇಯರ್ ನ 3 ಕ್ಲಾಸ್ ಗಳನ್ನು ನೋಡುವಿರಿ.
08:27 ಇಲ್ಲಿ ಇನ್ನೂ ಕೆಲವು ಸ್ಟೈಲಿಂಗ್ ಆಯ್ಕೆಗಳು ಲಭ್ಯವಿದೆ.
08:31 ನಾವು ಪ್ರತಿ ಕ್ಲಾಸ್ ಗೂ ಬೇರೆ ಬೇರೆ ಸ್ಟೈಲ್ ಮತ್ತು ಬಣ್ಣವನ್ನು ಆರಿಸಿಕೊಳ್ಳಬಹುದು.
08:37 ಮತ್ತೆ Layer Properties ಡಯಲಾಗ್ ಬಾಕ್ಸ್ ಅನ್ನು ತೆರೆಯಿರಿ.
08:42 Classes ಟ್ಯಾಬ್ ನಲ್ಲಿ, Symbol ಕಾಲಮ್ ನಡಿಯಲ್ಲಿ, ಬಣ್ಣವಿರುವ ಬಾಕ್ಸ್ ಅನ್ನು ಡಬಲ್ ಕ್ಲಿಕ್ ಮಾಡಿ.
08:49 Symbol Selector ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
08:53 Color ಡ್ರಾಪ್-ಡೌನ್ ಆಯ್ಕೆಯಲ್ಲಿ, ಡ್ರಾಪ್ ಡೌನ್ ಬಾಣದ ಗುರುತಿನ ಮೇಲೆ ಕ್ಲಿಕ್ ಮಾಡಿ. ಬಣ್ಣದ ತ್ರಿಕೋನ ತೆರೆದುಕೊಳ್ಳುತ್ತದೆ.
09:01 ಬೇಕಾದ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಲು ಬಣ್ಣದ ತ್ರಿಕೋನವನ್ನು ತಿರುಗಿಸಿ.
09:05 ನಾನು ಕಡಿಮೆ ಜನಸಂಖ್ಯೆಯನ್ನು ಸೂಚಿಸಲು ಕೆಂಪು ಬಣ್ಣವನ್ನು ಆರಿಸಿಕೊಳ್ಳುತ್ತೇನೆ.
09:10 Symbol selector ಡಯಲಾಗ್ ಬಾಕ್ಸ್ ನಲ್ಲಿ OK ಬಟನ್ ಅನ್ನು ಕ್ಲಿಕ್ ಮಾಡಿ.
09:15 ಇದೇ ರೀತಿಯಾಗಿ ಉಳಿದ ಎರಡು ಕ್ಲಾಸ್ ಗಳಿಗೂ ಬಣ್ಣವನ್ನು ಬದಲಿಸಿ.
09:19 ನಾನು ಮಧ್ಯಮ (ಮೀಡಿಯಂ) ಮತ್ತು ಗರಿಷ್ಟ (ಹೈ) ಕ್ಕೆ ಹಸಿರನ್ನು ಆಯ್ಕೆ ಮಾಡುವೆನು.
09:35 Legend ಕಾಲಮ್ ನಲ್ಲಿ ಮೊದಲನೆಯ ರೋ ದ ಮೇಲೆ ಡಬಲ್ ಕ್ಲಿಕ್ ಮಾಡಿ.

ಮೊದಲನೆಯ ರೋ ಗೆ, low ಎಂದು ಟೈಪ್ ಮಾಡಿ.

09:42 ಎರಡನೆಯ ರೋ ಗೆ Medium ಎಂದೂ,
ಮತ್ತು ಮೂರನೆಯ ರೋ ಗೆ  High ಎಂದೂ ಟೈಪ್ ಮಾಡಿ.
09:48 ಆಯ್ಕೆ ಮಾಡಿಕೊಂಡ ವ್ಯಾಪ್ತಿಗಳನ್ನು ಎಡಿಟ್ ಮಾಡಲು , Values ಕಾಲಮ್ನಡಿಯಲ್ಲಿ, ಮೊದಲ ರೋ ದ ಮೇಲೆ ಡಬಲ್ ಕ್ಲಿಕ್ ಮಾಡಿ.
09:54 Enter class bounds ಟೆಕ್ಸ್ಟ್ ಬಾಕ್ಸ್ ತೆರೆದುಕೊಳ್ಳುತ್ತದೆ. ನೀವು ಬಯಸಿದರೆ ನೀವು ಕನಿಷ್ಟ ವ್ಯಾಲ್ಯು ಮತ್ತು ಗರಿಷ್ಟ ವ್ಯಾಲ್ಯುವನ್ನು ಬದಲಾಯಿಸಬಹುದು.
10:04 ಈಗ ನಾವು ವ್ಯಾಲ್ಯುವನ್ನು ಬದಲಿಸದೇ ಹಾಗೇ ಬಿಡೋಣ.

OK ಬಟನ್ ಅನ್ನು ಕ್ಲಿಕ್ ಮಾಡಿ.

10:10 Layer Properties ಡಯಲಾಗ್ ಬಾಕ್ಸ್ ನಲ್ಲಿ OK ಬಟನ್ ಅನ್ನು ಕ್ಲಿಕ್ ಮಾಡಿ.
10:15 ವರ್ಲ್ಡ್ ಮ್ಯಾಪ್ ಅನ್ನು ಗಮನಿಸಿ.
10:17 ಈಗ ನಾವು ಲೋ(ಕನಿಷ್ಟ), ಮೀಡಿಯಂ( ಮಧ್ಯಮ) ಮತ್ತು ಹೈ( ಗರಿಷ್ಟ) ಜನಸಂಖ್ಯೆಯನ್ನು ತೋರಿಸಲು ಮೂರು ಬೇರೆ ಬೇರೆ ಬಣ್ಣಗಳನ್ನು ಹೊಂದಿದ್ದೇವೆ.
10:24 Layers Panel ಅನ್ನು ಗಮನಿಸಿ.
10:27 ಜನಸಂಖ್ಯಾ ಮೌಲ್ಯಗಳ ನಮ್ಮ ವ್ಯಾಖ್ಯಾನವನ್ನು ಪ್ರತಿನಿಧಿಸಲು ಸ್ಪಷ್ಟವಾಗಿ ಗುರುತಿಸಲಾದ ಕ್ಲಾಸ್ ಗಳ ಹೆಸರುಗಳು ಮತ್ತು ಬಣ್ಣಗಳಿವೆ.
10:36 ಈ ಹಿಂದಿನ ಎರಡು ಪ್ರಯತ್ನಗಳಿಗಿಂತ ಈ ಸ್ಟೈಲ್ ಇನ್ನೂ ಹೆಚ್ಚಿನ ಉಪಯುಕ್ತವಾದ , ಮ್ಯಾಪ್ ಅನ್ನು ನಮಗೆ ತೋರಿಸುತ್ತದೆ.
10:42 ಈಗ ವೆಕ್ಟರ್ ಫೈಲ್ ನಲ್ಲಿ ಬೇರೆ ಬೇರೆ ಫೀಚರ್ ಗಳನ್ನು ಲೇಬಲ್ ಮಾಡುವುದು ಹೇಗೆಂದು ನೋಡೋಣ.
10:47 ಈಗ ನಿದರ್ಶನಕ್ಕಾಗಿ ನಾವು ದೇಶಗಳ ಹೆಸರುಗಳನ್ನು ಲೇಬಲ್ ಮಾಡೋಣ. |- 10:52 ಮತ್ತೆ Layer Properties ಡಯಲಾಗ್ ಬಾಕ್ಸ್ ಅನ್ನು ತೆರೆಯಿರಿ.
10:57 ಎಡ ಪ್ಯಾನಲ್ ನಿಂದ, Labels ಟ್ಯಾಬ್ ಅನ್ನು ತೆರೆಯಿರಿ.
11:01 ಮೊದಲನೆಯ ಟೆಕ್ಸ್ಟ್ಬಾಕ್ಸ್ ಡ್ರಾಪ್ ಡೌನ್ ನಲ್ಲಿ, Show labels for this layer ಅನ್ನು ಆಯ್ಕೆ ಮಾಡಿ.
11:08 ಅಟ್ರಿಬ್ಯೂಟ್ ಟೇಬಲ್ ನಲ್ಲಿ, ADMIN ಕಾಲಮ್ ನಲ್ಲಿ ದೇಶಗಳ ಹೆಸರುಗಳ ಪಟ್ಟಿಯಿದೆ.
11:14 ಹಾಗಾಗಿ, Label with ಡ್ರಾಪ್-ಡೌನ್ ನಲ್ಲಿ, ADMIN ಅನ್ನು ಆಯ್ಕೆ ಮಾಡಿ.
11:20 style ಮೆನ್ಯುವಿನಲ್ಲಿ, Buffer ಅನ್ನು ಆಯ್ಕೆ ಮಾಡಿ.
11:23 Draw text buffer ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ.
11:27 ಅಗತ್ಯಕ್ಕೆ ತಕ್ಕಂತೆ, ಟೆಕ್ಸ್ಟ್ ನ ಗಾತ್ರವನ್ನು ಬದಲಿಸಬಹುದು.
11:32 color ಡ್ರಾಪ್-ಡೌನ್ ನಲ್ಲಿ ಬಣ್ಣವನ್ನು ಆಯ್ಕೆಮಾಡಿ.
11:38 OK ಬಟನ್ ಅನ್ನು ಕ್ಲಿಕ್ ಮಾಡಿ.
11:40 ವರ್ಲ್ಡ್ ಮ್ಯಾಪ್ ನಲ್ಲಿ ದೇಶಗಳ ಹೆಸರುಗಳು ಡಿಸ್ಪ್ಲೇ ಆಗಿರುವುದನ್ನು ನೋಡಬಹುದು.
11:46 ಸಂಕ್ಷಿಪ್ತವಾಗಿ,
11:48 ಈ ಟ್ಯುಟೋರಿಯಲ್ ನಲ್ಲಿ , ನಾವು QGIS ನಲ್ಲಿ ವೆಕ್ಟರ್ ಡಾಟಾವನ್ನು ಲೋಡ್ ಮಾಡುವುದನ್ನು,
11:55 ವೆಕ್ಟರ್ ಡಾಟಾವನ್ನು, Single symbol ಸ್ಟೈಲಿಂಗ್, Categorized ಸ್ಟೈಲಿಂಗ್, Graduated ಸ್ಟೈಲಿಂಗ್ ಅನ್ನು ಬಳಸಿ ಸ್ಟೈಲ್ ಮಾಡುವುದು ಮತ್ತು
12:07 ಲೇಬಲಿಂಗ್ ಫೀಚರ್ ಗಳ ಕುರಿತು ಕಲಿತಿದ್ದೇವೆ.
12:10 ಅಸೈನ್ಮೆಂಟ್ ಗಾಗಿ,
12:12 POP_EST ಡಾಟಾ ಸೆಟ್ ಅನ್ನು, 5 ಕ್ಲಾಸ್ ಗಳಾಗಿ ವಿಂಗಡಿಸಿ.
12:19 Graduated ಸ್ಟೈಲಿಂಗ್ ವಿಧಾನ, Equal Interval ಮೋಡ್ ಅನ್ನು ಬಳಸಿ.
12:24 ನಿಮ್ಮ ಪೂರ್ಣಗೊಂಡ ಅಸೈನ್ ಮೆಂಟ್ ಈ ರೀತಿಯಾಗಿ ಕಾಣಬೇಕು.
12:29 ಕೆಳಗಿನ ಲಿಂಕ್ನಲ್ಲಿರುವ ವೀಡಿಯೊ ಸ್ಪೋಕನ್ ಟ್ಯುಟೋರಿಯಲ್ ಯೋಜನೆಯನ್ನು ಕುರಿತು ವಿವರಿಸುತ್ತದೆ.

ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ.

12;37 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡ, ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ನಮ್ಮ ಆನ್ಲೈನ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ.

ವಿವರಗಳಿಗಾಗಿ, ದಯವಿಟ್ಟು ನಮಗೆ ಬರೆಯಿರಿ.

12:48 ನೀವು ಪ್ರಶ್ನೆಯನ್ನು ಹೊಂದಿರುವ ನಿಮಿಷ ಮತ್ತು ಸೆಕೆಂಡ್ ಅನ್ನು ಆರಿಸಿ.

ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.

12:53 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗೆ NMEICT, MHRD, ಭಾರತ ಸರ್ಕಾರ ಧನಸಹಾಯ ನೀಡುತ್ತದೆ.

ಹೆಚ್ಚಿನ ವಿವರಗಳಿಗಾಗಿ, ಇಲ್ಲಿ ತೋರಿಸಿರುವ ಲಿಂಕ್ಗೆ ಭೇಟಿ ನೀಡಿ.

13:05 ಅನುವಾದ ಮತ್ತು ಧ್ವನಿ ಶ್ರೀ ನವೀನ ಭಟ್ಟ ಉಪ್ಪಿನಪಟ್ಟಣ. ಧನ್ಯವಾದಗಳು.

Contributors and Content Editors

NaveenBhat