GIMP/C2/The-Curves-Tool/Kannada
From Script | Spoken-Tutorial
Time | Narration |
00:25 | Meet The GIMP (ಮೀಟ್ ದ್ ಗಿಂಪ್) ನ ‘ಸ್ಪೋಕನ್ ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ. |
00:28 | ಇದನ್ನು, ರೋಲ್ಫ್ ಸ್ಟೆನೋರ್ಟ್ ಅವರು ಉತ್ತರ ಜರ್ಮನಿಯ ಬ್ರೆಮೆನ್ ಎನ್ನುವಲ್ಲಿ ರೆಕಾರ್ಡ್ ಮಾಡಿದ್ದಾರೆ. |
00:33 | ಈಗ, ಇಂದಿನ ‘ಟ್ಯುಟೋರಿಯಲ್’ ಅನ್ನು ನಾವು ಆರಂಭಿಸೋಣ. |
00:35 | ಇದು ಕರ್ವ್ಸ್ ಎನ್ನುವುದರ ಕುರಿತು ಆಗಿದೆ. |
00:37 | ಮೊದಲು ನಾನು ‘ಟೂಲ್ ಬಾಕ್ಸ’ನಲ್ಲಿಯ Curves Tool ಅನ್ನು ಸಕ್ರಿಯಗೊಳಿಸುತ್ತೇನೆ. ಆಮೇಲೆ ಇಮೇಜ್ನಲ್ಲಿ ಕ್ಲಿಕ್ ಮಾಡುತ್ತೇನೆ. |
00:44 | ಕರ್ವ್ಸ್ ಟೂಲ್ನಲ್ಲಿ ಒಂದು ಹಿಸ್ಟೋಗ್ರಾಮ್ ಇರುವದನ್ನು ನೀವು ನೋಡಬಹುದು. ಇಲ್ಲಿ ಗ್ರೇ ಸ್ಕೇಲನ್ನು ಹೊಂದಿರುವ ಎರಡು ಬಾರ್ ಗಳಿವೆ. |
00:58 | ಆಮೇಲೆ, ಕರ್ವ್ಸ್ ಟೂಲ್ನಲ್ಲಿ ಆಯ್ಕೆಮಾಡಲು Preview, Save, Open ಮುಂತಾದ ಕೆಲವು ಬಟನ್ ಗಳಿವೆ. |
01:06 | ಆದರೆ ಈಗ ನಾವು ಕರ್ವ್ಸ್ ಟೂಲ್ನ ‘ಗ್ರೇ ಸ್ಕೇಲ್ ಬಾರ್’ನತ್ತ ಗಮನ ಕೊಡುವೆವು. |
01:11 | ಇಲ್ಲಿರುವ ಈ ಬಾರ್, ಸೋರ್ಸ್ ಇಮೇಜ್ನ ವಿವಿಧ ಬಣ್ಣಗಳ ಶ್ರೇಣಿಯನ್ನು ತೋರಿಸುತ್ತದೆ. |
01:20 | ಈ ಬಾರ್ ನಲ್ಲಿ, ಕೆಲವು ಪಿಕ್ಸೆಲ್ಗಳು ನಿಜಕ್ಕೂ ಗಾಢವಾಗಿವೆ ಹಾಗೂ ಕೆಲವು ಪಿಕ್ಸೆಲ್ಗಳು ನಿಜಕ್ಕೂ ಪ್ರಕಾಶಮಾನವಾಗಿವೆ. ಮಧ್ಯದಲ್ಲಿ ಗಾಢದಿಂದ ತಿಳಿಬಣ್ಣದವರೆಗಿನ ಪಿಕ್ಸೆಲ್ಗಳು ಇರುತ್ತವೆ. |
01:33 | ಇಲ್ಲಿಯ ಈ ಸಮತಲವಾಗಿರುವ ಬಾರ್, 256 ವಿಭಿನ್ನ ವರ್ಣಗಳ ಛಾಯೆಗಳನ್ನು ಹೊಂದಿರುತ್ತದೆ. |
01:39 | ಈ ಬಾರ್ ನ ಮೇಲೆ ಆರಂಭಿಕ ಪಾಯಿಂಟ್, ಸೊನ್ನೆಯಾಗಿದೆ ಹಾಗೂ ಇದು ಕಪ್ಪು ಬಣ್ಣ ಬಣ್ಣವಿರುತ್ತದೆ ಮತ್ತು ಕೊನೆಯ ಪಾಯಿಂಟ್, 255 ಆಗಿದೆ ಹಾಗೂ ಇದು ಬಿಳಿ ಬಣ್ಣವಿರುತ್ತದೆ. |
01:49 | ಉದಾಹರಣೆಗೆ, ಇಲ್ಲಿ ಈ 184, ಬೂದುಬಣ್ಣವಾಗಿದೆ. |
01:53 | ಈ ಇಮೇಜ್, ಬಹಳಷ್ಟು ಬಣ್ಣಗಳನ್ನು ಒಳಗೊಂಡಿದೆ.ಮತ್ತು ನಾನು ಚಾನೆಲ್ ಅನ್ನು ಬದಲಾಯಿಸಿ ಇಲ್ಲಿ ವಿವಿಧ ಬಣ್ಣಗಳನ್ನು ನಿಮಗೆ ತೋರಿಸಲು ಸಾಧ್ಯವಿದೆ. |
02:01 | ನಾವು colour Channel ನಲ್ಲಿ Red ಎನ್ನುವುದನ್ನು ಆಯ್ಕೆಮಾಡೋಣ. ನೀವು ಇಮೇಜ್ನಲ್ಲಿ ಕೆಂಪು ಛಾಯೆಯನ್ನು ನೋಡಬಹುದು. |
02:07 | ಹೀಗೆಯೇ, ನೀವು ಅದನ್ನು Green ಮತ್ತು Blue ಗಳಿಗೆ, ಆಯಾ ಛಾಯೆಗಳನ್ನು ಪಡೆಯಲು, ಬದಲಾಯಿಸಬಹುದು. |
02:14 | ಈ ಇಮೇಜ್ನಲ್ಲಿ, ಬಹಳಷ್ಟು ವ್ಯಾಲ್ಯೂಗಳಿರುವ ಹಸಿರು ಚಾನೆಲ್, ಪ್ರಬಲವಾಗಿರುವುದು ಆಶ್ಚರ್ಯಕರವೇನೂ ಆಗಿಲ್ಲ. |
02:24 | ಈಗ Reset Channel ನ ಮೇಲೆ ಕ್ಲಿಕ್ ಮಾಡಿರಿ. |
02:27 | ಪ್ರತಿಯೊಂದು ‘ಟೋನ್’ನ ಮೇಲಿನ ಹಿಸ್ಟೋಗ್ರಾಮ್ ನ ಕರ್ವ್, ಹೊಳಪನ್ನು ಹೊಂದಿರುವ ಪಿಕ್ಸೆಲ್ಗಳ ಎಣಿಕೆಯಾಗಿದೆ. |
02:38 | ಈ ಟರ್ಮಿನಲ್ ಹಾಗೂ ‘ಬಾರ್’ನ ಮೇಲಿನ ಈ ಟರ್ಮಿನಲ್ ಗಳಲ್ಲಿ ಬಹುಮಟ್ಟಿಗೆ ಒಂದೇ ಸಂಖ್ಯೆಯ ಪಿಕ್ಸೆಲ್ಗಳನ್ನು ಹೊಂದಿರುವ ಒಂದು ಜಾಗವನ್ನು ಇಲ್ಲಿ ನಾವು ಪಡೆದಿದ್ದೇವೆ. |
02:49 | ಈ ಹಿಸ್ಟೋಗ್ರಾಮ್, ಇಲ್ಲಿ ಅತಿ ಹೆಚ್ಚಿನ ಬಣ್ಣಗಳ ಶ್ರೇಣಿ ಇರುವದನ್ನು ತೋರಿಸುತ್ತದೆ. |
02:56 | ಕರ್ವ್ ಟೂಲ್, ಸಕ್ರಿಯವಾಗಿರುವಾಗ ನೀವು ಇಮೇಜ್ನಲ್ಲಿ ಹೋಗಿರಿ ಮತ್ತು ಮೌಸ್ ಕರ್ಸರ್, ಒಂದು ಪುಟ್ಟ ಡ್ರಾಪರ್ ಆಗಿ ಬದಲಾಯಿಸುತ್ತದೆ . ನಾನು ಇಲ್ಲಿ ಕ್ಲಿಕ್ ಮಾಡಿದಾಗ ಹಿಸ್ಟೋಗ್ರಾಮ್ನಲ್ಲಿಯ ಈ ಗೆರೆಯು ಆ ಪಾಯಿಂಟ್ ಗೆ ಸ್ಥಳಾಂತರವಾಗುತ್ತದೆ. |
03:10 | ಇಮೇಜ್ನಲ್ಲಿ ಯಾವ ಬಣ್ಣದ ಛಾಯೆ ಎಲ್ಲಿರುವದು ಎಂದು ತಿಳಿಯಲು ನೀವು ಇಮೇಜ್ನಲ್ಲಿ ಕ್ಲಿಕ್ ಮಾಡಿ ಅದರಲ್ಲಿ ಸುತ್ತಾಡಬಹುದು. |
03:18 | ಈಗ ನಾವು ಇಲ್ಲಿಯ ಸಮತಲವಾಗಿರುವ (horizontal) ‘ಬಾರ್’ಅನ್ನು ನೋಡಿ ಮುಗಿಸಿದ್ದೇವೆ. |
03:22 | ಮತ್ತು ಇಲ್ಲಿರುವುದು ಔಟ್ಪುಟ್ ಆಗಿದೆ. |
03:26 | ಅಲ್ಲದೇ ಇಲ್ಲಿ 256 ವಿಭಿನ್ನ ವ್ಯಾಲ್ಯೂಗಳಿವೆ ಮತ್ತು ಇವುಗಳು ಇಮೇಜನ್ನು ರೂಪಿಸುತ್ತವೆ. |
03:33 | ಸಮತಲವಾಗಿರುವ ಬಾರ್, ಕರ್ವಗೆ ಕೊಡಲಾಗುವ ಡೇಟಾ ಅನ್ನು ಒಳಗೊಂಡಿದೆ ಮತ್ತು ವರ್ಟಿಕಲ್ ಬಾರ್, ಹೊರಗೆ ಬರುವ ಡೇಟಾ ಅನ್ನು ಒಳಗೊಂಡಿದೆ. |
03:44 | ಗ್ರಾಫನ್ನು ದಾಟುವ ಮಧ್ಯದಲ್ಲಿರುವ ಈ ರೇಖೆಯು ‘ಟ್ರಾನ್ಸ್ಲೇಶನ್ ಫಂಕ್ಷನ್’ ಆಗಿದೆ. |
03:53 | ನಾನು ಮಧ್ಯದ ಬೂದುಬಣ್ಣದಿಂದ ಮೇಲೆ, ಟ್ರಾನ್ಸ್ಲೇಶನ್ ಕರ್ವಗೆ ಹೋಗಿ ಆಮೇಲೆ ಎಡಕ್ಕೆ ಇರುವ ವರ್ಟಿಕಲ್ ಬಾರ್ ಗೆ ಹೋದಾಗ ಪುನಃ ಬೂದುಬಣ್ಣದ ಮಧ್ಯವನ್ನು ತಲುಪುತ್ತೇನೆ. |
04:04 | ನಾನು ಈ ಕರ್ವನ್ನು ನನಗೆ ಬೇಕಾದ ಹಾಗೆ ಎಳೆದಾಡಬಹುದು. ನಾನು ಇದನ್ನು ಕೆಳಗೆ ಎಳೆದಾಗ ಇಮೇಜ್, ಗಾಢವಾಗುವುದನ್ನು ನೀವು ನೋಡುತ್ತೀರಿ. |
04:13 | ಈಗ ನಾನು ಮಧ್ಯದ ಬೂದುಬಣ್ಣದಿಂದ ಮೇಲೆ ಕರ್ವಗೆ ಹೋಗಿ ಆಮೇಲೆ ಎಡಕ್ಕೆ ಹೋದಾಗ ನಾನು ಗಾಢ ಬೂದುಬಣ್ಣವನ್ನು ತಲುಪುತ್ತೇನೆ. |
04:23 | ಇಲ್ಲಿಯ ಕೆಳಗಿನ ಬಾರ್, ಕರ್ವ್ ಟೂಲ್ನ ಮೂಲ ಇನ್ಪುಟ್ ಹಾಗೂ ವರ್ಟಿಕಲ್ ಬಾರ್, ಅದರ ಔಟ್ಪುಟ್ ಆಗಿದೆ ಎನ್ನುವುದನ್ನು ನೀವು ಇಲ್ಲಿ ನೋಡುತ್ತೀರಿ. |
04:34 | ನಾನು ಈ ಕರ್ವನ್ನು ಬಹಳಷ್ಟು ವಿಧಗಳಲ್ಲಿ ಬದಲಾಯಿಸಲು ಸಾಧ್ಯವಿದೆ, ಅದಕ್ಕೆ ಮಿತಿಯಿಲ್ಲ. |
04:43 | ನಾನು ಈ ಕರ್ವನ್ನು ಹಿಂದಕ್ಕೆ ಎಳೆಯಲು ಸಾಧ್ಯವಿಲ್ಲ ಎನ್ನುವುದೇ ಒಂದು ಮಿತಿ ಆಗಿದೆ. ನಾನು ಹೀಗೆ ಮಾಡಿದ ಕ್ಷಣದಲ್ಲಿ ಕರ್ವ್ ಟೂಲ್ನ ಮೇಲಿನ ಪಾಯಿಂಟ್, ಕಳೆದುಕೊಳ್ಳುತ್ತದೆ. |
04:53 | ಆದರೆ ನನಗೆ ಇಮೇಜ್ನಲ್ಲಿ ಯಾವುದೇ ಹೊಳೆಯುವ ಪಿಕ್ಸೆಲ್ಗಳನ್ನು ನೋಡಬೇಕಾಗಿಲ್ಲದಿದ್ದರೆ, ನಾನು ಎಲ್ಲ ಪಾಯಿಂಟ್ಗಳನ್ನು ಕೆಳಗೆ ಎಳೆಯಬಹುದು. ಆಗ ಇಮೇಜ್, ಹೆಚ್ಚುಕಡಿಮೆ ಕಪ್ಪು ಬಣ್ಣದ್ದಾಗಿರುತ್ತದೆ. |
05:10 | ಈ ಪಾಯಿಂಟನ್ನು ಸುಮ್ಮನೆ ಮೇಲೆ,ಇಲ್ಲಿಗೆ ಎಳೆಯಿರಿ. ನೀವು ಇಲ್ಲಿ ಹೊಳೆಯುವ ಏನನ್ನೋ ಪಡೆಯಲು ಸಾಧ್ಯವಿದೆ. |
05:17 | ವರ್ಷಗಳಿಂದ ಫ್ಯಾಷನ್ನಿನಲ್ಲಿರುವ ಇಮೇಜ್ಗಳು ಸಿಗುವವರೆಗೆ ಕರ್ವ್ಸ್ ಟೂಲ್ನ ಜೊತೆಗೆ ನೀವು ಆಟ ಆಡಬಹುದು. |
05:28 | Reset ಬಟನ್ ಮೇಲೆ ಕ್ಲಿಕ್ ಮಾಡಿ, ನಾವು ‘ಕರ್ವ್’ಅನ್ನು ರಿಸ್ಟಾರ್ಟ್ ಮಾಡಬಹುದು ಹಾಗೂ ಮೂಲ ‘ಕರ್ವ್’ಅನ್ನು ಪಡೆಯಬಹುದು. |
05:34 | ಕರ್ವ್ಸ್ ಟೂಲ್ನಲ್ಲಿ Linear Mode ಮತ್ತು Logarithmic Mode ನಂತಹ ಇನ್ನೂ ಕೆಲವು ಬಟನ್ ಗಳಿವೆ. |
05:42 | Logarithmic ಮೋಡ್ನಲ್ಲಿ ನೀವು ಸಣ್ಣ ವ್ಯಾಲ್ಯೂಗಳನ್ನು ಮೇಲೇರಿಸಿ ಪಡೆಯುವಿರಿ. |
05:49 | ಇಲ್ಲಿ, Linear ಮೋಡ್ನಲ್ಲಿ ಈ ಗೆರೆಯು, ಇಲ್ಲಿಯ ಈ ಗೆರೆಯ ಎರಡರಷ್ಟು ವ್ಯಾಲ್ಯೂವನ್ನು ಹೊಂದಿದೆ. |
05:56 | Logarithmic ಮೋಡ್ನಲ್ಲಿ ಈ ಗೆರೆಯು 1 ಇರಬಹುದು, ಇದು 10, ಇದು 100 ಮತ್ತು ಇದು 1000. |
06:06 | ಪ್ರತಿಯೊಂದು ಹಂತವು ನಿಮಗೆ ಹತ್ತುಪಟ್ಟು ಹೆಚ್ಚಾದ ವ್ಯಾಲ್ಯೂವನ್ನು ಕೊಡುತ್ತದೆ. ಇದರಿಂದ Linear ಮೋಡ್ನಲ್ಲಿ ಅಡಗಿಸಲ್ಪಟ್ಟ ಸಣ್ಣ ಪಿಕ್ಸೆಲ್ಗಳನ್ನು ನೀವು ನೋಡುತ್ತೀರಿ. |
06:17 | ನೀವು ಇದನ್ನು ಈ ಮೂಲೆಯಲ್ಲಿ ನೋಡಿ, 250 ಗಿಂತ ಹೆಚ್ಚಾದ ವ್ಯಾಲ್ಯೂವನ್ನು ಪಡೆದ ಪಿಕ್ಸೆಲ್ಗಳು ಇರುವದೋ ಹೇಗೆ ಎಂದು ಹೇಳಲು ಸಾಧ್ಯವಿಲ್ಲ. |
06:27 | ಆದರೆ Logarithmic ನಲ್ಲಿ ಇಮೇಜ್ನ ಪೂರ್ಣ ಶ್ರೇಣಿಯಲ್ಲಿ ನಾವು ಪಿಕ್ಸೆಲ್ಗಳನ್ನು ಪಡೆದಿದ್ದೇವೆ ಎನ್ನುವುದನ್ನು ನೀವು ನೋಡುತ್ತೀರಿ. |
06:40 | ಆಮೇಲೆ, ಇಲ್ಲಿ Curve Type ಎನ್ನುವ ಒಂದು ಬಟನ್ ಇರುತ್ತದೆ. ಇದುವರೆಗೆ ನಾನು ಬಳಸಿದ ಇಲ್ಲಿರುವ ಈ ಟೂಲ್, ಕರ್ವನ್ನು ಕೊಡುತ್ತದೆ. ನಾನು ಕರ್ವ್ ಟೈಪನ್ನು ಬದಲಾಯಿಸಿದಾಗ ನಾನು ನಿಜವಾಗಿಯೂ ಕರ್ವನ್ನು ಪೇಂಟ್ ಮಾಡಬಹುದು ಮತ್ತು ಕೆಲವು ಮೋಜಿನ ವಿಷಯಗಳನ್ನು ಪಡೆಯಬಹುದು. ಇದನ್ನು ನಾನು ಇಲ್ಲಿಯವರೆಗೆ ಯಾವಾಗಲೂ ಉಪಯೋಗಿಸಿರಲಿಲ್ಲ. |
07:12 | ಆಮೇಲೆ, ಅಲ್ಲಿ Save dialog ಮತ್ತು Open dialog ಎನ್ನುವ ಬಟನ್ ಗಳಿವೆ. |
07:17 | ನೀವು ಕರ್ವ್ಸ್ ಅನ್ನು ಬದಲಾಯಿಸುವುದನ್ನು ಮುಗಿಸಿದಾಗ ಅದನ್ನು ನಂತರದ ಬಳಕೆಗಾಗಿ ಸೇವ್ ಮಾಡಬಹುದು ಮತ್ತು ನಿಮಗೆ ಬೇಕಾದಾಗ ರಿಕಾಲ್ ಮಾಡಬಹುದು. |
07:28 | ಮದುವೆಗಳಿಗಾಗಿ ಛಾಯಾಚಿತ್ರಣ ಮಾಡುವ ಒಂದು ವ್ಯಕ್ತಿಯ ಬಗೆಗೆ ನನಗೆ ಗೊತ್ತಿದೆ. ಬಿಳಿ ಬಣ್ಣದ ಉಡುಪಿಗಾಗಿ ವಿನ್ಯಾಸವನ್ನು ಕೊಡಲು, ಬಿಳಿ ಬಣ್ಣದಲ್ಲಿ ಸೂಕ್ಷ್ಮವಾಗಿ ಟ್ಯೂನ್ ಮಾಡಲ್ಪಟ್ಟ, ವಿಶೇಷ ಹೊಳಪುಳ್ಳ ಕರ್ವ್ಅನ್ನು ಅವನು ಪಡೆದಿದ್ದಾನೆ. |
07:42 | ಈ ಇಮೇಜ್ನಲ್ಲಿ ಕರ್ವ್ ಟೂಲನ್ನು ನಾನು ಹೇಗೆ ಬಳಸುತ್ತೇನೆ? |
07:47 | ನನಗೆ ಇಮೇಜ್ನ ಗಾಢವಾದ ಭಾಗವು ಸ್ವಲ್ಪ ಹೆಚ್ಚು ಗಾಢವಾಗಿ ಬೇಕಾಗಿದೆ. |
07:52 | ನನಗೆ ಮಧ್ಯದಲ್ಲಿಯ ಭಾಗಗಳನ್ನು ಇದ್ದ ಹಾಗೆಯೇ ಇಡಬೇಕಾಗಿದೆ ಮತ್ತು ಹೊಳೆಯುವ ಭಾಗವನ್ನು ಸ್ವಲ್ಪ ಹೆಚ್ಚು ಹೊಳೆಯುವಂತೆ ಮಾಡಬೇಕಾಗಿದೆ. |
08:00 | ಇದನ್ನು ಮಾಡಲು ನಾನು ‘S’ ಕರ್ವ್ ಬಳಸಬೇಕೆಂದಿದ್ದೇನೆ. |
08:06 | ನಾನು ಕೆಳಭಾಗದಲ್ಲಿಯ ಕರ್ವನ್ನು ಸ್ವಲ್ಪ ಕೆಳಗೆ ಎಳೆಯುತ್ತೇನೆ ಹಾಗೂ ಗಾಢವಾದ ಭಾಗವು ಇನ್ನೂ ಹೆಚ್ಚು ಗಾಢವಾಗುವುದನ್ನು ನೀವು ನೋಡಬಹುದು. ನಾನು ಹೊಳೆಯುವ ಭಾಗಕ್ಕೆ ಹೋಗುತ್ತೇನೆ ಮತ್ತು ಕರ್ವನ್ನು ಮೇಲಕ್ಕೆ ತಳ್ಳುತ್ತೇನೆ ಹಾಗೂ ಹೊಳೆಯುವ ಭಾಗವನ್ನು ಇನ್ನೂ ಹೆಚ್ಚು ಹೊಳೆಯುವಂತೆ ಮಾಡುತ್ತೇನೆ. |
08:25 | ಹೆಚ್ಚು ಹೊಳಪಿಗಾಗಿ ನೀವು ಕರ್ವನ್ನು ಸ್ವಲ್ಪ ಮೇಲೆ ಎಳೆಯಬಹುದು. |
08:39 | ನಾನು OK ಯನ್ನು ಕ್ಲಿಕ್ ಮಾಡಿದಾಗ ಕರ್ವನ ವ್ಯಾಲ್ಯೂಗಳು ಸ್ಟೋರ್ ಆಗುತ್ತವೆ. |
08:44 | ನಾನು ಇಲ್ಲಿ ಈ ಪ್ರಕ್ರಿಯೆಯನ್ನು ಪುನಃ ಮಾಡಿದಾಗ ಹಿಸ್ಟೋಗ್ರಾಮ್, ಬದಲಾಗಿದೆ ಎನ್ನುವುದನ್ನು ನೀವು ನೋಡಬಹುದು. |
08:52 | ಇಲ್ಲಿ ಮಧ್ಯದಲ್ಲಿ ಪಿಕ್ಸೆಲ್ಗಳು ಇಲ್ಲ, ಯಾವ ವ್ಯಾಲ್ಯೂಗಳೂ ಇಲ್ಲ. ನಾನು Logarithmic ಮೋಡ್ನ ಮೇಲೆ ಕ್ಲಿಕ್ ಮಾಡಿದಾಗ ಅಲ್ಲಿಯೂ ಕೂಡ ಕೆಲವು ಪಿಕ್ಸೆಲ್ಗಳಿಗೆ ವ್ಯಾಲ್ಯೂಗಳಿಲ್ಲ ಎನ್ನುವುದನ್ನು ನೀವು ನೋಡಬಹುದು. |
09:04 | ಪ್ರತಿಯೊಂದು ಸಲ ನೀವು ಕರ್ವ್ಸ್ ಟೂಲನ್ನು ಬಳಸಿದಾಗ ಇಮೇಜ್ನಲ್ಲಿಯ ಕೆಲವು ಪಿಕ್ಸೆಲ್ಗಳನ್ನು ಕಳೆದುಕೊಳ್ಳುವಿರಿ. |
09:12 | ಆದ್ದರಿಂದ ಇದರ ವಿರುದ್ಧವಾಗಿ ಎಂದರೆ, ಇಲ್ಲಿ ಕರ್ವನ್ನು ಮೇಲೆ ಎಳೆಯುವುದು ಮತ್ತು ಇಲ್ಲಿ ಕೆಳಗೆ ಎಳೆಯುವುದನ್ನು ಮಾಡಿ, ಕರ್ವ್ ಆಪರೇಶನ್ ಅನ್ನು Undo ಮಾಡಲು ಪ್ರಯತ್ನಿಸಬೇಡಿ. |
09:24 | OK ಯನ್ನು ಕ್ಲಿಕ್ ಮಾಡಿ. ಇದು ಇನ್ನೂ ಹೆಚ್ಚು ಹೆಚ್ಚು ಕೆಡುವುದನ್ನು ಈಗ ನೀವು ನೋಡಬಹುದು ಹಾಗೂ ನಿಮಗೆ ಕೊನೆಯಲ್ಲಿ ಕಲರ್ ಬ್ಯಾಂಡಿಂಗ್ ಹೊಂದಿದ ಇಮೇಜ್ ಮಾತ್ರ ಸಿಗುತ್ತದೆ. |
09:38 | ಆದ್ದರಿಂದ ಒಂದು ಬದಲಾವಣೆಯನ್ನು ಮಾಡಲು ಮಾತ್ರ ಕರ್ವ್ಸ್ ಟೂಲನ್ನು ಬಳಸಿರಿ ಮತ್ತು ಜಾಗರೂಕತೆಯಿಂದ ಬಳಸಿರಿ. ಇಲ್ಲದಿದ್ದರೆ ನೀವು ಇಮೇಜ್ನಲ್ಲಿಯ ಪಿಕ್ಸೆಲ್ಗಳನ್ನು ಕಳೆದುಕೊಳ್ಳುವಿರಿ ಮತ್ತು ಕಲರ್ ಬ್ಯಾಂಡಿಂಗ್ ಇರುವ ಇಮೇಜನ್ನು ಪಡೆಯುವಿರಿ. |
09:56 | ಈ ಟ್ಯುಟೋರಿಯಲ್ ಗಾಗಿ ಇಷ್ಟು ಸಾಕು ಎಂದು ಭಾವಿಸುತ್ತೇನೆ. |
10:01 | ಮತ್ತು ಮುಂದಿನ ಟ್ಯುಟೋರಿಯಲ್ ನಲ್ಲಿ ನಿಮ್ಮನ್ನು ನೋಡುತ್ತೇನೆಂದು ಆಶಿಸುತ್ತೇನೆ. |
10:08 | ನಿಮ್ಮ ಅಭಿಪ್ರಾಯವನ್ನು ತಿಳಿಸಲು ದಯವಿಟ್ಟು ಈ ಕೆಳಗಿನ ‘ಲಿಂಕ್’ಗೆ ಬರೆಯಿರಿ. ನಾನು ನಿಮ್ಮಿಂದ ಅದನ್ನು ಕೇಳಲು ಇಚ್ಛಿಸುತ್ತೇನೆ. ಆದ್ದರಿಂದ ನನ್ನ ಬ್ಲಾಗ್ನಲ್ಲಿ ನಿಮ್ಮ ಅಭಿಪ್ರಾಯ ಬರೆಯಿರಿ. info@meetthegimp.org |
10:23 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದಿಂದ, ಅನುವಾದಕಿ ಸಂಧ್ಯಾ ಪುಣೇಕರ್ ಮತ್ತು ಪ್ರವಾಚಕ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ ನಮಸ್ಕಾರ.. |