GIMP/C2/The-Curves-Tool/Kannada

From Script | Spoken-Tutorial
Jump to: navigation, search
Time Narration
00:25 Meet The GIMP (ಮೀಟ್ ದ್ ಗಿಂಪ್) ನ ‘ಸ್ಪೋಕನ್ ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ.
00:28 ಇದನ್ನು, ರೋಲ್ಫ್ ಸ್ಟೆನೋರ್ಟ್ ಅವರು ಉತ್ತರ ಜರ್ಮನಿಯ ಬ್ರೆಮೆನ್ ಎನ್ನುವಲ್ಲಿ ರೆಕಾರ್ಡ್ ಮಾಡಿದ್ದಾರೆ.
00:33 ಈಗ, ಇಂದಿನ ‘ಟ್ಯುಟೋರಿಯಲ್’ ಅನ್ನು ನಾವು ಆರಂಭಿಸೋಣ.
00:35 ಇದು ಕರ್ವ್ಸ್ ಎನ್ನುವುದರ ಕುರಿತು ಆಗಿದೆ.
00:37 ಮೊದಲು ನಾನು ‘ಟೂಲ್ ಬಾಕ್ಸ’ನಲ್ಲಿಯ Curves Tool ಅನ್ನು ಸಕ್ರಿಯಗೊಳಿಸುತ್ತೇನೆ. ಆಮೇಲೆ ಇಮೇಜ್ನಲ್ಲಿ ಕ್ಲಿಕ್ ಮಾಡುತ್ತೇನೆ.
00:44 ಕರ್ವ್ಸ್ ಟೂಲ್ನಲ್ಲಿ ಒಂದು ಹಿಸ್ಟೋಗ್ರಾಮ್ ಇರುವದನ್ನು ನೀವು ನೋಡಬಹುದು. ಇಲ್ಲಿ ಗ್ರೇ ಸ್ಕೇಲನ್ನು ಹೊಂದಿರುವ ಎರಡು ಬಾರ್ ಗಳಿವೆ.
00:58 ಆಮೇಲೆ, ಕರ್ವ್ಸ್ ಟೂಲ್ನಲ್ಲಿ ಆಯ್ಕೆಮಾಡಲು Preview, Save, Open ಮುಂತಾದ ಕೆಲವು ಬಟನ್ ಗಳಿವೆ.
01:06 ಆದರೆ ಈಗ ನಾವು ಕರ್ವ್ಸ್ ಟೂಲ್ನ ‘ಗ್ರೇ ಸ್ಕೇಲ್ ಬಾರ್’ನತ್ತ ಗಮನ ಕೊಡುವೆವು.
01:11 ಇಲ್ಲಿರುವ ಈ ಬಾರ್, ಸೋರ್ಸ್ ಇಮೇಜ್ನ ವಿವಿಧ ಬಣ್ಣಗಳ ಶ್ರೇಣಿಯನ್ನು ತೋರಿಸುತ್ತದೆ.
01:20 ಈ ಬಾರ್ ನಲ್ಲಿ, ಕೆಲವು ಪಿಕ್ಸೆಲ್ಗಳು ನಿಜಕ್ಕೂ ಗಾಢವಾಗಿವೆ ಹಾಗೂ ಕೆಲವು ಪಿಕ್ಸೆಲ್ಗಳು ನಿಜಕ್ಕೂ ಪ್ರಕಾಶಮಾನವಾಗಿವೆ. ಮಧ್ಯದಲ್ಲಿ ಗಾಢದಿಂದ ತಿಳಿಬಣ್ಣದವರೆಗಿನ ಪಿಕ್ಸೆಲ್ಗಳು ಇರುತ್ತವೆ.
01:33 ಇಲ್ಲಿಯ ಈ ಸಮತಲವಾಗಿರುವ ಬಾರ್, 256 ವಿಭಿನ್ನ ವರ್ಣಗಳ ಛಾಯೆಗಳನ್ನು ಹೊಂದಿರುತ್ತದೆ.
01:39 ಈ ಬಾರ್ ನ ಮೇಲೆ ಆರಂಭಿಕ ಪಾಯಿಂಟ್, ಸೊನ್ನೆಯಾಗಿದೆ ಹಾಗೂ ಇದು ಕಪ್ಪು ಬಣ್ಣ ಬಣ್ಣವಿರುತ್ತದೆ ಮತ್ತು ಕೊನೆಯ ಪಾಯಿಂಟ್, 255 ಆಗಿದೆ ಹಾಗೂ ಇದು ಬಿಳಿ ಬಣ್ಣವಿರುತ್ತದೆ.
01:49 ಉದಾಹರಣೆಗೆ, ಇಲ್ಲಿ ಈ 184, ಬೂದುಬಣ್ಣವಾಗಿದೆ.
01:53 ಈ ಇಮೇಜ್, ಬಹಳಷ್ಟು ಬಣ್ಣಗಳನ್ನು ಒಳಗೊಂಡಿದೆ.ಮತ್ತು ನಾನು ಚಾನೆಲ್ ಅನ್ನು ಬದಲಾಯಿಸಿ ಇಲ್ಲಿ ವಿವಿಧ ಬಣ್ಣಗಳನ್ನು ನಿಮಗೆ ತೋರಿಸಲು ಸಾಧ್ಯವಿದೆ.
02:01 ನಾವು colour Channel ನಲ್ಲಿ Red ಎನ್ನುವುದನ್ನು ಆಯ್ಕೆಮಾಡೋಣ. ನೀವು ಇಮೇಜ್ನಲ್ಲಿ ಕೆಂಪು ಛಾಯೆಯನ್ನು ನೋಡಬಹುದು.
02:07 ಹೀಗೆಯೇ, ನೀವು ಅದನ್ನು Green ಮತ್ತು Blue ಗಳಿಗೆ, ಆಯಾ ಛಾಯೆಗಳನ್ನು ಪಡೆಯಲು, ಬದಲಾಯಿಸಬಹುದು.
02:14 ಈ ಇಮೇಜ್ನಲ್ಲಿ, ಬಹಳಷ್ಟು ವ್ಯಾಲ್ಯೂಗಳಿರುವ ಹಸಿರು ಚಾನೆಲ್, ಪ್ರಬಲವಾಗಿರುವುದು ಆಶ್ಚರ್ಯಕರವೇನೂ ಆಗಿಲ್ಲ.
02:24 ಈಗ Reset Channel ನ ಮೇಲೆ ಕ್ಲಿಕ್ ಮಾಡಿರಿ.
02:27 ಪ್ರತಿಯೊಂದು ‘ಟೋನ್’ನ ಮೇಲಿನ ಹಿಸ್ಟೋಗ್ರಾಮ್ ನ ಕರ್ವ್, ಹೊಳಪನ್ನು ಹೊಂದಿರುವ ಪಿಕ್ಸೆಲ್ಗಳ ಎಣಿಕೆಯಾಗಿದೆ.
02:38 ಈ ಟರ್ಮಿನಲ್ ಹಾಗೂ ‘ಬಾರ್’ನ ಮೇಲಿನ ಈ ಟರ್ಮಿನಲ್ ಗಳಲ್ಲಿ ಬಹುಮಟ್ಟಿಗೆ ಒಂದೇ ಸಂಖ್ಯೆಯ ಪಿಕ್ಸೆಲ್ಗಳನ್ನು ಹೊಂದಿರುವ ಒಂದು ಜಾಗವನ್ನು ಇಲ್ಲಿ ನಾವು ಪಡೆದಿದ್ದೇವೆ.
02:49 ಈ ಹಿಸ್ಟೋಗ್ರಾಮ್, ಇಲ್ಲಿ ಅತಿ ಹೆಚ್ಚಿನ ಬಣ್ಣಗಳ ಶ್ರೇಣಿ ಇರುವದನ್ನು ತೋರಿಸುತ್ತದೆ.
02:56 ಕರ್ವ್ ಟೂಲ್, ಸಕ್ರಿಯವಾಗಿರುವಾಗ ನೀವು ಇಮೇಜ್ನಲ್ಲಿ ಹೋಗಿರಿ ಮತ್ತು ಮೌಸ್ ಕರ್ಸರ್, ಒಂದು ಪುಟ್ಟ ಡ್ರಾಪರ್ ಆಗಿ ಬದಲಾಯಿಸುತ್ತದೆ . ನಾನು ಇಲ್ಲಿ ಕ್ಲಿಕ್ ಮಾಡಿದಾಗ ಹಿಸ್ಟೋಗ್ರಾಮ್ನಲ್ಲಿಯ ಈ ಗೆರೆಯು ಆ ಪಾಯಿಂಟ್ ಗೆ ಸ್ಥಳಾಂತರವಾಗುತ್ತದೆ.
03:10 ಇಮೇಜ್ನಲ್ಲಿ ಯಾವ ಬಣ್ಣದ ಛಾಯೆ ಎಲ್ಲಿರುವದು ಎಂದು ತಿಳಿಯಲು ನೀವು ಇಮೇಜ್ನಲ್ಲಿ ಕ್ಲಿಕ್ ಮಾಡಿ ಅದರಲ್ಲಿ ಸುತ್ತಾಡಬಹುದು.
03:18 ಈಗ ನಾವು ಇಲ್ಲಿಯ ಸಮತಲವಾಗಿರುವ (horizontal) ‘ಬಾರ್’ಅನ್ನು ನೋಡಿ ಮುಗಿಸಿದ್ದೇವೆ.
03:22 ಮತ್ತು ಇಲ್ಲಿರುವುದು ಔಟ್ಪುಟ್ ಆಗಿದೆ.
03:26 ಅಲ್ಲದೇ ಇಲ್ಲಿ 256 ವಿಭಿನ್ನ ವ್ಯಾಲ್ಯೂಗಳಿವೆ ಮತ್ತು ಇವುಗಳು ಇಮೇಜನ್ನು ರೂಪಿಸುತ್ತವೆ.
03:33 ಸಮತಲವಾಗಿರುವ ಬಾರ್, ಕರ್ವಗೆ ಕೊಡಲಾಗುವ ಡೇಟಾ ಅನ್ನು ಒಳಗೊಂಡಿದೆ ಮತ್ತು ವರ್ಟಿಕಲ್ ಬಾರ್, ಹೊರಗೆ ಬರುವ ಡೇಟಾ ಅನ್ನು ಒಳಗೊಂಡಿದೆ.
03:44 ಗ್ರಾಫನ್ನು ದಾಟುವ ಮಧ್ಯದಲ್ಲಿರುವ ಈ ರೇಖೆಯು ‘ಟ್ರಾನ್ಸ್ಲೇಶನ್ ಫಂಕ್ಷನ್’ ಆಗಿದೆ.
03:53 ನಾನು ಮಧ್ಯದ ಬೂದುಬಣ್ಣದಿಂದ ಮೇಲೆ, ಟ್ರಾನ್ಸ್ಲೇಶನ್ ಕರ್ವಗೆ ಹೋಗಿ ಆಮೇಲೆ ಎಡಕ್ಕೆ ಇರುವ ವರ್ಟಿಕಲ್ ಬಾರ್ ಗೆ ಹೋದಾಗ ಪುನಃ ಬೂದುಬಣ್ಣದ ಮಧ್ಯವನ್ನು ತಲುಪುತ್ತೇನೆ.
04:04 ನಾನು ಈ ಕರ್ವನ್ನು ನನಗೆ ಬೇಕಾದ ಹಾಗೆ ಎಳೆದಾಡಬಹುದು. ನಾನು ಇದನ್ನು ಕೆಳಗೆ ಎಳೆದಾಗ ಇಮೇಜ್, ಗಾಢವಾಗುವುದನ್ನು ನೀವು ನೋಡುತ್ತೀರಿ.
04:13 ಈಗ ನಾನು ಮಧ್ಯದ ಬೂದುಬಣ್ಣದಿಂದ ಮೇಲೆ ಕರ್ವಗೆ ಹೋಗಿ ಆಮೇಲೆ ಎಡಕ್ಕೆ ಹೋದಾಗ ನಾನು ಗಾಢ ಬೂದುಬಣ್ಣವನ್ನು ತಲುಪುತ್ತೇನೆ.
04:23 ಇಲ್ಲಿಯ ಕೆಳಗಿನ ಬಾರ್, ಕರ್ವ್ ಟೂಲ್ನ ಮೂಲ ಇನ್ಪುಟ್ ಹಾಗೂ ವರ್ಟಿಕಲ್ ಬಾರ್, ಅದರ ಔಟ್ಪುಟ್ ಆಗಿದೆ ಎನ್ನುವುದನ್ನು ನೀವು ಇಲ್ಲಿ ನೋಡುತ್ತೀರಿ.
04:34 ನಾನು ಈ ಕರ್ವನ್ನು ಬಹಳಷ್ಟು ವಿಧಗಳಲ್ಲಿ ಬದಲಾಯಿಸಲು ಸಾಧ್ಯವಿದೆ, ಅದಕ್ಕೆ ಮಿತಿಯಿಲ್ಲ.
04:43 ನಾನು ಈ ಕರ್ವನ್ನು ಹಿಂದಕ್ಕೆ ಎಳೆಯಲು ಸಾಧ್ಯವಿಲ್ಲ ಎನ್ನುವುದೇ ಒಂದು ಮಿತಿ ಆಗಿದೆ. ನಾನು ಹೀಗೆ ಮಾಡಿದ ಕ್ಷಣದಲ್ಲಿ ಕರ್ವ್ ಟೂಲ್ನ ಮೇಲಿನ ಪಾಯಿಂಟ್, ಕಳೆದುಕೊಳ್ಳುತ್ತದೆ.
04:53 ಆದರೆ ನನಗೆ ಇಮೇಜ್ನಲ್ಲಿ ಯಾವುದೇ ಹೊಳೆಯುವ ಪಿಕ್ಸೆಲ್ಗಳನ್ನು ನೋಡಬೇಕಾಗಿಲ್ಲದಿದ್ದರೆ, ನಾನು ಎಲ್ಲ ಪಾಯಿಂಟ್ಗಳನ್ನು ಕೆಳಗೆ ಎಳೆಯಬಹುದು. ಆಗ ಇಮೇಜ್, ಹೆಚ್ಚುಕಡಿಮೆ ಕಪ್ಪು ಬಣ್ಣದ್ದಾಗಿರುತ್ತದೆ.
05:10 ಈ ಪಾಯಿಂಟನ್ನು ಸುಮ್ಮನೆ ಮೇಲೆ,ಇಲ್ಲಿಗೆ ಎಳೆಯಿರಿ. ನೀವು ಇಲ್ಲಿ ಹೊಳೆಯುವ ಏನನ್ನೋ ಪಡೆಯಲು ಸಾಧ್ಯವಿದೆ.
05:17 ವರ್ಷಗಳಿಂದ ಫ್ಯಾಷನ್ನಿನಲ್ಲಿರುವ ಇಮೇಜ್ಗಳು ಸಿಗುವವರೆಗೆ ಕರ್ವ್ಸ್ ಟೂಲ್ನ ಜೊತೆಗೆ ನೀವು ಆಟ ಆಡಬಹುದು.
05:28 Reset ಬಟನ್ ಮೇಲೆ ಕ್ಲಿಕ್ ಮಾಡಿ, ನಾವು ‘ಕರ್ವ್’ಅನ್ನು ರಿಸ್ಟಾರ್ಟ್ ಮಾಡಬಹುದು ಹಾಗೂ ಮೂಲ ‘ಕರ್ವ್’ಅನ್ನು ಪಡೆಯಬಹುದು.
05:34 ಕರ್ವ್ಸ್ ಟೂಲ್ನಲ್ಲಿ Linear Mode ಮತ್ತು Logarithmic Mode ನಂತಹ ಇನ್ನೂ ಕೆಲವು ಬಟನ್ ಗಳಿವೆ.
05:42 Logarithmic ಮೋಡ್ನಲ್ಲಿ ನೀವು ಸಣ್ಣ ವ್ಯಾಲ್ಯೂಗಳನ್ನು ಮೇಲೇರಿಸಿ ಪಡೆಯುವಿರಿ.
05:49 ಇಲ್ಲಿ, Linear ಮೋಡ್ನಲ್ಲಿ ಈ ಗೆರೆಯು, ಇಲ್ಲಿಯ ಈ ಗೆರೆಯ ಎರಡರಷ್ಟು ವ್ಯಾಲ್ಯೂವನ್ನು ಹೊಂದಿದೆ.
05:56 Logarithmic ಮೋಡ್ನಲ್ಲಿ ಈ ಗೆರೆಯು 1 ಇರಬಹುದು, ಇದು 10, ಇದು 100 ಮತ್ತು ಇದು 1000.
06:06 ಪ್ರತಿಯೊಂದು ಹಂತವು ನಿಮಗೆ ಹತ್ತುಪಟ್ಟು ಹೆಚ್ಚಾದ ವ್ಯಾಲ್ಯೂವನ್ನು ಕೊಡುತ್ತದೆ. ಇದರಿಂದ Linear ಮೋಡ್ನಲ್ಲಿ ಅಡಗಿಸಲ್ಪಟ್ಟ ಸಣ್ಣ ಪಿಕ್ಸೆಲ್ಗಳನ್ನು ನೀವು ನೋಡುತ್ತೀರಿ.
06:17 ನೀವು ಇದನ್ನು ಈ ಮೂಲೆಯಲ್ಲಿ ನೋಡಿ, 250 ಗಿಂತ ಹೆಚ್ಚಾದ ವ್ಯಾಲ್ಯೂವನ್ನು ಪಡೆದ ಪಿಕ್ಸೆಲ್ಗಳು ಇರುವದೋ ಹೇಗೆ ಎಂದು ಹೇಳಲು ಸಾಧ್ಯವಿಲ್ಲ.
06:27 ಆದರೆ Logarithmic ನಲ್ಲಿ ಇಮೇಜ್ನ ಪೂರ್ಣ ಶ್ರೇಣಿಯಲ್ಲಿ ನಾವು ಪಿಕ್ಸೆಲ್ಗಳನ್ನು ಪಡೆದಿದ್ದೇವೆ ಎನ್ನುವುದನ್ನು ನೀವು ನೋಡುತ್ತೀರಿ.
06:40 ಆಮೇಲೆ, ಇಲ್ಲಿ Curve Type ಎನ್ನುವ ಒಂದು ಬಟನ್ ಇರುತ್ತದೆ. ಇದುವರೆಗೆ ನಾನು ಬಳಸಿದ ಇಲ್ಲಿರುವ ಈ ಟೂಲ್, ಕರ್ವನ್ನು ಕೊಡುತ್ತದೆ. ನಾನು ಕರ್ವ್ ಟೈಪನ್ನು ಬದಲಾಯಿಸಿದಾಗ ನಾನು ನಿಜವಾಗಿಯೂ ಕರ್ವನ್ನು ಪೇಂಟ್ ಮಾಡಬಹುದು ಮತ್ತು ಕೆಲವು ಮೋಜಿನ ವಿಷಯಗಳನ್ನು ಪಡೆಯಬಹುದು. ಇದನ್ನು ನಾನು ಇಲ್ಲಿಯವರೆಗೆ ಯಾವಾಗಲೂ ಉಪಯೋಗಿಸಿರಲಿಲ್ಲ.
07:12 ಆಮೇಲೆ, ಅಲ್ಲಿ Save dialog ಮತ್ತು Open dialog ಎನ್ನುವ ಬಟನ್ ಗಳಿವೆ.
07:17 ನೀವು ಕರ್ವ್ಸ್ ಅನ್ನು ಬದಲಾಯಿಸುವುದನ್ನು ಮುಗಿಸಿದಾಗ ಅದನ್ನು ನಂತರದ ಬಳಕೆಗಾಗಿ ಸೇವ್ ಮಾಡಬಹುದು ಮತ್ತು ನಿಮಗೆ ಬೇಕಾದಾಗ ರಿಕಾಲ್ ಮಾಡಬಹುದು.
07:28 ಮದುವೆಗಳಿಗಾಗಿ ಛಾಯಾಚಿತ್ರಣ ಮಾಡುವ ಒಂದು ವ್ಯಕ್ತಿಯ ಬಗೆಗೆ ನನಗೆ ಗೊತ್ತಿದೆ. ಬಿಳಿ ಬಣ್ಣದ ಉಡುಪಿಗಾಗಿ ವಿನ್ಯಾಸವನ್ನು ಕೊಡಲು, ಬಿಳಿ ಬಣ್ಣದಲ್ಲಿ ಸೂಕ್ಷ್ಮವಾಗಿ ಟ್ಯೂನ್ ಮಾಡಲ್ಪಟ್ಟ, ವಿಶೇಷ ಹೊಳಪುಳ್ಳ ಕರ್ವ್ಅನ್ನು ಅವನು ಪಡೆದಿದ್ದಾನೆ.
07:42 ಈ ಇಮೇಜ್ನಲ್ಲಿ ಕರ್ವ್ ಟೂಲನ್ನು ನಾನು ಹೇಗೆ ಬಳಸುತ್ತೇನೆ?
07:47 ನನಗೆ ಇಮೇಜ್ನ ಗಾಢವಾದ ಭಾಗವು ಸ್ವಲ್ಪ ಹೆಚ್ಚು ಗಾಢವಾಗಿ ಬೇಕಾಗಿದೆ.
07:52 ನನಗೆ ಮಧ್ಯದಲ್ಲಿಯ ಭಾಗಗಳನ್ನು ಇದ್ದ ಹಾಗೆಯೇ ಇಡಬೇಕಾಗಿದೆ ಮತ್ತು ಹೊಳೆಯುವ ಭಾಗವನ್ನು ಸ್ವಲ್ಪ ಹೆಚ್ಚು ಹೊಳೆಯುವಂತೆ ಮಾಡಬೇಕಾಗಿದೆ.
08:00 ಇದನ್ನು ಮಾಡಲು ನಾನು ‘S’ ಕರ್ವ್ ಬಳಸಬೇಕೆಂದಿದ್ದೇನೆ.
08:06 ನಾನು ಕೆಳಭಾಗದಲ್ಲಿಯ ಕರ್ವನ್ನು ಸ್ವಲ್ಪ ಕೆಳಗೆ ಎಳೆಯುತ್ತೇನೆ ಹಾಗೂ ಗಾಢವಾದ ಭಾಗವು ಇನ್ನೂ ಹೆಚ್ಚು ಗಾಢವಾಗುವುದನ್ನು ನೀವು ನೋಡಬಹುದು. ನಾನು ಹೊಳೆಯುವ ಭಾಗಕ್ಕೆ ಹೋಗುತ್ತೇನೆ ಮತ್ತು ಕರ್ವನ್ನು ಮೇಲಕ್ಕೆ ತಳ್ಳುತ್ತೇನೆ ಹಾಗೂ ಹೊಳೆಯುವ ಭಾಗವನ್ನು ಇನ್ನೂ ಹೆಚ್ಚು ಹೊಳೆಯುವಂತೆ ಮಾಡುತ್ತೇನೆ.
08:25 ಹೆಚ್ಚು ಹೊಳಪಿಗಾಗಿ ನೀವು ಕರ್ವನ್ನು ಸ್ವಲ್ಪ ಮೇಲೆ ಎಳೆಯಬಹುದು.
08:39 ನಾನು OK ಯನ್ನು ಕ್ಲಿಕ್ ಮಾಡಿದಾಗ ಕರ್ವನ ವ್ಯಾಲ್ಯೂಗಳು ಸ್ಟೋರ್ ಆಗುತ್ತವೆ.
08:44 ನಾನು ಇಲ್ಲಿ ಈ ಪ್ರಕ್ರಿಯೆಯನ್ನು ಪುನಃ ಮಾಡಿದಾಗ ಹಿಸ್ಟೋಗ್ರಾಮ್, ಬದಲಾಗಿದೆ ಎನ್ನುವುದನ್ನು ನೀವು ನೋಡಬಹುದು.
08:52 ಇಲ್ಲಿ ಮಧ್ಯದಲ್ಲಿ ಪಿಕ್ಸೆಲ್ಗಳು ಇಲ್ಲ, ಯಾವ ವ್ಯಾಲ್ಯೂಗಳೂ ಇಲ್ಲ. ನಾನು Logarithmic ಮೋಡ್ನ ಮೇಲೆ ಕ್ಲಿಕ್ ಮಾಡಿದಾಗ ಅಲ್ಲಿಯೂ ಕೂಡ ಕೆಲವು ಪಿಕ್ಸೆಲ್ಗಳಿಗೆ ವ್ಯಾಲ್ಯೂಗಳಿಲ್ಲ ಎನ್ನುವುದನ್ನು ನೀವು ನೋಡಬಹುದು.
09:04 ಪ್ರತಿಯೊಂದು ಸಲ ನೀವು ಕರ್ವ್ಸ್ ಟೂಲನ್ನು ಬಳಸಿದಾಗ ಇಮೇಜ್ನಲ್ಲಿಯ ಕೆಲವು ಪಿಕ್ಸೆಲ್ಗಳನ್ನು ಕಳೆದುಕೊಳ್ಳುವಿರಿ.
09:12 ಆದ್ದರಿಂದ ಇದರ ವಿರುದ್ಧವಾಗಿ ಎಂದರೆ, ಇಲ್ಲಿ ಕರ್ವನ್ನು ಮೇಲೆ ಎಳೆಯುವುದು ಮತ್ತು ಇಲ್ಲಿ ಕೆಳಗೆ ಎಳೆಯುವುದನ್ನು ಮಾಡಿ, ಕರ್ವ್ ಆಪರೇಶನ್ ಅನ್ನು Undo ಮಾಡಲು ಪ್ರಯತ್ನಿಸಬೇಡಿ.
09:24 OK ಯನ್ನು ಕ್ಲಿಕ್ ಮಾಡಿ. ಇದು ಇನ್ನೂ ಹೆಚ್ಚು ಹೆಚ್ಚು ಕೆಡುವುದನ್ನು ಈಗ ನೀವು ನೋಡಬಹುದು ಹಾಗೂ ನಿಮಗೆ ಕೊನೆಯಲ್ಲಿ ಕಲರ್ ಬ್ಯಾಂಡಿಂಗ್ ಹೊಂದಿದ ಇಮೇಜ್ ಮಾತ್ರ ಸಿಗುತ್ತದೆ.
09:38 ಆದ್ದರಿಂದ ಒಂದು ಬದಲಾವಣೆಯನ್ನು ಮಾಡಲು ಮಾತ್ರ ಕರ್ವ್ಸ್ ಟೂಲನ್ನು ಬಳಸಿರಿ ಮತ್ತು ಜಾಗರೂಕತೆಯಿಂದ ಬಳಸಿರಿ. ಇಲ್ಲದಿದ್ದರೆ ನೀವು ಇಮೇಜ್ನಲ್ಲಿಯ ಪಿಕ್ಸೆಲ್ಗಳನ್ನು ಕಳೆದುಕೊಳ್ಳುವಿರಿ ಮತ್ತು ಕಲರ್ ಬ್ಯಾಂಡಿಂಗ್ ಇರುವ ಇಮೇಜನ್ನು ಪಡೆಯುವಿರಿ.
09:56 ಈ ಟ್ಯುಟೋರಿಯಲ್ ಗಾಗಿ ಇಷ್ಟು ಸಾಕು ಎಂದು ಭಾವಿಸುತ್ತೇನೆ.
10:01 ಮತ್ತು ಮುಂದಿನ ಟ್ಯುಟೋರಿಯಲ್ ನಲ್ಲಿ ನಿಮ್ಮನ್ನು ನೋಡುತ್ತೇನೆಂದು ಆಶಿಸುತ್ತೇನೆ.
10:08 ನಿಮ್ಮ ಅಭಿಪ್ರಾಯವನ್ನು ತಿಳಿಸಲು ದಯವಿಟ್ಟು ಈ ಕೆಳಗಿನ ‘ಲಿಂಕ್’ಗೆ ಬರೆಯಿರಿ. ನಾನು ನಿಮ್ಮಿಂದ ಅದನ್ನು ಕೇಳಲು ಇಚ್ಛಿಸುತ್ತೇನೆ. ಆದ್ದರಿಂದ ನನ್ನ ಬ್ಲಾಗ್ನಲ್ಲಿ ನಿಮ್ಮ ಅಭಿಪ್ರಾಯ ಬರೆಯಿರಿ. info@meetthegimp.org
10:23 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದಿಂದ, ಅನುವಾದಕಿ ಸಂಧ್ಯಾ ಪುಣೇಕರ್ ಮತ್ತು ಪ್ರವಾಚಕ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ ನಮಸ್ಕಾರ..

Contributors and Content Editors

NaveenBhat, Sandhya.np14