QGIS/C2/Creating-Dataset-Using-Google-Earth-Pro/Kannada
From Script | Spoken-Tutorial
Revision as of 19:40, 31 December 2020 by NaveenBhat (Talk | contribs)
Time | Narration |
00:01 | Creating Dataset using Google Earth Pro (ಕ್ರಿಯೇಟಿಂಗ್ ಡಾಟಾಸೆಟ್ ಯೂಸಿಂಗ್ ಗೂಗಲ್ ಅರ್ಥ್ ಪ್ರೊ) ದ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು, |
00:10 | Google Earth Pro ಅನ್ನು ಡೌನ್ಲೋಡ್ ಮಾಡುವುದು ಮತ್ತು ಇನ್ಸ್ಟಾಲ್ ಮಾಡುವುದು, |
00:13 | Google Earth Pro ಅನ್ನು ನ್ಯಾವಿಗೇಟ್ ಮಾಡುವುದು ಮತ್ತು ಡಾಟಾಸೆಟ್ ಅನ್ನು ರಚಿಸುವುದು, |
00:19 | Google Earth Pro ಅನ್ನು ಬಳಸಿ, Kml ಫಾರ್ಮ್ಯಾಟ್ ನಲ್ಲಿ point ಮತ್ತು polygon ಫೈಲ್ ಗಳನ್ನು ರಚಿಸುವುದು ಮತ್ತು |
00:26 | QGIS ನಲ್ಲಿ Kml ಫೈಲ್ ಗಳನ್ನು ತೆರೆಯುವುದು ಇವುಗಳ ಕುರಿತು ಕಲಿಯುವೆವು. |
00:30 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು
ಉಬಂಟು ಲಿನಕ್ಸ್ ಒ.ಎಸ್ 16.04 ಆವೃತ್ತಿ ಮತ್ತು |
00:38 | QGIS ಆವೃತ್ತಿ 2.18 |
00:42 | Google-Earth Pro ನ 7.3 ಆವೃತ್ತಿ, |
00:46 | Mozilla Firefox ಬ್ರೌಸರ್ ನ 54.0 ಆವೃತ್ತಿ ಮತ್ತು |
00:50 | ಕಾರ್ಯನಿರ್ವಹಿಸುತ್ತಿರುವ ಇಂಟರ್ನೆಟ್ ಸಂಪರ್ಕ– ಇವುಗಳನ್ನು ಬಳಸುತ್ತಿದ್ದೇನೆ. |
00:55 | ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು QGIS ಇಂಟರ್ಫೇಸ್ ನ ಕುರಿತು ತಿಳಿದಿರಬೇಕು. |
01:01 | ಹಿಂದಿನ ಟ್ಯುಟೋರಿಯಲ್ ಗಳಿಗಾಗಿ, ನಮ್ಮ ವೆಬ್ ಸೈಟ್ ಅನ್ನು ಭೇಟಿಮಾಡಿ. |
01:07 | Google Earth ಇದು ಕಂಪ್ಯೂಟರ್ ನ ಪ್ರೋಗ್ರಾಂ ಆಗಿದ್ದು, ಅದು ಭೂಮಿಯ 3D ಪ್ರಾತಿನಿಧ್ಯವನ್ನು ನೀಡುತ್ತದೆ. |
01:15 | ಈ ಪ್ರೋಗ್ರಾಂ ಭೂಮಿಯ ಮೇಲಿನಿಂದ, ಉಪಗ್ರಹ ಚಿತ್ರಗಳು, ವೈಮಾನಿಕ ಛಾಯಾಗ್ರಹಣ ಮತ್ತು GIS data ಮೂಲಕ ನಕ್ಷೆಯನ್ನು ತೋರಿಸುತ್ತದೆ. |
01:25 | ಈ ಪ್ರೋಗ್ರಾಂ ನಗರಗಳು ಮತ್ತು ಭೂ ಪ್ರದೇಶವನ್ನು ಹಲವಾರು ಕೋನಗಳಿಂದ ನೋಡಲು ಅವಕಾಶ ಕೊಡುತ್ತದೆ. |
01:32 | ಈಗ Google Earth Pro ಅನ್ನು ಡೌನ್ಲೋಡ್ ಮಾಡಿ, ಇನ್ಸ್ಟಾಲ್ ಮಾಡೋಣ. |
01:37 | ನಿಮ್ಮ ಸಿಸ್ಟಮ್ ನಲ್ಲಿ ಈಗಾಗಲೇ ಇದು ಇನ್ಸ್ಟಾಲ್ ಆಗಿದ್ದರೆ ನೀವು ಈ ಹಂತವನ್ನು ಬಿಡಬಹುದು. |
01:42 | Google Search ಪೇಜ್ ಅನ್ನು ತೆರೆಯಿರಿ. |
01:46 | search bar ನಲ್ಲಿ, “ Download Google Earth Pro” ಎಂದು ಟೈಪ್ ಮಾಡಿ, Enter ಅನ್ನು ಒತ್ತಿ. |
01:53 | ಫಲಿತಾಂಶವನ್ನೊಳಗೊಂದ ಪುಟ ತೆರೆದುಕೊಳ್ಳುತ್ತದೆ. |
01:56 | ಮೊದಲ ಫಲಿತಾಂಶ, Earth Versions-Google Earth (ಅರ್ಥ್ ವರ್ಷನ್ಸ್ – ಗೂಗಲ್ ಅರ್ಥ್) ಅನ್ನು ಕ್ಲಿಕ್ ಮಾಡಿ. |
02:02 | Google Earth ಅನ್ನು ಡೌನ್ಲೋಡ್ ಮಾಡಲು, ಮೂರು ಆಯ್ಕೆಗಳಿರುವ ಒಂದು ಪುಟ ತೆರೆದುಕೊಳ್ಳುತ್ತದೆ. |
02:08 | ಪರದೆಯ ಕೆಳಬಲಭಾಗದಲ್ಲಿರುವ Download Earth Pro on desktop ಬಟನ್ ಅನ್ನು ಕ್ಲಿಕ್ ಮಾಡಿ. |
02:15 | Download Google Earth Pro (Linux), ಪ್ರೈವಸಿ ಪಾಲಿಸಿ ಮತ್ತು ಟರ್ಮ್ಸ್ ಗಳಿರುವ ಪುಟ ತೆರೆದುಕೊಳ್ಳುತ್ತದೆ. |
02:22 | ಇಲ್ಲಿ ಕೊಟ್ಟಿರುವ ಎಲ್ಲ ಮಾಹಿತಿಗಳನ್ನು ಓದಿ. |
02:26 | ಇಲ್ಲಿ ನೀವು ಡೌನ್ಲೋಡ್ ಮಾಡುತ್ತಿರುವ Google Earth Pro ದ ಆವೃತ್ತಿಯನ್ನು ತೋರಿಸಲಾಗಿದೆ. |
02:32 | ನಿಮ್ಮ ಡೌನ್ಲೋಡ್ ಪ್ಯಾಕೇಜ್ ಅನ್ನು ಸರಿಯಾದ ರೇಡಿಯೋ ಬಟನ್ ಅನ್ನು ಕ್ಲಿಕ್ ಮಾಡುವುದರ ಮೂಲಕ ಆಯ್ಕೆ ಮಾಡಿ. |
02:38 | ನಾನು 64 bit dot deb ಅನ್ನು ಆಯ್ಕೆ ಮಾಡುವೆನು. |
02:42 | Accept & Download ಬಟನ್ ನ ಮೇಲೆ ಕ್ಲಿಕ್ ಮಾಡಿ. |
02:47 | ಒಂದು ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ, Save file ಅನ್ನು ಆಯ್ಕೆ ಮಾಡಿ ಮತ್ತು OK ಬಟನ್ ಅನ್ನು ಕ್ಲಿಕ್ ಮಾಡಿ. |
02:54 | Downloads ಫೋಲ್ಡರ್ ನಲ್ಲಿ ಫೈಲ್ ಡೌನ್ಲೋಡ್ ಆಗುತ್ತದೆ. |
02:58 | ಇನ್ಸ್ಟಾಲ್ ಮಾಡಲು, terminal ಅನ್ನು ತೆರೆಯಿರಿ. |
03:02 | ಡೈರೆಕ್ಟರಿಯನ್ನು Downloads ಎಂದು ಬದಲಿಸಿ. |
03:06 | ಪರದೆಯ ಮೇಲೆ ತೋರಿಸಿದಂತೆ, ಕಮಾಂಡ್ ಅನ್ನು ಟೈಪ್ ಮಾಡಿ.
Enter ಅನ್ನು ಒತ್ತಿ. |
03:12 | ಕೇಳಿದಾಗ ನಿಮ್ಮ ಸಿಸ್ಟಮ್ ಪಾಸ್ವರ್ಡ್ ಅನ್ನು ಟೈಪ್ ಮಾಡಿ. |
03:18 | ಕೆಲವು ಸೆಕೆಂಡ್ ಗಳ ನಂತರ ಪ್ರೋಗ್ರಾಂ ನ ಇನ್ಸ್ಟಾಲೇಷನ್ ಪೂರ್ಣಗೊಳ್ಳುವುದು. |
03:23 | terminal ಅನ್ನು ಮುಚ್ಚಿರಿ. |
03:26 | Dashboard ಅನ್ನು ತೆರೆದು, search box ನಲ್ಲಿ Google Earth Pro ಎಂದು ಟೈಪ್ ಮಾಡಿ. |
03:32 | Google Earth Pro ಐಕಾನ್ ಅನ್ನು ಕ್ಲಿಕ್ ಮಾಡಿ.
ಇದು Google Earth Pro ಇಂಟರ್ಫೇಸ್ ಅನ್ನು ತೆರೆಯುತ್ತದೆ. |
03:40 | Google Earth Pro ಅನ್ನುWindows ಮತ್ತು Mac ಗಳಲ್ಲಿ ಇನ್ಸ್ಟಾಲ್ ಮಾಡುವ ಹಂತಗಳನ್ನು, Additional material ನಲ್ಲಿ ಕೊಡಲಾಗಿದೆ. |
03:48 | Start-up Tips ಪುಟವನ್ನು ಓದಿ. |
03:52 | ವಿಂಡೋವನ್ನು ಕ್ಲೋಸ್ ಮಾಡಲು, Close ಬಟನ್ ಅನ್ನು ಕ್ಲಿಕ್ ಮಾಡಿ. |
03:56 | ಈಗ ನಾವು Google Earth ಅನ್ನು ಬಳಸಿ data set ಅನ್ನು ರಚಿಸುವೆವು. |
04:00 | ಎಡಗಡೆಯ ಪ್ಯಾನಲ್ ನಲ್ಲಿ, Places ಟ್ಯಾಬ್ ನಡಿಯಲ್ಲಿ, Temporary Places ಫೋಲ್ಡರ್ ಅನ್ನು ರೈಟ್ ಕ್ಲಿಕ್ ಮಾಡಿ. |
04:07 | Add ಅನ್ನು ಆಯ್ಕೆ ಮಾಡಿ ನಂತರ ಸಬ್-ಮೆನ್ಯುವಿನಿಂದ Folder ಅನ್ನು ಆಯ್ಕೆ ಮಾಡಿ. |
04:12 | Google Earth - New Folder ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
04:17 | Name ಫೀಲ್ಡ್ ನಲ್ಲಿ Places in Maharashtra ಎಂದು ಟೈಪ್ ಮಾಡಿ. |
04:22 | ಎರಡು ಚೆಕ್ ಬಾಕ್ಸ್ ಗಳನ್ನು ಚೆಕ್ ಮಾಡಿ. |
04:24 | ಅವು : Allow this folder to be expanded (ಅಲೊವ್ ದಿಸ್ ಫೋಲ್ಡರ್ ಟು ಬಿ ಎಕ್ಸ್ಪ್ಯಾಂಡೆಡ್) ಮತ್ತು
Show contents as options(ಷೋ ಕಂಟೆಂಟ್ಸ್ ಆಸ್ ಆಪ್ಷನ್ಸ್) ಗಳಾಗಿವೆ. |
04:31 | ಕೆಳ ಬಲ ಮೂಲೆಯಲ್ಲಿರುವ OK ಬಟನ್ ಅನ್ನು ಕ್ಲಿಕ್ ಮಾಡಿ. |
04:35 | Places in Maharashtra ಫೋಲ್ಡರ್ Places ಪ್ಯಾನಲ್ ಗೆ ಸೇರ್ಪಡೆಯಾಗಿದೆ. |
04:40 | ಈಗ ನಾವು ಈ ಫೋಲ್ಡರ್ ನಲ್ಲಿ ಒಂದು point data set ಅನ್ನು ರಚಿಸುವೆವು. |
04:45 | ನಾವು ಆಯಾ ಜಾಗಗಳಿಗೆ ಹೋಗಲು Google Earth ಅನ್ನು ಬಳಸುವೆವು. |
04:50 | ಎಡ ಪ್ಯಾನಲ್ ನಲ್ಲಿರುವ search box ನಲ್ಲಿ Mumbai ಎಂದು ಟೈಪ್ ಮಾಡಿ, Search ಬಟನ್ ಅನ್ನು ಕ್ಲಿಕ್ ಮಾಡಿ. |
05:00 | Google Earth ಈಗ Mumbai ಭಾಗವನ್ನು ತೋರಿಸಲು ಮ್ಯಾಪ್ ಅನ್ನು ಝೂಮ್ ಮಾಡುವುದು. |
05:05 | Mumbai ಭಾಗದ ಪ್ರದೇಶಗಳು ಕಾಣುತ್ತವೆ. |
05:10 | ಟೂಲ್ ಬಾರ್ ನಲ್ಲಿ ಹಳದಿ ಬಣ್ಣದ ಪಿನ್ ನಂತೆ ತೋರಿಸಿರುವ Add placemark tool ಟೂಲ್ ನ ಮೇಲೆ ಕ್ಲಿಕ್ ಮಾಡಿ. |
05:17 | Google-Earth New Placemark ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
05:22 | Name ಫೀಲ್ಡ್ ನಲ್ಲಿ Mumbai ಎಂದು ಟೈಪ್ ಮಾಡಿ. |
05:26 | Name ಫೀಲ್ಡ್ ನ ಮುಂದಿರುವ Pin ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
05:31 | ಆರಿಸಬಹುದಾದ ಆಯ್ಕೆಗಳೊಡನೆ ಐಕಾನ್ ಬಾಕ್ಸ್ ತೆರೆದುಕೊಳ್ಳುತ್ತದೆ. ನಾನು ಕೆಂಪು ಪಿನ್ ಐಕಾನ್ ಅನ್ನು ಆಯ್ಕೆ ಮಾಡುವೆನು. |
05:39 | ಈಗ ಐಕಾನ್ ಡಯಲಾಗ್ ಬಾಕ್ಸ್ ನ ಕೆಳ ಬಲ ಮೂಲೆಯಲ್ಲಿರುವ OK ಬಟನ್ ಅನ್ನು ಕ್ಲಿಕ್ ಮಾಡಿ. |
05:46 | New placemark ಡಯಲಾಗ್ ಬಾಕ್ಸ್ ನಲ್ಲಿ OK ಬಟನ್ ಅನ್ನು ಕ್ಲಿಕ್ ಮಾಡಿ. |
05:51 | ಒಂದು ಹೊಸ placemark, ಮ್ಯಾಪ್ ಗೆ ಸೇರ್ಪಡೆಯಾಗಿರುವುದನ್ನು ಗಮನಿಸಿ. |
05:56 | Mumbai ಪ್ರದೇಶವು, Places ಪ್ಯಾನಲ್ ಗೆ ಸೇರ್ಪಡೆಯಾಗಿದೆ. |
06:01 | search panel ನಲ್ಲಿ ಸರ್ಚ್ ರಿಸಲ್ಟ್ ಗಳನ್ನು ಖಾಲಿ ಮಾಡಿ.
search box ನಲ್ಲೆ Pune ಎಂದು ಟೈಪ್ ಮಾಡಿ. |
06:09 | ಸರ್ಚ್ ಆಯ್ಕೆಗಳಿಂದ Pune Maharashtra ಅನ್ನು ಆಯ್ಕೆ ಮಾಡಿ.
Search ಬಟನ್ ನ ಮೇಲೆ ಕ್ಲಿಕ್ ಮಾಡಿ. |
06:17 | Google Earth ಈಗ Pune ನಗರವನ್ನು ತೋರಿಸಲು, ಮ್ಯಾಪ್ ಅನ್ನು ಝೂಮ್ ಮಾಡುತ್ತದೆ. |
06:22 | Pune ಪ್ರದೇಶವನ್ನು ಮ್ಯಾಪ್ ನಲ್ಲಿ ನೋಡಬಹುದು.
ಈಗ ನಾವು Pune ಗೆ Placemark ಅನ್ನು ಸೇರಿಸುವೆವು. |
06:31 | ಟೂಲ್ ಬಾರ್ ನಲ್ಲಿ Add placemark ನ ಮೇಲೆ ಕ್ಲಿಕ್ ಮಾಡಿ. |
06:35 | ನಾವು ಮುಂಬೈ ಗೆ ಪ್ಲೇಸ್ ಮಾರ್ಕ್ ಅನ್ನು ಸೇರಿಸುವಾಗ ಅನುಸರಿದ ಹಂತಗಳನ್ನೇ ಅನುಸರಿಸಿ. |
06:43 | ಎಲ್ಲ ಹಂತಗಳನ್ನು ಪೂರ್ಣಗೊಳಿಸಿದ ನಂತರ, Pune ಗೆ placemark ಬಂದಿರುವುದನ್ನು ಗಮನಿಸಿ. |
06:50 | Satara, Nashik, Amravati, Chandrapur, Jalna, Latur, ಮತ್ತು Dhule ನಗರಗಳಿಗೂ ಇದೇ ವಿಧಾನವನ್ನು ಅನುಸರಿಸಿ ಗುರುತು ಮಾಡಿ. |
07:05 | ನಾವು Maharashtra ದ ಕೆಲವು ಜಾಗಗಳಿಗೆ, ಲೊಕೇಷನ್ ಮ್ಯಾಪ್ ಅನ್ನು ರಚಿಸಿದ್ದೇವೆ. |
07:11 | ಈಗ ಈ ಜಾಗಗಳಿಗೆ boundary layer ಅನ್ನು ರಚಿಸೋಣ. |
07:16 | Places in Maharashtra ಫೋಲ್ಡರ್ ಐಕಾನ್ ಅನ್ನು ರೈಟ್ ಕ್ಲಿಕ್ ಮಾಡಿ. |
07:20 | Add ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಸಬ್ ಮೆನ್ಯುವಿನಿಂದ Folder ಅನ್ನು ಆಯ್ಕೆ ಮಾಡಿ. |
07:28 | Google Earth New Folder ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
07:33 | Name ಫೀಲ್ಡ್ ನಲ್ಲಿ, Boundary ಎಂದು ಟೈಪ್ ಮಾಡಿ. |
07:37 | ಪರದೆಯ ಕೆಳ ಬಲ ಮೂಲೆಯಲ್ಲಿರುವ Ok ಬಟನ್ ಅನ್ನು ಕ್ಲಿಕ್ ಮಾಡಿ. |
07:43 | Places ಪ್ಯಾನಲ್ ನಲ್ಲಿ, Boundary ಫೋಲ್ಡರ್ ಸೇರ್ಪಡೆಯಾಗಿದೆ. |
07:48 | ಝೂಮ್ ಔಟ್ ಮಾಡಲು, ಸ್ಲೈಡರ್ ಅನ್ನು ಬಲಕ್ಕೆ ಎಳೆಯಿರಿ. |
07:54 | ನಾವು Maharashtra ದ ಗಡಿಯನ್ನು ನೋಡುವವರೆಗೂ, ಸ್ಲೈಡರ್ ಅನ್ನು ಎಳೆಯಿರಿ. |
07:59 | ಟೂಲ್ ಬಾರ್ ನಲ್ಲಿ Add polygon ಆಯ್ಕೆಯನ್ನು ಕ್ಲಿಕ್ ಮಾಡಿ. |
08:04 | Name ಫೀಲ್ಡ್ ನಲ್ಲಿ Boundary ಎಂದು ಟೈಪ್ ಮಾಡಿ. |
08:08 | Maharashtra ದ ಗಡಿಯನ್ನು ಕ್ಲಿಕ್ ಮಾಡಲು ಆರಂಭಿಸಿ ಮತ್ತು Maharashtra ದ ಗಡಿಯನ್ನು ಸ್ಥೂಲವಾಗಿ ಚಿತ್ರಿಸಿ. |
08:31 | ಒಮ್ಮೆ ಮುಗಿದ ಮೇಲೆ, OK ಬಟನ್ ಅನ್ನು ಕ್ಲಿಕ್ ಮಾಡಿ. |
08:36 | Places ಪ್ಯಾನಲ್ ಗೆ Boundary polygon layer ಸೇರ್ಪಡೆಯಾಗಿದೆ. |
08:41 | Places in Maharashtra ಫೋಲ್ಡರ್ ನ ಮೇಲೆ ರೈಟ್ ಕ್ಲಿಕ್ ಮಾಡಿ. |
08:46 | ಸಬ್ ಮೆನ್ಯುವಿನಿಂದ Save Place as... ಅನ್ನು ಕ್ಲಿಕ್ ಮಾಡಿ. |
08:51 | Save file ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
08:55 | ಈಗ ಫೈಲ್ ಅನ್ನು Places in Maharashtra ಎಂದು ಹೆಸರಿಸೋಣ. |
09:00 | ಫೈಲ್ ಅನ್ನು ಸೇವ್ ಮಾಡಲು ಸರಿಯಾದ ಜಾಗವನ್ನು ಆಯ್ಕೆಮಾಡಿಕೊಳ್ಳಿ.
ನಾನು Desktop ಅನ್ನು ಆಯ್ಕೆ ಮಾಡುವೆನು. |
09:07 | ನೀವು ಈ ಫೈಲ್ ಅನ್ನು ಎರಡು ಬೇರೆ ಬೇರೆ ಫಾರ್ಮ್ಯಾಟ್ ಗಳಲ್ಲಿ ಸೇವ್ ಮಾಡಬಹುದು. |
09:12 | ನೀವು, “Files of type” ಡ್ರಾಪ್ ಡೌನ್ ನಲ್ಲಿ, Kml ಮತ್ತು Kmz ಎಂಬ ಆಯ್ಕೆಗಳನ್ನು ನೋಡಬಹುದು. |
09:20 | Kmzಇದು Kml ಫೈಲ್ ನ ಕಂಪ್ರೆಸ್ ಆದ ಆವೃತ್ತಿಯಾಗಿದೆ. |
09:25 | Kmz ಫೈಲ್ ಫಾರ್ಮ್ಯಾಟ್ ಅನ್ನು ಸಾಮಾನ್ಯವಾಗಿ ದೊಡ್ಡ ಫೈಲ್ ಗಳನ್ನು ಸೇವ್ ಮಾಡಲು ಬಳಸುವೆವು. |
09:31 | ನೀವು ಇಲ್ಲಿ ಕೊಟ್ಟಿರುವ ಯಾವ ಆಯ್ಕೆಯನ್ನಾದರೂ ಆಯ್ಕೆ ಮಾಡಬಹುದು. |
09:36 | ನಾನು ಫೈಲ್ ಅನ್ನು ಸೇವ್ ಮಾಡಲು, Kml ಫಾರ್ಮ್ಯಟ್ ಅನ್ನು ಬಳಸುವೆನು. |
09:40 | Files of type ಫೀಲ್ಡ್ ನಲ್ಲಿ, Kml format ನ ಮೇಲೆ ಕ್ಲಿಕ್ ಮಾಡಿ. |
09:45 | ಡಯಲಾಗ್ ಬಾಕ್ಸ್ ನ ಕೆಳ ಬಲ ಮೂಲೆಯಲ್ಲಿರುವ, Save ಬಟನ್ ನ ಮೇಲೆ ಕ್ಲಿಕ್ ಮಾಡಿ. |
09:51 | ಅದೇ ರೀತಿ Boundary file ಅನ್ನು ಕೂಡ Kml ಫಾರ್ಮ್ಯಾಟ್ ನಲ್ಲಿ ಸೇವ್ ಮಾಡಿ. |
09:56 | Places in Maharashtra.kml ಮತ್ತು Boundary.kml ಎನ್ನುವ ಎರಡು ಫೈಲ್ ಗಳು Desktop ನಲ್ಲಿ ಸೇವ್ ಆಗಿವೆ. |
10:06 | ಮುಂದೆ ನಾವು Google Earth Pro ನಲ್ಲಿ ರಚಿಸಿದ ಈ ಎರಡು ಫೈಲ್ ಗಳನ್ನು QGIS ನಲ್ಲಿ ತೆರೆಯುವೆವು. |
10:13 | QGIS ಇಂಟರ್ಫೇಸ್ ಅನ್ನು ತೆರೆಯಿರಿ. |
10:17 | ಎಡಗಡೆಯ ಮೆನ್ಯುವಿನಿಂದ, Add Vector Layer ಟೂಲ್ ಅನ್ನು ಕ್ಲಿಕ್ ಮಾಡಿ. |
10:22 | Add Vector Layer ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
10:26 | Source ಫೀಲ್ಡ್ ನಡಿಯಲ್ಲಿ, Browse ಬಟನ್ ಅನ್ನು ಕ್ಲಿಕ್ ಮಾಡಿ. |
10:31 | Desktop ಫೋಲ್ಡರ್ ಗೆ ಹೋಗಿ, |
10:35 | Places in Maharashtra.kml ಮತ್ತು Boundary.kml ಈ ಎರಡೂ ಫೈಲ್ಸ್ ಗಳನ್ನೂ ಕ್ಲಿಕ್ ಮಾಡಿ. |
10:42 | Open ಬಟನ್ ಅನ್ನು ಕ್ಲಿಕ್ ಮಾಡಿ. |
10:45 | Add vector layer ಡಯಲಾಗ್ ಬಾಕ್ಸ್ ನಲ್ಲಿ, Open ಬಟನ್ ಅನ್ನು ಕ್ಲಿಕ್ ಮಾಡಿ. |
10:50 | Select vector Layers to add ಡಯಲಾಗ್ ಬಾಕ್ಸ್ ನಲ್ಲಿ, Select All ಬಟನ್ ಅನ್ನು ಕ್ಲಿಕ್ ಮಾಡಿ.
OK ಬಟನ್ ಅನ್ನು ಕ್ಲಿಕ್ ಮಾಡಿ. |
11:01 | ಈಗ ಇಂಪೋರ್ಟ್ ಮಾಡಿದ ಎರಡೂ ಫೈಲ್ ಗಳೂ, QGIS ನಲ್ಲಿlayers ಗಳಾಗಿ ಸೇರ್ಪಡೆಯಾಗಿವೆ. |
11:08 | ಈ ಲೇಯರ್ ಗಳನ್ನು QGIS ನಲ್ಲಿ ಇನ್ನೂ ಹೆಚ್ಚಿನ ವಿಶ್ಲೇಷಣೆಗಳಿಗೆ ಬಳಸಬಹುದು. |
11:15 | ಸಂಕ್ಷಿಪ್ತವಾಗಿ,
ಈ ಟ್ಯುಟೋರಿಯಲ್ ನಲ್ಲಿ ನಾವು, Google Earth Pro ಅನ್ನು ಡೌನ್ಲೋಡ್ ಮಾಡುವುದು ಮತ್ತು ಇನ್ಸ್ಟಾಲ್ ಮಾಡುವುದು, |
11:23 | Google Earth Pro ಅನ್ನು ನ್ಯಾವಿಗೇಟ್ ಮಾಡುವುದು ಮತ್ತು ಡಾಟಾಸೆಟ್ ಅನ್ನು ರಚಿಸುವುದು, |
11:29 | Google Earth Pro ಅನ್ನು ಬಳಸಿ, Kml ಫಾರ್ಮ್ಯಾಟ್ ನಲ್ಲಿ point ಮತ್ತು polygon ಫೈಲ್ ಗಳನ್ನು ರಚಿಸುವುದು ಮತ್ತು |
11:36 | QGIS ನಲ್ಲಿ Kml ಫೈಲ್ ಗಳನ್ನು ತೆರೆಯುವುದು ಇವುಗಳ ಕುರಿತು ಕಲಿತಿದ್ದೇವೆ. |
11:40 | ಅಸೈನ್ಮೆಂಟ್ ಆಗಿ,
ಭಾರತದ ರಾಜ್ಯ ರಾಜಧಾನಿಗಳ ಒಂದು data set ಅನ್ನು ರಚಿಸಿ. |
11:46 | point ಮತ್ತು boundary ಫೈಲ್ ಗಳನ್ನು Kml ಫಾರ್ಮ್ಯಾಟ್ ನಲ್ಲಿ ಸೇವ್ ಮಾಡಿ.
ಸುಳಿವು: ಎಲ್ಲ ರಾಜ್ಯ ರಾಜಧಾನಿಗಳನ್ನು ಗುರುತಿಸಿ ಮತ್ತು ಭಾರತದ boundary ಯನ್ನು ರಚಿಸಿ. |
11:57 | ನಿಮ್ಮ ಪೂರ್ಣಗೊಂಡ ಅಸೈನ್ ಮೆಂಟ್ ಈ ರೀತಿಯಾಗಿ ಕಾಣಬೇಕು. |
12:03 | ಕೆಳಗಿನ ಲಿಂಕ್ನಲ್ಲಿರುವ ವೀಡಿಯೊ ಸ್ಪೋಕನ್ ಟ್ಯುಟೋರಿಯಲ್ ಯೋಜನೆಯನ್ನು ಕುರಿತು ವಿವರಿಸುತ್ತದೆ.
ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ. |
12:11 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡ, ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ನಮ್ಮ ಆನ್ಲೈನ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ.
ವಿವರಗಳಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
12:21 | ನೀವು ಪ್ರಶ್ನೆಯನ್ನು ಹೊಂದಿರುವ ನಿಮಿಷ ಮತ್ತು ಸೆಕೆಂಡ್ ಅನ್ನು ಆರಿಸಿ.
ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ. |
12:24 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗೆ NMEICT, MHRD, ಭಾರತ ಸರ್ಕಾರ ಧನಸಹಾಯ ನೀಡುತ್ತದೆ. |
12:31 | ಅನುವಾದ ಮತ್ತು ಧ್ವನಿ ಶ್ರೀ ನವೀನ ಭಟ್ಟ ಉಪ್ಪಿನಪಟ್ಟಣ. ಧನ್ಯವಾದಗಳು. |