QGIS/C2/Creating-Dataset-Using-Google-Earth-Pro/Kannada

From Script | Spoken-Tutorial
Jump to: navigation, search
Time Narration
00:01 Creating Dataset using Google Earth Pro (ಕ್ರಿಯೇಟಿಂಗ್ ಡಾಟಾಸೆಟ್ ಯೂಸಿಂಗ್ ಗೂಗಲ್ ಅರ್ಥ್ ಪ್ರೊ) ದ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು,
00:10 Google Earth Pro ಅನ್ನು ಡೌನ್ಲೋಡ್ ಮಾಡುವುದು ಮತ್ತು ಇನ್ಸ್ಟಾಲ್ ಮಾಡುವುದು,
00:13 Google Earth Pro ಅನ್ನು ನ್ಯಾವಿಗೇಟ್ ಮಾಡುವುದು ಮತ್ತು ಡಾಟಾಸೆಟ್ ಅನ್ನು ರಚಿಸುವುದು,
00:19 Google Earth Pro ಅನ್ನು ಬಳಸಿ, Kml ಫಾರ್ಮ್ಯಾಟ್ ನಲ್ಲಿ point ಮತ್ತು polygon ಫೈಲ್ ಗಳನ್ನು ರಚಿಸುವುದು ಮತ್ತು
00:26 QGIS ನಲ್ಲಿ Kml ಫೈಲ್ ಗಳನ್ನು ತೆರೆಯುವುದು ಇವುಗಳ ಕುರಿತು ಕಲಿಯುವೆವು.
00:30 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು

ಉಬಂಟು ಲಿನಕ್ಸ್ ಒ.ಎಸ್ 16.04 ಆವೃತ್ತಿ ಮತ್ತು

00:38 QGIS ಆವೃತ್ತಿ 2.18
00:42 Google-Earth Pro ನ 7.3 ಆವೃತ್ತಿ,
00:46 Mozilla Firefox ಬ್ರೌಸರ್ ನ 54.0 ಆವೃತ್ತಿ ಮತ್ತು
00:50 ಕಾರ್ಯನಿರ್ವಹಿಸುತ್ತಿರುವ ಇಂಟರ್ನೆಟ್ ಸಂಪರ್ಕ– ಇವುಗಳನ್ನು ಬಳಸುತ್ತಿದ್ದೇನೆ.
00:55 ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು QGIS ಇಂಟರ್ಫೇಸ್ ನ ಕುರಿತು ತಿಳಿದಿರಬೇಕು.
01:01 ಹಿಂದಿನ ಟ್ಯುಟೋರಿಯಲ್ ಗಳಿಗಾಗಿ, ನಮ್ಮ ವೆಬ್ ಸೈಟ್ ಅನ್ನು ಭೇಟಿಮಾಡಿ.
01:07 Google Earth ಇದು ಕಂಪ್ಯೂಟರ್ ನ ಪ್ರೋಗ್ರಾಂ ಆಗಿದ್ದು, ಅದು ಭೂಮಿಯ 3D ಪ್ರಾತಿನಿಧ್ಯವನ್ನು ನೀಡುತ್ತದೆ.
01:15 ಈ ಪ್ರೋಗ್ರಾಂ ಭೂಮಿಯ ಮೇಲಿನಿಂದ, ಉಪಗ್ರಹ ಚಿತ್ರಗಳು, ವೈಮಾನಿಕ ಛಾಯಾಗ್ರಹಣ ಮತ್ತು GIS data ಮೂಲಕ ನಕ್ಷೆಯನ್ನು ತೋರಿಸುತ್ತದೆ.
01:25 ಈ ಪ್ರೋಗ್ರಾಂ ನಗರಗಳು ಮತ್ತು ಭೂ ಪ್ರದೇಶವನ್ನು ಹಲವಾರು ಕೋನಗಳಿಂದ ನೋಡಲು ಅವಕಾಶ ಕೊಡುತ್ತದೆ.
01:32 ಈಗ Google Earth Pro ಅನ್ನು ಡೌನ್ಲೋಡ್ ಮಾಡಿ, ಇನ್ಸ್ಟಾಲ್ ಮಾಡೋಣ.
01:37 ನಿಮ್ಮ ಸಿಸ್ಟಮ್ ನಲ್ಲಿ ಈಗಾಗಲೇ ಇದು ಇನ್ಸ್ಟಾಲ್ ಆಗಿದ್ದರೆ ನೀವು ಈ ಹಂತವನ್ನು ಬಿಡಬಹುದು.
01:42 Google Search ಪೇಜ್ ಅನ್ನು ತೆರೆಯಿರಿ.
01:46 search bar ನಲ್ಲಿ, “ Download Google Earth Pro” ಎಂದು ಟೈಪ್ ಮಾಡಿ, Enter ಅನ್ನು ಒತ್ತಿ.
01:53 ಫಲಿತಾಂಶವನ್ನೊಳಗೊಂದ ಪುಟ ತೆರೆದುಕೊಳ್ಳುತ್ತದೆ.
01:56 ಮೊದಲ ಫಲಿತಾಂಶ, Earth Versions-Google Earth (ಅರ್ಥ್ ವರ್ಷನ್ಸ್ – ಗೂಗಲ್ ಅರ್ಥ್) ಅನ್ನು ಕ್ಲಿಕ್ ಮಾಡಿ.
02:02 Google Earth ಅನ್ನು ಡೌನ್ಲೋಡ್ ಮಾಡಲು, ಮೂರು ಆಯ್ಕೆಗಳಿರುವ ಒಂದು ಪುಟ ತೆರೆದುಕೊಳ್ಳುತ್ತದೆ.
02:08 ಪರದೆಯ ಕೆಳಬಲಭಾಗದಲ್ಲಿರುವ Download Earth Pro on desktop ಬಟನ್ ಅನ್ನು ಕ್ಲಿಕ್ ಮಾಡಿ.
02:15 Download Google Earth Pro (Linux), ಪ್ರೈವಸಿ ಪಾಲಿಸಿ ಮತ್ತು ಟರ್ಮ್ಸ್ ಗಳಿರುವ ಪುಟ ತೆರೆದುಕೊಳ್ಳುತ್ತದೆ.
02:22 ಇಲ್ಲಿ ಕೊಟ್ಟಿರುವ ಎಲ್ಲ ಮಾಹಿತಿಗಳನ್ನು ಓದಿ.
02:26 ಇಲ್ಲಿ ನೀವು ಡೌನ್ಲೋಡ್ ಮಾಡುತ್ತಿರುವ Google Earth Pro ದ ಆವೃತ್ತಿಯನ್ನು ತೋರಿಸಲಾಗಿದೆ.
02:32 ನಿಮ್ಮ ಡೌನ್ಲೋಡ್ ಪ್ಯಾಕೇಜ್ ಅನ್ನು ಸರಿಯಾದ ರೇಡಿಯೋ ಬಟನ್ ಅನ್ನು ಕ್ಲಿಕ್ ಮಾಡುವುದರ ಮೂಲಕ ಆಯ್ಕೆ ಮಾಡಿ.
02:38 ನಾನು 64 bit dot deb ಅನ್ನು ಆಯ್ಕೆ ಮಾಡುವೆನು.
02:42 Accept & Download ಬಟನ್ ನ ಮೇಲೆ ಕ್ಲಿಕ್ ಮಾಡಿ.
02:47 ಒಂದು ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ, Save file ಅನ್ನು ಆಯ್ಕೆ ಮಾಡಿ ಮತ್ತು OK ಬಟನ್ ಅನ್ನು ಕ್ಲಿಕ್ ಮಾಡಿ.
02:54 Downloads ಫೋಲ್ಡರ್ ನಲ್ಲಿ ಫೈಲ್ ಡೌನ್ಲೋಡ್ ಆಗುತ್ತದೆ.
02:58 ಇನ್ಸ್ಟಾಲ್ ಮಾಡಲು, terminal ಅನ್ನು ತೆರೆಯಿರಿ.
03:02 ಡೈರೆಕ್ಟರಿಯನ್ನು Downloads ಎಂದು ಬದಲಿಸಿ.
03:06 ಪರದೆಯ ಮೇಲೆ ತೋರಿಸಿದಂತೆ, ಕಮಾಂಡ್ ಅನ್ನು ಟೈಪ್ ಮಾಡಿ.

Enter ಅನ್ನು ಒತ್ತಿ.

03:12 ಕೇಳಿದಾಗ ನಿಮ್ಮ ಸಿಸ್ಟಮ್ ಪಾಸ್ವರ್ಡ್ ಅನ್ನು ಟೈಪ್ ಮಾಡಿ.
03:18 ಕೆಲವು ಸೆಕೆಂಡ್ ಗಳ ನಂತರ ಪ್ರೋಗ್ರಾಂ ನ ಇನ್ಸ್ಟಾಲೇಷನ್ ಪೂರ್ಣಗೊಳ್ಳುವುದು.
03:23 terminal ಅನ್ನು ಮುಚ್ಚಿರಿ.
03:26 Dashboard ಅನ್ನು ತೆರೆದು, search box ನಲ್ಲಿ Google Earth Pro ಎಂದು ಟೈಪ್ ಮಾಡಿ.
03:32 Google Earth Pro ಐಕಾನ್ ಅನ್ನು ಕ್ಲಿಕ್ ಮಾಡಿ.

ಇದು Google Earth Pro ಇಂಟರ್ಫೇಸ್ ಅನ್ನು ತೆರೆಯುತ್ತದೆ.

03:40 Google Earth Pro ಅನ್ನುWindows ಮತ್ತು Mac ಗಳಲ್ಲಿ ಇನ್ಸ್ಟಾಲ್ ಮಾಡುವ ಹಂತಗಳನ್ನು, Additional material ನಲ್ಲಿ ಕೊಡಲಾಗಿದೆ.
03:48 Start-up Tips ಪುಟವನ್ನು ಓದಿ.
03:52 ವಿಂಡೋವನ್ನು ಕ್ಲೋಸ್ ಮಾಡಲು, Close ಬಟನ್ ಅನ್ನು ಕ್ಲಿಕ್ ಮಾಡಿ.
03:56 ಈಗ ನಾವು Google Earth ಅನ್ನು ಬಳಸಿ data set ಅನ್ನು ರಚಿಸುವೆವು.
04:00 ಎಡಗಡೆಯ ಪ್ಯಾನಲ್ ನಲ್ಲಿ, Places ಟ್ಯಾಬ್ ನಡಿಯಲ್ಲಿ, Temporary Places ಫೋಲ್ಡರ್ ಅನ್ನು ರೈಟ್ ಕ್ಲಿಕ್ ಮಾಡಿ.
04:07 Add ಅನ್ನು ಆಯ್ಕೆ ಮಾಡಿ ನಂತರ ಸಬ್-ಮೆನ್ಯುವಿನಿಂದ Folder ಅನ್ನು ಆಯ್ಕೆ ಮಾಡಿ.
04:12 Google Earth - New Folder ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
04:17 Name ಫೀಲ್ಡ್ ನಲ್ಲಿ Places in Maharashtra ಎಂದು ಟೈಪ್ ಮಾಡಿ.
04:22 ಎರಡು ಚೆಕ್ ಬಾಕ್ಸ್ ಗಳನ್ನು ಚೆಕ್ ಮಾಡಿ.
04:24 ಅವು : Allow this folder to be expanded (ಅಲೊವ್ ದಿಸ್ ಫೋಲ್ಡರ್ ಟು ಬಿ ಎಕ್ಸ್ಪ್ಯಾಂಡೆಡ್) ಮತ್ತು

Show contents as options(ಷೋ ಕಂಟೆಂಟ್ಸ್ ಆಸ್ ಆಪ್ಷನ್ಸ್) ಗಳಾಗಿವೆ.

04:31 ಕೆಳ ಬಲ ಮೂಲೆಯಲ್ಲಿರುವ OK ಬಟನ್ ಅನ್ನು ಕ್ಲಿಕ್ ಮಾಡಿ.
04:35 Places in Maharashtra ಫೋಲ್ಡರ್ Places ಪ್ಯಾನಲ್ ಗೆ ಸೇರ್ಪಡೆಯಾಗಿದೆ.
04:40 ಈಗ ನಾವು ಈ ಫೋಲ್ಡರ್ ನಲ್ಲಿ ಒಂದು point data set ಅನ್ನು ರಚಿಸುವೆವು.
04:45 ನಾವು ಆಯಾ ಜಾಗಗಳಿಗೆ ಹೋಗಲು Google Earth ಅನ್ನು ಬಳಸುವೆವು.
04:50 ಎಡ ಪ್ಯಾನಲ್ ನಲ್ಲಿರುವ search box ನಲ್ಲಿ Mumbai ಎಂದು ಟೈಪ್ ಮಾಡಿ, Search ಬಟನ್ ಅನ್ನು ಕ್ಲಿಕ್ ಮಾಡಿ.
05:00 Google Earth ಈಗ Mumbai ಭಾಗವನ್ನು ತೋರಿಸಲು ಮ್ಯಾಪ್ ಅನ್ನು ಝೂಮ್ ಮಾಡುವುದು.
05:05 Mumbai ಭಾಗದ ಪ್ರದೇಶಗಳು ಕಾಣುತ್ತವೆ.
05:10 ಟೂಲ್ ಬಾರ್ ನಲ್ಲಿ ಹಳದಿ ಬಣ್ಣದ ಪಿನ್ ನಂತೆ ತೋರಿಸಿರುವ Add placemark tool ಟೂಲ್ ನ ಮೇಲೆ ಕ್ಲಿಕ್ ಮಾಡಿ.
05:17 Google-Earth New Placemark ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
05:22 Name ಫೀಲ್ಡ್ ನಲ್ಲಿ Mumbai ಎಂದು ಟೈಪ್ ಮಾಡಿ.
05:26 Name ಫೀಲ್ಡ್ ನ ಮುಂದಿರುವ Pin ಐಕಾನ್ ನ ಮೇಲೆ ಕ್ಲಿಕ್ ಮಾಡಿ.
05:31 ಆರಿಸಬಹುದಾದ ಆಯ್ಕೆಗಳೊಡನೆ ಐಕಾನ್ ಬಾಕ್ಸ್ ತೆರೆದುಕೊಳ್ಳುತ್ತದೆ. ನಾನು ಕೆಂಪು ಪಿನ್ ಐಕಾನ್ ಅನ್ನು ಆಯ್ಕೆ ಮಾಡುವೆನು.
05:39 ಈಗ ಐಕಾನ್ ಡಯಲಾಗ್ ಬಾಕ್ಸ್ ನ ಕೆಳ ಬಲ ಮೂಲೆಯಲ್ಲಿರುವ OK ಬಟನ್ ಅನ್ನು ಕ್ಲಿಕ್ ಮಾಡಿ.
05:46 New placemark ಡಯಲಾಗ್ ಬಾಕ್ಸ್ ನಲ್ಲಿ OK ಬಟನ್ ಅನ್ನು ಕ್ಲಿಕ್ ಮಾಡಿ.
05:51 ಒಂದು ಹೊಸ placemark, ಮ್ಯಾಪ್ ಗೆ ಸೇರ್ಪಡೆಯಾಗಿರುವುದನ್ನು ಗಮನಿಸಿ.
05:56 Mumbai ಪ್ರದೇಶವು, Places ಪ್ಯಾನಲ್ ಗೆ ಸೇರ್ಪಡೆಯಾಗಿದೆ.
06:01 search panel ನಲ್ಲಿ ಸರ್ಚ್ ರಿಸಲ್ಟ್ ಗಳನ್ನು ಖಾಲಿ ಮಾಡಿ.

search box ನಲ್ಲೆ Pune ಎಂದು ಟೈಪ್ ಮಾಡಿ.

06:09 ಸರ್ಚ್ ಆಯ್ಕೆಗಳಿಂದ Pune Maharashtra ಅನ್ನು ಆಯ್ಕೆ ಮಾಡಿ.

Search ಬಟನ್ ನ ಮೇಲೆ ಕ್ಲಿಕ್ ಮಾಡಿ.

06:17 Google Earth ಈಗ Pune ನಗರವನ್ನು ತೋರಿಸಲು, ಮ್ಯಾಪ್ ಅನ್ನು ಝೂಮ್ ಮಾಡುತ್ತದೆ.
06:22 Pune ಪ್ರದೇಶವನ್ನು ಮ್ಯಾಪ್ ನಲ್ಲಿ ನೋಡಬಹುದು.

ಈಗ ನಾವು Pune ಗೆ Placemark ಅನ್ನು ಸೇರಿಸುವೆವು.

06:31 ಟೂಲ್ ಬಾರ್ ನಲ್ಲಿ Add placemark ನ ಮೇಲೆ ಕ್ಲಿಕ್ ಮಾಡಿ.
06:35 ನಾವು ಮುಂಬೈ ಗೆ ಪ್ಲೇಸ್ ಮಾರ್ಕ್ ಅನ್ನು ಸೇರಿಸುವಾಗ ಅನುಸರಿದ ಹಂತಗಳನ್ನೇ ಅನುಸರಿಸಿ.
06:43 ಎಲ್ಲ ಹಂತಗಳನ್ನು ಪೂರ್ಣಗೊಳಿಸಿದ ನಂತರ, Pune ಗೆ placemark ಬಂದಿರುವುದನ್ನು ಗಮನಿಸಿ.
06:50 Satara, Nashik, Amravati, Chandrapur, Jalna, Latur, ಮತ್ತು Dhule ನಗರಗಳಿಗೂ ಇದೇ ವಿಧಾನವನ್ನು ಅನುಸರಿಸಿ ಗುರುತು ಮಾಡಿ.
07:05 ನಾವು Maharashtra ದ ಕೆಲವು ಜಾಗಗಳಿಗೆ, ಲೊಕೇಷನ್ ಮ್ಯಾಪ್ ಅನ್ನು ರಚಿಸಿದ್ದೇವೆ.
07:11 ಈಗ ಈ ಜಾಗಗಳಿಗೆ boundary layer ಅನ್ನು ರಚಿಸೋಣ.
07:16 Places in Maharashtra ಫೋಲ್ಡರ್ ಐಕಾನ್ ಅನ್ನು ರೈಟ್ ಕ್ಲಿಕ್ ಮಾಡಿ.
07:20 Add ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಸಬ್ ಮೆನ್ಯುವಿನಿಂದ Folder ಅನ್ನು ಆಯ್ಕೆ ಮಾಡಿ.
07:28 Google Earth New Folder ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
07:33 Name ಫೀಲ್ಡ್ ನಲ್ಲಿ, Boundary ಎಂದು ಟೈಪ್ ಮಾಡಿ.
07:37 ಪರದೆಯ ಕೆಳ ಬಲ ಮೂಲೆಯಲ್ಲಿರುವ Ok ಬಟನ್ ಅನ್ನು ಕ್ಲಿಕ್ ಮಾಡಿ.
07:43 Places ಪ್ಯಾನಲ್ ನಲ್ಲಿ, Boundary ಫೋಲ್ಡರ್ ಸೇರ್ಪಡೆಯಾಗಿದೆ.
07:48 ಝೂಮ್ ಔಟ್ ಮಾಡಲು, ಸ್ಲೈಡರ್ ಅನ್ನು ಬಲಕ್ಕೆ ಎಳೆಯಿರಿ.
07:54 ನಾವು Maharashtra ದ ಗಡಿಯನ್ನು ನೋಡುವವರೆಗೂ, ಸ್ಲೈಡರ್ ಅನ್ನು ಎಳೆಯಿರಿ.
07:59 ಟೂಲ್ ಬಾರ್ ನಲ್ಲಿ Add polygon ಆಯ್ಕೆಯನ್ನು ಕ್ಲಿಕ್ ಮಾಡಿ.
08:04 Name ಫೀಲ್ಡ್ ನಲ್ಲಿ Boundary ಎಂದು ಟೈಪ್ ಮಾಡಿ.
08:08 Maharashtra ದ ಗಡಿಯನ್ನು ಕ್ಲಿಕ್ ಮಾಡಲು ಆರಂಭಿಸಿ ಮತ್ತು Maharashtra ದ ಗಡಿಯನ್ನು ಸ್ಥೂಲವಾಗಿ ಚಿತ್ರಿಸಿ.
08:31 ಒಮ್ಮೆ ಮುಗಿದ ಮೇಲೆ, OK ಬಟನ್ ಅನ್ನು ಕ್ಲಿಕ್ ಮಾಡಿ.
08:36 Places ಪ್ಯಾನಲ್ ಗೆ Boundary polygon layer ಸೇರ್ಪಡೆಯಾಗಿದೆ.
08:41 Places in Maharashtra ಫೋಲ್ಡರ್ ನ ಮೇಲೆ ರೈಟ್ ಕ್ಲಿಕ್ ಮಾಡಿ.
08:46 ಸಬ್ ಮೆನ್ಯುವಿನಿಂದ Save Place as... ಅನ್ನು ಕ್ಲಿಕ್ ಮಾಡಿ.
08:51 Save file ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
08:55 ಈಗ ಫೈಲ್ ಅನ್ನು Places in Maharashtra ಎಂದು ಹೆಸರಿಸೋಣ.
09:00 ಫೈಲ್ ಅನ್ನು ಸೇವ್ ಮಾಡಲು ಸರಿಯಾದ ಜಾಗವನ್ನು ಆಯ್ಕೆಮಾಡಿಕೊಳ್ಳಿ.

ನಾನು Desktop ಅನ್ನು ಆಯ್ಕೆ ಮಾಡುವೆನು.

09:07 ನೀವು ಈ ಫೈಲ್ ಅನ್ನು ಎರಡು ಬೇರೆ ಬೇರೆ ಫಾರ್ಮ್ಯಾಟ್ ಗಳಲ್ಲಿ ಸೇವ್ ಮಾಡಬಹುದು.
09:12 ನೀವು, “Files of type” ಡ್ರಾಪ್ ಡೌನ್ ನಲ್ಲಿ, Kml ಮತ್ತು Kmz ಎಂಬ ಆಯ್ಕೆಗಳನ್ನು ನೋಡಬಹುದು.
09:20 Kmzಇದು Kml ಫೈಲ್ ನ ಕಂಪ್ರೆಸ್ ಆದ ಆವೃತ್ತಿಯಾಗಿದೆ.
09:25 Kmz ಫೈಲ್ ಫಾರ್ಮ್ಯಾಟ್ ಅನ್ನು ಸಾಮಾನ್ಯವಾಗಿ ದೊಡ್ಡ ಫೈಲ್ ಗಳನ್ನು ಸೇವ್ ಮಾಡಲು ಬಳಸುವೆವು.
09:31 ನೀವು ಇಲ್ಲಿ ಕೊಟ್ಟಿರುವ ಯಾವ ಆಯ್ಕೆಯನ್ನಾದರೂ ಆಯ್ಕೆ ಮಾಡಬಹುದು.
09:36 ನಾನು ಫೈಲ್ ಅನ್ನು ಸೇವ್ ಮಾಡಲು, Kml ಫಾರ್ಮ್ಯಟ್ ಅನ್ನು ಬಳಸುವೆನು.
09:40 Files of type ಫೀಲ್ಡ್ ನಲ್ಲಿ, Kml format ನ ಮೇಲೆ ಕ್ಲಿಕ್ ಮಾಡಿ.
09:45 ಡಯಲಾಗ್ ಬಾಕ್ಸ್ ನ ಕೆಳ ಬಲ ಮೂಲೆಯಲ್ಲಿರುವ, Save ಬಟನ್ ನ ಮೇಲೆ ಕ್ಲಿಕ್ ಮಾಡಿ.
09:51 ಅದೇ ರೀತಿ Boundary file ಅನ್ನು ಕೂಡ Kml ಫಾರ್ಮ್ಯಾಟ್ ನಲ್ಲಿ ಸೇವ್ ಮಾಡಿ.
09:56 Places in Maharashtra.kml ಮತ್ತು Boundary.kml ಎನ್ನುವ ಎರಡು ಫೈಲ್ ಗಳು Desktop ನಲ್ಲಿ ಸೇವ್ ಆಗಿವೆ.
10:06 ಮುಂದೆ ನಾವು Google Earth Pro ನಲ್ಲಿ ರಚಿಸಿದ ಈ ಎರಡು ಫೈಲ್ ಗಳನ್ನು QGIS ನಲ್ಲಿ ತೆರೆಯುವೆವು.
10:13 QGIS ಇಂಟರ್ಫೇಸ್ ಅನ್ನು ತೆರೆಯಿರಿ.
10:17 ಎಡಗಡೆಯ ಮೆನ್ಯುವಿನಿಂದ, Add Vector Layer ಟೂಲ್ ಅನ್ನು ಕ್ಲಿಕ್ ಮಾಡಿ.
10:22 Add Vector Layer ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
10:26 Source ಫೀಲ್ಡ್ ನಡಿಯಲ್ಲಿ, Browse ಬಟನ್ ಅನ್ನು ಕ್ಲಿಕ್ ಮಾಡಿ.
10:31 Desktop ಫೋಲ್ಡರ್ ಗೆ ಹೋಗಿ,
10:35 Places in Maharashtra.kml ಮತ್ತು Boundary.kml ಈ ಎರಡೂ ಫೈಲ್ಸ್ ಗಳನ್ನೂ ಕ್ಲಿಕ್ ಮಾಡಿ.
10:42 Open ಬಟನ್ ಅನ್ನು ಕ್ಲಿಕ್ ಮಾಡಿ.
10:45 Add vector layer ಡಯಲಾಗ್ ಬಾಕ್ಸ್ ನಲ್ಲಿ, Open ಬಟನ್ ಅನ್ನು ಕ್ಲಿಕ್ ಮಾಡಿ.
10:50 Select vector Layers to add ಡಯಲಾಗ್ ಬಾಕ್ಸ್ ನಲ್ಲಿ, Select All ಬಟನ್ ಅನ್ನು ಕ್ಲಿಕ್ ಮಾಡಿ.

OK ಬಟನ್ ಅನ್ನು ಕ್ಲಿಕ್ ಮಾಡಿ.

11:01 ಈಗ ಇಂಪೋರ್ಟ್ ಮಾಡಿದ ಎರಡೂ ಫೈಲ್ ಗಳೂ, QGIS ನಲ್ಲಿlayers ಗಳಾಗಿ ಸೇರ್ಪಡೆಯಾಗಿವೆ.
11:08 ಈ ಲೇಯರ್ ಗಳನ್ನು QGIS ನಲ್ಲಿ ಇನ್ನೂ ಹೆಚ್ಚಿನ ವಿಶ್ಲೇಷಣೆಗಳಿಗೆ ಬಳಸಬಹುದು.
11:15 ಸಂಕ್ಷಿಪ್ತವಾಗಿ,

ಈ ಟ್ಯುಟೋರಿಯಲ್ ನಲ್ಲಿ ನಾವು, Google Earth Pro ಅನ್ನು ಡೌನ್ಲೋಡ್ ಮಾಡುವುದು ಮತ್ತು ಇನ್ಸ್ಟಾಲ್ ಮಾಡುವುದು,

11:23 Google Earth Pro ಅನ್ನು ನ್ಯಾವಿಗೇಟ್ ಮಾಡುವುದು ಮತ್ತು ಡಾಟಾಸೆಟ್ ಅನ್ನು ರಚಿಸುವುದು,
11:29 Google Earth Pro ಅನ್ನು ಬಳಸಿ, Kml ಫಾರ್ಮ್ಯಾಟ್ ನಲ್ಲಿ point ಮತ್ತು polygon ಫೈಲ್ ಗಳನ್ನು ರಚಿಸುವುದು ಮತ್ತು
11:36 QGIS ನಲ್ಲಿ Kml ಫೈಲ್ ಗಳನ್ನು ತೆರೆಯುವುದು ಇವುಗಳ ಕುರಿತು ಕಲಿತಿದ್ದೇವೆ.
11:40 ಅಸೈನ್ಮೆಂಟ್ ಆಗಿ,

ಭಾರತದ ರಾಜ್ಯ ರಾಜಧಾನಿಗಳ ಒಂದು data set ಅನ್ನು ರಚಿಸಿ.

11:46 point ಮತ್ತು boundary ಫೈಲ್ ಗಳನ್ನು Kml ಫಾರ್ಮ್ಯಾಟ್ ನಲ್ಲಿ ಸೇವ್ ಮಾಡಿ.

ಸುಳಿವು: ಎಲ್ಲ ರಾಜ್ಯ ರಾಜಧಾನಿಗಳನ್ನು ಗುರುತಿಸಿ ಮತ್ತು ಭಾರತದ boundary ಯನ್ನು ರಚಿಸಿ.

11:57 ನಿಮ್ಮ ಪೂರ್ಣಗೊಂಡ ಅಸೈನ್ ಮೆಂಟ್ ಈ ರೀತಿಯಾಗಿ ಕಾಣಬೇಕು.
12:03 ಕೆಳಗಿನ ಲಿಂಕ್ನಲ್ಲಿರುವ ವೀಡಿಯೊ ಸ್ಪೋಕನ್ ಟ್ಯುಟೋರಿಯಲ್ ಯೋಜನೆಯನ್ನು ಕುರಿತು ವಿವರಿಸುತ್ತದೆ.

ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ.

12:11 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡ, ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ನಮ್ಮ ಆನ್ಲೈನ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ.

ವಿವರಗಳಿಗಾಗಿ, ದಯವಿಟ್ಟು ನಮಗೆ ಬರೆಯಿರಿ.

12:21 ನೀವು ಪ್ರಶ್ನೆಯನ್ನು ಹೊಂದಿರುವ ನಿಮಿಷ ಮತ್ತು ಸೆಕೆಂಡ್ ಅನ್ನು ಆರಿಸಿ.

ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.

12:24 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗೆ NMEICT, MHRD, ಭಾರತ ಸರ್ಕಾರ ಧನಸಹಾಯ ನೀಡುತ್ತದೆ.
12:31 ಅನುವಾದ ಮತ್ತು ಧ್ವನಿ ಶ್ರೀ ನವೀನ ಭಟ್ಟ ಉಪ್ಪಿನಪಟ್ಟಣ. ಧನ್ಯವಾದಗಳು.

Contributors and Content Editors

NaveenBhat