QGIS/C2/Creating-a-Map/Kannada

From Script | Spoken-Tutorial
Revision as of 20:49, 12 December 2020 by NaveenBhat (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 QGIS ನಲ್ಲಿ Creating a Map ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು, Print Composer (ಪ್ರಿಂಟ್ ಕಂಪೋಸರ್) ಅನ್ನು ಬಳಸಿ ಮ್ಯಾಪ್ ಅನ್ನು ರಚಿಸುವುದು
00:14 Print composer ನಲ್ಲಿ ಮ್ಯಾಪ್ ಎಲಿಮೆಂಟ್ ಗಳನ್ನು ಸೇರಿಸುವುದು,
00:18 ಮ್ಯಾಪ್ ಅನ್ನು ಎಕ್ಸ್ಪೋರ್ಟ್ ಮಾಡುವುದು – ಇವುಗಳ ಕುರಿತು ಕಲಿಯುತ್ತೇವೆ.
00:20 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು

Ubuntu Linux ಒ.ಎಸ್. 16.04 ಆವೃತ್ತಿ ಮತ್ತು

00:28 QGIS ನ 2.18 ಆವೃತ್ತಿಯನ್ನು ಬಳಸುತ್ತಿದ್ದೇನೆ.
00:32 ಈ ಟ್ಯುಟೊರಿಯಲ್ ಅನ್ನು ಕಲಿಯಲು ನೀವು QGIS ಇಂಟರ್ಫೇಸ್ ನ ಕುರಿತು ಕಲಿತಿರಬೇಕು.
00:39 ಇಲ್ಲವಾದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ, ನಮ್ಮ ವೆಬ್ಸೈಟ್ ಅನ್ನು ಭೇಟಿ ಮಾಡಿ.
00:44 ನೀವು ಈ ಪ್ಲೇಯರ್ ನ ಕೆಳಗಡೆ ಇರುವ Code files ಲಿಂಕ್ನಲ್ಲಿರುವ, ಫೋಲ್ಡರ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
00:50 ಡೌನ್ಲೋಡ್ ಮಾಡಿಕೊಂಡಿರುವ ಝಿಪ್ ಫೈಲ್ ನಿಂದ, ಕಂಟೆಂಟ್ ಗಳನ್ನು ಎಕ್ಸ್ಟ್ರ್ಯಾಕ್ಟ್ ಮಾಡಿಕೊಳ್ಳಿ.
00:57 ಇಲ್ಲಿ ನನ್ನ Code files folder ಇದೆ.
01:00 ಅದನ್ನು ತೆರೆಯಲು ಡಬಲ್ ಕ್ಲಿಕ್ ಮಾಡಿ.
01:03 ಈ ಫೋಲ್ಡರ್ ನಲ್ಲಿ ನಿಮಗೆ ಇಂಡಿಯಾ ಮತ್ತು ವರ್ಲ್ಡ್ ಮ್ಯಾಪ್ ಗಳ ಶೇಪ್ ಫೈಲ್ ದೊರೆಯುತ್ತದೆ.
01:09 indiaboundary.shp ಫೈಲ್ ಅನ್ನು ತೆಗೆದುಕೊಳ್ಳಿ.
01:14 ಇದನ್ನು QGIS ನಲ್ಲಿ ತೆರೆಯಲು, ಫೈಲ್ ನ ಮೇಲೆ ರೈಟ್ ಕ್ಲಿಕ್ ಮಾಡಿ.
01:19 context menu ತೆರೆದುಕೊಳ್ಳುತ್ತದೆ.
01:22 Open with QGIS Desktop ಅನ್ನು ಆಯ್ಕೆ ಮಾಡಿ.
01:27 ಮ್ಯಾಪ್ ನೇರವಾಗಿ QGIS ಇಂಟರ್ಫೇಸ್ ನಲ್ಲಿ ತೆರೆದುಕೊಳ್ಳುತ್ತದೆ.
01:32 Open with QGIS Desktop, ಆಯ್ಕೆ ದೊರೆಯದಿದ್ದರೆ, ಮೊದಲು QGIS ಇಂಟರ್ಫೇಸ್ ಅನ್ನು ತೆರೆಯಿರಿ.
01:41 ಇಲ್ಲಿ ನಾನು QGIS ಇಂಟರ್ಫೇಸ್ ಅನ್ನು ತೆರೆದಿದ್ದೇನೆ.
01:45 ಎಡಗಡೆಯ ಟೂಲ್ ಬಾರ್ ನಲ್ಲಿ, Add Vector Layer ಟೂಲ್ ಅನ್ನು ಕ್ಲಿಕ್ ಮಾಡಿ.
01:50 Add Vector Layer ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
01:54 ಬಾಕ್ಸ್ ನಲ್ಲಿ, Dataset ಟೆಕ್ಸ್ಟ್ ಬಾಕ್ಸ್ ನ ಮುಂದಿರುವ, Browse ಬಟನ್ ಅನ್ನು ಕ್ಲಿಕ್ ಮಾಡಿ.
02:00 ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
02:03 Desktop ನಲ್ಲಿರುವ Code files ಫೋಲ್ಡರ್ ಗೆ ಹೋಗಿ.
02:07 indiaboundary.shp ಫೈಲ್ ಅನ್ನು ಆಯ್ಕೆ ಮಾಡಿ.

Open ಬಟನ್ ಅನ್ನು ಕ್ಲಿಕ್ ಮಾಡಿ.

02:15 Add Vector Layer ಡಯಲಾಗ್ ಬಾಕ್ಸ್ ನಲ್ಲಿ Open ಬಟನ್ ಅನ್ನು ಕ್ಲಿಕ್ ಮಾಡಿ.
02:20 ಕ್ಯಾನ್ವಾಸ್ ನ ಮೇಲೆ, ಇಂಡಿಯಾದ ಗಡಿಯ ನಕ್ಷೆ (ಬೌಂಡರಿ ಮ್ಯಾಪ್) ಗೋಚರವಾಗುತ್ತದೆ.
02:24 ಈಗ ಇಂಡಿಯಾದ ಕೆಲವು ನಗರಗಳನ್ನು ಪ್ರತಿನಿಧಿಸುವ ಶೇಪ್ ಫೈಲ್ ಅನ್ನು ಸೇರಿಸೋಣ.
02:30 ಮತ್ತೆ ಟೂಲ್ ಬಾರ್ ನಲ್ಲಿ Add Vector Layer ಟೂಲ್ ಅನ್ನು ಕ್ಲಿಕ್ ಮಾಡಿ.
02:36 Add Vector Layer ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
02:40 ಬಾಕ್ಸ್ ನಲ್ಲಿ Browse ಬಟನ್ ಅನ್ನು ಕ್ಲಿಕ್ ಮಾಡಿ.
02:44 ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
02:47 Desktop ನಲ್ಲಿರುವ Code files ಫೋಲ್ಡರ್ ಗೆ ಹೋಗಿ,
02:51 places.shp ಫೈಲ್ ಅನ್ನು ಆಯ್ಕೆ ಮಾಡಿ,

Open ಬಟನ್ ನ ಮೇಲೆ ಕ್ಲಿಕ್ ಮಾಡಿ.

02:58 Add Vector Layer ಡಯಲಾಗ್ ಬಾಕ್ಸ್ ನಲ್ಲಿ, Open ಬಟನ್ ಅನ್ನು ಕ್ಲಿಕ್ ಮಾಡಿ.
03:03 ಮ್ಯಾಪ್ ನ ಮೇಲೆ ನಗರಗಳನ್ನು ಪಾಯಿಂಟ್ ಫೀಚರ್ ನಲ್ಲಿ ತೋರಿಸಲಾಗಿದೆ.
03:07 ಈ ನಗರಗಳನ್ನು ಲೇಬಲ್ ಮಾಡೋಣ.
03:10 Layers ಪ್ಯಾನಲ್ ನಲ್ಲಿ, Places ಲೇಯರ್ ಅನ್ನು ರೈಟ್ ಕ್ಲಿಕ್ ಮಾಡಿ.
03:15 context menu ವಿನಲ್ಲಿ, Properties ಆಯ್ಕೆಯನ್ನು ಕ್ಲಿಕ್ ಮಾಡಿ.
03:20 Layer Properties ಡಯಲಾಗ್ ಬಾಕ್ಸ್ ನಲ್ಲಿ labels ಟ್ಯಾಬ್ ಅನ್ನು ಆಯ್ಕೆ ಮಾಡಿ.
03:25 ಮೇಲ್ಗಡೆ ಇರುವ ಡ್ರಾಪ್ ಡೌನ್ ನಲ್ಲಿ, Show labels for this layer ಅನ್ನು ಆಯ್ಕೆ ಮಾಡಿ.
03:32 Label with ಡ್ರಾಪ್ ಡೌನ್ ನಲ್ಲಿ, ಕೊಟ್ಟಿರುವ ಆಯ್ಕೆಗಳಲ್ಲಿ, name ಅನ್ನು ಆಯ್ಕೆ ಮಾಡಿ.
03:38 Text ಟ್ಯಾಬ್ ನಲ್ಲಿ, ನಮಗೆ

fonts

03:46 style
03:49 size
03:51 color ಮುಂತಾವುಗಳನ್ನು ಆಯ್ಕೆ ಮಾಡಲು ಆಯ್ಕೆಗಳಿವೆ.
03:57 Apply ಬಟನ್ ಅನ್ನು ಕ್ಲಿಕ್ ಮಾಡಿ, ನಂತರ OK ಅನ್ನು ಕ್ಲಿಕ್ ಮಾಡಿ.
04:02 ಕ್ಯಾನ್ವಾಸ್ ನಲ್ಲಿ, ಕೆಲವು ನಗರಗಳು ಮತ್ತು ಅವುಗಳ ಹೆಸರುಗಳೊಂದಿಗೆ, ಇಂಡಿಯಾ ಮ್ಯಾಪ್ ಡಿಸ್ಪ್ಲೇ ಆಗುತ್ತದೆ.
04:08 ಪ್ರಿಂಟ್ ಮತ್ತು ಪಬ್ಲಿಷ್ ಮಾಡುವ ಸಲುವಾಗಿ ಈ ಮ್ಯಾಪ್ ಫೈಲ್ ಅನ್ನು ಇಮೇಜ್ ಫಾರ್ಮ್ಯಾಟ್ ಗೆ ಎಕ್ಸ್ಪೋರ್ಟ್ ಮಾಡಬಹುದು.
04:15 QGIS ನಲ್ಲಿ Print Composer ಎಂಬ ಟೂಲ್ ಇದೆ.
04:19 ಇದು ಮ್ಯಾಪ್ ಗಳನ್ನು ಓದಲು ಸುಲಭವಾಗಿರುವ ಫಾರ್ಮ್ಯಾಟ್ ನಲ್ಲಿ ರಚಿಸಲು ಅವಕಾಶ ಮಾಡಿಕೊಡುತ್ತದೆ.
04:24 ಮೆನ್ಯು ಬಾರ್ ನಲ್ಲಿ Project ಮೆನ್ಯು ವನ್ನು ಆಯ್ಕೆ ಮಾಡಿ ಮತ್ತು New Print Composer ಅನ್ನು ಆಯ್ಕೆ ಮಾಡಿ.
04:31 Composer title ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
04:35 ಇಲ್ಲಿ ನೀವು composer ಗೆ ಒಂದು ಹೆಸರನ್ನು ನಮೂದಿಸಲು ಕೇಳಲ್ಪಡುವಿರಿ.
04:40 ಟೈಟಲ್ ಅನ್ನು India-Map ಎಂದು ಟೈಪ್ ಮಾಡಿ.
04:44 OK ಬಟನ್ ಅನ್ನು ಕ್ಲಿಕ್ ಮಾಡಿ.
04:47 Print composer ವಿಂಡೋ ತೆರೆದುಕೊಳ್ಳುತ್ತದೆ.
04:50 Print Composer ಒಂದು ಖಾಲಿ ಕ್ಯಾನ್ವಾಸ್ ಅನ್ನು ಕೊಡುತ್ತದೆ.
04:54 ಕ್ಯಾನ್ವಾಸ್ ನ ಬಲಭಾಗದಲ್ಲಿ, ನಿಮಗೆ ಎರಡು ಪ್ಯಾನಲ್ ಗಳು ಕಾಣಿಸುತ್ತದೆ.
04:59 ಅಪ್ಪರ್ ಪ್ಯಾನಲ್ ಮತ್ತು ಲೋಯರ್ ಪ್ಯಾನಲ್ ಗಳಾಗಿವೆ.
05:03 ಪ್ಯಾನಲ್ ಗಳನ್ನು ಸಕ್ರಿಯಗೊಳಿಸಲು, View ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ.
05:08 ಮೆನ್ಯುವಿನಲ್ಲಿ ಕೆಳಕ್ಕೆ ಸ್ಕ್ರೋಲ್ ಮಾಡಿ, Panels ಅನ್ನು ಆಯ್ಕೆ ಮಾಡಿ.
05:13 ಸಬ್-ಮೆನ್ಯು ವು ಪ್ಯಾನೆಲ್ ಗಳ ಪಟ್ಟಿಯನ್ನು ತೋರಿಸುತ್ತದೆ.

ಇಲ್ಲಿ ಕೆಲವು ಪ್ಯಾನಲ್ ಗಳು ಈಗಾಗಲೇ ಆಯ್ಕೆಯಾಗಿವೆ.

05:21 ಪ್ಯಾನಲ್ ಅನ್ನು ಆಯ್ಕೆ ಮಾಡಲು, ಪ್ಯಾನಲ್ ನ ಹೆಸರಿನ ಮೇಲೆ ಕ್ಲಿಕ್ ಮಾಡಿ.
05:24 ಕ್ಯಾನ್ವಾಸ್ ನ ಬಲಭಾಗದಲ್ಲಿ ಒಂದು ಪ್ಯಾನಲ್ ಗೋಚರಿಸುತ್ತದೆ.
05:28 ಎಲ್ಲಾ Print Composer ಟೂಲ್ ಗಳು ಮೆನ್ಯುಗಳಲ್ಲಿ ಮತ್ತು ಟೂಲ್ ಬಾರ್ ನಲ್ಲಿ ಐಕಾನ್ ಗಳ ರೂಪದಲ್ಲಿ ಲಭ್ಯವಿವೆ.
05:37 ಟೂಲ್ ಬಾರ್ ಗಳು Composer ವಿಂಡೋ ದ ಎಡಗಡೆ ಮತ್ತು ಮೇಲ್ಭಾಗ ಎರಡೂ ಕಡೆ ಇವೆ.
05:45 ಇನ್ನು ಹೆಚ್ಚಿನ ಮಾಹಿತಿಗಾಗಿ, ಈ ಟ್ಯುಟೋರಿಯಲ್ ನಲ್ಲಿ ಕೊಟ್ಟಿರುವ additional material ಗಳನ್ನು ನೋಡಿ.
05:52 ಈಗ ನಮ್ಮ ಮ್ಯಾಪ್ ಅನ್ನು ಜೋಡಿಸಲು ಆರಂಭಿಸೋಣ.
05:56 Print Composer window, ದಲ್ಲಿ, ಟೂಲ್ ಬಾರ್ ನಲ್ಲಿರುವ Zoom full ಬಟನ್ ಅನ್ನು ಕ್ಲಿಕ್ ಮಾಡಿ.
06:03 ಇದು ಲೇ ಔಟ್ ಅನ್ನು ಅದರ ಪೂರ್ಣ ವಿಸ್ತಾರದವರೆಗೂ ಡಿಸ್ಪ್ಲೇ ಮಾಡುತ್ತದೆ.
06:07 ಈಗ ನಾವು QGIS Canvas ನಲ್ಲಿ ಕಾಣುವ ಮ್ಯಾಪ್ ಅನ್ನು Composer ಗೆ ತರಬೇಕು.
06:14 ಟೂಲ್ ಬಾರ್ ನಲ್ಲಿ, Add new map ಟೂಲ್ ಅನ್ನು ಕ್ಲಿಕ್ ಮಾಡಿ.
06:19 ಕರ್ಸರ್ ಅನ್ನು composer ವಿಂಡೋ ಗೆ ಸರಿಸಿ.
06:23 ಈಗ ಕರ್ಸರ್ plus (+) ಚಿಹ್ನೆಯಾಗಿ ಕಾಣಿಸುತ್ತದೆ.
06:27 ಇದು Add Map ಬಟನ್ ಸಕ್ರಿಯವಾಗಿದೆ ಎಂದು ತೋರಿಸುತ್ತದೆ.
06:31 Composer ವಿಂಡೋದಲ್ಲಿ ಒಂದು ಆಯತಾಕೃತಿಯನ್ನು ಚಿತ್ರಿಸಲು, ಮೌಸ್ ನ ಎಡ ಬಟನ್ ಅನ್ನು ಕ್ಲಿಕ್ ಮಾಡಿ, ಡ್ರ್ಯಾಗ್ ಮಾಡಿ.
06:37 ಅಂಚುಗಳಲ್ಲಿ ಮಾರ್ಜಿನ್ ಗಳನ್ನು ಬಿಡಿ.
06:40 ಮುಖ್ಯ QGISಕ್ಯಾನ್ವಾಸ್ ನಿಂದ ಪಡೆದ ಇಂಡಿಯಾ ಮ್ಯಾಪ್ ಆಯತಾಕಾರದ ವಿಂಡೋ ದಲ್ಲಿ ಪ್ರದರ್ಶಿತವಾಗಿರುವುದನ್ನು ನೀವು ಕಾಣುವಿರಿ.
06:48 ಪ್ರದರ್ಶಿತ ಮ್ಯಾಪ್ ಪೂರ್ತಿ ವಿಂಡೋವನ್ನು ವ್ಯಾಪಿಸದೇ ಇರಬಹುದು.
06:43 ಎಡ ಟೂಲ್ ಬಾರ್ ನಲ್ಲಿರುವ Move item content ಟೂಲ್ ಅನ್ನು ಕ್ಲಿಕ್ ಮಾಡಿ.
06:59 ಎಡ ಮೌಸ್ ಬಟನ್ ಅನ್ನು ಬಳಸಿ, ಮ್ಯಾಪ್ ಅನ್ನು ವಿಂಡೋದಲ್ಲಿ ಸರಿಸಿ, ಮಧ್ಯಕ್ಕೆ ತನ್ನಿ.
07:05 ಮೇಲ್ಗಡೆ ಟೈಟಲ್ ಗೆ ಸ್ವಲ್ಪ ಜಾಗವನ್ನು ಬಿಡಿ.
07:09 ಈಗ ನಾವು ಮುಖ್ಯ ಮ್ಯಾಪ್ ಗೆ ಒಂದು grid ಮತ್ತು zebra ಬಾರ್ಡರ್ ಅನ್ನು ಸೇರಿಸೋಣ.
07:14 Item Properties Panel ನಲ್ಲಿ, Grids ವಿಭಾಗಕ್ಕೆ ಸ್ಕ್ರೋಲ್ ಮಾಡಿ.
07:19 Grids ನ ವಿಸ್ತರಿಸಿದ ಮೆನ್ಯುವನ್ನು ನೋಡಲು ಅದರ ಮುಂದಿರುವ ಚಿಕ್ಕ ಕಪ್ಪು ತ್ರಿಕೋನವನ್ನು ಕ್ಲಿಕ್ ಮಾಡಿ.
07:25 ಹಸಿರು plus (+) ಚಿಹ್ನೆಯನ್ನು ಕ್ಲಿಕ್ ಮಾಡಿ, Add a new grid ಬಟನ್ ಅನ್ನು ಕ್ಲಿಕ್ ಮಾಡಿ.
07:30 ಈಗ ಗ್ರಿಡ್ ವಿಭಾಗದಲ್ಲಿರುವ ಎಲ್ಲ ಫೀಚರ್ ಗಳು ಸಕ್ರಿಯವಾಗಿವೆ.
07:35 ಅಗತ್ಯವಿದ್ದರೆ, ಇಲ್ಲಿ CRS ಅನ್ನು ಬದಲಿಸಲು ಆಯ್ಕೆಗಳಿವೆ.

ನಾನು ಇದನ್ನು ಹಾಗೆಯೇ ಬಿಡುವೆನು.

07:43 ಡ್ರಾಪ್ ಡೌನ್ ಆರೋ ಗಳನ್ನು ಬಳಸಿ, X ಮತ್ತು Y ಎರಡು ಕಡೆಗಳಲ್ಲೂ, Interval ವ್ಯಾಲ್ಯೂಗಳನ್ನು 10 ಎಂದು ಆಯ್ಕೆ ಮಾಡಿ.
07:51 Grid frame ವಿಭಾಗಕ್ಕೆ ಸ್ಕ್ರೋಲ್ ಮಾಡಿ ಮತ್ತು ಒಂದು Frame style ಅನ್ನು ಆಯ್ಕೆ ಮಾಡಿ.

ನಾನು Zebra ಅನ್ನು ಆಯ್ಕೆ ಮಾಡುವೆನು.

07:59 ಇಲ್ಲಿ ಫ್ರೇಮ್ ನ ಅಳತೆ, ದಪ್ಪ , ಬಣ್ಣ ಮೊದಲಾದವುಗಳನ್ನು ಬದಲಿಸಲು ಆಯ್ಕೆ ಗಳಿವೆ.
08:07 ನಿಮ್ಮ ಅಗತ್ಯಕ್ಕೆ ತಕ್ಕ ಆಯ್ಕೆಗಳನ್ನು ಆರಿಸಿಕೊಳ್ಳಿ.
08:12 ಕೆಳಕ್ಕೆ ಸ್ಕ್ರೋಲ್ ಮಾಡಿ, Draw Coordinates ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ.
08:17 Distance to map frame ಅನ್ನು ಕೋ-ಆರ್ಡಿನೇಟ್ ಗಳು ಸ್ಪಷ್ಟವಾಗುವ ತನಕ ಹೊಂದಿಸಿ.
08:23 ಲೇಬಲ್ ಗಳನ್ನು ಸರಿಸಲು, ಮೇಲ್ಮುಖ ಮತ್ತು ಕೆಳಮುಖವಾದ ಬಾಣದ ಗುರುತಿನ ಮೇಲೆ ಕ್ಲಿಕ್ ಮಾಡಿ.
08:30 Coordinate precision ಅನ್ನು 1 ಎಂದು ಆಯ್ಕೆ ಮಾಡಿ.
08:34 ಇದು ಮೊದಲನೆಯ ದಶಮಾಂಶದವರೆಗೆ ಕೋ-ಆರ್ಡಿನೇಟ್ ಗಳನ್ನು ತೋರಿಸುತ್ತದೆ.
08:38 ನಂತರ ನಾವು ಮ್ಯಾಪ್ ಗೆ ಉತ್ತರ ದಿಕ್ಕನ್ನು ತೋರಿಸುವ ಬಾಣದ ಗುರುತನ್ನು ಸೇರಿಸುವೆವು.
08:43 Print Composer ನಲ್ಲಿ ಮ್ಯಾಪ್ ಗೆ ಸಂಬಂಧಿಸಿದ ಇಮೇಜ್ ಗಳ ಉತ್ತಮ ಸಂಗ್ರಹವಿದೆ.
08:49 ಟೂಲ್ ಬಾರ್ ನಲ್ಲಿ Add image icon ಅನ್ನು ಕ್ಲಿಕ್ ಮಾಡಿ.
08:54 ಕರ್ಸರ್ ಅನ್ನು ಮ್ಯಾಪ್ ಕಂಪೋಸರ್ ವಿಂಡೋ ಗೆ ತನ್ನಿ.
08:58 ನಿಮ್ಮ ಮೌಸ್ ನ ಎಡಬ ಬಟನ್ ಅನ್ನು ಹಿಡಿದು, ಕ್ಲಿಕ್ ಮಾಡಿ, ಮ್ಯಾಪ್ ಕ್ಯಾನ್ವಾಸ್ ನ ಮೇಲ್ಭಾಗದ ಬಲ ಮೂಲೆಯಲ್ಲಿ ಒಂದು ಚಿಕ್ಕ ಆಯತಾಕೃತಿಯನ್ನು ಚಿತ್ರಿಸಿ.
09:07 ಬಲ ಪ್ಯಾನಲ್ ನಲ್ಲಿರುವ Item Properties ಟ್ಯಾಬ್ ನಡಿಯಲ್ಲಿ, Search directories ವಿಭಾಗವನ್ನು ವಿಸ್ತರಿಸಿ.
09:14 ನಿಮ್ಮ ಇಷ್ಟದ ನಾರ್ಥ್ ಆರೋ ಇಮೇಜ್ ಅನ್ನು ಕ್ಲಿಕ್ ಮಾಡುವುದರ ಮೂಲಕ ಆಯ್ಕೆ ಮಾಡಿ.
09:20 ಮ್ಯಾಪ್ Composer ವಿಂಡೋದಲ್ಲಿರುವ ಬಾಕ್ಸ್ ನಲ್ಲಿ ಇಮೇಜ್ ಕಾಣಿಸುತ್ತದೆ.
09:25 ಮ್ಯಾಪ್ Composer ವಿಂಡೋ ದ ಮೇಲೆ ಕ್ಲಿಕ್ ಮಾಡಿ.
09:28 ಮ್ಯಾಪ್ ನ ಮೇಲ್ಬಾಗದ ಬಲ ಮೂಲೆಯಲ್ಲಿ ನೀವು ನಾರ್ಥ್ ಆರೋ ಇಮೇಜ್ ಅನ್ನು ನೋಡಬಹುದು.
09:34 ಈಗ ನಾವು ಮ್ಯಾಪ್ ಗೆ ಒಂದು ಸ್ಕೇಲ್ ಬಾರ್ ಅನ್ನು ಸೇರಿಸೋಣ.
09:38 ಟೂಲ್ ಬಾರ್ ನಲ್ಲಿ Add new scalebar tool ಅನ್ನು ಕ್ಲಿಕ್ ಮಾಡಿ.
09:43 ಮ್ಯಾಪ್ ನಲ್ಲಿ, ನಿಮಗೆ ಸ್ಕೇಲ್ ಬಾರ್ ಎಲ್ಲಿ ಕಾಣಬೇಕೋ ಅಲ್ಲಿ ಕ್ಲಿಕ್ ಮಾಡಿ.
09:47 ನಾನು ಸ್ಕೇಲ್ ಬಾರ್ ಅನ್ನು ಕೆಳ ಎಡ ಮೂಲೆಯಲ್ಲಿ ಸೇರಿಸುವೆನು.
09:52 ಬಲ ಪ್ಯಾನಲ್ ನಲ್ಲಿ, Segments ವಿಭಾಗದಡಿಯಲ್ಲಿ, ನೀವು ಸೆಗ್ಮೆಂಟ್ ಗಳ ಸಂಖ್ಯೆ ಮತ್ತು ಅವುಗಳ ಅಳತೆಯನ್ನು ಹೊಂದಿಸಬಹುದು.
10:00 ಈಗ ನಮ್ಮ ಮ್ಯಾಪ್ ಗೆ ಟೈಟಲ್ ಅನ್ನು ಸೇರಿಸೋಣ.
10:04 ಎಡ ಟೂಲ್ ಬಾರ್ ನಲ್ಲಿ Add new Label ಟೂಲ್ ಅನ್ನು ಕ್ಲಿಕ್ ಮಾಡಿ.
10:09 ಕರ್ಸರ್ ಅನ್ನು ಮ್ಯಾಪ್ composer ವಿಂಡೋಗೆ ತನ್ನಿ.
10:13 ನಿಮ್ಮ ಮೌಸ್ ನ ಎಡ ಬಟನ್ ಅನ್ನು ಹಿಡಿದು, ಮೇಲ್ಭಾಗದ ಮಧ್ಯದಲ್ಲಿ ಒಂದು ಬಾಕ್ಸ್ ಅನ್ನು ಚಿತ್ರಿಸಿ.
10:19 ಬಲ ಪ್ಯಾನಲ್ ನಲ್ಲಿ ನೀವು, Label ಗೆ Item Properties ಟ್ಯಾಬ್ ಅನ್ನು ಕಾಣುವಿರಿ.
10:24 Main Properties ನ ಅಡಿಯಲ್ಲಿ, ಟೆಕ್ಸ್ಟ್ ಬಾಕ್ಸ್ ನಲ್ಲಿ Map of India ಎಂದು ಟೈಪ್ ಮಾಡಿ.
10:31 Appearance ವಿಭಾಗದಡಿಯಲ್ಲಿ, Font ಟ್ಯಾಬ್ ಅನ್ನು ಕ್ಲಿಕ್ ಮಾಡಿ.
10:36 Select Font ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ, ಸರಿಹೊಂದುವ Font, Font style ಮತ್ತು Size ಅನ್ನು ಆಯ್ಕೆ ಮಾಡಿ,
10:49 OK ಬಟನ್ ಅನ್ನು ಕ್ಲಿಕ್ ಮಾಡಿ.
10:52 ನಿಮ್ಮ ಇಷ್ಟದಂತೆ, ಫಾಂಟ್ ಕಲರ್, ಮಾರ್ಜಿನ್ ಮತ್ತು ಅಲೈನ್ಮೆಂಟ್ ಅನ್ನು ಬದಲಿಸಿ.
11:03 ನೀವು ಎಲ್ಲ ಬದಲಾವಣೆಗಳನ್ನು ಮುಗಿಸಿದ ನಂತರ, ಬದಲಾವಣೆಗಳನ್ನು ನೋಡಲು, ಕಂಪೋಸರ್ ವಿಂಡೋದ ಮೇಲೆ ಕ್ಲಿಕ್ ಮಾಡಿ.
11:10 ನಾವು ಆಯ್ಕೆ ಮಾಡಿದ ಫಾಂಟ್ ಮತ್ತು ಸೈಜ್ ಲೇಬಲ್ ಮ್ಯಾಪ್ ನ ಮೇಲೆ, Composer ವಿಂಡೋದಲ್ಲಿ ಕಾಣಿಸುತ್ತದೆ.
11:17 ಈಗ Inset map ಅನ್ನು ಸೇರಿಸೋಣ.
11:21 ಮುಖ್ಯ QGIS ವಿಂಡೋಗೆ ಹೋಗಿ.
11:24 ಟೂಲ್ ಬಾರ್ ನಲ್ಲಿ Zoom In ಬಟನ್ ಅನ್ನು ಕ್ಲಿಕ್ ಮಾಡಿ.
11:28 ಕರ್ಸರ್ ಅನ್ನು ಮ್ಯಾಪ್ ನ ಮೇಲೆ ತನ್ನಿ, ಮುಂಬೈ ಯ ಸುತ್ತಮುತ್ತ ಝೂಮ್ ಮಾಡಿ.
11:34 ಮುಂಬೈ ಯ ಸುತ್ತಮುತ್ತ, ಒಂದು ಆಯತವನ್ನು ರಚಿಸಿ, ಆ ಪ್ರದೇಶವನ್ನು ಝೂಮ್ ಮಾಡಬಹುದು.
11:39 ಈಗ ನಾವು ಮ್ಯಾಪ್ ಇನ್ಸೆಟ್ ಅನ್ನು ಸೇರಿಸಲು ಸಿದ್ಧವಾಗಿದ್ದೇವೆ.
11:43 Print Composer ವಿಂಡೋ ಗೆ ಹೋಗಿ.
11:46 ಟೂಲ್ ಬಾರ್ ನಲ್ಲಿ Add new map ಟೂಲ್ ಅನ್ನು ಕ್ಲಿಕ್ ಮಾಡಿ.
11:51 Composer ವಿಂಡೋ ದ ಮೇಲ್ಭಾಗದ ಎಡ ಮೂಲೆಯಲ್ಲಿ ಒಂದು ಆಯತಾಕೃತಿಯನ್ನು ಚಿತ್ರಿಸಿ.
11:57 ಟೂಲ್ ಬಾರ್ ನಲ್ಲಿ Move item Content ಟೂಲ್ ಅನ್ನು ಕ್ಲಿಕ್ ಮಾಡಿ.
12:02 inset map ನ ಮೇಲೆ ಕರ್ಸರ್ ಅನ್ನು ಇಡಿ.
12:05 ಮ್ಯಾಪ್ ಅನ್ನು ನಿಮ್ಮ ಆಯ್ಕೆಯ ಪ್ರದೇಶಕ್ಕೆ ಇನ್ಸೆಟ್ ನಲ್ಲಿ ಸರಿಸಿ.
12:10 Print Composer ನಲ್ಲಿ ನೀವು, Main map ಮತ್ತು inset ಮ್ಯಾಪ್ ಎಂಬ ಎರಡು ಆಬ್ಜೆಕ್ಟ್ ಗಳನ್ನು ನೋಡಬಹುದು.
12:17 Item Properties ಪ್ಯಾನಲ್ ನಲ್ಲಿ, Frame ವಿಭಾಗಕ್ಕೆ ಸ್ಕ್ರೋಲ್ ಮಾಡಿ, ಮತ್ತು ಅದರ ಮುಂದಿರುವ ಚೆಕ್ ಬಾಕ್ಸ್ ಅನ್ನು ಚೆಕ್ (ಟಿಕ್) ಮಾಡಿ.
12:26 inset map ಗೆ, ಫ್ರೇಮ್ ಬಾರ್ಡರ್ ನ ಬಣ್ಣ ಮತ್ತು ದಪ್ಪವನ್ನು ಬದಲಿಸಿ.
12:36 inset ಮ್ಯಾಪ್ ನ ಬ್ಯಾಕ್ಗ್ರೌಂಡ್ ಬಣ್ಣವನ್ನು ಬದಲಿಸಿ, ಇದರಿಂದ ಮ್ಯಾಪ್ ನ ಬ್ಯಾಕ್ಗ್ರೌಂಡ್ ಎದ್ದು ಕಾಣುತ್ತದೆ.
12:45 ಮ್ಯಾಪ್ ಎಲಿಮೆಂಟ್ ಗಳಾದ ಲೆಜೆಂಡ್ಸ್, ಷೇಪ್ಸ್, ಆರೋ ಮುಂತಾದವುಗಳನ್ನು ಅನ್ವೇಷಿಸಬಹುದು.
12:53 ನಿಮಗೆ ಅಗತ್ಯವಾದ ಬದಲಾವಣೆಗಳನ್ನೆಲ್ಲ ಮಾಡಿದ ನಂತರ, ನೀವು ಮ್ಯಾಪ್ ಅನ್ನು ಸೇವ್ ಅಥವಾ ಎಕ್ಸ್ಪೋರ್ಟ್ ಮಾಡಬಹುದು.
12:59 ಮೆನ್ಯುಬಾರ್ ನಲ್ಲಿ, Composer ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ.
13:03 ಇಲ್ಲಿ ನಾವು ಮ್ಯಾಪ್ ಅನ್ನು Image, PDF ಅಥವಾ SVG ಫಾರ್ಮ್ಯಾಟ್ ಗಳಲ್ಲಿ ಎಕ್ಸ್ಪೋರ್ಟ್ ಮಾಡಲು ಆಯ್ಕೆಗಳಿವೆ.
13:12 ಈಗ ಮ್ಯಾಪ್ ಅನ್ನು ಇಮೇಜ್ ಆಗಿ ಎಕ್ಸ್ಪೋರ್ಟ್ ಮಾಡೋಣ.

Export as Image ಆಯ್ಕೆಯನ್ನು ಆರಿಸಿ.

13:20 Save composition as ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
ಸರಿಯಾದ ಫೈಲ್ ನೇಮ್, ಲೊಕೇಷನ್ ಮತ್ತು ಫಾರ್ಮ್ಯಾಟ್ ಅನ್ನು ಕೊಡಿ. 
13:29 ನಾನು PNG ಫಾರ್ಮ್ಯಾಟ್ ಅನ್ನು ಆಯ್ಕೆ ಮಾಡುವೆನು.

Save ಬಟನ್ ಅನ್ನು ಕ್ಲಿಕ್ ಮಾಡಿ.

13:35 Image export options ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
13:39 ಸರಿಯಾದ ರೆಸೊಲ್ಯುಷನ್, ಪೇಜ್ ನ ಅಗಲ ಮತ್ತು ಎತ್ತರವನ್ನು ಆಯ್ಕೆ ಮಾಡಿ.
13:44 ನಾನು ಪೇಜ್ ವಿಡ್ಥ್ ಅನ್ನು 800 ಪಿಕ್ಸೆಲ್ಸ್ ಎಂದು ಸೆಟ್ ಮಾಡುವೆನು.
13:49 Save ಬಟನ್ ಅನ್ನು ಕ್ಲಿಕ್ ಮಾಡಿ.
13:52 ಇಲ್ಲಿ ಮ್ಯಾಪ್ ಇಮೇಜ್ ಫೈಲ್ ಆಗಿ ಸೇವ್ ಆಗಿದೆ.
13:56 ಈಗ ಈ ಮ್ಯಾಪ್ ಅನ್ನು ಪ್ರಿಂಟ್ ಮಾಡಬಹುದು ಅಥವಾ ಪ್ರಕಟಣೆ (ಪಬ್ಲಿಶ್) ಮಾಡಬಹುದು.
14:01 ಸಂಕ್ಷಿಪ್ತವಾಗಿ,

ಈ ಟ್ಯುಟೋರಿಯಲ್ ನಲ್ಲಿ ನಾವು,

14:06 Print Composer (ಪ್ರಿಂಟ್ ಕಂಪೋಸರ್) ಅನ್ನು ಬಳಸಿ ಮ್ಯಾಪ್ ಅನ್ನು ರಚಿಸುವುದು

Print composer ನಲ್ಲಿ ಮ್ಯಾಪ್ ಎಲಿಮೆಂಟ್ ಗಳನ್ನು ಸೇರಿಸುವುದು, ಮ್ಯಾಪ್ ಅನ್ನು ಎಕ್ಸ್ಪೋರ್ಟ್ ಮಾಡುವುದು – ಇವುಗಳ ಕುರಿತು ಕಲಿತಿದ್ದೇವೆ.

14:16 ಅಸೈನ್ಮೆಂಟ್,

Code files ಲಿಂಕ್ ನಲ್ಲಿ ಕೊಟ್ಟಿರುವ, ವರ್ಲ್ಡ್ dataset ಅನ್ನು ಬಳಸಿ, ಏಷಿಯಾ ಖಂಡದ ಮ್ಯಾಪ್ ಅನ್ನು ರಚಿಸಿ.

14:25 ಇಂಡಿಯಾದ inset ಮ್ಯಾಪ್ ಅನ್ನು ರಚಿಸಿ.

ಒಂದು ಮ್ಯಾಪ್ ಲೆಜೆಂಡ್ ಅನ್ನು ಸೇರಿಸಿ.

14:31 ನಿಮ್ಮ ಪೂರ್ಣಗೊಂಡ ಅಸೈನ್ಮೆಂಟ್ ಇಲ್ಲಿ ತೋರಿಸಿರುವಂತೆ ಕಾಣಬೇಕು.
14:36 ಕೆಳಗಿನ ಲಿಂಕ್ನಲ್ಲಿರುವ ವೀಡಿಯೊ ಸ್ಪೋಕನ್ ಟ್ಯುಟೋರಿಯಲ್ ಯೋಜನೆಯನ್ನು ಕುರಿತು ವಿವರಿಸುತ್ತದೆ.

ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ.

14:44 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡ, ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ನಮ್ಮ ಆನ್ಲೈನ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ.

ವಿವರಗಳಿಗಾಗಿ, ದಯವಿಟ್ಟು ನಮಗೆ ಬರೆಯಿರಿ.

14:54 ನೀವು ಪ್ರಶ್ನೆಯನ್ನು ಹೊಂದಿರುವ ನಿಮಿಷ ಮತ್ತು ಸೆಕೆಂಡ್ ಅನ್ನು ಆರಿಸಿ.

ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.

14:58 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗೆ NMEICT, MHRD, ಭಾರತ ಸರ್ಕಾರ ಧನಸಹಾಯ ನೀಡುತ್ತದೆ.

ಹೆಚ್ಚಿನ ವಿವರಗಳಿಗಾಗಿ, ಇಲ್ಲಿ ತೋರಿಸಿರುವ ಲಿಂಕ್ಗೆ ಭೇಟಿ ನೀಡಿ.

15:09 ಅನುವಾದ ಮತ್ತು ಧ್ವನಿ ಶ್ರೀ ನವೀನ ಭಟ್ಟ ಉಪ್ಪಿನಪಟ್ಟಣ. ಧನ್ಯವಾದಗಳು.

Contributors and Content Editors

NaveenBhat