QGIS/C2/Creating-a-Map/Kannada
From Script | Spoken-Tutorial
Time | Narration |
00:01 | QGIS ನಲ್ಲಿ Creating a Map ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು, Print Composer (ಪ್ರಿಂಟ್ ಕಂಪೋಸರ್) ಅನ್ನು ಬಳಸಿ ಮ್ಯಾಪ್ ಅನ್ನು ರಚಿಸುವುದು |
00:14 | Print composer ನಲ್ಲಿ ಮ್ಯಾಪ್ ಎಲಿಮೆಂಟ್ ಗಳನ್ನು ಸೇರಿಸುವುದು, |
00:18 | ಮ್ಯಾಪ್ ಅನ್ನು ಎಕ್ಸ್ಪೋರ್ಟ್ ಮಾಡುವುದು – ಇವುಗಳ ಕುರಿತು ಕಲಿಯುತ್ತೇವೆ. |
00:20 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು
Ubuntu Linux ಒ.ಎಸ್. 16.04 ಆವೃತ್ತಿ ಮತ್ತು |
00:28 | QGIS ನ 2.18 ಆವೃತ್ತಿಯನ್ನು ಬಳಸುತ್ತಿದ್ದೇನೆ. |
00:32 | ಈ ಟ್ಯುಟೊರಿಯಲ್ ಅನ್ನು ಕಲಿಯಲು ನೀವು QGIS ಇಂಟರ್ಫೇಸ್ ನ ಕುರಿತು ಕಲಿತಿರಬೇಕು. |
00:39 | ಇಲ್ಲವಾದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ, ನಮ್ಮ ವೆಬ್ಸೈಟ್ ಅನ್ನು ಭೇಟಿ ಮಾಡಿ. |
00:44 | ನೀವು ಈ ಪ್ಲೇಯರ್ ನ ಕೆಳಗಡೆ ಇರುವ Code files ಲಿಂಕ್ನಲ್ಲಿರುವ, ಫೋಲ್ಡರ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ. |
00:50 | ಡೌನ್ಲೋಡ್ ಮಾಡಿಕೊಂಡಿರುವ ಝಿಪ್ ಫೈಲ್ ನಿಂದ, ಕಂಟೆಂಟ್ ಗಳನ್ನು ಎಕ್ಸ್ಟ್ರ್ಯಾಕ್ಟ್ ಮಾಡಿಕೊಳ್ಳಿ. |
00:57 | ಇಲ್ಲಿ ನನ್ನ Code files folder ಇದೆ. |
01:00 | ಅದನ್ನು ತೆರೆಯಲು ಡಬಲ್ ಕ್ಲಿಕ್ ಮಾಡಿ. |
01:03 | ಈ ಫೋಲ್ಡರ್ ನಲ್ಲಿ ನಿಮಗೆ ಇಂಡಿಯಾ ಮತ್ತು ವರ್ಲ್ಡ್ ಮ್ಯಾಪ್ ಗಳ ಶೇಪ್ ಫೈಲ್ ದೊರೆಯುತ್ತದೆ. |
01:09 | indiaboundary.shp ಫೈಲ್ ಅನ್ನು ತೆಗೆದುಕೊಳ್ಳಿ. |
01:14 | ಇದನ್ನು QGIS ನಲ್ಲಿ ತೆರೆಯಲು, ಫೈಲ್ ನ ಮೇಲೆ ರೈಟ್ ಕ್ಲಿಕ್ ಮಾಡಿ. |
01:19 | context menu ತೆರೆದುಕೊಳ್ಳುತ್ತದೆ. |
01:22 | Open with QGIS Desktop ಅನ್ನು ಆಯ್ಕೆ ಮಾಡಿ. |
01:27 | ಮ್ಯಾಪ್ ನೇರವಾಗಿ QGIS ಇಂಟರ್ಫೇಸ್ ನಲ್ಲಿ ತೆರೆದುಕೊಳ್ಳುತ್ತದೆ. |
01:32 | Open with QGIS Desktop, ಆಯ್ಕೆ ದೊರೆಯದಿದ್ದರೆ, ಮೊದಲು QGIS ಇಂಟರ್ಫೇಸ್ ಅನ್ನು ತೆರೆಯಿರಿ. |
01:41 | ಇಲ್ಲಿ ನಾನು QGIS ಇಂಟರ್ಫೇಸ್ ಅನ್ನು ತೆರೆದಿದ್ದೇನೆ. |
01:45 | ಎಡಗಡೆಯ ಟೂಲ್ ಬಾರ್ ನಲ್ಲಿ, Add Vector Layer ಟೂಲ್ ಅನ್ನು ಕ್ಲಿಕ್ ಮಾಡಿ. |
01:50 | Add Vector Layer ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
01:54 | ಬಾಕ್ಸ್ ನಲ್ಲಿ, Dataset ಟೆಕ್ಸ್ಟ್ ಬಾಕ್ಸ್ ನ ಮುಂದಿರುವ, Browse ಬಟನ್ ಅನ್ನು ಕ್ಲಿಕ್ ಮಾಡಿ. |
02:00 | ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
02:03 | Desktop ನಲ್ಲಿರುವ Code files ಫೋಲ್ಡರ್ ಗೆ ಹೋಗಿ. |
02:07 | indiaboundary.shp ಫೈಲ್ ಅನ್ನು ಆಯ್ಕೆ ಮಾಡಿ.
Open ಬಟನ್ ಅನ್ನು ಕ್ಲಿಕ್ ಮಾಡಿ. |
02:15 | Add Vector Layer ಡಯಲಾಗ್ ಬಾಕ್ಸ್ ನಲ್ಲಿ Open ಬಟನ್ ಅನ್ನು ಕ್ಲಿಕ್ ಮಾಡಿ. |
02:20 | ಕ್ಯಾನ್ವಾಸ್ ನ ಮೇಲೆ, ಇಂಡಿಯಾದ ಗಡಿಯ ನಕ್ಷೆ (ಬೌಂಡರಿ ಮ್ಯಾಪ್) ಗೋಚರವಾಗುತ್ತದೆ. |
02:24 | ಈಗ ಇಂಡಿಯಾದ ಕೆಲವು ನಗರಗಳನ್ನು ಪ್ರತಿನಿಧಿಸುವ ಶೇಪ್ ಫೈಲ್ ಅನ್ನು ಸೇರಿಸೋಣ. |
02:30 | ಮತ್ತೆ ಟೂಲ್ ಬಾರ್ ನಲ್ಲಿ Add Vector Layer ಟೂಲ್ ಅನ್ನು ಕ್ಲಿಕ್ ಮಾಡಿ. |
02:36 | Add Vector Layer ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
02:40 | ಬಾಕ್ಸ್ ನಲ್ಲಿ Browse ಬಟನ್ ಅನ್ನು ಕ್ಲಿಕ್ ಮಾಡಿ. |
02:44 | ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
02:47 | Desktop ನಲ್ಲಿರುವ Code files ಫೋಲ್ಡರ್ ಗೆ ಹೋಗಿ, |
02:51 | places.shp ಫೈಲ್ ಅನ್ನು ಆಯ್ಕೆ ಮಾಡಿ,
Open ಬಟನ್ ನ ಮೇಲೆ ಕ್ಲಿಕ್ ಮಾಡಿ. |
02:58 | Add Vector Layer ಡಯಲಾಗ್ ಬಾಕ್ಸ್ ನಲ್ಲಿ, Open ಬಟನ್ ಅನ್ನು ಕ್ಲಿಕ್ ಮಾಡಿ. |
03:03 | ಮ್ಯಾಪ್ ನ ಮೇಲೆ ನಗರಗಳನ್ನು ಪಾಯಿಂಟ್ ಫೀಚರ್ ನಲ್ಲಿ ತೋರಿಸಲಾಗಿದೆ. |
03:07 | ಈ ನಗರಗಳನ್ನು ಲೇಬಲ್ ಮಾಡೋಣ. |
03:10 | Layers ಪ್ಯಾನಲ್ ನಲ್ಲಿ, Places ಲೇಯರ್ ಅನ್ನು ರೈಟ್ ಕ್ಲಿಕ್ ಮಾಡಿ. |
03:15 | context menu ವಿನಲ್ಲಿ, Properties ಆಯ್ಕೆಯನ್ನು ಕ್ಲಿಕ್ ಮಾಡಿ. |
03:20 | Layer Properties ಡಯಲಾಗ್ ಬಾಕ್ಸ್ ನಲ್ಲಿ labels ಟ್ಯಾಬ್ ಅನ್ನು ಆಯ್ಕೆ ಮಾಡಿ. |
03:25 | ಮೇಲ್ಗಡೆ ಇರುವ ಡ್ರಾಪ್ ಡೌನ್ ನಲ್ಲಿ, Show labels for this layer ಅನ್ನು ಆಯ್ಕೆ ಮಾಡಿ. |
03:32 | Label with ಡ್ರಾಪ್ ಡೌನ್ ನಲ್ಲಿ, ಕೊಟ್ಟಿರುವ ಆಯ್ಕೆಗಳಲ್ಲಿ, name ಅನ್ನು ಆಯ್ಕೆ ಮಾಡಿ. |
03:38 | Text ಟ್ಯಾಬ್ ನಲ್ಲಿ, ನಮಗೆ
fonts |
03:46 | style |
03:49 | size |
03:51 | color ಮುಂತಾವುಗಳನ್ನು ಆಯ್ಕೆ ಮಾಡಲು ಆಯ್ಕೆಗಳಿವೆ. |
03:57 | Apply ಬಟನ್ ಅನ್ನು ಕ್ಲಿಕ್ ಮಾಡಿ, ನಂತರ OK ಅನ್ನು ಕ್ಲಿಕ್ ಮಾಡಿ. |
04:02 | ಕ್ಯಾನ್ವಾಸ್ ನಲ್ಲಿ, ಕೆಲವು ನಗರಗಳು ಮತ್ತು ಅವುಗಳ ಹೆಸರುಗಳೊಂದಿಗೆ, ಇಂಡಿಯಾ ಮ್ಯಾಪ್ ಡಿಸ್ಪ್ಲೇ ಆಗುತ್ತದೆ. |
04:08 | ಪ್ರಿಂಟ್ ಮತ್ತು ಪಬ್ಲಿಷ್ ಮಾಡುವ ಸಲುವಾಗಿ ಈ ಮ್ಯಾಪ್ ಫೈಲ್ ಅನ್ನು ಇಮೇಜ್ ಫಾರ್ಮ್ಯಾಟ್ ಗೆ ಎಕ್ಸ್ಪೋರ್ಟ್ ಮಾಡಬಹುದು. |
04:15 | QGIS ನಲ್ಲಿ Print Composer ಎಂಬ ಟೂಲ್ ಇದೆ. |
04:19 | ಇದು ಮ್ಯಾಪ್ ಗಳನ್ನು ಓದಲು ಸುಲಭವಾಗಿರುವ ಫಾರ್ಮ್ಯಾಟ್ ನಲ್ಲಿ ರಚಿಸಲು ಅವಕಾಶ ಮಾಡಿಕೊಡುತ್ತದೆ. |
04:24 | ಮೆನ್ಯು ಬಾರ್ ನಲ್ಲಿ Project ಮೆನ್ಯು ವನ್ನು ಆಯ್ಕೆ ಮಾಡಿ ಮತ್ತು New Print Composer ಅನ್ನು ಆಯ್ಕೆ ಮಾಡಿ. |
04:31 | Composer title ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
04:35 | ಇಲ್ಲಿ ನೀವು composer ಗೆ ಒಂದು ಹೆಸರನ್ನು ನಮೂದಿಸಲು ಕೇಳಲ್ಪಡುವಿರಿ. |
04:40 | ಟೈಟಲ್ ಅನ್ನು India-Map ಎಂದು ಟೈಪ್ ಮಾಡಿ. |
04:44 | OK ಬಟನ್ ಅನ್ನು ಕ್ಲಿಕ್ ಮಾಡಿ. |
04:47 | Print composer ವಿಂಡೋ ತೆರೆದುಕೊಳ್ಳುತ್ತದೆ. |
04:50 | Print Composer ಒಂದು ಖಾಲಿ ಕ್ಯಾನ್ವಾಸ್ ಅನ್ನು ಕೊಡುತ್ತದೆ. |
04:54 | ಕ್ಯಾನ್ವಾಸ್ ನ ಬಲಭಾಗದಲ್ಲಿ, ನಿಮಗೆ ಎರಡು ಪ್ಯಾನಲ್ ಗಳು ಕಾಣಿಸುತ್ತದೆ. |
04:59 | ಅಪ್ಪರ್ ಪ್ಯಾನಲ್ ಮತ್ತು ಲೋಯರ್ ಪ್ಯಾನಲ್ ಗಳಾಗಿವೆ. |
05:03 | ಪ್ಯಾನಲ್ ಗಳನ್ನು ಸಕ್ರಿಯಗೊಳಿಸಲು, View ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ. |
05:08 | ಮೆನ್ಯುವಿನಲ್ಲಿ ಕೆಳಕ್ಕೆ ಸ್ಕ್ರೋಲ್ ಮಾಡಿ, Panels ಅನ್ನು ಆಯ್ಕೆ ಮಾಡಿ. |
05:13 | ಸಬ್-ಮೆನ್ಯು ವು ಪ್ಯಾನೆಲ್ ಗಳ ಪಟ್ಟಿಯನ್ನು ತೋರಿಸುತ್ತದೆ.
ಇಲ್ಲಿ ಕೆಲವು ಪ್ಯಾನಲ್ ಗಳು ಈಗಾಗಲೇ ಆಯ್ಕೆಯಾಗಿವೆ. |
05:21 | ಪ್ಯಾನಲ್ ಅನ್ನು ಆಯ್ಕೆ ಮಾಡಲು, ಪ್ಯಾನಲ್ ನ ಹೆಸರಿನ ಮೇಲೆ ಕ್ಲಿಕ್ ಮಾಡಿ. |
05:24 | ಕ್ಯಾನ್ವಾಸ್ ನ ಬಲಭಾಗದಲ್ಲಿ ಒಂದು ಪ್ಯಾನಲ್ ಗೋಚರಿಸುತ್ತದೆ. |
05:28 | ಎಲ್ಲಾ Print Composer ಟೂಲ್ ಗಳು ಮೆನ್ಯುಗಳಲ್ಲಿ ಮತ್ತು ಟೂಲ್ ಬಾರ್ ನಲ್ಲಿ ಐಕಾನ್ ಗಳ ರೂಪದಲ್ಲಿ ಲಭ್ಯವಿವೆ. |
05:37 | ಟೂಲ್ ಬಾರ್ ಗಳು Composer ವಿಂಡೋ ದ ಎಡಗಡೆ ಮತ್ತು ಮೇಲ್ಭಾಗ ಎರಡೂ ಕಡೆ ಇವೆ. |
05:45 | ಇನ್ನು ಹೆಚ್ಚಿನ ಮಾಹಿತಿಗಾಗಿ, ಈ ಟ್ಯುಟೋರಿಯಲ್ ನಲ್ಲಿ ಕೊಟ್ಟಿರುವ additional material ಗಳನ್ನು ನೋಡಿ. |
05:52 | ಈಗ ನಮ್ಮ ಮ್ಯಾಪ್ ಅನ್ನು ಜೋಡಿಸಲು ಆರಂಭಿಸೋಣ. |
05:56 | Print Composer window, ದಲ್ಲಿ, ಟೂಲ್ ಬಾರ್ ನಲ್ಲಿರುವ Zoom full ಬಟನ್ ಅನ್ನು ಕ್ಲಿಕ್ ಮಾಡಿ. |
06:03 | ಇದು ಲೇ ಔಟ್ ಅನ್ನು ಅದರ ಪೂರ್ಣ ವಿಸ್ತಾರದವರೆಗೂ ಡಿಸ್ಪ್ಲೇ ಮಾಡುತ್ತದೆ. |
06:07 | ಈಗ ನಾವು QGIS Canvas ನಲ್ಲಿ ಕಾಣುವ ಮ್ಯಾಪ್ ಅನ್ನು Composer ಗೆ ತರಬೇಕು. |
06:14 | ಟೂಲ್ ಬಾರ್ ನಲ್ಲಿ, Add new map ಟೂಲ್ ಅನ್ನು ಕ್ಲಿಕ್ ಮಾಡಿ. |
06:19 | ಕರ್ಸರ್ ಅನ್ನು composer ವಿಂಡೋ ಗೆ ಸರಿಸಿ. |
06:23 | ಈಗ ಕರ್ಸರ್ plus (+) ಚಿಹ್ನೆಯಾಗಿ ಕಾಣಿಸುತ್ತದೆ. |
06:27 | ಇದು Add Map ಬಟನ್ ಸಕ್ರಿಯವಾಗಿದೆ ಎಂದು ತೋರಿಸುತ್ತದೆ. |
06:31 | Composer ವಿಂಡೋದಲ್ಲಿ ಒಂದು ಆಯತಾಕೃತಿಯನ್ನು ಚಿತ್ರಿಸಲು, ಮೌಸ್ ನ ಎಡ ಬಟನ್ ಅನ್ನು ಕ್ಲಿಕ್ ಮಾಡಿ, ಡ್ರ್ಯಾಗ್ ಮಾಡಿ. |
06:37 | ಅಂಚುಗಳಲ್ಲಿ ಮಾರ್ಜಿನ್ ಗಳನ್ನು ಬಿಡಿ. |
06:40 | ಮುಖ್ಯ QGISಕ್ಯಾನ್ವಾಸ್ ನಿಂದ ಪಡೆದ ಇಂಡಿಯಾ ಮ್ಯಾಪ್ ಆಯತಾಕಾರದ ವಿಂಡೋ ದಲ್ಲಿ ಪ್ರದರ್ಶಿತವಾಗಿರುವುದನ್ನು ನೀವು ಕಾಣುವಿರಿ. |
06:48 | ಪ್ರದರ್ಶಿತ ಮ್ಯಾಪ್ ಪೂರ್ತಿ ವಿಂಡೋವನ್ನು ವ್ಯಾಪಿಸದೇ ಇರಬಹುದು. |
06:43 | ಎಡ ಟೂಲ್ ಬಾರ್ ನಲ್ಲಿರುವ Move item content ಟೂಲ್ ಅನ್ನು ಕ್ಲಿಕ್ ಮಾಡಿ. |
06:59 | ಎಡ ಮೌಸ್ ಬಟನ್ ಅನ್ನು ಬಳಸಿ, ಮ್ಯಾಪ್ ಅನ್ನು ವಿಂಡೋದಲ್ಲಿ ಸರಿಸಿ, ಮಧ್ಯಕ್ಕೆ ತನ್ನಿ. |
07:05 | ಮೇಲ್ಗಡೆ ಟೈಟಲ್ ಗೆ ಸ್ವಲ್ಪ ಜಾಗವನ್ನು ಬಿಡಿ. |
07:09 | ಈಗ ನಾವು ಮುಖ್ಯ ಮ್ಯಾಪ್ ಗೆ ಒಂದು grid ಮತ್ತು zebra ಬಾರ್ಡರ್ ಅನ್ನು ಸೇರಿಸೋಣ. |
07:14 | Item Properties Panel ನಲ್ಲಿ, Grids ವಿಭಾಗಕ್ಕೆ ಸ್ಕ್ರೋಲ್ ಮಾಡಿ. |
07:19 | Grids ನ ವಿಸ್ತರಿಸಿದ ಮೆನ್ಯುವನ್ನು ನೋಡಲು ಅದರ ಮುಂದಿರುವ ಚಿಕ್ಕ ಕಪ್ಪು ತ್ರಿಕೋನವನ್ನು ಕ್ಲಿಕ್ ಮಾಡಿ. |
07:25 | ಹಸಿರು plus (+) ಚಿಹ್ನೆಯನ್ನು ಕ್ಲಿಕ್ ಮಾಡಿ, Add a new grid ಬಟನ್ ಅನ್ನು ಕ್ಲಿಕ್ ಮಾಡಿ. |
07:30 | ಈಗ ಗ್ರಿಡ್ ವಿಭಾಗದಲ್ಲಿರುವ ಎಲ್ಲ ಫೀಚರ್ ಗಳು ಸಕ್ರಿಯವಾಗಿವೆ. |
07:35 | ಅಗತ್ಯವಿದ್ದರೆ, ಇಲ್ಲಿ CRS ಅನ್ನು ಬದಲಿಸಲು ಆಯ್ಕೆಗಳಿವೆ.
ನಾನು ಇದನ್ನು ಹಾಗೆಯೇ ಬಿಡುವೆನು. |
07:43 | ಡ್ರಾಪ್ ಡೌನ್ ಆರೋ ಗಳನ್ನು ಬಳಸಿ, X ಮತ್ತು Y ಎರಡು ಕಡೆಗಳಲ್ಲೂ, Interval ವ್ಯಾಲ್ಯೂಗಳನ್ನು 10 ಎಂದು ಆಯ್ಕೆ ಮಾಡಿ. |
07:51 | Grid frame ವಿಭಾಗಕ್ಕೆ ಸ್ಕ್ರೋಲ್ ಮಾಡಿ ಮತ್ತು ಒಂದು Frame style ಅನ್ನು ಆಯ್ಕೆ ಮಾಡಿ.
ನಾನು Zebra ಅನ್ನು ಆಯ್ಕೆ ಮಾಡುವೆನು. |
07:59 | ಇಲ್ಲಿ ಫ್ರೇಮ್ ನ ಅಳತೆ, ದಪ್ಪ , ಬಣ್ಣ ಮೊದಲಾದವುಗಳನ್ನು ಬದಲಿಸಲು ಆಯ್ಕೆ ಗಳಿವೆ. |
08:07 | ನಿಮ್ಮ ಅಗತ್ಯಕ್ಕೆ ತಕ್ಕ ಆಯ್ಕೆಗಳನ್ನು ಆರಿಸಿಕೊಳ್ಳಿ. |
08:12 | ಕೆಳಕ್ಕೆ ಸ್ಕ್ರೋಲ್ ಮಾಡಿ, Draw Coordinates ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ. |
08:17 | Distance to map frame ಅನ್ನು ಕೋ-ಆರ್ಡಿನೇಟ್ ಗಳು ಸ್ಪಷ್ಟವಾಗುವ ತನಕ ಹೊಂದಿಸಿ. |
08:23 | ಲೇಬಲ್ ಗಳನ್ನು ಸರಿಸಲು, ಮೇಲ್ಮುಖ ಮತ್ತು ಕೆಳಮುಖವಾದ ಬಾಣದ ಗುರುತಿನ ಮೇಲೆ ಕ್ಲಿಕ್ ಮಾಡಿ. |
08:30 | Coordinate precision ಅನ್ನು 1 ಎಂದು ಆಯ್ಕೆ ಮಾಡಿ. |
08:34 | ಇದು ಮೊದಲನೆಯ ದಶಮಾಂಶದವರೆಗೆ ಕೋ-ಆರ್ಡಿನೇಟ್ ಗಳನ್ನು ತೋರಿಸುತ್ತದೆ. |
08:38 | ನಂತರ ನಾವು ಮ್ಯಾಪ್ ಗೆ ಉತ್ತರ ದಿಕ್ಕನ್ನು ತೋರಿಸುವ ಬಾಣದ ಗುರುತನ್ನು ಸೇರಿಸುವೆವು. |
08:43 | Print Composer ನಲ್ಲಿ ಮ್ಯಾಪ್ ಗೆ ಸಂಬಂಧಿಸಿದ ಇಮೇಜ್ ಗಳ ಉತ್ತಮ ಸಂಗ್ರಹವಿದೆ. |
08:49 | ಟೂಲ್ ಬಾರ್ ನಲ್ಲಿ Add image icon ಅನ್ನು ಕ್ಲಿಕ್ ಮಾಡಿ. |
08:54 | ಕರ್ಸರ್ ಅನ್ನು ಮ್ಯಾಪ್ ಕಂಪೋಸರ್ ವಿಂಡೋ ಗೆ ತನ್ನಿ. |
08:58 | ನಿಮ್ಮ ಮೌಸ್ ನ ಎಡಬ ಬಟನ್ ಅನ್ನು ಹಿಡಿದು, ಕ್ಲಿಕ್ ಮಾಡಿ, ಮ್ಯಾಪ್ ಕ್ಯಾನ್ವಾಸ್ ನ ಮೇಲ್ಭಾಗದ ಬಲ ಮೂಲೆಯಲ್ಲಿ ಒಂದು ಚಿಕ್ಕ ಆಯತಾಕೃತಿಯನ್ನು ಚಿತ್ರಿಸಿ. |
09:07 | ಬಲ ಪ್ಯಾನಲ್ ನಲ್ಲಿರುವ Item Properties ಟ್ಯಾಬ್ ನಡಿಯಲ್ಲಿ, Search directories ವಿಭಾಗವನ್ನು ವಿಸ್ತರಿಸಿ. |
09:14 | ನಿಮ್ಮ ಇಷ್ಟದ ನಾರ್ಥ್ ಆರೋ ಇಮೇಜ್ ಅನ್ನು ಕ್ಲಿಕ್ ಮಾಡುವುದರ ಮೂಲಕ ಆಯ್ಕೆ ಮಾಡಿ. |
09:20 | ಮ್ಯಾಪ್ Composer ವಿಂಡೋದಲ್ಲಿರುವ ಬಾಕ್ಸ್ ನಲ್ಲಿ ಇಮೇಜ್ ಕಾಣಿಸುತ್ತದೆ. |
09:25 | ಮ್ಯಾಪ್ Composer ವಿಂಡೋ ದ ಮೇಲೆ ಕ್ಲಿಕ್ ಮಾಡಿ. |
09:28 | ಮ್ಯಾಪ್ ನ ಮೇಲ್ಬಾಗದ ಬಲ ಮೂಲೆಯಲ್ಲಿ ನೀವು ನಾರ್ಥ್ ಆರೋ ಇಮೇಜ್ ಅನ್ನು ನೋಡಬಹುದು. |
09:34 | ಈಗ ನಾವು ಮ್ಯಾಪ್ ಗೆ ಒಂದು ಸ್ಕೇಲ್ ಬಾರ್ ಅನ್ನು ಸೇರಿಸೋಣ. |
09:38 | ಟೂಲ್ ಬಾರ್ ನಲ್ಲಿ Add new scalebar tool ಅನ್ನು ಕ್ಲಿಕ್ ಮಾಡಿ. |
09:43 | ಮ್ಯಾಪ್ ನಲ್ಲಿ, ನಿಮಗೆ ಸ್ಕೇಲ್ ಬಾರ್ ಎಲ್ಲಿ ಕಾಣಬೇಕೋ ಅಲ್ಲಿ ಕ್ಲಿಕ್ ಮಾಡಿ. |
09:47 | ನಾನು ಸ್ಕೇಲ್ ಬಾರ್ ಅನ್ನು ಕೆಳ ಎಡ ಮೂಲೆಯಲ್ಲಿ ಸೇರಿಸುವೆನು. |
09:52 | ಬಲ ಪ್ಯಾನಲ್ ನಲ್ಲಿ, Segments ವಿಭಾಗದಡಿಯಲ್ಲಿ, ನೀವು ಸೆಗ್ಮೆಂಟ್ ಗಳ ಸಂಖ್ಯೆ ಮತ್ತು ಅವುಗಳ ಅಳತೆಯನ್ನು ಹೊಂದಿಸಬಹುದು. |
10:00 | ಈಗ ನಮ್ಮ ಮ್ಯಾಪ್ ಗೆ ಟೈಟಲ್ ಅನ್ನು ಸೇರಿಸೋಣ. |
10:04 | ಎಡ ಟೂಲ್ ಬಾರ್ ನಲ್ಲಿ Add new Label ಟೂಲ್ ಅನ್ನು ಕ್ಲಿಕ್ ಮಾಡಿ. |
10:09 | ಕರ್ಸರ್ ಅನ್ನು ಮ್ಯಾಪ್ composer ವಿಂಡೋಗೆ ತನ್ನಿ. |
10:13 | ನಿಮ್ಮ ಮೌಸ್ ನ ಎಡ ಬಟನ್ ಅನ್ನು ಹಿಡಿದು, ಮೇಲ್ಭಾಗದ ಮಧ್ಯದಲ್ಲಿ ಒಂದು ಬಾಕ್ಸ್ ಅನ್ನು ಚಿತ್ರಿಸಿ. |
10:19 | ಬಲ ಪ್ಯಾನಲ್ ನಲ್ಲಿ ನೀವು, Label ಗೆ Item Properties ಟ್ಯಾಬ್ ಅನ್ನು ಕಾಣುವಿರಿ. |
10:24 | Main Properties ನ ಅಡಿಯಲ್ಲಿ, ಟೆಕ್ಸ್ಟ್ ಬಾಕ್ಸ್ ನಲ್ಲಿ Map of India ಎಂದು ಟೈಪ್ ಮಾಡಿ. |
10:31 | Appearance ವಿಭಾಗದಡಿಯಲ್ಲಿ, Font ಟ್ಯಾಬ್ ಅನ್ನು ಕ್ಲಿಕ್ ಮಾಡಿ. |
10:36 | Select Font ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ, ಸರಿಹೊಂದುವ Font, Font style ಮತ್ತು Size ಅನ್ನು ಆಯ್ಕೆ ಮಾಡಿ, |
10:49 | OK ಬಟನ್ ಅನ್ನು ಕ್ಲಿಕ್ ಮಾಡಿ. |
10:52 | ನಿಮ್ಮ ಇಷ್ಟದಂತೆ, ಫಾಂಟ್ ಕಲರ್, ಮಾರ್ಜಿನ್ ಮತ್ತು ಅಲೈನ್ಮೆಂಟ್ ಅನ್ನು ಬದಲಿಸಿ. |
11:03 | ನೀವು ಎಲ್ಲ ಬದಲಾವಣೆಗಳನ್ನು ಮುಗಿಸಿದ ನಂತರ, ಬದಲಾವಣೆಗಳನ್ನು ನೋಡಲು, ಕಂಪೋಸರ್ ವಿಂಡೋದ ಮೇಲೆ ಕ್ಲಿಕ್ ಮಾಡಿ. |
11:10 | ನಾವು ಆಯ್ಕೆ ಮಾಡಿದ ಫಾಂಟ್ ಮತ್ತು ಸೈಜ್ ಲೇಬಲ್ ಮ್ಯಾಪ್ ನ ಮೇಲೆ, Composer ವಿಂಡೋದಲ್ಲಿ ಕಾಣಿಸುತ್ತದೆ. |
11:17 | ಈಗ Inset map ಅನ್ನು ಸೇರಿಸೋಣ. |
11:21 | ಮುಖ್ಯ QGIS ವಿಂಡೋಗೆ ಹೋಗಿ. |
11:24 | ಟೂಲ್ ಬಾರ್ ನಲ್ಲಿ Zoom In ಬಟನ್ ಅನ್ನು ಕ್ಲಿಕ್ ಮಾಡಿ. |
11:28 | ಕರ್ಸರ್ ಅನ್ನು ಮ್ಯಾಪ್ ನ ಮೇಲೆ ತನ್ನಿ, ಮುಂಬೈ ಯ ಸುತ್ತಮುತ್ತ ಝೂಮ್ ಮಾಡಿ. |
11:34 | ಮುಂಬೈ ಯ ಸುತ್ತಮುತ್ತ, ಒಂದು ಆಯತವನ್ನು ರಚಿಸಿ, ಆ ಪ್ರದೇಶವನ್ನು ಝೂಮ್ ಮಾಡಬಹುದು. |
11:39 | ಈಗ ನಾವು ಮ್ಯಾಪ್ ಇನ್ಸೆಟ್ ಅನ್ನು ಸೇರಿಸಲು ಸಿದ್ಧವಾಗಿದ್ದೇವೆ. |
11:43 | Print Composer ವಿಂಡೋ ಗೆ ಹೋಗಿ. |
11:46 | ಟೂಲ್ ಬಾರ್ ನಲ್ಲಿ Add new map ಟೂಲ್ ಅನ್ನು ಕ್ಲಿಕ್ ಮಾಡಿ. |
11:51 | Composer ವಿಂಡೋ ದ ಮೇಲ್ಭಾಗದ ಎಡ ಮೂಲೆಯಲ್ಲಿ ಒಂದು ಆಯತಾಕೃತಿಯನ್ನು ಚಿತ್ರಿಸಿ. |
11:57 | ಟೂಲ್ ಬಾರ್ ನಲ್ಲಿ Move item Content ಟೂಲ್ ಅನ್ನು ಕ್ಲಿಕ್ ಮಾಡಿ. |
12:02 | inset map ನ ಮೇಲೆ ಕರ್ಸರ್ ಅನ್ನು ಇಡಿ. |
12:05 | ಮ್ಯಾಪ್ ಅನ್ನು ನಿಮ್ಮ ಆಯ್ಕೆಯ ಪ್ರದೇಶಕ್ಕೆ ಇನ್ಸೆಟ್ ನಲ್ಲಿ ಸರಿಸಿ. |
12:10 | Print Composer ನಲ್ಲಿ ನೀವು, Main map ಮತ್ತು inset ಮ್ಯಾಪ್ ಎಂಬ ಎರಡು ಆಬ್ಜೆಕ್ಟ್ ಗಳನ್ನು ನೋಡಬಹುದು. |
12:17 | Item Properties ಪ್ಯಾನಲ್ ನಲ್ಲಿ, Frame ವಿಭಾಗಕ್ಕೆ ಸ್ಕ್ರೋಲ್ ಮಾಡಿ, ಮತ್ತು ಅದರ ಮುಂದಿರುವ ಚೆಕ್ ಬಾಕ್ಸ್ ಅನ್ನು ಚೆಕ್ (ಟಿಕ್) ಮಾಡಿ. |
12:26 | inset map ಗೆ, ಫ್ರೇಮ್ ಬಾರ್ಡರ್ ನ ಬಣ್ಣ ಮತ್ತು ದಪ್ಪವನ್ನು ಬದಲಿಸಿ. |
12:36 | inset ಮ್ಯಾಪ್ ನ ಬ್ಯಾಕ್ಗ್ರೌಂಡ್ ಬಣ್ಣವನ್ನು ಬದಲಿಸಿ, ಇದರಿಂದ ಮ್ಯಾಪ್ ನ ಬ್ಯಾಕ್ಗ್ರೌಂಡ್ ಎದ್ದು ಕಾಣುತ್ತದೆ. |
12:45 | ಮ್ಯಾಪ್ ಎಲಿಮೆಂಟ್ ಗಳಾದ ಲೆಜೆಂಡ್ಸ್, ಷೇಪ್ಸ್, ಆರೋ ಮುಂತಾದವುಗಳನ್ನು ಅನ್ವೇಷಿಸಬಹುದು. |
12:53 | ನಿಮಗೆ ಅಗತ್ಯವಾದ ಬದಲಾವಣೆಗಳನ್ನೆಲ್ಲ ಮಾಡಿದ ನಂತರ, ನೀವು ಮ್ಯಾಪ್ ಅನ್ನು ಸೇವ್ ಅಥವಾ ಎಕ್ಸ್ಪೋರ್ಟ್ ಮಾಡಬಹುದು. |
12:59 | ಮೆನ್ಯುಬಾರ್ ನಲ್ಲಿ, Composer ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ. |
13:03 | ಇಲ್ಲಿ ನಾವು ಮ್ಯಾಪ್ ಅನ್ನು Image, PDF ಅಥವಾ SVG ಫಾರ್ಮ್ಯಾಟ್ ಗಳಲ್ಲಿ ಎಕ್ಸ್ಪೋರ್ಟ್ ಮಾಡಲು ಆಯ್ಕೆಗಳಿವೆ. |
13:12 | ಈಗ ಮ್ಯಾಪ್ ಅನ್ನು ಇಮೇಜ್ ಆಗಿ ಎಕ್ಸ್ಪೋರ್ಟ್ ಮಾಡೋಣ.
Export as Image ಆಯ್ಕೆಯನ್ನು ಆರಿಸಿ. |
13:20 | Save composition as ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
ಸರಿಯಾದ ಫೈಲ್ ನೇಮ್, ಲೊಕೇಷನ್ ಮತ್ತು ಫಾರ್ಮ್ಯಾಟ್ ಅನ್ನು ಕೊಡಿ. |
13:29 | ನಾನು PNG ಫಾರ್ಮ್ಯಾಟ್ ಅನ್ನು ಆಯ್ಕೆ ಮಾಡುವೆನು.
Save ಬಟನ್ ಅನ್ನು ಕ್ಲಿಕ್ ಮಾಡಿ. |
13:35 | Image export options ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
13:39 | ಸರಿಯಾದ ರೆಸೊಲ್ಯುಷನ್, ಪೇಜ್ ನ ಅಗಲ ಮತ್ತು ಎತ್ತರವನ್ನು ಆಯ್ಕೆ ಮಾಡಿ. |
13:44 | ನಾನು ಪೇಜ್ ವಿಡ್ಥ್ ಅನ್ನು 800 ಪಿಕ್ಸೆಲ್ಸ್ ಎಂದು ಸೆಟ್ ಮಾಡುವೆನು. |
13:49 | Save ಬಟನ್ ಅನ್ನು ಕ್ಲಿಕ್ ಮಾಡಿ. |
13:52 | ಇಲ್ಲಿ ಮ್ಯಾಪ್ ಇಮೇಜ್ ಫೈಲ್ ಆಗಿ ಸೇವ್ ಆಗಿದೆ. |
13:56 | ಈಗ ಈ ಮ್ಯಾಪ್ ಅನ್ನು ಪ್ರಿಂಟ್ ಮಾಡಬಹುದು ಅಥವಾ ಪ್ರಕಟಣೆ (ಪಬ್ಲಿಶ್) ಮಾಡಬಹುದು. |
14:01 | ಸಂಕ್ಷಿಪ್ತವಾಗಿ,
ಈ ಟ್ಯುಟೋರಿಯಲ್ ನಲ್ಲಿ ನಾವು, |
14:06 | Print Composer (ಪ್ರಿಂಟ್ ಕಂಪೋಸರ್) ಅನ್ನು ಬಳಸಿ ಮ್ಯಾಪ್ ಅನ್ನು ರಚಿಸುವುದು
Print composer ನಲ್ಲಿ ಮ್ಯಾಪ್ ಎಲಿಮೆಂಟ್ ಗಳನ್ನು ಸೇರಿಸುವುದು, ಮ್ಯಾಪ್ ಅನ್ನು ಎಕ್ಸ್ಪೋರ್ಟ್ ಮಾಡುವುದು – ಇವುಗಳ ಕುರಿತು ಕಲಿತಿದ್ದೇವೆ. |
14:16 | ಅಸೈನ್ಮೆಂಟ್,
Code files ಲಿಂಕ್ ನಲ್ಲಿ ಕೊಟ್ಟಿರುವ, ವರ್ಲ್ಡ್ dataset ಅನ್ನು ಬಳಸಿ, ಏಷಿಯಾ ಖಂಡದ ಮ್ಯಾಪ್ ಅನ್ನು ರಚಿಸಿ. |
14:25 | ಇಂಡಿಯಾದ inset ಮ್ಯಾಪ್ ಅನ್ನು ರಚಿಸಿ.
ಒಂದು ಮ್ಯಾಪ್ ಲೆಜೆಂಡ್ ಅನ್ನು ಸೇರಿಸಿ. |
14:31 | ನಿಮ್ಮ ಪೂರ್ಣಗೊಂಡ ಅಸೈನ್ಮೆಂಟ್ ಇಲ್ಲಿ ತೋರಿಸಿರುವಂತೆ ಕಾಣಬೇಕು. |
14:36 | ಕೆಳಗಿನ ಲಿಂಕ್ನಲ್ಲಿರುವ ವೀಡಿಯೊ ಸ್ಪೋಕನ್ ಟ್ಯುಟೋರಿಯಲ್ ಯೋಜನೆಯನ್ನು ಕುರಿತು ವಿವರಿಸುತ್ತದೆ.
ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ. |
14:44 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡ, ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ನಮ್ಮ ಆನ್ಲೈನ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ.
ವಿವರಗಳಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
14:54 | ನೀವು ಪ್ರಶ್ನೆಯನ್ನು ಹೊಂದಿರುವ ನಿಮಿಷ ಮತ್ತು ಸೆಕೆಂಡ್ ಅನ್ನು ಆರಿಸಿ.
ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ. |
14:58 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗೆ NMEICT, MHRD, ಭಾರತ ಸರ್ಕಾರ ಧನಸಹಾಯ ನೀಡುತ್ತದೆ.
ಹೆಚ್ಚಿನ ವಿವರಗಳಿಗಾಗಿ, ಇಲ್ಲಿ ತೋರಿಸಿರುವ ಲಿಂಕ್ಗೆ ಭೇಟಿ ನೀಡಿ. |
15:09 | ಅನುವಾದ ಮತ್ತು ಧ್ವನಿ ಶ್ರೀ ನವೀನ ಭಟ್ಟ ಉಪ್ಪಿನಪಟ್ಟಣ. ಧನ್ಯವಾದಗಳು. |