Synfig/C3/Underwater-animation/Kannada

From Script | Spoken-Tutorial
Revision as of 20:47, 18 November 2020 by NaveenBhat (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time
Narration
00:01 Synfig ಅನ್ನು ಬಳಸಿ, “Underwater- animation” ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:05 ಈ ಟ್ಯುಟೋರಿಯಲ್ ನಲ್ಲಿ ನಾವು Synfig ನಲ್ಲಿ ಇಮೇಜ್ ಗಳನ್ನು ಆನಿಮೇಟ್ ಮಾಡುವುದು ಹೇಗೆ ಎಂದು ಪರಿಚಯಿಸಿಕೊಳ್ಳುತ್ತೇವೆ.
00:12 ನಾವು png ಮತ್ತು svg ಗಳನ್ನು ಇಂಪೋರ್ಟ್ ಮಾಡುವುದನ್ನು ಕಲಿಯುವೆವು.
00:16 distortion (ಡಿಸ್ಟೋರ್ಷನ್ )ಅನ್ನು ಬಳಸಿ, ಇಮೇಜ್ ಗಳನ್ನು ಆನಿಮೇಟ್ ಮಾಡುವುದನ್ನು,

Noise Gradient ಅನ್ನು ಸೇರಿಸುವುದು,

00:22 random animation ಗೆ Random ಆಯ್ಕೆಯನ್ನು ಬಳಸುವುದನ್ನು ಕಲಿಯುವೆವು.
00:26 ಇವುಗಳನ್ನೆಲ್ಲ ಬಳಸಿ, underwater animation ಅನ್ನು ರಚಿಸುವುದನ್ನು ಕಲಿಯುವೆವು.
00:32 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು,

Ubuntu Linux 14.04 ಒ.ಎಸ್ ಮತ್ತು Synfig studio ದ 1.0.2 ಆವೃತ್ತಿಯನ್ನು ಬಳಸುವೆನು.

00:43 ನಾವು ಈಗ Synfig interface ನಲ್ಲಿದ್ದೇವೆ.
00:46 ನಾನು ನನ್ನ Synfig ಫೈಲ್ ಅನ್ನು Underwater-animation ಎಂದು ಸೇವ್ ಮಾಡಿರುವೆನು. ದಯವಿಟ್ಟು ನೀವೂ ಇದೇ ರೀತಿಯಾಗಿ ಮಾಡಿ.
00:54 ಈಗ ನಮ್ಮ ಅಂಡರ್ ವಾಟರ್ ಆನಿಮೇಷನ್ ಅನ್ನು ರಚಿಸಲು ಆರಂಭಿಸೋಣ.
00:59 ಅಂಡರ್ ವಾಟರ್ ಆನಿಮೇಷನ್ ಗೆ ನಮಗೆ ಬ್ಯಾಕ್ ಗ್ರೌಂಡ್, ಸ್ವಲ್ಪ ಗುಳ್ಳೆಗಳು ಮತ್ತು ಜಲಸಸ್ಯಗಳು ಬೇಕು.
01:06 ಮತ್ತು ನಮಗೆ ಕೆಲವು ಜಲಚರಗಳಾದ ಮೀನು, ಕಪ್ಪೆ, ಏಡಿ ಮುಂತಾದವೂ ಬೇಕು.
01:13 ಈ ಆನಿಮೇಷನ್ ಅನ್ನು ರಚಿಸಲು, ನಾನು ಈಗಾಗಲೇ ರಚಿಸಿರುವ ಇಮೇಜ್ ಗಳನ್ನು ಬಳಸುವೆನು.
01:19 ಅಭ್ಯಾಸ ಮಾಡಲು, ನೀವು ಈ ಟ್ಯುಟೋರಿಯಲ್ ನ Code Files ಲಿಂಕ್ ನಲ್ಲಿ ಕೊಟ್ಟಿರುವ ಇಮೇಜ್ ಗಳನ್ನು ಬಳಸಬಹುದು.
01:26 Background, octopus, water plant, Bubble, Fish ಗಳು png ಇಮೇಜ್ ಗಳಾಗಿವೆ,
01:32 Frog ಮತ್ತು crab ಗಳು svg ಇಮೇಜ್ ಗಳಾಗಿವೆ.
01:36 ಈಗ ನಮ್ಮ ಅಂಡರ್ ವಾಟರ್ ಆನಿಮೇಷನ್ ಗೆ png ಇಮೇಜ್ ಗಳನ್ನು ಒಂದಾದ ಮೇಲೆ ಒಂದರಂತೆ ಇಂಪೋರ್ಟ್ ಮಾಡಿಕೊಳ್ಳಿ.
01:43 ಅದಕ್ಕಾಗಿ, File ಗೆ ಹೋಗಿ, Import ಅನ್ನು ಕ್ಲಿಕ್ ಮಾಡಿ.
01:47 Desktop ಅನ್ನು ಕ್ಲಿಕ್ ಮಾಡಿ ಮತ್ತು Underwater animation ನ ಮೇಲೆ ಡಬಲ್ ಕ್ಲಿಕ್ ಮಾಡಿ.

ಮತ್ತು background.png ಆಯ್ಕೆ ಮಾಡಿ.

01:54 Import ಅನ್ನು ಕ್ಲಿಕ್ ಮಾಡಿ. ನಾವು ಇಮೇಜ್ ಗಳನ್ನು canvas ನ ಮೇಲೆ ನೋಡಬಹುದು.
02:00 ಇದೇ ರೀತಿಯಲ್ಲಿ Water plant, Fish-1, Fish-2, Octopus, Frog, Crab, Bubble ಗಳನ್ನು ಇಲ್ಲಿ ತೋರಿಸಿರುವಂತೆ ಇಂಪೋರ್ಟ್ ಮಾಡಿ.
02:10 ನೀವು Layers panel ನಲ್ಲಿ ಈ ರೀತಿಯಾಗಿ ಪಟ್ಟಿಯನ್ನು ನೋಡಬಹುದು.
02:14 Plant, Fish-1 ಮುಂತಾದ ಇಮೇಜ್ ಗಳ ಗುಂಪನ್ನು ಬೇರೆಯಾಗಿ ರಚಿಸಲು, ಇಂಪೋರ್ಟ್ ಮಾಡಿದ ಲೇಯರ್ ಗಳನ್ನು ಕ್ರಮವಾಗಿ ಆಯ್ಕೆ ಮಾಡಿಕೊಳ್ಳಿ.
02:24 ನಂತರ Layer ನ ಮೇಲೆ ರೈಟ್ ಕ್ಲಿಕ್ ಮಾಡಿ, ನಂತರ Group layer ಅನ್ನು ಆಯ್ಕೆ ಮಾಡಿ.
02:30 ಈಗ ಈ group layers ಗಳನ್ನು ಇಲ್ಲಿ ತೋರಿಸಿರುವಂತೆ ರಿನೇಮ್ ಮಾಡಿ.
02:37 Canvas ಗೆ ಹಿಂದಿರುಗಿ.

ಎಲ್ಲಾ ಇಮೇಜ್ ಗಳನ್ನು ಅಳತೆಯನ್ನು ಹೊಂದಿಸಿ, ನೀರೊಳಗಿನ ದೃಶ್ಯದಂತೆ, ಇಲ್ಲಿ ತೋರಿಸಿರುವ ರೀತಿಯಲ್ಲಿ ಜೋಡಿಸಿ.

02:46 ಕೆಲವೊಮ್ಮೆ svg ಫೈಲ್ ಗಳನ್ನು synfig ನಲ್ಲಿ ಇಂಪೋರ್ಟ್ ಮಾಡುವಾಗ, ಎರರ್ ಗಳನ್ನು ತೋರಿಸಬಹುದು. ಇಲ್ಲಿ ಕಪ್ಪೆಯ ಕಣ್ಣುಗಳು ತಪ್ಪಿಹೋಗಿರುವುದನ್ನು ನೀವು ನೋಡಬಹುದು, ನಾನು ಅದನ್ನು ರಚಿಸುವೆನು.
03:01 ಈಗ Time track panel ಗೆ ಹೋಗೋಣ.

Time cursor ಅನ್ನು start frame ನ ಮೇಲೆ ಇಡಿ.

03:07 Turn on animate editing mode icon ಅನ್ನು ಕ್ಲಿಕ್ ಮಾಡಿ.
03:10 Layers panel ಗೆ ಹೋಗಿ, Fish-1 group layer ಅನ್ನು ವಿಸ್ತರಿಸಲು, ತ್ರಿಕೋನದ ಮೇಲೆ ಕ್ಲಿಕ್ ಮಾಡಿ.
03:16 Fish-1 layer. png ನ ಮೇಲೆ ರೈಟ್ ಕ್ಲಿಕ್ ಮಾಡಿ.

New layer ಗೆ ಹೋಗಿ, Distortion ಆಯ್ಕೆ ಮಾಡಿ ಮತ್ತು Twirl (ಟ್ವಿರ್ಲ್) ಅನ್ನು ಕ್ಲಿಕ್ ಮಾಡಿ.

03:26 ಈಗ ಮೀನಿನ ಬಾಲದ ಭಾಗವನ್ನು ಆನಿಮೇಟ್ ಮಾಡೋಣ.

canvas ಗೆ ಹೋಗಿ. ಇಲ್ಲಿ ತೋರಿಸಿರುವಂತೆ, Twirl effect (ಟ್ವಿರ್ಲ್ ಎಫೆಕ್ಟ್)ಅನ್ನು ಇಡಿ.

03:34 Twirl ಅನ್ನು ಹೊಂದಿಸಿ.
03:36 ಈಗ ಕರ್ಸರ್ ಅನ್ನು 10 ನೆಯ ಫ್ರೇಮ್ ಗೆ ಸರಿಸಿ. canvas ಗೆ ಹಿಂದಿರುಗಿ.
03:44 Twirl ಎಫೆಕ್ಟ್ ಅನ್ನು ಮಾಡಲು, Twirl ಹ್ಯಾಂಡಲ್ ಗಳನ್ನು ಅಂದರೆ ನೀಲಿ ಚುಕ್ಕಿಯನ್ನು ಇಲ್ಲಿ ತೋರಿಸಿರುವಂತೆ, ಸರಿಸಿ.
03:52 ನಾವು Rotation ವ್ಯಾಲ್ಯುವು -50.60 ಡಿಗ್ರಿ ಎಂದಿರುವದನ್ನು ನೋಡೋಣ.
03:56 ಈಗ 18ನೆಯ ಮತ್ತು 24 ನೆಯ ಫ್ರೇಮ್ ಗಳಿಗೆ ಒಂದಾದ ಮೇಲೆ ಒಂದಕ್ಕೆ cursor ಅನ್ನು ಸರಿಸಿ, ಮತ್ತು ಈ ಹಂತಗಳನ್ನು ಪುನರಾವರ್ತಿಸಿ.
04:03 amount of rotations ಅನ್ನು ಕ್ರಮವಾಗಿ, 32 ಡಿಗ್ರಿಸ್ ಮತ್ತು -5 ಡಿಗ್ರಿಸ್ ಎಂದು ಬದಲಿಸಿ.
04:10 ಮೀನಿನ ಮೇಲಿನ ಮತ್ತು ಕೆಳಗಿನ ರೆಕ್ಕೆಗಳನ್ನು ಆನಿಮೇಟ್ ಮಾಡಲು, ಇದೇ ರೀತಿಯಾಗಿ ನಾನು ಎರಡು ಸಲ twirl ಎಫೆಕ್ಟ್ ಗಳನ್ನು ಕೊಡುವೆನು.
04:24 ಕೊನೆಯವರೆಗಿನ ಪುನರಾವರ್ತಿತ ಆನಿಮೇಷನ್ ಗಾಗಿ, ನಾವು ಒಂದು Time Loop ಅನ್ನು ಕೊಡಬೇಕು.
04:29 ಇದಕ್ಕಾಗಿ, Fish group ಲೇಯರ್ ನ ಮೇಲಿನ ಲೇಯರ್ ಅನ್ನು ಡಬಲ್ ಕ್ಲಿಕ್ ಮಾಡಿ.

ಈಗ New layer ಗೆ ಹೋಗಿ, ನಂತರ Other ಗೆ ಹೋಗಿ, Time Loop ಅನ್ನು ಕ್ಲಿಕ್ ಮಾಡಿ.

04:40 ಈಗ Layers panel ಗೆ ಹೋಗಿ, Fish layer ಅನ್ನು ಆಯ್ಕೆ ಮಾಡಿ.
04:44 Time track panel ಗೆ ಹೋಗಿ, ಕರ್ಸರ್ ಅನ್ನು ಸೊನ್ನೆಯ ಫ್ರೇಮ್ ನಲ್ಲಿಡಿ.

ಮೀನನ್ನು ಇಲ್ಲಿ ತೋರಿಸಿರುವಂತೆ ಸರಿಸಿ.

04:53 Time track panel ಗೆ ಹೋಗಿ ಮತ್ತು ಕರ್ಸರ್ ಅನ್ನು 100 ನೆಯ ಫ್ರೇಮ್ ನಲ್ಲಿಡಿ. ಮೀನನ್ನು ಇಲ್ಲಿ ತೋರಿಸಿರುವಂತೆ ಸರಿಸಿ.
05:03 ಇದೇ ರೀತಿಯಾಗಿ, Fish-2 ಮಾಡೋಣ.
05:11 ಮುಂದೆ ಹೋಗುವ ಮೊದಲು, ಫೈಲ್ ಅನ್ನು ಸೇವ್ ಮಾಡೋಣ.
05:15 ಈಗ ಏಡಿಯ ಪಾದಗಳನ್ನು ಆನಿಮೇಟ್ ಮಾಡೋಣ.

Layers panel ಗೆ ಹೋಗಿ.

05:20 Crab group ಲೇಯರ್ ಅನ್ನು ವಿಸ್ತರಿಸಲು, ತ್ರಿಕೋನದ ಮೇಲೆ ಕ್ಲಿಕ್ ಮಾಡಿ.
05:24 ಇಲ್ಲಿ ನಾವು ಏಡಿಯ ಬೇರೆ ಬೇರೆ ಭಾಗಗಳನ್ನು, ವಿಭಿನ್ನ ಗ್ರುಪ್ ಗಳಾಗಿ ವಿಂಗಡಿಸಬೇಕು.
05:35 ನಂತರ ಮೊದಲ ಭಾಗವಾದ Claw-1 ಅನ್ನು ಆಯ್ಕೆ ಮಾಡಿ, ಅದರ ಮೇಲೆ ರೈಟ್ ಕ್ಲಿಕ್ ಮಾಡಿ.
05:40 New layer ಗೆ ಹೋಗಿ, Transform ಗೆ ಹೋಗಿ, Rotate ಅನ್ನು ಕ್ಲಿಕ್ ಮಾಡಿ.
05:47 ಇಲ್ಲಿ ತೋರಿಸಿರುವಂತೆ, ರೊಟೇಟ್ ಹ್ಯಾಂಡಲ್ ಗಳನ್ನು ಹೊಂದಿಸಿ.
05:50 Time track panel ಗೆ ಹೋಗಿ, ಕರ್ಸರ್ ಅನ್ನು 10 ನೆಯ ಫ್ರೇಮ್ ನಲ್ಲಿಡಿ.
05:55 Parameters panel ಗೆ ಹೋಗಿ, Rotate amount ಅನ್ನು 18 degrees ಗೆ ಬದಲಿಸಿ.
06:02 ಮತ್ತೊಮ್ಮೆ Layers panel ಗೆ ಹೋಗಿ.

ಈಗ Claw-1 ನ ಎರಡನೆಯ ಭಾಗವನ್ನುಆಯ್ಕೆಮಾಡಿಕೊಂಡು, ಅದರ ಮೇಲೆ ರೈಟ್ ಕ್ಲಿಕ್ ಮಾಡಿ.

06:09 New layer ಗೆ ಹೋಗಿ, ನಂತರ Transform ಗೆ ಹೋಗಿ ಮತ್ತು Rotate ಅನ್ನು ಕ್ಲಿಕ್ ಮಾಡಿ.

rotate handle ಅನ್ನು ಇಲ್ಲಿ ತೋರಿಸಿರುವಂತೆ ಹೊಂದಿಸಿ.

06:17 Time track panel ಗೆ ಹೋಗಿ ಮತ್ತು ಕರ್ಸರ್ ಅನ್ನು 10ನೆಯ ಫ್ರೇಮ್ ನಲ್ಲಿಡಿ.
06:22 Parameters panel ಹೋಗಿ ಮತ್ತು rotate Amount ಅನ್ನು -7 ಡಿಗ್ರೀಸ್ ಎಂದು ಬದಲಿಸಿ.
06:28 ಇದೇ ರೀತಿಯಾಗಿ, Claw-2 ಅನ್ನು ಆನಿಮೇಟ್ ಮಾಡಿ.
06:35 ಮುಂದೆ, ನಾವು ಏಡಿಯ ಕಣ್ಣುಗಳನ್ನು ಆನಿಮೇಟ್ ಮಾಡುವೆವು. Layers panel ಗೆ ಹೋಗಿ, Eye group layer ಅನ್ನು ತೆರೆಯಿರಿ.

Ctrl ಕೀಯನ್ನು ಬಳಸಿ, ಎರಡೂ ಕಣ್ಣುಗುಡ್ಡೆಗಳ ಕಪ್ಪು ಭಾಗಗಳನ್ನು ಆಯ್ಕೆಮಾಡಿ.

06:51 Time track panel ಗೆ ಹೋಗಿ, ಕರ್ಸರ್ ಅನ್ನು 9 ನೆಯ ಫ್ರೇಮ್ ನಲ್ಲಿಡಿ.

ಈಗ ಕ್ಯಾನ್ವಾಸ್ ಗೆ ಹೋಗಿ, ಇಲ್ಲಿ ತೋರಿಸಿರುವಂತೆ ಎರಡೂ ಕಣ್ಣುಗುಡ್ಡೆಗಳ ಕಪ್ಪು ಭಾಗಗಳನ್ನು ಸರಿಸಿ.

07:07 ಮತ್ತೆ, Time track panel ಗೆ ಹೋಗಿ ಮತ್ತು ಕರ್ಸರ್ ಅನ್ನು 18 ನೆಯ ಫ್ರೇಮ್ ನಲ್ಲಿಡಿ.
07:12 ಈಗ ಕ್ಯಾನ್ವಾಸ್ ಗೆ ಹೋಗಿ, ಎರಡೂ ಕಣ್ಣುಗುಡ್ಡೆಗಳ ಕಪ್ಪು ಭಾಗಗಳನ್ನು ಇಲ್ಲಿ ತೋರಿಸಿರುವಂತೆ ಸರಿಸಿ.

ಕೊನೆಯವರೆಗೂ ಪುನರಾವರ್ತಿತ ಆನಿಮೇಷನ್ ಗಾಗಿ, Time loop ಅನ್ನು ಹಾಕಿರಿ.

07:26 ಮುಂದೆ ಹೋಗುವ ಮೊದಲು, ಇನ್ನೊಮ್ಮೆ ನಮ್ಮ ಫೈಲ್ ಅನ್ನು ಸೇವ್ ಮಾಡೋಣ.
07:32 ನಂತರ ನಾವು ಕಪ್ಪೆಯ ಬಾಯಿ ಮತ್ತು ನಾಲಿಗೆ ಯನ್ನು ಆನಿಮೇಟ್ ಮಾಡೋಣ.

ಅದನ್ನು ಮಾಡಲು, ಮೊದಲಿಗೆ Layers panel ಹೋಗಿ, ಮತ್ತು Frog group layer ಅನ್ನು ತೆರೆಯಿರಿ.

07:44 ಬಾಯಿ ಮತ್ತು ನಾಲಿಗೆ ಯಿರುವ ಲೇಯರ್ ಗಳನ್ನು ಆಯ್ಕೆ ಮಾಡಿಕೊಂಡು, ಅವುಗಳನ್ನು ಒಟ್ಟಿಗೆ ಗ್ರುಪ್ ಮಾಡಿ.
07:50 ಈ ಗ್ರುಪ್ ಅನ್ನು Mouth and tongue ಎಂದು ಹೆಸರಿಸೋಣ.
07:55 Layers panel ಗೆ ಹೋಗಿ ಕಪ್ಪೆಯ ಬಾಯಿಯನ್ನು ಆಯ್ಕೆ ಮಾಡಿಕೊಳ್ಳಿ.
08:00 ನಂತರ Time track panel ಗೆ ಹೋಗಿ, ಕರ್ಸರ್ ಅನ್ನು 23 ನೆಯ ಫ್ರೇಮ್ ನಲ್ಲಿಡಿ.

ಇಲ್ಲಿ ತೋರಿಸಿರುವಂತೆ, ಲೇಯರ್ ನ nodes ಗಳನ್ನು ಸರಿಸಿ.

08:11 Layers panel ಗೆ ಹೋಗಿ ಮತ್ತು ಈ ಬಾರಿ ಕಪ್ಪೆಯ ನಾಲಿಗೆಯನ್ನು ಆಯ್ಕೆ ಮಾಡಿಕೊಳ್ಳಿ.
08:18 ನಂತರ Time track panel ಗೆ ಹೋಗಿ, ಕರ್ಸರ್ ಅನ್ನು 23 ನೆಯ ಫ್ರೇಮ್ ನಲ್ಲಿಡಿ.
08:25 Parameters panel ಗೆ ಹೋಗಿ ಮತ್ತು vertices group ಗ್ರುಪ್ ನ ತ್ರಿಕೋನ ಐಕಾನ್ ಅನ್ನು ಕ್ಲಿಕ್ ಮಾಡಿ ವರ್ಟೈಸಿಸ್ ಗ್ರುಪ್ ಅನ್ನು ತೆರೆಯಿರಿ.
08:32 ಮೊದಲನೆಯ ವರ್ಟೆಕ್ಸ್ ಅನ್ನು ಆಯ್ಕೆಮಾಡಿಕೊಂಡು, ಅದರ ಮೇಲೆ ರೈಟ್ ಕ್ಲಿಕ್ ಮಾಡಿ.
08:37 Mark active point as off ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಇದೇ ರೀತಿಯಾಗಿ, ಅದೇ ಕೀ ಫ್ರೇಮ್ ನಲ್ಲಿ, 2 ರಿಂದ12 ನೆಯ ವರ್ಟೆಕ್ಸ್ ವರೆಗೂ ಮಾಡಿ.
08:52 Layers panel ಗೆ ಹೋಗಿ ಮತ್ತು Water plant ಪಿ.ಎನ್.ಜಿ ಲೇಯರ್ ನ ಮೇಲೆ ರೈಟ್ ಕ್ಲಿಕ್ ಮಾಡಿ.
08:58 New layer ಗೆ ಹೋಗಿ, ನಂತರ Distortion ಗೆ ಹೋಗಿ, Twirl ನ ಮೇಲೆ ಕ್ಲಿಕ್ ಮಾಡಿ.
09:04 Time track panel ಗೆ ಹೋಗಿ ಮತ್ತು ಕರ್ಸರ್ ಅನ್ನು 13 ನೆಯ ಫ್ರೇಮ್ ನ ಮೇಲಿಡಿ.
09:09 Parameters panel ಗೆ ಹೋಗಿ.

TwirlRotation ವ್ಯಾಲ್ಯುವನ್ನು 23 ಡಿಗ್ರೀಸ್ ಗೆ ಬದಲಿಸಿ.

09:15 ಈಗ 25 ನೆಯ ಫ್ರೇಮ್ ಗೆ ಹೋಗಿ. TwirlRotation ವ್ಯಾಲ್ಯುವನ್ನು -9 ಡಿಗ್ರೀಸ್ ಗೆ ಬದಲಿಸಿ.
09:23 ಇನ್ನೊಮ್ಮೆ ಫೈಲ್ ಅನ್ನು ಸೇವ್ ಮಾಡಿ.
09:27 ಈಗ ನಾವು ಆಕ್ಟೋಪಸ್ ಅನ್ನು ಆನಿಮೇಟ್ ಮಾಡೋಣ.

Octopus group layer ಅನ್ನುಆಯ್ಕೆ ಮಾಡಿ.

09:32 ಕ್ಯಾನ್ವಾಸ್ ಗೆ ಹೋಗಿ, Octopus ಅನ್ನು ಇಲ್ಲಿ ತೋರಿಸಿದಂತೆ keyframes 0, 75, 135 ಮತ್ತು 185 ಗಳಿಗೆ ಸರಿಸಿ.
09:46 Layers panel ಗೆ ಹೋಗಿ ಮತ್ತು Octopus png layer ಅನ್ನು ಆಯ್ಕೆ ಮಾಡಿ, ಅದರ ಮೇಲೆ ರೈಟ್ ಕ್ಲಿಕ್ ಮಾಡಿ.
09:53 ಈಗ New Layer ಗೆ ಹೋಗಿ, ನಂತರ Distortion ಗೆ ಹೋಗಿ ನಂತರ Stretch ನ ಮೇಲೆ ಕ್ಲಿಕ್ ಮಾಡಿ.
09:59 Time track panel ಗೆ ಹೋಗಿ ಮತ್ತು ಕರ್ಸರ್ ಅನ್ನು 138 ನೆಯ ಫ್ರೇಮ್ ನಲ್ಲಿಡಿ.

ಕ್ಯಾನ್ವಾಸ್ ಗೆ ಹಿಂದಿರುಗಿ.

10:06 ಆಕ್ಟೋಪಸ್ ಇಮೇಜ್ ನ ಮೇಲೆ, stretch ಎಫೆಕ್ಟ್ ಅನ್ನು ಪಡೆಯಲು, ಕಿತ್ತಳೆ ಬಣ್ಣದ ಚುಕ್ಕಿಯನ್ನು ಸರಿಸಿ.
10:12 ಇದೇ ರೀತಿಯಾಗಿ, ಕರ್ಸರ್ ಅನ್ನು 145, 150, 160, 168, 172 ನಲ್ಲಿಡಿ, ಮತ್ತು ಇಲ್ಲಿ ತೋರಿಸಿರುವಂತೆ, stretch ನ ಕಿತ್ತಳೆ ಚುಕ್ಕಿಯನ್ನು ಸರಿಸಿ.
10:30 ಇದಾದ ಮೇಲೆ, Bubble layer ಆಯ್ಕೆ ಮಾಡಿಕೊಂದು, ಅದರ ಮೇಲೆ ರೈಟ್ ಕ್ಲಿಕ್ ಮಾಡಿ, ನಂತರ New Layer ಗೆ ಹೋಗಿ , Transform ಗೆ ಹೋಗಿ,

Translate ಅನ್ನು ಕ್ಲಿಕ್ ಮಾಡಿ.

10:41 Parameters panel ಗೆ ಹೋಗಿ, Origin ನ ಮೇಲೆ ರೈಟ್ ಕ್ಲಿಕ್ ಮಾಡಿ.

ನಂತರ Convert ಗೆ ಹೋಗಿ ಮತ್ತು Random ನ ಮೇಲೆ ಕ್ಲಿಕ್ ಮಾಡಿ.

10:49 Layers panel ಗೆ ಹೋಗಿ, Bubble layer ಗೆ ಹೋಗಿ ಮತ್ತು Duplicate layer ಐಕಾನ್ ಅನ್ನು ಕ್ಲಿಕ್ ಮಾಡಿ.
10:55 ಇದನ್ನು ಇನ್ನೂ 3 ಬಾರಿ ಪುನರಾವರ್ತಿಸಿ ಮತ್ತು ಗುಳ್ಳೆಗಳನ್ನು (ಬಬಲ್ಸ್) ಇಲ್ಲಿ ತೋರಿಸಿರುವಂತೆ ಜೋಡಿಸಿ.
11:05 Layers panel ಗೆ ಹೋಗಿ, ಮೇಲಿರುವ ಲೇಯರ್ ಅನ್ನು ಆಯ್ಕೆಮಾಡಿ,

ಅದರ ಮೇಲೆ ರೈಟ್ ಕ್ಲಿಕ್ ಮಾಡಿ, New layer ಗೆ ಹೋಗಿ, ನಂತರ Gradient ಗೆ ಹೋಗಿ, Noise Gradient ನ ಮೇಲೆ ಕ್ಲಿಕ್ ಮಾಡಿ.

11:19 Parameters panel ಹೋಗಿ, Amount ಅನ್ನು 0.5 ಗೆ ಬದಲಿಸಿ.
11:23 ಇಲ್ಲಿ ತೋರಿಸಿರುವಂತೆ, Blend method ಅನ್ನು Multiply ಗೆ ಬದಲಿಸಿ.
 Size  ಅನ್ನು  300 pixel  ಎಂದು ಬದಲಿಸಿ.
11:34 Time track panel ಗೆ ಹೋಗಿ, ಕರ್ಸರ್ ಅನ್ನು 200 ನೆಯ ಫ್ರೇಮ್ ನಲ್ಲಿಡಿ.
11:39 Parameters panel ಗೆ ಹೋಗಿ, Random Noise Seeds ನ ವ್ಯಾಲ್ಯುವನ್ನು ಹೆಚ್ಚಿಸಿ.
11:46 ಕೊನೆಯದಾಗಿ, ಫೈಲ್ ಅನ್ನು ಸೇವ್ ಮಾಡಿ.
11:49 File ಗೆ ಹೋಗಿ, Render ಅನ್ನು ಕ್ಲಿಕ್ ಮಾಡಿ. Render setting window ಗೆ ಹೋಗಿ.
11:56 extension ಅನ್ನು avi ಗೆ ಬದಲಿಸಿ. Target ಡ್ರಾಪ್ ಡೌನ್ ಮೆನುಗೆ ಹೋಗಿ ಮತ್ತು ffmpeg ಯನ್ನು ಆಯ್ಕೆ ಮಾಡಿಕೊಳ್ಳಿ.
12:05 End time ನ ಮೇಲೆ ಕ್ಲಿಕ್ ಮಾಡಿ ಮತ್ತು ಅದನ್ನು 200 ಎಂದು ಬದಲಿಸಿ.

Render ಅನ್ನು ಕ್ಲಿಕ್ ಮಾಡಿ.

12:16 ಆನಿಮೇಷನ್ ಅನ್ನು ನೋಡಲು, Desktop ಗೆ ಹೋಗಿ, Underwater-animation. avi ಅನ್ನು ಆಯ್ಕೆ ಮಾಡಿ. ಅದರ ಮೇಲೆ ಡಬಲ್ ಕ್ಲಿಕ್ ಮಾಡಿ.
12:26 ಇದರೊಂದಿಗೆ ನಾವು ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
12:30 ಈಗ ಸಂಕ್ಷಿಪ್ತವಾಗಿ, ನಾವು ಈ ಟ್ಯುಟೋರಿಯಲ್ ನಲ್ಲಿ Synfig ನಲ್ಲಿ,Underwater animation ಅನ್ನು ಕಲಿತಿದ್ದೇವೆ.
12:38 png ಮತ್ತು svg ಗಳನ್ನು ಇಂಪೋರ್ಟ್ ಮಾಡಲು ಕಲಿತಿದ್ದೇವೆ.
12:42 Distortions (ಡಿಸ್ಟೊರ್ಷನ್ಸ್) ಆಯ್ಕೆಗಳಾದ twirl, stretch ಗಳನ್ನು ಬಳಸಿ ಆನಿಮೇಟ್ ಮಾಡುವುದನ್ನು ಕಲಿತಿದ್ದೇವೆ.

Noise Gradient ಅನ್ನು ಸೇರಿಸುವುದನ್ನು,

12:49 random animation ಮಾಡಲು, Random ಆಯ್ಕೆಯನ್ನು ಬಳಸುವುದನ್ನು ಕಲಿತಿದ್ದೇವೆ.
12:53 ಇಲ್ಲಿ ನಿಮಗಾಗಿ ಒಂದು ಅಸೈನ್ ಮೆಂಟ್ ಇದೆ. Code files ಲಿಂಕ್ ನಲ್ಲಿ ಕೊಟ್ಟಿರುವ simple design shape ಫೈಲ್ ಅನ್ನು ಲೊಕೇಟ್ ಮಾಡಿ, ಈ ಫೈಲ್ ಅನ್ನು ಇಂಪೋರ್ಟ್ ಮಾಡಿ. ಟ್ವಿರ್ಲ್ ಎಫೆಕ್ಟ್ ಅನ್ನು ಬಳಸಿ ಆನಿಮೇಟ್ ಮಾಡಿ.
13:05 ನಿಮ್ಮ ಪೂರ್ಣಗೊಂಡ ಅಸೈನ್ ಮೆಂಟ್ ಈ ರೀತಿಯಾಗಿ ಕಾಣಬೇಕು.
13:09 ಈ ವಿಡಿಯೋ Spoken Tutorial ಪ್ರಾಜೆಕ್ಟ್ ನ ಕುರಿತು ಸಂಕ್ಷಿಪ್ತವಾಗಿ ತಿಳಿಸಿಕೊಡುತ್ತದೆ. ದಯವಿಟ್ಟು ಅದನ್ನು ನೋಡಿ.
13:14 ಸ್ಪೋಕನ್ ಟ್ಯುಟೋರಿಯಲ್ಸ್ ಗಳು ಕಾರ್ಯಶಾಲೆಗಳನ್ನು ನಡೆಸಿ, ಪ್ರಮಾಣಪತ್ರವನ್ನು ಕೊಡುತ್ತದೆ.

ನಮ್ಮನ್ನು ಸಂಪರ್ಕಿಸಿ.

13:21 ದಯವಿಟ್ಟು ಸಮಯವನ್ನೊಳಗೊಂಡ ನಿಮ್ಮ ಪ್ರಶ್ನೆಗಳನ್ನುಈ ಫೋರಮ್ ನಲ್ಲಿ ಪೋಸ್ಟ್ ಮಾಡಿ.
13:24 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, NMEICT, MHRD, ಭಾರತ ಸರ್ಕಾರ – ಇವರಿಂದ ಅನುದಾನವನ್ನು ಪಡೆದಿರುತ್ತದೆ.
13:30 ಅನುವಾದ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

NaveenBhat