Synfig/C3/Underwater-animation/Kannada
|
|
00:01 | Synfig ಅನ್ನು ಬಳಸಿ, “Underwater- animation” ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:05 | ಈ ಟ್ಯುಟೋರಿಯಲ್ ನಲ್ಲಿ ನಾವು Synfig ನಲ್ಲಿ ಇಮೇಜ್ ಗಳನ್ನು ಆನಿಮೇಟ್ ಮಾಡುವುದು ಹೇಗೆ ಎಂದು ಪರಿಚಯಿಸಿಕೊಳ್ಳುತ್ತೇವೆ. |
00:12 | ನಾವು png ಮತ್ತು svg ಗಳನ್ನು ಇಂಪೋರ್ಟ್ ಮಾಡುವುದನ್ನು ಕಲಿಯುವೆವು. |
00:16 | distortion (ಡಿಸ್ಟೋರ್ಷನ್ )ಅನ್ನು ಬಳಸಿ, ಇಮೇಜ್ ಗಳನ್ನು ಆನಿಮೇಟ್ ಮಾಡುವುದನ್ನು,
Noise Gradient ಅನ್ನು ಸೇರಿಸುವುದು, |
00:22 | random animation ಗೆ Random ಆಯ್ಕೆಯನ್ನು ಬಳಸುವುದನ್ನು ಕಲಿಯುವೆವು. |
00:26 | ಇವುಗಳನ್ನೆಲ್ಲ ಬಳಸಿ, underwater animation ಅನ್ನು ರಚಿಸುವುದನ್ನು ಕಲಿಯುವೆವು. |
00:32 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು,
Ubuntu Linux 14.04 ಒ.ಎಸ್ ಮತ್ತು Synfig studio ದ 1.0.2 ಆವೃತ್ತಿಯನ್ನು ಬಳಸುವೆನು. |
00:43 | ನಾವು ಈಗ Synfig interface ನಲ್ಲಿದ್ದೇವೆ. |
00:46 | ನಾನು ನನ್ನ Synfig ಫೈಲ್ ಅನ್ನು Underwater-animation ಎಂದು ಸೇವ್ ಮಾಡಿರುವೆನು. ದಯವಿಟ್ಟು ನೀವೂ ಇದೇ ರೀತಿಯಾಗಿ ಮಾಡಿ. |
00:54 | ಈಗ ನಮ್ಮ ಅಂಡರ್ ವಾಟರ್ ಆನಿಮೇಷನ್ ಅನ್ನು ರಚಿಸಲು ಆರಂಭಿಸೋಣ. |
00:59 | ಅಂಡರ್ ವಾಟರ್ ಆನಿಮೇಷನ್ ಗೆ ನಮಗೆ ಬ್ಯಾಕ್ ಗ್ರೌಂಡ್, ಸ್ವಲ್ಪ ಗುಳ್ಳೆಗಳು ಮತ್ತು ಜಲಸಸ್ಯಗಳು ಬೇಕು. |
01:06 | ಮತ್ತು ನಮಗೆ ಕೆಲವು ಜಲಚರಗಳಾದ ಮೀನು, ಕಪ್ಪೆ, ಏಡಿ ಮುಂತಾದವೂ ಬೇಕು. |
01:13 | ಈ ಆನಿಮೇಷನ್ ಅನ್ನು ರಚಿಸಲು, ನಾನು ಈಗಾಗಲೇ ರಚಿಸಿರುವ ಇಮೇಜ್ ಗಳನ್ನು ಬಳಸುವೆನು. |
01:19 | ಅಭ್ಯಾಸ ಮಾಡಲು, ನೀವು ಈ ಟ್ಯುಟೋರಿಯಲ್ ನ Code Files ಲಿಂಕ್ ನಲ್ಲಿ ಕೊಟ್ಟಿರುವ ಇಮೇಜ್ ಗಳನ್ನು ಬಳಸಬಹುದು. |
01:26 | Background, octopus, water plant, Bubble, Fish ಗಳು png ಇಮೇಜ್ ಗಳಾಗಿವೆ, |
01:32 | Frog ಮತ್ತು crab ಗಳು svg ಇಮೇಜ್ ಗಳಾಗಿವೆ. |
01:36 | ಈಗ ನಮ್ಮ ಅಂಡರ್ ವಾಟರ್ ಆನಿಮೇಷನ್ ಗೆ png ಇಮೇಜ್ ಗಳನ್ನು ಒಂದಾದ ಮೇಲೆ ಒಂದರಂತೆ ಇಂಪೋರ್ಟ್ ಮಾಡಿಕೊಳ್ಳಿ. |
01:43 | ಅದಕ್ಕಾಗಿ, File ಗೆ ಹೋಗಿ, Import ಅನ್ನು ಕ್ಲಿಕ್ ಮಾಡಿ. |
01:47 | Desktop ಅನ್ನು ಕ್ಲಿಕ್ ಮಾಡಿ ಮತ್ತು Underwater animation ನ ಮೇಲೆ ಡಬಲ್ ಕ್ಲಿಕ್ ಮಾಡಿ.
ಮತ್ತು background.png ಆಯ್ಕೆ ಮಾಡಿ. |
01:54 | Import ಅನ್ನು ಕ್ಲಿಕ್ ಮಾಡಿ. ನಾವು ಇಮೇಜ್ ಗಳನ್ನು canvas ನ ಮೇಲೆ ನೋಡಬಹುದು. |
02:00 | ಇದೇ ರೀತಿಯಲ್ಲಿ Water plant, Fish-1, Fish-2, Octopus, Frog, Crab, Bubble ಗಳನ್ನು ಇಲ್ಲಿ ತೋರಿಸಿರುವಂತೆ ಇಂಪೋರ್ಟ್ ಮಾಡಿ. |
02:10 | ನೀವು Layers panel ನಲ್ಲಿ ಈ ರೀತಿಯಾಗಿ ಪಟ್ಟಿಯನ್ನು ನೋಡಬಹುದು. |
02:14 | Plant, Fish-1 ಮುಂತಾದ ಇಮೇಜ್ ಗಳ ಗುಂಪನ್ನು ಬೇರೆಯಾಗಿ ರಚಿಸಲು, ಇಂಪೋರ್ಟ್ ಮಾಡಿದ ಲೇಯರ್ ಗಳನ್ನು ಕ್ರಮವಾಗಿ ಆಯ್ಕೆ ಮಾಡಿಕೊಳ್ಳಿ. |
02:24 | ನಂತರ Layer ನ ಮೇಲೆ ರೈಟ್ ಕ್ಲಿಕ್ ಮಾಡಿ, ನಂತರ Group layer ಅನ್ನು ಆಯ್ಕೆ ಮಾಡಿ. |
02:30 | ಈಗ ಈ group layers ಗಳನ್ನು ಇಲ್ಲಿ ತೋರಿಸಿರುವಂತೆ ರಿನೇಮ್ ಮಾಡಿ. |
02:37 | Canvas ಗೆ ಹಿಂದಿರುಗಿ.
ಎಲ್ಲಾ ಇಮೇಜ್ ಗಳನ್ನು ಅಳತೆಯನ್ನು ಹೊಂದಿಸಿ, ನೀರೊಳಗಿನ ದೃಶ್ಯದಂತೆ, ಇಲ್ಲಿ ತೋರಿಸಿರುವ ರೀತಿಯಲ್ಲಿ ಜೋಡಿಸಿ. |
02:46 | ಕೆಲವೊಮ್ಮೆ svg ಫೈಲ್ ಗಳನ್ನು synfig ನಲ್ಲಿ ಇಂಪೋರ್ಟ್ ಮಾಡುವಾಗ, ಎರರ್ ಗಳನ್ನು ತೋರಿಸಬಹುದು. ಇಲ್ಲಿ ಕಪ್ಪೆಯ ಕಣ್ಣುಗಳು ತಪ್ಪಿಹೋಗಿರುವುದನ್ನು ನೀವು ನೋಡಬಹುದು, ನಾನು ಅದನ್ನು ರಚಿಸುವೆನು. |
03:01 | ಈಗ Time track panel ಗೆ ಹೋಗೋಣ.
Time cursor ಅನ್ನು start frame ನ ಮೇಲೆ ಇಡಿ. |
03:07 | Turn on animate editing mode icon ಅನ್ನು ಕ್ಲಿಕ್ ಮಾಡಿ. |
03:10 | Layers panel ಗೆ ಹೋಗಿ, Fish-1 group layer ಅನ್ನು ವಿಸ್ತರಿಸಲು, ತ್ರಿಕೋನದ ಮೇಲೆ ಕ್ಲಿಕ್ ಮಾಡಿ. |
03:16 | Fish-1 layer. png ನ ಮೇಲೆ ರೈಟ್ ಕ್ಲಿಕ್ ಮಾಡಿ.
New layer ಗೆ ಹೋಗಿ, Distortion ಆಯ್ಕೆ ಮಾಡಿ ಮತ್ತು Twirl (ಟ್ವಿರ್ಲ್) ಅನ್ನು ಕ್ಲಿಕ್ ಮಾಡಿ. |
03:26 | ಈಗ ಮೀನಿನ ಬಾಲದ ಭಾಗವನ್ನು ಆನಿಮೇಟ್ ಮಾಡೋಣ.
canvas ಗೆ ಹೋಗಿ. ಇಲ್ಲಿ ತೋರಿಸಿರುವಂತೆ, Twirl effect (ಟ್ವಿರ್ಲ್ ಎಫೆಕ್ಟ್)ಅನ್ನು ಇಡಿ. |
03:34 | Twirl ಅನ್ನು ಹೊಂದಿಸಿ. |
03:36 | ಈಗ ಕರ್ಸರ್ ಅನ್ನು 10 ನೆಯ ಫ್ರೇಮ್ ಗೆ ಸರಿಸಿ. canvas ಗೆ ಹಿಂದಿರುಗಿ. |
03:44 | Twirl ಎಫೆಕ್ಟ್ ಅನ್ನು ಮಾಡಲು, Twirl ಹ್ಯಾಂಡಲ್ ಗಳನ್ನು ಅಂದರೆ ನೀಲಿ ಚುಕ್ಕಿಯನ್ನು ಇಲ್ಲಿ ತೋರಿಸಿರುವಂತೆ, ಸರಿಸಿ. |
03:52 | ನಾವು Rotation ವ್ಯಾಲ್ಯುವು -50.60 ಡಿಗ್ರಿ ಎಂದಿರುವದನ್ನು ನೋಡೋಣ. |
03:56 | ಈಗ 18ನೆಯ ಮತ್ತು 24 ನೆಯ ಫ್ರೇಮ್ ಗಳಿಗೆ ಒಂದಾದ ಮೇಲೆ ಒಂದಕ್ಕೆ cursor ಅನ್ನು ಸರಿಸಿ, ಮತ್ತು ಈ ಹಂತಗಳನ್ನು ಪುನರಾವರ್ತಿಸಿ. |
04:03 | amount of rotations ಅನ್ನು ಕ್ರಮವಾಗಿ, 32 ಡಿಗ್ರಿಸ್ ಮತ್ತು -5 ಡಿಗ್ರಿಸ್ ಎಂದು ಬದಲಿಸಿ. |
04:10 | ಮೀನಿನ ಮೇಲಿನ ಮತ್ತು ಕೆಳಗಿನ ರೆಕ್ಕೆಗಳನ್ನು ಆನಿಮೇಟ್ ಮಾಡಲು, ಇದೇ ರೀತಿಯಾಗಿ ನಾನು ಎರಡು ಸಲ twirl ಎಫೆಕ್ಟ್ ಗಳನ್ನು ಕೊಡುವೆನು. |
04:24 | ಕೊನೆಯವರೆಗಿನ ಪುನರಾವರ್ತಿತ ಆನಿಮೇಷನ್ ಗಾಗಿ, ನಾವು ಒಂದು Time Loop ಅನ್ನು ಕೊಡಬೇಕು. |
04:29 | ಇದಕ್ಕಾಗಿ, Fish group ಲೇಯರ್ ನ ಮೇಲಿನ ಲೇಯರ್ ಅನ್ನು ಡಬಲ್ ಕ್ಲಿಕ್ ಮಾಡಿ.
ಈಗ New layer ಗೆ ಹೋಗಿ, ನಂತರ Other ಗೆ ಹೋಗಿ, Time Loop ಅನ್ನು ಕ್ಲಿಕ್ ಮಾಡಿ. |
04:40 | ಈಗ Layers panel ಗೆ ಹೋಗಿ, Fish layer ಅನ್ನು ಆಯ್ಕೆ ಮಾಡಿ. |
04:44 | Time track panel ಗೆ ಹೋಗಿ, ಕರ್ಸರ್ ಅನ್ನು ಸೊನ್ನೆಯ ಫ್ರೇಮ್ ನಲ್ಲಿಡಿ.
ಮೀನನ್ನು ಇಲ್ಲಿ ತೋರಿಸಿರುವಂತೆ ಸರಿಸಿ. |
04:53 | Time track panel ಗೆ ಹೋಗಿ ಮತ್ತು ಕರ್ಸರ್ ಅನ್ನು 100 ನೆಯ ಫ್ರೇಮ್ ನಲ್ಲಿಡಿ. ಮೀನನ್ನು ಇಲ್ಲಿ ತೋರಿಸಿರುವಂತೆ ಸರಿಸಿ. |
05:03 | ಇದೇ ರೀತಿಯಾಗಿ, Fish-2 ಮಾಡೋಣ. |
05:11 | ಮುಂದೆ ಹೋಗುವ ಮೊದಲು, ಫೈಲ್ ಅನ್ನು ಸೇವ್ ಮಾಡೋಣ. |
05:15 | ಈಗ ಏಡಿಯ ಪಾದಗಳನ್ನು ಆನಿಮೇಟ್ ಮಾಡೋಣ.
Layers panel ಗೆ ಹೋಗಿ. |
05:20 | Crab group ಲೇಯರ್ ಅನ್ನು ವಿಸ್ತರಿಸಲು, ತ್ರಿಕೋನದ ಮೇಲೆ ಕ್ಲಿಕ್ ಮಾಡಿ. |
05:24 | ಇಲ್ಲಿ ನಾವು ಏಡಿಯ ಬೇರೆ ಬೇರೆ ಭಾಗಗಳನ್ನು, ವಿಭಿನ್ನ ಗ್ರುಪ್ ಗಳಾಗಿ ವಿಂಗಡಿಸಬೇಕು. |
05:35 | ನಂತರ ಮೊದಲ ಭಾಗವಾದ Claw-1 ಅನ್ನು ಆಯ್ಕೆ ಮಾಡಿ, ಅದರ ಮೇಲೆ ರೈಟ್ ಕ್ಲಿಕ್ ಮಾಡಿ. |
05:40 | New layer ಗೆ ಹೋಗಿ, Transform ಗೆ ಹೋಗಿ, Rotate ಅನ್ನು ಕ್ಲಿಕ್ ಮಾಡಿ. |
05:47 | ಇಲ್ಲಿ ತೋರಿಸಿರುವಂತೆ, ರೊಟೇಟ್ ಹ್ಯಾಂಡಲ್ ಗಳನ್ನು ಹೊಂದಿಸಿ. |
05:50 | Time track panel ಗೆ ಹೋಗಿ, ಕರ್ಸರ್ ಅನ್ನು 10 ನೆಯ ಫ್ರೇಮ್ ನಲ್ಲಿಡಿ. |
05:55 | Parameters panel ಗೆ ಹೋಗಿ, Rotate amount ಅನ್ನು 18 degrees ಗೆ ಬದಲಿಸಿ. |
06:02 | ಮತ್ತೊಮ್ಮೆ Layers panel ಗೆ ಹೋಗಿ.
ಈಗ Claw-1 ನ ಎರಡನೆಯ ಭಾಗವನ್ನುಆಯ್ಕೆಮಾಡಿಕೊಂಡು, ಅದರ ಮೇಲೆ ರೈಟ್ ಕ್ಲಿಕ್ ಮಾಡಿ. |
06:09 | New layer ಗೆ ಹೋಗಿ, ನಂತರ Transform ಗೆ ಹೋಗಿ ಮತ್ತು Rotate ಅನ್ನು ಕ್ಲಿಕ್ ಮಾಡಿ.
rotate handle ಅನ್ನು ಇಲ್ಲಿ ತೋರಿಸಿರುವಂತೆ ಹೊಂದಿಸಿ. |
06:17 | Time track panel ಗೆ ಹೋಗಿ ಮತ್ತು ಕರ್ಸರ್ ಅನ್ನು 10ನೆಯ ಫ್ರೇಮ್ ನಲ್ಲಿಡಿ. |
06:22 | Parameters panel ಹೋಗಿ ಮತ್ತು rotate Amount ಅನ್ನು -7 ಡಿಗ್ರೀಸ್ ಎಂದು ಬದಲಿಸಿ. |
06:28 | ಇದೇ ರೀತಿಯಾಗಿ, Claw-2 ಅನ್ನು ಆನಿಮೇಟ್ ಮಾಡಿ. |
06:35 | ಮುಂದೆ, ನಾವು ಏಡಿಯ ಕಣ್ಣುಗಳನ್ನು ಆನಿಮೇಟ್ ಮಾಡುವೆವು. Layers panel ಗೆ ಹೋಗಿ, Eye group layer ಅನ್ನು ತೆರೆಯಿರಿ.
Ctrl ಕೀಯನ್ನು ಬಳಸಿ, ಎರಡೂ ಕಣ್ಣುಗುಡ್ಡೆಗಳ ಕಪ್ಪು ಭಾಗಗಳನ್ನು ಆಯ್ಕೆಮಾಡಿ. |
06:51 | Time track panel ಗೆ ಹೋಗಿ, ಕರ್ಸರ್ ಅನ್ನು 9 ನೆಯ ಫ್ರೇಮ್ ನಲ್ಲಿಡಿ.
ಈಗ ಕ್ಯಾನ್ವಾಸ್ ಗೆ ಹೋಗಿ, ಇಲ್ಲಿ ತೋರಿಸಿರುವಂತೆ ಎರಡೂ ಕಣ್ಣುಗುಡ್ಡೆಗಳ ಕಪ್ಪು ಭಾಗಗಳನ್ನು ಸರಿಸಿ. |
07:07 | ಮತ್ತೆ, Time track panel ಗೆ ಹೋಗಿ ಮತ್ತು ಕರ್ಸರ್ ಅನ್ನು 18 ನೆಯ ಫ್ರೇಮ್ ನಲ್ಲಿಡಿ. |
07:12 | ಈಗ ಕ್ಯಾನ್ವಾಸ್ ಗೆ ಹೋಗಿ, ಎರಡೂ ಕಣ್ಣುಗುಡ್ಡೆಗಳ ಕಪ್ಪು ಭಾಗಗಳನ್ನು ಇಲ್ಲಿ ತೋರಿಸಿರುವಂತೆ ಸರಿಸಿ.
ಕೊನೆಯವರೆಗೂ ಪುನರಾವರ್ತಿತ ಆನಿಮೇಷನ್ ಗಾಗಿ, Time loop ಅನ್ನು ಹಾಕಿರಿ. |
07:26 | ಮುಂದೆ ಹೋಗುವ ಮೊದಲು, ಇನ್ನೊಮ್ಮೆ ನಮ್ಮ ಫೈಲ್ ಅನ್ನು ಸೇವ್ ಮಾಡೋಣ. |
07:32 | ನಂತರ ನಾವು ಕಪ್ಪೆಯ ಬಾಯಿ ಮತ್ತು ನಾಲಿಗೆ ಯನ್ನು ಆನಿಮೇಟ್ ಮಾಡೋಣ.
ಅದನ್ನು ಮಾಡಲು, ಮೊದಲಿಗೆ Layers panel ಹೋಗಿ, ಮತ್ತು Frog group layer ಅನ್ನು ತೆರೆಯಿರಿ. |
07:44 | ಬಾಯಿ ಮತ್ತು ನಾಲಿಗೆ ಯಿರುವ ಲೇಯರ್ ಗಳನ್ನು ಆಯ್ಕೆ ಮಾಡಿಕೊಂಡು, ಅವುಗಳನ್ನು ಒಟ್ಟಿಗೆ ಗ್ರುಪ್ ಮಾಡಿ. |
07:50 | ಈ ಗ್ರುಪ್ ಅನ್ನು Mouth and tongue ಎಂದು ಹೆಸರಿಸೋಣ. |
07:55 | Layers panel ಗೆ ಹೋಗಿ ಕಪ್ಪೆಯ ಬಾಯಿಯನ್ನು ಆಯ್ಕೆ ಮಾಡಿಕೊಳ್ಳಿ. |
08:00 | ನಂತರ Time track panel ಗೆ ಹೋಗಿ, ಕರ್ಸರ್ ಅನ್ನು 23 ನೆಯ ಫ್ರೇಮ್ ನಲ್ಲಿಡಿ.
ಇಲ್ಲಿ ತೋರಿಸಿರುವಂತೆ, ಲೇಯರ್ ನ nodes ಗಳನ್ನು ಸರಿಸಿ. |
08:11 | Layers panel ಗೆ ಹೋಗಿ ಮತ್ತು ಈ ಬಾರಿ ಕಪ್ಪೆಯ ನಾಲಿಗೆಯನ್ನು ಆಯ್ಕೆ ಮಾಡಿಕೊಳ್ಳಿ. |
08:18 | ನಂತರ Time track panel ಗೆ ಹೋಗಿ, ಕರ್ಸರ್ ಅನ್ನು 23 ನೆಯ ಫ್ರೇಮ್ ನಲ್ಲಿಡಿ. |
08:25 | Parameters panel ಗೆ ಹೋಗಿ ಮತ್ತು vertices group ಗ್ರುಪ್ ನ ತ್ರಿಕೋನ ಐಕಾನ್ ಅನ್ನು ಕ್ಲಿಕ್ ಮಾಡಿ ವರ್ಟೈಸಿಸ್ ಗ್ರುಪ್ ಅನ್ನು ತೆರೆಯಿರಿ. |
08:32 | ಮೊದಲನೆಯ ವರ್ಟೆಕ್ಸ್ ಅನ್ನು ಆಯ್ಕೆಮಾಡಿಕೊಂಡು, ಅದರ ಮೇಲೆ ರೈಟ್ ಕ್ಲಿಕ್ ಮಾಡಿ. |
08:37 | Mark active point as off ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಇದೇ ರೀತಿಯಾಗಿ, ಅದೇ ಕೀ ಫ್ರೇಮ್ ನಲ್ಲಿ, 2 ರಿಂದ12 ನೆಯ ವರ್ಟೆಕ್ಸ್ ವರೆಗೂ ಮಾಡಿ. |
08:52 | Layers panel ಗೆ ಹೋಗಿ ಮತ್ತು Water plant ಪಿ.ಎನ್.ಜಿ ಲೇಯರ್ ನ ಮೇಲೆ ರೈಟ್ ಕ್ಲಿಕ್ ಮಾಡಿ. |
08:58 | New layer ಗೆ ಹೋಗಿ, ನಂತರ Distortion ಗೆ ಹೋಗಿ, Twirl ನ ಮೇಲೆ ಕ್ಲಿಕ್ ಮಾಡಿ. |
09:04 | Time track panel ಗೆ ಹೋಗಿ ಮತ್ತು ಕರ್ಸರ್ ಅನ್ನು 13 ನೆಯ ಫ್ರೇಮ್ ನ ಮೇಲಿಡಿ. |
09:09 | Parameters panel ಗೆ ಹೋಗಿ.
Twirl ನ Rotation ವ್ಯಾಲ್ಯುವನ್ನು 23 ಡಿಗ್ರೀಸ್ ಗೆ ಬದಲಿಸಿ. |
09:15 | ಈಗ 25 ನೆಯ ಫ್ರೇಮ್ ಗೆ ಹೋಗಿ. Twirl ನ Rotation ವ್ಯಾಲ್ಯುವನ್ನು -9 ಡಿಗ್ರೀಸ್ ಗೆ ಬದಲಿಸಿ. |
09:23 | ಇನ್ನೊಮ್ಮೆ ಫೈಲ್ ಅನ್ನು ಸೇವ್ ಮಾಡಿ. |
09:27 | ಈಗ ನಾವು ಆಕ್ಟೋಪಸ್ ಅನ್ನು ಆನಿಮೇಟ್ ಮಾಡೋಣ.
Octopus group layer ಅನ್ನುಆಯ್ಕೆ ಮಾಡಿ. |
09:32 | ಕ್ಯಾನ್ವಾಸ್ ಗೆ ಹೋಗಿ, Octopus ಅನ್ನು ಇಲ್ಲಿ ತೋರಿಸಿದಂತೆ keyframes 0, 75, 135 ಮತ್ತು 185 ಗಳಿಗೆ ಸರಿಸಿ. |
09:46 | Layers panel ಗೆ ಹೋಗಿ ಮತ್ತು Octopus png layer ಅನ್ನು ಆಯ್ಕೆ ಮಾಡಿ, ಅದರ ಮೇಲೆ ರೈಟ್ ಕ್ಲಿಕ್ ಮಾಡಿ. |
09:53 | ಈಗ New Layer ಗೆ ಹೋಗಿ, ನಂತರ Distortion ಗೆ ಹೋಗಿ ನಂತರ Stretch ನ ಮೇಲೆ ಕ್ಲಿಕ್ ಮಾಡಿ. |
09:59 | Time track panel ಗೆ ಹೋಗಿ ಮತ್ತು ಕರ್ಸರ್ ಅನ್ನು 138 ನೆಯ ಫ್ರೇಮ್ ನಲ್ಲಿಡಿ.
ಕ್ಯಾನ್ವಾಸ್ ಗೆ ಹಿಂದಿರುಗಿ. |
10:06 | ಆಕ್ಟೋಪಸ್ ಇಮೇಜ್ ನ ಮೇಲೆ, stretch ಎಫೆಕ್ಟ್ ಅನ್ನು ಪಡೆಯಲು, ಕಿತ್ತಳೆ ಬಣ್ಣದ ಚುಕ್ಕಿಯನ್ನು ಸರಿಸಿ. |
10:12 | ಇದೇ ರೀತಿಯಾಗಿ, ಕರ್ಸರ್ ಅನ್ನು 145, 150, 160, 168, 172 ನಲ್ಲಿಡಿ, ಮತ್ತು ಇಲ್ಲಿ ತೋರಿಸಿರುವಂತೆ, stretch ನ ಕಿತ್ತಳೆ ಚುಕ್ಕಿಯನ್ನು ಸರಿಸಿ. |
10:30 | ಇದಾದ ಮೇಲೆ, Bubble layer ಆಯ್ಕೆ ಮಾಡಿಕೊಂದು, ಅದರ ಮೇಲೆ ರೈಟ್ ಕ್ಲಿಕ್ ಮಾಡಿ, ನಂತರ New Layer ಗೆ ಹೋಗಿ , Transform ಗೆ ಹೋಗಿ,
Translate ಅನ್ನು ಕ್ಲಿಕ್ ಮಾಡಿ. |
10:41 | Parameters panel ಗೆ ಹೋಗಿ, Origin ನ ಮೇಲೆ ರೈಟ್ ಕ್ಲಿಕ್ ಮಾಡಿ.
ನಂತರ Convert ಗೆ ಹೋಗಿ ಮತ್ತು Random ನ ಮೇಲೆ ಕ್ಲಿಕ್ ಮಾಡಿ. |
10:49 | Layers panel ಗೆ ಹೋಗಿ, Bubble layer ಗೆ ಹೋಗಿ ಮತ್ತು Duplicate layer ಐಕಾನ್ ಅನ್ನು ಕ್ಲಿಕ್ ಮಾಡಿ. |
10:55 | ಇದನ್ನು ಇನ್ನೂ 3 ಬಾರಿ ಪುನರಾವರ್ತಿಸಿ ಮತ್ತು ಗುಳ್ಳೆಗಳನ್ನು (ಬಬಲ್ಸ್) ಇಲ್ಲಿ ತೋರಿಸಿರುವಂತೆ ಜೋಡಿಸಿ. |
11:05 | Layers panel ಗೆ ಹೋಗಿ, ಮೇಲಿರುವ ಲೇಯರ್ ಅನ್ನು ಆಯ್ಕೆಮಾಡಿ,
ಅದರ ಮೇಲೆ ರೈಟ್ ಕ್ಲಿಕ್ ಮಾಡಿ, New layer ಗೆ ಹೋಗಿ, ನಂತರ Gradient ಗೆ ಹೋಗಿ, Noise Gradient ನ ಮೇಲೆ ಕ್ಲಿಕ್ ಮಾಡಿ. |
11:19 | Parameters panel ಹೋಗಿ, Amount ಅನ್ನು 0.5 ಗೆ ಬದಲಿಸಿ. |
11:23 | ಇಲ್ಲಿ ತೋರಿಸಿರುವಂತೆ, Blend method ಅನ್ನು Multiply ಗೆ ಬದಲಿಸಿ.
Size ಅನ್ನು 300 pixel ಎಂದು ಬದಲಿಸಿ. |
11:34 | Time track panel ಗೆ ಹೋಗಿ, ಕರ್ಸರ್ ಅನ್ನು 200 ನೆಯ ಫ್ರೇಮ್ ನಲ್ಲಿಡಿ. |
11:39 | Parameters panel ಗೆ ಹೋಗಿ, Random Noise Seeds ನ ವ್ಯಾಲ್ಯುವನ್ನು ಹೆಚ್ಚಿಸಿ. |
11:46 | ಕೊನೆಯದಾಗಿ, ಫೈಲ್ ಅನ್ನು ಸೇವ್ ಮಾಡಿ. |
11:49 | File ಗೆ ಹೋಗಿ, Render ಅನ್ನು ಕ್ಲಿಕ್ ಮಾಡಿ. Render setting window ಗೆ ಹೋಗಿ. |
11:56 | extension ಅನ್ನು avi ಗೆ ಬದಲಿಸಿ. Target ಡ್ರಾಪ್ ಡೌನ್ ಮೆನುಗೆ ಹೋಗಿ ಮತ್ತು ffmpeg ಯನ್ನು ಆಯ್ಕೆ ಮಾಡಿಕೊಳ್ಳಿ. |
12:05 | End time ನ ಮೇಲೆ ಕ್ಲಿಕ್ ಮಾಡಿ ಮತ್ತು ಅದನ್ನು 200 ಎಂದು ಬದಲಿಸಿ.
Render ಅನ್ನು ಕ್ಲಿಕ್ ಮಾಡಿ. |
12:16 | ಆನಿಮೇಷನ್ ಅನ್ನು ನೋಡಲು, Desktop ಗೆ ಹೋಗಿ, Underwater-animation. avi ಅನ್ನು ಆಯ್ಕೆ ಮಾಡಿ. ಅದರ ಮೇಲೆ ಡಬಲ್ ಕ್ಲಿಕ್ ಮಾಡಿ. |
12:26 | ಇದರೊಂದಿಗೆ ನಾವು ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. |
12:30 | ಈಗ ಸಂಕ್ಷಿಪ್ತವಾಗಿ, ನಾವು ಈ ಟ್ಯುಟೋರಿಯಲ್ ನಲ್ಲಿ Synfig ನಲ್ಲಿ,Underwater animation ಅನ್ನು ಕಲಿತಿದ್ದೇವೆ. |
12:38 | png ಮತ್ತು svg ಗಳನ್ನು ಇಂಪೋರ್ಟ್ ಮಾಡಲು ಕಲಿತಿದ್ದೇವೆ. |
12:42 | Distortions (ಡಿಸ್ಟೊರ್ಷನ್ಸ್) ಆಯ್ಕೆಗಳಾದ twirl, stretch ಗಳನ್ನು ಬಳಸಿ ಆನಿಮೇಟ್ ಮಾಡುವುದನ್ನು ಕಲಿತಿದ್ದೇವೆ.
Noise Gradient ಅನ್ನು ಸೇರಿಸುವುದನ್ನು, |
12:49 | random animation ಮಾಡಲು, Random ಆಯ್ಕೆಯನ್ನು ಬಳಸುವುದನ್ನು ಕಲಿತಿದ್ದೇವೆ. |
12:53 | ಇಲ್ಲಿ ನಿಮಗಾಗಿ ಒಂದು ಅಸೈನ್ ಮೆಂಟ್ ಇದೆ. Code files ಲಿಂಕ್ ನಲ್ಲಿ ಕೊಟ್ಟಿರುವ simple design shape ಫೈಲ್ ಅನ್ನು ಲೊಕೇಟ್ ಮಾಡಿ, ಈ ಫೈಲ್ ಅನ್ನು ಇಂಪೋರ್ಟ್ ಮಾಡಿ. ಟ್ವಿರ್ಲ್ ಎಫೆಕ್ಟ್ ಅನ್ನು ಬಳಸಿ ಆನಿಮೇಟ್ ಮಾಡಿ. |
13:05 | ನಿಮ್ಮ ಪೂರ್ಣಗೊಂಡ ಅಸೈನ್ ಮೆಂಟ್ ಈ ರೀತಿಯಾಗಿ ಕಾಣಬೇಕು. |
13:09 | ಈ ವಿಡಿಯೋ Spoken Tutorial ಪ್ರಾಜೆಕ್ಟ್ ನ ಕುರಿತು ಸಂಕ್ಷಿಪ್ತವಾಗಿ ತಿಳಿಸಿಕೊಡುತ್ತದೆ. ದಯವಿಟ್ಟು ಅದನ್ನು ನೋಡಿ. |
13:14 | ಸ್ಪೋಕನ್ ಟ್ಯುಟೋರಿಯಲ್ಸ್ ಗಳು ಕಾರ್ಯಶಾಲೆಗಳನ್ನು ನಡೆಸಿ, ಪ್ರಮಾಣಪತ್ರವನ್ನು ಕೊಡುತ್ತದೆ.
ನಮ್ಮನ್ನು ಸಂಪರ್ಕಿಸಿ. |
13:21 | ದಯವಿಟ್ಟು ಸಮಯವನ್ನೊಳಗೊಂಡ ನಿಮ್ಮ ಪ್ರಶ್ನೆಗಳನ್ನುಈ ಫೋರಮ್ ನಲ್ಲಿ ಪೋಸ್ಟ್ ಮಾಡಿ. |
13:24 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, NMEICT, MHRD, ಭಾರತ ಸರ್ಕಾರ – ಇವರಿಂದ ಅನುದಾನವನ್ನು ಪಡೆದಿರುತ್ತದೆ. |
13:30 | ಅನುವಾದ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ.
ಧನ್ಯವಾದಗಳು. |