Synfig/C2/Draw-a-Toy-train/Kannada
From Script | Spoken-Tutorial
Revision as of 14:08, 16 November 2020 by NaveenBhat (Talk | contribs)
Time | Narration |
00:01 | Synfig ಅನ್ನು ಬಳಸಿ, “Draw aToy train” ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು, |
00:09 | ಮೂಲ ಆಕೃತಿಗಳನ್ನು ಬರೆಯುವುದು, ಆಕೃತಿಗಳಿಗೆ ಬಣ್ಣ ಕೊಡುವುದು, ಒಬ್ಜೆಕ್ಟ್ ಗಳನ್ನು ಗ್ರುಪ್ ಮಾಡುವುದು ಮತ್ತು ನಕಲು (ಡುಪ್ಲಿಕೇಟ್) ಮಾಡುವುದು ಮತ್ತು |
00:14 | Guideline ಅನ್ನು ಬಳಸಿ ಆಕೃತಿಗಳನ್ನು ಜೋಡಿಸುವುದು – ಇವುಗಳ ಕುರಿತು ಕಲಿಯುವೆವು. |
00:17 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು: |
00:20 | Ubuntu Linux 14.04 ಒ.ಎಸ್, |
00:24 | Synfig version 1.0.2 – ಇವುಗಳನ್ನು ಬಳಸುತ್ತೇನೆ. |
00:27 | Synfig ಅನ್ನು ತೆರೆಯೋಣ. |
00:29 | ಮೊದಲಿಗೆ ನಾವು, ಟಾಯ್ ಟ್ರೇನ್ ನ ಕಂಪಾರ್ಟ್ಮೆಂಟ್ ಅನ್ನು ಚಿತ್ರಿಸೋಣ. |
00:33 | ಇದಕ್ಕಾಗಿ, Rectangle tool ಅನ್ನು ಆಯ್ಕೆ ಮಾಡಿ. |
00:36 | Tool options ನಲ್ಲಿ, Create a region layer ಆಯ್ಕೆಯಾಗಿದೆಯೇ ಪರೀಕ್ಷಿಸಿಕೊಳ್ಳಿ. |
00:42 | ಈಗ, canvas ನಲ್ಲಿ ಒಂದು ಆಯತವನ್ನು(ರೆಕ್ಟ್ಯಾಂಗಲ್) ಚಿತ್ರಿಸಿ. |
00:46 | layer ನ ಹೆಸರನ್ನು Part-1 ಎಂದು ಬದಲಿಸಿ. |
00:50 | Parameters panel ಗೆ ಹೋಗಿ ಮತ್ತು ಕಲರ್ ಅನ್ನು ಗ್ರೀನ್ ಎಂದು ಬದಲಿಸಿ. |
00:56 | ಈಗ Transform tool ನ ಮೇಲೆ ಕ್ಲಿಕ್ ಮಾಡಿ. |
00:58 | ಈಗ ಆಕೃತಿಯನ್ನು ಡಿ-ಸೆಲೆಕ್ಟ್ ಮಾಡಲು ಕ್ಯಾನ್ವಾಸ್ ನ ಹೊರಭಾಗದಲ್ಲಿ ಕ್ಲಿಕ್ ಮಾಡಿ. |
01:02 | ಕ್ಯಾನ್ವಾಸ್ ನಲ್ಲಿ ಯಾವುದೇ ಆಕೃತಿಯನ್ನು ಚಿತ್ರಿಸಿದ ನಂತರ ಇದನ್ನು ಮಾಡುವುದನ್ನು ನೆನಪಿಡಿ. |
01:07 | ನಮ್ಮ ಫೈಲ್ ಅನ್ನು save ಮಾಡೋಣ. |
01:09 | File ಗೆ ಹೋಗಿ, Save as ಅನ್ನು ಕ್ಲಿಕ್ ಮಾಡಿ. |
01:13 | ಫೈಲ್ ನೇಮ್ ಅನ್ನು Toy-Train-animation ಎಂದು ಬದಲಿಸಿ. |
01:18 | ಇದನ್ನು Desktop ನಲ್ಲಿ ಸೇವ್ ಮಾಡಿ. |
01:21 | ಈಗ ಮತ್ತೊಮ್ಮೆ Rectangle tool ಅನ್ನು ಆಯ್ಕೆ ಮಾಡಿ. |
01:26 | ಇಲ್ಲಿ ತೋರಿಸಿರುವಂತೆ, ಮೊದಲ ಆಯತದ ಮಧ್ಯದಲ್ಲಿ ಇನ್ನೊಂದು ಆಯತಾಕಾರವನ್ನು ಬರೆಯಿರಿ. |
01:32 | ಇದು ಟ್ರೇನ್ ನ ಕಿಟಕಿಯಾಗಿರುತ್ತದೆ. |
01:35 | ಈ ಲೇಯರ್ ಅನ್ನು Window ಎಂದು rename ಮಾಡೋಣ. |
01:41 | ನಂತರ, Polygon tool ಅನ್ನು ಕ್ಲಿಕ್ ಮಾಡಿ. |
01:43 | Tool options ನಲ್ಲಿ, Create a region layer ಆಯ್ಕೆಯನ್ನು ಆಯ್ಕೆ ಮಾಡಲಾಗಿದೆಯೇ ಪರೀಕ್ಷಿಸಿ. |
01:50 | ಇಲ್ಲಿ ತೋರಿಸಿರುವಂತೆ ಆಯತದ ಮೇಲೆ ಒಂದು ತ್ರಾಪಿಜ್ಯವನ್ನು ಚಿತ್ರಿಸಿ. |
01:54 | ತ್ರಾಪಿಜ್ಯವನ್ನು ಕ್ಲೋಸ್ ಮಾಡಲು, ಅದರ ಆರಂಭಿಕ ಬಿಂದುವಿನ ಮೇಲೆ ಕ್ಲಿಕ್ ಮಾಡಿ. |
01:59 | ಈ layer ಅನ್ನು Part-2 ಎಂದು ರಿನೇಮ್ ಮಾಡಿ. |
02:03 | ನಾನು ಕಲರ್ ಅನ್ನು ರೆಡ್(ಕೆಂಪು) ಆಗಿ ಬದಲಿಸುವೆನು. |
02:07 | ಈಗ, Transform tool ಅನ್ನು ಆಯ್ಕೆ ಮಾಡಿ. |
02:10 | Layers panel ಗೆ ಹೋಗಿ. |
02:12 | ಎಲ್ಲಾ ಲೇಯರ್ ಗಳನ್ನು ಆಯ್ಕೆ ಮಾಡಿಕೊಂಡು, ಅವುಗಳನ್ನು ಗ್ರುಪ್ ಮಾಡಿ. |
02:15 | ಗ್ರುಪ್ ಮಾಡಿರುವ ಲೇಯರ್ ಅನ್ನು Compartment-3 ಎಂದು ಹೆಸರಿಸಿ. |
02:20 | ಹ್ಯಾಂಡಲ್ ನ ಕಿತ್ತಳೆ ಬಣ್ಣದ ಚುಕ್ಕಿಯನ್ನು ಬಳಸಿ ಲೇಯರ್ ಅನ್ನು ರಿಸೈಝ್ ಮಾಡಿ. |
02:24 | ಹ್ಯಾಂಡಲ್ ನ ಹಸಿರು ಚುಕ್ಕಿಯನ್ನು ಬಳಸಿ, ಇದನ್ನು ಕ್ಯಾನ್ವಾಸ್ ನ ಬಲಭಾಗಕ್ಕೆ ಸರಿಸಿ. |
02:30 | Ctrl ಮತ್ತು S ಕೀಲಿಗಳನ್ನು ಒತ್ತಿ, ಫೈಲ್ ಅನ್ನು ಸೇವ್ ಮಾಡಿ. |
02:35 | ಈಗ ನಾವು ಟ್ರೇನ್ ನ ಚಕ್ರವನ್ನು ಚಿತ್ರಿಸೋಣ. |
02:38 | ಯಾವುದೇ ಆಕೃತಿಯನ್ನು ಚಿತ್ರಿಸಿದ ನಂತರ, ಕ್ಯಾನ್ವಾಸ್ ನ ಹೊರಗಡೆ ಕ್ಲಿಕ್ ಮಾಡಿ, ಆಕೃತಿಯನ್ನು ಡಿ-ಸೆಲೆಕ್ಟ್ ಮಾಡಲು ನೆನಪಿಡಿ. |
02:44 | Circle tool ಅನ್ನು ಆಯ್ಕೆ ಮಾಡಿಕೊಳ್ಳಿ. |
02:46 | Tool options ನಲ್ಲಿ, Create a region layer ಆಯ್ಕೆಯಾಗಿರಬೇಕು. |
02:50 | ಇಲ್ಲಿ ತೋರಿಸಿರುವಂತೆ ಒಂದು ವೃತ್ತವನ್ನು ಚಿತ್ರಿಸಿ ಮತ್ತು ಬಣ್ಣವನ್ನು ಕಡುನೀಲಿ ಬಣ್ಣಕ್ಕೆ ಬದಲಿಸಿ. |
02:56 | ಈಗ Star tool ಅನ್ನು ಆಯ್ಕೆ ಮಾಡಿ. |
02:59 | Tool options ನಲ್ಲಿ, Create a star layer ಆಯ್ಕೆಯಾಗಿರಬೇಕು. |
03:05 | ಕರ್ಸರ್ ಅನ್ನು ವೃತ್ತದ ಕೇಂದ್ರದಲ್ಲಿಟ್ಟು, ಸ್ಟಾರ್(ನಕ್ಷತ್ರ) ಅನ್ನು ಚಿತ್ರಿಸಿ. |
03:09 | ಈಗ Transform tool ಅನ್ನು ಆಯ್ಕೆ ಮಾಡಿ. |
03:12 | ಗಮನಿಸಿ ಇಲ್ಲಿ 1 handle ಮತ್ತು 2 ಚುಕ್ಕಿ(ಡಾಟ್ಸ್) ಗಳಿವೆ. |
03:16 | ಆಕೃತಿಯ ಸ್ಥಾನವನ್ನು ಬದಲಿಸಲು, ಹ್ಯಾಂಡಲ್ ನ ಹಸಿರು ಚುಕ್ಕಿಯನ್ನು ಕ್ಲಿಕ್ ಮಾಡಿ, ಎಳೆಯಿರಿ. |
03:22 | ಹ್ಯಾಂಡಲ್ ನಲ್ಲಿರುವ ನೀಲಿ ಚುಕ್ಕಿಯನ್ನು ರೊಟೇಷನ್ ಮಾಡಲು ಬಳಸಿ. |
03:26 | ಮಧ್ಯದ ಹಸಿರು ಚುಕ್ಕಿಯು, ಸ್ಟಾರ್ ಆಕೃತಿಯ ಹೊರಗಿನ ಅಂಚುಗಳನ್ನು ಹೊಂದಿ ಸಲು ಬಿಡುತ್ತದೆ. |
03:31 | ಕೊನೆಯ ಚುಕ್ಕಿಯನ್ನು ರಿಸೈಝ್ ಮಾಡಲು ಬಳಸಲಾಗುತ್ತದೆ. |
03:34 | star ಮತ್ತು circle ಲೇಯರ್ ಗಳೆರಡನ್ನೂ ಆಯ್ಕೆ ಮಾಡಿ. |
03:37 | ಅವುಗಳನ್ನು ಗ್ರುಪ್ ಮಾಡಿ ಮತ್ತು Wheel-1 ಎಂದು ರಿನೇಮ್ ಮಾಡಿ. |
03:41 | ಈ ಗ್ರುಪ್ ಲೇಯರ್ ಅನ್ನು ರಿಸೈಝ್ ಮಾಡಿ ಮತ್ತು ಇದನ್ನು ಕಂಪಾರ್ಟ್ಮೆಂಟ್ ನ ಕೆಳಗೆ ಇಡಿ. |
03:47 | ಈಗ Wheel-1 group layer ಅನ್ನು ಡುಪ್ಲಿಕೇಟ್ ಮಾಡಿ. |
03:50 | Wheel-2 ಎಂದು ರಿನೇಮ್ ಮಾಡಿ ಮತ್ತು ಕಂಪಾರ್ಟ್ಮೆಂಟ್ ನ ಇನ್ನೊಂದು ತುದಿಗೆ ಸರಿಸಿ. |
03:56 | ಈಗ ಎಲ್ಲಾ ಲೇಯರ್ ಗಳನ್ನು ಆಯ್ಕೆ ಮಾಡಿ. |
03:59 | ಅವುಗಳನ್ನು ಮತ್ತೆ ಗ್ರುಪ್ ಮಾಡಿ ಮತ್ತು Compartment-3 ಎಂದು ರಿನೇಮ್ ಮಾಡಿ. |
04:04 | ಈಗ, Duplicate ಐಕಾನ್ ನ ಮೇಲೆ ಎರಡು ಸಲ ಕ್ಲಿಕ್ ಮಾಡಿ. |
04:08 | ನಕಲು ಮಾಡಿದ ಗ್ರುಪ್ ಲೇಯರ್ ಗಳನ್ನು ಕ್ರಮವಾಗಿ Compartment-2 ಮತ್ತು Compartment-1 ಎಂದು ರಿನೇಮ್ ಮಾಡಿ. |
04:17 | Compartment-2 ಗ್ರುಪ್ ಲೇಯರ್ ಅನ್ನು ಆಯ್ಕೆ ಮಾಡಿ. |
04:20 | Shift key ಯನ್ನು ಬಳಸಿ ಮತ್ತು ಹ್ಯಾಂಡಲ್ ನ ಮಧ್ಯದ ಹಸಿರು ಚುಕ್ಕಿಯನ್ನು ಡ್ರ್ಯಾಗ್ ಮಾಡಿ. |
04:24 | ಅದೇ ರೀತಿಯಾಗಿ, Compartment-1 ಗ್ರುಪ್ ಲೇಯರ್ ಗೂ ಮಾಡಿ. |
04:30 | Ctrl ಮತ್ತು S ಕೀಲಿಗಳನ್ನು ಒತ್ತಿ, ಫೈಲ್ ಅನ್ನು ಸೇವ್ ಮಾಡಿ. |
04:34 | ಈಗ ಎಂಜಿನ್ ಅನ್ನು ಚಿತ್ರಿಸೋಣ. |
04:36 | Canvas ನ ಹೊರಗೆ ಕ್ಲಿಕ್ ಮಾಡಿ. |
04:39 | Circle tool ಅನ್ನು ಆಯ್ಕೆಮಾಡಿಕೊಂಡು, ಇಲ್ಲಿ ತೋರಿಸಿದಂತೆ ಒಂದು ವೃತ್ತವನ್ನು ರಚಿಸಿ. |
04:43 | ಲೇಯರ್ ಅನ್ನು, Engine-part-1 ಎಂದು ರಿನೇಮ್ ಮಾಡಿ. |
04:47 | ಬಣ್ಣವನ್ನು ಗುಲಾಬಿ (ಪಿಂಕ್) ಗೆ ಬದಲಿಸಿ. |
04:50 | ನಂತರ Rectangle tool ಅನ್ನು ಕ್ಲಿಕ್ ಮಾಡಿ ಮತ್ತು ವೃತ್ತವನ್ನು ಅರ್ಧ ಮುಚ್ಚುವಂತೆ, ಅದರ ಮೇಲೆ ಒಂದು ಆಯತವನ್ನು ಚಿತ್ರಿಸಿ. |
04:59 | ಲೇಯರ್ ಅನ್ನು Engine-part-2 ಎಂದು ಹೆಸರಿಸಿ, ಮತ್ತು ಬಣ್ಣವನ್ನು ಹಳದಿಗೆ ಬದಲಿಸಿ. |
05:06 | ಪ್ರಸ್ತುತ ಆಯದದ ಮೇಲೆ ಇನ್ನೊಂದು ಆಯತವನ್ನು ಚಿತ್ರಿಸಿ. |
05:10 | ಲೇಯರ್ ಅನ್ನು Engine-part-3 ಎಂದು ರಿನೇಮ್ ಮಾಡಿ ಮತ್ತು ಬಣ್ಣವನ್ನು ಹಸಿರು ಬಣ್ಣಕ್ಕೆ ಬದಲಿಸಿ. |
05:17 | ಅದೇ rectangle tool ಅನ್ನು ಬಳಸಿ, ಇಲ್ಲಿ ತೋರಿಸಿರುವಂತೆ ಕಿಟಕಿಯನ್ನು ಚಿತ್ರಿಸಿ. |
05:22 | ಲೇಯರ್ ಅನ್ನು Engine-window ಎಂದು ರಿನೇಮ್ ಮಾಡಿ. |
05:26 | ಎಂಜಿನ್ ನ ಎಲ್ಲಾ ಲೇಯರ್ ಗಳನ್ನು ಆಯ್ಕೆ ಮಾಡಿಕೊಂಡು ಅವುಗಳನ್ನು ಗ್ರುಪ್ ಮಾಡಿ. |
05:29 | ನಂತರ Engine ಎಂದು ರಿನೇಮ್ ಮಾಡಿ. |
05:32 | Ctrl ಮತ್ತು S ಕೀಲಿಗಳನ್ನು ಒತ್ತಿ, ಫೈಲ್ ಅನ್ನು Save ಮಾಡಿ. |
05:37 | ಯಾವುದಾದರು ಒಂದು ಕಂಪಾರ್ಟ್ಮೆಂಟ್ ನ ಡ್ರಾಪ್ ಡೌನ್ ಲಿಸ್ಟ್ ನ ಮೇಲೆ ಕ್ಲಿಕ್ ಮಾಡಿ. |
05:40 | Wheel-1 ಮತ್ತು Wheel-2 ಎರಡೂ ಗ್ರುಪ್ ಲೇಯರ್ ಗಳನ್ನು ಆಯ್ಕೆ ಮಾಡಿಕೊಂಡು, copy ಮಾಡಿ. |
05:45 | Engine group layer ನಲ್ಲಿ Paste ಮಾಡಿ. |
05:49 | Shift key ಯನ್ನು ಬಳಸಿ ಈ ಚಕ್ರಗಳನ್ನು ಎಂಜಿನ್ ನ ಕೆಳಭಾಗಕ್ಕೆ ಎಳೆದು ತನ್ನಿ. |
05:54 | ಈಗ ಮೇಲಿನ ರೂಲರ್ ನಿಂದ guideline ಗಳನ್ನು ಎಳೆದು, ಕಂಪಾರ್ಟ್ಮೆಂಟ್ ಗಳ ಕೆಳಗೆ ಇಡಿ. |
06:03 | ಈ guideline ಕಂಪಾರ್ಟ್ಮೆಂಟ್ ಗಳು ಮತ್ತು ಎಂಜಿನ್ ಅನ್ನು ಸರಳ ರೇಖೆಯಲ್ಲಿ ಇಡಲು ಸಹಾಯ ಮಾಡುತ್ತದೆ. |
06:10 | ನಂತರ Engine ಅನ್ನು ಸರಿಸಿ, Compartment-1 ರ ಮುಂದೆ ಅಲೈನ್ ಮಾಡಿ. |
06:16 | ನಂತರ ಎಲ್ಲ ಕಂಪಾರ್ಟ್ಮೆಂಟ್ ಗಳನ್ನು ಜೋಡಿಸಲು ಒಂದು ಆಯತವನ್ನು ಚಿತ್ರಿಸಿ. |
06:20 | ಆ ಲೇಯರ್ ಅನ್ನು Belt ಎಂದು ರಿನೇಮ್ ಮಾಡಿ ಮತ್ತು ಕಪ್ಪು ಬಣ್ಣವನ್ನು ಆಯ್ಕೆ ಮಾಡಿ. |
06:27 | Belt layer ಅನ್ನು Layers ಗಳ ಪಟ್ಟಿಯಲ್ಲಿ ಕೆಳಕ್ಕೆ ತನ್ನಿ. |
06:31 | ಕೊನೆಯದಾಗಿ, ಹಳಿಗಳನ್ನು ಚಿತ್ರಿಸೋಣ. |
06:33 | Rectangle tool ಅನ್ನು ಕ್ಲಿಕ್ ಮಾಡಿ. |
06:36 | ಇಲ್ಲಿ ತೋರಿಸಿರುವಂತೆ , ಚಕ್ರದ ಕೆಳಗೆ ಒಂದು ಆಯತವನ್ನು ಚಿತ್ರಿಸಿ. |
06:40 | ಲೇಯರ್ ನ ಹೆಸರನ್ನು Rail ಎಂದು ಬದಲಿಸಿ ಮತ್ತು ಕಪ್ಪು ಬಣ್ಣವನ್ನು ಆಯ್ಕೆ ಮಾಡಿ. |
06:47 | ಈಗ ಟ್ರೇನ್ ನ ಚಿತ್ರ ಸಂಪೂರ್ಣವಾಗಿದೆ. |
06:50 | ಕೊನೆಯದಾಗಿ ನಮ್ಮಫೈಲ್ ಅನ್ನು , Ctrl + S ಅನ್ನು ಒತ್ತಿ save ಸೇವ್ ಮಾಡೋಣ. |
06:56 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. |
07:00 | ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು, |
07:04 | ಮೂಲಭೂತ ಆಕೃತಿಗಳನ್ನು ಬರೆಯುವುದು, |
07:06 | ಆಕೃತಿಗಳಿಗೆ ಬಣ್ಣ ಕೊಡುವುದು, |
07:08 | ಒಬ್ಜೆಕ್ಟ್ ಗಳನ್ನು ಗ್ರುಪ್ ಮಾಡುವುದು ಮತ್ತು ನಕಲು (ಡುಪ್ಲಿಕೇಟ್) ಮಾಡುವುದು |
07:10 | ಮತ್ತು
Guideline ಅನ್ನು ಬಳಸಿ ಆಕೃತಿಗಳನ್ನು ಜೋಡಿಸುವುದು – ಇವುಗಳ ಕುರಿತು ಕಲಿತಿದ್ದೇವೆ. |
07:13 | ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ- |
07:14 | ಈ ಟ್ಯುಟೋರಿಯಲ್ ನಲ್ಲಿ ವಿವರಿಸಿರುವಂತೆ, Synfig ನಲ್ಲಿ ಒಂದು ಬಸ್ ಅನ್ನು ಚಿತ್ರಿಸಿ. |
07:20 | ನಿಮ್ಮ ಪೂರ್ಣಗೊಂಡ ಅಸೈನ್ ಮೆಂಟ್ ಈ ರೀತಿಯಾಗಿ ಕಾಣಬೇಕು. |
07:24 | ಈ ವಿಡಿಯೋ Spoken Tutorial ಪ್ರಾಜೆಕ್ಟ್ ನ ಕುರಿತು ಸಂಕ್ಷಿಪ್ತವಾಗಿ ತಿಳಿಸಿಕೊಡುತ್ತದೆ. |
07:28 | ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿ, ನೋಡಿ. |
07:30 | ಸ್ಪೋಕನ್ ಟ್ಯುಟೋರಿಯಲ್ಸ್ ಗಳು ಕಾರ್ಯಶಾಲೆಗಳನ್ನು ನಡೆಸಿ, ಪ್ರಮಾಣಪತ್ರವನ್ನು ಕೊಡುತ್ತದೆ. |
07:36 | ಹೆಚ್ಚಿನ ಮಾಹಿತಿಗಾಗಿ ನಮಗೆ ಬರೆಯಿರಿ. |
07:39 | ದಯವಿಟ್ಟು ಸಮಯವನ್ನೊಳಗೊಂಡ ನಿಮ್ಮ ಪ್ರಶ್ನೆಗಳನ್ನುಈ ಫೋರಮ್ ನಲ್ಲಿ ಪೋಸ್ಟ್ ಮಾಡಿ. |
07:43 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, NMEICT, MHRD, ಭಾರತ ಸರ್ಕಾರ – ಇವರಿಂದ ಅನುದಾನವನ್ನು ಪಡೆದಿರುತ್ತದೆ. |
07:48 | ಈ ಮಿಷನ್ ನ ಕುರಿತು ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿದೆ. |
07:53 | ಅನುವಾದ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ.
ಧನ್ಯವಾದಗಳು. |