Synfig/C2/Draw-a-Toy-train/Kannada

From Script | Spoken-Tutorial
Jump to: navigation, search
Time Narration
00:01 Synfig ಅನ್ನು ಬಳಸಿ, “Draw aToy train” ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು,
00:09 ಮೂಲ ಆಕೃತಿಗಳನ್ನು ಬರೆಯುವುದು, ಆಕೃತಿಗಳಿಗೆ ಬಣ್ಣ ಕೊಡುವುದು, ಒಬ್ಜೆಕ್ಟ್ ಗಳನ್ನು ಗ್ರುಪ್ ಮಾಡುವುದು ಮತ್ತು ನಕಲು (ಡುಪ್ಲಿಕೇಟ್) ಮಾಡುವುದು ಮತ್ತು
00:14 Guideline ಅನ್ನು ಬಳಸಿ ಆಕೃತಿಗಳನ್ನು ಜೋಡಿಸುವುದು – ಇವುಗಳ ಕುರಿತು ಕಲಿಯುವೆವು.
00:17 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
00:20 Ubuntu Linux 14.04 ಒ.ಎಸ್,
00:24 Synfig version 1.0.2 – ಇವುಗಳನ್ನು ಬಳಸುತ್ತೇನೆ.
00:27 Synfig ಅನ್ನು ತೆರೆಯೋಣ.
00:29 ಮೊದಲಿಗೆ ನಾವು, ಟಾಯ್ ಟ್ರೇನ್ ನ ಕಂಪಾರ್ಟ್ಮೆಂಟ್ ಅನ್ನು ಚಿತ್ರಿಸೋಣ.
00:33 ಇದಕ್ಕಾಗಿ, Rectangle tool ಅನ್ನು ಆಯ್ಕೆ ಮಾಡಿ.
00:36 Tool options ನಲ್ಲಿ, Create a region layer ಆಯ್ಕೆಯಾಗಿದೆಯೇ ಪರೀಕ್ಷಿಸಿಕೊಳ್ಳಿ.
00:42 ಈಗ, canvas ನಲ್ಲಿ ಒಂದು ಆಯತವನ್ನು(ರೆಕ್ಟ್ಯಾಂಗಲ್) ಚಿತ್ರಿಸಿ.
00:46 layer ನ ಹೆಸರನ್ನು Part-1 ಎಂದು ಬದಲಿಸಿ.
00:50 Parameters panel ಗೆ ಹೋಗಿ ಮತ್ತು ಕಲರ್ ಅನ್ನು ಗ್ರೀನ್ ಎಂದು ಬದಲಿಸಿ.
00:56 ಈಗ Transform tool ನ ಮೇಲೆ ಕ್ಲಿಕ್ ಮಾಡಿ.
00:58 ಈಗ ಆಕೃತಿಯನ್ನು ಡಿ-ಸೆಲೆಕ್ಟ್ ಮಾಡಲು ಕ್ಯಾನ್ವಾಸ್ ನ ಹೊರಭಾಗದಲ್ಲಿ ಕ್ಲಿಕ್ ಮಾಡಿ.
01:02 ಕ್ಯಾನ್ವಾಸ್ ನಲ್ಲಿ ಯಾವುದೇ ಆಕೃತಿಯನ್ನು ಚಿತ್ರಿಸಿದ ನಂತರ ಇದನ್ನು ಮಾಡುವುದನ್ನು ನೆನಪಿಡಿ.
01:07 ನಮ್ಮ ಫೈಲ್ ಅನ್ನು save ಮಾಡೋಣ.
01:09 File ಗೆ ಹೋಗಿ, Save as ಅನ್ನು ಕ್ಲಿಕ್ ಮಾಡಿ.
01:13 ಫೈಲ್ ನೇಮ್ ಅನ್ನು Toy-Train-animation ಎಂದು ಬದಲಿಸಿ.
01:18 ಇದನ್ನು Desktop ನಲ್ಲಿ ಸೇವ್ ಮಾಡಿ.
01:21 ಈಗ ಮತ್ತೊಮ್ಮೆ Rectangle tool ಅನ್ನು ಆಯ್ಕೆ ಮಾಡಿ.
01:26 ಇಲ್ಲಿ ತೋರಿಸಿರುವಂತೆ, ಮೊದಲ ಆಯತದ ಮಧ್ಯದಲ್ಲಿ ಇನ್ನೊಂದು ಆಯತಾಕಾರವನ್ನು ಬರೆಯಿರಿ.
01:32 ಇದು ಟ್ರೇನ್ ನ ಕಿಟಕಿಯಾಗಿರುತ್ತದೆ.
01:35 ಈ ಲೇಯರ್ ಅನ್ನು Window ಎಂದು rename ಮಾಡೋಣ.
01:41 ನಂತರ, Polygon tool ಅನ್ನು ಕ್ಲಿಕ್ ಮಾಡಿ.
01:43 Tool options ನಲ್ಲಿ, Create a region layer ಆಯ್ಕೆಯನ್ನು ಆಯ್ಕೆ ಮಾಡಲಾಗಿದೆಯೇ ಪರೀಕ್ಷಿಸಿ.
01:50 ಇಲ್ಲಿ ತೋರಿಸಿರುವಂತೆ ಆಯತದ ಮೇಲೆ ಒಂದು ತ್ರಾಪಿಜ್ಯವನ್ನು ಚಿತ್ರಿಸಿ.
01:54 ತ್ರಾಪಿಜ್ಯವನ್ನು ಕ್ಲೋಸ್ ಮಾಡಲು, ಅದರ ಆರಂಭಿಕ ಬಿಂದುವಿನ ಮೇಲೆ ಕ್ಲಿಕ್ ಮಾಡಿ.
01:59 layer ಅನ್ನು Part-2 ಎಂದು ರಿನೇಮ್ ಮಾಡಿ.
02:03 ನಾನು ಕಲರ್ ಅನ್ನು ರೆಡ್(ಕೆಂಪು) ಆಗಿ ಬದಲಿಸುವೆನು.
02:07 ಈಗ, Transform tool ಅನ್ನು ಆಯ್ಕೆ ಮಾಡಿ.
02:10 Layers panel ಗೆ ಹೋಗಿ.
02:12 ಎಲ್ಲಾ ಲೇಯರ್ ಗಳನ್ನು ಆಯ್ಕೆ ಮಾಡಿಕೊಂಡು, ಅವುಗಳನ್ನು ಗ್ರುಪ್ ಮಾಡಿ.
02:15 ಗ್ರುಪ್ ಮಾಡಿರುವ ಲೇಯರ್ ಅನ್ನು Compartment-3 ಎಂದು ಹೆಸರಿಸಿ.
02:20 ಹ್ಯಾಂಡಲ್ ನ ಕಿತ್ತಳೆ ಬಣ್ಣದ ಚುಕ್ಕಿಯನ್ನು ಬಳಸಿ ಲೇಯರ್ ಅನ್ನು ರಿಸೈಝ್ ಮಾಡಿ.
02:24 ಹ್ಯಾಂಡಲ್ ನ ಹಸಿರು ಚುಕ್ಕಿಯನ್ನು ಬಳಸಿ, ಇದನ್ನು ಕ್ಯಾನ್ವಾಸ್ ನ ಬಲಭಾಗಕ್ಕೆ ಸರಿಸಿ.
02:30 Ctrl ಮತ್ತು S ಕೀಲಿಗಳನ್ನು ಒತ್ತಿ, ಫೈಲ್ ಅನ್ನು ಸೇವ್ ಮಾಡಿ.
02:35 ಈಗ ನಾವು ಟ್ರೇನ್ ನ ಚಕ್ರವನ್ನು ಚಿತ್ರಿಸೋಣ.
02:38 ಯಾವುದೇ ಆಕೃತಿಯನ್ನು ಚಿತ್ರಿಸಿದ ನಂತರ, ಕ್ಯಾನ್ವಾಸ್ ನ ಹೊರಗಡೆ ಕ್ಲಿಕ್ ಮಾಡಿ, ಆಕೃತಿಯನ್ನು ಡಿ-ಸೆಲೆಕ್ಟ್ ಮಾಡಲು ನೆನಪಿಡಿ.
02:44 Circle tool ಅನ್ನು ಆಯ್ಕೆ ಮಾಡಿಕೊಳ್ಳಿ.
02:46 Tool options ನಲ್ಲಿ, Create a region layer ಆಯ್ಕೆಯಾಗಿರಬೇಕು.
02:50 ಇಲ್ಲಿ ತೋರಿಸಿರುವಂತೆ ಒಂದು ವೃತ್ತವನ್ನು ಚಿತ್ರಿಸಿ ಮತ್ತು ಬಣ್ಣವನ್ನು ಕಡುನೀಲಿ ಬಣ್ಣಕ್ಕೆ ಬದಲಿಸಿ.
02:56 ಈಗ Star tool ಅನ್ನು ಆಯ್ಕೆ ಮಾಡಿ.
02:59 Tool options ನಲ್ಲಿ, Create a star layer ಆಯ್ಕೆಯಾಗಿರಬೇಕು.
03:05 ಕರ್ಸರ್ ಅನ್ನು ವೃತ್ತದ ಕೇಂದ್ರದಲ್ಲಿಟ್ಟು, ಸ್ಟಾರ್(ನಕ್ಷತ್ರ) ಅನ್ನು ಚಿತ್ರಿಸಿ.
03:09 ಈಗ Transform tool ಅನ್ನು ಆಯ್ಕೆ ಮಾಡಿ.
03:12 ಗಮನಿಸಿ ಇಲ್ಲಿ 1 handle ಮತ್ತು 2 ಚುಕ್ಕಿ(ಡಾಟ್ಸ್) ಗಳಿವೆ.
03:16 ಆಕೃತಿಯ ಸ್ಥಾನವನ್ನು ಬದಲಿಸಲು, ಹ್ಯಾಂಡಲ್ ನ ಹಸಿರು ಚುಕ್ಕಿಯನ್ನು ಕ್ಲಿಕ್ ಮಾಡಿ, ಎಳೆಯಿರಿ.
03:22 ಹ್ಯಾಂಡಲ್ ನಲ್ಲಿರುವ ನೀಲಿ ಚುಕ್ಕಿಯನ್ನು ರೊಟೇಷನ್ ಮಾಡಲು ಬಳಸಿ.
03:26 ಮಧ್ಯದ ಹಸಿರು ಚುಕ್ಕಿಯು, ಸ್ಟಾರ್ ಆಕೃತಿಯ ಹೊರಗಿನ ಅಂಚುಗಳನ್ನು ಹೊಂದಿ ಸಲು ಬಿಡುತ್ತದೆ.
03:31 ಕೊನೆಯ ಚುಕ್ಕಿಯನ್ನು ರಿಸೈಝ್ ಮಾಡಲು ಬಳಸಲಾಗುತ್ತದೆ.
03:34 star ಮತ್ತು circle ಲೇಯರ್ ಗಳೆರಡನ್ನೂ ಆಯ್ಕೆ ಮಾಡಿ.
03:37 ಅವುಗಳನ್ನು ಗ್ರುಪ್ ಮಾಡಿ ಮತ್ತು Wheel-1 ಎಂದು ರಿನೇಮ್ ಮಾಡಿ.
03:41 ಈ ಗ್ರುಪ್ ಲೇಯರ್ ಅನ್ನು ರಿಸೈಝ್ ಮಾಡಿ ಮತ್ತು ಇದನ್ನು ಕಂಪಾರ್ಟ್ಮೆಂಟ್ ನ ಕೆಳಗೆ ಇಡಿ.
03:47 ಈಗ Wheel-1 group layer ಅನ್ನು ಡುಪ್ಲಿಕೇಟ್ ಮಾಡಿ.
03:50 Wheel-2 ಎಂದು ರಿನೇಮ್ ಮಾಡಿ ಮತ್ತು ಕಂಪಾರ್ಟ್ಮೆಂಟ್ ನ ಇನ್ನೊಂದು ತುದಿಗೆ ಸರಿಸಿ.
03:56 ಈಗ ಎಲ್ಲಾ ಲೇಯರ್ ಗಳನ್ನು ಆಯ್ಕೆ ಮಾಡಿ.
03:59 ಅವುಗಳನ್ನು ಮತ್ತೆ ಗ್ರುಪ್ ಮಾಡಿ ಮತ್ತು Compartment-3 ಎಂದು ರಿನೇಮ್ ಮಾಡಿ.
04:04 ಈಗ, Duplicate ಐಕಾನ್ ನ ಮೇಲೆ ಎರಡು ಸಲ ಕ್ಲಿಕ್ ಮಾಡಿ.
04:08 ನಕಲು ಮಾಡಿದ ಗ್ರುಪ್ ಲೇಯರ್ ಗಳನ್ನು ಕ್ರಮವಾಗಿ Compartment-2 ಮತ್ತು Compartment-1 ಎಂದು ರಿನೇಮ್ ಮಾಡಿ.
04:17 Compartment-2 ಗ್ರುಪ್ ಲೇಯರ್ ಅನ್ನು ಆಯ್ಕೆ ಮಾಡಿ.
04:20 Shift key ಯನ್ನು ಬಳಸಿ ಮತ್ತು ಹ್ಯಾಂಡಲ್ ನ ಮಧ್ಯದ ಹಸಿರು ಚುಕ್ಕಿಯನ್ನು ಡ್ರ್ಯಾಗ್ ಮಾಡಿ.
04:24 ಅದೇ ರೀತಿಯಾಗಿ, Compartment-1 ಗ್ರುಪ್ ಲೇಯರ್ ಗೂ ಮಾಡಿ.
04:30 Ctrl ಮತ್ತು S ಕೀಲಿಗಳನ್ನು ಒತ್ತಿ, ಫೈಲ್ ಅನ್ನು ಸೇವ್ ಮಾಡಿ.
04:34 ಈಗ ಎಂಜಿನ್ ಅನ್ನು ಚಿತ್ರಿಸೋಣ.
04:36 Canvas ನ ಹೊರಗೆ ಕ್ಲಿಕ್ ಮಾಡಿ.
04:39 Circle tool ಅನ್ನು ಆಯ್ಕೆಮಾಡಿಕೊಂಡು, ಇಲ್ಲಿ ತೋರಿಸಿದಂತೆ ಒಂದು ವೃತ್ತವನ್ನು ರಚಿಸಿ.
04:43 ಲೇಯರ್ ಅನ್ನು, Engine-part-1 ಎಂದು ರಿನೇಮ್ ಮಾಡಿ.
04:47 ಬಣ್ಣವನ್ನು ಗುಲಾಬಿ (ಪಿಂಕ್) ಗೆ ಬದಲಿಸಿ.
04:50 ನಂತರ Rectangle tool ಅನ್ನು ಕ್ಲಿಕ್ ಮಾಡಿ ಮತ್ತು ವೃತ್ತವನ್ನು ಅರ್ಧ ಮುಚ್ಚುವಂತೆ, ಅದರ ಮೇಲೆ ಒಂದು ಆಯತವನ್ನು ಚಿತ್ರಿಸಿ.
04:59 ಲೇಯರ್ ಅನ್ನು Engine-part-2 ಎಂದು ಹೆಸರಿಸಿ, ಮತ್ತು ಬಣ್ಣವನ್ನು ಹಳದಿಗೆ ಬದಲಿಸಿ.
05:06 ಪ್ರಸ್ತುತ ಆಯದದ ಮೇಲೆ ಇನ್ನೊಂದು ಆಯತವನ್ನು ಚಿತ್ರಿಸಿ.
05:10 ಲೇಯರ್ ಅನ್ನು Engine-part-3 ಎಂದು ರಿನೇಮ್ ಮಾಡಿ ಮತ್ತು ಬಣ್ಣವನ್ನು ಹಸಿರು ಬಣ್ಣಕ್ಕೆ ಬದಲಿಸಿ.
05:17 ಅದೇ rectangle tool ಅನ್ನು ಬಳಸಿ, ಇಲ್ಲಿ ತೋರಿಸಿರುವಂತೆ ಕಿಟಕಿಯನ್ನು ಚಿತ್ರಿಸಿ.
05:22 ಲೇಯರ್ ಅನ್ನು Engine-window ಎಂದು ರಿನೇಮ್ ಮಾಡಿ.
05:26 ಎಂಜಿನ್ ನ ಎಲ್ಲಾ ಲೇಯರ್ ಗಳನ್ನು ಆಯ್ಕೆ ಮಾಡಿಕೊಂಡು ಅವುಗಳನ್ನು ಗ್ರುಪ್ ಮಾಡಿ.
05:29 ನಂತರ Engine ಎಂದು ರಿನೇಮ್ ಮಾಡಿ.
05:32 Ctrl ಮತ್ತು S ಕೀಲಿಗಳನ್ನು ಒತ್ತಿ, ಫೈಲ್ ಅನ್ನು Save ಮಾಡಿ.
05:37 ಯಾವುದಾದರು ಒಂದು ಕಂಪಾರ್ಟ್ಮೆಂಟ್ ನ ಡ್ರಾಪ್ ಡೌನ್ ಲಿಸ್ಟ್ ನ ಮೇಲೆ ಕ್ಲಿಕ್ ಮಾಡಿ.
05:40 Wheel-1 ಮತ್ತು Wheel-2 ಎರಡೂ ಗ್ರುಪ್ ಲೇಯರ್ ಗಳನ್ನು ಆಯ್ಕೆ ಮಾಡಿಕೊಂಡು, copy ಮಾಡಿ.
05:45 Engine group layer ನಲ್ಲಿ Paste ಮಾಡಿ.
05:49 Shift key ಯನ್ನು ಬಳಸಿ ಈ ಚಕ್ರಗಳನ್ನು ಎಂಜಿನ್ ನ ಕೆಳಭಾಗಕ್ಕೆ ಎಳೆದು ತನ್ನಿ.
05:54 ಈಗ ಮೇಲಿನ ರೂಲರ್ ನಿಂದ guideline ಗಳನ್ನು ಎಳೆದು, ಕಂಪಾರ್ಟ್ಮೆಂಟ್ ಗಳ ಕೆಳಗೆ ಇಡಿ.
06:03 guideline ಕಂಪಾರ್ಟ್ಮೆಂಟ್ ಗಳು ಮತ್ತು ಎಂಜಿನ್ ಅನ್ನು ಸರಳ ರೇಖೆಯಲ್ಲಿ ಇಡಲು ಸಹಾಯ ಮಾಡುತ್ತದೆ.
06:10 ನಂತರ Engine ಅನ್ನು ಸರಿಸಿ, Compartment-1 ರ ಮುಂದೆ ಅಲೈನ್ ಮಾಡಿ.
06:16 ನಂತರ ಎಲ್ಲ ಕಂಪಾರ್ಟ್ಮೆಂಟ್ ಗಳನ್ನು ಜೋಡಿಸಲು ಒಂದು ಆಯತವನ್ನು ಚಿತ್ರಿಸಿ.
06:20 ಆ ಲೇಯರ್ ಅನ್ನು Belt ಎಂದು ರಿನೇಮ್ ಮಾಡಿ ಮತ್ತು ಕಪ್ಪು ಬಣ್ಣವನ್ನು ಆಯ್ಕೆ ಮಾಡಿ.
06:27 Belt layer ಅನ್ನು Layers ಗಳ ಪಟ್ಟಿಯಲ್ಲಿ ಕೆಳಕ್ಕೆ ತನ್ನಿ.
06:31 ಕೊನೆಯದಾಗಿ, ಹಳಿಗಳನ್ನು ಚಿತ್ರಿಸೋಣ.
06:33 Rectangle tool ಅನ್ನು ಕ್ಲಿಕ್ ಮಾಡಿ.
06:36 ಇಲ್ಲಿ ತೋರಿಸಿರುವಂತೆ , ಚಕ್ರದ ಕೆಳಗೆ ಒಂದು ಆಯತವನ್ನು ಚಿತ್ರಿಸಿ.
06:40 ಲೇಯರ್ ನ ಹೆಸರನ್ನು Rail ಎಂದು ಬದಲಿಸಿ ಮತ್ತು ಕಪ್ಪು ಬಣ್ಣವನ್ನು ಆಯ್ಕೆ ಮಾಡಿ.
06:47 ಈಗ ಟ್ರೇನ್ ನ ಚಿತ್ರ ಸಂಪೂರ್ಣವಾಗಿದೆ.
06:50 ಕೊನೆಯದಾಗಿ ನಮ್ಮಫೈಲ್ ಅನ್ನು , Ctrl + S ಅನ್ನು ಒತ್ತಿ save ಸೇವ್ ಮಾಡೋಣ.
06:56 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
07:00 ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು,
07:04 ಮೂಲಭೂತ ಆಕೃತಿಗಳನ್ನು ಬರೆಯುವುದು,
07:06 ಆಕೃತಿಗಳಿಗೆ ಬಣ್ಣ ಕೊಡುವುದು,
07:08 ಒಬ್ಜೆಕ್ಟ್ ಗಳನ್ನು ಗ್ರುಪ್ ಮಾಡುವುದು ಮತ್ತು ನಕಲು (ಡುಪ್ಲಿಕೇಟ್) ಮಾಡುವುದು
07:10 ಮತ್ತು

Guideline ಅನ್ನು ಬಳಸಿ ಆಕೃತಿಗಳನ್ನು ಜೋಡಿಸುವುದು – ಇವುಗಳ ಕುರಿತು ಕಲಿತಿದ್ದೇವೆ.

07:13 ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ-
07:14 ಈ ಟ್ಯುಟೋರಿಯಲ್ ನಲ್ಲಿ ವಿವರಿಸಿರುವಂತೆ, Synfig ನಲ್ಲಿ ಒಂದು ಬಸ್ ಅನ್ನು ಚಿತ್ರಿಸಿ.
07:20 ನಿಮ್ಮ ಪೂರ್ಣಗೊಂಡ ಅಸೈನ್ ಮೆಂಟ್ ಈ ರೀತಿಯಾಗಿ ಕಾಣಬೇಕು.
07:24 ಈ ವಿಡಿಯೋ Spoken Tutorial ಪ್ರಾಜೆಕ್ಟ್ ನ ಕುರಿತು ಸಂಕ್ಷಿಪ್ತವಾಗಿ ತಿಳಿಸಿಕೊಡುತ್ತದೆ.
07:28 ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿ, ನೋಡಿ.
07:30 ಸ್ಪೋಕನ್ ಟ್ಯುಟೋರಿಯಲ್ಸ್ ಗಳು ಕಾರ್ಯಶಾಲೆಗಳನ್ನು ನಡೆಸಿ, ಪ್ರಮಾಣಪತ್ರವನ್ನು ಕೊಡುತ್ತದೆ.
07:36 ಹೆಚ್ಚಿನ ಮಾಹಿತಿಗಾಗಿ ನಮಗೆ ಬರೆಯಿರಿ.
07:39 ದಯವಿಟ್ಟು ಸಮಯವನ್ನೊಳಗೊಂಡ ನಿಮ್ಮ ಪ್ರಶ್ನೆಗಳನ್ನುಈ ಫೋರಮ್ ನಲ್ಲಿ ಪೋಸ್ಟ್ ಮಾಡಿ.
07:43 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, NMEICT, MHRD, ಭಾರತ ಸರ್ಕಾರ – ಇವರಿಂದ ಅನುದಾನವನ್ನು ಪಡೆದಿರುತ್ತದೆ.
07:48 ಈ ಮಿಷನ್ ನ ಕುರಿತು ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿದೆ.
07:53 ಅನುವಾದ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

NaveenBhat