COVID19/C2/Breastfeeding-during-COVID-19/Kannada
From Script | Spoken-Tutorial
Revision as of 16:57, 27 July 2020 by NaveenBhat (Talk | contribs)
|
|
00:02 | COVID-19 ಸಮಯದಲ್ಲಿ ಸ್ತನ್ಯಪಾನ ಎಂಬ ಸ್ಪೊಕನ್ ಟ್ಯುಟೊರಿಯಲ್ ಗೆ ಸ್ವಾಗತ. |
00:09 | ಈ ಟ್ಯುಟೊರಿಯಲ್ ನಲ್ಲಿ ನಾವು, |
00:12 | COVID-19 ಎಂದರೇನು? ಮತ್ತು |
00:14 | COVID-19 ಸಮಯದಲ್ಲಿ ಸ್ತನ್ಯಪಾನದ ಮಾರ್ಗದರ್ಶನದ ಬಗ್ಗೆ ಕಲಿಯುವೆವು . |
00:19 | ಮೊದಲಿಗೆ COVID-19 ಎಂದರೇನು ಎಂದು ತಿಳಿಯೋಣ. |
00:24 | COVID-19 ಎನ್ನುವುದು ಕೊರೊನಾ ವೈರಸ್ ನ ಇನ್ಫೆಕ್ಷನ್ ನಿಂದ ಉಂಟಾದ ರೋಗವಾಗಿದೆ. |
00:33 | ಈ ವೈರಸ್ ಪ್ರಪಂಚದ ತುಂಬಾ ವ್ಯಾಪಿಸಿದೆ. |
00:37 | ಇನ್ಫೆಕ್ಷನ್ ಉಂಟಾದಾಗ ಜನರು ಸೀನು ಅಥವಾ ಕೆಮ್ಮಿನ ಮೂಲಕ ಹನಿಗಳನ್ನು ಉತ್ಪಾದಿಸುತ್ತಾರೆ. |
00:44 | ಈ ಹನಿಗಳು ಕೊರೊನಾ ವೈರಸ್ ನ ಗುಣಗಳನ್ನು ಹೊಂದಿರುತ್ತವೆ. |
00:49 | ಯಾವಾಗ ಬೇರೆ ಜನರು ಈ ರೋಗದ ಹನಿಗಳನ್ನು ಸೇವಿಸುತ್ತಾರೋ ಆವಾಗ ಈ ರೋಗ ಹರಡುತ್ತದೆ. |
00:56 | ಈ ಹನಿಗಳು ೧ ರಿಂದ ೨ ಮೀಟರ್ ಗಳ ವರೆಗೆ ಸಂಚರಿಸಿ ಮೇಲ್ಮೈಗಳ ಮೇಲೆ ಬೀಡುಬಿಡುತ್ತವೆ. |
01:04 | ಅಲ್ಲಿಯೇ ಅವು ಗಂಟೆಗಳು ಅಥವಾ ದಿನಗಳ ವರೆಗೆ ಜೀವಂತವಾಗಿರುತ್ತವೆ. |
01:09 | ಬೇರೆ ಜನರು ಸೋಂಕಿನ ಮೇಲ್ಮೈಯನ್ನು ಅವರ ಕೈಯಿಂದ ಮುಟ್ಟಿಕೊಂಡು, |
01:15 | ಆಮೇಲೆ ಅವರು ಕಣ್ಣುಗಳನ್ನು, |
01:18 | ಮೂಗನ್ನು ಮತ್ತು ಬಾಯನ್ನು ಕೈ ತೊಳೆಯದೇ ಮುಟ್ಟಿದಾಗ, |
01:23 | ಸೋಂಕು ಹರಡುವುದು ಇನ್ನೊಂದು ವಿಧವಾಗಿದೆ. |
01:28 | ಸೋಂಕಿತರು ರೋಗದ ಲಕ್ಷಣವನ್ನು ಮೊದಲೇ ಹರಡಲು ಸಮರ್ಥರಾಗಿರುತ್ತಾರೆ. |
01:35 | ಇಂದಿನ ವರೆಗೆ ಗರ್ಭಕೋಶದ ಒಳಗೆ ಈ ವೈರಾಣುವಿನ ವರ್ಗಾವಣೆಯ ಕುರುಹುಗಳಿಲ್ಲ . |
01:43 | ಸೋಂಕಿತ ತಾಯಿಯ ಎದೆಹಾಲಿನಲ್ಲಿ ಈ ವೈರಸ್ ಇದುವರೆಗೆ ಕಂಡುಬಂದಿಲ್ಲ . |
01:51 | ಇಲ್ಲಿಯವರೆಗೆ ಸ್ತನ್ಯಪಾನದಿಂದ ವರ್ಗಾವಣೆಯಾದ ಕುರುಹುಗಳಿಲ್ಲ . |
01:57 | ಕೊರೊನಾ ವೈರಸ್ ನ ವೈದ್ಯಕೀಯ ಗುಣಲಕ್ಷಣಗಳು ಹಲವಾರು . |
02:03 | ಜ್ವರ,
ಕೆಮ್ಮು, |
02:05 | ಉಸಿರಾಟದ ತೊಂದರೆ,
ಆಯಾಸ, |
02:07 | ತಲೆನೋವು,
ಗಂಟಲು ನೋವುಗಳು ಸಾಮಾನ್ಯವಾಗಿವೆ. |
02:12 | ವಾಂತಿ,
ಅತಿಸಾರ, |
02:14 | ಸೀನು ಮತ್ತು
ಕಣ್ಣುರಿಗಳು ವಿರಳವಾಗಿವೆ. |
02:19 | ಸೋಂಕಿತರು ಯಾವುದೇ ಲಕ್ಷಣಗಳನ್ನು ಹೊಂದಿರದೇ ಇರಬಹುದು. |
02:25 | ನವಜಾತ ಶಿಶುಗಳಿಗೆ COVID-19 ನ ತೊಂದರೆಯು ಸ್ವಲ್ಪ ಕಡಿಮೆ ಇರುತ್ತದೆ. |
02:30 | ಚಿಕ್ಕ ಮಕ್ಕಳಲ್ಲಿ COVID-19 ಸ್ವಲ್ಪ ಪ್ರಮಾಣದಲ್ಲಿ ಮಾತ್ರ ದೃಢಪಟ್ಟಿದೆ . |
02:37 | ಹೆಚ್ಚಿನ ಸೋಂಕಿತ ಮಕ್ಕಳು ಕಡಿಮೆ ಅಥವಾ ಶೂನ್ಯಲಕ್ಷಣಗಳನ್ನು ಹೊಂದಿರುತ್ತಾರೆ. |
02:44 | ಈಗ COVID-19 ಸಮಯದಲ್ಲಿ ಸ್ತನ್ಯಪಾನದ ಬಗ್ಗೆ ಮಾರ್ಗದರ್ಶನ ಪಡೆಯೋಣ. |
02:51 | ಶಿಶುಗಳಿಗೆ ಎದೆಹಾಲು ಅತ್ಯವಶ್ಯಕ ವಾಗಿದೆ. |
02:56 | ಇದು COVID-19 ಶಂಕಿತ ಅಥವಾ ಸೋಂಕಿತ ತಾಯಂದಿರ ಮಕ್ಕಳಿಗೂ ಕೂಡಾ ಅನ್ವಯಿಸುತ್ತದೆ. |
03:03 | ಇದು COVID-19 ಶಂಕಿತ ಅಥವಾ ಸೋಂಕಿತ ಶಿಶುಗಳಿಗೂ ಕೂಡಾ ಅನ್ವಯಿಸುತ್ತದೆ. |
03:10 | ಎಲ್ಲಾ ಶಿಶುಗಳಿಗೂ ಕೂಡಾ ಸ್ತನ್ಯಪಾನದ ನಿಗದಿತ ನಿಯಮಾವಳಿಗಳಿಗೆ ಅನುಗುಣವಾಗಿ ಎದೆಹಾಲು ಕುಡಿಸಬೇಕು. |
03:17 | ಮಗು ಹುಟ್ಟಿದ ೧ ತಾಸಿನ ಒಳಗೆ ಎದೆಹಾಲು ಕುಡಿಸಬೇಕು. |
03:22 | ಸ್ತನ್ಯಪಾನವನ್ನು ೬ ತಿಂಗಳವರೆಗೆ ತಪ್ಪದೇ ಮುಂದುವರಿಸಬೇಕು. |
03:28 | ಅವಶ್ಯವಿದ್ದಲ್ಲಿ ತಾಯಿಯಿಂದ ಒತ್ತಿತೆಗೆದ ಎದೆಹಾಲನ್ನು ಕುಡಿಸಬಹುದು. |
03:34 | ಪೂರಕ ಆಹಾರವನ್ನು ೬ ತಿಂಗಳುಗಳ ನಂತರ ಮುಂದುವರೆಸಬಹುದು. |
03:40 | ಸ್ತನ್ಯಪಾನವನ್ನು ೨ ವರ್ಷಗಳವರೆಗೆ ಮಾಡಿಸಬೇಕು . |
03:46 | ಸ್ತನ್ಯಪಾನ, ಒತ್ತಿತೆಗೆದ ಹಾಲು ಮತ್ತು ಪೂರಕ ಆಹಾರ ಅವಶ್ಯಕವಾಗಿವೆ. |
03:54 | ಅವುಗಳ ಕುರಿತು ಬೇರೆ ಟ್ಯುಟೊರಿಯಲ್ ಗಳಲ್ಲಿ ಚರ್ಚಿಸಲಾಗಿದೆ. |
03:59 | ದಯವಿಟ್ಟು ನಮ್ಮ ಜಾಲತಾಣದಲ್ಲಿರುವ health and nutrition ಸರಣಿಯನ್ನು ನೋಡಿ. |
04:06 | COVID-19 ಸಮಯದಲ್ಲಿ, ಶಿಶುಗಳಿಗೆ ಆರೋಗ್ಯಪೂರ್ಣವಾಗಿ ಸ್ತನ್ಯಪಾನ ಮಾಡಿಸಲು ಹೆಚ್ಚಿನ ಖಾಳಜಿ ತೆಗೆದುಕೊಳ್ಳಬೇಕಾಗುತ್ತದೆ. |
04:13 | ತಾಯಿಯು ಮಗುವನ್ನು ಮುಟ್ಟುವ ಮೊದಲು ಮತ್ತು ನಂತರ, ಅವಳ ಕೈಗಳನ್ನು ೨೦ ಸೆಕೆಂಡ್ ಗಳ ಕಾಲ ತೊಳೆದುಕೊಳ್ಳಬೇಕು. |
04:21 | ಅವಳು ಸ್ತನ್ಯಪಾನ ಮಾಡಿಸುವಾಗ ಅಥವಾ ಹಾಲನ್ನು ಒತ್ತಿ ತೆಗೆಯುವ ಮೊದಲು ಮತ್ತು ನಂತರ ಕೈಗಳನ್ನು ತೊಳೆದುಕೊಳ್ಳಬೇಕು. |
04:28 | ಅಲ್ಕೋಹಾಲ್ ಯುಕ್ತ ಹ್ಯಾಂಡ್-ರಬ್ ಅನ್ನು ಕೂಡಾ ಕೈಗೆ ಬಳಸಬಹುದು. |
04:34 | ಅವಳು COVID-19 ಶಂಕಿತೆ ಅಥವಾ ಸೋಂಕಿತೆಯಾಗಿದ್ದರೆ ವೈದ್ಯಕೀಯ ಮಾಸ್ಕ್ ಗಳು ಬೇಕು. |
04:43 | ಅವಳು ಸ್ತನ್ಯಪಾನ ಮಾಡಿಸುವಾಗ ಮತ್ತು |
04:46 | ಒತ್ತಿ ಹಾಲನ್ನು ತೆಗೆಯುವಾಗ ಮಾಸ್ಕ್ ಧರಿಸಬೇಕು. |
04:49 | ಮಾಸ್ಕ್ ಅನ್ನು ಹಾಳಾದಕೂಡಲೇ ಬದಲಿಸಬೇಕು. |
04:55 | ಬಳಸಿದ ಮಾಸ್ಕ್ ಅನ್ನು ಕೂಡಲೇ ಎಸೆಯಬೇಕು. |
05:01 | ಅದನ್ನು ಪುನಃ ಉಪಯೋಗಿಸಬಾರದು. |
05:04 | ತಾಯಿಯು ಮಾಸ್ಕ್ ನ ಮುಂಭಾಗವನ್ನು ಮುಟ್ಟುತ್ತಿರಬಾರದು . |
05:09 | ಅವಳು ಅದನ್ನು ಹಿಂಭಾಗದಿಂದ ತೆಗೆಯಬೇಕು. |
05:13 | ಕೆಲವೊಮ್ಮೆ, ವೈದ್ಯಕೀಯ ಮಾಸ್ಕ್ ಗಳು ಸಿಗುವದಿಲ್ಲ. |
05:19 | ಅಂತಹ ಸಂದರ್ಭದಲ್ಲಿ, ತಾಯಿಯು ಟಿಶ್ಶ್ಯೂವನ್ನು, |
05:22 | ಶುಭ್ರ ಬಟ್ಟೆಯನ್ನು ಅಥವಾ
ಕರವಸ್ತ್ರವನ್ನು ಬಳಸಬೇಕು. |
05:27 | ಅವಳು ಅವುಗಳಲ್ಲಿಯೇ ಸೀನಬೇಕು ಅಥವಾ ಕೆಮ್ಮಬೇಕು. |
05:31 | ಅವಳು ತಕ್ಷಣ ಅದನ್ನು ಕಸದತೊಟ್ಟಿಗೆ ಹಾಕಿ ಕೈಗಳನ್ನು ತೊಳೆದುಕೊಳ್ಳಬೇಕು. |
05:38 | ಟಿಶ್ಶ್ಯೂ ಅಥವಾ ಬಟ್ಟೆ, |
05:40 | ಅಥವಾ ಕರವಸ್ತ್ರಗಳನ್ನು ಆಗಾಗ ಬದಲಾಯಿಸಬೇಕು. |
05:46 | ವೈದ್ಯಕೀಯ ಮಾಸ್ಕ್ ಗಳು ದೊರೆಯದಿದ್ದರೆ, ಬಟ್ಟೆಯ ಮಾಸ್ಕ್ ಗಳನ್ನು ಕೂಡಾ ಬಳಸಬಹುದು. |
05:53 | ತಾಯಿಯು ಪ್ರತಿ ಬಾರಿ ಹಾಲುಣಿಸುವಾಗ ಸ್ತನವನ್ನು ತೊಳೆಯುವ ಅವಶ್ಯಕತೆಯಿಲ್ಲ. |
05:58 | ಅವಳು ಎದೆಭಾಗದ ಮೇಲೆ ಕೆಮ್ಮಿದಾಗ ಮಾತ್ರ ಅವುಗಳನ್ನು ತೊಳೆಯಬೇಕು. |
06:04 | ಅವಳು ಸಾಬೂನು ಮತ್ತು ಬೆಚ್ಚಗಿನ ನೀರಿನಿಂದ ೨೦ ಸೆಕೆಂಡುಗಳ ತನಕ ಅದನ್ನು ತೊಳೆಯಬೇಕು . |
06:12 | ಮಗುವಿನ ಖಾಳಜಿವಹಿಸುವವರು ಮಗುವನ್ನು ಮುಟ್ಟುವ ಮೊದಲು ಮತ್ತು ಆಮೇಲೆ ಅವರ ಕೈಗಳನ್ನು ತೊಳೆದುಕೊಳ್ಳಬೇಕು. |
06:19 | ಕೊಠಡಿಯ ಮೇಲ್ಮೈಯನ್ನು ಶುದ್ಧಗೊಳಿಸಿ ಸೋಂಕುರಹಿತವಾಗಿಸಬೇಕು. |
06:26 | ಕೆಲವು ಸೋಂಕಿತ ತಾಯಂದಿರು ಎದೆಹಾಲು ಕುಡಿಸಲು ಸಮರ್ಥರಾಗಿರುವದಿಲ್ಲ. |
06:32 | ಅಂತಹ ಸಂದರ್ಭದಲ್ಲಿ, ಶಿಶುವಿಗೆ ಒತ್ತಿ ತೆಗೆದ ಹಾಲನ್ನು ಕುಡಿಸಬೇಕು. |
06:39 | ದಾದಿ ಅಥವಾ ಕುಟುಂಬದ ಸದಸ್ಯರು ಈ ಹಾಲನ್ನು ಮಗುವಿಗೆ ಕುಡಿಸಬಹುದು. |
06:45 | ಹಾಲುಣಿಸುವವರು ಸೋಂಕಿತ ಜನರ ಜೊತೆ ಸಂಪರ್ಕದಲ್ಲಿರಬಾರದು. |
06:51 | ಮಗುವನ್ನು ಅಥವಾ ಹಾಲನ್ನು ಮುಟ್ಟುವ ಮೊದಲು ೨೦ ಸೆಕೆಂಡುಗಳ ಕಾಲ ಕೈಗಳನ್ನು ತೊಳೆಯಬೇಕು. |
06:59 | ಕೈ ತೊಳೆದ ನಂತರ ಅವರು ಮಾಸ್ಕ್ ಅನ್ನು ಧರಿಸಬೇಕು. |
07:05 | ಒತ್ತಿ ತೆಗೆದ ಹಾಲನ್ನು ಪಾಶ್ಚರೀಕರಣ ಮಾಡದೇ ಕುಡಿಸಬೇಕು. |
07:11 | ಒತ್ತಿ ತೆಗೆದ ಹಾಲನ್ನು ಸಂಗ್ರಹ ಮತ್ತು ಪಾತ್ರಾಂತರ ಮಾಡುವಾಗ ತುಂಬಾ ಖಾಳಜಿ ವಹಿಸಬೇಕು. |
07:18 | ತಾಯಿಯು ಚೇತರಿಸಿಕೊಂಡಾಗ ಪುನಃ ಸ್ತನ್ಯಪಾನಮಾಡಿಸುವದನ್ನು ಪ್ರಾರಂಭಿಸಬೇಕು. |
07:24 | ಕೆಲವು ಸೋಂಕಿತ ತಾಯಂದಿರು ಹಾಲನ್ನು ಒತ್ತಿ ತೆಗೆಯಲು ಸಮರ್ಥರಾಗಿರುವದಿಲ್ಲ. |
07:29 | ಇಂತಹ ಸಂದರ್ಭದಲ್ಲಿ, ಮಗುವನ್ನು ಪೊಷಿಸಲು ಬೇರೆ ವಿಧಾನವನ್ನು ಬಳಸಿ. |
07:35 | ಮನುಷ್ಯರ ಕ್ಷೀರದಾನ ಮಾಡುವ ಕೇಂದ್ರದಲ್ಲಿ ಮನುಷ್ಯರ ಹಾಲು ದೊರೆಯುವದೇ ಎಂದು ಪರೀಕ್ಷಿಸಿ. |
07:41 | ತಾಯಿಯು ಚೇತರಿಸಿಸ್ಕೊಳ್ಳುವವರೆಗೂ ದಾನಪಡೆದ ಹಾಲನ್ನು ಮಗುವಿಗೆ ಉಣಿಸಿ. |
07:47 | ಕ್ಷೀರದಾನ ಮಾಡುವವರು ಲಭ್ಯವಿರದಿದ್ದರೆ, ತಾಯಿಯು ಚೇತರಿಸಿಕೊಳ್ಳುವ ವರೆಗೂ ವೆಟ್-ನರ್ಸಿಂಗ್ ಅನ್ನು ಅನುಸರಿಸಿ. |
07:55 | ವೆಟ್-ನರ್ಸಿಂಗ್ ಅಂದರೆ, ಮಗುವಿನ ತಾಯಿಯಲ್ಲದ ಮಹಿಳೆಯನ್ನು ಹಾಲುಣಿಸಲು ಬಳಸುವದು. |
08:03 | ವೆಟ್-ನರ್ಸಿಂಗ್ ಸಾಧ್ಯವಿಲ್ಲದಿದ್ದರೆ, ಪ್ರಾಣಿಮೂಲದ ಹಾಲನ್ನು ಬಳಸಿ. |
08:10 | ಹಾಲುಣಿಸುವ ಮೊದಲು ಯಾವಾಗಲೂ ಪ್ರಾಣಿಮೂಲದ ಹಾಲನ್ನು ಕಾಯಿಸಿರಬೇಕು. |
08:16 | ದಯವಿಟ್ಟು ಈ ವಿಧಾನಗಳಿಗೆ ಆರೊಗ್ಯಸಲಹೆಗಾರರನ್ನು ಕೇಳಿ ತಿಳಿಯಿರಿ. |
08:23 | ಫೊರ್ಮ್ಯುಲಾ ಮಿಲ್ಕ್ ನ, |
08:25 | ಫೀಡಿಂಗ್ ಬೊಟಲ್ ನ, |
08:27 | ಪ್ಲ್ಯಾಸ್ಟಿಕ್, ರಬ್ಬರ್ ಅಥವಾ ಸಿಲಿಕೊನ್ ನಿಪ್ಪಲ್ ಗಳ ಉಪಯೋಗ ಬೇಡ. |
08:32 | ತಾಯಿಯು ಚೇತರಿಸಿಕೊಂಡಾಗ ಎದೆಹಾಲು ಕುಡಿಸಲು ಸಹಾಯ ಮಾಡಬೇಕು. |
08:38 | ಇನ್ನೊಂದು ಮುಖ್ಯವಾದ ಪ್ರಯೋಗವೆಂದರೆ ತಾಯಿ ಮತ್ತು ಮಗುವಿನ ನಡುವೆ ಚರ್ಮದ ಸಂಪರ್ಕ. |
08:46 | ತಾಯಿಯು COVID-19 ಸೋಂಕಿತೆಯಾದರೂ ಸಹ ಮಗು ಹುಟ್ಟಿದ ತಕ್ಷಣದಿಂದ ಇದನ್ನು ಪ್ರಾರಂಭಿಸಬೇಕು. |
08:53 | ಇದು ಸ್ತನ್ಯಪಾನ ಪ್ರಾರಂಭಿಸಲು ಸಹಾಯಕಾರಿಯಾಗಿದೆ. |
08:58 | ಹಗಲು ರಾತ್ರಿ ಕಾಂಗರೂ ಮದರ್ ಕೇರ್ ಅನ್ನು ಅನುಸರಿಸಬೇಕು. |
09:04 | ಸ್ತನ್ಯಪಾನ ಮತ್ತು ಚರ್ಮದಸಂಪರ್ಕ ಶಿಶುವಿನ ಮರಣದ ಅಪಾಯವನ್ನು ಕಡಿಮೆ ಮಾಡುತ್ತದೆ. |
09:12 | ಇದು ತಕ್ಷಣದ ಮತ್ತು ಜೀವನಪರ್ಯಂತದ ಆರೊಗ್ಯವನ್ನು ಮತ್ತು ಬೆಳವಣಿಗೆಯನ್ನು ಅನುಕೂಲಕರಗೊಳಿಸುತ್ತದೆ. |
09:20 | ಸ್ತನ್ಯಪಾನ ಮಾಡಿಸುವದರಿಂದ ತಾಯಿಯರ ಸ್ತನದ ಮತ್ತು ಅಂಡಾಶಯದ ಕ್ಯಾನ್ಸರ್ ಸಂಭವನೀಯತೆಯು ಕಡಿಮೆಯಾಗುತ್ತದೆ. |
09:27 | ಇವುಗಳು ಸೋಂಕುಗೊಳ್ಳುವ ಅಪಾಯಕ್ಕಿಂತ ಗಣನೀಯವಾಗಿ ಪ್ರಯೋಜನಕಾರಿಯಾಗಿವೆ. |
09:34 | ಕೊನೆಯದಾಗಿ, ತಾಯಿ ಮತ್ತು ಕುಟುಂಬ ಸದಸ್ಯರು, ಎಚ್ಚರಿಕೆಯ ವಿಚಾರಗಳ ಕುರಿತು ಸಮಾಲೋಚನೆ ಪಡೆಯಬೇಕು. |
09:42 | ಶಿಶುವಿನ ಎಚ್ಚರಿಕೆಯ ವಿಚಾರವಾಗಿ ಅವರು ತರಬೇತಿ ಪಡೆದಿರಬೇಕು. |
09:48 | ಅವರು ಶಿಶುವಿನಲ್ಲಿ ಯಾವುದೇ ಲಕ್ಷಣ ಕಂಡುಬಂದಲ್ಲಿ ವೈದ್ಯರ ಬಳಿ ಹೋಗಬೇಕು. |
09:53 | ಈ ಟ್ಯೂಟೊರಿಯಲ್ ನಲ್ಲಿ ಕೊಟ್ಟಿರುವ ಮಾಹಿತಿಗಳು, ಲಭ್ಯವಿರುವ ಸಾಕ್ಷ್ಯಗಳನ್ನು ಮಾತ್ರ ಅನುಸರಿಸಿವೆ. |
10:01 | ಹೊಸ ಪುರಾವೆಗಳು ಸಿಕ್ಕಾಗ, ಮೇಲಿನ ಕೆಲವು ಶಿಫಾರಸುಗಳು ಬದಲಾಗಬಹುದು. |
10:08 | ಈ ನಿಯಮಾವಳಿಗಳನ್ನು ಸರ್ಕಾರದ ಇತ್ತೀಚಿನ ನಿಯಮಾವಳಿಗಳಿಗೆ ಅನುಗುಣವಾಗಿ ಉಪಯೋಗಿಸಿ. |
10:14 | ನಾವು ಪಾಠದ ಕೊನೆಗೆ ಬಂದಿದ್ದೇವೆ. ಅನುವಾದ ಮತ್ತು ಧ್ವನಿ ಶ್ರೀಮತಿ ನಯನಾ ಭಟ್ಟ.
ಧನ್ಯವಾದಗಳು. |