COVID19/C2/Breastfeeding-during-COVID-19/Kannada

From Script | Spoken-Tutorial
Jump to: navigation, search
Time
Narration
00:02 COVID-19 ಸಮಯದಲ್ಲಿ ಸ್ತನ್ಯಪಾನ ಎಂಬ ಸ್ಪೊಕನ್ ಟ್ಯುಟೊರಿಯಲ್ ಗೆ ಸ್ವಾಗತ.
00:09 ಈ ಟ್ಯುಟೊರಿಯಲ್ ನಲ್ಲಿ ನಾವು,
00:12 COVID-19 ಎಂದರೇನು? ಮತ್ತು
00:14 COVID-19 ಸಮಯದಲ್ಲಿ ಸ್ತನ್ಯಪಾನದ ಮಾರ್ಗದರ್ಶನದ ಬಗ್ಗೆ ಕಲಿಯುವೆವು .
00:19 ಮೊದಲಿಗೆ COVID-19 ಎಂದರೇನು ಎಂದು ತಿಳಿಯೋಣ.
00:24 COVID-19 ಎನ್ನುವುದು ಕೊರೊನಾ ವೈರಸ್ ನ ಇನ್ಫೆಕ್ಷನ್ ನಿಂದ ಉಂಟಾದ ರೋಗವಾಗಿದೆ.
00:33 ಈ ವೈರಸ್ ಪ್ರಪಂಚದ ತುಂಬಾ ವ್ಯಾಪಿಸಿದೆ.
00:37 ಇನ್ಫೆಕ್ಷನ್ ಉಂಟಾದಾಗ ಜನರು ಸೀನು ಅಥವಾ ಕೆಮ್ಮಿನ ಮೂಲಕ ಹನಿಗಳನ್ನು ಉತ್ಪಾದಿಸುತ್ತಾರೆ.
00:44 ಈ ಹನಿಗಳು ಕೊರೊನಾ ವೈರಸ್ ನ ಗುಣಗಳನ್ನು ಹೊಂದಿರುತ್ತವೆ.
00:49 ಯಾವಾಗ ಬೇರೆ ಜನರು ಈ ರೋಗದ ಹನಿಗಳನ್ನು ಸೇವಿಸುತ್ತಾರೋ ಆವಾಗ ಈ ರೋಗ ಹರಡುತ್ತದೆ.
00:56 ಈ ಹನಿಗಳು ೧ ರಿಂದ ೨ ಮೀಟರ್ ಗಳ ವರೆಗೆ ಸಂಚರಿಸಿ ಮೇಲ್ಮೈಗಳ ಮೇಲೆ ಬೀಡುಬಿಡುತ್ತವೆ.
01:04 ಅಲ್ಲಿಯೇ ಅವು ಗಂಟೆಗಳು ಅಥವಾ ದಿನಗಳ ವರೆಗೆ ಜೀವಂತವಾಗಿರುತ್ತವೆ.
01:09 ಬೇರೆ ಜನರು ಸೋಂಕಿನ ಮೇಲ್ಮೈಯನ್ನು ಅವರ ಕೈಯಿಂದ ಮುಟ್ಟಿಕೊಂಡು,
01:15 ಆಮೇಲೆ ಅವರು ಕಣ್ಣುಗಳನ್ನು,
01:18 ಮೂಗನ್ನು ಮತ್ತು ಬಾಯನ್ನು ಕೈ ತೊಳೆಯದೇ ಮುಟ್ಟಿದಾಗ,
01:23 ಸೋಂಕು ಹರಡುವುದು ಇನ್ನೊಂದು ವಿಧವಾಗಿದೆ.
01:28 ಸೋಂಕಿತರು ರೋಗದ ಲಕ್ಷಣವನ್ನು ಮೊದಲೇ ಹರಡಲು ಸಮರ್ಥರಾಗಿರುತ್ತಾರೆ.
01:35 ಇಂದಿನ ವರೆಗೆ ಗರ್ಭಕೋಶದ ಒಳಗೆ ಈ ವೈರಾಣುವಿನ ವರ್ಗಾವಣೆಯ ಕುರುಹುಗಳಿಲ್ಲ .
01:43 ಸೋಂಕಿತ ತಾಯಿಯ ಎದೆಹಾಲಿನಲ್ಲಿ ಈ ವೈರಸ್ ಇದುವರೆಗೆ ಕಂಡುಬಂದಿಲ್ಲ .
01:51 ಇಲ್ಲಿಯವರೆಗೆ ಸ್ತನ್ಯಪಾನದಿಂದ ವರ್ಗಾವಣೆಯಾದ ಕುರುಹುಗಳಿಲ್ಲ .
01:57 ಕೊರೊನಾ ವೈರಸ್ ನ ವೈದ್ಯಕೀಯ ಗುಣಲಕ್ಷಣಗಳು ಹಲವಾರು .
02:03 ಜ್ವರ,

ಕೆಮ್ಮು,

02:05 ಉಸಿರಾಟದ ತೊಂದರೆ,

ಆಯಾಸ,

02:07 ತಲೆನೋವು,

ಗಂಟಲು ನೋವುಗಳು ಸಾಮಾನ್ಯವಾಗಿವೆ.

02:12 ವಾಂತಿ,

ಅತಿಸಾರ,

02:14 ಸೀನು ಮತ್ತು

ಕಣ್ಣುರಿಗಳು ವಿರಳವಾಗಿವೆ.

02:19 ಸೋಂಕಿತರು ಯಾವುದೇ ಲಕ್ಷಣಗಳನ್ನು ಹೊಂದಿರದೇ ಇರಬಹುದು.
02:25 ನವಜಾತ ಶಿಶುಗಳಿಗೆ COVID-19 ನ ತೊಂದರೆಯು ಸ್ವಲ್ಪ ಕಡಿಮೆ ಇರುತ್ತದೆ.
02:30 ಚಿಕ್ಕ ಮಕ್ಕಳಲ್ಲಿ COVID-19 ಸ್ವಲ್ಪ ಪ್ರಮಾಣದಲ್ಲಿ ಮಾತ್ರ ದೃಢಪಟ್ಟಿದೆ .
02:37 ಹೆಚ್ಚಿನ ಸೋಂಕಿತ ಮಕ್ಕಳು ಕಡಿಮೆ ಅಥವಾ ಶೂನ್ಯಲಕ್ಷಣಗಳನ್ನು ಹೊಂದಿರುತ್ತಾರೆ.
02:44 ಈಗ COVID-19 ಸಮಯದಲ್ಲಿ ಸ್ತನ್ಯಪಾನದ ಬಗ್ಗೆ ಮಾರ್ಗದರ್ಶನ ಪಡೆಯೋಣ.
02:51 ಶಿಶುಗಳಿಗೆ ಎದೆಹಾಲು ಅತ್ಯವಶ್ಯಕ ವಾಗಿದೆ.
02:56 ಇದು COVID-19 ಶಂಕಿತ ಅಥವಾ ಸೋಂಕಿತ ತಾಯಂದಿರ ಮಕ್ಕಳಿಗೂ ಕೂಡಾ ಅನ್ವಯಿಸುತ್ತದೆ.
03:03 ಇದು COVID-19 ಶಂಕಿತ ಅಥವಾ ಸೋಂಕಿತ ಶಿಶುಗಳಿಗೂ ಕೂಡಾ ಅನ್ವಯಿಸುತ್ತದೆ.
03:10 ಎಲ್ಲಾ ಶಿಶುಗಳಿಗೂ ಕೂಡಾ ಸ್ತನ್ಯಪಾನದ ನಿಗದಿತ ನಿಯಮಾವಳಿಗಳಿಗೆ ಅನುಗುಣವಾಗಿ ಎದೆಹಾಲು ಕುಡಿಸಬೇಕು.
03:17 ಮಗು ಹುಟ್ಟಿದ ೧ ತಾಸಿನ ಒಳಗೆ ಎದೆಹಾಲು ಕುಡಿಸಬೇಕು.
03:22 ಸ್ತನ್ಯಪಾನವನ್ನು ೬ ತಿಂಗಳವರೆಗೆ ತಪ್ಪದೇ ಮುಂದುವರಿಸಬೇಕು.
03:28 ಅವಶ್ಯವಿದ್ದಲ್ಲಿ ತಾಯಿಯಿಂದ ಒತ್ತಿತೆಗೆದ ಎದೆಹಾಲನ್ನು ಕುಡಿಸಬಹುದು.
03:34 ಪೂರಕ ಆಹಾರವನ್ನು ೬ ತಿಂಗಳುಗಳ ನಂತರ ಮುಂದುವರೆಸಬಹುದು.
03:40 ಸ್ತನ್ಯಪಾನವನ್ನು ೨ ವರ್ಷಗಳವರೆಗೆ ಮಾಡಿಸಬೇಕು .
03:46 ಸ್ತನ್ಯಪಾನ, ಒತ್ತಿತೆಗೆದ ಹಾಲು ಮತ್ತು ಪೂರಕ ಆಹಾರ ಅವಶ್ಯಕವಾಗಿವೆ.
03:54 ಅವುಗಳ ಕುರಿತು ಬೇರೆ ಟ್ಯುಟೊರಿಯಲ್ ಗಳಲ್ಲಿ ಚರ್ಚಿಸಲಾಗಿದೆ.
03:59 ದಯವಿಟ್ಟು ನಮ್ಮ ಜಾಲತಾಣದಲ್ಲಿರುವ health and nutrition ಸರಣಿಯನ್ನು ನೋಡಿ.
04:06 COVID-19 ಸಮಯದಲ್ಲಿ, ಶಿಶುಗಳಿಗೆ ಆರೋಗ್ಯಪೂರ್ಣವಾಗಿ ಸ್ತನ್ಯಪಾನ ಮಾಡಿಸಲು ಹೆಚ್ಚಿನ ಖಾಳಜಿ ತೆಗೆದುಕೊಳ್ಳಬೇಕಾಗುತ್ತದೆ.
04:13 ತಾಯಿಯು ಮಗುವನ್ನು ಮುಟ್ಟುವ ಮೊದಲು ಮತ್ತು ನಂತರ, ಅವಳ ಕೈಗಳನ್ನು ೨೦ ಸೆಕೆಂಡ್ ಗಳ ಕಾಲ ತೊಳೆದುಕೊಳ್ಳಬೇಕು.
04:21 ಅವಳು ಸ್ತನ್ಯಪಾನ ಮಾಡಿಸುವಾಗ ಅಥವಾ ಹಾಲನ್ನು ಒತ್ತಿ ತೆಗೆಯುವ ಮೊದಲು ಮತ್ತು ನಂತರ ಕೈಗಳನ್ನು ತೊಳೆದುಕೊಳ್ಳಬೇಕು.
04:28 ಅಲ್ಕೋಹಾಲ್ ಯುಕ್ತ ಹ್ಯಾಂಡ್-ರಬ್ ಅನ್ನು ಕೂಡಾ ಕೈಗೆ ಬಳಸಬಹುದು.
04:34 ಅವಳು COVID-19 ಶಂಕಿತೆ ಅಥವಾ ಸೋಂಕಿತೆಯಾಗಿದ್ದರೆ ವೈದ್ಯಕೀಯ ಮಾಸ್ಕ್ ಗಳು ಬೇಕು.
04:43 ಅವಳು ಸ್ತನ್ಯಪಾನ ಮಾಡಿಸುವಾಗ ಮತ್ತು
04:46 ಒತ್ತಿ ಹಾಲನ್ನು ತೆಗೆಯುವಾಗ ಮಾಸ್ಕ್ ಧರಿಸಬೇಕು.
04:49 ಮಾಸ್ಕ್ ಅನ್ನು ಹಾಳಾದಕೂಡಲೇ ಬದಲಿಸಬೇಕು.
04:55 ಬಳಸಿದ ಮಾಸ್ಕ್ ಅನ್ನು ಕೂಡಲೇ ಎಸೆಯಬೇಕು.
05:01 ಅದನ್ನು ಪುನಃ ಉಪಯೋಗಿಸಬಾರದು.
05:04 ತಾಯಿಯು ಮಾಸ್ಕ್ ನ ಮುಂಭಾಗವನ್ನು ಮುಟ್ಟುತ್ತಿರಬಾರದು .
05:09 ಅವಳು ಅದನ್ನು ಹಿಂಭಾಗದಿಂದ ತೆಗೆಯಬೇಕು.
05:13 ಕೆಲವೊಮ್ಮೆ, ವೈದ್ಯಕೀಯ ಮಾಸ್ಕ್ ಗಳು ಸಿಗುವದಿಲ್ಲ.
05:19 ಅಂತಹ ಸಂದರ್ಭದಲ್ಲಿ, ತಾಯಿಯು ಟಿಶ್ಶ್ಯೂವನ್ನು,
05:22 ಶುಭ್ರ ಬಟ್ಟೆಯನ್ನು ಅಥವಾ

ಕರವಸ್ತ್ರವನ್ನು ಬಳಸಬೇಕು.

05:27 ಅವಳು ಅವುಗಳಲ್ಲಿಯೇ ಸೀನಬೇಕು ಅಥವಾ ಕೆಮ್ಮಬೇಕು.
05:31 ಅವಳು ತಕ್ಷಣ ಅದನ್ನು ಕಸದತೊಟ್ಟಿಗೆ ಹಾಕಿ ಕೈಗಳನ್ನು ತೊಳೆದುಕೊಳ್ಳಬೇಕು.
05:38 ಟಿಶ್ಶ್ಯೂ ಅಥವಾ ಬಟ್ಟೆ,
05:40 ಅಥವಾ ಕರವಸ್ತ್ರಗಳನ್ನು ಆಗಾಗ ಬದಲಾಯಿಸಬೇಕು.
05:46 ವೈದ್ಯಕೀಯ ಮಾಸ್ಕ್ ಗಳು ದೊರೆಯದಿದ್ದರೆ, ಬಟ್ಟೆಯ ಮಾಸ್ಕ್ ಗಳನ್ನು ಕೂಡಾ ಬಳಸಬಹುದು.
05:53 ತಾಯಿಯು ಪ್ರತಿ ಬಾರಿ ಹಾಲುಣಿಸುವಾಗ ಸ್ತನವನ್ನು ತೊಳೆಯುವ ಅವಶ್ಯಕತೆಯಿಲ್ಲ.
05:58 ಅವಳು ಎದೆಭಾಗದ ಮೇಲೆ ಕೆಮ್ಮಿದಾಗ ಮಾತ್ರ ಅವುಗಳನ್ನು ತೊಳೆಯಬೇಕು.
06:04 ಅವಳು ಸಾಬೂನು ಮತ್ತು ಬೆಚ್ಚಗಿನ ನೀರಿನಿಂದ ೨೦ ಸೆಕೆಂಡುಗಳ ತನಕ ಅದನ್ನು ತೊಳೆಯಬೇಕು .
06:12 ಮಗುವಿನ ಖಾಳಜಿವಹಿಸುವವರು ಮಗುವನ್ನು ಮುಟ್ಟುವ ಮೊದಲು ಮತ್ತು ಆಮೇಲೆ ಅವರ ಕೈಗಳನ್ನು ತೊಳೆದುಕೊಳ್ಳಬೇಕು.
06:19 ಕೊಠಡಿಯ ಮೇಲ್ಮೈಯನ್ನು ಶುದ್ಧಗೊಳಿಸಿ ಸೋಂಕುರಹಿತವಾಗಿಸಬೇಕು.
06:26 ಕೆಲವು ಸೋಂಕಿತ ತಾಯಂದಿರು ಎದೆಹಾಲು ಕುಡಿಸಲು ಸಮರ್ಥರಾಗಿರುವದಿಲ್ಲ.
06:32 ಅಂತಹ ಸಂದರ್ಭದಲ್ಲಿ, ಶಿಶುವಿಗೆ ಒತ್ತಿ ತೆಗೆದ ಹಾಲನ್ನು ಕುಡಿಸಬೇಕು.
06:39 ದಾದಿ ಅಥವಾ ಕುಟುಂಬದ ಸದಸ್ಯರು ಈ ಹಾಲನ್ನು ಮಗುವಿಗೆ ಕುಡಿಸಬಹುದು.
06:45 ಹಾಲುಣಿಸುವವರು ಸೋಂಕಿತ ಜನರ ಜೊತೆ ಸಂಪರ್ಕದಲ್ಲಿರಬಾರದು.
06:51 ಮಗುವನ್ನು ಅಥವಾ ಹಾಲನ್ನು ಮುಟ್ಟುವ ಮೊದಲು ೨೦ ಸೆಕೆಂಡುಗಳ ಕಾಲ ಕೈಗಳನ್ನು ತೊಳೆಯಬೇಕು.
06:59 ಕೈ ತೊಳೆದ ನಂತರ ಅವರು ಮಾಸ್ಕ್ ಅನ್ನು ಧರಿಸಬೇಕು.
07:05 ಒತ್ತಿ ತೆಗೆದ ಹಾಲನ್ನು ಪಾಶ್ಚರೀಕರಣ ಮಾಡದೇ ಕುಡಿಸಬೇಕು.
07:11 ಒತ್ತಿ ತೆಗೆದ ಹಾಲನ್ನು ಸಂಗ್ರಹ ಮತ್ತು ಪಾತ್ರಾಂತರ ಮಾಡುವಾಗ ತುಂಬಾ ಖಾಳಜಿ ವಹಿಸಬೇಕು.
07:18 ತಾಯಿಯು ಚೇತರಿಸಿಕೊಂಡಾಗ ಪುನಃ ಸ್ತನ್ಯಪಾನಮಾಡಿಸುವದನ್ನು ಪ್ರಾರಂಭಿಸಬೇಕು.
07:24 ಕೆಲವು ಸೋಂಕಿತ ತಾಯಂದಿರು ಹಾಲನ್ನು ಒತ್ತಿ ತೆಗೆಯಲು ಸಮರ್ಥರಾಗಿರುವದಿಲ್ಲ.
07:29 ಇಂತಹ ಸಂದರ್ಭದಲ್ಲಿ, ಮಗುವನ್ನು ಪೊಷಿಸಲು ಬೇರೆ ವಿಧಾನವನ್ನು ಬಳಸಿ.
07:35 ಮನುಷ್ಯರ ಕ್ಷೀರದಾನ ಮಾಡುವ ಕೇಂದ್ರದಲ್ಲಿ ಮನುಷ್ಯರ ಹಾಲು ದೊರೆಯುವದೇ ಎಂದು ಪರೀಕ್ಷಿಸಿ.
07:41 ತಾಯಿಯು ಚೇತರಿಸಿಸ್ಕೊಳ್ಳುವವರೆಗೂ ದಾನಪಡೆದ ಹಾಲನ್ನು ಮಗುವಿಗೆ ಉಣಿಸಿ.
07:47 ಕ್ಷೀರದಾನ ಮಾಡುವವರು ಲಭ್ಯವಿರದಿದ್ದರೆ, ತಾಯಿಯು ಚೇತರಿಸಿಕೊಳ್ಳುವ ವರೆಗೂ ವೆಟ್-ನರ್ಸಿಂಗ್ ಅನ್ನು ಅನುಸರಿಸಿ.
07:55 ವೆಟ್-ನರ್ಸಿಂಗ್ ಅಂದರೆ, ಮಗುವಿನ ತಾಯಿಯಲ್ಲದ ಮಹಿಳೆಯನ್ನು ಹಾಲುಣಿಸಲು ಬಳಸುವದು.
08:03 ವೆಟ್-ನರ್ಸಿಂಗ್ ಸಾಧ್ಯವಿಲ್ಲದಿದ್ದರೆ, ಪ್ರಾಣಿಮೂಲದ ಹಾಲನ್ನು ಬಳಸಿ.
08:10 ಹಾಲುಣಿಸುವ ಮೊದಲು ಯಾವಾಗಲೂ ಪ್ರಾಣಿಮೂಲದ ಹಾಲನ್ನು ಕಾಯಿಸಿರಬೇಕು.
08:16 ದಯವಿಟ್ಟು ಈ ವಿಧಾನಗಳಿಗೆ ಆರೊಗ್ಯಸಲಹೆಗಾರರನ್ನು ಕೇಳಿ ತಿಳಿಯಿರಿ.
08:23 ಫೊರ್ಮ್ಯುಲಾ ಮಿಲ್ಕ್ ನ,
08:25 ಫೀಡಿಂಗ್ ಬೊಟಲ್ ನ,
08:27 ಪ್ಲ್ಯಾಸ್ಟಿಕ್, ರಬ್ಬರ್ ಅಥವಾ ಸಿಲಿಕೊನ್ ನಿಪ್ಪಲ್ ಗಳ ಉಪಯೋಗ ಬೇಡ.
08:32 ತಾಯಿಯು ಚೇತರಿಸಿಕೊಂಡಾಗ ಎದೆಹಾಲು ಕುಡಿಸಲು ಸಹಾಯ ಮಾಡಬೇಕು.
08:38 ಇನ್ನೊಂದು ಮುಖ್ಯವಾದ ಪ್ರಯೋಗವೆಂದರೆ ತಾಯಿ ಮತ್ತು ಮಗುವಿನ ನಡುವೆ ಚರ್ಮದ ಸಂಪರ್ಕ.
08:46 ತಾಯಿಯು COVID-19 ಸೋಂಕಿತೆಯಾದರೂ ಸಹ ಮಗು ಹುಟ್ಟಿದ ತಕ್ಷಣದಿಂದ ಇದನ್ನು ಪ್ರಾರಂಭಿಸಬೇಕು.
08:53 ಇದು ಸ್ತನ್ಯಪಾನ ಪ್ರಾರಂಭಿಸಲು ಸಹಾಯಕಾರಿಯಾಗಿದೆ.
08:58 ಹಗಲು ರಾತ್ರಿ ಕಾಂಗರೂ ಮದರ್ ಕೇರ್ ಅನ್ನು ಅನುಸರಿಸಬೇಕು.
09:04 ಸ್ತನ್ಯಪಾನ ಮತ್ತು ಚರ್ಮದಸಂಪರ್ಕ ಶಿಶುವಿನ ಮರಣದ ಅಪಾಯವನ್ನು ಕಡಿಮೆ ಮಾಡುತ್ತದೆ.
09:12 ಇದು ತಕ್ಷಣದ ಮತ್ತು ಜೀವನಪರ್ಯಂತದ ಆರೊಗ್ಯವನ್ನು ಮತ್ತು ಬೆಳವಣಿಗೆಯನ್ನು ಅನುಕೂಲಕರಗೊಳಿಸುತ್ತದೆ.
09:20 ಸ್ತನ್ಯಪಾನ ಮಾಡಿಸುವದರಿಂದ ತಾಯಿಯರ ಸ್ತನದ ಮತ್ತು ಅಂಡಾಶಯದ ಕ್ಯಾನ್ಸರ್ ಸಂಭವನೀಯತೆಯು ಕಡಿಮೆಯಾಗುತ್ತದೆ.
09:27 ಇವುಗಳು ಸೋಂಕುಗೊಳ್ಳುವ ಅಪಾಯಕ್ಕಿಂತ ಗಣನೀಯವಾಗಿ ಪ್ರಯೋಜನಕಾರಿಯಾಗಿವೆ.
09:34 ಕೊನೆಯದಾಗಿ, ತಾಯಿ ಮತ್ತು ಕುಟುಂಬ ಸದಸ್ಯರು, ಎಚ್ಚರಿಕೆಯ ವಿಚಾರಗಳ ಕುರಿತು ಸಮಾಲೋಚನೆ ಪಡೆಯಬೇಕು.
09:42 ಶಿಶುವಿನ ಎಚ್ಚರಿಕೆಯ ವಿಚಾರವಾಗಿ ಅವರು ತರಬೇತಿ ಪಡೆದಿರಬೇಕು.
09:48 ಅವರು ಶಿಶುವಿನಲ್ಲಿ ಯಾವುದೇ ಲಕ್ಷಣ ಕಂಡುಬಂದಲ್ಲಿ ವೈದ್ಯರ ಬಳಿ ಹೋಗಬೇಕು.
09:53 ಈ ಟ್ಯೂಟೊರಿಯಲ್ ನಲ್ಲಿ ಕೊಟ್ಟಿರುವ ಮಾಹಿತಿಗಳು, ಲಭ್ಯವಿರುವ ಸಾಕ್ಷ್ಯಗಳನ್ನು ಮಾತ್ರ ಅನುಸರಿಸಿವೆ.
10:01 ಹೊಸ ಪುರಾವೆಗಳು ಸಿಕ್ಕಾಗ, ಮೇಲಿನ ಕೆಲವು ಶಿಫಾರಸುಗಳು ಬದಲಾಗಬಹುದು.
10:08 ಈ ನಿಯಮಾವಳಿಗಳನ್ನು ಸರ್ಕಾರದ ಇತ್ತೀಚಿನ ನಿಯಮಾವಳಿಗಳಿಗೆ ಅನುಗುಣವಾಗಿ ಉಪಯೋಗಿಸಿ.
10:14 ನಾವು ಪಾಠದ ಕೊನೆಗೆ ಬಂದಿದ್ದೇವೆ. ಅನುವಾದ ಮತ್ತು ಧ್ವನಿ ಶ್ರೀಮತಿ ನಯನಾ ಭಟ್ಟ.

ಧನ್ಯವಾದಗಳು.

Contributors and Content Editors

NaveenBhat