Arduino/C2/Pulse-Width-Modulation/Kannada

From Script | Spoken-Tutorial
Revision as of 15:58, 30 June 2020 by Sandhya.np14 (Talk | contribs)

Jump to: navigation, search
Time Narration
00:01 Pulse Width Modulation ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು PWM (ಅಂದರೆ ಪಲ್ಸ್ ವಿಡ್ತ್ ಮಾಡ್ಯುಲೇಶನ್),
00:13 PWM ಡ್ಯೂಟಿ ಸೈಕಲ್,
00:16 PWM ಫ್ರೀಕ್ವೆನ್ಸಿ ಮತ್ತು

L293D ಮೋಟರ್ ಡ್ರೈವರ್ IC ಕುರಿತು ಕಲಿಯಲಿದ್ದೇವೆ.

00:24 ಈ ಟ್ಯುಟೋರಿಯಲ್ ಅನುಸರಿಸಲು ನೀವು ಎಲೆಕ್ಟ್ರಾನಿಕ್ಸ್ ಮತ್ತು C ಅಥವಾ C++ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ನ ಮೂಲಭೂತ ಜ್ಞಾನ ಹೊಂದಿರಬೇಕು.
00:35 ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು:

ಆರ್ಡುಯಿನೊ ಯು.ಎನ್.ಒ ಬೋರ್ಡ್,

00:40 ಉಬಂಟು ಲೀನಕ್ಸ್ 16.04 ಒ.ಎಸ್ ಮತ್ತು

Arduino IDE ಬಳಸುತ್ತಿದ್ದೇನೆ.

00:46 ನಮಗೆ ಈ ಕೆಳಗಿನ ಬಾಹ್ಯ ಘಟಕಗಳು ಸಹ ಬೇಕು:

ಬ್ರೆಡ್-ಬೋರ್ಡ್,

00:53 10K Ohm ಪೊಟೆಂಶಿಯೋಮೀಟರ್,

ಎಲ್.ಇ.ಡಿ,

00:58 220 ohm ರೆಸಿಸ್ಟರ್,
01:01 ಜಂಪರ್ ವೈರ್ ಗಳು,

ಪುಶ್ ಬಟನ್,

01:05 ಡಿ.ಸಿ ಮೋಟರ್
01:08 ಮತ್ತು L293D ಮೋಟರ್ ಡ್ರೈವರ್ IC ಬೇಕು.
01:14 PWM ಸಿಗ್ನಲ್ ಎನ್ನುವುದು ಸ್ಕ್ವೇರ್ ವೇವ್ ಸಿಗ್ನಲ್ ಆಗಿದ್ದು 1KHz ನಂತಹ ಅಧಿಕ ಫ್ರೀಕ್ವೆನ್ಸಿಯನ್ನು ಹೊಂದಿದೆ.
01:22 PWM ಒಂದು ತಂತ್ರವಾಗಿದ್ದು, ಇದರ ಮೂಲ ಪಲ್ಸ್ ನ ವಿಡ್ತ್ ಅನ್ನು ವ್ಯತ್ಯಯಗೊಳಿಸಲಾಗುತ್ತದೆ.
01:28 ತರಂಗ (wave) ಗಳ ಫ್ರೀಕ್ವೆನ್ಸಿಯನ್ನು ಸ್ಥಿರವಾಗಿರಿಸಿ ಇದನ್ನು ಮಾಡಲಾಗುತ್ತದೆ.
01:33 PWM ಸಿಗ್ನಲ್ ಎರಡು ಮುಖ್ಯ ಗುಣಲಕ್ಷಣಗಳನ್ನು ಹೊಂದಿದ್ದು ಇದು ಇದರ ವರ್ತನೆಯನ್ನು ನಿರೂಪಿಸುತ್ತದೆ.
01:40 ಅವೆಂದರೆ, ಡ್ಯೂಟಿ ಸೈಕಲ್ ಮತ್ತು ಫ್ರೀಕ್ವೆನ್ಸಿ.
01:44 ಇದು ನಿರ್ದಿಷ್ಟ ಸಮಯಕ್ಕೆ ಡಿಜಿಟಲ್ ಸಿಗ್ನಲ್ ಒಂದು ಆನ್ ಇರುವಾಗ ಉಂಟಾಗುವ ಸಮಯದ ಶೇಕಡಾ ಆಗಿದೆ.
01:50 ಡ್ಯೂಟಿ ಸೈಕಲ್ 0% ದಿಂದ 100% ತನಕ ವ್ಯತ್ಯಯವಾಗಬಹುದು.
01:55 ಡ್ಯೂಟಿ ಸೈಕಲ್ ನ ಶೇಕಡಾವನ್ನು ಲೆಕ್ಕ ಹಾಕುವ ಸೂತ್ರವನ್ನು ಇಲ್ಲಿ ತೋರಿಸಲಾಗಿದೆ.
02:01 ಸಿಗ್ನಲ್ ʻಹೈʼ ಇರುವಾಗ tON ಎನ್ನುವುದು ಸಮಯದ ಅವಧಿಗೆ ಸಮನಾಗಿರುತ್ತದೆ.
02:06 ಸಿಗ್ನಲ್ ʻಲೋʼ ಇರುವಾಗ tOFF ಎನ್ನುವುದು ಸಮಯದ ಅವಧಿಗೆ ಸಮನಾಗಿರುತ್ತದೆ.
02:11 ಟೈಂ ಪೀರಿಯೆಡ್ ಎಂದರೆ tON + tOFF.

ಅಂದರೆ ಇದು PWM ಸಿಗ್ನಲ್ ನ ಆನ್ ಸಮಯ ಮತ್ತು ಆಫ್ ಸಮಯದ ಮೊತ್ತವಾಗಿದೆ.

02:24 ಎಷ್ಟು ವೇಗವಾಗಿ PWM ಸೈಕಲ್ ಅನ್ನು ಪೂರ್ಣಗೊಳಿಸುತ್ತವೆ ಎಂಬುದನ್ನು ಫ್ರೀಕ್ವೆನ್ಸಿಯು ನಿರ್ಧರಿಸುತ್ತದೆ.
02:29 ಅಂದರೆ, ಇದು ಎಷ್ಟು ವೇಗವಾಗಿ ಇದು ʻಹೈʼ ಯಿಂದ ʻಲೋʼ ಸ್ಥಿತಿಗೆ ವರ್ಗಾವಣೆಗೊಳ್ಳುತ್ತದೆ ಎಂದು.
02:34 ಡ್ಯೂಟಿ ಸೈಕಲ್ ಅನ್ನು ವ್ಯತ್ಯಯಗೊಳಿಸಿ ನಾವು ಒಂದು ಸರಳ ಪ್ರಯೋಗವನ್ನು ಮಾಡಲಿದ್ದೇವೆ.
02:39 ಇದು ಎಲ್.ಇ.ಡಿ ಯ ಕಾಂತಿಯನ್ನು ನಿಯಂತ್ರಿಸುತ್ತದೆ.
02:43 ಆರ್ಡುಯಿನೊ ಯು.ಎನ್.ಒ 6 PWM ಚಾನೆಲ್ ಗಳನ್ನು ಹೊಂದಿದೆ.
02:48 ಆರ್ಡುಯಿನೊ ಯು.ಎನ್.ಒ ದಲ್ಲಿ ಇರುವ 3, 5, 6, 9, 10, 11 ಪಿನ್ ಗಳು PWM ಚಾನೆಲ್ ಗಳಾಗಿವೆ.
02:58 PWM ಚಾನೆಲ್ ಗಳನ್ನು ಟಿಲ್ಡಾ (tilde) ಸಂಕೇತದಿಂದ ಸೂಚಿಸಲಾಗುತ್ತದೆ.
03:02 ನಾವೀಗ ಸರ್ಕಿಟ್ ಸಂಪರ್ಕವನ್ನು ನೋಡೋಣ.
03:05 ಎಲ್.ಇ.ಡಿ ಯ ಆನೋಡ್ ಲೆಗ್ ಅನ್ನು 220 ohm ರೆಸಿಸ್ಟರ್ ಮೂಲಕ ಆರ್ಡುಯಿನೊ ವಿನ ಪಿನ್ 9ಕ್ಕೆ ಸಂಪರ್ಕಿಸಿ.
03:13 ಎಲ್.ಇ.ಡಿ ಯ ಕ್ಯಾಥೋಡ್ ಲೆಗ್ ಅನ್ನು ಗ್ರೌಂಡ್ ಗೆ ಸಂಪರ್ಕಿಸಿ.
03:17 ಇದು ಸಂಪರ್ಕದ ಲೈವ್ ಸೆಟಪ್ ಆಗಿದೆ.
03:20 ಚಿತ್ರದಲ್ಲಿ ತೋರಿಸಿರುವಂತೆ ಸಂಪರ್ಕವನ್ನು ಪೂರ್ಣಗೊಳಿಸಿ.
03:23 ನಾವೀಗ Arduino IDE ಯನ್ನು ತೆರೆಯೋಣ.
03:32 ಇಲ್ಲಿರುವಂತೆ ಕೋಡ್ ಅನ್ನು ಟೈಪ್ ಮಾಡಿ.


03:35 ನಾವು PWM ಪಿನ್ 9 ಅನ್ನು ವೇರಿಯೇಬಲ್ LED_Pin ಗೆ ಅಸೈನ್ ಮಾಡಿದ್ದೇವೆ.
03:42 ಎಲ್.ಇ.ಡಿ ಯು ಟರ್ನ್ ಆನ್ ಆಗಲು ನಾವು duty_cycle_value ಅನ್ನು 1 ಆಗಿ ಇನಿಶಿಯಲೈಸ್ ಮಾಡಿದ್ದೇವೆ.
03:51 ವೋಯ್ಡ್ ಸೆಟಪ್ ಒಳಗೆ, ನಾವು pinMode ಫಂಕ್ಷನ್ ಬರೆಯಲಿದ್ದೇವೆ.
03:56 ಆರ್ಡುಯಿನೊವಿನ ಪಿನ್ 9 ಅನ್ನು ನಾವು OUTPUT ಆಗಿ ಘೋಷಿಸಿದ್ದೇವೆ.
04:01 void loop() ಫಂಕ್ಷನ್ ಒಳಗೆ ನಾವು ಈ ಕೋಡ್ ಅನ್ನು ಬರೆಯಲಿದ್ದೇವೆ.

ನಾನೀಗ ಕೋಡ್ ಅನ್ನು ವಿವರಿಸುತ್ತೇನೆ.

04:08 duty_cycle_value 255ಕ್ಕಿಂತ ಕಡಿಮೆ ಇರುವ ತನಕ While ಲೂಪ್, ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡುತ್ತದೆ.
04:17 PWM ಸಿಗ್ನಲ್ ಅನ್ನು ಜನರೇಟ್ ಮಾಡಲು analogWrite() ಫಂಕ್ಷನ್ ಬಳಸಲಾಗುತ್ತದೆ.
04:22 ನಾವು ಎರಡು ಪ್ಯಾರಾಮೀಟರ್ ಗಳನ್ನು ಪಾಸ್ ಮಾಡುತ್ತೇವೆ. ಅವೆಂದರೆ PWM ಪಿನ್ ಸಂಖ್ಯೆ ಮತ್ತು ಡ್ಯೂಟಿ ಸೈಕಲ್ ಮೌಲ್ಯ.
04:30 ಡ್ಯೂಟಿ ಸೈಕಲ್ ಮೌಲ್ಯವು 0 ಯಿಂದ 255 ನಡುವೆ, ಅಂದರೆ 0 ವೋಲ್ಟ್ಸ್ ಮತ್ತು 5 ವೋಲ್ಟ್ಸ್ ನಡುವೆ ಇರಬೇಕು.
04:40 ನಾವು 3000 ಮಿಲಿಸೆಕೆಂಡುಗಳ, ಅಂದರೆ 3 ಸೆಕೆಂಡುಗಳ ʻಡಿಲೇʼ ಯನ್ನು ಇಡುತ್ತೇವೆ.
04:46 ನಿಮ್ಮ ಪ್ರೋಗ್ರಾಂ ದೃಢೀಕರಿಸಲು compile ಬಟನ್ ಮೇಲೆ ಕ್ಲಿಕ್ ಮಾಡಿ.
04:51 ಪ್ರಸ್ತುತ ಪ್ರೋಗ್ರಾಂ ಅನ್ನು ಸೇವ್ ಮಾಡಲು ಪಾಪ್ ಅಪ್ ವಿಂಡೋ ಕಾಣಿಸಿಕೊಳ್ಳುತ್ತದೆ.
04:55 ಈ ಪ್ರೋಗ್ರಾಂ ಅನ್ನು LED_Brightness ಆಗಿ ಸೇವ್ ಮಾಡೋಣ ಮತ್ತು Save ಬಟನ್ ಮೇಲೆ ಕ್ಲಿಕ್ ಮಾಡೋಣ.
05:03 ಈಗ ಆರ್ಡುಯಿನೊ ಬೋರ್ಡ್ ನಲ್ಲಿ ಪ್ರಸ್ತುತ ಪ್ರೋಗ್ರಾಂ ಅನ್ನು ಅಪ್ಲೋಡ್ ಮಾಡಲು upload ಬಟನ್ ಮೇಲೆ ಕ್ಲಿಕ್ ಮಾಡೋಣ.
05:09 ಎಲ್.ಇ.ಡಿ ಯ ಕಾಂತಿ ಮೆಲ್ಲನೆ ಹೆಚ್ಚುತ್ತಿರುವುದನ್ನು ನಾವು ನೋಡಬಹುದು.
05:15 ನಂತರ ನಾವು ಡಿ.ಸಿ ಮೋಟರ್ ನ ವೇಗ ಮತ್ತು ದಿಕ್ಕನ್ನು ನಿಯಂತ್ರಿಸಲು ಪ್ರಯೋಗ ಮಾಡೋಣ.
05:22 ಇದು L293D ಮೋಟರ್ ಡ್ರೈವರ್ IC ಯ ಪಿನೌಟ್ ಡಯಗ್ರಾಂ ಆಗಿದೆ.
05:28 ಮೋಟರ್ ನ ವೇಗವನ್ನು ICEN 1 ಮತ್ತು EN 2 ನಿಯಂತ್ರಿಸುತ್ತವೆ.
05:36 ಮೋಟರ್ ನ ದಿಕ್ಕನ್ನು ICIN1, IN2, IN3, IN4 ನಿಯಂತ್ರಿಸುತ್ತವೆ.
05:45 ನಾವು IC ಯನ್ನು ಬಳಸಿ ಏಕಕಾಲದಲ್ಲಿ ಎರಡು ಮೋಟರ್ ಗಳನ್ನು ನಿಯಂತ್ರಿಸಬಹುದು.
05:50 ನಮ್ಮ ಪ್ರಯೋಗದಲ್ಲಿ, ನಾವು ಒಂದು ಡಿ.ಸಿ ಮೋಟರ್ ಅನ್ನು ಮಾತ್ರ ಸಂಪರ್ಕಿಸಲಿದ್ದೇವೆ.
05:55 ಈಗ ನಾವು ಸರ್ಕಿಟ್ ಸಂಪರ್ಕವನ್ನು ನೋಡೋಣ.
05:58 ಡ್ರೈವರ್ IC ಯ ಪಿನ್ 1, ಪಿನ್ 8 ಮತ್ತು ಪಿನ್ 16 ಗಳನ್ನು 5V ಗೆ ಸಂಪರ್ಕಿಸಲಾಗಿದೆ.
06:05 ಡ್ರೈವರ್ IC ಯ ಪಿನ್ 4 ಮತ್ತು ಪಿನ್ 5 ನ್ನು ಗ್ರೌಂಡ್ ಗೆ ಸಂಪರ್ಕಿಸಲಾಗಿದೆ.
06:11 ಡ್ರೈವರ್ IC ಯ ಪಿನ್ 2 ಮತ್ತು ಪಿನ್ 7 ಅನ್ನು ಆರ್ಡುಯಿನೊವಿನ ಪಿನ್ 11 ಮತ್ತು ಪಿನ್ 10ಕ್ಕೆ ಸಂಪರ್ಕಿಸಲಾಗಿದೆ.
06:20 ಎರಡು ಪುಶ್-ಬಟನ್ ಗಳನ್ನು ಆರ್ಡುಯಿನೊವಿನ ಪಿನ್ 12 ಮತ್ತು ಪಿನ್ 13ಕ್ಕೆ ಸಂಪರ್ಕಿಸಲಾಗಿದೆ.
06:27 ಈ ಪುಶ್ ಬಟನ್ ಗಳನ್ನು ಡಿ.ಸಿ. ಮೋಟರ್ ನ ದಿಕ್ಕನ್ನು ನಿಯಂತ್ರಿಸಲು ಬಳಸಲಾಗುತ್ತದೆ.
06:33 ಡಿ.ಸಿ. ಮೋಟರ್ ನ ವೇಗವನ್ನು ನಿಯಂತ್ರಿಸಲು, 10 K Ohm ಪೊಟೆಂಶಿಯೋಮೀಟರ್ ಅನ್ನು ಜೋಡಿಸಲಾಗಿದೆ.
06:39 ಪೊಟೆಂಶಿಯೋಮೀಟರ್ ನ ನಡುವಿನ ಪಿನ್ ಅನ್ನು ಅನಲಾಗ್ ಪಿನ್ A0 ಗೆ ಸಂಪರ್ಕಿಸಲಾಗಿದೆ.
06:45 ಡ್ರೈವರ್ IC ಯ ಪಿನ್ 3 ಮತ್ತು ಪಿನ್ 6 ಅನ್ನು ಡಿ.ಸಿ ಮೋಟರ್ ಗೆ ಸಂಪರ್ಕಿಸಲಾಗಿದೆ.
06:51 ಚಿತ್ರದಲ್ಲಿ ತೋರಿಸಿರುವಂತೆ ಸಂಪರ್ಕ ಮಾಡಿ.
06:55 ಚಿತ್ರದಲ್ಲಿ ತೋರಿಸಿರುವಂತೆ, ಇದು ಸಂಪರ್ಕದ ಲೈವ್ ಸೆಟಪ್ ಆಗಿದೆ.
07:00 ಮೋಟರ್ ನ ಶಾಫ್ಟ್ ಮೇಲೆ ನಾನು ಚಕ್ರವನ್ನು ಅಳವಡಿಸಿದ್ದೇನೆ.
07:04 ಮೋಟರ್ ಸುತ್ತುವುದನ್ನು ಮತ್ತು ಅದರ ವ್ಯತ್ಯಯವಾಗುವ ವೇಗವನ್ನು ಸ್ಪಷ್ಟವಾಗಿ ನೋಡಲು ಇದು ಸಹಕರಿಸುತ್ತದೆ.
07:10 ಈ ಸರ್ಕಿಟ್ ಕೆಲಸ ಮಾಡಲು ನಾವು ಪ್ರೋಗ್ರಾಂ ಬರೆಯೋಣ.
07:14 ನಾವೀಗ Arduino IDE ಗೆ ಮರಳೋಣ.
07:18 ಇಲ್ಲಿ ತೋರಿಸಿರುವಂತೆ ಕೋಡ್ ಅನ್ನು ಟೈಪ್ ಮಾಡಿ.

ಆರ್ಡುಯಿನೊ ಮತ್ತು ಡ್ರೈವರ್ IC ನಡುವೆ ನಾವು ಸಂಪರ್ಕವನ್ನು ಇನಿಶಿಯಲೈಸ್ ಮಾಡಿದ್ದೇವೆ.

07:28 ಪೊಟೆಂಶಿಯೋಮೀಟರ್ ಪಿನ್ ಅನ್ನು ಅನಲಾಗ್ ಪಿನ್ A0 ಗೆ ಸಂಪರ್ಕಿಸಲಾಗಿದೆ.
07:33 ಆರ್ಡುಯಿನೊವಿನ ಪಿನ್ 13ಕ್ಕೆ ಸಂಪರ್ಕಿಸಿದ ಪುಶ್ ಬಟನ್ ಗೆ fwdbuttonPin ಎನ್ನುವುದು ವೇರಿಯೇಬಲ್ ಆಗಿದೆ.
07:40 ಆರ್ಡುಯಿನೊವಿನ ಪಿನ್ 12ಕ್ಕೆ ಸಂಪರ್ಕಿಸಿದ ಪುಶ್ ಬಟನ್ ಗೆ bckbuttonPin ಎನ್ನುವುದು ವೇರಿಯೇಬಲ್ ಆಗಿದೆ.
07:47 ICpin2 ಮತ್ತು ICpin7 ಗಳು ವೇರಿಯೇಬಲ್ ಗಳಾಗಿದ್ದು, ಇವು IC ಯ ಪಿನ್ 2 ಮತ್ತು ಪಿನ್ 7 ಅನ್ನು ಸೂಚಿಸುತ್ತವೆ.
07:57 ಇವುಗಳನ್ನು ಕ್ರಮವಾಗಿ ಆರ್ಡುಯಿನೊವಿನ ಪಿನ್ 11 ಮತ್ತು ಪಿನ್ 10ಕ್ಕೆ ಸಂಪರ್ಕಿಸಲಾಗಿದೆ.
08:04 ಪೊಟೆಂಶಿಯೋಮೀಟರ್, ಮೋಟರ್ ಮತ್ತು ಪುಶ್ ಬಟನ್ ಗಳು ʻಲೋʼ ಸ್ಥಿತಿಯಲ್ಲಿವೆ ಎಂದು ನಾವು ಮೊದಲಿಗೆ ಖಚಿತಪಡಿಸೋಣ.

ಇದಕ್ಕಾಗಿ ನಾವು ಇದನ್ನು 0 ಗೆ ಇನಿಶಿಯಲೈಸ್ ಮಾಡಿದ್ದೇವೆ.

08:15 void setup() ಫಂಕ್ಷನ್ ನಲ್ಲಿ, ನಾವು ಈ ಕೋಡ್ ಬರೆಯಲಿದ್ದೇವೆ.
08:20 pinMode ಫಂಕ್ಷನ್, ಪಿನ್ ಗಳನ್ನು INPUT ಅಥವಾ OUTPUT ಆಗಿ ನಿರೂಪಿಸುತ್ತದೆ.
08:25 fwdbuttonPin ಮತ್ತು bckbuttonPin ಗಳನ್ನು INPUT_PULLUP ಮೋಡ್ ಗೆ ಸೆಟ್ ಮಾಡಲಾಗುತ್ತದೆ.
08:32 ಈ ಮೋಡ್ ನಲ್ಲಿ ನಾವು ಆರ್ಡುಯಿನೊವಿನ ಆಂತರಿಕ ಪುಲ್-ಅಪ್ ರೆಸಿಸ್ಟರ್ ಗಳನ್ನು ಬಳಸುತ್ತೇವೆ.
08:38 INPUT_PULLUP ಮೋಡ್ ಕುರಿತು ತಿಳಿದುಕೊಳ್ಳಲು, ಕೈಪಿಡಿಯನ್ನು ನೋಡಿ.
08:44 Arduino IDE ಯಲ್ಲಿ Help ಮೆನುವಿನ ಮೇಲೆ ಕ್ಲಿಕ್ ಮಾಡಿ.

ನಂತರ Reference ಮೇಲೆ ಕ್ಲಿಕ್ ಮಾಡಿ.

08:50 ಇದು ನಿಮ್ಮ ಬ್ರೌಸರ್ ನಲ್ಲಿ ಆಫ್ಲೈನ್ ಪೇಜ್ ಅನ್ನು ತೆರೆಯುತ್ತದೆ.

ಕೆಳಗೆ ಸ್ಕ್ರಾಲ್ ಮಾಡಿ.

08:55 INPUT_PULLUP ಮೇಲೆ ಕ್ಲಿಕ್ ಮಾಡಿ.
09:00 Arduino IDE ಗೆ ಮರಳಿ.
09:03 ಮೋಟರ್ ಅನ್ನು ಡ್ರೈವ್ ಮಾಡಲು ICpin2 ಮತ್ತು ICpin7 ಗಳನ್ನು OUTPUT ಮೋಡ್ ಗೆ ಹೊಂದಿಸಲಾಗುತ್ತದೆ.
09:10 ನಂತರ ನಾವು void loop() ಗಾಗಿ ಕೋಡ್ ಅನ್ನು ಬರೆಯಲಿದ್ದೇವೆ.
09:14 analogRead ಕಮಾಂಡ್, ಪೊಟೆಂಶಿಯೋಮೀಟರ್ ನಿಂದ ಅನಲಾಗ್ ಮೌಲ್ಯವನ್ನು ತೋರಿಸಲಿದೆ.
09:20 ಈ ಮೌಲ್ಯವನ್ನು ಅನಲಾಗ್ ಪಿನ್ A0 ಗೆ ನೀಡಲಾಗುತ್ತದೆ.
09:24 ಪೊಟೆಂಶಿಯೋಮೀಟರ್ ನ ಮೌಲ್ಯವನ್ನು ಆಧರಿಸಿ ಮೋಟರ್ ನ ವೇಗ ಬದಲಾಗುತ್ತದೆ.
09:30 map ಕಮಾಂಡ್, ಅನಲಾಗ್ ಮೌಲ್ಯವನ್ನು ಡಿಜಿಟಲ್ ಗೆ ಪರಿವರ್ತಿಸುತ್ತದೆ.
09:35 ಪುಶ್ ಬಟನ್ ಒತ್ತಿದಾಗ, fwdbuttonState ಮತ್ತು bckbuttonState, ಸಿಗ್ನಲ್ ಅನ್ನು ಬರಮಾಡುತ್ತದೆ.
09:43 ಪಿನ್ 12 ಅಥವಾ ಪಿನ್ 13ಕ್ಕೆ ಸಂಪರ್ಕಿಸಿದ ಪುಶ್ ಬಟನ್ ಅನ್ನು ಒತ್ತಲಾಗಿದೆಯೇ ಎಂಬುದನ್ನು IF ಕಮಾಂಡ್ ಪರಿಶಿಲಿಸುತ್ತದೆ.
09:50 ಮೋಟರ್ ಪ್ರದಕ್ಷಿಣಾಕಾರವಾಗಿ ಅಥವಾ ಅಪ್ರದಕ್ಷಿಣಾಕಾರವಾಗಿ ತಿರುಗಲು ಇದು ಸಹಕರಿಸುತ್ತದೆ.
09:56 ಇವೆರಡರಲ್ಲಿ ನಾವು ಯಾವುದೇ ಬಟನ್ ಒತ್ತದಿದ್ದರೆ…
10:00 ಮೋಟರ್ ʻಆಫ್ʼ ಸ್ಥಿತಿಯಲ್ಲಿದೆ ಎಂಬುದನ್ನು else ಕಮಾಂಡ್ ಖಚಿತಪಡಿಸುತ್ತದೆ.
10:13 ಪ್ರೋಗ್ರಾಂ ಅನ್ನು ದೃಢೀಕರಿಸಲು compile ಬಟನ್ ಮೇಲೆ ಕ್ಲಿಕ್ ಮಾಡಿ.
10:17 ನಾವೀಗ ಪ್ರೋಗ್ರಾಂ ಅನ್ನು PWM_Motor ಆಗಿ ಸೇವ್ ಮಾಡೋಣ Save ಮೇಲೆ ಕ್ಲಿಕ್ ಮಾಡೋಣ.
10:25 ಆರ್ಡುಯಿನೊವಿಗೆ ಪ್ರಸ್ತುತ ಪ್ರೋಗ್ರಾಂ ಅನ್ನು ಅಪ್ಲೋಡ್ ಮಾಡಲು upload ಬಟನ್ ಮೇಲೆ ಕ್ಲಿಕ್ ಮಾಡಿ.
10:31 ನಾವೀಗ ಮೇಲಿನ ಪ್ರೋಗ್ರಾಂ ನ ಔಟ್ಪುಟ್ ನೋಡೋಣ.
10:35 ಪಿನ್ 13 ಕ್ಕೆ ಸಂಪರ್ಕಿಸಲು ನಾನು ಪುಶ್ ಬಟನ್ ಒತ್ತುತ್ತೇನೆ.
10:39 ಪ್ರದಕ್ಷಿಣಾಕಾರದಲ್ಲಿ ಮೋಟರ್ ತಿರುಗುವುದನ್ನು ನಾವು ನೋಡಬಹುದು.
10:43 ನಾನೀಗ ಪುಶ್ ಬಟನ್ ಅನ್ನು ರಿಲೀಸ್ ಮಾಡುತ್ತೇನೆ.
10:47 ಮೋಟರ್ ತಿರುಗುವುದನ್ನು ನಿಲ್ಲಿಸುತ್ತದೆ ಮತ್ತು ಅದು ʻಆಫ್ʼ ಸ್ಥಿತಿಯಲ್ಲಿರುತ್ತದೆ.
10:52 ಈಗ ಮತ್ತೊಮ್ಮೆ, ಪಿನ್ 12ಕ್ಕೆ ಸಂಪರ್ಕಿಸಲು ನಾನು ಪುಶ್ ಬಟನ್ ಒತ್ತುತ್ತೇನೆ.
10:57 ಮೋಟರ್ ಅಪ್ರದಕ್ಷಿಣಾಕಾರವಾಗಿ ತಿರುಗುವುದನ್ನು ನಾವು ನೋಡಬಹುದು.
11:02 A0 ಗೆ ಸಂಪರ್ಕಿಸಿರುವ ಪೊಟೆಂಶಿಯೋಮೀಟರ್ ಅನ್ನು ಹೊಂದಾಣಿಕೆ ಮಾಡುವ ಮೂಲಕ ನಾವು ಮೋಟರ್ ನ ವೇಗವನ್ನು ಬದಲಾಯಿಸಬಹುದು.
11:14 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ತಲುಪಿದ್ದೇವೆ. ನಾವೀಗ ಸಂಕ್ಷೇಪಿಸೋಣ.
11:20 ಈ ಟ್ಯುಟೋರಿಯಲ್ ನಲ್ಲಿ ನಾವು:

ಪಲ್ಸ್ ವಿಡ್ತ್ ಮಾಡ್ಯುಲೇಶನ್,

11:26 PWM ಡ್ಯೂಟಿ ಸೈಕಲ್,
11:29 PWM ಫ್ರೀಕ್ವೆನ್ಸಿ ಮತ್ತು ಡಿ.ಸಿ ಮೋಟರ್ ನ ವೇಗ ಮತ್ತು ದಿಕ್ಕನ್ನು ನಿಯಂತ್ರಿಸುವುದನ್ನು ಕಲಿತೆವು.
11:38 ಅಸೈನ್ಮೆಂಟ್ ಆಗಿ:

ಮೇಲಿನ ಸಂಪರ್ಕದಲ್ಲಿ, ಎಲ್.ಇ.ಡಿ ಗೆ ಬದಲಾಗಿ ಬಝರ್ ಸಂಪರ್ಕಿಸಿ.

11:45 ಇದೇ ಪ್ರೋಗ್ರಾಂ ಅನ್ನು ಅಪ್ಲೋಡ್ ಮಾಡಿ ಮತ್ತು ಔಟ್ಪುಟ್ ಪರೀಕ್ಷಿಸಿ.
11:49 ನೀವು ವಿವಿಧ ಫ್ರೀಕ್ವೆನ್ಸಿಗಳ ಶಬ್ದವನ್ನು ಕೇಳಬಹುದು.
11:53 ಅಸೈನ್ಮೆಂಟ್ ನ ಔಟ್ಪುಟ್ ಇಲ್ಲಿದೆ.
12:01 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ವಿವರಿಸುತ್ತದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ.
12:09 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.
12:19 ನಿಮ್ಮ ಟೈಮ್ಡ್ ಕ್ವೆರಿಯನ್ನು ಈ ಫೋರಂ ನಲ್ಲಿ ಪೋಸ್ಟ್ ಮಾಡಿ.
12:23 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ.

ಈ ಲಿಂಕ್ ನಲ್ಲಿ ಈ ಮಿಶನ್ ಕುರಿತ ಹೆಚ್ಚಿನ ಮಾಹಿತಿ ಲಭ್ಯ.

12.29 ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Melkamiyar, NaveenBhat, Sandhya.np14