Scilab/C2/Installing/Kannada

From Script | Spoken-Tutorial
Revision as of 22:03, 19 August 2017 by NaveenBhat (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 Installation of Scilab on Windows operating system ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ನಾನು windows operating system ನಲ್ಲಿ Scilab ಆವೃತ್ತಿ 5.2 ಅನ್ನು ಇನ್ಸ್ಟಾಲ್ ಮಾಡುತ್ತೇನೆ.
00:13 ಈ ವಿಧಾನವು ಸೈಲ್ಯಾಬ್ ನ ಎಲ್ಲಾ ಆವೃತ್ತಿಗಳಿಗೂ ಮತ್ತು ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ನ ಎಲ್ಲ ಆವೃತ್ತಿಗಳಿಗೂ ಅನ್ವಯವಾಗುತ್ತದೆ.
00:20 ನೀವು ಸೈಲ್ಯಾಬ್ ಅನ್ನು scilab.org ವೆಬ್ಸೈಟ್ ನಿಂದ ಡೌನ್ಲೋಡ್ ಮಾಡಬಹುದು.
00:25 Products ಗೆ ಹೋಗಿ Download ಅನ್ನು ಆಯ್ಕೆಮಾಡಿ ಮತ್ತು ಅದನ್ನು ಒತ್ತಿ.
00:31 ಕೆಳಕ್ಕೆ ಸ್ಕ್ರೋಲ್ ಮಾಡಿ Windows ಸೆಕ್ಷನ್ ನಡಿಯಲ್ಲಿ scilab 5.2 ಅನ್ನು ಒತ್ತಿ.
00:41 ಇದು exe ಫೈಲ್ ಅನ್ನು ಡೌನ್ಲೋಡ್ ಮಾಡಲು ಡಯಲಾಗ್ ಅನ್ನು ತೆರೆಯುತ್ತದೆ.
00:45 Save File ನ ಮೇಲೆ ಕ್ಲಿಕ್ ಮಾಡಿ, ಡೌನ್ಲೋಡ್ ಪ್ರಾರಂಭವಾಗುತ್ತದೆ.
00:50 ಇದು ಕೆಲವು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ನಾನು ಇದನ್ನು ಮಿನಿಮೈಜ್ ಮಾಡುತ್ತೇನೆ.
00:54 ಬ್ರೌಸರ್ ಅನ್ನು ಮಿನಿಮೈಜ್ ಮಾಡುತ್ತೇನೆ.
00:58 ಡೌನ್-ಲೋಡ್ ಪೇಜ್ ಗೆ ನೇರ ಲಿಂಕ್, ಇಲ್ಲಿ ತೋರಿಸಿದಂತೆ ಇರುತ್ತದೆ.
01:03 ಈ ಕ್ರಿಯೆಯನ್ನು ಪ್ರಾರಂಭಿಸುವ ಮೊದಲು, ನಿಮ್ಮ ಕಂಪ್ಯೂಟರ್ ಇಂಟರ್ನೆಟ್ ಸಂಪರ್ಕವನ್ನು ಹೊಂದಿದೆಯೇ ಎಂದು ಖಚಿತಪಡಿಸಿಕೊಳ್ಳಿ.
01:10 Intel Math Kernal Library ಯನ್ನು ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡುವುದು ಅವಶ್ಯಕವಾಗಿದೆ.
01:16 ನಾನು ಇದನ್ನು ಮಿನಿಮೈಜ್ ಮಾಡುತ್ತೇನೆ.
01:18 ಇನ್ಸ್ಟಾಲ್ ಮಾಡುವ ಕ್ರಿಯೆಯನ್ನು ಪ್ರಾರಂಭಿಸಲು, scilab Setup ಫೈಲ್ ಅನ್ನು ಡಬಲ್ ಕ್ಲಿಕ್ ಮಾಡಿ.
01:25 Run ಮೇಲೆ ಒತ್ತಿ.
01:28 Select set up language ಅನ್ನು English ಎಂದು ಆಯ್ಕೆಮಾಡಿ. OK ಯನ್ನು ಒತ್ತಿ.
01:33 ಇದು Scilab Setup Wizard ಅನ್ನು ಪ್ರಾರಂಭಿಸುತ್ತದೆ.
01:37 ಮುಂದುವರೆಯಲು Next ಅನ್ನು ಒತ್ತಿ.
01:39 ಲೈಸೆನ್ಸ್ ಅಗ್ರಿಮೆಂಟ್ ಅನ್ನು ಒಪ್ಪಿಕೊಳ್ಳಿ, Next ಅನ್ನು ಒತ್ತಿ.
01:42 ನಿಮ್ಮ ಕಂಪ್ಯೂಟರ್ ನಲ್ಲಿ ಸೈಲ್ಯಾಬ್ ಅನ್ನು ಇನ್ಸ್ಟಾಲ್ ಮಾಡಲು ಡೆಸ್ಟಿನೇಷನ್ ಫೋಲ್ಡರ್ ಅನ್ನು ಆಯ್ಕೆಮಾಡಿಕೊಳ್ಳಿ.
01:47 Next ಅನ್ನು ಕ್ಲಿಕ್ ಮಾಡಿ. Full Installation ಗೆ ಹೋಗಿ.
01:50 Next ಅನ್ನು ಒತ್ತಿ.
01:52 Next.. Next.
01:55 ಇನ್ಸ್ಟಾಲೇಷನ್ ಪ್ರಾರಂಭವಾಗಲು Install ಅನ್ನು ಒತ್ತಿ.
01:58 ಇಂಟರ್ನೆಟ್ ಸಂಪರ್ಕಕ್ಕೆ ಒಪ್ಪಿಗೆಯನ್ನು ಕೊಡಲು OK ಯನ್ನು ಒತ್ತಿ.
02:03 ಇದು ಸೈಲ್ಯಾಬ್ ಗಾಗಿ, Intel Math Kernal Library ಅನ್ನು ಡೌನ್ಲೋಡ್ ಮಾಡಲು ಪ್ರಾರಂಭಿಸುತ್ತದೆ.
02:11 ಇದು ಕೆಲವು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
02:20 Intel Math Kernal Library ಯ ಡೌನ್ಲೋಡ್ ಸಂಪೂರ್ಣಗೊಂಡಿದೆ. ಈಗ ಸೈಲ್ಯಾಬ್ ನ ಇನ್ಸ್ಟಾಲೇಷನ್ ಕ್ರಿಯೆ ಪ್ರಾರಂಭವಾಗಿದೆ.
02:28 ಇದು ಕೆಲವು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
02:46 ಸೈಲ್ಯಾಬ್ ನ ಇನ್ಸ್ಟಾಲೇಷನ್ ಪೂರ್ಣಗೊಂಡಿದೆ. "Finish" ಅನ್ನು ಒತ್ತಿ.
02:51 ಇದು ನಿಮ್ಮ ಕಂಪ್ಯೂಟರ್ ನಲ್ಲಿ Scilab 5.2 ಅನ್ನು ಲಾಂಚ್ ಮಾಡುತ್ತದೆ.
03:00 ನಾನು ಇದನ್ನು ಕ್ಲೋಸ್ ಮಾಡುತ್ತೇನೆ.
03:03 ಈಗ ನಾವು ಸೈಲ್ಯಾಬ್ ನ ಇನ್ನೂ ಅನೇಕ ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಹೊಂದಿದ್ದೇವೆ.
03:08 ಅವುಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
03:12 Scilab Effort, ಭಾರತದಲ್ಲಿ scilab.in ಎಂಬ ವೈಬ್ಸೈಟ್ ನಲ್ಲಿ ಸಂಯೋಜಿಸಲ್ಪಟ್ಟಿದೆ.
03:18 ಇಲ್ಲಿ ಅನೇಕ ಆಸಕ್ತಿದಾಯಕ ಪ್ರಕಲ್ಪಗಳು ನಡೆಯುತ್ತಿವೆ.
03:21 ಅವುಗಳಲ್ಲಿ Textbook ಪ್ರೊಜೆಕ್ಟ್ ಕೂಡ ಒಂದು. ಇದು, ಸೈಲ್ಯಾಬ್ ಅನ್ನು ಉಪಯೋಗಿಸಿ ಒಳ್ಳೆಯ ಪಠ್ಯಪುಸ್ತಕದಲ್ಲಿರುವ ಉತ್ತರಿಸಲಾದ ಉದಾಹರಣೆಗಳಿಗೆ ಕೋಡ್ಅನ್ನು ಒದಗಿಸುತ್ತದೆ.
03:28 Links ಪ್ರೊಜೆಕ್ಟ್, ಬಳಕೆದಾರರಿಗೆ ಗೊತ್ತಿರುವ ಸೈಲ್ಯಾಬ್ ಡಾಕ್ಯುಮೆಂಟ್ ಗಳನ್ನು ಲಿಂಕ್ ಮಾಡಲು ಮತ್ತು ಅವುಗಳ ಗುಣಮಟ್ಟವನ್ನು ನಿರ್ಧರಿಸಲು ಅನುಮತಿಸುತ್ತದೆ.
03:35 ನಾವು ಸೈಲ್ಯಾಬ್ ಕಾರ್ಯಶಾಲೆಗಳನ್ನು ಸಂಘಟಿಸಲು ಸಹಾಯ ಮಾಡುತ್ತೇವೆ.
03:38 ನಾವು ಎರಡು ಮೇಲಿಂಗ್ ಲಿಸ್ಟ್ ಗಳನ್ನು ಹೊಂದಿದ್ದೇವೆ. ಒಂದು ಪ್ರಕಟಣೆಗಾಗಿ ಮತ್ತು ಇನ್ನೊಂದು ಚರ್ಚೆಗಾಗಿ.
03:44 ನಮ್ಮ ಎಲ್ಲ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ನಾವು ನಿಮ್ಮನ್ನು ಆಮಂತ್ರಿಸುತ್ತೇವೆ.
03:47 ಸ್ಪೋಕನ್ ಟ್ಯುಟೋರಿಯಲ್ ಗೆ ಹಿಂದಿರುಗೋಣ.
03:50 ವಿವರಣೆಯ ಭಾಗವು ವಿವಿಧ ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ.
03:54 ಅವುಗಳು spoken-tutorial.org ವೆಬ್ ಸೈಟ್ ನಲ್ಲಿ ಲಭ್ಯವಿದೆ.
03:58 ಈ ಟ್ಯುಟೋರಿಯಲ್ ಗಳು, ಸೈಲ್ಯಾಬ್ ನಲ್ಲಿ Level 0 ತರಬೇತಿಯ ಒಂದು ಭಾಗವಾಗಿವೆ.
04:03 ಮತ್ತು ಇವುಗಳು ಉಚಿತವಾಗಿ ಲಭ್ಯವಿರುತ್ತವೆ.
04:07 ನಾವು ಈ ರೀತಿಯಲ್ಲಿ ಹಲವಾರು FOSS ಸಿಸ್ಟಮ್ ಗಳನ್ನು ಕೊಡಲು ಬಯಸುತ್ತೇವೆ.
04:11 ಇವುಗಳ ಕುರಿತು ನಿಮ್ಮ ಅಭಿಪ್ರಾಯಗಳನ್ನು ನಾವು ಸ್ವಾಗತಿಸುತ್ತೇವೆ.
04:14 ನಾವು:
04:17 * ಸಾಫ್ಟ್ವೇರ್ ಗೆ ಔಟ್ಲೈನ್ ಗಳನ್ನು ಬರೆಯಲು
04:20 * ಮೂಲ ಸ್ಕ್ರಿಪ್ಟ್ ಗಳನ್ನು ಬರೆಯಲು
04:22 * ಸ್ಪೋಕನ್ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು
04:25 * ಸ್ಕ್ರಿಪ್ಟ್ ಅನ್ನು ವಿವಿಧ ಭಾರತೀಯ ಭಾಷೆಗಳಿಗೆ ಅನುವಾದ ಮಾಡಲು
04:28 * ಸ್ಕ್ರಿಪ್ಟ್ ಅನ್ನು ಉಪಯೋಗಿಸಿ ಭಾರತೀಯ ಭಾಷೆಗಳಲ್ಲಿ ಡಬ್ ಮಾಡಲು
04:33 ಮತ್ತು ಇವುಗಳ ಕುರಿತು ವಿಮರ್ಶೆಮಾಡಲು ಮತ್ತು ಅನಿಸಿಕೆಗಳನ್ನು ಕೊಡಲು ನಿಮ್ಮ ಭಾಗವಹಿಸುವಿಕೆಯನ್ನು ಸ್ವಾಗತಿಸುತ್ತೇವೆ.
04:36 ಮತ್ತು ನಾವು ಈ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ಏರ್ಪಡಿಸಲು ಸ್ವಾಗತಿಸುತ್ತೇವೆ.
04:42 ನಾವು ಸ್ಪೋಕನ್ ಟ್ಯುಟೋರಿಯಲ್ ನ ಕಾರ್ಯಕ್ಷಮತೆಯ ಬಗ್ಗೆ ಅಭ್ಯಾಸವನ್ನು ಮಾಡಲು ಸಹ ನಿಮ್ಮನ್ನು ಆಹ್ವಾನಿಸುತ್ತೇವೆ.
04:47 ನಾವು ಆಡಿಯೋ, ವಿಡಿಯೋ ಮತ್ತು ಆಟೋಮ್ಯಾಟಿಕ್ ಅನುವಾದಕ್ಕಾಗಿ ತಾಂತ್ರಿಕ ಪರಿಣಿತರನ್ನು ಸಹ ಹುಡುಕುತ್ತಿದ್ದೇವೆ.
04:55 ನಾವು ಈ ಎಲ್ಲಾ ಚಟುವಟಿಕೆಗಳಿಗೆ ಧನಸಹಾಯವನ್ನು ಮಾಡುತ್ತೇವೆ.
04:58 ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ನ ಒಂದು ಭಾಗವಾಗಿದೆ.

ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD,ಭಾರತ ಸರ್ಕಾರದಿಂದ ಪ್ರಮಾಣಿತವಾಗಿದೆ.

05:07 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ದೊರೆಯುತ್ತದೆ.
05:11 ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
05:16 ಧನ್ಯವಾದಗಳು.

Contributors and Content Editors

NaveenBhat