BASH/C2/More-on-Loops/Kannada
From Script | Spoken-Tutorial
Revision as of 23:20, 14 November 2015 by NaveenBhat (Talk | contribs)
Time | Narration |
00:01 | BASH ನಲ್ಲಿ Nested for loop ನ ಕುರಿತಾದ ಸ್ಪೊಕನ್-ಟ್ಯುಟೊರಿಯಲ್ ಗೆ ನಿಮಗೆಲ್ಲ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು Nested for loop ನ ಕುರಿತು ಒಂದು ಉದಾಹರಣೆಯೊಂದಿಗೆ ಕಲಿಯುತ್ತೇವೆ. |
00:13 | ಈ ಟ್ಯುಟೋರಿಯಲ್ ಗಾಗಿ ನಾನು Ubuntu Linux 12.04 OS ಮತ್ತು GNU Bash version 4.1.10 ಗಳನ್ನು ಉಪಯೋಗಿಸುತ್ತೇನೆ. |
00:24 | GNU bash version 4 ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ ಎಂಬುದು ನಿಮಗೆ ತಿಳಿದಿರಲಿ. |
00:31 | ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು ಬ್ಯಾಶ್ ನಲ್ಲಿ ಲೂಪ್ ಗಳ ಕುರಿತು ಕಲಿತಿರಬೇಕು. |
00:37 | ಸಂಬಂಧಿತ ಟ್ಯುಟೋರಿಯಲ್ ಗಾಗಿ ದಯವಿಟ್ಟು ನಮ್ಮ ಈ ವೆಬ್-ಸೈಟ್ ಗೆ ಭೇಟಿ ಕೊಡಿ - http://spoken-tutorial.org |
00:43 | nested loop ನ ಪರಿಚಯದೊಂದಿಗೆ ಪ್ರಾರಂಭಿಸೋಣ. |
00:46 | loop ನೊಳಗೊಂದು loop ಅನ್ನು nested loop ಎನ್ನುತ್ತಾರೆ. |
00:51 | ಇದರ ಸಿಂಟ್ಯಾಕ್ಸ್ ಅನ್ನು ನೋಡೋಣ. ಹೊರಗಿನ for loop expression 1, 2, 3; |
00:57 | ಒಳಗಿನ for loop expression 1, 2, 3; |
01:01 | statement 1, statement 2 |
01:04 | ಒಳಗಿನ for loop ಮುಚ್ಚುವುದು, ಹೊರಗಿನ for loop ಅನ್ನು ಮುಚ್ಚುವುದು. |
01:09 | nested for loop ನ ಒಂದು ಉದಾಹರಣೆಯನ್ನು ನೋಡೋಣ. |
01:12 | ಮೊದಲು directory structure ನ ಕುರಿತು ನೋಡೋಣ. |
01:17 | ಇಲ್ಲಿ Desktop ನಲ್ಲಿ ಒಂದು simple-nested-for ಎಂಬ ಹೆಸರಿನ ಒಂದು ಡೈರೆಕ್ಟರಿ ಇದೆ. ಮೊದಲು ಅದನ್ನು ತೆರೆಯೋಣ. |
01:24 | ಅದರಲ್ಲಿ ನಾವು "test", "test2", "test3" ಮತ್ತು Bash script ಎಂಬ ಸಬ್ ಡೈರೆಕ್ಟರಿಗಳನ್ನು ಹೊಂದಿದ್ದೇವೆ. |
01:31 | ಪ್ರತಿಯೊಂದು ಸಬ್ ಡೈರೆಕ್ಟರಿಯಲ್ಲೂ ಅನೇಕ text file ಗಳು ಇರುತ್ತವೆ. |
01:36 | ಈಗ ನಮ್ಮ ಕೋಡ್ ಅನ್ನು ನೋಡೋಣ. |
01:39 | ಈ ಪ್ರೋಗ್ರಾಂ ಪ್ರತಿಯೊಂದು ಸಬ್ ಡೈರೆಕ್ಟರಿಯಲ್ಲಿರುವ ಎಲ್ಲಾ ಫೈಲ್ ಗಳನ್ನು ಡಿಸ್ಪ್ಲೇ ಮಾಡುತ್ತದೆ. |
01:45 | ದಯವಿಟ್ಟು ಗಮನಿಸಿ ಇದನ್ನು ಒಂದು ಸಾಲಿನ ಕಮಾಂಡ್ ನಿಂದ ಕೂಡ ಮಾಡಬಹುದು, ಅಂದರೆ ls -1 (ಹೈಫನ್ ಒಂದು ) -R(ಹೈಫನ್ R) test*(test ಅಸ್ಟಿರಿಕ್ಸ್). |
01:53 | ಆದರೆ ನಾವು ಇದನ್ನು for loop ಉಪಯೋಗಿಸಿ ಮಾಡುತ್ತಿದ್ದೇವೆ. |
01:58 | ನಮ್ಮ ಬ್ಯಾಶ್ ಸ್ಕ್ರಿಪ್ಟ್ ನ ಹೆಸರು nested-(ಹೈಫನ್)for ಡಾಟ್ sh ಎಂದು ಇರುವುದನ್ನು ಗಮನಿಸಿ. |
02:05 | ಇದು ನಮ್ಮ shebang line. |
02:08 | ಇದು ಹೊರಗಿನ for loop. |
02:10 | ಈ for loop test ಹೆಸರಿನಿಂದ ಪ್ರಾರಂಭವಾಗುವ ಡೈರೆಕ್ಟರಿಗಳನ್ನು ಡಿಸ್ಪ್ಲೇ ಮಾಡುತ್ತದೆ. |
02:15 | ಮೊದಲ echo ಸಾಲು ಸಬ್ ಡೈರೆಕ್ಟರಿಗಳ ಹೆಸರನ್ನು ಡಿಸ್ಪ್ಲೇ ಮಾಡುತ್ತದೆ. |
02:21 | ಎರಡನೇ echo ಸಾಲು ಖಾಲಿ ಸಾಲನ್ನು ರಚನೆ ಮಾಡುತ್ತದೆ. |
02:25 | ಇದು ಒಳಗಿನ for loop. ಇದು ಡೈರಕ್ಟರಿಯಲ್ಲಿರುವ ಫೈಲ್ ಗಳನ್ನು ಪರೀಕ್ಷಿಸುತ್ತದೆ. |
02:32 | "ls" ಇದು ಡೈರೆಕ್ಟರಿಯಲ್ಲಿರುವ ಮಾಹಿತಿಯನ್ನು ಡಿಸ್ಪ್ಲೇ ಮಾಡುತ್ತದೆ. |
02:36 | -1 (ಹೈಫನ್ ಒಂದು) ಪ್ರತಿ ಸಾಲಿಗೆ ಒಂದು ಫೈಲ್ ಅನ್ನು ಪಟ್ಟಿ ಮಾಡುತ್ತದೆ. |
02:41 | ಇಲ್ಲಿ ನಾವು ಫೈಲ್ ಗಳನ್ನು ಪಟ್ಟಿ ಮಾಡುತ್ತೇವೆ.. done ಒಳಗಿನ for loop ನ ಕೊನೆ ಯನ್ನು ಸೂಚಿಸುತ್ತದೆ. |
02:45 | ಈ command ಹೊರಗಿನ for-loop ನ ಪ್ರತಿ ಆವೃತ್ತಿ ಮುಗಿದಾಗಲೂ ಒಂದು ಅಡ್ಡ ಗೆರೆಯನ್ನು ಪ್ರಿಂಟ್ ಮಾಡುತ್ತದೆ. |
02:53 | done ಇದು ಹೊರಗಿನ for loop ನ ಕೊನೆ ಆಗಿದೆ. |
02:57 | ಈಗ ಪ್ರೋಗ್ರಾಂ ಅನ್ನು ಎಕ್ಸಿಕ್ಯೂಟ್ ಮಾಡೋಣ. |
02:58 | ctrl, alt, t ಕೀಗಳನ್ನು ಒಟ್ಟಿಗೆ ಒತ್ತಿ terminal ಅನ್ನು ತೆರೆಯಿರಿ. |
03:08 | ಈಗ ನಮ್ಮ Bash script ಇರುವ ಡೈರೆಕ್ಟರಿಗೆ ಹೋಗೋಣ. |
03:13 | ಇದು Desktop ನಲ್ಲಿದೆ. |
03:15 | cd Desktop ಎಂದು ಟೈಪ್ ಮಾಡಿ. ಈಗfolder ನೊಳಗೆ ಹೋಗೋಣ. simple-(ಹೈಫನ್)nested-(ಹೈಫನ್)for ಎಂದು ಟೈಪ್ ಮಾಡಿ. |
03:22 | Enter ಅನ್ನು ಒತ್ತಿರಿ. |
03:24 | chmod (ಪ್ಲಸ್)+x nested-(ಹೈಫನ್)for ಡಾಟ್ sh ಎಂದು ಟೈಪ್ ಮಾಡಿ. |
03:32 | Enter ಅನ್ನು ಒತ್ತಿರಿ. |
03:34 | ಡಾಟ್ ಸ್ಲ್ಯಾಶ್ nested-(ಹೈಫನ್)for ಡಾಟ್ sh ಎಂದು ಟೈಪ್ ಮಾಡಿ. |
03:39 | Enter ಅನ್ನು ಒತ್ತಿರಿ. |
03:40 | ಫಲಿತವು ಡಿಸ್ಪ್ಲೇ ಆಗಿದೆ. ಇದು test ಡೈರೆಕ್ಟರಿಯಲ್ಲಿನ ಫೈಲ್ ಗಳು test2 ಡೈರೆಕ್ಟರಿಯಲ್ಲಿನ ಫೈಲ್ ಗಳು ಮತ್ತು test3 ಡೈರೆಕ್ಟರಿಯಲ್ಲಿನ ಫೈಲ್ ಗಳನ್ನು ಡಿಸ್ಪ್ಲೇ ಮಾಡುತ್ತದೆ. |
03:52 | ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. |
03:56 | ಸಾರಾಂಶವನ್ನು ನೋಡೋಣ. ಈ ಟ್ಯುಟೋರಿಯಲ್ ನಲ್ಲಿ ನಾವು Nested for loop ಅನ್ನು ಕಲಿತಿದ್ದೇವೆ. |
04:02 | ಸ್ವಂತ ಅಭ್ಯಾಸಕ್ಕಾಗಿ- |
04:04 | * nested (ಹೈಫನ್)-for ಡಾಟ್ sh ಬ್ಯಾಶ್ ಸ್ಕ್ರಿಪ್ಟ್ ಅನ್ನುnested while loop ಆಗಿ ಬದಲಿಸಿ ಟೈಪ್ ಮಾಡಿ. |
04:11 | * ನಿಮ್ಮ ಪ್ರೋಗ್ರಾಮ್ ಅನ್ನು 'nested-(ಹೈಫನ್)while ಡಾಟ್ sh' ಎಂದು ಸೇವ್ ಮಾಡಿ. |
04:17 | ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ. ಅದು Spoken Tutorial project ನ ಕುರಿತು ತಿಳಿಸಿಕೊಡುತ್ತದೆ. |
04:23 | ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್ವಿಡ್ತ್ ಇರದಿದ್ದರೆ ಡೌನ್ಲೋಡ್ ಮಾಡಿಕೊಂಡೂ ನೋಡಬಹುದು. |
04:28 | Spoken Tutorial project ನ ತಂಡವು-
|
04:37 | ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆಬರೆಯಿರಿ |
04:45 | Spoken Tutorial Project ಇದು Talk to a Teacher ಯೋಜನೆಯ ಭಾಗವಾಗಿದೆ. ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ. |
04:57 | ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. http://spoken-tutorial.org/NMEICT-Intro |
05:03 | ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ. |
05:08 | ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ.. ಧನ್ಯವಾದಗಳು. |