BASH/C2/More-on-Loops/Kannada

From Script | Spoken-Tutorial
Jump to: navigation, search
Time Narration
00:01 BASH ನಲ್ಲಿ Nested for loop ನ ಕುರಿತಾದ ಸ್ಪೊಕನ್-ಟ್ಯುಟೊರಿಯಲ್ ಗೆ ನಿಮಗೆಲ್ಲ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು Nested for loop ನ ಕುರಿತು ಒಂದು ಉದಾಹರಣೆಯೊಂದಿಗೆ ಕಲಿಯುತ್ತೇವೆ.
00:13 ಈ ಟ್ಯುಟೋರಿಯಲ್ ಗಾಗಿ ನಾನು Ubuntu Linux 12.04 OS ಮತ್ತು GNU Bash version 4.1.10 ಗಳನ್ನು ಉಪಯೋಗಿಸುತ್ತೇನೆ.
00:24 GNU bash version 4 ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ ಎಂಬುದು ನಿಮಗೆ ತಿಳಿದಿರಲಿ.
00:31 ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು ಬ್ಯಾಶ್ ನಲ್ಲಿ ಲೂಪ್ ಗಳ ಕುರಿತು ಕಲಿತಿರಬೇಕು.
00:37 ಸಂಬಂಧಿತ ಟ್ಯುಟೋರಿಯಲ್ ಗಾಗಿ ದಯವಿಟ್ಟು ನಮ್ಮ ಈ ವೆಬ್-ಸೈಟ್ ಗೆ ಭೇಟಿ ಕೊಡಿ - http://spoken-tutorial.org
00:43 nested loop ನ ಪರಿಚಯದೊಂದಿಗೆ ಪ್ರಾರಂಭಿಸೋಣ.
00:46 loop ನೊಳಗೊಂದು loop ಅನ್ನು nested loop ಎನ್ನುತ್ತಾರೆ.
00:51 ಇದರ ಸಿಂಟ್ಯಾಕ್ಸ್ ಅನ್ನು ನೋಡೋಣ. ಹೊರಗಿನ for loop expression 1, 2, 3;
00:57 ಒಳಗಿನ for loop expression 1, 2, 3;
01:01 statement 1, statement 2
01:04 ಒಳಗಿನ for loop ಮುಚ್ಚುವುದು, ಹೊರಗಿನ for loop ಅನ್ನು ಮುಚ್ಚುವುದು.
01:09 nested for loop ನ ಒಂದು ಉದಾಹರಣೆಯನ್ನು ನೋಡೋಣ.
01:12 ಮೊದಲು directory structure ನ ಕುರಿತು ನೋಡೋಣ.
01:17 ಇಲ್ಲಿ Desktop ನಲ್ಲಿ ಒಂದು simple-nested-for ಎಂಬ ಹೆಸರಿನ ಒಂದು ಡೈರೆಕ್ಟರಿ ಇದೆ. ಮೊದಲು ಅದನ್ನು ತೆರೆಯೋಣ.
01:24 ಅದರಲ್ಲಿ ನಾವು "test", "test2", "test3" ಮತ್ತು Bash script ಎಂಬ ಸಬ್ ಡೈರೆಕ್ಟರಿಗಳನ್ನು ಹೊಂದಿದ್ದೇವೆ.
01:31 ಪ್ರತಿಯೊಂದು ಸಬ್ ಡೈರೆಕ್ಟರಿಯಲ್ಲೂ ಅನೇಕ text file ಗಳು ಇರುತ್ತವೆ.
01:36 ಈಗ ನಮ್ಮ ಕೋಡ್ ಅನ್ನು ನೋಡೋಣ.
01:39 ಈ ಪ್ರೋಗ್ರಾಂ ಪ್ರತಿಯೊಂದು ಸಬ್ ಡೈರೆಕ್ಟರಿಯಲ್ಲಿರುವ ಎಲ್ಲಾ ಫೈಲ್ ಗಳನ್ನು ಡಿಸ್ಪ್ಲೇ ಮಾಡುತ್ತದೆ.
01:45 ದಯವಿಟ್ಟು ಗಮನಿಸಿ ಇದನ್ನು ಒಂದು ಸಾಲಿನ ಕಮಾಂಡ್ ನಿಂದ ಕೂಡ ಮಾಡಬಹುದು, ಅಂದರೆ ls -1 (ಹೈಫನ್ ಒಂದು ) -R(ಹೈಫನ್ R) test*(test ಅಸ್ಟಿರಿಕ್ಸ್).
01:53 ಆದರೆ ನಾವು ಇದನ್ನು for loop ಉಪಯೋಗಿಸಿ ಮಾಡುತ್ತಿದ್ದೇವೆ.
01:58 ನಮ್ಮ ಬ್ಯಾಶ್ ಸ್ಕ್ರಿಪ್ಟ್ ನ ಹೆಸರು nested-(ಹೈಫನ್)for ಡಾಟ್ sh ಎಂದು ಇರುವುದನ್ನು ಗಮನಿಸಿ.
02:05 ಇದು ನಮ್ಮ shebang line.
02:08 ಇದು ಹೊರಗಿನ for loop.
02:10 for loop test ಹೆಸರಿನಿಂದ ಪ್ರಾರಂಭವಾಗುವ ಡೈರೆಕ್ಟರಿಗಳನ್ನು ಡಿಸ್ಪ್ಲೇ ಮಾಡುತ್ತದೆ.
02:15 ಮೊದಲ echo ಸಾಲು ಸಬ್ ಡೈರೆಕ್ಟರಿಗಳ ಹೆಸರನ್ನು ಡಿಸ್ಪ್ಲೇ ಮಾಡುತ್ತದೆ.
02:21 ಎರಡನೇ echo ಸಾಲು ಖಾಲಿ ಸಾಲನ್ನು ರಚನೆ ಮಾಡುತ್ತದೆ.
02:25 ಇದು ಒಳಗಿನ for loop. ಇದು ಡೈರಕ್ಟರಿಯಲ್ಲಿರುವ ಫೈಲ್ ಗಳನ್ನು ಪರೀಕ್ಷಿಸುತ್ತದೆ.
02:32 "ls" ಇದು ಡೈರೆಕ್ಟರಿಯಲ್ಲಿರುವ ಮಾಹಿತಿಯನ್ನು ಡಿಸ್ಪ್ಲೇ ಮಾಡುತ್ತದೆ.
02:36 -1 (ಹೈಫನ್ ಒಂದು) ಪ್ರತಿ ಸಾಲಿಗೆ ಒಂದು ಫೈಲ್ ಅನ್ನು ಪಟ್ಟಿ ಮಾಡುತ್ತದೆ.
02:41 ಇಲ್ಲಿ ನಾವು ಫೈಲ್ ಗಳನ್ನು ಪಟ್ಟಿ ಮಾಡುತ್ತೇವೆ.. done ಒಳಗಿನ for loop ನ ಕೊನೆ ಯನ್ನು ಸೂಚಿಸುತ್ತದೆ.
02:45 command ಹೊರಗಿನ for-loop ನ ಪ್ರತಿ ಆವೃತ್ತಿ ಮುಗಿದಾಗಲೂ ಒಂದು ಅಡ್ಡ ಗೆರೆಯನ್ನು ಪ್ರಿಂಟ್ ಮಾಡುತ್ತದೆ.
02:53 done ಇದು ಹೊರಗಿನ for loop ನ ಕೊನೆ ಆಗಿದೆ.
02:57 ಈಗ ಪ್ರೋಗ್ರಾಂ ಅನ್ನು ಎಕ್ಸಿಕ್ಯೂಟ್ ಮಾಡೋಣ. ctrl, alt, t ಕೀಗಳನ್ನು ಒಟ್ಟಿಗೆ ಒತ್ತಿ terminal ಅನ್ನು ತೆರೆಯಿರಿ.
03:08 ಈಗ ನಮ್ಮ Bash script ಇರುವ ಡೈರೆಕ್ಟರಿಗೆ ಹೋಗೋಣ.
03:13 ಇದು Desktop ನಲ್ಲಿದೆ.
03:15 cd Desktop ಎಂದು ಟೈಪ್ ಮಾಡಿ. ಈಗfolder ನೊಳಗೆ ಹೋಗೋಣ. simple-(ಹೈಫನ್)nested-(ಹೈಫನ್)for ಎಂದು ಟೈಪ್ ಮಾಡಿ.
03:22 Enter ಅನ್ನು ಒತ್ತಿರಿ.
03:24 chmod (ಪ್ಲಸ್)+x nested-(ಹೈಫನ್)for ಡಾಟ್ sh ಎಂದು ಟೈಪ್ ಮಾಡಿ.
03:32 Enter ಅನ್ನು ಒತ್ತಿರಿ.
03:34 ಡಾಟ್ ಸ್ಲ್ಯಾಶ್ nested-(ಹೈಫನ್)for ಡಾಟ್ sh ಎಂದು ಟೈಪ್ ಮಾಡಿ.
03:39 Enter ಅನ್ನು ಒತ್ತಿರಿ.ಫಲಿತವು ಡಿಸ್ಪ್ಲೇ ಆಗಿದೆ. ಇದು test ಡೈರೆಕ್ಟರಿಯಲ್ಲಿನ ಫೈಲ್ ಗಳು test2 ಡೈರೆಕ್ಟರಿಯಲ್ಲಿನ ಫೈಲ್ ಗಳು ಮತ್ತು test3 ಡೈರೆಕ್ಟರಿಯಲ್ಲಿನ ಫೈಲ್ ಗಳನ್ನು ಡಿಸ್ಪ್ಲೇ ಮಾಡುತ್ತದೆ.
03:52 ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
03:56 ಸಾರಾಂಶವನ್ನು ನೋಡೋಣ. ಈ ಟ್ಯುಟೋರಿಯಲ್ ನಲ್ಲಿ ನಾವು Nested for loop ಅನ್ನು ಕಲಿತಿದ್ದೇವೆ.
04:02 ಸ್ವಂತ ಅಭ್ಯಾಸಕ್ಕಾಗಿ-
04:04 nested (ಹೈಫನ್)-for ಡಾಟ್ sh ಬ್ಯಾಶ್ ಸ್ಕ್ರಿಪ್ಟ್ ಅನ್ನುnested while loop ಆಗಿ ಬದಲಿಸಿ ಟೈಪ್ ಮಾಡಿ.
04:11 ನಿಮ್ಮ ಪ್ರೋಗ್ರಾಮ್ ಅನ್ನು 'nested-(ಹೈಫನ್)while ಡಾಟ್ sh' ಎಂದು ಸೇವ್ ಮಾಡಿ.
04:17 ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ. ಅದು Spoken Tutorial project ನ ಕುರಿತು ತಿಳಿಸಿಕೊಡುತ್ತದೆ.
04:23 ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್ವಿಡ್ತ್ ಇರದಿದ್ದರೆ ಡೌನ್ಲೋಡ್ ಮಾಡಿಕೊಂಡೂ ನೋಡಬಹುದು.
04:28 Spoken Tutorial project ನ ತಂಡವು-

spoken tutorial ಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ. ಆನ್ಲೈನ್ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.

04:37 ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆಬರೆಯಿರಿ
04:45 Spoken Tutorial Project ಇದು Talk to a Teacher ಯೋಜನೆಯ ಭಾಗವಾಗಿದೆ. ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ.
04:57 ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. http://spoken-tutorial.org/NMEICT-Intro
05:03 ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ.
05:08 ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ.. ಧನ್ಯವಾದಗಳು.

Contributors and Content Editors

NaveenBhat, PoojaMoolya, Pratik kamble, Sandhya.np14