Health-and-Nutrition/C2/Magnesium-rich-vegetarian-recipes/Kannada
From Script | Spoken-Tutorial
Revision as of 12:48, 12 August 2020 by NaveenBhat (Talk | contribs)
|
|
00:00 | ಮೆಗ್ನೆಶಿಯಮ್ ಸಮೃದ್ಧವಾಗಿರುವ ಸಸ್ಯಾಹಾರಿ ಪಾಕವಿಧಾನದ ಕುರಿತಾದ ಸ್ಪೊಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು :
|
00:09 | ಮೆಗ್ನೇಶಿಯಮ್ ನ ಉಪಯೋಗಗಳು,
|
00:11 | ಮೆಗ್ನೇಶಿಯಮ್ ನ ಸಸ್ಯಾಹಾರಿ ಮೂಲಗಳು,
|
00:13 | ಮತ್ತು ಮೆಗ್ನೇಶಿಯಮ್ ಸಮೃದ್ಧವಾಗಿರುವ ಸಸ್ಯಾಹಾರಿ ಪಾಕವಿಧಾನ ಗಳ ಕುರಿತು ಕಲಿಯುವೆವು.
|
00:18 | ಮೆಗ್ನೇಶಿಯಮ್ ಎಂಬುದು ದೇಹಕ್ಕೆ ಅತ್ಯವಶ್ಯಕವಾದ ಖನಿಜಾಂಶವಾಗಿದೆ. |
00:24 | ಇನ್ನೊಂದು ಟ್ಯುಟೋರಿಯಲ್ ನಲ್ಲಿ ವಿವರಿಸಿರುವಂತೆ ಇದು ೨ ಪ್ರಕಾರದ ಪೋಷಕಾಂಶಗಳಲ್ಲಿ ಒಂದು.
|
00:31 | ಈ ಟ್ಯುಟೋರಿಯಲ್ ಗಾಗಿ ನಮ್ಮ ವೆಬ್ಸೈಟ್ ನೋಡಿ.
|
00:35 | ಮೆಗ್ನೇಶಿಯಮ್ ಎಂಬುದು ಆರೋಗ್ಯಕರ ಎಲುಬು ಮತ್ತು ಹಲ್ಲುಗಳಿಗೆ ಅತ್ಯವಶ್ಯಕವಾಗಿದೆ. |
00:40 | ನಮಗೆ ಶಕ್ತಿಯ ಉತ್ಪಾದನೆಗೂ ಕೂಡಾ ಮೆಗ್ನೇಶಿಯಮ್ ಅವಶ್ಯವಾಗಿದೆ.
|
00:44 | ಮತ್ತು DNA ಯ ಸಂಶ್ಲೇಷಣೆಗೆ ಕೂಡಾ.
|
00:47 | ಮೆಗ್ನೇಶಿಯಮ್ ನ ಪ್ರಾಮುಖ್ಯತೆಯ ಕುರಿತು ಇನ್ನೊಂದು ಟ್ಯುಟೋರಿಯಲ್ ನಲ್ಲಿ ವಿವರಿಸಲಾಗಿದೆ. |
00:52 | ಮೆಗ್ನೇಶಿಯಮ್ ಇವುಗಳಲ್ಲಿ ಇರುತ್ತದೆ,
|
00:54 | ಬೀನ್ಸ್ ಗಳು,
ಕಾಯಿಗಳು,
|
00:56 | ಬೀಜಗಳು,
ಎಲೆಯುಳ್ಳ ತರಕಾರಿಗಳು
|
00:59 | ಮತ್ತು ಧಾನ್ಯಗಳು.
|
01:01 | ಮೆಗ್ನೇಶಿಯಮ್ ನ ಸೇವನೆ ಮತ್ತು ಶರೀರದಲ್ಲಿ ಅದರ ಹೀರುವಿಕೆ ತುಂಬಾ ಮುಖ್ಯವಾಗಿದೆ. |
01:08 | ಹುದುಗುವಿಕೆ (Fermentation),
ಹುರಿಯುವಿಕೆ,
|
01:10 | ಮೊಳಕೆಯೊಡೆಯುವಿಕೆ
ಮತ್ತು ಬೇಯಿಸುವಿಕೆ, ಹೀರುವಿಕೆಯನ್ನು ಹೆಚ್ಚಿಸುತ್ತದೆ.
|
01:15 | ಬೀನ್ಸ್ ಗಳನ್ನು ಬೇಯಿಸುವ ಮೊದಲು ನೆನೆಸುವದು ಕೂಡಾ ಇದನ್ನು ಮಾಡುತ್ತದೆ.
|
01:20 | ಈಗ ನಾವು ನಮ್ಮ ಮೊದಲ ಪಾಕವಿಧಾನವಾದ ಮೊಳಕೆಯೊಡೆದ ಮೊತ್ ಬೀನ್ಸ್ ನ ಕಟ್ಲೆಟ್ ಮಾಡುವ ವಿಧಾನವನ್ನು ಕಲಿಯೋಣ. |
01:27 | ಈ ಪಾಕವಿಧಾನಕ್ಕಾಗಿ ನಮಗೆ :
|
01:31 | ¼ ಕಪ್ ಮೊಳಕೆಯೊಡೆದ ಮೊತ್ ಬೀನ್ಸ್,
|
01:34 | 1 ಕಪ್ ತೊಳೆದ ಮತ್ತು ಹೆಚ್ಚಿದ ಸೊಪ್ಪು,
|
01:37 | 1 ಟೆಬಲ್ ಚಮಚ ಕಡಲೆಹಿಟ್ಟು,
|
01:40 | 4 ರಿಂದ 5 ಬೆಳ್ಳುಳ್ಳಿಯ ಎಸಳು,
|
01:43 | 1 ಚಮಚ ನಿಂಬೆ ರಸ,
|
01:45 | 1 ಚಮಚ ಹುರಿದ ಎಳ್ಳು,
|
01:49 | ಮತ್ತು ರುಚಿಗೆ ತಕ್ಕಷ್ಟು ಉಪ್ಪು ಬೇಕು.
|
01:51 | ಮತ್ತು ನಿಮಗೆ :
|
01:53 | 1 ಚಮಚ ಕೆಂಪು ಮೆಣಸಿನ ಪುಡಿ,
|
01:55 | 3 ಚಮಚ ಎಣ್ಣೆಯೂ ಬೇಕು. |
01:58 | ಈಗ ನಾವು ವಿಧಾನವನ್ನು ತಿಳಿದುಕೊಳ್ಳೋಣ :
|
02:00 | ಮೊಳಕೆಯೊಡೆಸಲು, ಮೊತ್ ಬೀನ್ಸ್ ಅನ್ನು ಇಡೀ ರಾತ್ರಿ ನೆನೆಸಿಡಿ.
|
02:05 | ಬೆಳಿಗ್ಗೆ ಅದರ ನೀರನ್ನು ಆರಿಸಿ ಅದನ್ನು ಶುದ್ಧವಾದ ಮಸ್ಲಿನ್ ಬಟ್ಟೆಯಲ್ಲಿ ಕಟ್ಟಿಡಿ. |
02:10 | ಅದನ್ನು ಮೊಳಕೆಯೊಡೆಯಲು ೨ ದಿನ ಬೆಚ್ಚಗಿನ ಪ್ರದೆಶದಲ್ಲಿ ಇಡಿ. |
02:15 | ಬೇರೆ ಬೇರೆ ದ್ವಿದಳ ಧಾನ್ಯಗಳು ಮೊಳಕೆಯೊಡೆಯಲು ಬೇರೆ ಬೇರೆ ಕಾಲವನ್ನು ತೆಗೆದುಕೊಳ್ಳುತ್ತವೆ. |
02:20 | ಮೊಳಕೆಯೊಡೆದಮೇಲೆ ಬೆಳ್ಳುಳ್ಳಿಯನ್ನು ಸೇರಿಸಿ ಒರಟಾದ ಪೇಸ್ಟ್ ಮಾಡಿ. |
02:27 | ಪೇಸ್ಟ್ ಮಾಡಲು ಮಿಕ್ಸರ್ ಅಥವಾ ಕಲ್ಲಿನ ಗ್ರೈಂಡರ್ ಬಳಸಬಹುದು. |
02:32 | ಬಾಣಲೆಯನ್ನು ಬಿಸಿ ಮಾಡಿ, ಎಳ್ಳಿನ ಬೀಜಗಳನ್ನು ಸ್ವಲ್ಪ ಕೆಂಪಾಗುವವರೆಗೆ ಹುರಿಯಿರಿ. |
02:37 | ಅವುಗಳನ್ನು ತಣಿಯಲು ಬಿಡಿ.
|
02:39 | ಕಟ್ಲೆಟ್ ಗಳನ್ನು ಮಾಡಲು, ಮೊಳಕೆಯ ಪೇಸ್ಟ್ ಅನ್ನು ಬೋಗುಣಿಯಲ್ಲಿ ತೆಗೆದುಕೊಳ್ಳಿ.
|
02:43 | ಹುರಿದ ಎಳ್ಳಿನ ಬೀಜಗಳು, ಸೊಪ್ಪು, ಕಡಲೆ ಹಿಟ್ಟು, ಮೆಣಸು, ಉಪ್ಪು ಮತ್ತು ನಿಂಬೆ ರಸಗಳನ್ನು ಸೇರಿಸಿ. |
02:52 | ಅವುಗಳನ್ನು ಚೆನ್ನಾಗಿ ಬೆರೆಸಿ. .
|
02:54 | ಪೇಸ್ಟ್ ಒಣಗಿದ್ದರೆ ಒಂದು ಚಮಚ ನೀರನ್ನು ಸೇರಿಸಿ.
|
02:59 | ಪೇಸ್ಟ್ ಅನ್ನು ೪ ಭಾಗಗಳಾಗಿ ವಿಭಾಗಿಸಿ.
|
03:01 | ಮತ್ತು ಅವುಗಳನ್ನು ಕಟ್ಲೆಟ್ ಆಕಾರಕ್ಕೆ ತನ್ನಿ.
|
03:04 | ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ. |
03:06 | ಕಟ್ಲೆಟ್ ಅನ್ನು ಮಧ್ಯಮ ಉರಿಯಲ್ಲಿ, ಎರಡೂಕಡೆ ಕಂದುಬಣ್ಣ ಬರುವವರೆಗೆ ಕರಿಯಿರಿ. |
03:12 | ಮೊತ್ ಬೀನ್ಸ್ ಮತ್ತು ಸೊಪ್ಪಿನ ಕಟ್ಲೆಟ್ ಸಿದ್ಧವಿದೆ.
|
03:15 | 4 ಕಟ್ಲೆಟ್ ಗಳು ಸುಮಾರು 208 ಮಿಲಿ ಗ್ರಾಂ ಮೆಗ್ನೇಶಿಯಮ್ ಹೊಂದಿರುತ್ತವೆ.
|
03:22 | ನಮ್ಮ ಮುಂದಿನ ಪಾಕವಿಧಾನ ಸೂರ್ಯಕಾಂತಿ ಬೀಜದ ಚಟ್ನಿ ಆಗಿದೆ.
|
03:26 | ಈ ಪಾಕವಿಧಾನಕ್ಕಾಗಿ ನಿಮಗೆ :
|
03:28 | 2 ಟೇಬಲ್ ಚಮಚ ಸೂರ್ಯಕಾಂತಿ ಬೀಜಗಳು, |
03:32 | 1 ಹಸಿ ಮೆಣಸು,
4 ರಿಂದ 5 ಬೆಳ್ಳುಳ್ಳಿಯ ಎಸಳುಗಳು, |
03:36 | 1 ಚಿಕ್ಕ ಹೆಚ್ಚಿದ ಟೊಮೆಟೊ,
|
03:39 | ರುಚಿಗೆ ತಕ್ಕಷ್ಟು ಉಪ್ಪು, |
03:41 | ½ ಚಮಚ ಎಣ್ಣೆ ಅಥವಾ ತುಪ್ಪ ಬೇಕು.
|
03:44 | ವಿಧಾನ :
ಮಧ್ಯಮ ಉರಿಯಲ್ಲಿ ಸೂರ್ಯಕಾಂತಿ ಬೀಜಗಳನ್ನು ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿಯಿರಿ. |
03:50 | ನಂತರ ಅವುಗಳನ್ನು ತಣ್ಣಗಾಗಲು ಬಿಡಿ.
|
03:52 | ಒಂದು ಬಾಣಲೆಯಲ್ಲಿ ಎಣ್ಣೆ ಅಥವಾ ತುಪ್ಪವನ್ನು ಬಿಸಿಮಾಡಿ.
|
03:55 | ನಂತರ ಹೆಚ್ಚಿದ ಟೊಮೆಟೊ ವನ್ನು ಹುರಿಯಿರಿ.
|
03:57 | ಅದನ್ನು ತಣ್ಣಗಾಗಲು ಬಿಡಿ.
|
04:00 | ಇವೆರಡನ್ನೂ ಬೆಳ್ಳುಳ್ಳಿ, ಮೆಣಸಿನಕಾಯಿ, ಉಪ್ಪು ಮತ್ತು ನೀರಿನೊಂದಿಗೆ ಅರೆಯಿರಿ. |
04:07 | ಸೂರ್ಯಕಾಂತಿ ಬೀಜದ ಚಟ್ನಿ ಸಿದ್ಧವಿದೆ.
|
04:10 | 2 ಚಮಚದಷ್ಟು ಈ ಚಟ್ನಿ, 133 ಮಿಲಿಗ್ರಾಂ ಮೆಗ್ನೇಶಿಯಮ್ ಅನ್ನು ಹೊಂದಿರುತ್ತದೆ. |
04:17 | ಮುಂದಿನ ಪಾಕವಿಧಾನ ಕೌಪಿಯಾದ ಮೊಳಕೆಯ ಪರಾಟಾ ಆಗಿದೆ.(stuffed flat bread).
|
04:21 | ಮೊಳಕೆಯೊಡೆಸುವ ವಿಧಾನವನ್ನು ಹಿಂದಿನ ಟ್ಯುಟೊರಿಯಲ್ ನಲ್ಲಿ ವಿವರಿಸಲಾಗಿದೆ. |
04:27 | ಈ ಪಾಕವಿಧಾನಕ್ಕಾಗಿ ನಮಗೆ :
|
04:30 | 1/4 ಕಪ್ ಗೋದಿ ಹಿಟ್ಟು,
|
04:32 | 2 ಟೇಬಲ್ ಚಮಚ ಕೌಪಿಯಾ ಮೊಳಕೆಗಳು,
|
04:36 | 1 ಟೇಬಲ್ ಚಮಚ ಎಳ್ಳಿನ ಬೀಜಗಳು, |
04:39 | 1 ಹಸಿ ಮೆಣಸಿನಕಾಯಿ,
|
04:40 | 1 ಟೇಬಲ್ ಚಮಚ ಜೀರಿಗೆ,
|
04:43 | ½ ಚಮಚ ಅರಿಶಿನ ಬೇಕು. |
04:46 | ನಿಮಗೆ
ರುಚಿಗೆ ತಕ್ಕಷ್ಟು ಉಪ್ಪು, |
04:49 | ಮತ್ತು ೨ ಚಮಚ ಎಣ್ಣೆ ಅಥವಾ ತುಪ್ಪ ಕೂಡಾ ಬೇಕಾಗುತ್ತದೆ.
|
04:53 | ಮೊದಲು ಮಿಕ್ಸರ್ ನಿಂದ ಹಸಿಮೆಣಸಿನ ಕಾಯಿ ಜೊತೆ, ಕೌಪಿಯಾ ಮೊಳಕೆಯ ಒರಟಾದ ಪೇಸ್ಟ್ ಅನ್ನು ಮಾಡಿಕೊಳ್ಳಿ. |
05:00 | ಮಿಕ್ಸರ್ ಇಲ್ಲದಿದ್ದರೆ ಒರಳು ಕಲ್ಲನ್ನೂ ಉಪಯೋಗಿಸಬಹುದು. |
05:05 | ಎಣ್ಣೆಯನ್ನು ಬಾಣಲೆಯಲ್ಲಿ ಕಾಯಿಸಿ, ನಂತರ ಜೀರಿಗೆ ಮತ್ತು ಎಳ್ಳನ್ನು ಸೇರಿಸಿ. |
05:11 | ಅದರ ಬಣ್ಣ ಬದಲಾಗುವವರೆಗೆ ಹುರಿಯಿರಿ.
|
05:13 | ಕೌಪಿಯಾ ಪೇಸ್ಟ್ ಅನ್ನು ಸೇರಿಸಿ ಮತ್ತೆರಡು ನಿಮಿಷಗಳ ಕಾಲ ಹುರಿಯಿರಿ. |
05:19 | ಉಪ್ಪು ಮತ್ತು ಅರಿಶಿನದ ಪುಡಿಯನ್ನು ಸೇರಿಸಿ ೫ ನಿಮಿಷಗಳ ಕಾಲ ಬೇಯಿಸಿ. |
05:24 | ಇದನ್ನು ತಣ್ಣಗಾಗಲು ಬಿಡಿ.
|
05:27 | ಪರಾಟ ವನ್ನು ಮಾಡಲು ಒಂದು ಬೋಗುಣಿಯಲ್ಲಿ ಹಿಟ್ಟನ್ನು ತೆಗೆದುಕೊಳ್ಳಿ. |
05:31 | ಸಾಕಷ್ಟು ನೀರು ಸೇರಿಸಿ ಹಿಟ್ಟನ್ನು ಬೆರೆಸಿಕೊಳ್ಳಿ.
|
05:35 | ರೋಲಿಂಗ್ ಪಿನ್ ಬಳಸಿ ಹಿಟ್ಟನ್ನು ಚಪ್ಪಟೆ ಮಾಡಿ.
|
05:39 | ಚಪ್ಪಟೆಯಾದ ಹಿಟ್ಟಿನ ಮೇಲೆ ಕೌಪಿಯಾ ಪೇಸ್ಟ್ ಇರಿಸಿ.
|
05:42 | ಎಲ್ಲಾ ಕಡೆಯಿಂದ ಮುಚ್ಚಿರಿ.
|
05:44 | ಸ್ವಲ್ಪ ಹಿಟ್ಟನ್ನು ಉದುರಿಸಿ. |
05:46 | ಮತ್ತು ಅದನ್ನು ಪರಾಟ ಆಗಿ ಸುತ್ತಿ.
|
05:49 | ಒಂದು ಬಾಣಲೆಯನ್ನು ಬಿಸಿ ಮಾಡಿ ಮತ್ತು ತುಪ್ಪ ಅಥವಾ ಎಣ್ಣೆಯನ್ನು ಹಚ್ಚಿ ಎರಡೂ ಬದಿಗಳಲ್ಲಿ ಪರಾಟಾ ವನ್ನು ಬೇಯಿಸಿ.
|
05:55 | ಕೌಪೀ ಮೊಳಕೆಯ ಪರಾಟಾ ಸಿದ್ಧವಾಗಿದೆ.
|
05:59 | ಒಂದು ಪರಾಟಾ ವು ಸುಮಾರು ೧೭೩ ಮಿಲಿಗ್ರಾಮ್ ಮೆಗ್ನೇಶಿಯಮ್ ಅನ್ನು ಹೊಂದಿರುತ್ತದೆ. |
06:05 | ಮುಂದಿನ ಪಾಕವಿಧಾನ ಮೊಳಕೆಯೊಡೆದ ಕಡಲೆಕಾಯಿ ಒಣ ಕರಿ. |
06:09 | ಈ ಪಾಕವಿಧಾನಕ್ಕೆ ನಿಮಗೆ ::
|
06:12 | ¼ ಕಪ್ ಕಡಲೆ ಕಾಯಿ ಮೊಳಕೆ,
|
06:15 | 1 ಕಪ್ ತೊಳೆದ ಮೆಂತ್ಯದ ಸೊಪ್ಪು,
|
06:19 | 1 ಸಾಧಾರಣ ಕತ್ತರಿಸಿದ ಟೊಮೆಟೊ,
|
06:21 | ಮತ್ತು 1 ಸಾಧಾರಣ ಕತ್ತರಿಸಿದ ಈರುಳ್ಳಿ ಬೇಕು.
|
06:25 | ನಿಮಗೆ :
|
06:27 | ½ ಟೀಚಮಚ ಅರಿಶಿನ ಪುಡಿ, |
06:29 | ½ ಟೀಚಮಚ ಕೆಂಪು ಮೆಣಸಿನ ಪುಡಿ,
|
06:31 | 1 ಚಮಚ ಹುರಿದ ಕಡಲೆಕಾಯಿ ಪುಡಿ, |
06:35 | 1 ಚಮಚ ಎಣ್ಣೆ,
|
06:37 | ಮತ್ತು ರುಚಿಗೆ ತಕ್ಕಷ್ಟು ಉಪ್ಪು ಕೂಡಾ ಬೇಕು. |
06:39 | ಮಾಡುವ ವಿಧಾನ:
ಮೊಳಕೆಯೊಡೆದ ಕಡಲೆಕಾಯನ್ನು ೨ ಸೀಟಿ ವರೆಗೆ ಕುಕ್ಕರ್ ನಲ್ಲಿ ಬೇಯಿಸಿ.
|
06:45 | ಒತ್ತಡ ಬಿಡುಗಡೆಯಾಗುವವರೆಗೆ ಕಾಯಿರಿ.
|
06:47 | ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ.
|
06:49 | ಈರುಳ್ಳಿ ಸೇರಿಸಿ ಮತ್ತು ಬಣ್ಣ ಬದಲಾಯಿಸುವವರೆಗೆ ಹುರಿಯಿರಿ.
|
06:53 | ಟೊಮ್ಯಾಟೊ ಸೇರಿಸಿ ಮತ್ತು ಅವು ಮೃದುವಾಗುವವರೆಗೆ ಬೇಯಿಸಿ. |
06:57 | ಮೆಂತ್ಯದ ಎಲೆಗಳನ್ನು ಸೇರಿಸಿ ಮತ್ತು 5 ನಿಮಿಷ ಬೇಯಿಸಿ.
|
07:02 | ಈಗ ಮಸಾಲೆ, ಉಪ್ಪು ಮತ್ತು ಮೊಳಕೆಯೊಡೆದ ಕಡಲೆಕಾಯಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
|
07:08 | ಇದಕ್ಕೆ ಕಡಲೆಕಾಯಿ ಪುಡಿ ಸೇರಿಸಿ
|
07:11 | ಬಾಣಲೆಯನ್ನು ಒಂದು ಮುಚ್ಚಳದಿಂದ ಮುಚ್ಚಿ 5 ರಿಂದ 10 ನಿಮಿಷ ಬೇಯಿಸಿ.
|
07:15 | ಮೊಳಕೆಯೊಡೆದ ಕಡಲೆಕಾಯಿ ಒಣ ಕರಿ ಸಿದ್ಧವಾಗಿದೆ.
|
07:19 | ½ ಬೋಗುಣಿ ಕರಿ, ಸುಮಾರು 141 ಮಿಗ್ರಾಂ ಮೆಗ್ನೀಸಿಯಮ್ ಅನ್ನು ಹೊಂದಿರುತ್ತದೆ. |
07:26 | ಕೊನೆಯ ಪಾಕವಿಧಾನವೆಂದರೆ ಅಮರಂತ್ ಎಲೆಗಳ ಸ್ಟಿರ್ ಫ್ರೈ ಆಗಿದೆ.
|
07:30 | ಈ ಪಾಕವಿಧಾನಕ್ಕಾಗಿ ನಿಮಗೆ :
|
07:33 | 100 ಗ್ರಾಂ ನಷ್ಟು ತೊಳೆದ ಅಮರಂತ್ ಎಲೆಗಳು,
|
07:36 | 4 ಬೆಳ್ಳುಳ್ಳಿ ಎಸಳುಗಳು,
|
07:38 | 1 ಸಣ್ಣ ಈರುಳ್ಳಿ,
|
07:40 | 2 ಚಮಚ ತುರಿದ ತೆಂಗಿನಕಾಯಿ,
|
07:43 | 2 ಹಸಿ ಮೆಣಸಿನಕಾಯಿ,
|
07:45 | ಸ್ವಲ್ಪ ಅರಿಶಿನ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಬೇಕು.
|
07:49 | ನಿಮಗೆ 1 ಟೀಸ್ಪೂನ್ ಎಣ್ಣೆಯ ಅಗತ್ಯವಿರುತ್ತದೆ.
|
07:53 | ಮಾಡುವ ವಿಧಾನ :
ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿಕೊಳ್ಳಿ.
|
07:56 | ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ ಮತ್ತು ಈರುಳ್ಳಿ ಸೇರಿಸಿ
|
08:01 | ಅವು ಬಣ್ಣವನ್ನು ಬದಲಾಯಿಸುವವರೆಗೆ ಫ್ರೈ ಮಾಡಿ.
|
08:03 | ಈಗ ಅಮರಂಥ್ ಎಲೆಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. |
08:07 | ಒಂದು ಮುಚ್ಚಳದಿಂದ ಮುಚ್ಚಿ 5 ರಿಂದ 7 ನಿಮಿಷ ಬೇಯಿಸಿ.
|
08:12 | ಉಪ್ಪು ಮತ್ತು ಅರಿಶಿನ ಸೇರಿಸಿ ಮತ್ತು 1 ನಿಮಿಷ ಬೇಯಿಸಿ.
|
08:16 | ಇದಕ್ಕೆ ತುರಿದ ತೆಂಗಿನಕಾಯಿ ಸೇರಿಸಿ 5 ನಿಮಿಷ ಬೇಯಿಸಿ.
|
08:21 | ಅಮರಂತ್ ಎಲೆಗಳ ಫ್ರೈ ಸಿದ್ಧವಾಗಿದೆ. |
08:25 | ½ ಸ್ಟಿರ್ ಫ್ರೈನ ಬೌಲ್ ಸುಮಾರು 209 ಮಿಲಿಗ್ರಾಂ ಮೆಗ್ನೀಸಿಯಮ್ ಅನ್ನು ಹೊಂದಿರುತ್ತದೆ.
|
08:31 | ಉತ್ತಮ ಆರೋಗ್ಯಕ್ಕಾಗಿ ನಿಮ್ಮ ದೈನಂದಿನ ಆಹಾರದಲ್ಲಿ ಈ 'ಮೆಗ್ನೀಸಿಯಮ್' ಹೆಚ್ಚಿರುವ ಪಾಕವಿಧಾನಗಳನ್ನು ಸೇರಿಸಿ.
|
08:37 | ನಾವು ಪಾಠದ ಕೊನೆಯಲ್ಲಿದ್ದೇವೆ. ಅನುವಾದ ಮತ್ತು ಧ್ವನಿ ಶ್ರೀಮತಿ ನಯನಾ ಭಟ್ಟ.
ಧನ್ಯವಾದಗಳು. |