Health-and-Nutrition/C2/Magnesium-rich-vegetarian-recipes/Kannada

From Script | Spoken-Tutorial
Jump to: navigation, search
Time
Narration
00:00 ಮೆಗ್ನೆಶಿಯಮ್ ಸಮೃದ್ಧವಾಗಿರುವ ಸಸ್ಯಾಹಾರಿ ಪಾಕವಿಧಾನದ ಕುರಿತಾದ ಸ್ಪೊಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು :


00:09 ಮೆಗ್ನೇಶಿಯಮ್ ನ ಉಪಯೋಗಗಳು,


00:11 ಮೆಗ್ನೇಶಿಯಮ್ ನ ಸಸ್ಯಾಹಾರಿ ಮೂಲಗಳು,


00:13 ಮತ್ತು ಮೆಗ್ನೇಶಿಯಮ್ ಸಮೃದ್ಧವಾಗಿರುವ ಸಸ್ಯಾಹಾರಿ ಪಾಕವಿಧಾನ ಗಳ ಕುರಿತು ಕಲಿಯುವೆವು.


00:18 ಮೆಗ್ನೇಶಿಯಮ್ ಎಂಬುದು ದೇಹಕ್ಕೆ ಅತ್ಯವಶ್ಯಕವಾದ ಖನಿಜಾಂಶವಾಗಿದೆ.
00:24 ಇನ್ನೊಂದು ಟ್ಯುಟೋರಿಯಲ್ ನಲ್ಲಿ ವಿವರಿಸಿರುವಂತೆ ಇದು ೨ ಪ್ರಕಾರದ ಪೋಷಕಾಂಶಗಳಲ್ಲಿ ಒಂದು.


00:31 ಈ ಟ್ಯುಟೋರಿಯಲ್ ಗಾಗಿ ನಮ್ಮ ವೆಬ್ಸೈಟ್ ನೋಡಿ.


00:35 ಮೆಗ್ನೇಶಿಯಮ್ ಎಂಬುದು ಆರೋಗ್ಯಕರ ಎಲುಬು ಮತ್ತು ಹಲ್ಲುಗಳಿಗೆ ಅತ್ಯವಶ್ಯಕವಾಗಿದೆ.
00:40 ನಮಗೆ ಶಕ್ತಿಯ ಉತ್ಪಾದನೆಗೂ ಕೂಡಾ ಮೆಗ್ನೇಶಿಯಮ್ ಅವಶ್ಯವಾಗಿದೆ.


00:44 ಮತ್ತು DNA ಯ ಸಂಶ್ಲೇಷಣೆಗೆ ಕೂಡಾ.


00:47 ಮೆಗ್ನೇಶಿಯಮ್ ನ ಪ್ರಾಮುಖ್ಯತೆಯ ಕುರಿತು ಇನ್ನೊಂದು ಟ್ಯುಟೋರಿಯಲ್ ನಲ್ಲಿ ವಿವರಿಸಲಾಗಿದೆ.
00:52 ಮೆಗ್ನೇಶಿಯಮ್ ಇವುಗಳಲ್ಲಿ ಇರುತ್ತದೆ,


00:54 ಬೀನ್ಸ್ ಗಳು,

ಕಾಯಿಗಳು,


00:56 ಬೀಜಗಳು,

ಎಲೆಯುಳ್ಳ ತರಕಾರಿಗಳು


00:59 ಮತ್ತು ಧಾನ್ಯಗಳು.


01:01 ಮೆಗ್ನೇಶಿಯಮ್ ನ ಸೇವನೆ ಮತ್ತು ಶರೀರದಲ್ಲಿ ಅದರ ಹೀರುವಿಕೆ ತುಂಬಾ ಮುಖ್ಯವಾಗಿದೆ.
01:08 ಹುದುಗುವಿಕೆ (Fermentation),

ಹುರಿಯುವಿಕೆ,


01:10 ಮೊಳಕೆಯೊಡೆಯುವಿಕೆ

ಮತ್ತು ಬೇಯಿಸುವಿಕೆ, ಹೀರುವಿಕೆಯನ್ನು ಹೆಚ್ಚಿಸುತ್ತದೆ.


01:15 ಬೀನ್ಸ್ ಗಳನ್ನು ಬೇಯಿಸುವ ಮೊದಲು ನೆನೆಸುವದು ಕೂಡಾ ಇದನ್ನು ಮಾಡುತ್ತದೆ.


01:20 ಈಗ ನಾವು ನಮ್ಮ ಮೊದಲ ಪಾಕವಿಧಾನವಾದ ಮೊಳಕೆಯೊಡೆದ ಮೊತ್ ಬೀನ್ಸ್ ನ ಕಟ್ಲೆಟ್ ಮಾಡುವ ವಿಧಾನವನ್ನು ಕಲಿಯೋಣ.
01:27 ಈ ಪಾಕವಿಧಾನಕ್ಕಾಗಿ ನಮಗೆ :


01:31 ¼ ಕಪ್ ಮೊಳಕೆಯೊಡೆದ ಮೊತ್ ಬೀನ್ಸ್,


01:34 1 ಕಪ್ ತೊಳೆದ ಮತ್ತು ಹೆಚ್ಚಿದ ಸೊಪ್ಪು,


01:37 1 ಟೆಬಲ್ ಚಮಚ ಕಡಲೆಹಿಟ್ಟು,


01:40 4 ರಿಂದ 5 ಬೆಳ್ಳುಳ್ಳಿಯ ಎಸಳು,


01:43 1 ಚಮಚ ನಿಂಬೆ ರಸ,


01:45 1 ಚಮಚ ಹುರಿದ ಎಳ್ಳು,


01:49 ಮತ್ತು ರುಚಿಗೆ ತಕ್ಕಷ್ಟು ಉಪ್ಪು ಬೇಕು.


01:51 ಮತ್ತು ನಿಮಗೆ :


01:53 1 ಚಮಚ ಕೆಂಪು ಮೆಣಸಿನ ಪುಡಿ,


01:55 3 ಚಮಚ ಎಣ್ಣೆಯೂ ಬೇಕು.
01:58 ಈಗ ನಾವು ವಿಧಾನವನ್ನು ತಿಳಿದುಕೊಳ್ಳೋಣ :


02:00 ಮೊಳಕೆಯೊಡೆಸಲು, ಮೊತ್ ಬೀನ್ಸ್ ಅನ್ನು ಇಡೀ ರಾತ್ರಿ ನೆನೆಸಿಡಿ.


02:05 ಬೆಳಿಗ್ಗೆ ಅದರ ನೀರನ್ನು ಆರಿಸಿ ಅದನ್ನು ಶುದ್ಧವಾದ ಮಸ್ಲಿನ್ ಬಟ್ಟೆಯಲ್ಲಿ ಕಟ್ಟಿಡಿ.
02:10 ಅದನ್ನು ಮೊಳಕೆಯೊಡೆಯಲು ೨ ದಿನ ಬೆಚ್ಚಗಿನ ಪ್ರದೆಶದಲ್ಲಿ ಇಡಿ.
02:15 ಬೇರೆ ಬೇರೆ ದ್ವಿದಳ ಧಾನ್ಯಗಳು ಮೊಳಕೆಯೊಡೆಯಲು ಬೇರೆ ಬೇರೆ ಕಾಲವನ್ನು ತೆಗೆದುಕೊಳ್ಳುತ್ತವೆ.
02:20 ಮೊಳಕೆಯೊಡೆದಮೇಲೆ ಬೆಳ್ಳುಳ್ಳಿಯನ್ನು ಸೇರಿಸಿ ಒರಟಾದ ಪೇಸ್ಟ್ ಮಾಡಿ.
02:27 ಪೇಸ್ಟ್ ಮಾಡಲು ಮಿಕ್ಸರ್ ಅಥವಾ ಕಲ್ಲಿನ ಗ್ರೈಂಡರ್ ಬಳಸಬಹುದು.
02:32 ಬಾಣಲೆಯನ್ನು ಬಿಸಿ ಮಾಡಿ, ಎಳ್ಳಿನ ಬೀಜಗಳನ್ನು ಸ್ವಲ್ಪ ಕೆಂಪಾಗುವವರೆಗೆ ಹುರಿಯಿರಿ.
02:37 ಅವುಗಳನ್ನು ತಣಿಯಲು ಬಿಡಿ.


02:39 ಕಟ್ಲೆಟ್ ಗಳನ್ನು ಮಾಡಲು, ಮೊಳಕೆಯ ಪೇಸ್ಟ್ ಅನ್ನು ಬೋಗುಣಿಯಲ್ಲಿ ತೆಗೆದುಕೊಳ್ಳಿ.


02:43 ಹುರಿದ ಎಳ್ಳಿನ ಬೀಜಗಳು, ಸೊಪ್ಪು, ಕಡಲೆ ಹಿಟ್ಟು, ಮೆಣಸು, ಉಪ್ಪು ಮತ್ತು ನಿಂಬೆ ರಸಗಳನ್ನು ಸೇರಿಸಿ.
02:52 ಅವುಗಳನ್ನು ಚೆನ್ನಾಗಿ ಬೆರೆಸಿ. .


02:54 ಪೇಸ್ಟ್ ಒಣಗಿದ್ದರೆ ಒಂದು ಚಮಚ ನೀರನ್ನು ಸೇರಿಸಿ.


02:59 ಪೇಸ್ಟ್ ಅನ್ನು ೪ ಭಾಗಗಳಾಗಿ ವಿಭಾಗಿಸಿ.


03:01 ಮತ್ತು ಅವುಗಳನ್ನು ಕಟ್ಲೆಟ್ ಆಕಾರಕ್ಕೆ ತನ್ನಿ.


03:04 ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ.
03:06 ಕಟ್ಲೆಟ್ ಅನ್ನು ಮಧ್ಯಮ ಉರಿಯಲ್ಲಿ, ಎರಡೂಕಡೆ ಕಂದುಬಣ್ಣ ಬರುವವರೆಗೆ ಕರಿಯಿರಿ.
03:12 ಮೊತ್ ಬೀನ್ಸ್ ಮತ್ತು ಸೊಪ್ಪಿನ ಕಟ್ಲೆಟ್ ಸಿದ್ಧವಿದೆ.


03:15 4 ಕಟ್ಲೆಟ್ ಗಳು ಸುಮಾರು 208 ಮಿಲಿ ಗ್ರಾಂ ಮೆಗ್ನೇಶಿಯಮ್ ಹೊಂದಿರುತ್ತವೆ.


03:22 ನಮ್ಮ ಮುಂದಿನ ಪಾಕವಿಧಾನ ಸೂರ್ಯಕಾಂತಿ ಬೀಜದ ಚಟ್ನಿ ಆಗಿದೆ.


03:26 ಈ ಪಾಕವಿಧಾನಕ್ಕಾಗಿ ನಿಮಗೆ :


03:28 2 ಟೇಬಲ್ ಚಮಚ ಸೂರ್ಯಕಾಂತಿ ಬೀಜಗಳು,
03:32 1 ಹಸಿ ಮೆಣಸು,

4 ರಿಂದ 5 ಬೆಳ್ಳುಳ್ಳಿಯ ಎಸಳುಗಳು,

03:36 1 ಚಿಕ್ಕ ಹೆಚ್ಚಿದ ಟೊಮೆಟೊ,


03:39 ರುಚಿಗೆ ತಕ್ಕಷ್ಟು ಉಪ್ಪು,
03:41 ½ ಚಮಚ ಎಣ್ಣೆ ಅಥವಾ ತುಪ್ಪ ಬೇಕು.


03:44 ವಿಧಾನ :

ಮಧ್ಯಮ ಉರಿಯಲ್ಲಿ ಸೂರ್ಯಕಾಂತಿ ಬೀಜಗಳನ್ನು ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿಯಿರಿ.

03:50 ನಂತರ ಅವುಗಳನ್ನು ತಣ್ಣಗಾಗಲು ಬಿಡಿ.


03:52 ಒಂದು ಬಾಣಲೆಯಲ್ಲಿ ಎಣ್ಣೆ ಅಥವಾ ತುಪ್ಪವನ್ನು ಬಿಸಿಮಾಡಿ.


03:55 ನಂತರ ಹೆಚ್ಚಿದ ಟೊಮೆಟೊ ವನ್ನು ಹುರಿಯಿರಿ.


03:57 ಅದನ್ನು ತಣ್ಣಗಾಗಲು ಬಿಡಿ.


04:00 ಇವೆರಡನ್ನೂ ಬೆಳ್ಳುಳ್ಳಿ, ಮೆಣಸಿನಕಾಯಿ, ಉಪ್ಪು ಮತ್ತು ನೀರಿನೊಂದಿಗೆ ಅರೆಯಿರಿ.
04:07 ಸೂರ್ಯಕಾಂತಿ ಬೀಜದ ಚಟ್ನಿ ಸಿದ್ಧವಿದೆ.


04:10 2 ಚಮಚದಷ್ಟು ಈ ಚಟ್ನಿ, 133 ಮಿಲಿಗ್ರಾಂ ಮೆಗ್ನೇಶಿಯಮ್ ಅನ್ನು ಹೊಂದಿರುತ್ತದೆ.
04:17 ಮುಂದಿನ ಪಾಕವಿಧಾನ ಕೌಪಿಯಾದ ಮೊಳಕೆಯ ಪರಾಟಾ ಆಗಿದೆ.(stuffed flat bread).


04:21 ಮೊಳಕೆಯೊಡೆಸುವ ವಿಧಾನವನ್ನು ಹಿಂದಿನ ಟ್ಯುಟೊರಿಯಲ್ ನಲ್ಲಿ ವಿವರಿಸಲಾಗಿದೆ.
04:27 ಈ ಪಾಕವಿಧಾನಕ್ಕಾಗಿ ನಮಗೆ :


04:30 1/4 ಕಪ್ ಗೋದಿ ಹಿಟ್ಟು,


04:32 2 ಟೇಬಲ್ ಚಮಚ ಕೌಪಿಯಾ ಮೊಳಕೆಗಳು,


04:36 1 ಟೇಬಲ್ ಚಮಚ ಎಳ್ಳಿನ ಬೀಜಗಳು,
04:39 1 ಹಸಿ ಮೆಣಸಿನಕಾಯಿ,


04:40 1 ಟೇಬಲ್ ಚಮಚ ಜೀರಿಗೆ,


04:43 ½ ಚಮಚ ಅರಿಶಿನ ಬೇಕು.
04:46 ನಿಮಗೆ

ರುಚಿಗೆ ತಕ್ಕಷ್ಟು ಉಪ್ಪು,

04:49 ಮತ್ತು ೨ ಚಮಚ ಎಣ್ಣೆ ಅಥವಾ ತುಪ್ಪ ಕೂಡಾ ಬೇಕಾಗುತ್ತದೆ.


04:53 ಮೊದಲು ಮಿಕ್ಸರ್ ನಿಂದ ಹಸಿಮೆಣಸಿನ ಕಾಯಿ ಜೊತೆ, ಕೌಪಿಯಾ ಮೊಳಕೆಯ ಒರಟಾದ ಪೇಸ್ಟ್ ಅನ್ನು ಮಾಡಿಕೊಳ್ಳಿ.
05:00 ಮಿಕ್ಸರ್ ಇಲ್ಲದಿದ್ದರೆ ಒರಳು ಕಲ್ಲನ್ನೂ ಉಪಯೋಗಿಸಬಹುದು.
05:05 ಎಣ್ಣೆಯನ್ನು ಬಾಣಲೆಯಲ್ಲಿ ಕಾಯಿಸಿ, ನಂತರ ಜೀರಿಗೆ ಮತ್ತು ಎಳ್ಳನ್ನು ಸೇರಿಸಿ.
05:11 ಅದರ ಬಣ್ಣ ಬದಲಾಗುವವರೆಗೆ ಹುರಿಯಿರಿ.


05:13 ಕೌಪಿಯಾ ಪೇಸ್ಟ್ ಅನ್ನು ಸೇರಿಸಿ ಮತ್ತೆರಡು ನಿಮಿಷಗಳ ಕಾಲ ಹುರಿಯಿರಿ.
05:19 ಉಪ್ಪು ಮತ್ತು ಅರಿಶಿನದ ಪುಡಿಯನ್ನು ಸೇರಿಸಿ ೫ ನಿಮಿಷಗಳ ಕಾಲ ಬೇಯಿಸಿ.
05:24 ಇದನ್ನು ತಣ್ಣಗಾಗಲು ಬಿಡಿ.


05:27 ಪರಾಟ ವನ್ನು ಮಾಡಲು ಒಂದು ಬೋಗುಣಿಯಲ್ಲಿ ಹಿಟ್ಟನ್ನು ತೆಗೆದುಕೊಳ್ಳಿ.
05:31 ಸಾಕಷ್ಟು ನೀರು ಸೇರಿಸಿ ಹಿಟ್ಟನ್ನು ಬೆರೆಸಿಕೊಳ್ಳಿ.


05:35 ರೋಲಿಂಗ್ ಪಿನ್ ಬಳಸಿ ಹಿಟ್ಟನ್ನು ಚಪ್ಪಟೆ ಮಾಡಿ.


05:39 ಚಪ್ಪಟೆಯಾದ ಹಿಟ್ಟಿನ ಮೇಲೆ ಕೌಪಿಯಾ ಪೇಸ್ಟ್ ಇರಿಸಿ.


05:42 ಎಲ್ಲಾ ಕಡೆಯಿಂದ ಮುಚ್ಚಿರಿ.


05:44 ಸ್ವಲ್ಪ ಹಿಟ್ಟನ್ನು ಉದುರಿಸಿ.
05:46 ಮತ್ತು ಅದನ್ನು ಪರಾಟ ಆಗಿ ಸುತ್ತಿ.


05:49 ಒಂದು ಬಾಣಲೆಯನ್ನು ಬಿಸಿ ಮಾಡಿ ಮತ್ತು ತುಪ್ಪ ಅಥವಾ ಎಣ್ಣೆಯನ್ನು ಹಚ್ಚಿ ಎರಡೂ ಬದಿಗಳಲ್ಲಿ ಪರಾಟಾ ವನ್ನು ಬೇಯಿಸಿ.


05:55 ಕೌಪೀ ಮೊಳಕೆಯ ಪರಾಟಾ ಸಿದ್ಧವಾಗಿದೆ.


05:59 ಒಂದು ಪರಾಟಾ ವು ಸುಮಾರು ೧೭೩ ಮಿಲಿಗ್ರಾಮ್ ಮೆಗ್ನೇಶಿಯಮ್ ಅನ್ನು ಹೊಂದಿರುತ್ತದೆ.
06:05 ಮುಂದಿನ ಪಾಕವಿಧಾನ ಮೊಳಕೆಯೊಡೆದ ಕಡಲೆಕಾಯಿ ಒಣ ಕರಿ.
06:09 ಈ ಪಾಕವಿಧಾನಕ್ಕೆ ನಿಮಗೆ ::


06:12 ¼ ಕಪ್ ಕಡಲೆ ಕಾಯಿ ಮೊಳಕೆ,


06:15 1 ಕಪ್ ತೊಳೆದ ಮೆಂತ್ಯದ ಸೊಪ್ಪು,


06:19 1 ಸಾಧಾರಣ ಕತ್ತರಿಸಿದ ಟೊಮೆಟೊ,


06:21 ಮತ್ತು 1 ಸಾಧಾರಣ ಕತ್ತರಿಸಿದ ಈರುಳ್ಳಿ ಬೇಕು.


06:25 ನಿಮಗೆ :


06:27 ½ ಟೀಚಮಚ ಅರಿಶಿನ ಪುಡಿ,
06:29 ½ ಟೀಚಮಚ ಕೆಂಪು ಮೆಣಸಿನ ಪುಡಿ,


06:31 1 ಚಮಚ ಹುರಿದ ಕಡಲೆಕಾಯಿ ಪುಡಿ,
06:35 1 ಚಮಚ ಎಣ್ಣೆ,


06:37 ಮತ್ತು ರುಚಿಗೆ ತಕ್ಕಷ್ಟು ಉಪ್ಪು ಕೂಡಾ ಬೇಕು.
06:39 ಮಾಡುವ ವಿಧಾನ:

ಮೊಳಕೆಯೊಡೆದ ಕಡಲೆಕಾಯನ್ನು ೨ ಸೀಟಿ ವರೆಗೆ ಕುಕ್ಕರ್ ನಲ್ಲಿ ಬೇಯಿಸಿ.


06:45 ಒತ್ತಡ ಬಿಡುಗಡೆಯಾಗುವವರೆಗೆ ಕಾಯಿರಿ.


06:47 ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ.


06:49 ಈರುಳ್ಳಿ ಸೇರಿಸಿ ಮತ್ತು ಬಣ್ಣ ಬದಲಾಯಿಸುವವರೆಗೆ ಹುರಿಯಿರಿ.


06:53 ಟೊಮ್ಯಾಟೊ ಸೇರಿಸಿ ಮತ್ತು ಅವು ಮೃದುವಾಗುವವರೆಗೆ ಬೇಯಿಸಿ.
06:57 ಮೆಂತ್ಯದ ಎಲೆಗಳನ್ನು ಸೇರಿಸಿ ಮತ್ತು 5 ನಿಮಿಷ ಬೇಯಿಸಿ.


07:02 ಈಗ ಮಸಾಲೆ, ಉಪ್ಪು ಮತ್ತು ಮೊಳಕೆಯೊಡೆದ ಕಡಲೆಕಾಯಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.


07:08 ಇದಕ್ಕೆ ಕಡಲೆಕಾಯಿ ಪುಡಿ ಸೇರಿಸಿ


07:11 ಬಾಣಲೆಯನ್ನು ಒಂದು ಮುಚ್ಚಳದಿಂದ ಮುಚ್ಚಿ 5 ರಿಂದ 10 ನಿಮಿಷ ಬೇಯಿಸಿ.


07:15 ಮೊಳಕೆಯೊಡೆದ ಕಡಲೆಕಾಯಿ ಒಣ ಕರಿ ಸಿದ್ಧವಾಗಿದೆ.


07:19 ½ ಬೋಗುಣಿ ಕರಿ, ಸುಮಾರು 141 ಮಿಗ್ರಾಂ ಮೆಗ್ನೀಸಿಯಮ್ ಅನ್ನು ಹೊಂದಿರುತ್ತದೆ.
07:26 ಕೊನೆಯ ಪಾಕವಿಧಾನವೆಂದರೆ ಅಮರಂತ್ ಎಲೆಗಳ ಸ್ಟಿರ್ ಫ್ರೈ ಆಗಿದೆ.


07:30 ಈ ಪಾಕವಿಧಾನಕ್ಕಾಗಿ ನಿಮಗೆ :


07:33 100 ಗ್ರಾಂ ನಷ್ಟು ತೊಳೆದ ಅಮರಂತ್ ಎಲೆಗಳು,


07:36 4 ಬೆಳ್ಳುಳ್ಳಿ ಎಸಳುಗಳು,


07:38 1 ಸಣ್ಣ ಈರುಳ್ಳಿ,


07:40 2 ಚಮಚ ತುರಿದ ತೆಂಗಿನಕಾಯಿ,


07:43 2 ಹಸಿ ಮೆಣಸಿನಕಾಯಿ,


07:45 ಸ್ವಲ್ಪ ಅರಿಶಿನ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಬೇಕು.


07:49 ನಿಮಗೆ 1 ಟೀಸ್ಪೂನ್ ಎಣ್ಣೆಯ ಅಗತ್ಯವಿರುತ್ತದೆ.


07:53 ಮಾಡುವ ವಿಧಾನ :

ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿಕೊಳ್ಳಿ.


07:56 ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ ಮತ್ತು ಈರುಳ್ಳಿ ಸೇರಿಸಿ


08:01 ಅವು ಬಣ್ಣವನ್ನು ಬದಲಾಯಿಸುವವರೆಗೆ ಫ್ರೈ ಮಾಡಿ.


08:03 ಈಗ ಅಮರಂಥ್ ಎಲೆಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
08:07 ಒಂದು ಮುಚ್ಚಳದಿಂದ ಮುಚ್ಚಿ 5 ರಿಂದ 7 ನಿಮಿಷ ಬೇಯಿಸಿ.


08:12 ಉಪ್ಪು ಮತ್ತು ಅರಿಶಿನ ಸೇರಿಸಿ ಮತ್ತು 1 ನಿಮಿಷ ಬೇಯಿಸಿ.


08:16 ಇದಕ್ಕೆ ತುರಿದ ತೆಂಗಿನಕಾಯಿ ಸೇರಿಸಿ 5 ನಿಮಿಷ ಬೇಯಿಸಿ.


08:21 ಅಮರಂತ್ ಎಲೆಗಳ ಫ್ರೈ ಸಿದ್ಧವಾಗಿದೆ.
08:25 ½ ಸ್ಟಿರ್ ಫ್ರೈನ ಬೌಲ್ ಸುಮಾರು 209 ಮಿಲಿಗ್ರಾಂ ಮೆಗ್ನೀಸಿಯಮ್ ಅನ್ನು ಹೊಂದಿರುತ್ತದೆ.


08:31 ಉತ್ತಮ ಆರೋಗ್ಯಕ್ಕಾಗಿ ನಿಮ್ಮ ದೈನಂದಿನ ಆಹಾರದಲ್ಲಿ ಈ 'ಮೆಗ್ನೀಸಿಯಮ್' ಹೆಚ್ಚಿರುವ ಪಾಕವಿಧಾನಗಳನ್ನು ಸೇರಿಸಿ.


08:38 ನಾವು ಪಾಠದ ಕೊನೆಯಲ್ಲಿದ್ದೇವೆ.


08:41 ಅನುವಾದ ಮತ್ತು ಧ್ವನಿ ಶ್ರೀಮತಿ ನಯನಾ ಭಟ್ಟ.

ಧನ್ಯವಾದಗಳು.


Contributors and Content Editors

Debosmita, NaveenBhat