Inkscape/C4/Special-effects-on-text/Kannada
From Script | Spoken-Tutorial
Revision as of 09:07, 14 August 2017 by NaveenBhat (Talk | contribs)
Time | Narration' |
00:01 | Inkscape ನಲ್ಲಿ Special Effects on Text ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸುಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು
ರಿಫ್ಲೆಕ್ಟೆಡ್ ಟೆಕ್ಸ್ಟ್, ಲೇಬಲ್ಡ್ ಟೆಕ್ಸ್ಟ್ ಅನ್ನು ಕ್ರಿಯೆಟ್ ಮಾಡುವುದು ಮತ್ತು ಟೆಕ್ಸ್ಟ್ ನ ಕೇಸ್ ಅನ್ನು ಬದಲಿಸುವುದರ ಕುರಿತು ಕಲಿಯುತ್ತೇವೆ. |
00:16 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು Ubuntu Linux 12.04 ಒ ಎಸ್ ಅನ್ನು ಉಪಯೋಗಿಸಿದ್ದೇನೆ. |
00:22 | ಈ ಸರಣಿಯ ಹಿಂದಿನ ಎಲ್ಲಾ ಟ್ಯುಟೋರಿಯಲ್ ಗಳನ್ನು ನಾನು 0.48.4 ಆವೃತ್ತಿಯಲ್ಲಿ ರೆಕಾರ್ಡ್ ಮಾಡಿದ್ದೇನೆ. |
00:28 | ಈ ಟ್ಯುಟೋರಿಯಲ್ ನಿಂದ ನಾನು 0.91 ಆವೃತಿಯಲ್ಲಿ ರೆಕಾರ್ಡ್ ಮಾಡುತ್ತೇನೆ. ಮತ್ತು ಇದು ಹೊಸ ಆವೃತ್ತಿಯಾಗಿದೆ. |
00:35 | Inkscape ಅನ್ನು ತೆರೆಯೋಣ. ಮೊದಲು ನಾವು ರಿಫ್ಲೆಕ್ಟೆಡ್ ಟೆಕ್ಸ್ಟ್ ಅನ್ನು ರಚಿಸಲು ಕಲಿಯೋಣ. |
00:41 | Text ಟೂಲ್ ಅನ್ನು ಆರಿಸಿಕೊಳ್ಳಿ ಮತ್ತು SPOKEN ಎಂಬ ಪದವನ್ನು ಟೈಪ್ ಮಾಡಿ. ಟೆಕ್ಸ್ಟ್ ಅನ್ನು bold ಮಾಡಿ. |
00:49 | ಆ ಟೆಕ್ಸ್ಟ್ ಅನ್ನು ಜೂಮ್ ಮಾಡೋಣ, ಆಗ ಡೆಮೋ ಸ್ಪಷ್ಟವಾಗಿ ಕಾಣಿಸುತ್ತದೆ. |
00:54 | ಈಗ Object menu ಗೆ ಹೋಗಿ ಮತ್ತು Fill and Stroke ಆಯ್ಕೆಯನ್ನು ಆರಿಸಿಕೊಳ್ಳಿ. |
00:59 | ನಂತರ Fill ಟ್ಯಾಬ್ ನಡಿಯಲ್ಲಿ Linear gradient ನ ಮೇಲೆ ಕ್ಲಿಕ್ ಮಾಡಿ. |
01:03 | ಈಗ ತೋರಿಸಿದಂತೆ ಗ್ರೇಡಿಯೆಂಟ್ handle ನ ಮೇಲೆ ಕ್ಲಿಕ್ ಮಾಡಿ ಮತ್ತು ಗ್ರೇಡಿಯೆಂಟ್ ಬಣ್ಣವನ್ನು ಕೆಂಪು ಮತ್ತು ನೀಲಿಗೆ ಬದಲಿಸಿ. |
01:12 | ಗ್ರೇಡಿಯೆಂಟ್ ಅನ್ನು ಲಂಬವಾಗಿ ಅಲೈನ್ ಮಾಡಿ. ಹಾಗಾಗಿ ಈಗ, ಪರದೆಯಲ್ಲಿ ತೋರಿಸಿದಂತೆ, ಕೆಂಪುಬಣ್ಣವು ಮೇಲೆ ಬರುತ್ತದೆ ಮತ್ತು ನೀಲಿ ಬಣ್ಣವು ಕೆಳಭಾಗದಲ್ಲಿ ಬರುತ್ತದೆ. |
01:21 | Selector tool ನ ಮೇಲೆ ಕ್ಲಿಕ್ ಮಾಡಿ ಮತ್ತು ಟೆಕ್ಸ್ಟ್ ಅನ್ನು ನಕಲು ಮಾಡಲು Ctrl + D ಯನ್ನು ಒತ್ತಿ. |
01:27 | ಈಗ ನಕಲು ಮಾಡಿದ ಟೆಕ್ಸ್ಟ್ ಅನ್ನು ಫ್ಲಿಪ್ ಮಾಡಲು ಕೀ ಬೋರ್ಡ್ ನಲ್ಲಿ V ಯನ್ನು ಒತ್ತಿ. |
01:32 | ನಾವು ಫ್ಲಿಪ್ ಮಾಡಲು Tool controls bar ನಲ್ಲಿ ಲಭ್ಯವಿರುವ ಆಯ್ಕೆಯನ್ನು ಕೂಡ ಆರಿಸಿಕೊಳ್ಳಬಹುದು. |
01:39 | ಈಗ ನಾವು ಅಸಲಿ ಟೆಕ್ಸ್ಟ್ ನ ಕೆಳಗೆ ಈ ನಕಲಿ ಟೆಕ್ಸ್ಟ್ ಅನ್ನು, ಅದು ಕನ್ನಡಿಯ ಬಿಂಬದಂತೆ ಕಾಣುವ ಹಾಗೆ ಇಡಬೇಕು. |
01:46 | ಈಗ Gradient tool ಅನ್ನು ಆರಿಸಿಕೊಳ್ಳಿ ಮತ್ತು ಗ್ರೇಡಿಯೆಂಟ್ ಹ್ಯಾಂಡಲ್ ನ ಕೆಳಭಾಗವನ್ನು ಕ್ಲಿಕ್ ಮಾಡಿ. |
01:52 | Fill and Stroke ಡಯಲಾಗ್ ಬಾಕ್ಸ್ ಗೆ ಹಿಂದಿರುಗಿ, ಇಲ್ಲಿ ನಾವು Alpha ಬೆಲೆಯನ್ನು 0 ಗೆ ಬದಲಿಸುತ್ತೇವೆ. |
01:59 | ನಾವು ಕೆಳಗಿನ ಹ್ಯಾಂಡಲ್ ಅನ್ನು ಕೂಡ ಸ್ವಲ್ಪ ಮೇಲ್ಭಾಗದತ್ತ ಸರಿಸುತ್ತೇವೆ. |
02:05 | Selector tool ನ ಮೇಲೆ ಕ್ಲಿಕ್ ಮಾಡಿ, ಈಗ Opacity ಯನ್ನು 80 ಕ್ಕೆ ಇಳಿಸಿ ಮತ್ತು Enter ಅನ್ನು ಒತ್ತಿ. |
02:12 | ಈಗ ನಮ್ಮ ರಿಫ್ಲೆಕ್ಟೆಡ್ ಟೆಕ್ಸ್ಟ್ ಪೂರ್ಣಗೊಂಡಿದೆ. ಇನ್ನು ಚೆನ್ನಾಗಿ ನೋಡಲು ಸ್ವಲ್ಪ ಜೂಮ್ ಔಟ್ ಮಾಡಿ. |
02:20 | ನಂತರ ಲೇಬಲ್ಡ್ ಟೆಕ್ಸ್ಟ್ ಅನ್ನು ರಚಿಸಲು ಕಲಿಯುತ್ತೇವೆ. |
02:23 | ಮೊದಲನೆಯದಾಗಿ, ಹಸಿರು ಬಣ್ಣದಲ್ಲಿ ಒಂದು ಆಯತವನ್ನು ರಚಿಸೋಣ. Alpha ಬೆಲೆಯು ಸೊನ್ನೆಯಾಗಿರುವುದರಿಂದ ಅದು ಕಾಣಿಸುವುದಿಲ್ಲ. |
02:32 | ಅದನ್ನು 255 ಕ್ಕೆ ಬದಲಿಸಿ ಮತ್ತು Enter ಅನ್ನು ಒತ್ತಿ. |
02:36 | ಈಗ ಆಯತದಲ್ಲಿ “SPOKEN TUTORIAL” ಎಂದು ಟೈಪ್ ಮಾಡಿ. |
02:43 | Selector ಟೂಲ್ ನ ಮೇಲೆ ಕ್ಲಿಕ್ ಮಾಡಿ ಮತ್ತು ಆಯತದ ಗಾತ್ರವನ್ನು ಟೆಕ್ಸ್ಟ್ ಗೆ ತಕ್ಕಂತೆ ಬದಲಿಸಿ. |
02:48 | ನಂತರ ಟೆಕ್ಸ್ಟ್ ಅನ್ನು ಆಯ್ಕೆ ಮಾಡಿಕೊಳ್ಳಿ. ಈಗ ಟೆಕ್ಸ್ಟ್ ಅನ್ನು ನಕಲು ಮಾಡಲು Ctrl + D ಯನ್ನು ಒತ್ತಿ. |
02:54 | ನಕಲಿ ಟೆಕ್ಸ್ಟ್ ಅಸಲಿ ಟೆಕ್ಸ್ಟ್ ನ ಮೇಲ್ಭಾಗದಲ್ಲಿರಬೇಕು. |
02:58 | ಟೆಕ್ಸ್ಟ್ ನ ಬಣ್ಣವನ್ನು ಬಿಳಿ ಗೆ ಬದಲಿಸಿ, ನಂತರ Path menu ಗೆ ಹೋಗಿ ಮತ್ತು Object to path ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
03:07 | ಈಗ Object menu ವಿನ ಮೇಲಿ ಕ್ಲಿಕ್ ಮಾಡಿ ಮತ್ತು ನಂತರ Ungroup ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
03:12 | ಮತ್ತು Path menu ಹೋಗಿ ಮತ್ತು Union ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
03:17 | Tool controls bar ನಲ್ಲಿ Lower selection one step ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
03:23 | ಮತ್ತೊಮ್ಮೆ, Path ಮೆನು ಗೆ ಹೋಗಿ ಮತ್ತು ಈ ಬಾರಿ ನೀವು Linked offset ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
03:30 | ಟೆಕ್ಸ್ಟ್ ನ ಮೇಲೆ ಕಂಡುಬರುವ ಹ್ಯಾಂಡಲ್ ನ ಮೇಲೆ ಕ್ಲಿಕ್ ಮಾಡಿ ಮತ್ತು ಅದರ ಔಟ್ ಲೈನ್ ಅನ್ನು ದೊಡ್ಡದಾಗಿ ಮಾಡಲು ಅದನ್ನು ಡ್ರ್ಯಾಗ್ ಮಾಡಿ. |
03:37 | Selector ಟೂಲ್ ನ ಮೇಲೆ ಕ್ಲಿಕ್ ಮಾಡಿ. ನಂತರ ಟೆಕ್ಸ್ಟ್ ನ ಮೇಲೆ ಕ್ಲಿಕ್ ಮಾಡಿ ಮತ್ತು ಅದನ್ನು ಕೆಳಕ್ಕೆ ಚಲಿಸಿ. |
03:43 | ಅಲ್ಲಿ ಇನ್ನೊಂದು ಟೆಕ್ಸ್ಟ್ ರಚನೆಯಾಗಿದ್ದನ್ನು ಗಮನಿಸಿ, ಟೆಕ್ಸ್ಟ್ ಅನ್ನುಆಯ್ಕೆ ಮಾಡಿಕೊಂಡು ಅದನ್ನು ಡಿಲೀಟ್ ಮಾಡಿ. |
03:49 | ಈಗ ಔಟ್ ಲೈನ್ ಭಾಗವನ್ನು ಆಯ್ಕೆ ಮಾಡಿಕೊಂಡು Nodes ಟೂಲ್ ನ ಮೇಲೆ ಕ್ಲಿಕ್ ಮಾಡಿ. |
03:53 | Tool controls bar ನಲ್ಲಿ Convert selected object to path ಟೂಲ್ ಅನ್ನು ಕ್ಲಿಕ್ ಮಾಡಿ. |
03:58 | ಈಗ ಔಟ್ ಲೈನ್ ನ ಮೇಲೆ ನೋಡ್ ಗಳನ್ನು ನೋಡಬಹುದು, ಇಲ್ಲಿ ತೋರಿಸಿರುವಂತೆ ಮಧ್ಯಭಾಗದಲ್ಲಿರುವ ಬೇಡವಾದ ನೋಡ್ ಗಳನ್ನು ಡಿಲೀಟ್ ಮಾಡಿ. |
04:09 | ಮತ್ತೊಮ್ಮೆ Selector tool ಅನ್ನು ಕ್ಲಿಕ್ ಮಾಡಿ ಮತ್ತು ಟೆಕ್ಸ್ಟ್ ಅನ್ನು ಅದರ ಜಾಗಕ್ಕೆ ಕಳುಹಿಸಿ. |
04:14 | ಟೆಕ್ಸ್ಟ್ ನ ಬಣ್ಣವನ್ನು ಹಸಿರಿಗೆ ಬದಲಿಸಿ. |
04:18 | ಔಟ್ ಲೈನ್ ಭಾಗವನ್ನು ಆಯ್ಕೆ ಮಾಡಿಕೊಳ್ಳಿ ಮತ್ತು ಅದನ್ನು ನಕಲು ಮಾಡಲು Ctrl + D ಯನ್ನು ಒತ್ತಿ. ಮತ್ತೊಮ್ಮೆ ನೆನಪಿಡಿ ನಕಲಿ ಔಟ್ ಲೈನ್ ಅಸಲಿಯ ಮೇಲ್ಭಾಗದಲ್ಲಿರುತ್ತದೆ. |
04:28 | ಬಣ್ಣವನ್ನು ಕಪ್ಪು ಬಣ್ಣಕ್ಕೆ ಬದಲಿಸಿ. |
04:31 | ನಂತರ Tool controls bar ನಲ್ಲಿ Lower selection one step ಐಕಾನ್ ನ ಮೇಲೆ ಮೂರು ಬಾರಿ ಕ್ಲಿಕ್ ಮಾಡಿ. |
04:38 | ಕೊನೆಯಲ್ಲಿ Fill and stroke ಡಯಲಾಗ್ ಬಾಕ್ಸ್ ನಲ್ಲಿ ಒಪಾಸಿಟಿಯನ್ನು 60 ಕ್ಕೆ ಇಳಿಸಿ ಮತ್ತು ಬ್ಲರ್ ಅನ್ನು 7 ಕ್ಕೆ ಹೆಚ್ಚಿಸಿ. |
04:47 | ಇದನ್ನು ಮಾಡಿದ ನಂತರ ನಾವು ಲೇಬಲ್ ಗೆ ಹ್ಯಾಂಗರ್ ಅನ್ನು ಮಾಡಬೇಕು. |
04:50 | ಹಾಗಾಗಿ Ellipse ಟೂಲ್ ನ ಮೇಲೆ ಕ್ಲಿಕ್ ಮಾಡಿ. Ctrl key ಯನ್ನು ಒತ್ತಿ ಹಿಡಿದು ಆಯತದ ಎಡ ಮೇಲ್ಭಾಗದಲ್ಲಿ ಲೇಬಲ್ ನ ಮೇಲೆ ತೂತನ್ನು ಮಾಡುವಂತೆ ಒಂದು ವೃತ್ತವನ್ನು ರಚಿಸಿ. |
05:00 | ವೃತ್ತವನ್ನು ನಕಲು ಮಾಡಲು Ctrl + D ಯನ್ನು ಒತ್ತಿ ಮತ್ತು ವೃತ್ತವನ್ನು ಆಯತದ ಇನ್ನೊಂದು ಭಾಗಕ್ಕೆ ಸರಿಸಿ. |
05:06 | ನಂತರ Bezier tool ನ ಮೇಲೆ ಕ್ಲಿಕ್ ಮಾಡಿ ಮತ್ತು ಇಲ್ಲಿ ತೋರಿಸಿರುವಂತೆ ಒಂದು ವಕ್ರ ರೇಖೆಯನ್ನು ಬರೆಯಿರಿ. |
05:13 | ಬರೆದ ರೇಖೆಯು ಹ್ಯಾಂಗರ್ ನಂತೆ ಕಾಣಬೇಕು. |
05:16 | Fill and stroke ಡಯಲಾಗ್ ಬಾಕ್ಸ್ ನಲ್ಲಿ , Stroke style ನಡಿಯಲ್ಲಿ width ಅನ್ನು 5 ಕ್ಕೆ ಬದಲಿಸಿ. |
05:22 | ಈಗ ನಮ್ಮ ಲೇಬಲ್ಡ್ ಟೆಕ್ಸ್ಟ್ ಸಿದ್ಧವಾಗಿದೆ. ಜೂಮ್ ಔಟ್ ಮಾಡೋಣ ಮತ್ತು ಈಗ ಉತ್ತಮವಾಗಿದೆ. |
05:30 | ನಂತರ Inkscape ನಲ್ಲಿ ಟೆಕ್ಸ್ಟ್ ನ ಕೇಸ್ ಅನ್ನು ಹೇಗೆ ಬದಲಿಸುವುದು ಎಂದು ಕಲಿಯೋಣ. |
05:34 | Text ಟೂಲ್ ನ ಮೇಲೆ ಕ್ಲಿಕ್ ಮಾಡಿ ಮತ್ತು canvas ನ ಮೇಲೆ ವರ್ಣಮಾಲೆಯನ್ನು ಬರೆಯಿರಿ. ಅಕ್ಷರಗಳು ಲೋವರ್ ಕೇಸ್ ನಲ್ಲಿರುವುದನ್ನು ಗಮನಿಸಿ. |
05:43 | ಈಗ Extensions menu ಗೆ ಹೋಗಿ ಮತ್ತು Text ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ Change Case ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನೀವು ಕೆಲವು ಆಯ್ಕೆಗಳನ್ನು ನೋಡಬಹುದು. |
05:52 | UPPERCASE ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ವರ್ಣಮಾಲೆಯ ಕೇಸ್ ಅಪ್ಪರ್ ಕೇಸ್ ಗೆ ಬದಲಾಗುವುದನ್ನು ಗಮನಿಸಿ. |
05:59 | ಈಗ ಮತ್ತೊಮ್ಮೆ ಟೆಕ್ಸ್ಟ್ ನ ಮೇಲೆ ಕ್ಲಿಕ್ ಮಾಡಿ. Extensions menu ಗೆ ಹೋಗಿ, ನಂತರ Text ನ ಮೇಲೆ ಕ್ಲಿಕ್ ಮಾಡಿ ಮತ್ತು ಕೊನೆಯಲ್ಲಿ Change Case ನ ಮೇಲೆ ಕ್ಲಿಕ್ ಮಾಡಿ. |
06:07 | ಈ ಬಾರಿ Random Case ಆಯ್ಕೆಯನ್ನು ಆರಿಸಿಕೊಳ್ಳಿ. ಈಗ ಟೆಕ್ಸ್ಟ್ ನ ಕೇಸ್ ನಲ್ಲಾದ ಬದಲಾವಣೆಯನ್ನು ಗಮನಿಸಿ. |
06:13 | ನೀವು ಉಳಿದ ಆಯ್ಕೆಗಳನ್ನು ಪ್ರಯತ್ನಿಸಬಹುದು. |
06:16 | ಇದರೊಂದಿಗೆ ನಾವು ಟ್ಯುಟೋರಿಯಲ್ ನ ಕೊನೆಯ ಹಂತವನ್ನು ತಲುಪಿದ್ದೇವೆ. |
06:19 | ಸಾರಾಂಶವನ್ನು ನೋಡೋಣ. ಈ ಟ್ಯುಟೋರಿಯಲ್ ನಲ್ಲಿ ನಾವು
ರಿಫ್ಲೆಕ್ಟೆಡ್ ಟೆಕ್ಸ್ಟ್, ಲೇಬಲ್ಡ್ ಟೆಕ್ಸ್ಟ್ ಅನ್ನು ಕ್ರಿಯೇಟ್ ಮಾಡುವುದನ್ನು ಮತ್ತು ಟೆಕ್ಸ್ಟ್ ನ ಕೇಸ್ ಅನ್ನು lowercase ನಿಂದ uppercase ಮತ್ತು random-case ಗೆ ಬದಲಿಸುವುದರ ಕುರಿತು ಕಲಿತಿದ್ದೇವೆ. |
06:31 | ಇಲ್ಲಿ ನಿಮಗೆ ಅಸೈನ್ ಮೆಂಟ್ ಇದೆ. INKSCAPE ಎಂಬ ಟೆಕ್ಸ್ಟ್ ಅನ್ನು ರಚಿಸಿ ಸರ್ಫೇಸ್ ನ ಮೇಲೆ ರಿಫ್ಲೆಕ್ಟ್ ಆಗುವಂತೆ ಮಾಡಿ. |
06:37 | Inkscape ಎಂಬ ಟೆಕ್ಸ್ಟ್ ಅನ್ನು ರಚಿಸಿ ಮತ್ತು ಟೆಕ್ಸ್ಟ್ ನ ಕೇಸ್ ಅನ್ನು Flip case ಗೆ ಬದಲಿಸಿ. |
06:42 | ಪೂರ್ಣಗೊಂಡ ಅಸೈನ್ ಮೆಂಟ್ ಈ ರೀತಿಯಾಗಿ ಕಾಣಬೇಕು. |
06:45 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಕುರಿತು ಹೆಚ್ಚಿನ ವಿಷಯವನ್ನು ತಿಳಿಯಲು ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋಗಳನ್ನು ನೋಡಿ.ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಕುರಿತು ತಿಳಿಸಿಕೊಡುತ್ತದೆ. |
06:51 | ಸ್ಪೋಕನ್ ಟ್ಯುಟೋರಿಯಲ್ ತಂಡವು :ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
06:58 | ಹೆಚ್ಚಿನ ಮಾಹಿತಿಗಾಗಿ ನಮಗೆ ಬರೆಯಿರಿ. |
07:01 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಟಾಕ್ ಟು ಎ ಟೀಚರ್ ನ ಒಂದು ಭಾಗವಾಗಿದೆ.
ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD,ಭಾರತ ಸರ್ಕಾರದಿಂದ ಪ್ರಮಾಣಿತವಾಗಿದೆ |
07:06 | ಇದರ ಕುರಿತು ಹೆಚ್ಚಿನ ವಿವರಗಳು ಈ ಲಿಂಕ್ ನಲ್ಲಿ ದೊರೆಯುತ್ತದೆ. |
07:10 | ಧ್ವನಿ ಮತ್ತು ಅನುವಾದ ನವೀನ್ ಭಟ್ಟ ಉಪ್ಪಿನ ಪಟ್ಟಣ. ಧನ್ಯವಾದಗಳು. |