Inkscape/C4/Special-effects-on-text/Kannada

From Script | Spoken-Tutorial
Jump to: navigation, search
Time Narration'
00:01 Inkscape ನಲ್ಲಿ Special Effects on Text ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸುಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು

ರಿಫ್ಲೆಕ್ಟೆಡ್ ಟೆಕ್ಸ್ಟ್, ಲೇಬಲ್ಡ್ ಟೆಕ್ಸ್ಟ್ ಅನ್ನು ಕ್ರಿಯೆಟ್ ಮಾಡುವುದು ಮತ್ತು ಟೆಕ್ಸ್ಟ್ ನ ಕೇಸ್ ಅನ್ನು ಬದಲಿಸುವುದರ ಕುರಿತು ಕಲಿಯುತ್ತೇವೆ.

00:16 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು Ubuntu Linux 12.04 ಒ ಎಸ್ ಅನ್ನು ಉಪಯೋಗಿಸಿದ್ದೇನೆ.
00:22 ಈ ಸರಣಿಯ ಹಿಂದಿನ ಎಲ್ಲಾ ಟ್ಯುಟೋರಿಯಲ್ ಗಳನ್ನು ನಾನು 0.48.4 ಆವೃತ್ತಿಯಲ್ಲಿ ರೆಕಾರ್ಡ್ ಮಾಡಿದ್ದೇನೆ.
00:28 ಈ ಟ್ಯುಟೋರಿಯಲ್ ನಿಂದ ನಾನು 0.91 ಆವೃತಿಯಲ್ಲಿ ರೆಕಾರ್ಡ್ ಮಾಡುತ್ತೇನೆ. ಮತ್ತು ಇದು ಹೊಸ ಆವೃತ್ತಿಯಾಗಿದೆ.
00:35 Inkscape ಅನ್ನು ತೆರೆಯೋಣ. ಮೊದಲು ನಾವು ರಿಫ್ಲೆಕ್ಟೆಡ್ ಟೆಕ್ಸ್ಟ್ ಅನ್ನು ರಚಿಸಲು ಕಲಿಯೋಣ.
00:41 Text ಟೂಲ್ ಅನ್ನು ಆರಿಸಿಕೊಳ್ಳಿ ಮತ್ತು SPOKEN ಎಂಬ ಪದವನ್ನು ಟೈಪ್ ಮಾಡಿ. ಟೆಕ್ಸ್ಟ್ ಅನ್ನು bold ಮಾಡಿ.
00:49 ಆ ಟೆಕ್ಸ್ಟ್ ಅನ್ನು ಜೂಮ್ ಮಾಡೋಣ, ಆಗ ಡೆಮೋ ಸ್ಪಷ್ಟವಾಗಿ ಕಾಣಿಸುತ್ತದೆ.
00:54 ಈಗ Object menu ಗೆ ಹೋಗಿ ಮತ್ತು Fill and Stroke ಆಯ್ಕೆಯನ್ನು ಆರಿಸಿಕೊಳ್ಳಿ.
00:59 ನಂತರ Fill ಟ್ಯಾಬ್ ನಡಿಯಲ್ಲಿ Linear gradient ನ ಮೇಲೆ ಕ್ಲಿಕ್ ಮಾಡಿ.
01:03 ಈಗ ತೋರಿಸಿದಂತೆ ಗ್ರೇಡಿಯೆಂಟ್ handle ನ ಮೇಲೆ ಕ್ಲಿಕ್ ಮಾಡಿ ಮತ್ತು ಗ್ರೇಡಿಯೆಂಟ್ ಬಣ್ಣವನ್ನು ಕೆಂಪು ಮತ್ತು ನೀಲಿಗೆ ಬದಲಿಸಿ.
01:12 ಗ್ರೇಡಿಯೆಂಟ್ ಅನ್ನು ಲಂಬವಾಗಿ ಅಲೈನ್ ಮಾಡಿ. ಹಾಗಾಗಿ ಈಗ, ಪರದೆಯಲ್ಲಿ ತೋರಿಸಿದಂತೆ, ಕೆಂಪುಬಣ್ಣವು ಮೇಲೆ ಬರುತ್ತದೆ ಮತ್ತು ನೀಲಿ ಬಣ್ಣವು ಕೆಳಭಾಗದಲ್ಲಿ ಬರುತ್ತದೆ.
01:21 Selector tool ನ ಮೇಲೆ ಕ್ಲಿಕ್ ಮಾಡಿ ಮತ್ತು ಟೆಕ್ಸ್ಟ್ ಅನ್ನು ನಕಲು ಮಾಡಲು Ctrl + D ಯನ್ನು ಒತ್ತಿ.
01:27 ಈಗ ನಕಲು ಮಾಡಿದ ಟೆಕ್ಸ್ಟ್ ಅನ್ನು ಫ್ಲಿಪ್ ಮಾಡಲು ಕೀ ಬೋರ್ಡ್ ನಲ್ಲಿ V ಯನ್ನು ಒತ್ತಿ.
01:32 ನಾವು ಫ್ಲಿಪ್ ಮಾಡಲು Tool controls bar ನಲ್ಲಿ ಲಭ್ಯವಿರುವ ಆಯ್ಕೆಯನ್ನು ಕೂಡ ಆರಿಸಿಕೊಳ್ಳಬಹುದು.
01:39 ಈಗ ನಾವು ಅಸಲಿ ಟೆಕ್ಸ್ಟ್ ನ ಕೆಳಗೆ ಈ ನಕಲಿ ಟೆಕ್ಸ್ಟ್ ಅನ್ನು, ಅದು ಕನ್ನಡಿಯ ಬಿಂಬದಂತೆ ಕಾಣುವ ಹಾಗೆ ಇಡಬೇಕು.
01:46 ಈಗ Gradient tool ಅನ್ನು ಆರಿಸಿಕೊಳ್ಳಿ ಮತ್ತು ಗ್ರೇಡಿಯೆಂಟ್ ಹ್ಯಾಂಡಲ್ ನ ಕೆಳಭಾಗವನ್ನು ಕ್ಲಿಕ್ ಮಾಡಿ.
01:52 Fill and Stroke ಡಯಲಾಗ್ ಬಾಕ್ಸ್ ಗೆ ಹಿಂದಿರುಗಿ, ಇಲ್ಲಿ ನಾವು Alpha ಬೆಲೆಯನ್ನು 0 ಗೆ ಬದಲಿಸುತ್ತೇವೆ.
01:59 ನಾವು ಕೆಳಗಿನ ಹ್ಯಾಂಡಲ್ ಅನ್ನು ಕೂಡ ಸ್ವಲ್ಪ ಮೇಲ್ಭಾಗದತ್ತ ಸರಿಸುತ್ತೇವೆ.
02:05 Selector tool ನ ಮೇಲೆ ಕ್ಲಿಕ್ ಮಾಡಿ, ಈಗ Opacity ಯನ್ನು 80 ಕ್ಕೆ ಇಳಿಸಿ ಮತ್ತು Enter ಅನ್ನು ಒತ್ತಿ.
02:12 ಈಗ ನಮ್ಮ ರಿಫ್ಲೆಕ್ಟೆಡ್ ಟೆಕ್ಸ್ಟ್ ಪೂರ್ಣಗೊಂಡಿದೆ. ಇನ್ನು ಚೆನ್ನಾಗಿ ನೋಡಲು ಸ್ವಲ್ಪ ಜೂಮ್ ಔಟ್ ಮಾಡಿ.
02:20 ನಂತರ ಲೇಬಲ್ಡ್ ಟೆಕ್ಸ್ಟ್ ಅನ್ನು ರಚಿಸಲು ಕಲಿಯುತ್ತೇವೆ.
02:23 ಮೊದಲನೆಯದಾಗಿ, ಹಸಿರು ಬಣ್ಣದಲ್ಲಿ ಒಂದು ಆಯತವನ್ನು ರಚಿಸೋಣ. Alpha ಬೆಲೆಯು ಸೊನ್ನೆಯಾಗಿರುವುದರಿಂದ ಅದು ಕಾಣಿಸುವುದಿಲ್ಲ.
02:32 ಅದನ್ನು 255 ಕ್ಕೆ ಬದಲಿಸಿ ಮತ್ತು Enter ಅನ್ನು ಒತ್ತಿ.
02:36 ಈಗ ಆಯತದಲ್ಲಿ “SPOKEN TUTORIAL” ಎಂದು ಟೈಪ್ ಮಾಡಿ.
02:43 Selector ಟೂಲ್ ನ ಮೇಲೆ ಕ್ಲಿಕ್ ಮಾಡಿ ಮತ್ತು ಆಯತದ ಗಾತ್ರವನ್ನು ಟೆಕ್ಸ್ಟ್ ಗೆ ತಕ್ಕಂತೆ ಬದಲಿಸಿ.
02:48 ನಂತರ ಟೆಕ್ಸ್ಟ್ ಅನ್ನು ಆಯ್ಕೆ ಮಾಡಿಕೊಳ್ಳಿ. ಈಗ ಟೆಕ್ಸ್ಟ್ ಅನ್ನು ನಕಲು ಮಾಡಲು Ctrl + D ಯನ್ನು ಒತ್ತಿ.
02:54 ನಕಲಿ ಟೆಕ್ಸ್ಟ್ ಅಸಲಿ ಟೆಕ್ಸ್ಟ್ ನ ಮೇಲ್ಭಾಗದಲ್ಲಿರಬೇಕು.
02:58 ಟೆಕ್ಸ್ಟ್ ನ ಬಣ್ಣವನ್ನು ಬಿಳಿ ಗೆ ಬದಲಿಸಿ, ನಂತರ Path menu ಗೆ ಹೋಗಿ ಮತ್ತು Object to path ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
03:07 ಈಗ Object menu ವಿನ ಮೇಲಿ ಕ್ಲಿಕ್ ಮಾಡಿ ಮತ್ತು ನಂತರ Ungroup ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
03:12 ಮತ್ತು Path menu ಹೋಗಿ ಮತ್ತು Union ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
03:17 Tool controls bar ನಲ್ಲಿ Lower selection one step ಐಕಾನ್ ನ ಮೇಲೆ ಕ್ಲಿಕ್ ಮಾಡಿ.
03:23 ಮತ್ತೊಮ್ಮೆ, Path ಮೆನು ಗೆ ಹೋಗಿ ಮತ್ತು ಈ ಬಾರಿ ನೀವು Linked offset ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
03:30 ಟೆಕ್ಸ್ಟ್ ನ ಮೇಲೆ ಕಂಡುಬರುವ ಹ್ಯಾಂಡಲ್ ನ ಮೇಲೆ ಕ್ಲಿಕ್ ಮಾಡಿ ಮತ್ತು ಅದರ ಔಟ್ ಲೈನ್ ಅನ್ನು ದೊಡ್ಡದಾಗಿ ಮಾಡಲು ಅದನ್ನು ಡ್ರ್ಯಾಗ್ ಮಾಡಿ.
03:37 Selector ಟೂಲ್ ನ ಮೇಲೆ ಕ್ಲಿಕ್ ಮಾಡಿ. ನಂತರ ಟೆಕ್ಸ್ಟ್ ನ ಮೇಲೆ ಕ್ಲಿಕ್ ಮಾಡಿ ಮತ್ತು ಅದನ್ನು ಕೆಳಕ್ಕೆ ಚಲಿಸಿ.
03:43 ಅಲ್ಲಿ ಇನ್ನೊಂದು ಟೆಕ್ಸ್ಟ್ ರಚನೆಯಾಗಿದ್ದನ್ನು ಗಮನಿಸಿ, ಟೆಕ್ಸ್ಟ್ ಅನ್ನುಆಯ್ಕೆ ಮಾಡಿಕೊಂಡು ಅದನ್ನು ಡಿಲೀಟ್ ಮಾಡಿ.
03:49 ಈಗ ಔಟ್ ಲೈನ್ ಭಾಗವನ್ನು ಆಯ್ಕೆ ಮಾಡಿಕೊಂಡು Nodes ಟೂಲ್ ನ ಮೇಲೆ ಕ್ಲಿಕ್ ಮಾಡಿ.
03:53 Tool controls bar ನಲ್ಲಿ Convert selected object to path ಟೂಲ್ ಅನ್ನು ಕ್ಲಿಕ್ ಮಾಡಿ.
03:58 ಈಗ ಔಟ್ ಲೈನ್ ನ ಮೇಲೆ ನೋಡ್ ಗಳನ್ನು ನೋಡಬಹುದು, ಇಲ್ಲಿ ತೋರಿಸಿರುವಂತೆ ಮಧ್ಯಭಾಗದಲ್ಲಿರುವ ಬೇಡವಾದ ನೋಡ್ ಗಳನ್ನು ಡಿಲೀಟ್ ಮಾಡಿ.
04:09 ಮತ್ತೊಮ್ಮೆ Selector tool ಅನ್ನು ಕ್ಲಿಕ್ ಮಾಡಿ ಮತ್ತು ಟೆಕ್ಸ್ಟ್ ಅನ್ನು ಅದರ ಜಾಗಕ್ಕೆ ಕಳುಹಿಸಿ.
04:14 ಟೆಕ್ಸ್ಟ್ ನ ಬಣ್ಣವನ್ನು ಹಸಿರಿಗೆ ಬದಲಿಸಿ.
04:18 ಔಟ್ ಲೈನ್ ಭಾಗವನ್ನು ಆಯ್ಕೆ ಮಾಡಿಕೊಳ್ಳಿ ಮತ್ತು ಅದನ್ನು ನಕಲು ಮಾಡಲು Ctrl + D ಯನ್ನು ಒತ್ತಿ. ಮತ್ತೊಮ್ಮೆ ನೆನಪಿಡಿ ನಕಲಿ ಔಟ್ ಲೈನ್ ಅಸಲಿಯ ಮೇಲ್ಭಾಗದಲ್ಲಿರುತ್ತದೆ.
04:28 ಬಣ್ಣವನ್ನು ಕಪ್ಪು ಬಣ್ಣಕ್ಕೆ ಬದಲಿಸಿ.
04:31 ನಂತರ Tool controls bar ನಲ್ಲಿ Lower selection one step ಐಕಾನ್ ನ ಮೇಲೆ ಮೂರು ಬಾರಿ ಕ್ಲಿಕ್ ಮಾಡಿ.
04:38 ಕೊನೆಯಲ್ಲಿ Fill and stroke ಡಯಲಾಗ್ ಬಾಕ್ಸ್ ನಲ್ಲಿ ಒಪಾಸಿಟಿಯನ್ನು 60 ಕ್ಕೆ ಇಳಿಸಿ ಮತ್ತು ಬ್ಲರ್ ಅನ್ನು 7 ಕ್ಕೆ ಹೆಚ್ಚಿಸಿ.
04:47 ಇದನ್ನು ಮಾಡಿದ ನಂತರ ನಾವು ಲೇಬಲ್ ಗೆ ಹ್ಯಾಂಗರ್ ಅನ್ನು ಮಾಡಬೇಕು.
04:50 ಹಾಗಾಗಿ Ellipse ಟೂಲ್ ನ ಮೇಲೆ ಕ್ಲಿಕ್ ಮಾಡಿ. Ctrl key ಯನ್ನು ಒತ್ತಿ ಹಿಡಿದು ಆಯತದ ಎಡ ಮೇಲ್ಭಾಗದಲ್ಲಿ ಲೇಬಲ್ ನ ಮೇಲೆ ತೂತನ್ನು ಮಾಡುವಂತೆ ಒಂದು ವೃತ್ತವನ್ನು ರಚಿಸಿ.
05:00 ವೃತ್ತವನ್ನು ನಕಲು ಮಾಡಲು Ctrl + D ಯನ್ನು ಒತ್ತಿ ಮತ್ತು ವೃತ್ತವನ್ನು ಆಯತದ ಇನ್ನೊಂದು ಭಾಗಕ್ಕೆ ಸರಿಸಿ.
05:06 ನಂತರ Bezier tool ನ ಮೇಲೆ ಕ್ಲಿಕ್ ಮಾಡಿ ಮತ್ತು ಇಲ್ಲಿ ತೋರಿಸಿರುವಂತೆ ಒಂದು ವಕ್ರ ರೇಖೆಯನ್ನು ಬರೆಯಿರಿ.
05:13 ಬರೆದ ರೇಖೆಯು ಹ್ಯಾಂಗರ್ ನಂತೆ ಕಾಣಬೇಕು.
05:16 Fill and stroke ಡಯಲಾಗ್ ಬಾಕ್ಸ್ ನಲ್ಲಿ , Stroke style ನಡಿಯಲ್ಲಿ width ಅನ್ನು 5 ಕ್ಕೆ ಬದಲಿಸಿ.
05:22 ಈಗ ನಮ್ಮ ಲೇಬಲ್ಡ್ ಟೆಕ್ಸ್ಟ್ ಸಿದ್ಧವಾಗಿದೆ. ಜೂಮ್ ಔಟ್ ಮಾಡೋಣ ಮತ್ತು ಈಗ ಉತ್ತಮವಾಗಿದೆ.
05:30 ನಂತರ Inkscape ನಲ್ಲಿ ಟೆಕ್ಸ್ಟ್ ನ ಕೇಸ್ ಅನ್ನು ಹೇಗೆ ಬದಲಿಸುವುದು ಎಂದು ಕಲಿಯೋಣ.
05:34 Text ಟೂಲ್ ನ ಮೇಲೆ ಕ್ಲಿಕ್ ಮಾಡಿ ಮತ್ತು canvas ನ ಮೇಲೆ ವರ್ಣಮಾಲೆಯನ್ನು ಬರೆಯಿರಿ. ಅಕ್ಷರಗಳು ಲೋವರ್ ಕೇಸ್ ನಲ್ಲಿರುವುದನ್ನು ಗಮನಿಸಿ.
05:43 ಈಗ Extensions menu ಗೆ ಹೋಗಿ ಮತ್ತು Text ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ Change Case ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನೀವು ಕೆಲವು ಆಯ್ಕೆಗಳನ್ನು ನೋಡಬಹುದು.
05:52 UPPERCASE ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ವರ್ಣಮಾಲೆಯ ಕೇಸ್ ಅಪ್ಪರ್ ಕೇಸ್ ಗೆ ಬದಲಾಗುವುದನ್ನು ಗಮನಿಸಿ.
05:59 ಈಗ ಮತ್ತೊಮ್ಮೆ ಟೆಕ್ಸ್ಟ್ ನ ಮೇಲೆ ಕ್ಲಿಕ್ ಮಾಡಿ. Extensions menu ಗೆ ಹೋಗಿ, ನಂತರ Text ನ ಮೇಲೆ ಕ್ಲಿಕ್ ಮಾಡಿ ಮತ್ತು ಕೊನೆಯಲ್ಲಿ Change Case ನ ಮೇಲೆ ಕ್ಲಿಕ್ ಮಾಡಿ.
06:07 ಈ ಬಾರಿ Random Case ಆಯ್ಕೆಯನ್ನು ಆರಿಸಿಕೊಳ್ಳಿ. ಈಗ ಟೆಕ್ಸ್ಟ್ ನ ಕೇಸ್ ನಲ್ಲಾದ ಬದಲಾವಣೆಯನ್ನು ಗಮನಿಸಿ.
06:13 ನೀವು ಉಳಿದ ಆಯ್ಕೆಗಳನ್ನು ಪ್ರಯತ್ನಿಸಬಹುದು.
06:16 ಇದರೊಂದಿಗೆ ನಾವು ಟ್ಯುಟೋರಿಯಲ್ ನ ಕೊನೆಯ ಹಂತವನ್ನು ತಲುಪಿದ್ದೇವೆ.
06:19 ಸಾರಾಂಶವನ್ನು ನೋಡೋಣ. ಈ ಟ್ಯುಟೋರಿಯಲ್ ನಲ್ಲಿ ನಾವು

ರಿಫ್ಲೆಕ್ಟೆಡ್ ಟೆಕ್ಸ್ಟ್, ಲೇಬಲ್ಡ್ ಟೆಕ್ಸ್ಟ್ ಅನ್ನು ಕ್ರಿಯೇಟ್ ಮಾಡುವುದನ್ನು ಮತ್ತು ಟೆಕ್ಸ್ಟ್ ನ ಕೇಸ್ ಅನ್ನು lowercase ನಿಂದ uppercase ಮತ್ತು random-case ಗೆ ಬದಲಿಸುವುದರ ಕುರಿತು ಕಲಿತಿದ್ದೇವೆ.

06:31 ಇಲ್ಲಿ ನಿಮಗೆ ಅಸೈನ್ ಮೆಂಟ್ ಇದೆ. INKSCAPE ಎಂಬ ಟೆಕ್ಸ್ಟ್ ಅನ್ನು ರಚಿಸಿ ಸರ್ಫೇಸ್ ನ ಮೇಲೆ ರಿಫ್ಲೆಕ್ಟ್ ಆಗುವಂತೆ ಮಾಡಿ.
06:37 Inkscape ಎಂಬ ಟೆಕ್ಸ್ಟ್ ಅನ್ನು ರಚಿಸಿ ಮತ್ತು ಟೆಕ್ಸ್ಟ್ ನ ಕೇಸ್ ಅನ್ನು Flip case ಗೆ ಬದಲಿಸಿ.
06:42 ಪೂರ್ಣಗೊಂಡ ಅಸೈನ್ ಮೆಂಟ್ ಈ ರೀತಿಯಾಗಿ ಕಾಣಬೇಕು.
06:45 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಕುರಿತು ಹೆಚ್ಚಿನ ವಿಷಯವನ್ನು ತಿಳಿಯಲು ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋಗಳನ್ನು ನೋಡಿ.ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಕುರಿತು ತಿಳಿಸಿಕೊಡುತ್ತದೆ.
06:51 ಸ್ಪೋಕನ್ ಟ್ಯುಟೋರಿಯಲ್ ತಂಡವು :ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
06:58 ಹೆಚ್ಚಿನ ಮಾಹಿತಿಗಾಗಿ ನಮಗೆ ಬರೆಯಿರಿ.
07:01 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಟಾಕ್ ಟು ಎ ಟೀಚರ್ ನ ಒಂದು ಭಾಗವಾಗಿದೆ.

ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD,ಭಾರತ ಸರ್ಕಾರದಿಂದ ಪ್ರಮಾಣಿತವಾಗಿದೆ

07:06 ಇದರ ಕುರಿತು ಹೆಚ್ಚಿನ ವಿವರಗಳು ಈ ಲಿಂಕ್ ನಲ್ಲಿ ದೊರೆಯುತ್ತದೆ.
07:10 ಧ್ವನಿ ಮತ್ತು ಅನುವಾದ ನವೀನ್ ಭಟ್ಟ ಉಪ್ಪಿನ ಪಟ್ಟಣ. ಧನ್ಯವಾದಗಳು.

Contributors and Content Editors

NaveenBhat