BASH/C2/Conditional-Loops/Kannada
From Script | Spoken-Tutorial
Revision as of 15:56, 17 March 2017 by PoojaMoolya (Talk | contribs)
Time | Narration |
---|---|
00:01 | ಬ್ಯಾಶ್ ನಲ್ಲಿ loops ನ ಕುರಿತಾದ ಸ್ಪೊಕನ್-ಟ್ಯುಟೊರಿಯಲ್ ಗೆ ನಿಮಗೆಲ್ಲ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು |
00:09 | for loop ಮತ್ತು |
00:11 | while loop ಗಳನ್ನು ಉದಾಹರಣೆಗಳೊಡನೆ ಕಲಿಯುತ್ತೇವೆ. |
00:15 | ಈ ಟ್ಯುಟೋರಿಯಲ್ ಗಾಗಿ ನಾನು: |
00:18 | Ubuntu Linux 12.04 OS ಮತ್ತು |
00:22 | GNU Bash version 4.1.10 ಗಳನ್ನು ಉಪಯೋಗಿಸುತ್ತೇನೆ. |
00:26 | ತಿಳಿದಿರಲಿ GNU bash version 4 ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ. |
00:34 | ಮೊದಲು loops ನ ಪರಿಚಯದೊಂದಿಗೆ ಪ್ರಾರಂಭಿಸೋಣ. |
00:37 | Loops ಗಳನ್ನು ಸ್ಟೇಟ್-ಮೆಂಟ್ ಗಳ ಗುಂಪನ್ನು ಪುನರಾವರ್ತಿತವಾಗಿ ಎಕ್ಸಿಕ್ಯೂಟ್ ಮಾಡಲು ಉಪಯೋಗಿಸುತ್ತೇವೆ. |
00:43 | ಸಿಂಟ್ಯಾಕ್ಸ್ ಅನ್ನು ನೋಡೋಣ. |
00:45 | for expression 1, 2, 3 |
00:49 | statement 1, 2, 3 |
00:51 | ಮತ್ತು ಇದು for loop ನ ಕೊನೆ. |
00:55 | for loop ಗೆ ಇನ್ನೊಂದು ಪರ್ಯಾಯ ಸಿಂಟ್ಯಾಕ್ಸ್: |
00:58 | for variable in sequence/range |
01:03 | statement 1, 2, 3 |
01:06 | ಮತ್ತು ಇದು for loop ನ ಕೊನೆ. |
01:09 | ಮೊದಲ ಸಿಂಟ್ಯಾಕ್ಸ್ ಅನ್ನು ಉಪಯೋಗಿಸಿ for loop ನ ಒಂದು ಉದಾಹರಣೆಯನ್ನು ನೋಡೋಣ. |
01:14 | ಈ ಪ್ರೋಗ್ರಾಂ ನಲ್ಲಿ ನಾವು ಮೊದಲ n ಸಂಖ್ಯೆಗಳ ಮೊತ್ತವನ್ನು ಕಂಡುಹಿಡಿಯುತ್ತೇವೆ. |
01:20 | ಗಮನಿಸಿ ನಮ್ಮ ಫೈಲ್ ನ ಹೆಸರು for.sh. |
01:25 | ಇದು ನಮ್ಮ shebang line. |
01:28 | number ಎಂಬ ವೇರಿಯೇಬಲ್ ಬಳಕೆದಾರ ನೀಡಿದ ಬೆಲೆಯನ್ನು ಸ್ಟೋರ್ ಮಾಡುತ್ತದೆ. |
01:34 | ಇಲ್ಲಿ ಈ ಬೆಲೆಯು ಇಂಟೀಜರ್ ಆಗಿದೆ. |
01:37 | ಈಗ sum ಎಂಬ ವೇರಿಯೇಬಲ್ ಅನ್ನು ಸೊನ್ನೆಗೆ ಇನಿಷಿಯಲೈಜ್ ಮಾಡೋಣ. |
01:42 | ಇಲ್ಲಿಂದ for loop ಪ್ರಾರಂಭವಾಗುತ್ತದೆ. |
01:45 | ಮೊದಲು ನಾವು 'i' ಅನ್ನು 1 ಕ್ಕೆ ಇನಿಶಿಯಲೈಜ್ ಮಾಡಿದ್ದೇವೆ. |
01:48 | ನಂತರ ನಾವು 'i'ಇದು number ಗಿಂತ ಚಿಕ್ಕದೇ ಅಥವಾ ಸಮವಾಗಿದೆಯೇ ಎಂದು ಪರೀಕ್ಷಿಸುತ್ತೇವೆ. |
01:54 | ಇಲ್ಲಿ ನಾವು sum ಅನ್ನು sum ಪ್ಲಸ್ i ಎಂದು ಲೆಕ್ಕಿಸುತ್ತೇವೆ. |
02:00 | ಮತ್ತು ನಂತರ ಅದನ್ನು ಪ್ರಿಂಟ್ ಮಾಡುತ್ತೇವೆ. |
02:03 | ಇದಾದ ನಂತರ 'i' ನ ಬೆಲೆಗೆ ಒಂದನ್ನು ಸೇರಿಸಿ ಹೆಚ್ಚಿಸುತ್ತೇವೆ. |
02:08 | ಮತ್ತು ನಂತರ ನಾವು ಈ condition False ಆಗುವವರೆಗೂ condition ಅನ್ನು ಪರೀಕ್ಷಿಸುತ್ತೇವೆ. |
02:14 | for loop ನಿಂದ ಹೊರಬಂದ ಮೇಲೆ ಈ ಸಂದೇಶ ಪ್ರಿಂಟ್ ಆಗುತ್ತದೆ. |
02:19 | ಈಗ ಪ್ರೋಗ್ರಾಂ ಅನ್ನು ಎಕ್ಸಿಕ್ಯೂಟ್ ಮಾಡಿ ಏನಾಗುತ್ತದೆಂದು ಪರೀಕ್ಷಿಸೋಣ. |
02:24 | ಟರ್ಮಿನಲ್ ನಲ್ಲಿ chmod ಪ್ಲಸ್ x forಡಾಟ್sh ಎಂದು ಟೈಪ್ ಮಾಡಿ. |
02:31 | ನಂತರ ಡಾಟ್ ಸ್ಲ್ಯಾಶ್ for.sh ಎಂದು ಟೈಪ್ ಮಾಡಿ. |
02:36 | ನಾನು ಇನ್ ಪುಟ್ ಸಂಖ್ಯೆಯನ್ನು 5 ಎಂದು ನಮೂದಿಸುತ್ತೇನೆ. |
02:40 | 'i' ನ ಬೆಲೆಗೆ ಲೆಕ್ಕಮಾಡಿದ ಮೊತ್ತವು ಡಿಸ್ಪ್ಲೇ ಆಗುತ್ತದೆ. |
02:46 | ನಂತರ ಫಲಿತದ ಕೊನೆಯ ಸಾಲು |
02:50 | "Sum of first n numbers is 15" ಎಂದು ಡಿಸ್ಪ್ಲೇ ಆಗುತ್ತದೆ. |
02:54 | ಪ್ರೋಗ್ರಾಮ್ ನ ಹರಿವನ್ನು ನೋಡೋಣ. |
02:57 | ನಾನು ಈಗ windowದ ಗಾತ್ರವನ್ನು ಬದಲಿಸುತ್ತೇನೆ. |
03:00 | ಮೊದಲಿಗೆ 'i' ನ ಬೆಲೆ 1 ಆಗಿರುತ್ತದೆ. |
03:04 | ನಂತರ ನಾವು 1 ಇದು 5 ಕ್ಕಿಂತ ಚಿಕ್ಕದೇ ಅಥವಾ ಸಮವೇ ಎಂದು ಪರೀಕ್ಷಿಸುತ್ತೇವೆ. |
03:10 | ಈ ಕಂಡಿಶನ್ True ಆಗಿರುವುದರಿಂದ ನಾವು sum ಅನ್ನು 0 + 1 ಎಂದು ಲೆಕ್ಕಿಸುತ್ತೇವೆ. |
03:16 | ನಾವು ಈಗ sum ಅನ್ನು 1 ಎಂದು ಹೊಂದಿದ್ದೇವೆ. |
03:20 | ನಂತರ ನಾವು sum ಅನ್ನು ಅಂದರೆ 1 ಅನ್ನು ಪ್ರಿಂಟ್ ಮಾಡುತ್ತೇವೆ. |
03:24 | ಮುಂದೆ 'i' ನ ಬೆಲೆಗೆ 1 ಸೇರಿಸಲ್ಪಡುತ್ತದೆ ಮತ್ತು 'i' ನ ಹೊಸ ಬೆಲೆಯು 2 ಆಗಿರುತ್ತದೆ. |
03:31 | ನಂತರ ನಾವು 2 ಇದು 5 ಕ್ಕಿಂತ ಚಿಕ್ಕದೇ ಅಥವಾ ಸಮವೇ ಎಂದು ಪರೀಕ್ಷಿಸುತ್ತೇವೆ. |
03:36 | ಕಂಡಿಶನ್ True ಆಗಿದೆ ಮತ್ತು ಈಗ sum ಇದು 1 + 2 ಅಂದರೆ 3 ಆಗುತ್ತದೆ. |
03:44 | ಮುಂದೆ 'i' ನ ಬೆಲೆಗೆ 1 ಸೇರಿಸಲ್ಪಡುತ್ತದೆ ಮತ್ತು 'i' ನ ಹೊಸ ಬೆಲೆಯು 3 ಆಗಿರುತ್ತದೆ. |
03:51 | ಮತ್ತು sum ನ ಬೆಲೆಯು 6 ಆಗುತ್ತದೆ. |
03:55 | ಈ script 'i' ನ ಮುಂದಿನ ಬೆಲೆಯು sum ನ ಹಳೆಯ ಬೆಲೆಗೆ ಸೇರಿಸುತ್ತಾ ಮುಂದುವರಿಯುತ್ತದೆ. |
04:02 | ಇದು i<=5 ಎಂಬ ಕಂಡಿಶನ್ False ಆಗುವವರೆಗೆ ಮುಂದುವರಿಯುತ್ತದೆ. |
04:09 | for loop ನಿಂದ ಹೊರಬಂದಾಗ ಕೊನೆಯ ಸಂದೇಶ ಪ್ರಿಂಟ್ ಆಗುತ್ತದೆ. |
04:14 | ಈಗ ಎರಡನೆಯ ಸಿಂಟ್ಯಾಕ್ಸ್ ಅನ್ನು ಉಪಯೋಗಿಸಿ for loop ನ ಇನ್ನೊಂದು ಉದಾಹರಣೆಯನ್ನು ನೋಡೋಣ. |
04:20 | ನಾನು ಈ ಕೋಡ್ ಅನ್ನು ಈ ಫೈಲ್ ನಲ್ಲಿ ಬರೆದು ಇದನ್ನು for-loop.sh ಎಂದು ಹೆಸರಿಸಿದ್ದೇನೆ. |
04:27 | ಈ ಸುಲಭವಾದ ಪ್ರೋಗ್ರಾಂ ಡೈರಕ್ಟರಿಯಲ್ಲಿರುವ ಫೈಲ್ ಗಳನ್ನು ಪಟ್ಟಿ ಮಾಡುತ್ತದೆ. |
04:32 | ಇದು shebang line. |
04:35 | ನಂತರ ನಾವು for loop ಅನ್ನು ಹೊಂದಿದ್ದೇವೆ. |
04:37 | 'ls' ಕಮಾಂಡ್ ಡೈರಕ್ಟರಿಯ ಕಂಟೆಂಟ್ ಅನ್ನು ಪಟ್ಟಿ ಮಾಡುತ್ತದೆ. |
04:41 | -1 (ಹೈಫನ್ ಒಂದು) ಒಂದು ಸಾಲಿನಲ್ಲಿ ಒಂದು ಫೈಲ್ ಅನ್ನು ಪಟ್ಟಿಮಾಡುತ್ತದೆ. |
04:46 | ಇದು ನಿಮ್ಮhome directory ಯಲ್ಲಿ ಇರುವ ಎಲ್ಲಾ ಫೈಲ್ ಗಳನ್ನು ಪಟ್ಟಿ ಮಾಡುತ್ತದೆ. |
04:51 | ಇದು for loop ನ ಕೊನೆ. |
04:53 | ಈಗ ಸ್ಕ್ರಿಪ್ಟ್ ಅನ್ನು ಟರ್ಮಿನಲ್ ನಲ್ಲಿ ಎಕ್ಸಿಕ್ಯೂಟ್ ಮಾಡಲು |
04:58 | chmod +x for-loop.sh ಎಂದು ಟೈಪ್ ಮಾಡಿ. |
05:04 | ./for-loop.sh ಎಂದು ಟೈಪ್ ಮಾಡಿ. |
05:09 | ಇದು Home ಡೈರಕ್ಟರಿಯಲ್ಲಿರುವ ಎಲ್ಲಾ ಫೈಲ್ ಗಳನ್ನು ಡಿಸ್ಪ್ಲೇ ಮಾಡುತ್ತದೆ. |
05:14 | ಈಗ ನಾವು while loop ನ ಕುರಿತು ಕಲಿಯೋಣ. |
05:18 | ಮೊದಲಿಗೆ ಸಿಂಟ್ಯಾಕ್ಸ್ ಅನ್ನು ಅರ್ಥ ಮಾಡಿಕೊಳ್ಳೋಣ. |
05:21 | while condition, statement 1, 2, 3, while loop ನ ಕೊನೆ. |
05:27 | ಇದರ ಅರ್ಥವೇನೆಂದರೆ while ಲೂಪ್ ಕಂಡಿಶನ್ True ಆಗಿರುವವರೆಗೂ ಎಕ್ಸಿಕ್ಯೂಟ್ ಆಗುತ್ತದೆ. |
05:34 | ಈಗ while loop ನ ಒಂದು ಉದಾಹರಣೆಯನ್ನು ನೋಡೋಣ. |
05:37 | ಇಲ್ಲಿ ನಾನು ಇದನ್ನು while.sh ಎಂದು ಹೆಸರಿಸಿದ್ದೇನೆ. |
05:42 | ಈ ಪ್ರೋಗ್ರಾಂ ನಲ್ಲಿ ನಾವು ಕೊಟ್ಟಿರುವ ವ್ಯಾಪ್ತಿಯಲ್ಲಿ ಎಲ್ಲ ಸಮಸಂಖ್ಯೆಗಳ ಮೊತ್ತವನ್ನು ಕಂಡುಹಿಡಿಯುತ್ತೇವೆ. |
05:49 | ಒಮ್ಮೆ code ಅನ್ನು ಅವಲೋಕಿಸೋಣ. |
05:52 | ಇಲ್ಲಿ ನಾವು ಬಳಕೆದಾರರಿಂದ ಒಂದು ಸಂಖ್ಯೆಯನ್ನು ಪಡೆದು ಅದನ್ನು number ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡುತ್ತೇವೆ. |
05:59 | ನಂತರ 'i' ಮತ್ತು sum ಎಂಬ ವೇರಿಯೇಬಲ್ ಗಳನ್ನು ಡಿಕ್ಲೇರ್ ಮಾಡಿ ಅವುಗಳನ್ನು 0 (ಸೊನ್ನೆ)ಗೆ ಇನಿಷಿಯಲೈಜ್ ಮಾಡೋಣ. |
06:06 | ಇದು while ಕಂಡಿಶನ್. |
06:08 | ಇಲ್ಲಿ ನಾವು 'i' ಇದು ಬಳಕೆದಾರ ನೀಡಿದ number ಗಿಂತ ಚಿಕ್ಕದೇ ಅಥವಾ ಸಮವಾಗಿದೆಯೇ ಎಂದು ಪರೀಕ್ಷಿಸುತ್ತೇವೆ. |
06:17 | ನಂತರ ನಾವು sumನ ಬೆಲೆಗೆ 'i' ನ ಬೆಲೆಯನ್ನು ಸೇರಿಸುತ್ತಾ ಹೊಸ sum ಅನ್ನು ಕಂಡುಹಿಡಿಯುತ್ತೇವೆ. |
06:24 | ನಂತರ 'i' ನ ಬೆಲೆಗೆ 2 ಅನ್ನು ಸೇರಿಸುತ್ತೇವೆ. |
06:28 | ಇದು ನಾವು ಕೇವಲ ಸಮಸಂಖ್ಯೆಗಳನ್ನು ಮಾತ್ರ ಕೂಡಿಸುತ್ತೇವೆ ಎಂದು ದ್ರಢೀಕರಿಸುತ್ತದೆ. |
06:33 | ಮತ್ತು while loop ಅನ್ನು 'i' ನ ಬೆಲೆಯು number ನ ಬೆಲೆಯನ್ನು ಮೀರುವ ವರೆಗೂ ಪುನರಾವರ್ತಿಸುತ್ತೇವೆ. |
06:40 | while loop ನಿಂದ ಹೊರಬಂದ ನಂತರ ಕೊಟ್ಟಿರುವ ವ್ಯಾಪ್ತಿಯಲ್ಲಿ ಎಲ್ಲ ಸಮಸಂಖ್ಯೆಗಳ ಮೊತ್ತವನ್ನು ಪ್ರಿಂಟ್ ಮಾಡುತ್ತೇವೆ. |
06:47 | ಈಗ ಪ್ರೋಗ್ರಾಂ ಅನ್ನು ಎಕ್ಸಿಕ್ಯೂಟ್ ಮಾಡೋಣ. |
06:50 | terminal ನಲ್ಲಿ |
06:52 | chmod +x while.sh ಮತ್ತು |
06:56 | ./while.sh ಎಂದು ಟೈಪ್ ಮಾಡಿ. |
07:00 | ನಾನು ಇನ್ ಪುಟ್ ಅನ್ನು15 ಎಂದು ನೀಡುತ್ತೇನೆ. |
07:04 | ಫಲಿತದ ಕೊನೆಯ ಸಾಲು |
07:06 | "Sum of even numbers within the given range is 56" ಎಂದಾಗಿರುತ್ತದೆ. |
07:11 | ಈಗ window ದ ಗಾತ್ರ ಬದಲಾಯಿಸಿ ಫಲಿತವನ್ನು ವಿವರಿಸುತ್ತೇನೆ. |
07:14 | ಮೊದಲು ನಾವು 'i' ಅಂದರೆ 0, ಇದು number ಅಂದರೆ 15 ಕ್ಕಿಂತ ಚಿಕ್ಕದು ಅಥವಾ ಸಮವೇ ಎಂದು ಪರೀಕ್ಷಿಸುತ್ತದೆ. |
07:24 | ಕಂಡಿಷನ್ True ಆಗಿರುವದರಿಂದ sum ಇದು '0+0' ಅಂದರೆ 0 ಯೇ ಆಗಿರುತ್ತದೆ. |
07:31 | ಈಗ 'i' ನ ಬೆಲೆಯನ್ನು 2 ಹೆಚ್ಚಿಸುತ್ತೇವ ಮತ್ತು 'i' ನ ಹೊಸ ಬೆಲೆಯು 2 ಆಗುತ್ತದೆ. |
07:37 | ನಂತರ ನಾವು 2 ಇದು 15 ಕ್ಕಿಂತ ಚಿಕ್ಕದು ಅಥವಾ ಸಮವೇ ಎಂದು ಪರೀಕ್ಷಿಸುತ್ತೇವೆ. |
07:43 | ಪುನಃ ಕಂಡಿಶನ್ True ಆಗಿರುವುದರಿಂದ ನಾವು 0+2 ಎಂದು ಸೇರಿಸುತ್ತೇವೆ. |
07:49 | ಈಗsum ನ ಬೆಲೆ 2 ಆಗುವುದು. |
07:52 | ಮತ್ತೆ 'i' ನ ಬೆಲೆಯು 2 ಹೆಚ್ಚಾಗುವುದು. |
07:56 | ಹಾಗಾಗಿ ಈಗ 'i' ನ ಬೆಲೆ 2+2 ಅಂದರೆ 4 ಆಗುವುದು. |
08:03 | ಮತ್ತು sum ನ ಮುಂದಿನ ಬೆಲೆ 4+2 ಅಂದರೆ 6 ಆಗುವುದು. |
08:09 | ಹೀಗೆಯೇ script 'i' ನ ಹಿಂದಿನ ಬೆಲೆಗೆ 2 ಅನ್ನು ಸೇರಿಸುತ್ತಾ15 ಅನ್ನು ಮೀರುವವರೆಗೂ ಮುಂದುವರಿಯುತ್ತದೆ. |
08:18 | ಮತ್ತು ನಾವು ಕೊನೆಗೆ sum ನ ಬೆಲೆಯನ್ನು 56 ಎಂದು ಪಡೆಯುತ್ತೇವೆ. |
08:24 | ಇಲ್ಲಿಗೆ ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. |
08:27 | ಸಾರಾಂಶವನ್ನು ನೋಡೋಣ. |
08:28 | ಈ ಟ್ಯುಟೋರಿಯಲ್ ನಲ್ಲಿ ನಾವು for loop ನ ಎರಡು ಬೇರೆ ಬೇರೆ ಸಿಂಟ್ಯಾಕ್ಸ್ ಗಳನ್ನೂ ಮತ್ತು while loop ನ ಕುರಿತು ಕಲಿತಿದ್ದೇವೆ. |
08:37 | ಸ್ವಂತ ಅಭ್ಯಾಸಕ್ಕಾಗಿ ಮೊದಲ "n" ಅವಿಭಾಜ್ಯ ಸಂಖ್ಯೆಗಳ ಮೊತ್ತವನ್ನು ಕಂಡು ಹಿಡಿಯಿರಿ. |
08:43 | ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ.. |
08:46 | ಅದು Spoken Tutorial projectನ ಕುರಿತು ತಿಳಿಸಿಕೊಡುತ್ತದೆ. |
08:50 | ನಿಮ್ಮಲ್ಲಿ ಒಳ್ಳೆಯ ಬೇಂಡ್-ವಿಡ್ತ್ ಇರದಿದ್ದರೆ ಡೌನ್ಲೋಡ್ ಮಾಡಿಕೊಂಡೂ ನೋಡಬಹುದು. |
08:54 | The Spoken Tutorial Project Team ಇದು |
08:56 | spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ. |
09:00 | online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
09:04 | ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆಬರೆಯಿರಿ |
09:11 | Spoken Tutorial Projectಇದು Talk to a Teacher ಯೋಜನೆಯ ಭಾಗವಾಗಿದೆ. |
09:14 | ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ. |
09:22 | ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. spoken-tutorial.org\NMEICT-Intro |
09:28 | ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ |
09:34 | ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ.. |
09:38 | ಧನ್ಯವಾದಗಳು. |