BASH/C2/Conditional-Loops/Kannada

From Script | Spoken-Tutorial
Jump to: navigation, search
Time Narration
00:01 ಬ್ಯಾಶ್ ನಲ್ಲಿ loops ನ ಕುರಿತಾದ ಸ್ಪೊಕನ್-ಟ್ಯುಟೊರಿಯಲ್ ಗೆ ನಿಮಗೆಲ್ಲ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು
00:09 for loop ಮತ್ತು
00:11 while loop ಗಳನ್ನು ಉದಾಹರಣೆಗಳೊಡನೆ ಕಲಿಯುತ್ತೇವೆ.
00:15 ಈ ಟ್ಯುಟೋರಿಯಲ್ ಗಾಗಿ ನಾನು:
00:18 Ubuntu Linux 12.04 OS ಮತ್ತು
00:22 GNU Bash version 4.1.10 ಗಳನ್ನು ಉಪಯೋಗಿಸುತ್ತೇನೆ.
00:26 ತಿಳಿದಿರಲಿ GNU bash version 4 ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ.
00:34 ಮೊದಲು loops ನ ಪರಿಚಯದೊಂದಿಗೆ ಪ್ರಾರಂಭಿಸೋಣ.
00:37 Loops ಗಳನ್ನು ಸ್ಟೇಟ್-ಮೆಂಟ್ ಗಳ ಗುಂಪನ್ನು ಪುನರಾವರ್ತಿತವಾಗಿ ಎಕ್ಸಿಕ್ಯೂಟ್ ಮಾಡಲು ಉಪಯೋಗಿಸುತ್ತೇವೆ.
00:43 ಸಿಂಟ್ಯಾಕ್ಸ್ ಅನ್ನು ನೋಡೋಣ.
00:45 for expression 1, 2, 3
00:49 statement 1, 2, 3
00:51 ಮತ್ತು ಇದು for loop ನ ಕೊನೆ.
00:55 for loop ಗೆ ಇನ್ನೊಂದು ಪರ್ಯಾಯ ಸಿಂಟ್ಯಾಕ್ಸ್:
00:58 for variable in sequence/range
01:03 statement 1, 2, 3
01:06 ಮತ್ತು ಇದು for loop ನ ಕೊನೆ.
01:09 ಮೊದಲ ಸಿಂಟ್ಯಾಕ್ಸ್ ಅನ್ನು ಉಪಯೋಗಿಸಿ for loop ನ ಒಂದು ಉದಾಹರಣೆಯನ್ನು ನೋಡೋಣ.
01:14 ಈ ಪ್ರೋಗ್ರಾಂ ನಲ್ಲಿ ನಾವು ಮೊದಲ n ಸಂಖ್ಯೆಗಳ ಮೊತ್ತವನ್ನು ಕಂಡುಹಿಡಿಯುತ್ತೇವೆ.
01:20 ಗಮನಿಸಿ ನಮ್ಮ ಫೈಲ್ ನ ಹೆಸರು for.sh.
01:25 ಇದು ನಮ್ಮ shebang line.
01:28 number ಎಂಬ ವೇರಿಯೇಬಲ್ ಬಳಕೆದಾರ ನೀಡಿದ ಬೆಲೆಯನ್ನು ಸ್ಟೋರ್ ಮಾಡುತ್ತದೆ.
01:34 ಇಲ್ಲಿ ಈ ಬೆಲೆಯು ಇಂಟೀಜರ್ ಆಗಿದೆ.
01:37 ಈಗ sum ಎಂಬ ವೇರಿಯೇಬಲ್ ಅನ್ನು ಸೊನ್ನೆಗೆ ಇನಿಷಿಯಲೈಜ್ ಮಾಡೋಣ.
01:42 ಇಲ್ಲಿಂದ for loop ಪ್ರಾರಂಭವಾಗುತ್ತದೆ.
01:45 ಮೊದಲು ನಾವು 'i' ಅನ್ನು 1 ಕ್ಕೆ ಇನಿಶಿಯಲೈಜ್ ಮಾಡಿದ್ದೇವೆ.
01:48 ನಂತರ ನಾವು 'i'ಇದು number ಗಿಂತ ಚಿಕ್ಕದೇ ಅಥವಾ ಸಮವಾಗಿದೆಯೇ ಎಂದು ಪರೀಕ್ಷಿಸುತ್ತೇವೆ.
01:54 ಇಲ್ಲಿ ನಾವು sum ಅನ್ನು sum ಪ್ಲಸ್ i ಎಂದು ಲೆಕ್ಕಿಸುತ್ತೇವೆ.
02:00 ಮತ್ತು ನಂತರ ಅದನ್ನು ಪ್ರಿಂಟ್ ಮಾಡುತ್ತೇವೆ.
02:03 ಇದಾದ ನಂತರ 'i' ನ ಬೆಲೆಗೆ ಒಂದನ್ನು ಸೇರಿಸಿ ಹೆಚ್ಚಿಸುತ್ತೇವೆ.
02:08 ಮತ್ತು ನಂತರ ನಾವು ಈ condition False ಆಗುವವರೆಗೂ condition ಅನ್ನು ಪರೀಕ್ಷಿಸುತ್ತೇವೆ.
02:14 for loop ನಿಂದ ಹೊರಬಂದ ಮೇಲೆ ಈ ಸಂದೇಶ ಪ್ರಿಂಟ್ ಆಗುತ್ತದೆ.
02:19 ಈಗ ಪ್ರೋಗ್ರಾಂ ಅನ್ನು ಎಕ್ಸಿಕ್ಯೂಟ್ ಮಾಡಿ ಏನಾಗುತ್ತದೆಂದು ಪರೀಕ್ಷಿಸೋಣ.
02:24 ಟರ್ಮಿನಲ್ ನಲ್ಲಿ chmod ಪ್ಲಸ್ x forಡಾಟ್sh ಎಂದು ಟೈಪ್ ಮಾಡಿ.
02:31 ನಂತರ ಡಾಟ್ ಸ್ಲ್ಯಾಶ್ for.sh ಎಂದು ಟೈಪ್ ಮಾಡಿ.
02:36 ನಾನು ಇನ್ ಪುಟ್ ಸಂಖ್ಯೆಯನ್ನು 5 ಎಂದು ನಮೂದಿಸುತ್ತೇನೆ.
02:40 'i' ನ ಬೆಲೆಗೆ ಲೆಕ್ಕಮಾಡಿದ ಮೊತ್ತವು ಡಿಸ್ಪ್ಲೇ ಆಗುತ್ತದೆ.
02:46 ನಂತರ ಫಲಿತದ ಕೊನೆಯ ಸಾಲು
02:50 "Sum of first n numbers is 15" ಎಂದು ಡಿಸ್ಪ್ಲೇ ಆಗುತ್ತದೆ.
02:54 ಪ್ರೋಗ್ರಾಮ್ ನ ಹರಿವನ್ನು ನೋಡೋಣ.
02:57 ನಾನು ಈಗ windowದ ಗಾತ್ರವನ್ನು ಬದಲಿಸುತ್ತೇನೆ.
03:00 ಮೊದಲಿಗೆ 'i' ನ ಬೆಲೆ 1 ಆಗಿರುತ್ತದೆ.
03:04 ನಂತರ ನಾವು 1 ಇದು 5 ಕ್ಕಿಂತ ಚಿಕ್ಕದೇ ಅಥವಾ ಸಮವೇ ಎಂದು ಪರೀಕ್ಷಿಸುತ್ತೇವೆ.
03:10 ಈ ಕಂಡಿಶನ್ True ಆಗಿರುವುದರಿಂದ ನಾವು sum ಅನ್ನು 0 + 1 ಎಂದು ಲೆಕ್ಕಿಸುತ್ತೇವೆ.
03:16 ನಾವು ಈಗ sum ಅನ್ನು 1 ಎಂದು ಹೊಂದಿದ್ದೇವೆ.
03:20 ನಂತರ ನಾವು sum ಅನ್ನು ಅಂದರೆ 1 ಅನ್ನು ಪ್ರಿಂಟ್ ಮಾಡುತ್ತೇವೆ.
03:24 ಮುಂದೆ 'i' ನ ಬೆಲೆಗೆ 1 ಸೇರಿಸಲ್ಪಡುತ್ತದೆ ಮತ್ತು 'i' ನ ಹೊಸ ಬೆಲೆಯು 2 ಆಗಿರುತ್ತದೆ.
03:31 ನಂತರ ನಾವು 2 ಇದು 5 ಕ್ಕಿಂತ ಚಿಕ್ಕದೇ ಅಥವಾ ಸಮವೇ ಎಂದು ಪರೀಕ್ಷಿಸುತ್ತೇವೆ.
03:36 ಕಂಡಿಶನ್ True ಆಗಿದೆ ಮತ್ತು ಈಗ sum ಇದು 1 + 2 ಅಂದರೆ 3 ಆಗುತ್ತದೆ.
03:44 ಮುಂದೆ 'i' ನ ಬೆಲೆಗೆ 1 ಸೇರಿಸಲ್ಪಡುತ್ತದೆ ಮತ್ತು 'i' ನ ಹೊಸ ಬೆಲೆಯು 3 ಆಗಿರುತ್ತದೆ.
03:51 ಮತ್ತು sum ನ ಬೆಲೆಯು 6 ಆಗುತ್ತದೆ.
03:55 script 'i' ನ ಮುಂದಿನ ಬೆಲೆಯು sum ನ ಹಳೆಯ ಬೆಲೆಗೆ ಸೇರಿಸುತ್ತಾ ಮುಂದುವರಿಯುತ್ತದೆ.
04:02 ಇದು i<=5 ಎಂಬ ಕಂಡಿಶನ್ False ಆಗುವವರೆಗೆ ಮುಂದುವರಿಯುತ್ತದೆ.
04:09 for loop ನಿಂದ ಹೊರಬಂದಾಗ ಕೊನೆಯ ಸಂದೇಶ ಪ್ರಿಂಟ್ ಆಗುತ್ತದೆ.
04:14 ಈಗ ಎರಡನೆಯ ಸಿಂಟ್ಯಾಕ್ಸ್ ಅನ್ನು ಉಪಯೋಗಿಸಿ for loop ನ ಇನ್ನೊಂದು ಉದಾಹರಣೆಯನ್ನು ನೋಡೋಣ.
04:20 ನಾನು ಈ ಕೋಡ್ ಅನ್ನು ಈ ಫೈಲ್ ನಲ್ಲಿ ಬರೆದು ಇದನ್ನು for-loop.sh ಎಂದು ಹೆಸರಿಸಿದ್ದೇನೆ.
04:27 ಈ ಸುಲಭವಾದ ಪ್ರೋಗ್ರಾಂ ಡೈರಕ್ಟರಿಯಲ್ಲಿರುವ ಫೈಲ್ ಗಳನ್ನು ಪಟ್ಟಿ ಮಾಡುತ್ತದೆ.
04:32 ಇದು shebang line.
04:35 ನಂತರ ನಾವು for loop ಅನ್ನು ಹೊಂದಿದ್ದೇವೆ.
04:37 'ls' ಕಮಾಂಡ್ ಡೈರಕ್ಟರಿಯ ಕಂಟೆಂಟ್ ಅನ್ನು ಪಟ್ಟಿ ಮಾಡುತ್ತದೆ.
04:41 -1 (ಹೈಫನ್ ಒಂದು) ಒಂದು ಸಾಲಿನಲ್ಲಿ ಒಂದು ಫೈಲ್ ಅನ್ನು ಪಟ್ಟಿಮಾಡುತ್ತದೆ.
04:46 ಇದು ನಿಮ್ಮhome directory ಯಲ್ಲಿ ಇರುವ ಎಲ್ಲಾ ಫೈಲ್ ಗಳನ್ನು ಪಟ್ಟಿ ಮಾಡುತ್ತದೆ.
04:51 ಇದು for loop ನ ಕೊನೆ.
04:53 ಈಗ ಸ್ಕ್ರಿಪ್ಟ್ ಅನ್ನು ಟರ್ಮಿನಲ್ ನಲ್ಲಿ ಎಕ್ಸಿಕ್ಯೂಟ್ ಮಾಡಲು
04:58 chmod +x for-loop.sh ಎಂದು ಟೈಪ್ ಮಾಡಿ.
05:04 ./for-loop.sh ಎಂದು ಟೈಪ್ ಮಾಡಿ.
05:09 ಇದು Home ಡೈರಕ್ಟರಿಯಲ್ಲಿರುವ ಎಲ್ಲಾ ಫೈಲ್ ಗಳನ್ನು ಡಿಸ್ಪ್ಲೇ ಮಾಡುತ್ತದೆ.
05:14 ಈಗ ನಾವು while loop ನ ಕುರಿತು ಕಲಿಯೋಣ.
05:18 ಮೊದಲಿಗೆ ಸಿಂಟ್ಯಾಕ್ಸ್ ಅನ್ನು ಅರ್ಥ ಮಾಡಿಕೊಳ್ಳೋಣ.
05:21 while condition, statement 1, 2, 3, while loop ನ ಕೊನೆ.
05:27 ಇದರ ಅರ್ಥವೇನೆಂದರೆ while ಲೂಪ್ ಕಂಡಿಶನ್ True ಆಗಿರುವವರೆಗೂ ಎಕ್ಸಿಕ್ಯೂಟ್ ಆಗುತ್ತದೆ.
05:34 ಈಗ while loop ನ ಒಂದು ಉದಾಹರಣೆಯನ್ನು ನೋಡೋಣ.
05:37 ಇಲ್ಲಿ ನಾನು ಇದನ್ನು while.sh ಎಂದು ಹೆಸರಿಸಿದ್ದೇನೆ.
05:42 ಈ ಪ್ರೋಗ್ರಾಂ ನಲ್ಲಿ ನಾವು ಕೊಟ್ಟಿರುವ ವ್ಯಾಪ್ತಿಯಲ್ಲಿ ಎಲ್ಲ ಸಮಸಂಖ್ಯೆಗಳ ಮೊತ್ತವನ್ನು ಕಂಡುಹಿಡಿಯುತ್ತೇವೆ.
05:49 ಒಮ್ಮೆ code ಅನ್ನು ಅವಲೋಕಿಸೋಣ.
05:52 ಇಲ್ಲಿ ನಾವು ಬಳಕೆದಾರರಿಂದ ಒಂದು ಸಂಖ್ಯೆಯನ್ನು ಪಡೆದು ಅದನ್ನು number ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡುತ್ತೇವೆ.
05:59 ನಂತರ 'i' ಮತ್ತು sum ಎಂಬ ವೇರಿಯೇಬಲ್ ಗಳನ್ನು ಡಿಕ್ಲೇರ್ ಮಾಡಿ ಅವುಗಳನ್ನು 0 (ಸೊನ್ನೆ)ಗೆ ಇನಿಷಿಯಲೈಜ್ ಮಾಡೋಣ.
06:06 ಇದು while ಕಂಡಿಶನ್.
06:08 ಇಲ್ಲಿ ನಾವು 'i' ಇದು ಬಳಕೆದಾರ ನೀಡಿದ number ಗಿಂತ ಚಿಕ್ಕದೇ ಅಥವಾ ಸಮವಾಗಿದೆಯೇ ಎಂದು ಪರೀಕ್ಷಿಸುತ್ತೇವೆ.
06:17 ನಂತರ ನಾವು sumನ ಬೆಲೆಗೆ 'i' ನ ಬೆಲೆಯನ್ನು ಸೇರಿಸುತ್ತಾ ಹೊಸ sum ಅನ್ನು ಕಂಡುಹಿಡಿಯುತ್ತೇವೆ.
06:24 ನಂತರ 'i' ನ ಬೆಲೆಗೆ 2 ಅನ್ನು ಸೇರಿಸುತ್ತೇವೆ.
06:28 ಇದು ನಾವು ಕೇವಲ ಸಮಸಂಖ್ಯೆಗಳನ್ನು ಮಾತ್ರ ಕೂಡಿಸುತ್ತೇವೆ ಎಂದು ದ್ರಢೀಕರಿಸುತ್ತದೆ.
06:33 ಮತ್ತು while loop ಅನ್ನು 'i' ನ ಬೆಲೆಯು number ನ ಬೆಲೆಯನ್ನು ಮೀರುವ ವರೆಗೂ ಪುನರಾವರ್ತಿಸುತ್ತೇವೆ.
06:40 while loop ನಿಂದ ಹೊರಬಂದ ನಂತರ ಕೊಟ್ಟಿರುವ ವ್ಯಾಪ್ತಿಯಲ್ಲಿ ಎಲ್ಲ ಸಮಸಂಖ್ಯೆಗಳ ಮೊತ್ತವನ್ನು ಪ್ರಿಂಟ್ ಮಾಡುತ್ತೇವೆ.
06:47 ಈಗ ಪ್ರೋಗ್ರಾಂ ಅನ್ನು ಎಕ್ಸಿಕ್ಯೂಟ್ ಮಾಡೋಣ.
06:50 terminal ನಲ್ಲಿ
06:52 chmod +x while.sh ಮತ್ತು
06:56 ./while.sh ಎಂದು ಟೈಪ್ ಮಾಡಿ.
07:00 ನಾನು ಇನ್ ಪುಟ್ ಅನ್ನು15 ಎಂದು ನೀಡುತ್ತೇನೆ.
07:04 ಫಲಿತದ ಕೊನೆಯ ಸಾಲು
07:06 "Sum of even numbers within the given range is 56" ಎಂದಾಗಿರುತ್ತದೆ.
07:11 ಈಗ window ದ ಗಾತ್ರ ಬದಲಾಯಿಸಿ ಫಲಿತವನ್ನು ವಿವರಿಸುತ್ತೇನೆ.
07:14 ಮೊದಲು ನಾವು 'i' ಅಂದರೆ 0, ಇದು number ಅಂದರೆ 15 ಕ್ಕಿಂತ ಚಿಕ್ಕದು ಅಥವಾ ಸಮವೇ ಎಂದು ಪರೀಕ್ಷಿಸುತ್ತದೆ.
07:24 ಕಂಡಿಷನ್ True ಆಗಿರುವದರಿಂದ sum ಇದು '0+0' ಅಂದರೆ 0 ಯೇ ಆಗಿರುತ್ತದೆ.
07:31 ಈಗ 'i' ನ ಬೆಲೆಯನ್ನು 2 ಹೆಚ್ಚಿಸುತ್ತೇವ ಮತ್ತು 'i' ನ ಹೊಸ ಬೆಲೆಯು 2 ಆಗುತ್ತದೆ.
07:37 ನಂತರ ನಾವು 2 ಇದು 15 ಕ್ಕಿಂತ ಚಿಕ್ಕದು ಅಥವಾ ಸಮವೇ ಎಂದು ಪರೀಕ್ಷಿಸುತ್ತೇವೆ.
07:43 ಪುನಃ ಕಂಡಿಶನ್ True ಆಗಿರುವುದರಿಂದ ನಾವು 0+2 ಎಂದು ಸೇರಿಸುತ್ತೇವೆ.
07:49 ಈಗsum ನ ಬೆಲೆ 2 ಆಗುವುದು.
07:52 ಮತ್ತೆ 'i' ನ ಬೆಲೆಯು 2 ಹೆಚ್ಚಾಗುವುದು.
07:56 ಹಾಗಾಗಿ ಈಗ 'i' ನ ಬೆಲೆ 2+2 ಅಂದರೆ 4 ಆಗುವುದು.
08:03 ಮತ್ತು sum ನ ಮುಂದಿನ ಬೆಲೆ 4+2 ಅಂದರೆ 6 ಆಗುವುದು.
08:09 ಹೀಗೆಯೇ script 'i' ನ ಹಿಂದಿನ ಬೆಲೆಗೆ 2 ಅನ್ನು ಸೇರಿಸುತ್ತಾ15 ಅನ್ನು ಮೀರುವವರೆಗೂ ಮುಂದುವರಿಯುತ್ತದೆ.
08:18 ಮತ್ತು ನಾವು ಕೊನೆಗೆ sum ನ ಬೆಲೆಯನ್ನು 56 ಎಂದು ಪಡೆಯುತ್ತೇವೆ.
08:24 ಇಲ್ಲಿಗೆ ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
08:27 ಸಾರಾಂಶವನ್ನು ನೋಡೋಣ. ಈ ಟ್ಯುಟೋರಿಯಲ್ ನಲ್ಲಿ ನಾವು for loop ನ ಎರಡು ಬೇರೆ ಬೇರೆ ಸಿಂಟ್ಯಾಕ್ಸ್ ಗಳನ್ನೂ ಮತ್ತು while loop ನ ಕುರಿತು ಕಲಿತಿದ್ದೇವೆ.
08:37 ಸ್ವಂತ ಅಭ್ಯಾಸಕ್ಕಾಗಿ ಮೊದಲ "n" ಅವಿಭಾಜ್ಯ ಸಂಖ್ಯೆಗಳ ಮೊತ್ತವನ್ನು ಕಂಡು ಹಿಡಿಯಿರಿ.
08:43 ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ..
08:46 ಅದು Spoken Tutorial projectನ ಕುರಿತು ತಿಳಿಸಿಕೊಡುತ್ತದೆ.
08:50 ನಿಮ್ಮಲ್ಲಿ ಒಳ್ಳೆಯ ಬೇಂಡ್-ವಿಡ್ತ್ ಇರದಿದ್ದರೆ ಡೌನ್ಲೋಡ್ ಮಾಡಿಕೊಂಡೂ ನೋಡಬಹುದು.
08:54 The Spoken Tutorial Project Team ಇದು
08:56 spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ.
09:00 online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
09:04 ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆಬರೆಯಿರಿ
09:11 Spoken Tutorial Projectಇದು Talk to a Teacher ಯೋಜನೆಯ ಭಾಗವಾಗಿದೆ.
09:14 ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ.
09:22 ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. spoken-tutorial.org\NMEICT-Intro
09:28 ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ
09:34 ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ..
09:38 ಧನ್ಯವಾದಗಳು.

Contributors and Content Editors

NaveenBhat, PoojaMoolya