Difference between revisions of "Arduino/C2/Pulse-Width-Modulation/Kannada"
From Script | Spoken-Tutorial
Sandhya.np14 (Talk | contribs) |
NaveenBhat (Talk | contribs) |
||
Line 418: | Line 418: | ||
||10:00 | ||10:00 | ||
|| ಮೋಟರ್ ʻಆಫ್ʼ ಸ್ಥಿತಿಯಲ್ಲಿದೆ ಎಂಬುದನ್ನು '''else''' ಕಮಾಂಡ್ ಖಚಿತಪಡಿಸುತ್ತದೆ. | || ಮೋಟರ್ ʻಆಫ್ʼ ಸ್ಥಿತಿಯಲ್ಲಿದೆ ಎಂಬುದನ್ನು '''else''' ಕಮಾಂಡ್ ಖಚಿತಪಡಿಸುತ್ತದೆ. | ||
+ | |- | ||
+ | |10:05 | ||
+ | |ಈ ಕೋಡ್ ಈ ಟ್ಯುಟೊರಿಯಲ್ ನ '''Code file''' ಲಿಂಕ್ ನಲ್ಲಿ ಲಭ್ಯವಿದೆ. ಅದನ್ನು ಡೌನ್-ಲೊಡ್ ಮಾಡಿ ಉಪಯೊಗಿಸಬಹುದು. | ||
|- | |- |
Latest revision as of 07:33, 22 July 2020
Time | Narration |
00:01 | Pulse Width Modulation ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು PWM (ಅಂದರೆ ಪಲ್ಸ್ ವಿಡ್ತ್ ಮಾಡ್ಯುಲೇಶನ್), |
00:13 | PWM ಡ್ಯೂಟಿ ಸೈಕಲ್, |
00:16 | PWM ಫ್ರೀಕ್ವೆನ್ಸಿ ಮತ್ತು
L293D ಮೋಟರ್ ಡ್ರೈವರ್ IC ಕುರಿತು ಕಲಿಯಲಿದ್ದೇವೆ. |
00:24 | ಈ ಟ್ಯುಟೋರಿಯಲ್ ಅನುಸರಿಸಲು ನೀವು ಎಲೆಕ್ಟ್ರಾನಿಕ್ಸ್ ಮತ್ತು C ಅಥವಾ C++ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ನ ಮೂಲಭೂತ ಜ್ಞಾನ ಹೊಂದಿರಬೇಕು. |
00:35 | ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು:
ಆರ್ಡುಯಿನೊ ಯು.ಎನ್.ಒ ಬೋರ್ಡ್, |
00:40 | ಉಬಂಟು ಲೀನಕ್ಸ್ 16.04 ಒ.ಎಸ್ ಮತ್ತು
Arduino IDE ಬಳಸುತ್ತಿದ್ದೇನೆ. |
00:46 | ನಮಗೆ ಈ ಕೆಳಗಿನ ಬಾಹ್ಯ ಘಟಕಗಳು ಸಹ ಬೇಕು:
ಬ್ರೆಡ್-ಬೋರ್ಡ್, |
00:53 | 10K Ohm ಪೊಟೆಂಶಿಯೋಮೀಟರ್,
ಎಲ್.ಇ.ಡಿ, |
00:58 | 220 ohm ರೆಸಿಸ್ಟರ್, |
01:01 | ಜಂಪರ್ ವೈರ್ ಗಳು,
ಪುಶ್ ಬಟನ್, |
01:05 | ಡಿ.ಸಿ ಮೋಟರ್ |
01:08 | ಮತ್ತು L293D ಮೋಟರ್ ಡ್ರೈವರ್ IC ಬೇಕು. |
01:14 | PWM ಸಿಗ್ನಲ್ ಎನ್ನುವುದು ಸ್ಕ್ವೇರ್ ವೇವ್ ಸಿಗ್ನಲ್ ಆಗಿದ್ದು 1KHz ನಂತಹ ಅಧಿಕ ಫ್ರೀಕ್ವೆನ್ಸಿಯನ್ನು ಹೊಂದಿದೆ. |
01:22 | PWM ಒಂದು ತಂತ್ರವಾಗಿದ್ದು, ಇದರ ಮೂಲ ಪಲ್ಸ್ ನ ವಿಡ್ತ್ ಅನ್ನು ವ್ಯತ್ಯಯಗೊಳಿಸಲಾಗುತ್ತದೆ. |
01:28 | ತರಂಗ (wave) ಗಳ ಫ್ರೀಕ್ವೆನ್ಸಿಯನ್ನು ಸ್ಥಿರವಾಗಿರಿಸಿ ಇದನ್ನು ಮಾಡಲಾಗುತ್ತದೆ. |
01:33 | PWM ಸಿಗ್ನಲ್ ಎರಡು ಮುಖ್ಯ ಗುಣಲಕ್ಷಣಗಳನ್ನು ಹೊಂದಿದ್ದು ಇದು ಇದರ ವರ್ತನೆಯನ್ನು ನಿರೂಪಿಸುತ್ತದೆ. |
01:40 | ಅವೆಂದರೆ, ಡ್ಯೂಟಿ ಸೈಕಲ್ ಮತ್ತು ಫ್ರೀಕ್ವೆನ್ಸಿ. |
01:44 | ಇದು ನಿರ್ದಿಷ್ಟ ಸಮಯಕ್ಕೆ ಡಿಜಿಟಲ್ ಸಿಗ್ನಲ್ ಒಂದು ಆನ್ ಇರುವಾಗ ಉಂಟಾಗುವ ಸಮಯದ ಶೇಕಡಾ ಆಗಿದೆ. |
01:50 | ಡ್ಯೂಟಿ ಸೈಕಲ್ 0% ದಿಂದ 100% ತನಕ ವ್ಯತ್ಯಯವಾಗಬಹುದು. |
01:55 | ಡ್ಯೂಟಿ ಸೈಕಲ್ ನ ಶೇಕಡಾವನ್ನು ಲೆಕ್ಕ ಹಾಕುವ ಸೂತ್ರವನ್ನು ಇಲ್ಲಿ ತೋರಿಸಲಾಗಿದೆ. |
02:01 | ಸಿಗ್ನಲ್ ʻಹೈʼ ಇರುವಾಗ tON ಎನ್ನುವುದು ಸಮಯದ ಅವಧಿಗೆ ಸಮನಾಗಿರುತ್ತದೆ. |
02:06 | ಸಿಗ್ನಲ್ ʻಲೋʼ ಇರುವಾಗ tOFF ಎನ್ನುವುದು ಸಮಯದ ಅವಧಿಗೆ ಸಮನಾಗಿರುತ್ತದೆ. |
02:11 | ಟೈಂ ಪೀರಿಯೆಡ್ ಎಂದರೆ tON + tOFF.
ಅಂದರೆ ಇದು PWM ಸಿಗ್ನಲ್ ನ ಆನ್ ಸಮಯ ಮತ್ತು ಆಫ್ ಸಮಯದ ಮೊತ್ತವಾಗಿದೆ. |
02:24 | ಎಷ್ಟು ವೇಗವಾಗಿ PWM ಸೈಕಲ್ ಅನ್ನು ಪೂರ್ಣಗೊಳಿಸುತ್ತವೆ ಎಂಬುದನ್ನು ಫ್ರೀಕ್ವೆನ್ಸಿಯು ನಿರ್ಧರಿಸುತ್ತದೆ. |
02:29 | ಅಂದರೆ, ಇದು ಎಷ್ಟು ವೇಗವಾಗಿ ಇದು ʻಹೈʼ ಯಿಂದ ʻಲೋʼ ಸ್ಥಿತಿಗೆ ವರ್ಗಾವಣೆಗೊಳ್ಳುತ್ತದೆ ಎಂದು. |
02:34 | ಡ್ಯೂಟಿ ಸೈಕಲ್ ಅನ್ನು ವ್ಯತ್ಯಯಗೊಳಿಸಿ ನಾವು ಒಂದು ಸರಳ ಪ್ರಯೋಗವನ್ನು ಮಾಡಲಿದ್ದೇವೆ. |
02:39 | ಇದು ಎಲ್.ಇ.ಡಿ ಯ ಕಾಂತಿಯನ್ನು ನಿಯಂತ್ರಿಸುತ್ತದೆ. |
02:43 | ಆರ್ಡುಯಿನೊ ಯು.ಎನ್.ಒ 6 PWM ಚಾನೆಲ್ ಗಳನ್ನು ಹೊಂದಿದೆ. |
02:48 | ಆರ್ಡುಯಿನೊ ಯು.ಎನ್.ಒ ದಲ್ಲಿ ಇರುವ 3, 5, 6, 9, 10, 11 ಪಿನ್ ಗಳು PWM ಚಾನೆಲ್ ಗಳಾಗಿವೆ. |
02:58 | PWM ಚಾನೆಲ್ ಗಳನ್ನು ಟಿಲ್ಡಾ (tilde) ಸಂಕೇತದಿಂದ ಸೂಚಿಸಲಾಗುತ್ತದೆ. |
03:02 | ನಾವೀಗ ಸರ್ಕಿಟ್ ಸಂಪರ್ಕವನ್ನು ನೋಡೋಣ. |
03:05 | ಎಲ್.ಇ.ಡಿ ಯ ಆನೋಡ್ ಲೆಗ್ ಅನ್ನು 220 ohm ರೆಸಿಸ್ಟರ್ ಮೂಲಕ ಆರ್ಡುಯಿನೊ ವಿನ ಪಿನ್ 9ಕ್ಕೆ ಸಂಪರ್ಕಿಸಿ. |
03:13 | ಎಲ್.ಇ.ಡಿ ಯ ಕ್ಯಾಥೋಡ್ ಲೆಗ್ ಅನ್ನು ಗ್ರೌಂಡ್ ಗೆ ಸಂಪರ್ಕಿಸಿ. |
03:17 | ಇದು ಸಂಪರ್ಕದ ಲೈವ್ ಸೆಟಪ್ ಆಗಿದೆ. |
03:20 | ಚಿತ್ರದಲ್ಲಿ ತೋರಿಸಿರುವಂತೆ ಸಂಪರ್ಕವನ್ನು ಪೂರ್ಣಗೊಳಿಸಿ. |
03:23 | ನಾವೀಗ Arduino IDE ಯನ್ನು ತೆರೆಯೋಣ. |
03:32 | ಇಲ್ಲಿರುವಂತೆ ಕೋಡ್ ಅನ್ನು ಟೈಪ್ ಮಾಡಿ. |
03:35 | ನಾವು PWM ಪಿನ್ 9 ಅನ್ನು ವೇರಿಯೇಬಲ್ LED_Pin ಗೆ ಅಸೈನ್ ಮಾಡಿದ್ದೇವೆ. |
03:42 | ಎಲ್.ಇ.ಡಿ ಯು ಟರ್ನ್ ಆನ್ ಆಗಲು ನಾವು duty_cycle_value ಅನ್ನು 1 ಆಗಿ ಇನಿಶಿಯಲೈಸ್ ಮಾಡಿದ್ದೇವೆ. |
03:51 | ವೋಯ್ಡ್ ಸೆಟಪ್ ಒಳಗೆ, ನಾವು pinMode ಫಂಕ್ಷನ್ ಬರೆಯಲಿದ್ದೇವೆ. |
03:56 | ಆರ್ಡುಯಿನೊವಿನ ಪಿನ್ 9 ಅನ್ನು ನಾವು OUTPUT ಆಗಿ ಘೋಷಿಸಿದ್ದೇವೆ. |
04:01 | void loop() ಫಂಕ್ಷನ್ ಒಳಗೆ ನಾವು ಈ ಕೋಡ್ ಅನ್ನು ಬರೆಯಲಿದ್ದೇವೆ.
ನಾನೀಗ ಕೋಡ್ ಅನ್ನು ವಿವರಿಸುತ್ತೇನೆ. |
04:08 | duty_cycle_value 255ಕ್ಕಿಂತ ಕಡಿಮೆ ಇರುವ ತನಕ While ಲೂಪ್, ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡುತ್ತದೆ. |
04:17 | PWM ಸಿಗ್ನಲ್ ಅನ್ನು ಜನರೇಟ್ ಮಾಡಲು analogWrite() ಫಂಕ್ಷನ್ ಬಳಸಲಾಗುತ್ತದೆ. |
04:22 | ನಾವು ಎರಡು ಪ್ಯಾರಾಮೀಟರ್ ಗಳನ್ನು ಪಾಸ್ ಮಾಡುತ್ತೇವೆ. ಅವೆಂದರೆ PWM ಪಿನ್ ಸಂಖ್ಯೆ ಮತ್ತು ಡ್ಯೂಟಿ ಸೈಕಲ್ ಮೌಲ್ಯ. |
04:30 | ಡ್ಯೂಟಿ ಸೈಕಲ್ ಮೌಲ್ಯವು 0 ಯಿಂದ 255 ನಡುವೆ, ಅಂದರೆ 0 ವೋಲ್ಟ್ಸ್ ಮತ್ತು 5 ವೋಲ್ಟ್ಸ್ ನಡುವೆ ಇರಬೇಕು. |
04:40 | ನಾವು 3000 ಮಿಲಿಸೆಕೆಂಡುಗಳ, ಅಂದರೆ 3 ಸೆಕೆಂಡುಗಳ ʻಡಿಲೇʼ ಯನ್ನು ಇಡುತ್ತೇವೆ. |
04:46 | ನಿಮ್ಮ ಪ್ರೋಗ್ರಾಂ ದೃಢೀಕರಿಸಲು compile ಬಟನ್ ಮೇಲೆ ಕ್ಲಿಕ್ ಮಾಡಿ. |
04:51 | ಪ್ರಸ್ತುತ ಪ್ರೋಗ್ರಾಂ ಅನ್ನು ಸೇವ್ ಮಾಡಲು ಪಾಪ್ ಅಪ್ ವಿಂಡೋ ಕಾಣಿಸಿಕೊಳ್ಳುತ್ತದೆ. |
04:55 | ಈ ಪ್ರೋಗ್ರಾಂ ಅನ್ನು LED_Brightness ಆಗಿ ಸೇವ್ ಮಾಡೋಣ ಮತ್ತು Save ಬಟನ್ ಮೇಲೆ ಕ್ಲಿಕ್ ಮಾಡೋಣ. |
05:03 | ಈಗ ಆರ್ಡುಯಿನೊ ಬೋರ್ಡ್ ನಲ್ಲಿ ಪ್ರಸ್ತುತ ಪ್ರೋಗ್ರಾಂ ಅನ್ನು ಅಪ್ಲೋಡ್ ಮಾಡಲು upload ಬಟನ್ ಮೇಲೆ ಕ್ಲಿಕ್ ಮಾಡೋಣ. |
05:09 | ಎಲ್.ಇ.ಡಿ ಯ ಕಾಂತಿ ಮೆಲ್ಲನೆ ಹೆಚ್ಚುತ್ತಿರುವುದನ್ನು ನಾವು ನೋಡಬಹುದು. |
05:15 | ನಂತರ ನಾವು ಡಿ.ಸಿ ಮೋಟರ್ ನ ವೇಗ ಮತ್ತು ದಿಕ್ಕನ್ನು ನಿಯಂತ್ರಿಸಲು ಪ್ರಯೋಗ ಮಾಡೋಣ. |
05:22 | ಇದು L293D ಮೋಟರ್ ಡ್ರೈವರ್ IC ಯ ಪಿನೌಟ್ ಡಯಗ್ರಾಂ ಆಗಿದೆ. |
05:28 | ಮೋಟರ್ ನ ವೇಗವನ್ನು IC ಯ EN 1 ಮತ್ತು EN 2 ನಿಯಂತ್ರಿಸುತ್ತವೆ. |
05:36 | ಮೋಟರ್ ನ ದಿಕ್ಕನ್ನು IC ಯ IN1, IN2, IN3, IN4 ನಿಯಂತ್ರಿಸುತ್ತವೆ. |
05:45 | ನಾವು IC ಯನ್ನು ಬಳಸಿ ಏಕಕಾಲದಲ್ಲಿ ಎರಡು ಮೋಟರ್ ಗಳನ್ನು ನಿಯಂತ್ರಿಸಬಹುದು. |
05:50 | ನಮ್ಮ ಪ್ರಯೋಗದಲ್ಲಿ, ನಾವು ಒಂದು ಡಿ.ಸಿ ಮೋಟರ್ ಅನ್ನು ಮಾತ್ರ ಸಂಪರ್ಕಿಸಲಿದ್ದೇವೆ. |
05:55 | ಈಗ ನಾವು ಸರ್ಕಿಟ್ ಸಂಪರ್ಕವನ್ನು ನೋಡೋಣ. |
05:58 | ಡ್ರೈವರ್ IC ಯ ಪಿನ್ 1, ಪಿನ್ 8 ಮತ್ತು ಪಿನ್ 16 ಗಳನ್ನು 5V ಗೆ ಸಂಪರ್ಕಿಸಲಾಗಿದೆ. |
06:05 | ಡ್ರೈವರ್ IC ಯ ಪಿನ್ 4 ಮತ್ತು ಪಿನ್ 5 ನ್ನು ಗ್ರೌಂಡ್ ಗೆ ಸಂಪರ್ಕಿಸಲಾಗಿದೆ. |
06:11 | ಡ್ರೈವರ್ IC ಯ ಪಿನ್ 2 ಮತ್ತು ಪಿನ್ 7 ಅನ್ನು ಆರ್ಡುಯಿನೊವಿನ ಪಿನ್ 11 ಮತ್ತು ಪಿನ್ 10ಕ್ಕೆ ಸಂಪರ್ಕಿಸಲಾಗಿದೆ. |
06:20 | ಎರಡು ಪುಶ್-ಬಟನ್ ಗಳನ್ನು ಆರ್ಡುಯಿನೊವಿನ ಪಿನ್ 12 ಮತ್ತು ಪಿನ್ 13ಕ್ಕೆ ಸಂಪರ್ಕಿಸಲಾಗಿದೆ. |
06:27 | ಈ ಪುಶ್ ಬಟನ್ ಗಳನ್ನು ಡಿ.ಸಿ. ಮೋಟರ್ ನ ದಿಕ್ಕನ್ನು ನಿಯಂತ್ರಿಸಲು ಬಳಸಲಾಗುತ್ತದೆ. |
06:33 | ಡಿ.ಸಿ. ಮೋಟರ್ ನ ವೇಗವನ್ನು ನಿಯಂತ್ರಿಸಲು, 10 K Ohm ಪೊಟೆಂಶಿಯೋಮೀಟರ್ ಅನ್ನು ಜೋಡಿಸಲಾಗಿದೆ. |
06:39 | ಪೊಟೆಂಶಿಯೋಮೀಟರ್ ನ ನಡುವಿನ ಪಿನ್ ಅನ್ನು ಅನಲಾಗ್ ಪಿನ್ A0 ಗೆ ಸಂಪರ್ಕಿಸಲಾಗಿದೆ. |
06:45 | ಡ್ರೈವರ್ IC ಯ ಪಿನ್ 3 ಮತ್ತು ಪಿನ್ 6 ಅನ್ನು ಡಿ.ಸಿ ಮೋಟರ್ ಗೆ ಸಂಪರ್ಕಿಸಲಾಗಿದೆ. |
06:51 | ಚಿತ್ರದಲ್ಲಿ ತೋರಿಸಿರುವಂತೆ ಸಂಪರ್ಕ ಮಾಡಿ. |
06:55 | ಚಿತ್ರದಲ್ಲಿ ತೋರಿಸಿರುವಂತೆ, ಇದು ಸಂಪರ್ಕದ ಲೈವ್ ಸೆಟಪ್ ಆಗಿದೆ. |
07:00 | ಮೋಟರ್ ನ ಶಾಫ್ಟ್ ಮೇಲೆ ನಾನು ಚಕ್ರವನ್ನು ಅಳವಡಿಸಿದ್ದೇನೆ. |
07:04 | ಮೋಟರ್ ಸುತ್ತುವುದನ್ನು ಮತ್ತು ಅದರ ವ್ಯತ್ಯಯವಾಗುವ ವೇಗವನ್ನು ಸ್ಪಷ್ಟವಾಗಿ ನೋಡಲು ಇದು ಸಹಕರಿಸುತ್ತದೆ. |
07:10 | ಈ ಸರ್ಕಿಟ್ ಕೆಲಸ ಮಾಡಲು ನಾವು ಪ್ರೋಗ್ರಾಂ ಬರೆಯೋಣ. |
07:14 | ನಾವೀಗ Arduino IDE ಗೆ ಮರಳೋಣ. |
07:18 | ಇಲ್ಲಿ ತೋರಿಸಿರುವಂತೆ ಕೋಡ್ ಅನ್ನು ಟೈಪ್ ಮಾಡಿ.
ಆರ್ಡುಯಿನೊ ಮತ್ತು ಡ್ರೈವರ್ IC ನಡುವೆ ನಾವು ಸಂಪರ್ಕವನ್ನು ಇನಿಶಿಯಲೈಸ್ ಮಾಡಿದ್ದೇವೆ. |
07:28 | ಪೊಟೆಂಶಿಯೋಮೀಟರ್ ಪಿನ್ ಅನ್ನು ಅನಲಾಗ್ ಪಿನ್ A0 ಗೆ ಸಂಪರ್ಕಿಸಲಾಗಿದೆ. |
07:33 | ಆರ್ಡುಯಿನೊವಿನ ಪಿನ್ 13ಕ್ಕೆ ಸಂಪರ್ಕಿಸಿದ ಪುಶ್ ಬಟನ್ ಗೆ fwdbuttonPin ಎನ್ನುವುದು ವೇರಿಯೇಬಲ್ ಆಗಿದೆ. |
07:40 | ಆರ್ಡುಯಿನೊವಿನ ಪಿನ್ 12ಕ್ಕೆ ಸಂಪರ್ಕಿಸಿದ ಪುಶ್ ಬಟನ್ ಗೆ bckbuttonPin ಎನ್ನುವುದು ವೇರಿಯೇಬಲ್ ಆಗಿದೆ. |
07:47 | ICpin2 ಮತ್ತು ICpin7 ಗಳು ವೇರಿಯೇಬಲ್ ಗಳಾಗಿದ್ದು, ಇವು IC ಯ ಪಿನ್ 2 ಮತ್ತು ಪಿನ್ 7 ಅನ್ನು ಸೂಚಿಸುತ್ತವೆ. |
07:57 | ಇವುಗಳನ್ನು ಕ್ರಮವಾಗಿ ಆರ್ಡುಯಿನೊವಿನ ಪಿನ್ 11 ಮತ್ತು ಪಿನ್ 10ಕ್ಕೆ ಸಂಪರ್ಕಿಸಲಾಗಿದೆ. |
08:04 | ಪೊಟೆಂಶಿಯೋಮೀಟರ್, ಮೋಟರ್ ಮತ್ತು ಪುಶ್ ಬಟನ್ ಗಳು ʻಲೋʼ ಸ್ಥಿತಿಯಲ್ಲಿವೆ ಎಂದು ನಾವು ಮೊದಲಿಗೆ ಖಚಿತಪಡಿಸೋಣ.
ಇದಕ್ಕಾಗಿ ನಾವು ಇದನ್ನು 0 ಗೆ ಇನಿಶಿಯಲೈಸ್ ಮಾಡಿದ್ದೇವೆ. |
08:15 | void setup() ಫಂಕ್ಷನ್ ನಲ್ಲಿ, ನಾವು ಈ ಕೋಡ್ ಬರೆಯಲಿದ್ದೇವೆ. |
08:20 | pinMode ಫಂಕ್ಷನ್, ಪಿನ್ ಗಳನ್ನು INPUT ಅಥವಾ OUTPUT ಆಗಿ ನಿರೂಪಿಸುತ್ತದೆ. |
08:25 | fwdbuttonPin ಮತ್ತು bckbuttonPin ಗಳನ್ನು INPUT_PULLUP ಮೋಡ್ ಗೆ ಸೆಟ್ ಮಾಡಲಾಗುತ್ತದೆ. |
08:32 | ಈ ಮೋಡ್ ನಲ್ಲಿ ನಾವು ಆರ್ಡುಯಿನೊವಿನ ಆಂತರಿಕ ಪುಲ್-ಅಪ್ ರೆಸಿಸ್ಟರ್ ಗಳನ್ನು ಬಳಸುತ್ತೇವೆ. |
08:38 | INPUT_PULLUP ಮೋಡ್ ಕುರಿತು ತಿಳಿದುಕೊಳ್ಳಲು, ಕೈಪಿಡಿಯನ್ನು ನೋಡಿ. |
08:44 | Arduino IDE ಯಲ್ಲಿ Help ಮೆನುವಿನ ಮೇಲೆ ಕ್ಲಿಕ್ ಮಾಡಿ.
ನಂತರ Reference ಮೇಲೆ ಕ್ಲಿಕ್ ಮಾಡಿ. |
08:50 | ಇದು ನಿಮ್ಮ ಬ್ರೌಸರ್ ನಲ್ಲಿ ಆಫ್ಲೈನ್ ಪೇಜ್ ಅನ್ನು ತೆರೆಯುತ್ತದೆ.
ಕೆಳಗೆ ಸ್ಕ್ರಾಲ್ ಮಾಡಿ. |
08:55 | INPUT_PULLUP ಮೇಲೆ ಕ್ಲಿಕ್ ಮಾಡಿ. |
09:00 | Arduino IDE ಗೆ ಮರಳಿ. |
09:03 | ಮೋಟರ್ ಅನ್ನು ಡ್ರೈವ್ ಮಾಡಲು ICpin2 ಮತ್ತು ICpin7 ಗಳನ್ನು OUTPUT ಮೋಡ್ ಗೆ ಹೊಂದಿಸಲಾಗುತ್ತದೆ. |
09:10 | ನಂತರ ನಾವು void loop() ಗಾಗಿ ಕೋಡ್ ಅನ್ನು ಬರೆಯಲಿದ್ದೇವೆ. |
09:14 | analogRead ಕಮಾಂಡ್, ಪೊಟೆಂಶಿಯೋಮೀಟರ್ ನಿಂದ ಅನಲಾಗ್ ಮೌಲ್ಯವನ್ನು ತೋರಿಸಲಿದೆ. |
09:20 | ಈ ಮೌಲ್ಯವನ್ನು ಅನಲಾಗ್ ಪಿನ್ A0 ಗೆ ನೀಡಲಾಗುತ್ತದೆ. |
09:24 | ಪೊಟೆಂಶಿಯೋಮೀಟರ್ ನ ಮೌಲ್ಯವನ್ನು ಆಧರಿಸಿ ಮೋಟರ್ ನ ವೇಗ ಬದಲಾಗುತ್ತದೆ. |
09:30 | map ಕಮಾಂಡ್, ಅನಲಾಗ್ ಮೌಲ್ಯವನ್ನು ಡಿಜಿಟಲ್ ಗೆ ಪರಿವರ್ತಿಸುತ್ತದೆ. |
09:35 | ಪುಶ್ ಬಟನ್ ಒತ್ತಿದಾಗ, fwdbuttonState ಮತ್ತು bckbuttonState, ಸಿಗ್ನಲ್ ಅನ್ನು ಬರಮಾಡುತ್ತದೆ. |
09:43 | ಪಿನ್ 12 ಅಥವಾ ಪಿನ್ 13ಕ್ಕೆ ಸಂಪರ್ಕಿಸಿದ ಪುಶ್ ಬಟನ್ ಅನ್ನು ಒತ್ತಲಾಗಿದೆಯೇ ಎಂಬುದನ್ನು IF ಕಮಾಂಡ್ ಪರಿಶಿಲಿಸುತ್ತದೆ. |
09:50 | ಮೋಟರ್ ಪ್ರದಕ್ಷಿಣಾಕಾರವಾಗಿ ಅಥವಾ ಅಪ್ರದಕ್ಷಿಣಾಕಾರವಾಗಿ ತಿರುಗಲು ಇದು ಸಹಕರಿಸುತ್ತದೆ. |
09:56 | ಇವೆರಡರಲ್ಲಿ ನಾವು ಯಾವುದೇ ಬಟನ್ ಒತ್ತದಿದ್ದರೆ… |
10:00 | ಮೋಟರ್ ʻಆಫ್ʼ ಸ್ಥಿತಿಯಲ್ಲಿದೆ ಎಂಬುದನ್ನು else ಕಮಾಂಡ್ ಖಚಿತಪಡಿಸುತ್ತದೆ. |
10:05 | ಈ ಕೋಡ್ ಈ ಟ್ಯುಟೊರಿಯಲ್ ನ Code file ಲಿಂಕ್ ನಲ್ಲಿ ಲಭ್ಯವಿದೆ. ಅದನ್ನು ಡೌನ್-ಲೊಡ್ ಮಾಡಿ ಉಪಯೊಗಿಸಬಹುದು. |
10:13 | ಪ್ರೋಗ್ರಾಂ ಅನ್ನು ದೃಢೀಕರಿಸಲು compile ಬಟನ್ ಮೇಲೆ ಕ್ಲಿಕ್ ಮಾಡಿ. |
10:17 | ನಾವೀಗ ಪ್ರೋಗ್ರಾಂ ಅನ್ನು PWM_Motor ಆಗಿ ಸೇವ್ ಮಾಡೋಣ Save ಮೇಲೆ ಕ್ಲಿಕ್ ಮಾಡೋಣ. |
10:25 | ಆರ್ಡುಯಿನೊವಿಗೆ ಪ್ರಸ್ತುತ ಪ್ರೋಗ್ರಾಂ ಅನ್ನು ಅಪ್ಲೋಡ್ ಮಾಡಲು upload ಬಟನ್ ಮೇಲೆ ಕ್ಲಿಕ್ ಮಾಡಿ. |
10:31 | ನಾವೀಗ ಮೇಲಿನ ಪ್ರೋಗ್ರಾಂ ನ ಔಟ್ಪುಟ್ ನೋಡೋಣ. |
10:35 | ಪಿನ್ 13 ಕ್ಕೆ ಸಂಪರ್ಕಿಸಲು ನಾನು ಪುಶ್ ಬಟನ್ ಒತ್ತುತ್ತೇನೆ. |
10:39 | ಪ್ರದಕ್ಷಿಣಾಕಾರದಲ್ಲಿ ಮೋಟರ್ ತಿರುಗುವುದನ್ನು ನಾವು ನೋಡಬಹುದು. |
10:43 | ನಾನೀಗ ಪುಶ್ ಬಟನ್ ಅನ್ನು ರಿಲೀಸ್ ಮಾಡುತ್ತೇನೆ. |
10:47 | ಮೋಟರ್ ತಿರುಗುವುದನ್ನು ನಿಲ್ಲಿಸುತ್ತದೆ ಮತ್ತು ಅದು ʻಆಫ್ʼ ಸ್ಥಿತಿಯಲ್ಲಿರುತ್ತದೆ. |
10:52 | ಈಗ ಮತ್ತೊಮ್ಮೆ, ಪಿನ್ 12ಕ್ಕೆ ಸಂಪರ್ಕಿಸಲು ನಾನು ಪುಶ್ ಬಟನ್ ಒತ್ತುತ್ತೇನೆ. |
10:57 | ಮೋಟರ್ ಅಪ್ರದಕ್ಷಿಣಾಕಾರವಾಗಿ ತಿರುಗುವುದನ್ನು ನಾವು ನೋಡಬಹುದು. |
11:02 | A0 ಗೆ ಸಂಪರ್ಕಿಸಿರುವ ಪೊಟೆಂಶಿಯೋಮೀಟರ್ ಅನ್ನು ಹೊಂದಾಣಿಕೆ ಮಾಡುವ ಮೂಲಕ ನಾವು ಮೋಟರ್ ನ ವೇಗವನ್ನು ಬದಲಾಯಿಸಬಹುದು. |
11:14 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ತಲುಪಿದ್ದೇವೆ. ನಾವೀಗ ಸಂಕ್ಷೇಪಿಸೋಣ. |
11:20 | ಈ ಟ್ಯುಟೋರಿಯಲ್ ನಲ್ಲಿ ನಾವು:
ಪಲ್ಸ್ ವಿಡ್ತ್ ಮಾಡ್ಯುಲೇಶನ್, |
11:26 | PWM ಡ್ಯೂಟಿ ಸೈಕಲ್, |
11:29 | PWM ಫ್ರೀಕ್ವೆನ್ಸಿ ಮತ್ತು ಡಿ.ಸಿ ಮೋಟರ್ ನ ವೇಗ ಮತ್ತು ದಿಕ್ಕನ್ನು ನಿಯಂತ್ರಿಸುವುದನ್ನು ಕಲಿತೆವು. |
11:38 | ಅಸೈನ್ಮೆಂಟ್ ಆಗಿ:
ಮೇಲಿನ ಸಂಪರ್ಕದಲ್ಲಿ, ಎಲ್.ಇ.ಡಿ ಗೆ ಬದಲಾಗಿ ಬಝರ್ ಸಂಪರ್ಕಿಸಿ. |
11:45 | ಇದೇ ಪ್ರೋಗ್ರಾಂ ಅನ್ನು ಅಪ್ಲೋಡ್ ಮಾಡಿ ಮತ್ತು ಔಟ್ಪುಟ್ ಪರೀಕ್ಷಿಸಿ. |
11:49 | ನೀವು ವಿವಿಧ ಫ್ರೀಕ್ವೆನ್ಸಿಗಳ ಶಬ್ದವನ್ನು ಕೇಳಬಹುದು. |
11:53 | ಅಸೈನ್ಮೆಂಟ್ ನ ಔಟ್ಪುಟ್ ಇಲ್ಲಿದೆ. |
12:01 | ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ವಿವರಿಸುತ್ತದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ. |
12:09 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
12:19 | ನಿಮ್ಮ ಟೈಮ್ಡ್ ಕ್ವೆರಿಯನ್ನು ಈ ಫೋರಂ ನಲ್ಲಿ ಪೋಸ್ಟ್ ಮಾಡಿ. |
12:23 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ.
ಈ ಲಿಂಕ್ ನಲ್ಲಿ ಈ ಮಿಶನ್ ಕುರಿತ ಹೆಚ್ಚಿನ ಮಾಹಿತಿ ಲಭ್ಯ. |
12.29 | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |