Synfig/C3/Basic-bone-animation/Kannada

From Script | Spoken-Tutorial
Jump to: navigation, search
Time
Narration
00:01 Basic bone animation” using Synfig ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ, ಸಿನ್ಫಿಗ್ನಲ್ಲಿನ Skeleton' ಆಯ್ಕೆಯನ್ನು ಬಳಸಿಕೊಂಡು ಕೆರೆಕ್ಟರ್ ಅನ್ನು ಅನಿಮೇಟ್ ಮಾಡಲು ನಾವು ಕಲಿಯುತ್ತೇವೆ.
00:13 ನಾವು ಮೂಳೆಗಳನ್ನು ಸೇರಿಸಲು,
00:17 ದೇಹಕ್ಕೆ ಮೂಳೆಗಳನ್ನು ಜೋಡಿಸಿ ಮತ್ತು ಮೂಳೆಗಳನ್ನು ಅನಿಮೇಟ್ ಮಾಡಲು ಕಲಿಯುತ್ತೇವೆ.
00:22 ಈ ಪಾಠವನ್ನು ರೆಕೊರ್ಡ್ ಮಾಡಲು ನಾನು Ubuntu Linux 14.04 OS,
00:31 Synfig version 1.0.2 ಗಳನ್ನು ಉಪಯೋಗಿಸುತ್ತಿದ್ದೇನೆ.
00:36 ಈಗ ನಾವು ಪ್ರಾರಂಭಿಸೋಣ. ನಾವು ಸಿನ್ಫಿಗ್ನಲ್ಲಿದ್ದೇವೆ.
00:40 ನನ್ನ ಮಶಿನ್ ನಲ್ಲಿ ಉಳಿಸಲಾದ Synfig-character ಫೈಲ್ ಅನ್ನು ನಾನು ತೆರೆಯುತ್ತೇನೆ.
00:47 ಈ ಫೈಲ್ ಅನ್ನು Code Files ಲಿಂಕ್ನಲ್ಲಿ ನಿಮಗೆ ಒದಗಿಸಲಾಗಿದೆ. ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿ ಮತ್ತು ಬಳಸಿ.
00:57 ದೇಹದ ಎಲ್ಲಾ ಭಾಗಗಳು ವಿಭಿನ್ನ ಲೇಯರ್-ನಲ್ಲಿವೆ ಎಂದು ಖಚಿತಪಡಿಸಿಕೊಳ್ಳಿ.
01:02 ಈಗ, ನಾವು ದೇಹದ ಮೇಲಿನ ಭಾಗವನ್ನು ಸ್ಥಿರವಾದ ಕೀಲುಗಳಿಂದ Skeleton ಬಳಸಿ ರಿಗ್ ಮಾಡಲು ಕಲಿಯುತ್ತೇವೆ.
01:11 ಅದಕ್ಕೂ ಮೊದಲು, ನಾವು ಗುಂಪುಗಳನ್ನು ರಚಿಸಬೇಕಾಗಿದೆ. ಉದಾಹರಣೆಗೆ ಎಡಗೈಯನ್ನು, ಎಡ ಮೇಲಿನ ತೋಳು, ಎಡ ಕೆಳಗಿನ ತೋಳು ಮತ್ತು ಎಡ ಅಂಗೈಯಿಂದ ಮಾಡಬೇಕು.
01:25 ಆದ್ದರಿಂದ, ಈ ಮೂರು ಲೇಯರ್ ಗಳನ್ನು ಗುಂಪು ಮಾಡಿ ಅದನ್ನು L-hand ಎಂದು ಹೆಸರಿಸಬೇಕಾಗಿದೆ.
01:32 ಅಂತೆಯೇ, ಬೇರೆ ಲೇಯರ್ ಗಳನ್ನೂ ಗುಂಪು ಮಾಡಿ.
01:36 ಇಲ್ಲಿ ತೋರಿಸಿರುವಂತೆ ಗ್ರುಪ್ ಲೇಯರ್ ಗಳನ್ನು L-hand, R-hand, Head, Neck ಮತ್ತು Trunk ಎಂದು ಹೆಸರಿಸಿ.
01:46 ಈ ಫೈಲ್ ಅನ್ನು Save As ಆಯ್ಕೆಯನ್ನು ಉಪಯೋಗಿಸಿ ಸೇವ್ ಮಾಡೋಣ.
01:50 File ಗೆ ಹೋಗಿ Save As ಕ್ಲಿಕ್ ಮಾಡಿ.
01:54 ನಿಮಗೆ ಬೇಕಾದ ಸ್ಥಾನವನ್ನು ಆರಿಸಿ, ಫೈಲ್ ನೇಮ್ ಅನ್ನು Basic hyphen bone hyphen animation ಎಂದು ಕೊಡಿ.
02:03 Save ಬಟನ್ ಮೇಲೆ ಕ್ಲಿಕ್ ಮಾಡಿ.
02:06 ಈಗ Layers panel(ಲೇಯರ್ಸ್ ಪೆನಲ್) ಗೆ ಹೋಗಿ.
02:10 ಗ್ರುಪ್ ಮಾಡಿದ ಎಲ್ಲಾ ಲೇಯರ್ಸ್ ಗಳನ್ನು ಇನ್ನೊಂದು ಗ್ರುಪ್ ಮಾಡಿ Character ಎಂದು ಹೆಸರು ಕೊಡಿ.
02:17 ಈಗ, ತ್ರಿಕೋನ ಆಕಾರವನ್ನು ಕ್ಲಿಕ್ ಮಾಡುವ ಮೂಲಕ Character ಗ್ರುಪ್-ಅನ್ನು ತೆರೆಯಿರಿ.
02:23 Character layer ನ ಮೇಲಿನ ಲೇಯರ್ ಮೇಲೆ ರೈಟ್ ಕ್ಲಿಕ್ ಮಾಡಿ.
02:27 New layerಗೆ ಹೋಗಿ, ನಂತರ Other ಗೆ ಹೋಗಿ Skeleton ಅನ್ನು ಕ್ಲಿಕ್ ಮಾಡಿ.
02:33 ನಾವು ಕೆನ್ವಾಸ್ ಮೇಲೆ ಒಂದು ಬೋನ್ ಅನ್ನು ಪಡೆಯುತ್ತೇವೆ.
02:37 Transform tool ಅನ್ನು ಕ್ಲಿಕ್ ಮಾಡಿ ಬೋನ್ ನ ಹಸಿರು ಚುಕ್ಕಿಯನ್ನು ಆರಿಸಿ.
02:42 ಮೌಸ್ಅನ್ನು ಡ್ರ್ಯಾಗ್ ಮಾಡಿ ಮತ್ತು ಬೋನ್ ಅನ್ನು ಕೆರೆಕ್ಟರ್ ನ ಟ್ರಂಕ್ ಭಾಗಕ್ಕೆ ಸರಿಸಿ.
02:49 ಈಗ ಬೋನ್ ಅನ್ನು ಇಲ್ಲಿ ತೋರಿಸಿದಂತೆ ಇಡಿ.
02:53 ಮುಂದೆ, ಬೋನ್ ನ ಉದ್ದವನ್ನು ಸರಿಹೊಂದಿಸಲು 'ಬೋನ್ ನ ಕಿತ್ತಳೆ ಡಾಟ್ ಅನ್ನು ಬಳಸಿ.
03:00 ಇದಾದ ನಂತರ ಬೋನ್ ನ ಕಿತ್ತಳೆ ಚುಕ್ಕಿಯಮೇಲೆ ರೈಟ್ ಕ್ಲಿಕ್ ಮಾಡಿ.
03:04 ನಂತರ Create child bone ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
03:10 ಮೊದಲೇ ವಿವರಿಸಿದಂತೆ ಟ್ರಂಕ್ ನ ಮೇಲಿನ ಭಾಗದಲ್ಲಿಚೈಲ್ಡ್ ಬೋನ್ ನ ಉದ್ದವನ್ನು ಹೊಂದಿಸಿ.
03:17 ಇದೇ ರೀತಿ, ಕುತ್ತಿಗೆ, ತಲೆ ಮತ್ತು ಕೈಗಳಿಗೆ ಬೋನ್ ಗಳನ್ನು ಸೇರಿಸಿ ಮತ್ತು ಹೊಂದಿಸಿ.
03:41 ಈಗ Skeleton layer ದೇಹದ ಒಳಗೆ ಇಡಲ್ಪಟ್ಟಿದೆ.
03:45 ಮುಂದೆ, ನಾವು ಮೂಳೆಗಳನ್ನು ದೇಹದ ಪ್ರತಿಯೊಂದು ಭಾಗಕ್ಕೂ ಜೋಡಿಸುತ್ತೇವೆ.
03:50 ಅದಕ್ಕಾಗಿ Layers panel(ಲೇಯರ್ ಪೆನಲ್) ಗೆ ಹೋಗಿ. R-upper-arm layer ಮೇಲೆ ರೈಟ್ ಕ್ಲಿಕ್ ಮಾಡಿ, ನಂತರ Select all child layers ಮೇಲೆ.
04:00 ಕ್ಯಾನ್ವಾಸ್ ಗೆ ಹೋಗಿ. Shift ಕೀ ಉಪಯೊಗಿಸಿ, ಬಲ ಮೇಲಿನ ತೋಳಿನ ಎಲ್ಲಾ 'ನೋಡ್' 'ಗಳನ್ನು ಆಯ್ಕೆ ಮಾಡಿ ಮೌಸ್ ಅನ್ನು ಹಿಡಿದುಕೊಂಡು ಎಳೆಯಿರಿ.
04:11 Ctrl ಕೀ ಒತ್ತಿ, ನಂತರ Skeleton layer ಅನ್ನು ಆರಿಸಿ.
04:18 R-upper-arm ನ ಬೋನ್ ನ ಯಾವುದೇ ನೋಡ್ ಮೇಲೆ ರೈಟ್ ಕ್ಲಿಕ್ ಮಾಡಿ.
04:23 Link to bone ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
04:28 ಅಂತೆಯೇ, ನಾವು Link to boneಅನ್ನು ಬಳಸಿಕೊಂಡು ದೇಹದ ಪ್ರತಿಯೊಂದು ಭಾಗವನ್ನು ಆಯಾ 'ಬೋನ್'ಗೆ ಜೋಡಿಸಬೇಕು.
04:50 ದೇಹದ ಪ್ರತಿಯೊಂದು ಭಾಗವನ್ನು ಸ್ಕೆಲೆಟನ್ ಗೆ ಜೋಡಿಸಬೇಕಾಗಿದೆ.
04:56 ಆಗ ಮಾತ್ರ ನಾವು ದೇಹದ ಎಲ್ಲಾ ಭಾಗಗಳನ್ನು bones ಬಳಸಿ ಅನಿಮೇಟ್ ಮಾಡಬಹುದು.
05:02 ಫೈಲ್ ಅನ್ನು ಸೇವ್ ಮಾಡಲು Ctrl ಮತ್ತು S ಕೀಗಳನ್ನು ಒತ್ತಿ.
05:06 ಈಗ ನಾವು ಎನಿಮೇಟ್ ಮಾಡಲು ಪ್ರಾರಂಭಿಸೋಣ.
05:09 Layers panel ಗೆ ಹೋಗಿ Skeleton layer ಅನ್ನು ಆರಿಸಿಕೊಳ್ಳಿ.
05:13 animate editing mode ಐಕೊನ್ ಅನ್ನು ಟರ್ನ್ ಒನ್ ಮಾಡಿ.
05:16 Time track panel(ಟೈಮ್ ಟ್ರ್ಯಾಕ್ ಪೆನಲ್) ಗೆ ಹೋಗಿ ಕರ್ಸರ್ ಅನ್ನು 20ನೇ ಫ್ರೇಮ್ ಮೇಲೆ ಇರಿಸಿ.
05:22 ವಿವಿಧ ಬಣ್ಣದ ಚುಕ್ಕೆಗಳನ್ನು ಗಮನಿಸಿ.
05:25 ನೀಲಿ ಚುಕ್ಕೆ ತಿರುಗುವಿಕೆಗಾಗಿ.
05:27 ಸ್ಕೇಲಿಂಗ್ಗಾಗಿ ಕಿತ್ತಳೆ ಚುಕ್ಕೆ.
05:30 ಮತ್ತು, ಹಸಿರು ಚುಕ್ಕೆ ಸ್ಕೆಲೆಟನ್ ನ ಸ್ಥಳಾಂತರಕ್ಕಾಗಿ.
05:35 canvas(ಕ್ಯಾನ್ವಾಸ್) ಗೆ ಹೋಗೋಣ.
05:38 ಬಲಗೈಯ ಕೆಳಗಿನ ತೋಳಿನ ಭಾಗದಲ್ಲಿ ಇರಿಸಲಾಗಿರುವ ಬೋನ್ ನ ನೀಲಿ ಚುಕ್ಕೆಯನ್ನು ಆಯ್ಕೆಮಾಡಿ.
05:44 ನೀಲಿ ಚುಕ್ಕೆ ಚಲಿಸುವ ಮೂಲಕ ಇಲ್ಲಿ ಪ್ರದರ್ಶಿಸಿದಂತೆ ಕೆಳಗಿನ ತೋಳಿನ ಬೋನ್ ಅನ್ನು ಸರಿಸಿ.
05:49 Time track panel ಗೆ ಹೋಗಿ ಕರ್ಸರ್ ಅನ್ನು 32ನೇ ಫ್ರೇಮ್ ಮೇಲೆ ಇರಿಸಿ.
05:56 ಕ್ಯಾನ್ವಾಸ್ ಗೆ ಹಿಂತಿರುಗಿ ಮತ್ತು ಇಲ್ಲಿ ಪ್ರದರ್ಶಿಸಿದಂತೆ ಕೆಳಗಿನ ತೋಳಿನ ಬೋನ್ ಅನ್ನು ಸರಿಸಿ.
06:02 ಮತ್ತೆ Time track panel ಗೆ ಹೋಗಿ ಕರ್ಸರ್ ಅನ್ನು 48ನೇ ಫ್ರೇಮ್ ಮೇಲೆ ಇರಿಸಿ.
06:09 ಕ್ಯಾನ್ವಾಸ್ ಗೆ ಹೋಗಿ ಇಲ್ಲಿ ತೋರಿಸಿದಂತೆ ಕೆಳಗಿನ ತೋಳಿನ ಬೋನ್ ಅನ್ನು ಸರಿಸಿ.
06:15 ನಂತರ, ಅದೇ ಫ್ರೆಮ್ ನಲ್ಲಿ ಅಂಗೈನ ಬೋನ್ ನ ನೀಲಿ ಚುಕ್ಕೆಯನ್ನು ಆಯ್ಕೆಮಾಡಿ.
06:21 ನಂತರ ಇಲ್ಲಿ ಪ್ರದರ್ಶಿಸಿದಂತೆ ಅಂಗೈನ ಬೋನ್ ಅನ್ನು ಸರಿಸಿ.
06:25 ಮತ್ತೊಮ್ಮೆ Time track panel ಗೆ ಹೋಗಿ ಕರ್ಸರ್ ಅನ್ನು 63ನೇ ಫ್ರೇಮ್ ಮೇಲಿರಿಸಿ.
06:34 ಕ್ಯಾನ್ವಾಸ್ಗೆ ಹಿಂತಿರುಗಿ ಮತ್ತು ಇಲ್ಲಿ ಪ್ರದರ್ಶಿಸಿದಂತೆ ಕೆಳಗಿನ ತೋಳಿನ ಮೂಳೆಯನ್ನು ಸರಿಸಿ.
06:40 ನಾವು ಅದೇ ರೀತಿಯಲ್ಲಿ L-hand ಅನ್ನು ಕೂಡಾ ಎನಿಮೇಟ್ ಮಾಡುತ್ತೇವೆ.
06:43 ಕ್ಯಾನ್ವಾಸ್ಗೆ ಹೋಗಿ ಮತ್ತು ಎಡಗೈಯ ಕೆಳಗಿನ ತೋಳಿನ ಬೋನ್ ನ ಮೇಲಿನ ನೀಲಿ ಚುಕ್ಕೆಯನ್ನು ಆಯ್ಕೆಮಾಡಿ.
06:50 Time track panel ಗೆ ಹೋಗಿ ಕರ್ಸರ್ ಅನ್ನು 20ನೇ ಫ್ರೇಮ್ ಮೇಲೆ ಇರಿಸಿ.
06:56 ಕ್ಯಾನ್ವಾಸ್ ಗೆ ಹೋಗಿ.
06:59 ಇಲ್ಲಿ ಪ್ರದರ್ಶಿಸಿದಂತೆ ನೀಲಿ ಚುಕ್ಕೆ ಎಳೆಯಿರಿ ಮತ್ತು ಎಡಗೈಯ ಕೆಳಗಿನ ತೋಳಿನ ಬೋನ್ ಅನ್ನು ಸರಿಸಿ.
07:06 ಕೊನೆಯದಾಗಿ Turn off animate editing mode ಐಕೊನ್ ಅನ್ನು ಕ್ಲಿಕ್ ಮಾಡಿ.
07:11 ಕ್ಯಾನ್ವಾಸ್ ನ ಕೆಳಭಾಗದಲ್ಲಿರುವ Seek to begin ಮೇಲೆ ಕ್ಲಿಕ್ ಮಾಡಿ.
07:15 ಬಟನ್ ಕ್ಲಿಕ್ ಮಾಡುವ ಮೂಲಕ ಎನಿಮೇಶನ್ ಅನ್ನು ಪ್ಲೇ ಮಾಡಿ.
07:28 ಮತ್ತೊಮ್ಮೆ,ಫೈಲ್ ಅನ್ನು ಸೇವ್ ಮಾಡಿ.
07:31 ಈಗ ನಾವು ಪ್ರೀವ್ಯೂ ವನ್ನು ಪರೀಕ್ಷಿಸೋಣ.
07:36 File ಗೆ ಹೋಗಿ Preview ಮೇಲೆ ಕ್ಲಿಕ್ ಮಾಡಿ.
07:40 Quality ಯನ್ನು 0.5 ಎಂದೂ ಮತ್ತು Frame per second ಅನ್ನು 24 ಎಂದೂ ಸೆಟ್ ಮಾಡಿ.
07:45 Preview ಬಟನ್ ಮೇಲೆ ಕ್ಲಿಕ್ ಮಾಡಿ ನಂತರ Play ಬಟನ್ ಮೇಲೆ ಕ್ಲಿಕ್ ಮಾಡಿ.
07:51 ನಾವು ಅನಿಮೇಷನ್ನ ಪ್ರೀವ್ಯೂ ವನ್ನು ಸ್ಕ್ರೀನ್ ಮೇಲೆ ನೋಡಬಹುದು.
07:56 Preview window ವನ್ನು ಕ್ಲೋಸ್ ಮಾಡೋಣ.
07:58 ಈಗ, ಎನಿಮೇಶನ್ ಅನ್ನು ರೆಂಡರ್ ಮಾಡೋಣ.
08:02 ಅದನ್ನು ಮಾಡಲು File ಗೆ ಹೋಗಿ Render ಮೇಲೆ ಕ್ಲಿಕ್ ಮಾಡಿ.
08:08 Render setting ವಿಂಡೋ ಗೆ ಹೋಗಿ.
08:10 Choose ಮೇಲೆ ಕ್ಲಿಕ್ ಮಾಡಿ, Save render as ವಿಂಡೋ ವನ್ನು ಕ್ಲಿಕ್ ಮಾಡಿ.
08:15 ಫೈಲ್ ಅನ್ನು ಸೇವ್ ಮಾಡಲು ಲೊಕೇಶನ್ ಅನ್ನು ಆರಿಸಿ. ನಾನು ಡೆಸ್ಕ್ಟೊಪ್ ಅನ್ನು ಆರಿಸುತ್ತೇನೆ.
08:21 ಫೈಲ್ ನೇಮ್ ಅನ್ನು Basic hyphen bone hyphen animation dot avi ಎಂದು ಪರಿವರ್ತಿಸಿ.
08:27 Target ಡ್ರೊಪ್ ಡೌನ್ ಮೆನ್ಯೂ ಮೇಲೆ ಕ್ಲಿಕ್ ಮಾಡಿ, ಎಕ್ಸ್ಟೆನ್ಶನ್ ಅನ್ನು ffmpeg ಎಂದು ಆರಿಸಿ.
08:35 Time ಟ್ಯಾಬ್ ಮೇಲೆ ಕ್ಲಿಕ್ ಮಾಡಿ End time ಅನ್ನು 70ಕ್ಕೆ ಬದಲಿಸಿ.
08:40 ಕೊನೆಯದಾಗಿ, Render ಮೇಲೆ ಕ್ಲಿಕ್ ಮಾಡಿ.
08:45 ನಮ್ಮ ಎನಿಮೇಶನ್ ಅನ್ನು ಈಗ ಪರೀಕ್ಷಿಸೋಣ.
08:48 Desktop ಗೆ ಹೋಗಿ Basic-bone-animation. avi ಅನ್ನು ಆರಿಸಿ.
08:56 ರೈಟ್ ಕ್ಲಿಕ್ ಮಾಡಿ, Firefox web browser ಉಪಯೋಗಿಸಿ ಎನಿಮೇಶನ್ ಅನ್ನು ಪ್ಲೇ ಮಾಡಿ.
09:03 ಇದರೊಂದಿಗೆ, ನಾವು ಈ ಟ್ಯುಟೋರಿಯಲ್ ಅಂತ್ಯಕ್ಕೆ ಬಂದಿದ್ದೇವೆ. ನಾವು ಸಾರಾಂಶವನ್ನು ನೋಡೋಣ.
09:10 ಈ ಟ್ಯುಟೋರಿಯಲ್ ನಲ್ಲಿ, Synfigನಲ್ಲಿbone ಅನಿಮೇಷನ್ ನ ಮೂಲಭೂತ ಜ್ಞಾನವನ್ನು ಪಡೆದೆವು.
09:16 ಬೋನ್-ಗಳನ್ನು ಸೇರಿಸಲು, ದೇಹಕ್ಕೆ ಬೋನ್-ಗಳನ್ನು ಜೋಡಿಸಲು ಮತ್ತು ಬೋನ್-ಗಳನ್ನು ಅನಿಮೇಟ್ ಮಾಡಲು ಸಹ ನಾವು ಕಲಿತಿದ್ದೇವೆ.
09:24 ಇಲ್ಲಿ ನಿಮಗೆ ಒಂದು ಪಾಠನಿಯೋಜನೆ ಇದೆ.
09:26 ನಿಮಗೆ ಕೊಟ್ಟಿರುವ ಸಿನ್ಫಿಗ್ ಫೈಲ್ ಅನ್ನು Code files ಲಿಂಕ್ನಲ್ಲಿ ತೆರೆಯಿರಿ.
09:31 ಮೂಳೆಗಳನ್ನು ಸೇರಿಸಿ ಮತ್ತು ಕೈಯನ್ನು ಅನಿಮೇಟ್ ಮಾಡಿ.
09:35 ಪೂರ್ಣಗೊಂಡ ನಿಮ್ಮ ಪಾಠನಿಯೋಜನೆ ಹೀಗೆ ಕಾಣಬೇಕು.
09:40 ಈ ವೀಡಿಯೊ 'ಸ್ಪೋಕನ್ ಟ್ಯುಟೋರಿಯಲ್' ಯೋಜನೆಯ ಸಾರಾಂಶವಾಗಿದೆ. ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ.
09:47 ನಾವು ಸ್ಪೋಕನ್ ಟ್ಯುಟೋರಿಯಲ್ಸ್ ಉಪಯೋಗಿಸಿ ಕಾರ್ಯಶಾಲೆಗಳನ್ನು ನಡೆಸುತ್ತೇವೆ. ಪ್ರಮಾಣಪತ್ರವನ್ನೂ ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
09:55 ಸಮಯಾಧಾರಿತ ಪ್ರಶ್ನೆಗಳನ್ನು ಈ ಫೋರಮ್ ನಲ್ಲಿ ಪೋಸ್ಟ್ ಮಾಡಿ.
09:59 ಸ್ಪೋಕನ್ ಟ್ಯುಟೋರಿಯಲ್ ಯೋಜನೆಗೆ ಭಾರತ ಸರ್ಕಾರದ NMEICT, MHRD ಧನಸಹಾಯ ನೀಡುತ್ತಿದೆ.
10:06 ಅನುವಾದ ಮತ್ತು ಧ್ವನಿ ಶ್ರೀ ನವೀನ ಭಟ್ಟ ಉಪ್ಪಿನಪಟ್ಟಣ. ಧನ್ಯವಾದಗಳು.

Contributors and Content Editors

NaveenBhat