Synfig/C2/E-card-animation/Kannada
From Script | Spoken-Tutorial
Time | Narration |
00:01 | “E-card animation” using Synfig.ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:05 | ಈ ಟ್ಯುಟೋರಿಯಲ್ ನಲ್ಲಿ, ನಾವು ಕೆಲವು 'png' ಚಿತ್ರಗಳನ್ನು ಬಳಸಿಕೊಂಡು ಇ-ಕಾರ್ಡ್ ಅನಿಮೇಷನ್ ಅನ್ನು ರಚಿಸಲು ಕಲಿಯುತ್ತೇವೆ. |
00:11 | ಇಲ್ಲಿ, ನಾವು 'png' ಫಾರ್ಮ್ಯಾಟ್ ಚಿತ್ರಗಳನ್ನು ಇಂಪೋರ್ಟ್ ಮಾಡಲು, |
00:16 | ಇಮೇಜಸ್ ಗಳನ್ನು ಎನಿಮೇಟ್ ಮಾಡಲು, |
00:18 | ಟೆಕ್ಸ್ಟ್ ಗಳನ್ನು ಎನಿಮೇಟ್ ಮಾಡಲು, |
00:20 | ಎನಿಮೇಶನ್ ಅನ್ನು ಪ್ರೀವ್ಯೂ ಮಾಡಲು, |
00:22 | avi ಪೊರ್ಮೇಟ್ ನಲ್ಲಿ ಎನಿಮೇಶನ್ ಅನ್ನು ರೆಂಡರ್ ಮಾಡಲು ಕಲಿಯುತ್ತೇವೆ. |
00:25 | ಈ ಟ್ಯುಟೋರಿಯಲ್ ಗಾಗಿ ನಾನು Ubuntu Linux 14.04 OS, |
00:32 | Synfig version 1.0.2 ಗಳನ್ನು ಉಪಯೋಗಿಸುತ್ತಿದೇನೆ. |
00:35 | Synfig ಅನ್ನು ತೆರೆಯೋಣ. |
00:38 | ಡ್ಯಾಶ್ ಹೋಮ್ ಗೆ ಹೋಗಿ Synfig ಎಂದು ಟೈಪ್ ಮಾಡಿ. |
00:42 | ಲೋಗೋ ಕ್ಲಿಕ್ ಮಾಡುವ ಮೂಲಕ ನೀವು ಸಿನ್ಫಿಗ್ಅನ್ನು ತೆರೆಯಬಹುದು. |
00:47 | ಈಗ, ಇ-ಕಾರ್ಡ್ ಅನಿಮೇಷನ್ ರಚಿಸಲು ಪ್ರಾರಂಭಿಸೋಣ. |
00:52 | ನಾವು ಮೊದಲು ನಮ್ಮ ಸಿನ್ಫಿಗ್ಫೈಲ್ ಅನ್ನು ಸೇವ್ ಮಾಡಬೇಕಾಗಿದೆ. |
00:56 | File ಗೆ ಹೋಗಿ Save ಅನ್ನು ಕ್ಲಿಕ್ ಮಾಡಿ. |
00:59 | ನೀವು ಸೇವ್ ಮಾಡಲು ಇಚ್ಛಿಸುವ ಫೋಲ್ಡರ್ ಅನ್ನು ಆಯ್ಕೆ ಮಾಡಿ. |
01:02 | ಫೈಲ್ ನೇಮ್ ಅನ್ನು E-card-animation ಎಂದು ಕೊಟ್ಟು Save ಬಟನ್ ಒತ್ತಿರಿ. |
01:07 | ಮೊದಲು ನಾವು Toolbox ಗೆ ಹೋಗಿ Rectangle ಟೂಲ್ ಅನ್ನು ಆಯ್ಕೆ ಮಾಡೋಣ. |
01:12 | ನಂತರ ಪ್ರದರ್ಶಿಸಿದಂತೆ ಕ್ಯಾನ್ವಾಸ್ ನ ಮೇಲೆ ಆಯತವನ್ನು ಎಳೆಯಿರಿ. |
01:17 | ಇಂಪೋರ್ಟ್ ಮಾಡಿದ ಚಿತ್ರವು ಕ್ಯಾನ್ವಾಸ್ಒಳಗೆ ಹೊಂದಿಕೊಳ್ಳುವಂತಹ ಸೆಟ್ಟಿಂಗ್ಗಳನ್ನು ನಾವು ಬದಲಾಯಿಸುತ್ತೇವೆ. |
01:23 | ಹಾಗೆ ಮಾಡಲು Editಗೆ ಹೋಗಿ Preferences ನಂತರ Misc ಗಳನ್ನು ಕ್ಲಿಕ್ ಮಾಡಿ. |
01:30 | Scaling new imported image to fix canvas ಎಂಬ ಒಪ್ಶನ್ ಮೇಲೆ ಕ್ಲಿಕ್ ಮಾಡಿ. |
01:35 | ಈಗ, Ok ಯನ್ನು ಕ್ಲಿಕ್ ಮಾಡಿ. ಈ ಆಯ್ಕೆಯು ಚಿತ್ರಗಳನ್ನು ಕ್ಯಾನ್ವಾಸ್ನಲ್ಲಿ ಹೊಂದಿಕೊಳ್ಳುವಂತೆ ಇಂಪೋರ್ಟ್ ಮಾಡುತ್ತದೆ. |
01:44 | ದಯವಿಟ್ಟು ಗಮನಿಸಿ ನಾವು ಚಿತ್ರಗಳನ್ನು 'png' ಫೊರ್ಮೆಟ್ ನಲ್ಲಿ ಇಂಪೋರ್ಟ್ ಮಾಡಿಕೊಳ್ಳಬೇಕು. |
01:49 | ಏಕೆಂದರೆ jpg / jpegನಂತಹ ಇತರ ಫೊರ್ಮೇಟ್ ಗಳು ಸಿನ್ಫಿಗ್ ಕ್ಯಾನ್ವಾಸ್ನಲ್ಲಿ ವಿಭಿನ್ನವಾಗಿ ವರ್ತಿಸುತ್ತವೆ. |
01:58 | ಅಲ್ಲದೆ, ರೆಂಡರಿಂಗ್ ನಂತರ, 'png' ಚಿತ್ರಗಳನ್ನು ಬಳಸಿದಾಗ ಔಟ್ಪುಟ್ ನ ಗುಣಮಟ್ಟ ಉತ್ತಮವಾಗಿರುತ್ತದೆ. |
02:05 | Synfig ಇಂಟರ್ಫೇಸ್ ಗೆ ಬರೋಣ. |
02:09 | File ಗೆ ಹೋಗಿ Import ಮೇಲೆ ಕ್ಲಿಕ್ ಮಾಡಿ. |
02:12 | ನಾನು ಅಗತ್ಯವಿರುವ ಚಿತ್ರಗಳನ್ನು ನನ್ನ Documents ಫೋಲ್ಡರ್ನಲ್ಲಿ, E-card-animation folder ನಲ್ಲಿ ಸೇವ್ ಮಾಡಿದ್ದೇನೆ. |
02:20 | ಈ ಇಮೇಜ್ ಗಳು ಈ ವೆಬ್ ಪೇಜ್ ನ Code files ಲಿಂಕ್ ನಲ್ಲಿ ಲಭ್ಯವಿವೆ. |
02:26 | “Code files” ಲಿಂಕ್ ಗೆ ಹೋಗಿ ಇಮೇಜ್ ಅನ್ನು ನಿಮ್ಮ ಸಿಸ್ಟಮ್ ನಲ್ಲಿ save ಮಾಡಿ. |
02:31 | ಈಗ ನನ್ನ ಜೊತೆ ಅಭ್ಯಾಸ ಮಾಡಿ. |
02:34 | Bg ಇಮೇಜ್ ಅನ್ನು ಸೆಲೆಕ್ಟ್ ಮಾಡಿ Import ಅನ್ನು ಕ್ಲಿಕ್ ಮಾಡಿ. |
02:37 | ನಾವು ಕ್ಯಾನ್ವಾಸ್ ನಲ್ಲಿ Bg ಇಮೇಜ್ ಅನ್ನು ಪಡೆಯುತ್ತೇವೆ. |
02:41 | ಚಿತ್ರವನ್ನು ರೀಸೈಸ್ ಮಾಡಲು, ಮೊದಲು ಕಿತ್ತಳೆ ಚುಕ್ಕೆ ಅಥವಾ ಕಿತ್ತಳೆ ಬಾತುಕೋಳಿ ಹಿಡಿದು, Bg ಇಮೇಜ್ ಕ್ಯಾನ್ವಾಸ್ ನಲ್ಲಿ ಸರಿಹೊಂದುವಂತೆ, ಇಲ್ಲಿ ತೋರಿಸಿರುವಂತೆ 'ಮೌಸ್'ಅನ್ನು ಒಳಗೆ ಅಥವಾ ಹೊರಗೆ ಸರಿಸಿ. |
02:55 | ಈಗ ಫೋಲ್ಡರ್ ನಲ್ಲಿ, Cake ಇಮೇಜ್ ಅನ್ನು ಸೆಲೆಕ್ಟ್ ಮಾಡಿ Import ಮೇಲೆ ಕ್ಲಿಕ್ ಮಾಡಿ. |
03:00 | ನಾವು ನಮ್ಮ ಕ್ಯಾನ್ವಾಸ್ ನಲ್ಲಿ Cake ಇಮೇಜ್ ಅನ್ನು ಪಡೆಯುತ್ತೇವೆ. ಅದೇ ರೀತಿಯಲ್ಲಿ ಬೇರೆ ಇಮೇಜ್ ಗಳನ್ನು ಕೂಡಾ ಇಂಪೊರ್ಟ್ ಮಾಡಿ. |
03:08 | ಗಮನಿಸಿ, ನಾವು - Cake, Flowers ಮತ್ತು Balloons ಎಂಬ ಮೂರು ಲೇಯರ್ ಗಳನ್ನು ಹೊಂದಿದ್ದೇವೆ. |
03:14 | ಈಗ ಈ ಇಮೇಜ್ ಗಳನ್ನು ರೀಸೈಸ್ ಮಾಡೋಣ. Layers ಪೆನಲ್ ಗೆ ಹೋಗಿ. |
03:19 | ಮೊದಲು Cake ಲೇಯರ್ ಅನ್ನು ಆರಿಸಿಕೊಳ್ಳಿ. ಆಯ್ಕೆಮಾಡಿದ ಮೇಲೆ, ಕ್ಯಾನ್ವಾಸ್ನಲ್ಲಿ ರೀಸೈಸ್ ಮಾಡುವ ಹ್ಯಾಂಡಲ್ ಗಳು ಗೋಚರಿಸುತ್ತವೆ. |
03:27 | ಕಿತ್ತಳೆ ಚುಕ್ಕೆ ಕ್ಲಿಕ್ ಮಾಡಿ ಮತ್ತು Cake ಇಮೇಜ್ ಅನ್ನು ರೀಸೈಸ್ ಮಾಡಿ. |
03:32 | ಅದೇ ಪ್ರಕ್ರಿಯೆಯನ್ನು ಪುನರಾವರ್ತಿಸಿ ಮತ್ತು ಇತರ ಎರಡು ಚಿತ್ರಗಳನ್ನು ಸಹ ರೀಸೈಸ್ ಮಾಡಿ. |
03:38 | ಈಗ, ಚಿತ್ರಗಳನ್ನು ಸರಿಸಿ ಮತ್ತು ಇಲ್ಲಿ ಪ್ರದರ್ಶಿಸಿದಂತೆ ಅವುಗಳನ್ನು 'ಕ್ಯಾನ್ವಾಸ್' ನ ಹೊರಗೆ ಇರಿಸಿ. |
03:45 | ನಂತರ Animation ಪೆನಲ್ ಗೆ ಹೋಗಿ . Turn on animate editing mode icon ಅನ್ನು ಕ್ಲಿಕ್ ಮಾಡಿ. |
03:52 | Time cursor ಅನ್ನು 30ನೇ ಫ್ರೇಮ್ ಮೇಲೆ ಇರಿಸಿ. |
03:56 | Cake ಲೇಯರ್ ಅನ್ನು ಆಯ್ಕೆ ಮಾಡಿ. |
03:58 | ಇಲ್ಲಿ ತೋರಿಸಿರುವಂತೆ ಕೇಕ್ ಇಮೇಜ್ ಅನ್ನು ಕ್ಯಾನ್ವಾಸ್ ನ ಎಡಭಾಗಕ್ಕೆ ಸರಿಸಿ. |
04:05 | ನಂತರ, Balloons ಲೇಯರ್ ಆರಿಸಿಕೊಳ್ಳಿ. |
04:08 | Time cursor ಅನ್ನು 30ನೇ ಫ್ರೇಮ್ ಮೇಲೆ ಇರಿಸಿ. |
04:11 | Keyframes ಪೆನಲ್ ಗೆ ಹೋಗಿ Add a keyframe ಅನ್ನು ಕ್ಲಿಕ್ ಮಾಡಿ. |
04:16 | ಈಗ, Time cursor ಅನ್ನು 48ನೇ ಫ್ರೇಮ್ ಮೇಲೆ ಇರಿಸಿ. |
04:21 | Keyframes ಪೆನಲ್ ಗೆ ಹೋಗಿ Add a keyframe ಅನ್ನು ಕ್ಲಿಕ್ ಮಾಡಿ. |
04:27 | ಬಲೂನ್ಸ್ ಇಮೇಜ್ ಗಳನ್ನು ಕ್ಯಾನ್ವಾಸ್ ನ ಮಧ್ಯದಲ್ಲಿ ಎಡಭಾಗಕ್ಕೆ ಚಾಲಿಸಿ. |
04:31 | ಮತ್ತೆ, Time cursor ಅನ್ನು 60ನೇ ಫ್ರೇಮ್ ಮೇಲೆ ಇರಿಸಿ. |
04:36 | Keyframes ಪೆನೆಲ್ ಗೆ ಹೋಗಿ Add a keyframe ಅನ್ನು ಕ್ಲಿಕ್ ಮಾಡಿ. |
04:41 | Flowers (ಫ್ಲವರ್ಸ್) ಇಮೇಜ್ ಗಳನ್ನು ಕ್ಯಾನ್ವಾಸ್ ನ ಬಲಭಾಗದ ಕೇಳತುದಿಗೆ ತನ್ನಿ. |
04:47 | ಮುಂದೆ, ಈ ಅನಿಮೇಷನ್ನೊಂದಿಗೆ ನಾವು ಪಠ್ಯದ ಸಾಲನ್ನು ಸೇರಿಸುತ್ತೇವೆ. |
04:52 | ಅದಕ್ಕೂ ಮೊದಲು, ನಾನು ಅನಿಮೇಷನ್ ಅನ್ನು ಆಫ್ ಮಾಡುತ್ತೇನೆ. |
04:57 | ಅದನ್ನು ಮಾಡಲು Turn off animate editing mode ಐಕಾನ್ ಅನ್ನು ಕ್ಲಿಕ್ ಮಾಡಿ. |
05:02 | ನಾವು ಪಠ್ಯವನ್ನು ಸೇರಿಸೋಣ. ಡೀಫಾಲ್ಟ್ Fill colour ಬಿಳಿಯಾಗಿರುವುದರಿಂದ, ಪಠ್ಯವು ಬಿಳಿ ಹಿನ್ನೆಲೆಯಲ್ಲಿ ಗೋಚರಿಸುವುದಿಲ್ಲ. |
05:12 | ಆದ್ದರಿಂದ, ನಾನು ಈ ಬಣ್ಣವನ್ನು ಕಪ್ಪು ಬಣ್ಣಕ್ಕೆ ಬದಲಾಯಿಸುತ್ತೇನೆ. |
05:16 | ಈಗ ಟೂಲ್ ಬೊಕ್ಸ್ ಗೆ ಹೋಗಿ Text Tool ಮೇಲೆ ಕ್ಲಿಕ್ ಮಾಡಿ. |
05:20 | ನಂತರ ಕ್ಯಾನ್ವಾಸ್ ಸ ಮೇಲೆ ಎಲ್ಲಾದರೂ ಕ್ಲಿಕ್ ಮಾಡಿ. ನಾವು Input text ಡೈಲಾಗ್ ಬೊಕ್ಸ್ ಅನ್ನು ಪಡೆಯುತ್ತೇವೆ. |
05:27 | ಇಲ್ಲಿ ನಾವು, “Happy Birthday” ಎಂಬ ಟೆಕ್ಸ್ಟ್ ಅನ್ನು ಬರೆಯುತ್ತೇವೆ. |
05:32 | Ok ಮೇಲೆ ಕ್ಲಿಕ್ ಮಾಡಿ. |
05:36 | ಗಮನಿಸಿ, ನಾವು ಕ್ಯಾನ್ವಾಸ್ ನ ಮೇಲೆ ಟೆಕ್ಸ್ಟ್ ಅನ್ನು ಕಾಣುತ್ತೇವೆ. |
05:40 | ಈಗ, Layers ಪೆನಲ್ ಗೆ ಹೋಗಿ text layer ಅನ್ನು ಆರಿಸಿ. |
05:45 | ನಂತರ Parameters ಪೆನಲ್ ಗೆ ಹೋಗಿ Size ಅನ್ನು ಸೆಲೆಕ್ಟ್ ಮಾಡಿ. |
05:51 | ಅದರ ಮೌಲ್ಯವನ್ನು 80 ಪಿಕ್ಸೆಲ್ಗಳಿಗೆ ಬದಲಾಯಿಸಿ ಮತ್ತು ನಂತರ colour ಮೌಲ್ಯವನ್ನು ನೇರಳೆ ಬಣ್ಣಕ್ಕೆ ಬದಲಾಯಿಸಿ. |
05:57 | Toolbox ಗೆ ಹೋಗಿ ಮತ್ತು Text Tool ಮೇಲೆ ಕ್ಲಿಕ್ ಮಾಡಿ. ಮತ್ತೊಮ್ಮೆ ಕ್ಯಾನ್ವಾಸ್ ನ ಮೇಲೆ ಕ್ಲಿಕ್ ಮಾಡಿ. |
06:04 | ನಾವು ಮತ್ತೊಂದು Input text ಡೈಲಾಗ್ ಬೊಕ್ಸ್ ಅನ್ನು ಪಡೆಯುತ್ತೇವೆ. |
06:09 | ಈ ಟೆಕ್ಸ್ಟ್ ಬೊಕ್ಸ್ ನಲ್ಲಿ “Have a wonderful, happy, healthy birthday now and forever” ಎಂದು ಟೈಪ್ ಮಾಡಿ. |
06:21 | ನಂತರ Ok ಯನ್ನು ಒತ್ತಿ. ನಾವು ಕ್ಯಾನ್ವಾಸ್ ನ ಮೇಲೆ ಈ ಟೆಕ್ಸ್ಟ್ ಅನ್ನು ಕೂಡಾ ನೋಡುತ್ತೆವೆ. |
06:27 | Parameters ಪೆನಲ್ ಗೆ ಹೋಗಿ Size ಅನ್ನು ಕ್ಲಿಕ್ ಮಾಡಿ. |
06:32 | ಅದರ ಮೌಲ್ಯವನ್ನು 30ಪಿಕ್ಸೆಲ್ ಗಳಿಗೆ ಮತ್ತು colour ಅನ್ನು ಕಪ್ಪು ಬಣ್ಣಕ್ಕೆ ಪರಿವರ್ತಿಸಿ . |
06:38 | ಈಗ ನಾವು Layers ಪೆನಲ್ ಗೆ ಹೋಗೋಣ. |
06:41 | ಮೊದಲನೆಯ text layer ಮೇಲೆ ಕ್ಲಿಕ್ ಮಾಡಿ ಮತ್ತು ಲೇಯರ್ ನ ಹೆಸರನ್ನು Happy Birthday ಎಂದು ಬದಲಿಸಿ. |
06:48 | ಅಂತೆಯೇ, text layer ಮೇಲೆ ಕ್ಲಿಕ್ ಮಾಡಿ ಮತ್ತು layer ನೇಮ್ ಅನ್ನು Now and Forever.ಎಂದು ಪರಿವರ್ತಿಸಿ. |
06:56 | ಲೇಯರ್ ಗಳನ್ನು ಸೂಕ್ತವಾಗಿ ಹೆಸರಿಸುವುದು ಒಳ್ಳೆಯ ಅಭ್ಯಾಸ. |
07:01 | ಭವಿಷ್ಯದಲ್ಲಿ ಅವುಗಳನ್ನು ಸುಲಭವಾಗಿ ಪತ್ತೆ ಮಾಡಲು ಇದು ನಮಗೆ ಸಹಾಯ ಮಾಡುತ್ತದೆ. |
07:06 | ಈಗ, ಇಲ್ಲಿ ಪ್ರದರ್ಶಿಸಿದಂತೆ ಟೆಕ್ಸ್ಟ್ ಲೇಯರ್ ಗಳನ್ನು ಕ್ಯಾನ್ವಾಸ್ನ ಹೊರಗೆ ಸರಿಸಿ. |
07:13 | Turn on animate editing mode ಮೇಲೆ ಕ್ಲಿಕ್ ಮಾಡಿ. |
07:18 | ನಂತರ, Layers ಪೆನಲ್ ಗೆ ಹೋಗಿ, Happy Birthday ಲೇಯರ್ ಅನ್ನು ಆರಿಸಿ. |
07:24 | ಈಗ Time cursor ಅನ್ನು 72ನೇ ಫ್ರೇಮ್ ಮೇಲೆ ಇರಿಸಿ. |
07:29 | Keyframes ಪೆನಲ್ ಗೆ ಹೋಗಿ ಮತ್ತು Add a keyframe ಮೇಲೆ ಕ್ಲಿಕ್ ಮಾಡಿ. ಇಲ್ಲಿ ತೋರಿಸಿರುವಂತೆ ಟೆಕ್ಸ್ಟ್ ಅನ್ನು ಚಾಲಿಸಿ. . |
07:37 | ನಂತರ Layers ಪೆನಲ್ ಗೆ ಹೋಗಿ Now and forever ಲೇಯರ್ ಅನ್ನು ಸೆಲೆಕ್ಟ್ ಮಾಡಿ. |
07:44 | Time cursor ಅನ್ನು 90ನೇ ಫ್ರೇಮ್ ಮೇಲೆ ಇರಿಸಿ. |
07:48 | Keyframes ಪೆನಲ್ ಗೆ ಹೋಗಿ ಮತ್ತೊಮ್ಮೆ Add a keyframe ಅನ್ನು ಕ್ಲಿಕ್ ಮಾಡಿ. |
07:55 | ಈಗ, canvas ಗೆ ಹೋಗಿ ಮತ್ತು ಇಲ್ಲಿ ತೋರಿಸಿರುವಂತೆ Now and forever ಟೆಕ್ಸ್ಟ್ ಅನ್ನು ಚಾಲಿಸಿ. |
08:02 | ಈಗ ನಮ್ಮ Synfig ಫೈಲ್ ಅನ್ನು ಸೇವ್ ಮಾಡಿ. |
08:05 | File ಗೆ ಹೋಗಿ ಮತ್ತು Save ಅನ್ನು ಕ್ಲಿಕ್ ಮಾಡಿ. |
08:09 | ಈಗ ನಾವು ಪ್ರೀವ್ಯೂ ವನ್ನು ಪರೀಕ್ಷಿಸೋಣ. File ಗೆ ಹೋಗಿ Preview ವನ್ನು ಕ್ಲಿಕ್ ಮಾಡಿ. |
08:15 | quality ಯನ್ನು 0.5 ಎಂದೂ, FPS ಅನ್ನು 24 ಎಂದೂ ಕೊಡಿ. |
08:24 | Preview ಬಟನ್ ಮೇಲೆ ಕ್ಲಿಕ್ ಮಾಡಿ ನಂತರ Play ಬಟನ್ ಕ್ಲಿಕ್ ಮಾಡಿ. |
08:29 | ನಾವು ಎನಿಮೇಶನ್ ನ ಪ್ರೀವ್ಯೂ ವನ್ನು ಸ್ಕ್ರೀನ್ ಮೇಲೆ ನೋಡುತ್ತಿದ್ದೇವೆ. |
08:33 | Preview ವಿಂಡೋ ವನ್ನು ಕ್ಲೋಸ್ ಮಾಡಿ. |
08:35 | ಕೊನೆಯದಾಗಿ ಎನಿಮೇಶನ್ ಅನ್ನು ರೆಂಡರ್ ಮಾಡೋಣ. |
08:38 | ಅದನ್ನು ಮಾಡಲು File ಮೇಲೆ ಮತ್ತು Render ಮೇಲೆ ಕ್ಲಿಕ್ ಮಾಡಿ. |
08:43 | Render setting ವಿಂಡೋ ಗೆ ಹೋಗಿ. |
08:46 | Choose ಅನ್ನು ಕ್ಲಿಕ್ ಮಾಡಿ Save render as ವಿಂಡೋ ತೆರೆಯಿರಿ. |
08:50 | Document ಮೇಲೆ ಕ್ಲಿಕ್ ಮಾಡಿ. E-card-animation folder ಮೇಲೆ ಕ್ಲಿಕ್ ಮಾಡಿ. |
08:55 | ಹೆಸರನ್ನು E-card-animation.avi ಎಂದು ಬದಲಿಸಿ. |
09:00 | Target ಡ್ರೊಪ್ ಡೌನ್ ಮೆನ್ಯೂ ಮೇಲೆ ಕ್ಲಿಕ್ ಮಾಡಿ. extension ಅನ್ನು ffmpeg ಎಂದು ಆರಿಸಿ. |
09:06 | Time ಟ್ಯಾಬ್ ಮೇಲೆ ಕ್ಲಿಕ್ ಮಾಡಿ, End timeಅನ್ನು 110 ಕ್ಕೆ ಬದಲಿಸಿ. ನಂತರ Render ಮೇಲೆ ಕ್ಲಿಕ್ ಮಾಡಿ. |
09:20 | ನಮ್ಮ ಎನಿಮೇಶನ್ ಅನ್ನು ಪರೀಕ್ಷಿಸೋಣ. Documents ಗೆ ಹೋಗಿ. |
09:24 | E- card-animation ಫೋಲ್ಡರ್ ಮೇಲೆ ಡಬಲ್ ಕ್ಲಿಕ್ ಮಾಡಿ. |
09:26 | E- card-animation.avi ಅನ್ನು ಆರಿಸಿ. |
09:30 | ರೈಟ್ ಕ್ಲಿಕ್ ಮಾಡಿ ಎನಿಮೇಶನ್ ಅನ್ನು Firefox ವೆಬ್ ಬ್ರೌಸರ್ ಉಪಯೋಗಿಸಿಸ್ ಪ್ಲೇಮಾಡಿ. |
09:39 | ಇದರೊಂದಿಗೆ ನಾವು ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
09:44 | ಸಂಕ್ಷಿಪ್ತವಾಗಿ – ಈ ಟ್ಯುಟೋರಿಯಲ್ ನಲ್ಲಿ ನಾವು ಒಂದು E-card ಎನಿಮೇಶನ್ ಮಾಡಲು ಕಲಿತೆವು. |
09:50 | ನಾವು ಇಮೇಜಸ್ ಗಳನ್ನು ಇಂಪೋರ್ಟ್ ಮಾಡಲು, |
09:54 | ಇಮೇಜಸ್ ಗಳನ್ನು ಎನಿಮೇಟ್ ಮಾಡಲು, ಟೆಕ್ಸ್ಟ್ ಎನಿಮೇಶನ್ ಮಾಡಲು, |
09:57 | ಎನಿಮೇಶನ್ ಪ್ರೀವ್ಯೂ ನೋಡಲು ಮತ್ತು .avi ಫೊರ್ಮೇಟ್ ನಲ್ಲಿ ಎನಿಮೇಶನ್ ಅನ್ನು ರೆಂಡರ್ ಮಾಡಲು ಕಲಿತೆವು. |
10:04 | ನಿಮಗೊಂದು ಪಾಠನಿಯೋಜನೆಯಿದೆ. Code files ಲಿಂಕ್ ನಲ್ಲಿ ಕೊಟ್ಟಿರುವ Flower ಇಮೇಜ್ ಗೆ ಹೋಗಿ. |
10:11 | Flower ಇಮೇಜಸ್ ಗಳನ್ನು ಉಪಯೋಗಿಸಿ ಇಂತಹುದೇ ಎನಿಮೇಶನ್ ರಚಿಸಿ. |
10:16 | ಈ ವೀಡಿಯೊ 'ಸ್ಪೋಕನ್ ಟ್ಯುಟೋರಿಯಲ್' ಯೋಜನೆಯ ಸಾರಾಂಶವಾಗಿದೆ. ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ. |
10:23 | ನಾವು ಸ್ಪೋಕನ್ ಟ್ಯುಟೋರಿಯಲ್ಸ್ ಉಪಯೋಗಿಸಿ ಕಾರ್ಯಶಾಲೆಗಳನ್ನು ನಡೆಸುತ್ತೇವೆ. ಪ್ರಮಾಣಪತ್ರವನ್ನೂ ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
10:31 | ಸಮಯಾಧಾರಿತ ಪ್ರಶ್ನೆಗಳನ್ನು ಈ ಫೋರಮ್ ನಲ್ಲಿ ಪೋಸ್ಟ್ ಮಾಡಿ. |
10:35 | ಸ್ಪೋಕನ್ ಟ್ಯುಟೋರಿಯಲ್ ಯೋಜನೆಗೆ ಭಾರತ ಸರ್ಕಾರದ NMEICT, MHRD ಧನಸಹಾಯ ನೀಡುತ್ತಿದೆ.
|
10:42 | ಅನುವಾದ ಮತ್ತು ಧ್ವನಿ ಶ್ರೀ ನವೀನ ಭಟ್ಟ ಉಪ್ಪಿನಪಟ್ಟಣ. ಧನ್ಯವಾದಗಳು. |