Synfig/C2/Bouncing-ball-animation/Kannada
From Script | Spoken-Tutorial
Time | Narration |
00:01 | Synfig ಉಪಯೋಗಿಸಿ“Bouncing Ball animation” ಮಾಡುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ, ನಾವು Synfig ನ ಇಂಟರ್ಫೇಸ್ ಬಗ್ಗೆ ಕಲಿಯುತ್ತೇವೆ |
00:12 | ನಾವು ಮೂಲ ಆಕಾರಗಳನ್ನು ಸೆಳೆಯಲು ಮತ್ತು ಬಣ್ಣವನ್ನು ತುಂಬಲು ಕಲಿಯುತ್ತೇವೆ, |
00:16 | keyframes ಗಳನ್ನು ಮತ್ತು waypoints ಗಳನ್ನು ಯೋಜಿಸಲು, |
00:19 | squash effectಬಳಸಿ, ball animationಮಾಡಲು, |
00:22 | ಔಟ್ಪುಟ್ ಅನ್ನು gif ಫೊರ್ಮೇಟ್ ನಲ್ಲಿ ಕೊಡಲು ಕಲಿಯಲಿದ್ದೇವೆ. |
00:26 | ಈ ಟ್ಯುಟೋರಿಯಲ್ ಅನ್ನು ರೆಕೊರ್ಡ್ ಮಾಡಲು ನಾನು :
Ubuntu Linux 14.04 ಒಪರೇಟಿಂಗ್ ಸಿಸ್ಟಮ್, Synfig ವರ್ಶನ್ 1.0.2 ಗಳನ್ನು ಬಳಸುತ್ತಿದ್ದೇನೆ. |
00:37 | ಡ್ಯಾಶ್ ಬೋರ್ಡ್ ಗೆ ಹೋಗಿ Synfig ಎಂದು ಟೈಪ್ ಮಾಡಿ. |
00:40 | ನೀವು ಲೋಗೊದ ಮೇಲೆ ಕ್ಲಿಕ್ ಮಾಡುವದರ ಮೂಲಕವೂ Synfig ಅನ್ನು ಓಪನ್ ಮಾಡಬಹುದು. |
00:44 | ಇದು Synfig ನ ಇಂಟರ್ಫೇಸ್ ಆಗಿದೆ. |
00:46 | Menu bar ಮೇಲ್ಭಾಗದಲ್ಲಿ ಇದೆ . |
00:50 | ಸ್ಟ್ಯಾಂಡರ್ಡ್ ಟೂಲ್-ಬಾರ್ ಮೆನ್ಯೂ-ಬಾರ್ ನ ಕೆಳಭಾಗದಲ್ಲಿದೆ. ಇಲ್ಲಿ ನಾವು ಕೆಲವು ಶೊರ್ಟ್-ಕಟ್ ಮತ್ತು ಹ್ಯಾಂಡಲ್ಸ್ ಒಪ್ಶನ್-ಗಳನ್ನು ನೋಡುತ್ತೇವೆ. |
00:58 | ಇದು ಅಡ್ಡ ಮತ್ತು ಲಂಬವಾದ ರೂಲರ್ಸ್ ಗಳನ್ನು ಅನುಸರಿಸುತ್ತಿದೆ. |
01:02 | ಟೂಲ್ ಬೊಕ್ಸ್ ಇದು ಇಂಟರ್ಫೇಸ್ ನ ಎಡಭಾಗದಲ್ಲಿ ಇದೆ. |
01:06 | ಟೂಲ್ ಬೊಕ್ಸ್ ನ ಕೆಳಗೆ ಮೂರು ಬೊಕ್ಸ್ ಗಳಿರುವದನ್ನು ಗಮನಿಸಿ. |
01:10 | ಮೇಲಿನ ಬೊಕ್ಸ್ ಕಪ್ಪು ಬಣ್ಣದ್ದಾಗಿದೆ. ಟೂಲ್ ಟಿಪ್, ಇದು Outline color ಎನ್ನುತ್ತಿದೆ. |
01:16 | ಕೆಳಗಿನ ಬೊಕ್ಸ್ ಬಿಳಿ ಬಣ್ಣದ್ದಾಗಿದೆ. ಮತ್ತು ಟೂಲ್ ಟಿಪ್, ಇದು Fill color ಎನ್ನುತ್ತಿದೆ. |
01:21 | ಮಧ್ಯದಲ್ಲಿ canvas ಇದೆ. ಇಲ್ಲಿ ನಾವು ಎನಿಮೇಶನ್ ಅನ್ನು ಮಾಡುತ್ತೇವೆ. |
01:27 | ಕ್ಯಾನ್ವಾಸ್ ನ Animation panel ಇದೆ. |
01:30 | ಇಲ್ಲಿ ನಾವು ಎನಿಮೆಶನ್ ಗೆ ಸಂಬಂಧಿಸಿದ ಬಟನ್ ಗಳನ್ನು ನೋಡುತ್ತೇವೆ. |
01:35 | ಇಂಟರ್ಫೆಸ್ ನ ಕೆಳಭಾಗದಲ್ಲಿ ಎಡಕ್ಕೆParameters panel ಇರುತ್ತದೆ. |
01:39 | ಕ್ಯಾನ್ವಾಸ್ ನ ಮೇಲೆ ನಾವು ಒಬ್ಜೆಕ್ಟ್ಗ್-ಗಳನ್ನು ರಚಿಸಿದಾಗ, ಪ್ಯಾರಾಮೀಟರ್ ಗಳು ಕಾಣಿಸುತ್ತವೆ. |
01:43 | ಇದರ ನಂತರ ಇರುವುದು Keyframes panel ಆಗಿದೆ. ಇಲ್ಲಿ ನಾವು keyframes ಗಳನ್ನು ಸಂಯೋಜಿಸುತ್ತೇವೆ. |
01:49 | ಈ ಪ್ಯಾನಲ್ ನ ಬಲಭಾಗದಲ್ಲಿ, ನಾವು Time track panel ಅನ್ನು ನೋಡುತ್ತೇವೆ. |
01:54 | ಇಲ್ಲಿ ನಾವು, ಎನಿಮೇಶನ್ ನ, ವೇಪೊಇಂಟ್ ಗಳು ಮತ್ತು ಕೀ ಫ್ರೇಮ್ ನ ಕುರುಹುಗಳನ್ನು ನೋಡುತ್ತೇವೆ. |
02:01 | ನಾವು ಕ್ಯಾನ್ವಾಸ್ ನ ಮೇಲೆ ಎನಿಮೇಶನ್ ಅನ್ನು ರಚಿಸಿದಾಗ, ವೇ ಪೊಇಂಟ್ ಗಳು ಕಾಣಸಿಗುತ್ತವೆ. |
02:05 | ಇಂಟರ್ಫೇಸ್ ನ ಕೆಳಭಾಗದಲ್ಲಿ ಬಲಕ್ಕೆ, Layers panel ಇದೆ. |
02:10 | ಲೇಯರ್ಸ್ ಪೆನಲ್ ನ ಮೇಲ್ಭಾಗದಲ್ಲಿ ನಾವು Tool options panel ಅನ್ನು ನೋಡುತ್ತೇವೆ. |
02:14 | ಮತ್ತು ಈ ಪೆನಲ್ ನ ಮೇಲ್ಭಾಗದಲ್ಲಿ ನೀವು Canvas browser(ಕ್ಯಾನ್ವಾಸ್ ಬ್ರೌಸರ್), |
02:19 | Palette editor(ಪೆಲೇಟ್ ಎಡಿಟರ್), |
02:21 | Navigator (ನೆವಿಗೇಟರ್) ಮತ್ತು Info panels(ಇನ್ಫೊ ಪ್ಯಾನಲ್) ಗಳನ್ನು ಕಾಣುತ್ತೀರಿ. |
02:24 | ನಾವು ಮುಂದೆ ಹೋದಂತೆ ಇವುಗಳನ್ನೆಲ್ಲ ಬಳಸುವುದಕ್ಕೆ ಒಗ್ಗಿಕೊಳ್ಳಬಹುದು. |
02:28 | ಈಗ, ನಮ್ಮ ಮೊದಲ 'ಎನಿಮೇಷನ್' ನೊಂದಿಗೆ ಪ್ರಾರಂಭಿಸೋಣ. |
02:31 | ಮೊದಲಿಗೆ, ನಾವು ಹಿನ್ನೆಲೆಯನ್ನು ರಚಿಸುತ್ತೇವೆ. |
02:34 | Tool box ಗೆ ಹೋಗಿ Rectangle tool ಅನ್ನು ಕ್ಲಿಕ್ ಮಾಡಿ. |
02:37 | Tool options panel ನಲ್ಲಿ ಬದಲಾವಣೆಯನ್ನು ಗಮನಿಸಿ. |
02:41 | Layer Type ನ ಕೆಳಗೆ ನಾವು ಬಹಳ ಐಕಾನ್ ಗಳನ್ನು ಕಾಣಬಹುದು. |
02:44 | Create a region layer ಐಕಾನ್ ಅನ್ನು ಆಯ್ದುಕೊಳ್ಳಿ. ಈ ಡೆಮೊಗಾಗಿ, ನಾವು ಇತರ ಸೆಟ್ಟಿಂಗ್‌ಗಳನ್ನು ಹಾಗೆಯೇ ಬಿಡುತ್ತೇವೆ. |
02:51 | ಈಗ ಪ್ರದರ್ಶಿಸಿದಂತೆ ಕ್ಯಾನ್ವಾಸ್‌ನ 3/4 ನೇ ಭಾಗವನ್ನು ಹೊಂದಿರುವ ಆಯತವನ್ನು ಎಳೆಯಿರಿ. |
02:57 | ಡೀಫಾಲ್ಟ್ ಫಿಲ್ ಕಲರ್ ಬಿಳಿಯಾಗಿರುವುದನ್ನು ದಯವಿಟ್ಟು ಗಮನಿಸಿ, ಅದರಿಂದ ನಾವು ಕ್ಯಾನ್ವಾಸ್ ಹೊರಗೆ ಸೆಳೆಯುತ್ತಿದ್ದರೆ, ವಸ್ತುವನ್ನು ಗುರುತಿಸುವುದು ಕಷ್ಟವಾಗುತ್ತದೆ. |
03:07 | ಲೇಯರ್ ಪ್ಯಾನೆಲ್‌ನಲ್ಲಿ ಲೇಯರ್ ಅನ್ನು ರಚಿಸಲಾಗಿದೆ ಎಂಬುದನ್ನು ಗಮನಿಸಿ. |
03:11 | Synfig ಇದಕ್ಕೊಂದು ಡೀಫೊಲ್ಟ್ ನೇಮ್ ಅನ್ನು ಕೊಡುತ್ತದೆ. ಇಲ್ಲಿ ಅದು “Rectangle060Region”. |
03:18 | ಲೇಯರ್‌ಗಳಿಗೆ ಅರ್ಥಪೂರ್ಣ ಹೆಸರುಗಳನ್ನು ನೀಡುವುದು ಯಾವಾಗಲೂ ಉತ್ತಮ ಅಭ್ಯಾಸ. |
03:21 | ಲೇಯರ್-ಗಳ ಉದ್ದದ ಪಟ್ಟಿಯಿಂದ ನಿರ್ದಿಷ್ಟ ವಸ್ತುವನ್ನು ಕಂಡುಹಿಡಿಯಲು ಇದು ನಮಗೆ ಸಹಾಯ ಮಾಡುತ್ತದೆ. |
03:28 | ನಾವು ಸಂಕೀರ್ಣವಾದ ಎನಿಮೇಷನ್ಗಳನ್ನು ರಚಿಸಿದಾಗ ನೀವು ಇದನ್ನು ಹೆಚ್ಚು ಪ್ರಶಂಸಿಸುತ್ತೀರಿ. |
03:32 | Synfig ಇಂಟರ್ಫೇಸ್ ಗೆ ಬನ್ನಿ. |
03:35 | ನಾನು ಈ ಡೀಫೊಳ್ಟ್ ಲೇಯರ್ ನ ಹೆಸರನ್ನು Sky ಎನ್ನುತ್ತೇನೆ. |
03:39 | name ನ ಮೇಲೆ ಕ್ಲಿಕ್ ಮಾಡಿ, Sky ಎಂದು ಟೈಪ್ ಮಾಡಿ Enter ಅನ್ನು ಒತ್ತಿರಿ. |
03:43 | ಈಗ ಲೆಯರ್ ನೇಮ್ sky ಎಂದಾಗಿದೆ. |
03:46 | ಕರ್ಸರ್ ಬಹಳ ಸೂಕ್ಷ್ಮವಾಗಿರುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಆದ್ದರಿಂದ, ಹಿಂದಿನ ಕ್ರಿಯೆಯ ನಕಲು ಮಾಡುವುದನ್ನು ತಡೆಯಲು ಯಾದೃಚ್ಛಿಕವಾಗಿ ಕ್ಲಿಕ್ ಮಾಡುವುದನ್ನು ತಪ್ಪಿಸಿ. |
03:55 | ಆಯತದ ಪ್ಯಾರಾಮೀಟರ್ ಗಳನ್ನು ಪ್ಯಾರಾಮೀಟರ್ ಪೆನಲ್ ರಚಿಸಲಾಗಿದೆ. |
04:00 | ಕಲರ್ ಪೆರಾಮೀಟರ್ ಅನ್ನು ಪತ್ತೆ ಮಾಡಿ ಮತ್ತು ವೆಲ್ಯೂ ಕಾಲಮ್ ಮೇಲೆ ಡಬಲ್ ಕ್ಲಿಕ್ ಮಾಡಿ. ತಕ್ಷಣ, ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
04:08 | 'RGB ಸ್ಕ್ರೋಲರ್‌ಗಳನ್ನು 'ಎಳೆಯುವ ಮೂಲಕ ಬಣ್ಣವನ್ನು ನೀಲಿ ಬಣ್ಣಕ್ಕೆ ಬದಲಾಯಿಸಿ. |
04:13 | ಈಗ ಡೈಲಾಗ್ ಬೊಕ್ಸ್ ಅನ್ನು ಮುಚ್ಚಿರಿ. |
04:15 | ನಂತರ Transform tool ಅನ್ನು ಕ್ಲಿಕ್ ಮಾಡಿ. |
04:19 | ನಂತರ sky ಲೇಯರ್ ಆಯ್ಕೆ ರದ್ದುಮಾಡಲು ಕ್ಯಾನ್ವಾಸ್ ನ ಹೊರಗೆ ಕ್ಲಿಕ್ ಮಾಡಿ. |
04:24 | ಈಗ ಮತ್ತೆ Rectangle tool ಅನ್ನು ಆಯ್ಕೆ ಮಾಡಿಕೊಳ್ಳಿ. |
04:26 | ಕ್ಯಾನ್ವಾಸ್‌ನ ಕೆಳಗಿನ ಭಾಗದಲ್ಲಿ ಮತ್ತೊಂದು ಆಯತವನ್ನು ರಚಿಸಿ. |
04:31 | ಮೊದಲೇ ತೋರಿಸಿರುವಂತೆ ಲೇಯರ್ ಹೆಸರನ್ನು Ground ಮತ್ತು ಬಣ್ಣವನ್ನು ಹಸಿರು ಬಣ್ಣಕ್ಕೆ ಬದಲಾಯಿಸಿ. |
04:40 | 'ಟ್ರಾನ್ಸ್‌ಫಾರ್ಮ್ ಟೂಲ್' ಅನ್ನು ಆಯ್ಕೆಮಾಡಿ ಮತ್ತು ಲೇಯರ್ ನ ಆಯ್ಕೆಯನ್ನು ರದ್ದುಮಾಡಲು ಕ್ಯಾನ್ವಾಸ್ ನ ಹೊರಗೆ ಕ್ಲಿಕ್ ಮಾಡಿ. |
04:46 | ನಂತರ ಚೆಂಡನ್ನು ಬಿಡಿಸೋಣ. ಟೂಲ್‌ಬಾಕ್ಸ್-ನಲ್ಲಿ, ಸರ್ಕಲ್ ಟೂಲ್ ಅನ್ನು ಕ್ಲಿಕ್ ಮಾಡಿ. |
04:52 | Layer Typeನ ಅಡಿಯಲ್ಲಿ, Create a region layer ಇದು ಆಯ್ಕೆಯಾಗಿರಬೇಕು. |
04:57 | ಕ್ಯಾನ್ವಾಸ್ ನ ಮೇಲ್ಭಾಗವನ್ನು ಕ್ಲಿಕ್ ಮಾಡಿ ಮತ್ತು ವೃತ್ತವನ್ನು ಎಳೆಯಿರಿ. |
05:01 | Layers panel ನಲ್ಲಿ, ಮೊದಲು ತೋರಿಸಿದಂತೆ ಲೇಯರ್ ಅನ್ನುBall ಎಂದು ರೀನೇಮ್ ಮಾಡಿ. |
05:07 | ಬಣ್ಣವನ್ನು ಕೆಂಪು ಬಣ್ಣಕ್ಕೆ ಬದಲಾಯಿಸಿ. |
05:11 | ಈಗ ನಾವು ಚೆಂಡನ್ನು ಅನಿಮೇಟ್ ಮಾಡಲು ಪ್ರಾರಂಭಿಸೋಣ. ಟ್ರಾನ್ಸ್ಫೊರ್ಮ್ ಟೂಲ್ ಅನ್ನು ಆಯ್ಕೆಮಾಡಿ. |
05:16 | ಎನಿಮೇಶನ್ ಪ್ಯಾನಲ್ ನಲ್ಲಿ , Turn on animate editing mode ಐಕಾನ್ ಅನ್ನು ಕ್ಲಿಕ್ ಮಾಡಿ. |
05:22 | ಸ್ಕ್ರೀನ್ ನ ಮೇಲೆ ಗೋಚರಿಸುವ ಕೆಂಪು ಆಯತ ಗಡಿ, ನಾವು ಆನಿಮೇಷನ್ ಮೋಡ್‌ನಲ್ಲಿದ್ದೇವೆ ಎಂದು ಸೂಚಿಸುತ್ತದೆ. |
05:29 | current frame ಬೊಕ್ಸ್ ನಲ್ಲ್ಲಿ 9 ಎಂದು ಕೊಟ್ಟು Enter ಒತ್ತಿರಿ. |
05:34 | ನಂತರ Keyframes ಪ್ಯಾನಲ್ ಮೇಲೆ ಕ್ಲಿಕ್ ಮಾಡಿ. |
05:36 | ಇಲ್ಲಿ, ಹೊಸ ಕೀಫ್ರೇಮ್ ಸೇರಿಸಲು ಹಸಿರು ಪ್ಲಸ್ ಚಿಹ್ನೆ ಐಕಾನ್ ಕ್ಲಿಕ್ ಮಾಡಿ. |
05:41 | ಕ್ಯಾನ್ವಾಸ್‌ನಲ್ಲಿ ಚೆಂಡನ್ನು ಆಯ್ಕೆಮಾಡಿ. |
05:44 | ಚೆಂಡಿನ ಮಧ್ಯದಲ್ಲಿ ಹಸಿರು ಚುಕ್ಕೆಯನ್ನು ಗಮನಿಸಿ. |
05:47 | ಚೆಂಡನ್ನು ಕ್ಯಾನ್ವಾಸ್‌ನ ಕೆಳಭಾಗಕ್ಕೆ ಸರಿಸಲು ಈ ಹಸಿರು ಚುಕ್ಕೆ ಎಳೆಯಿರಿ. |
05:52 | ಪ್ರದರ್ಶಿಸಿದಂತೆ ಚೆಂಡನ್ನು ನೆಲದ ಮೇಲೆ ಸ್ವಲ್ಪ ಮೇಲಕ್ಕೆ ಸರಿಸಿ. |
05:55 | ಎಳೆಯುವಾಗ ನೇರ ಹಾದಿಯಲ್ಲಿ ಸಾಗಲು ಶಿಫ್ಟ್ ಕೀಯನ್ನು ಬಳಸಿ. |
05:59 | ಟೈಮ್ ಟ್ರ್ಯಾಕ್ ಪ್ಯಾನೆಲ್‌ನಲ್ಲಿ ವೇ ಪಾಯಿಂಟ್‌ಗಳನ್ನು ರಚಿಸಲಾಗಿದೆ ಎಂಬುದನ್ನು ಗಮನಿಸಿ. |
06:04 | ನಾವು 11 ನೇ ಫ್ರೇಮ್‌ಗೆ ಹೋಗೋಣ. ಮತ್ತೊಮ್ಮೆ, ಮೊದಲೇ ತೋರಿಸಿರುವಂತೆ ಹೊಸ ಕೀಫ್ರೇಮ್ ಅನ್ನು ಸೇರಿಸಿ. |
06:12 | ಚೆಂಡನ್ನು ನೆಲಕ್ಕೆ ಮುಟ್ಟುವಂತೆ ಸ್ವಲ್ಪ ಕೆಳಗೆ ಸರಿಸಿ. |
06:16 | ಚೆಂಡಿನ ಸುತ್ತಲೂ ಕಿತ್ತಳೆ ಮತ್ತು ಹಳದಿ ಚುಕ್ಕೆಗಳನ್ನು ಗಮನಿಸಿ. ಇವುಗಳನ್ನು handles'ಎಂದು ಕರೆಯಲಾಗುತ್ತದೆ. |
06:22 | ಪ್ರದರ್ಶಿಸಿದಂತೆ ಚೆಂಡನ್ನು ರೀಸೈಜ಼ ಮಾಡಿ, ಸ್ಕ್ವ್ಯಾಷ್ ಮಾಡಿದ ಪರಿಣಾಮವನ್ನು ನೀಡಲು 'ಹ್ಯಾಂಡಲ್ಸ್' ನಲ್ಲಿರುವ ಕಿತ್ತಳೆ ಚುಕ್ಕೆಗಳನ್ನು ಬಳಸಿ. |
06:31 | Time ಕರ್ಸರ್ ಅನ್ನು 13ನೇ ಫ್ರೇಮ್ ಗೆ ಚಾಲಿಸಿ. |
06:36 | ಕೀಫ್ರೇಮ್ ಪೆನಲ್ ನಲ್ಲಿ 9 ನೇ ಫ್ರೇಮ್ ಆಯ್ಕೆಮಾಡಿ. |
06:39 | ಕೆಳಭಾಗದಲ್ಲಿರುವ Duplicate ಐಕಾನ್ ಅನ್ನು ಕ್ಲಿಕ್ ಮಾಡಿ. |
06:43 | ಟೈಮ್ ಕರ್ಸರ್ ಅನ್ನು 24 ನೇ ಫ್ರೇಮ್‌ಗೆ ಸರಿಸಿ. |
06:46 | ಕೀಫ್ರೇಮ್ಸ್ ಪೆನಲ್ ನಲ್ಲಿ ಸೊನ್ನೆಯ ಫ್ರೇಮ್ ಅನ್ನು ಆಯ್ಕೆ ಮಾಡಿ . |
06:50 | ಮತ್ತೆ, ಕೆಳಭಾಗದಲ್ಲಿರುವ Duplicate ಐಕಾನ್ ಅನ್ನು ಕ್ಲಿಕ್ ಮಾಡಿ. |
06:53 | ಸೊನ್ನೆ ಫ್ರೇಮ್‌ಗೆ ಹೋಗಿ. ಚೆಂಡನ್ನು ಆಯ್ಕೆ ಮಾಡಲು ಕ್ಯಾನ್ವಾಸ್ ನ ಹೊರಗೆ ಕ್ಲಿಕ್ ಮಾಡಿ. |
06:59 | ನಾವು ರಚಿಸಿದ 'ಅನಿಮೇಷನ್' 'ಅನ್ನು ನೋಡಲು Play ಬಟನ್ ಕ್ಲಿಕ್ ಮಾಡಿ. |
07:04 | ಈಗ Pause ಬಟನ್ ಮೇಲೆ ಕ್ಲಿಕ್ ಮಾಡಿ. |
07:07 | ಕೊನೆಯದಾಗಿ ಫೈಲ್ ಅನ್ನು save ಮಾಡೋಣ. |
07:09 | File ಗೆ ಹೋಗಿ Save ಮೇಲೆ ಕ್ಲಿಕ್ ಮಾಡಿ. ನಾನು ಡೆಸ್ಕ್-ಟೊಪ್ ನಲ್ಲಿ ಸೇವ್ ಮಾಡುತ್ತೇನೆ. |
07:14 | Synfig ಇಲ್ಲಿ ತೋರಿಸಿರುವಂತೆ ಫೈಲ್ ಗೆ ಡೀಫೊಲ್ಟ್ ನೇಮ್ ಅನ್ನು ಕೊಡುತ್ತದೆ. |
07:18 | ನಾನು ಇದನ್ನು Bouncing-ball ಎಂದು ಬದಲಾಯಿಸುತ್ತೇನೆ. |
07:22 | ಗಮನಿಸಿ Synfig ಗೆ dot sifz, dot sif, dot sfg ಎಕ್ಸ್ಟೆನ್ಶನ್ ಗಳು ಲಭ್ಯವಿವೆ. |
07:31 | ನಾನು dot sifz ಫೊರ್ಮ್ಯಾಟ್ ಅನ್ನು ಆರಿಸಿಕೊಳ್ಳುತ್ತೇನೆ. |
07:34 | Save ಅನ್ನು ಕ್ಲಿಕ್ ಮಾಡಿ. ಈಗ ಎನಿಮೆಶನ್ ಅನ್ನು ರೆಂಡರ್ ಮಾಡೋಣ. |
07:39 | File ಗೆ ಹೋಗಿ Render ಅನ್ನು ಕ್ಲಿಕ್ ಮಾಡೋಣ. |
07:42 | Render settings ಡೈಲಾಗ್ ಬೊಕ್ಸ್ ತೆರೆದುಕೊಳ್ಳುತ್ತದೆ. |
07:45 | ನಿಮ್ಮ ಆದ್ಯತೆಗೆ ಅನುಗುಣವಾಗಿ .gif ಎಕ್ಸ್ಟೆನ್ಶನ್ ಹೊಂದಿರುವ ಸೂಕ್ತವಾದ ಫೈಲ್ ನೇಮ್ ನೀಡಿ. |
07:50 | ಸೇವ್ ಮಾಡುವ ಸ್ಥಾನದ ಆಯ್ಕೆಗಾಗಿ Choose ಬಟನ್ ಅನ್ನು ಆರಿಸಿಕೊಳ್ಳಿ. |
07:54 | ನಾನು Desktop ಅನ್ನು ಆರಿಸಿಕೊಂಡು OK ಒತ್ತುತ್ತೇನೆ. |
07:57 | Target ಡ್ರೊಪ್-ಡೌನ್ ಮೆನ್ಯೂ ಮೇಲೆ ಕ್ಲಿಕ್ ಮಾಡಿ Magick++ ಅನ್ನು ಆರಿಸಿಕೊಳ್ಳಿ. |
08:03 | ಧನ ಚಿಹ್ನೆಯನ್ನು ಒತ್ತಿ Quality ಯನ್ನು ಗರಿಷ್ಠ ಪ್ರಮಾಣಕ್ಕೆ, ಅಂದರೆ 9ಕ್ಕೆ ಏರಿಸಿ. ಈ ಮೌಲ್ಯವು ಎಂದಿಗೂ 3 ಕ್ಕಿಂತ ಕಡಿಮೆಯಿರಬಾರದು. |
08:11 | Image ಸೆಟ್ಟಿಂಗ್ ಗಳನ್ನು ಹಾಗೇ ಇಡಿ. |
08:14 | Time ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. ಇಲ್ಲಿ frame rate ಇದು 24 fps ಆಗಿರಬೇಕು. |
08:20 | ಇದು ಎಳೆತಗಳಿಲ್ಲದೆ ಮೃದುವಾದ ಅನಿಮೇಷನ್ ಅನ್ನು ನೀಡುತ್ತದೆ. |
08:24 | End Time ಅನ್ನು 24ಕ್ಕೆ ಬದಲಾಯಿಸಿ, ಏಕೆಂದರೆ ನಮ್ಮ ಎನಿಮೇಶನ್ 24ನೇ ಸೆಕೆಂಡ್ ಗೆ ಕೊನೆಗೊಳ್ಳುತ್ತದೆ. Enter ಒತ್ತಿರಿ. |
08:31 | ಕೊನೆಯದಾಗಿ ಕೆಳಭಾಗದಲ್ಲಿರುವ Render ಬಟನ್ ಅನ್ನು ಒತ್ತಿರಿ. ಇದು ಔಟ್ಪುಟ್ ಅನ್ನು ನಿರೂಪಿಸಲು ಕೆಲವು ಸೆಕೆಂಡುಗಳನ್ನು ತೆಗೆದುಕೊಳ್ಳಬಹುದು. |
08:38 | ಈಗ, ಡೆಸ್ಕ್ಟಾಪ್ ಗೆ ಹೋಗೋಣ, ಅಲ್ಲಿ ನಾನು ನನ್ನ .gif ಫೈಲ್ ಅನ್ನು ಸೇವ್ ಮಾಡಿದ್ದೇನೆ. |
08:44 | ನಾವು ಫೈರ್‌ಫಾಕ್ಸ್ ಅಥವಾ ಯಾವುದೇ ವೆಬ್ ಬ್ರೌಸರ್ ಅನ್ನು ಬಳಸಿಕೊಂಡು ಅನಿಮೇಷನ್ ಅನ್ನು ಪ್ಲೇ ಮಾಡಬಹುದು. |
08:48 | ಈ ಅನಿಮೇಷನ್ ಅನ್ನು ಪ್ಲೇ ಮಾಡಲು ನಿಮಗೆ ಇಂಟರ್ನೆಟ್ ಸಂಪರ್ಕದ ಅಗತ್ಯವಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. |
08:54 | ಇದರೊಂದಿಗೆ, ನಾವು ಈ ಟ್ಯುಟೋರಿಯಲ್ ಕೊನೆಗೆ ಬಂದಿದ್ದೇವೆ. |
08:57 | ಸಾರಾಂಶವನ್ನು ನೋಡೋಣ. |
08:59 | ಈ ಟ್ಯುಟೋರಿಯಲ್ ನಲ್ಲಿ, ನಾವು Synfig ಇಂಟರ್ಫೇಸ್ ಬಗ್ಗೆ ಕಲಿತಿದ್ದೇವೆ. |
09:03 | ನಾವು ಮೂಲ ಆಕಾರಗಳನ್ನು ಬಿಡಿಸಲು ಮತ್ತು ಬಣ್ಣವನ್ನು ತುಂಬಲು ಕಲಿತಿದ್ದೇವೆ, |
09:07 | keyframes ಮತ್ತು waypoints ಗಳನ್ನು ಸಂಯೋಜಿಸಲು, |
09:10 | ಒಂದು ಸ್ಕ್ವೆಶ್ ಎಫ್ಫೆಕ್ಟ್ ನೊಂದಿಗೆ ಬೊಲ್ ಎನಿಮೇಶನ್ ಮಾಡಲು,. |
09:13 | ಔಟ್-ಪುಟ್ ಅನ್ನು gif ಫೊರ್ಮ್ಯಾಟ್ ನಲ್ಲಿ ಕೊಡಲು ಕಲಿತಿದ್ದೇವೆ |
09:16 | ನಿಮಗಾಗಿ ಒಂದು ಪಾಠನಿಯೋಜನೆ ಇಲ್ಲಿದೆ. ಓರೆಯಾದ ಹಾದಿಯಲ್ಲಿ ಬಾಲ್ ಆನಿಮೇಷನ್ ಅನ್ನು ರಚಿಸಿ. |
09:23 | ನಿಮ್ಮ ಪೂರ್ಣಗೊಂಡ ಪಾಠನಿಯೋಜನೆಯು ಈ ರೀತಿ ಇರಬೇಕು. |
09:27 | ಈ ವೀಡಿಯೊ 'ಸ್ಪೋಕನ್ ಟ್ಯುಟೋರಿಯಲ್' ಯೋಜನೆಯ ಸಾರಾಂಶವಾಗಿದೆ. ದಯವಿಟ್ಟು ಅದನ್ನು ಡೌನ್‌ಲೋಡ್ ಮಾಡಿ ಮತ್ತು ವೀಕ್ಷಿಸಿ. |
09:33 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡ, ಸ್ಪೋಕನ್ ಟ್ಯುಟೋರಿಯಲ್ ಬಳಸಿ ಕಾರ್ಯಾಗಾರಗಳನ್ನು ನಡೆಸುತ್ತದೆ, |
09:38 | ಆನ್‌ಲೈನ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
09:44 | ಈ ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ನೀವು ಪ್ರಶ್ನೆಗಳನ್ನು ಹೊಂದಿದ್ದೀರಾ? ದಯವಿಟ್ಟು ಈ ಸೈಟ್‌ಗೆ ಭೇಟಿ ನೀಡಿ. |
09:49 | ನೀವು ಪ್ರಶ್ನೆಯನ್ನು ಹೊಂದಿರುವ ನಿಮಿಷ ಮತ್ತು ಸೆಕೆಂಡ್ ಗಳನ್ನು ಆರಿಸಿ. |
09:52 | ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ. ನಮ್ಮ ತಂಡದ ಯಾರಾದರೂ ಅದಕ್ಕೆ ಉತ್ತರಿಸುತ್ತಾರೆ. |
09:58 | ಈ 'ಸ್ಪೋಕನ್ ಟ್ಯುಟೋರಿಯಲ್ ಫೋರಮ್ , ಟ್ಯುಟೋರಿಯಲ್ ನಲ್ಲಿನ ನಿರ್ದಿಷ್ಟ ಪ್ರಶ್ನೆಗಳಿಗಾಗಿ ಇರುತ್ತದೆ. |
10:02 | ದಯವಿಟ್ಟು ಅವುಗಳ ಮೇಲೆ ಸಂಬಂಧವಿಲ್ಲದ ಮತ್ತು ಸಾಮಾನ್ಯ ಪ್ರಶ್ನೆಗಳನ್ನು ಪೋಸ್ಟ್ ಮಾಡಬೇಡಿ. ಇದು ಗೊಂದಲವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. |
10:08 | ಕಡಿಮೆ ಗೊಂದಲದಿಂದ, ನಾವು ಈ ಚರ್ಚೆಯನ್ನು ಪಾಠ್ಯ ವಸ್ತುವಾಗಿ ಬಳಸಬಹುದು. |
10:13 | ಸ್ಪೋಕನ್ ಟ್ಯುಟೋರಿಯಲ್ ಯೋಜನೆಗೆ ಭಾರತ ಸರ್ಕಾರದ NMEICT, MHRD ಧನಸಹಾಯ ನೀಡುತ್ತದೆ.
ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಈ ಲಿಂಕ್‌ನಲ್ಲಿ ಲಭ್ಯವಿದೆ. |
10:23 | ಅನುವಾದ ಮತ್ತು ಧ್ವನಿ ಶ್ರೀ ನವೀನ ಭಟ್ಟ ಉಪ್ಪಿನಪಟ್ಟಣ. ಧನ್ಯವಾದಗಳು. |