Ruby/C3/while-and-until-Looping-Statements/Kannada

From Script | Spoken-Tutorial
Jump to: navigation, search
Time Narration
00:01 Ruby (ರೂಬಿ) ಯಲ್ಲಿ, while and until loops ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ, ನಾವು:
00:09 * 'while' (ವ್ಹೈಲ್) ಲೂಪ್
00:10 * 'until' (ಅಂಟಿಲ್) ಲೂಪ್
00:11 * 'redo' (ರೀ-ಡು) ಮತ್ತು
00:12 * 'break' (ಬ್ರೆಕ್), ಇವುಗಳನ್ನು ಬಳಸಲು ಕಲಿಯುವೆವು.
00:13 ನಾವು:
00:14 * Ubuntu ಆವೃತ್ತಿ 12.04
00:17 * Ruby 1.9.3 ಇವುಗಳನ್ನು ಬಳಸುತ್ತಿದ್ದೇವೆ.
00:20 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು 'ಇಂಟರ್ನೆಟ್'ನ ಸಂಪರ್ಕವನ್ನು ಪಡೆದಿರಬೇಕು.
00:25 'Linux' ಕಮಾಂಡ್ ಗಳು, ‘ಟರ್ಮಿನಲ್’ ಮತ್ತು 'ಟೆಕ್ಸ್ಟ್ ಎಡಿಟರ್' ಗಳನ್ನು ಸಹ ನೀವು ತಿಳಿದಿರಬೇಕು.
00:29 ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೆಟ್ಟಿಕೊಡಿ.
00:34 ನಾವು ಪ್ರಾರಂಭಿಸುವ ಮುನ್ನ, “ttt” ಎಂಬ ಡಿರೆಕ್ಟರೀಯನ್ನು ಈಮೊದಲು ಕ್ರಿಯೇಟ್ ಮಾಡಿದ್ದೆವು ಎಂಬುದನ್ನು ನೆನಪಿಸಿಕೊಳ್ಳಿ.
00:38 ನಾವು ಆ ಡಿರೆಕ್ಟರೀಗೆ ಹೋಗೋಣ.
00:41 ಆಮೇಲೆ, 'ruby hyphen tutorial' ಮತ್ತು 'looping hyphen statements' ಎಂಬ ಡಿರೆಕ್ಟರೀಗಳಿಗೆ ಹೋಗೋಣ.
00:46 ಈಗ ನಾವು ಅದೇ ಫೋಲ್ಡರ್ ನಲ್ಲಿ ಇರುವುದರಿಂದ ಮುಂದೆ ನಡೆಯೋಣ.
00:50 'ರೂಬಿ'ಯಲ್ಲಿ, 'while' ಎಂಬ ಲೂಪ್ ನ ಸಿಂಟ್ಯಾಕ್ಸ್ ಈಕೆಳಗಿನಂತಿದೆ:
00:54 'while “boolean expression” '
00:56 'ruby code'
00:57 'end'
00:58 ನಾವು ಒಂದು ಉದಾಹರಣೆಯನ್ನು ನೋಡೋಣ.
01:01 ಪ್ರಾಥಮಿಕ ಹಂತದ (basic level) Ruby tutorials ನಲ್ಲಿ ತೋರಿಸಿದಂತೆ, 'gedit' ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ.
01:05 ಇದನ್ನು 'while hyphen loop dot rb' ಎಂದು ಹೆಸರಿಸಿ.
01:09 ನನ್ನ ಹತ್ತಿರ 'while' ಲೂಪ್ ನ ಒಂದು ಉದಾಹರಣೆ ಇದೆ.
01:13 ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ:

'gedit space while hyphen loop dot rb space &' (ಆಂಪರ್ಸಂಡ್)

01:24 ನಾವು ಇದರಲ್ಲಿ ಮುಂದುವರಿಯುತ್ತಿದ್ದಂತೆ, ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ (pause) ಕೋಡ್ ಅನ್ನು ಟೈಪ್ ಮಾಡಬಹುದು.
01:28 ಈ ಉದಾಹರಣೆಯಲ್ಲಿ, ನಾನು ಒಂದು 'while ಲೂಪ್'ಅನ್ನು ಡಿಕ್ಲೇರ್ ಮಾಡಿದ್ದೇನೆ.
01:32 ಮೊದಲು ನಾನು 'i' ಎಂಬ ಒಂದು 'ಲೋಕಲ್ ವೇರಿಯೆಬಲ್'ಅನ್ನು ಡಿಕ್ಲೇರ್ ಮಾಡಿ, ಅದನ್ನು ಸೊನ್ನೆಗೆ (0) ಇನಿಶಿಯಲೈಸ್ ಮಾಡಿದ್ದೇನೆ.
01:38 ಆಮೇಲೆ, ಒಂದು 'while ಲೂಪ್'ಅನ್ನು ಡಿಕ್ಲೇರ್ ಮಾಡುತ್ತೇನೆ.
01:41 ವೇರಿಯೆಬಲ್ 'i', -10 ಕ್ಕಿಂತ (ಮೈನಸ್ ಹತ್ತು) ಹೆಚ್ಚು ಇರುವವರೆಗೆ ಈ ಲೂಪ್, ಎಕ್ಸೀಕ್ಯೂಟ್ ಮಾಡುವುದು.
01:46 'while ಲೂಪ್'ನ ಒಳಗಡೆ ಡಿಕ್ಲೇರ್ ಮಾಡಲಾದ 'puts' ಮೆಥಡ್, ಔಟ್ಪುಟ್ ಅನ್ನು ತೋರಿಸುವುದು.
01:51 ಔಟ್ಪುಟ್ ಅನ್ನು ತೋರಿಸಿದ ನಂತರ, ನಾವು 'i' ದ ವ್ಯಾಲ್ಯೂಅನ್ನು 1 ರಿಂದ (ಒಂದರಿಂದ) ಇಳಿಸುತ್ತೇವೆ.
01:56 ಮುಂದಿನ ಇಟರೇಶನ್ ನ ಮೊದಲು, 'i', ಈ ಇಳಿಸಲಾದ ವ್ಯಾಲ್ಯೂಅನ್ನು ಪಡೆಯುವುದು.
02:01 ಪ್ರತಿಯೊಂದು ಇಟರೇಶನ್ ನಲ್ಲಿ, ವೇರಿಯೆಬಲ್ 'i' ಯನ್ನು ಇಳಿಸಲಾಗುತ್ತದೆ.
02:04 'i' ನ ವ್ಯಾಲ್ಯೂ, -10 ಅನ್ನು ಮುಟ್ಟುವವರೆಗೆ ಇದು ಮುಂದುವರೆಯುತ್ತದೆ.
02:09 ಈ ಘಟ್ಟದಲ್ಲಿ, 'while' ಕಂಡೀಶನ್, ವಿಫಲಗೊಳ್ಳುತ್ತದೆ.
02:12 ಆನಂತರದಲ್ಲಿ, ಇದು ಲೂಪ್ ನಿಂದ ಹೊರಬರುತ್ತದೆ ಮತ್ತು ಔಟ್ಪುಟ್ ಅನ್ನು ಪ್ರಿಂಟ್ ಮಾಡುವುದನ್ನು ನಿಲ್ಲಿಸುತ್ತದೆ.
02:16 ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ:

'ruby space while hyphen loop dot rb' ಮತ್ತು ಔಟ್ಪುಟ್ ಅನ್ನು ನೋಡೋಣ.

02:30 ಔಟ್ಪುಟ್, ಸೊನ್ನೆಯಿಂದ(0) -9 ರವರೆಗಿನ (ಮೈನಸ್ ಒಂಭತ್ತು) ಸಂಖ್ಯೆಗಳ ಒಂದು ಲಿಸ್ಟ್ ಅನ್ನು ಒಳಗೊಂಡಿರುವುದು.
02:35 ಈಗ, 'Ruby'ಯಲ್ಲಿ ನಿಮ್ಮ ಸ್ವಂತದ 'while' ಲೂಪ್ ಅನ್ನು ಬರೆಯಲು ನಿಮಗೆ ಸಾಧ್ಯವಾಗಬೇಕು.
02:40 ಇನ್ನುಮುಂದೆ ನಾವು 'until' ಲೂಪನ್ನು ನೋಡೋಣ.
02:43 'ರೂಬಿ'ಯಲ್ಲಿ, 'until' ಲೂಪ್ ನ ಸಿಂಟ್ಯಾಕ್ಸ್ ಈಕೆಳಗಿನಂತಿದೆ:
02:45 'until “boolean expression”'
02:47 'ruby code'
02:48 'end'
02:50 ನಾವು ಒಂದು ಉದಾಹರಣೆಯನ್ನು ನೋಡೋಣ.
02:52 ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ:

'gedit space until hyphen loop dot rb space &' (ಆಂಪರ್ಸಂಡ್)

03:03 ನಾವು ಇದರಲ್ಲಿ ಮುಂದುವರಿಯುತ್ತಿದ್ದಂತೆ, ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ (pause) ಕೋಡ್ ಅನ್ನು ಟೈಪ್ ಮಾಡಬಹುದು.
03:07 ಈ ಉದಾಹರಣೆಯಲ್ಲಿ, ನಾನು ಒಂದು 'until' ಲೂಪ್'ಅನ್ನು ಡಿಕ್ಲೇರ್ ಮಾಡಿದ್ದೇನೆ.
03:12 ನಾವು 'i' ಎಂಬ ಒಂದು 'ಲೋಕಲ್ ವೇರಿಯೆಬಲ್'ಅನ್ನು ಡಿಕ್ಲೇರ್ ಮಾಡಿ, ಅದನ್ನು ಸೊನ್ನೆಗೆ(0) ಇನಿಶಿಯಲೈಸ್ ಮಾಡಿದ್ದೆವು.
03:16 ಆಮೇಲೆ, ಒಂದು 'until' ಲೂಪ್'ಅನ್ನು ಡಿಕ್ಲೇರ್ ಮಾಡುತ್ತೇವೆ.
03:18 ಈ ಲೂಪ್, ವೇರಿಯೆಬಲ್ 'i', -10 ಕ್ಕಿಂತ (ಮೈನಸ್ ಹತ್ತು) ಹೆಚ್ಚು ಇರುವವರೆಗೆ ಎಕ್ಸೀಕ್ಯೂಟ್ ಮಾಡುವುದು.
03:23 'puts' ಮೆಥಡ್, ಔಟ್ಪುಟ್ ಅನ್ನು ತೋರಿಸುವುದು.
03:27 ಔಟ್ಪುಟ್ ಅನ್ನು ತೋರಿಸಿದ ನಂತರ, 'i' ದ ವ್ಯಾಲ್ಯೂಅನ್ನು 1 ರಿಂದ (ಒಂದರಿಂದ) ಇಳಿಸಲಾಗುವುದು.
03:32 ಮುಂದಿನ ಇಟರೇಶನ್ ನ ಮೊದಲು, 'i', ಈ ಇಳಿಸಲಾದ ವ್ಯಾಲ್ಯೂಅನ್ನು ಪಡೆಯುವುದು.
03:36 ಪ್ರತಿಯೊಂದು ಇಟರೇಶನ್ ನಲ್ಲಿ, ವೇರಿಯೆಬಲ್ 'i' ಯನ್ನು ಇಳಿಸಲಾಗುತ್ತದೆ.
03:40 'i' ನ ವ್ಯಾಲ್ಯೂ, -11 ಅನ್ನು (ಮೈನಸ್ ಹನ್ನೊಂದು) ತಲುಪುವವರೆಗೆ ಇದು ಮುಂದುವರೆಯುತ್ತದೆ.
03:43 ಈ ಘಟ್ಟದಲ್ಲಿ, 'until' ಕಂಡೀಶನ್, ವಿಫಲಗೊಳ್ಳುತ್ತದೆ.
03:46 ತರುವಾಯ, ಇದು ಲೂಪ್ ನಿಂದ ಹೊರಬರುತ್ತದೆ ಮತ್ತು ಔಟ್ಪುಟ್ ಅನ್ನು ಪ್ರಿಂಟ್ ಮಾಡುವುದನ್ನು ನಿಲ್ಲಿಸುತ್ತದೆ.
03:51 ಈಗ, ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡಿ:

'ruby space until hyphen loop dot rb' ಮತ್ತು ಔಟ್ಪುಟ್ ಅನ್ನು ನೋಡಿ.

04:03 ಔಟ್ಪುಟ್, 0(ಸೊನ್ನೆ) ಯಿಂದ -10 (ಮೈನಸ್ ಹತ್ತು) ರವರೆಗಿನ ಸಂಖ್ಯೆಗಳ ಒಂದು ಲಿಸ್ಟ್ ಅನ್ನು ಒಳಗೊಂಡಿರುವುದು.
04:08 ಈಗ, 'ರೂಬಿ'ಯಲ್ಲಿ ನಿಮ್ಮ ಸ್ವಂತದ 'until' ಲೂಪ್ ಅನ್ನು ಬರೆಯಲು ನಿಮಗೆ ಸಾಧ್ಯವಾಗಬೇಕು.
04:13 ಈಗ, ನಾವು 'redo' ಕನ್ಸ್ಟ್ರಕ್ಟ್ ಅನ್ನು ನೋಡೋಣ.
04:16 'ರೂಬಿ'ಯಲ್ಲಿ, 'redo' ದ ಸಿಂಟ್ಯಾಕ್ಸ್ ಈಕೆಳಗಿನಂತಿದೆ:
04:20 "a collection of objects".each

‘do item’

04:25 'a conditional statement'
04:27 'ruby code'
04:28 'redo'
04:29 'end conditional'
04:30 'end' loop
04:32 ನನ್ನ ಹತ್ತಿರ 'redo' ಲೂಪ್ ನ ಒಂದು ಉದಾಹರಣೆ ಇದೆ.
04:35 ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ:

'gedit space redo hyphen loop dot rb space &' (ಆಂಪರ್ಸಂಡ್)

04:48 ನಾವು ಇದರಲ್ಲಿ ಮುಂದುವರಿಯುತ್ತಿದ್ದಂತೆ, ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ (pause) ಕೋಡ್ ಅನ್ನು ಟೈಪ್ ಮಾಡಬಹುದು.
04:52 ಈ ಉದಾಹರಣೆಯಲ್ಲಿ, ನಾನು ಒಂದು 'each' ಲೂಪ್'ಅನ್ನು ಡಿಕ್ಲೇರ್ ಮಾಡಿದ್ದೇನೆ.
04:55 10 ರಿಂದ 20 ರ ವರೆಗಿನ ಸಂಖ್ಯೆಗಳ ಮೇಲೆ ಇಟರೇಟ್ ಮಾಡಲು (ಪುನರಾವರ್ತಿಸಲು), ನಾವು ಒಂದು 'each' ಲೂಪ್'ಅನ್ನು ಡಿಕ್ಲೇರ್ ಮಾಡಿದ್ದೇವೆ.
05:00 ಆಮೇಲೆ, ನಾವು ಒಂದು 'if' ಕಂಡೀಶನಲ್ ಸ್ಟೇಟ್ಮೆಂಟ್ ಅನ್ನು ಡಿಫೈನ್ ಮಾಡುತ್ತೇವೆ.
05:04 10 ರಿಂದ 20 ರವರೆಗಿನ ಎಲ್ಲ ಸಂಖ್ಯೆಗಳಿಗಾಗಿ ಈ ಲೂಪ್, ಎಕ್ಸೀಕ್ಯೂಟ್ ಮಾಡುವುದು.
05:08 ಇದು, 'i' ದ ವ್ಯಾಲ್ಯೂ 20 ಆಗಿದ್ದರೆ ಮಾತ್ರ ಒಳಗಿರುವ 'if' ಕಂಡೀಶನಲ್-ಬ್ಲಾಕ್ ಅನ್ನು ಪ್ರವೇಶಿಸುವುದು.
05:15 'each' ಲೂಪ್ ನ ಒಳಗಡೆ ಡಿಕ್ಲೇರ್ ಮಾಡಲಾದ 'puts' ಮೆಥಡ್, ಔಟ್ಪುಟ್ ಅನ್ನು ತೋರಿಸುವುದು.
05:20 ಪ್ರೊಗ್ರಾಂ, ಒಂದುಸಲ 'if' ಕಂಡೀಶನಲ್-ಬ್ಲಾಕ್ ಅನ್ನು ಪ್ರವೇಶಿಸಿತೆಂದರೆ, ಅದು ಔಟ್ಪುಟ್ ಅನ್ನು ಮೊದಲು ಪ್ರಿಂಟ್ ಮಾಡುವುದು.
05:24 ನಂತರ ಅದು 'redo' ಅನ್ನು ಎಕ್ಸೀಕ್ಯೂಟ್ ಮಾಡುವುದು.
05:28 'redo' (ರೀ-ಡು), ಎಲ್ಲಕ್ಕಿಂತ ಒಳಗಿರುವ ಲೂಪ್ ನ ಇಟರೇಶನ್ ಅನ್ನು ಎಕ್ಸೀಕ್ಯೂಟ್ ಮಾಡುವುದು.
05:31 ಅದು, 'ಲೂಪ್ ಕಂಡೀಶನ್' ಅನ್ನು ಪರೀಕ್ಷಿಸದೇ ಹೀಗೆ ಮಾಡುವುದು.
05:34 ನಮ್ಮ 'ಕಂಡೀಶನ್', 'if i == 20' (ಇಫ್ i ಇಕ್ವಲ್ ಟು 20) ಎಂದು ಇರುವುದರಿಂದ,
05:38 ಫಲಿತಾಂಶವು 'ಇನ್ಫೈನೈಟ್ ಲೂಪ್' (infinite loop) ಆಗಿರುವುದು. ಏಕೆಂದರೆ 'i' ದ ವ್ಯಾಲ್ಯೂ, 20 ರಿಂದ ಬದಲಾಗುವುದಿಲ್ಲ.
05:43 ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ:

'ruby space redo hyphen loop dot rb'

05:52 ಮತ್ತು ಔಟ್ಪುಟ್ ಅನ್ನು ನೋಡೋಣ.
05:53 ಔಟ್ಪುಟ್, ಎಂದಿಗೂ ಕೊನೆಗೊಳ್ಳದೇ ಇರುವ ಒಂದು 'ಇನ್ಫೈನೈಟ್ ಲೂಪ್'ಅನ್ನು ಒಳಗೊಂಡಿರುವುದು.
05:58 'ಇನ್ಫೈನೈಟ್ ಲೂಪ್'ಅನ್ನು ಕೊನೆಗಾಣಿಸಲು 'Ctrl + C' ಯನ್ನು ಒತ್ತಿ.
06:03 ಈಗ, ನಾವು 'break' ಸ್ಟೇಟ್ಮೆಂಟ್ ಅನ್ನು ನೋಡೋಣ.
06:06 'ರೂಬಿ'ಯಲ್ಲಿ, 'break' ಸ್ಟೇಟ್ಮೆಂಟ್ ಗಾಗಿ ಸಿಂಟ್ಯಾಕ್ಸ್ ಈಕೆಳಗಿನಂತಿದೆ:
06:10 'a looping statement'
06:12 'a conditional statement '
06:13 'break '
06:14 'end conditional '
06:16 'ruby code'
06:17 'end loop'
06:18 ನಾವು ಒಂದು ಉದಾಹರಣೆಯನ್ನು ನೋಡೋಣ.
06:21 ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ:

'gedit space break hyphen loop dot rb space ampersand'

06:33 ನಾವು ಈ ಉದಾಹರಣೆಯಲ್ಲಿ ಮುಂದುವರಿಯುತ್ತಿದ್ದಂತೆ, ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ (pause) ಕೋಡ್ ಅನ್ನು ಟೈಪ್ ಮಾಡಬಹುದು.
06:38 ಈ ಉದಾಹರಣೆಯಲ್ಲಿ, ನಾನು ಒಂದು 'each' ಲೂಪ್ ಅನ್ನು ಡಿಕ್ಲೇರ್ ಮಾಡಿದ್ದೇನೆ.
06:41 ಇದು, ನಾವು ಈಮೊದಲು ಬಳಸಿರುವುದನ್ನು ಹೋಲುತ್ತದೆ.
06:43 ಇಲ್ಲಿ, 'puts' ಮೆಥಡ್, 11 (ಹನ್ನೊಂದು) ರಿಂದ 19 (ಹತ್ತೊಂಭತ್ತು) ರವರೆಗಿನ ಸಂಖ್ಯೆಗಳಿಗಾಗಿ ಔಟ್ಪುಟ್ ಅನ್ನು ತೋರಿಸುವುದು.
06:49 ವ್ಯಾಲ್ಯೂ 20 (ಇಪ್ಪತ್ತು) ಎಂದು ಆದಕೂಡಲೇ, ಪ್ರೊಗ್ರಾಂ, ಕಂಡೀಶನಲ್ 'if' ಬ್ಲಾಕ್ ಅನ್ನು ಪ್ರವೇಶಿಸುತ್ತದೆ.
06:54 ಈ ಘಟ್ಟದಲ್ಲಿ, ಅದು 'break' ಸ್ಟೇಟ್ಮೆಂಟ್ ಅನ್ನು ನೋಡುತ್ತದೆ ಮತ್ತು ಲೂಪ್ ನಿಂದ ಹೊರಬರುತ್ತದೆ.
06:59 ಈಗ, ಟರ್ಮಿನಲ್ ಅನ್ನು ಓಪನ್ ಮಾಡಿ ಹೀಗೆ ಟೈಪ್ ಮಾಡಿ:
07:02 'ruby space break hyphen loop dot rb'
07:05 ಮತ್ತು ಔಟ್ಪುಟ್ ಅನ್ನು ನೋಡಿ.
07:08 ಔಟ್ಪುಟ್, 10 ರಿಂದ 19 ರವರೆಗಿನ ಸಂಖ್ಯೆಗಳನ್ನು ಒಳಗೊಂಡಿರುವುದು.
07:13 ಈಗ, ನಿಮ್ಮ ಸ್ವಂತದ 'break' ಕನ್ಸ್ಟ್ರಕ್ಟ್ ಅನ್ನು ಕ್ರಿಯೇಟ್ ಮಾಡಲು ನಿಮಗೆ ಸಾಧ್ಯವಾಗಬೇಕು.
07:17 ಇದರೊಂದಿಗೆ, ನಾವು ಈ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ.
07:20 ಸಂಕ್ಷಿಪ್ತವಾಗಿ,
07:22 ಈ ಟ್ಯುಟೋರಿಯಲ್ ನಲ್ಲಿ, ನಾವು:
07:24 * 'while' ಲೂಪ್
07:25 * 'until' ಕನ್ಸ್ಟ್ರಕ್ಟ್
07:26 * 'redo' (ರೀ-ಡು) ಹಾಗೂ
07:27 * 'break' ಕನ್ಸ್ಟ್ರಕ್ಟ್, ಇವುಗಳನ್ನು ಉಪಯೋಗಿಸಲು ಕಲಿತಿದ್ದೇವೆ.
07:29 ಒಂದು ಅಸೈನ್ಮೆಂಟ್ -
07:31 ಫ್ಯಾರನ್ಹೈಟ್ (Fahrenheit) ಎಂದು ನಿರೂಪಿಸಲಾದ 100 ರಿಂದ 115 ರವರೆಗಿನ ಸಂಖ್ಯೆಗಳ ಒಂದು ಇನ್ಕ್ಲೂಸಿವ್ ರೇಂಜ್ (ವ್ಯಾಪ್ತಿ) ಅನ್ನು ಪರಿಗಣಿಸಿ.
07:38 ಫ್ಯಾರನ್ಹೈಟ್ ನಿಂದ ಸೆಲ್ಸಿಯಸ್ ಗೆ (Celsius) ಪರಿವರ್ತಿಸುವ ಸೂತ್ರವನ್ನು ಉಪಯೋಗಿಸುವ
07:40 ಸೂಕ್ತವಾದ ಒಂದು ಲೂಪ್ ಕನ್ಸ್ಟ್ರಕ್ಟ್ ಅನ್ನು ಬಳಸಿ,
07:42 ಕೊಟ್ಟ ಸಂಖ್ಯೆಗಳ ಶ್ರೇಣಿಗಾಗಿ
07:46 ಒಂದು 'Ruby' ಪ್ರೊಗ್ರಾಂಅನ್ನು ಬರೆಯಿರಿ.
07:49 ಈ ಪ್ರೊಗ್ರಾಂ, ತಾಪಮಾನವು (temperature in Celsius) 32 ಡಿಗ್ರೀ ಸೆಲ್ಸಿಯಸ್ ಗಿಂತ ಹೆಚ್ಚು ಇದ್ದಾಗ, ಔಟ್ಪುಟ್ ಅನ್ನು ಹೀಗೆ ತೋರಿಸಬೇಕು:
07:55 “The temperature has reached a certain degree Celsius and has become unbearable”.
08:00 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
08:03 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
08:07 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
08:10 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
08:13 * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
08:15 * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
08:19 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:

contact@spoken-tutorial.org

08:25 "ಸ್ಪೋಕನ್ ಟ್ಯುಟೋರಿಯಲ್" ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
08:29 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
08:35 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

spoken hyphen tutorial dot org slash NMEICT hyphen Intro.

08:44 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ ಭಟ್ಟ ಉಪ್ಪಿನಪಟ್ಟಣ .

ವಂದನೆಗಳು.

Contributors and Content Editors

NaveenBhat, Sandhya.np14