Ruby/C2/Variables-in-Ruby/Kannada
From Script | Spoken-Tutorial
Time | Narration |
00:02 | Variables in Ruby (ವೇರಿಯೆಬಲ್ಸ್ ಇನ್ ರೂಬಿ) ಎಂಬ Spoken Tutorialಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ, ನಾವು: |
00:09 | * ವೇರಿಯೆಬಲ್ ಎಂದರೇನು? |
00:10 | * 'Ruby' (ರೂಬಿ) ಯಲ್ಲಿ ’ಡೈನಮಿಕ್ ಟೈಪಿಂಗ್’ |
00:13 | * ವೇರಿಯೆಬಲ್ ಅನ್ನು ಡಿಕ್ಲೇರ್ ಮಾಡುವುದು |
00:15 | * ‘ವೇರಿಯೆಬಲ್ ಟೈಪ್’ಗಳನ್ನು ಪರಿವರ್ತಿಸುವುದು |
00:18 | * ವೇರಿಯೆಬಲ್'ನ ವ್ಯಾಪ್ತಿ (scope) ಎಂದರೇನು? |
00:20 | * ವೇರಿಯೆಬಲ್ ಗಳ ಪ್ರಕಾರಗಳು (types) ಇತ್ಯಾದಿಗಳನ್ನು ಕಲಿಯುವೆವು. |
00:23 | ಇಲ್ಲಿ ನಾವು:
Ubuntu Linux ಆವೃತ್ತಿ 12.04 Ruby 1.9.3 ಇವುಗಳನ್ನು ಬಳಸುತ್ತಿದ್ದೇವೆ. |
00:32 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, 'Linux' ನಲ್ಲಿ ‘ಟರ್ಮಿನಲ್’ಅನ್ನು ಉಪಯೋಗಿಸುವುದನ್ನು ನೀವು ತಿಳಿದಿರಬೇಕು. |
00:38 | ನೀವು 'irb' ಯನ್ನು ಚೆನ್ನಾಗಿ ತಿಳಿದಿರಬೇಕು. |
00:41 | ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೆಟ್ಟಿಕೊಡಿ. |
00:47 | ಈಗ ನಾನು 'ವೇರಿಯೆಬಲ್' ಎಂದರೇನು ಎಂಬುದನ್ನು ವಿವರಿಸುವೆನು. |
00:50 | ‘ವ್ಯಾಲ್ಯೂ’ಅನ್ನು ಸಂಗ್ರಹಿಸಲು (ಸ್ಟೋರ್) ‘ವೇರಿಯೆಬಲ್’ಅನ್ನು ಬಳಸಲಾಗುತ್ತದೆ. |
00:54 | ವೇರಿಯೆಬಲ್, ಅಸೈನ್ ಮಾಡಬಹುದಾದ ಒಂದು ರೆಫರೆನ್ಸ್ ಆಗಿದೆ. |
00:58 | 'ರೂಬಿ ವೇರಿಯೆಬಲ್'ಗಳು ‘ಕೇಸ್ ಸೆನ್ಸಿಟಿವ್’ ಆಗಿವೆ ಎಂಬುದನ್ನು ದಯವಿಟ್ಟು ಗಮನಿಸಿ. |
01:04 | ವೇರಿಯೆಬಲ್ ನ ಹೆಸರುಗಳು ಅರ್ಥಪೂರ್ಣವಾಗಿರಬೇಕು. |
01:07 | ವೇರಿಯೆಬಲ್ ನ ಹೆಸರು: ಸಣ್ಣ ಅಕ್ಷರಗಳು, ಸಂಖ್ಯೆಗಳು, ಅಂಡರ್ಸ್ಕೋರ್ ಗಳನ್ನು ಮಾತ್ರ ಒಳಗೊಂಡಿರಬೇಕು. ಉದಾ: first_name. |
01:20 | ಈಗ ನಾವು, ‘ಡೈನಾಮಿಕ್ ಟೈಪಿಂಗ್’ ಎಂದರೇನು ಎಂಬುದನ್ನು ನೋಡೋಣ. |
01:23 | 'ರೂಬಿ', ‘ಡೈನಾಮಿಕ್ ಟೈಪ್’ಅನ್ನು ಹೊಂದಿದ ಭಾಷೆಯಾಗಿದೆ. |
01:27 | ಎಂದರೆ, ನೀವು ವೇರಿಯೆಬಲ್ ಅನ್ನು ಕ್ರಿಯೇಟ್ ಮಾಡುವಾಗ ‘ಡೇಟಾ ಟೈಪ್’ಅನ್ನು ಡಿಕ್ಲೇರ್ ಮಾಡುವ ಅಗತ್ಯವಿಲ್ಲ. |
01:34 | 'ರೂಬಿ ಇಂಟರ್ಪ್ರಿಟರ್', ಅಸೈನ್ ಮಾಡುವ ಸಮಯದಲ್ಲಿ ‘ಡೇಟಾ ಟೈಪ್’ಅನ್ನು ನಿರ್ಧರಿಸುತ್ತದೆ. |
01:39 | ಈಗ, 'ರೂಬಿ'ಯಲ್ಲಿ ವೇರಿಯೆಬಲ್ ಅನ್ನು ಹೇಗೆ ಡಿಕ್ಲೇರ್ ಮಾಡುವುದೆಂದು ನಾವು ನೋಡೋಣ. |
01:45 | 'Ctrl, Alt' ಮತ್ತು 'T' ಕೀಗಳನ್ನು ಒಟ್ಟಿಗೇ ಒತ್ತಿ 'ಟರ್ಮಿನಲ್’ಅನ್ನು ಓಪನ್ ಮಾಡಿ. |
01:51 | ನಿಮ್ಮ ಸ್ಕ್ರೀನ್ ಮೇಲೆ ಒಂದು ‘ಟರ್ಮಿನಲ್ ವಿಂಡೋ’ ಕಾಣಿಸಿಕೊಳ್ಳುತ್ತದೆ. |
01:55 | ಈಗ, 'Interactive Ruby' (ಇಂಟರ್ಯಾಕ್ಟಿವ್ ರೂಬಿ) ಯನ್ನು ಲಾಂಚ್ ಮಾಡಲು, |
01:57 | "irb" ಎಂದು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ. |
02:02 | ಈಗ, ಹೀಗೆ ಟೈಪ್ ಮಾಡಿ: 'var1 equal to 10’ ಮತ್ತು 'Enter' ಅನ್ನು ಒತ್ತಿ. |
02:09 | ಇಲ್ಲಿ, ನಾವು 'var 1' ಎಂಬ ಒಂದು ವೇರಿಯೆಬಲ್ ಅನ್ನು ಡಿಕ್ಲೇರ್ ಮಾಡಿದ್ದೇವೆ ಮತ್ತು ಇದಕ್ಕೆ ವ್ಯಾಲ್ಯೂ 10 ಅನ್ನು ಅಸೈನ್ ಮಾಡಿದ್ದೇವೆ. |
02:15 | ಇಂಟರ್ಪ್ರಿಟರ್ ನಿಂದ ನೀಡಲಾದ ಡೇಟಾಟೈಪ್, ‘ಇಂಟಿಜರ್’ ಆಗಿದೆಯೋ ಇಲ್ಲವೊ ಎಂಬುದನ್ನು ನಾವು ಪರೀಕ್ಷಿಸೋಣ. |
02:21 | ಆದ್ದರಿಂದ, ಹೀಗೆ ಟೈಪ್ ಮಾಡಿ: 'var1 dot kind_(underscore) of (?) question mark Integer’ ಮತ್ತು 'Enter' ಅನ್ನು ಒತ್ತಿ. |
02:37 | ನಮಗೆ "true" ಎಂಬ ಔಟ್ಪುಟ್ ಸಿಗುತ್ತದೆ. |
02:39 | 'ರೂಬಿ'ಯಲ್ಲಿ, ನೀವು ವೇರಿಯೆಬಲ್ ಟೈಪ್ ಅನ್ನು ಸಕ್ರಿಯವಾಗಿ ಬದಲಾಯಿಸಬಹುದು. |
02:44 | ಹೀಗೆ ಮಾಡಲು, ಕೇವಲ ಅದಕ್ಕೆ ಹೊಸ ವ್ಯಾಲ್ಯೂಅನ್ನು ಅಸೈನ್ ಮಾಡಿ. |
02:47 | ವೇರಿಯೆಬಲ್ 'var1' ಗೆ, ಒಂದು ಸ್ಟ್ರಿಂಗ್ ವ್ಯಾಲ್ಯೂಅನ್ನು ಅಸೈನ್ ಮಾಡುವುದರ ಮೂಲಕ ನಾವು ಇದನ್ನು ಮಾಡೋಣ. |
02:53 | ಹೀಗೆ ಟೈಪ್ ಮಾಡಿ: 'var1 equal to within double quotes hello' ಮತ್ತು 'Enter' ಅನ್ನು ಒತ್ತಿ. |
03:02 | ಅಸೈನ್ ಮಾಡಲಾದ ‘ವೇರಿಯೆಬಲ್ ಟೈಪ್’ಅನ್ನು ನಾವು ಪರೀಕ್ಷಿಸೋಣ. |
03:06 | ಹೀಗೆ ಟೈಪ್ ಮಾಡಿ: 'var1 dot class'. |
03:12 | 'class' ಮೆಥಡ್, ಇದು ಯಾವ ‘ಕ್ಲಾಸ್’ನ ವೇರಿಯೆಬಲ್ ಆಗಿದೆ ಎಂಬುದನ್ನು ಹೇಳುತ್ತದೆ. ಈಗ 'Enter' ಅನ್ನು ಒತ್ತಿ. |
03:20 | ನಾವು "string" ಅನ್ನು ಔಟ್ಪುಟ್ ಎಂದು ಪಡೆಯುತ್ತೇವೆ. |
03:23 | 'ರೂಬಿ', ತಾನಾಗಿಯೇ ‘ವೇರಿಯೆಬಲ್ ಟೈಪ್’ಅನ್ನು ‘ಇಂಟೀಜರ್’ನಿಂದ ‘ಸ್ಟ್ರಿಂಗ್’ಗೆ ಬದಲಾಯಿಸಿದೆ. |
03:29 | ಈಗ ನಾವು ಒಂದು ವೇರಿಯೆಬಲ್ ವ್ಯಾಲ್ಯೂಅನ್ನು, ಬೇರೆ ‘ಟೈಪ್’ಗೆ ಹೇಗೆ ಪರಿವರ್ತಿಸುವುದು ಎಂಬುದನ್ನು ಕಲಿಯುವೆವು. |
03:35 | ನಾವು ಸ್ಲೈಡ್ ಗೆ ಬದಲಾಯಿಸೋಣ. |
03:38 | 'ರೂಬಿ ವೇರಿಯೆಬಲ್ ಕ್ಲಾಸ್'ಗಳು, ತಮ್ಮ ವ್ಯಾಲ್ಯೂಅನ್ನು ಬೇರೆ ಟೈಪ್ ಗೆ ಪರಿವರ್ತಿಸಲು ‘ಮೆಥಡ್’ಗಳನ್ನು ಹೊಂದಿವೆ. |
03:45 | 'to_i' ಮೆಥಡ್: ಒಂದು ‘ವೇರಿಯೆಬಲ್’ಅನ್ನು 'ಇಂಟೀಜರ್'ಗೆ ಪರಿವರ್ತಿಸಲು ಇದನ್ನು ಬಳಸಲಾಗುತ್ತದೆ. |
03:51 | 'to_f' ಮೆಥಡ್: ಒಂದು ‘ವೇರಿಯೆಬಲ್’ಅನ್ನು 'ಫ್ಲೋಟಿಂಗ್ ಪಾಯಿಂಟ್ ವ್ಯಾಲ್ಯೂ'ಗೆ ಪರಿವರ್ತಿಸಲು ಇದನ್ನು ಬಳಸಲಾಗುತ್ತದೆ. |
03:57 | 'to_s' ಮೆಥಡ್: ಒಂದು ‘ವೇರಿಯೆಬಲ್’ಅನ್ನು 'ಸ್ಟ್ರಿಂಗ್'ಗೆ ಪರಿವರ್ತಿಸಲು ಇದನ್ನು ಬಳಸಲಾಗುತ್ತದೆ. |
04:03 | 'to _s' ಮೆಥಡ್, ‘ನಂಬರ್ ಬೇಸ್’ಅನ್ನು ಒಂದು 'ಆರ್ಗ್ಯೂಮೆಂಟ್' ನಂತೆ ತೆಗೆದುಕೊಳ್ಳುತ್ತದೆ. |
04:08 | ಪರಿವರ್ತನೆಯು ಈ ‘ನಂಬರ್ ಬೇಸ್’ಅನ್ನು ಅವಲಂಬಿಸಿದೆ. |
04:12 | ಈಗ, ನಾವು ಈ ಮೆಥಡ್ ಗಳನ್ನು ಪ್ರಯತ್ನಿಸಿ ನೋಡೋಣ. |
04:15 | ಟರ್ಮಿನಲ್ ಗೆ ಹೋಗಿ. ಮೊದಲು ನಾವು ಟರ್ಮಿನಲ್ ಅನ್ನು ತೆರವುಗೊಳಿಸೋಣ (clear). |
04:21 | 'irb' ಕನ್ಸೋಲ್ ಅನ್ನು ತೆರವು ಮಾಡಲು, 'Ctrl, L' ಒತ್ತಿ. |
04:25 | ಈಗ, ಹೀಗೆ ಟೈಪ್ ಮಾಡಿ: 'y equal to 20' ಮತ್ತು 'Enter' ಅನ್ನು ಒತ್ತಿ. |
04:32 | ಇಲ್ಲಿ, ನಾವು 'y' ಎಂಬ ಒಂದು ವೇರಿಯೆಬಲ್ ಅನ್ನು ಡಿಕ್ಲೇರ್ ಮಾಡಿದ್ದೇವೆ ಮತ್ತು ಅದಕ್ಕೆ '20' ಎಂದು ವ್ಯಾಲ್ಯೂ ಅನ್ನು ಅಸೈನ್ ಮಾಡಿದ್ದೇವೆ. |
04:39 | ನಾವು ಈಗ 'to underscore f' ಮೆಥಡ್ ಅನ್ನು ಬಳಸಿ, 'y' ಯನ್ನು ‘ಫ್ಲೋಟಿಂಗ್ ಪಾಯಿಂಟ್ ವ್ಯಾಲ್ಯೂ’ಗೆ ಪರಿವರ್ತಿಸುವೆವು. |
04:47 | ಹೀಗೆ ಟೈಪ್ ಮಾಡಿ: 'y dot to underscore f' ಮತ್ತು 'Enter' ಅನ್ನು ಒತ್ತಿ. |
04:55 | ನಮಗೆ ವ್ಯಾಲ್ಯೂ ‘ಫ್ಲೋಟ್’ ಎಂದು ಸಿಗುತ್ತದೆ. |
04:57 | ಈಗ, ಹೀಗೆ ಟೈಪ್ ಮಾಡಿ: 'y dot to underscore s' ಮತ್ತು 'Enter' ಅನ್ನು ಒತ್ತಿ. |
05:06 | ನಮಗೆ ಔಟ್ಪುಟ್, ಡಬಲ್ ಕೋಟ್ಸ್ ನಲ್ಲಿ 20 (ಇಪ್ಪತ್ತು) ಎಂದು ಸಿಗುತ್ತದೆ. |
05:10 | ವೇರಿಯೆಬಲ್ 'y' ಯನ್ನು ‘ಬೈನರಿ’ ರೂಪಕ್ಕೆ ಪರಿವರ್ತಿಸಲು, 'to_s' ಮೆಥಡ್ ನಲ್ಲಿ ‘ನಂಬರ್ ಬೇಸ್’ ಅನ್ನು 2 ಎಂದು ಕೊಡಿ. |
05:18 | ಹಿಂದಿನ ಕಮಾಂಡನ್ನು ಪಡೆಯಲು, ‘ಅಪ್-ಆರೋ’ ಕೀಯನ್ನು ಒತ್ತಿ. |
05:22 | ಹೀಗೆ ಟೈಪ್ ಮಾಡಿ: ‘opening bracket 2 closing bracket’ ಮತ್ತು 'Enter' ಅನ್ನು ಒತ್ತಿ. |
05:29 | ನಮಗೆ ಔಟ್ಪುಟ್, ‘ಬೈನರಿ’ ರೂಪದಲ್ಲಿ ಸಿಗುತ್ತದೆ. |
05:33 | ಹೀಗೆಯೇ, ನೀವು ‘ನಂಬರ್ ಬೇಸ್’ಅನ್ನು 8 ಅಥವಾ 16 ಕ್ಕೆ ಬದಲಾಯಿಸಿ, |
05:39 | ವೇರಿಯೆಬಲ್ 'y' ಅನ್ನು ‘ಆಕ್ಟಲ್’ (octal) ಅಥವಾ ‘ಹೆಕ್ಸಾಡೆಸಿಮಲ್’ (hexadecimal) ರೂಪಕ್ಕೆ ಪರಿವರ್ತಿಸಬಹುದು. |
05:44 | ನಾವು ನಮ್ಮ ಸ್ಲೈಡ್ ಗೆ ಹಿಂದಿರುಗೋಣ. |
05:47 | 'ವೇರಿಯೆಬಲ್ ಸ್ಕೋಪ್' ಎಂದರೇನು ಎಂಬುದನ್ನು ಈಗ ನಾವು ತಿಳಿದುಕೊಳ್ಳೋಣ. |
05:51 | ಯಾವುದೇ ಒಂದು ವೇರಿಯೆಬಲ್, ಪ್ರೊಗ್ರಾಂನ ಯಾವ ಭಾಗದಲ್ಲಿ ಲಭ್ಯವಿದೆ ಎಂಬುದನ್ನು 'ಸ್ಕೋಪ್', ಡಿಫೈನ್ (ವ್ಯಾಖ್ಯಾನ) ಮಾಡುತ್ತದೆ. |
05:56 | 'ರೂಬಿ', ನಾಲ್ಕು ಪ್ರಕಾರದ ‘ವೇರಿಯೆಬಲ್ ಸ್ಕೋಪ್’ಗಳನ್ನು ಹೊಂದಿದೆ: |
06:00 | * ಲೋಕಲ್(local) |
06:01 | * ಗ್ಲೋಬಲ್ (global) |
06:02 | * ಇನ್ಸ್ಟನ್ಸ್ (instance) ಮತ್ತು |
06:04 | * ಕ್ಲಾಸ್ (class). |
06:06 | ಪ್ರತಿಯೊಂದು ‘ವೇರಿಯೆಬಲ್ ಟೈಪ್’ಅನ್ನು, ವೇರಿಯೆಬಲ್ ನ ಹೆಸರಿನ ಆರಂಭದಲ್ಲಿ ಒಂದು ವಿಶೇಷ ಅಕ್ಷರವನ್ನು ಬಳಸಿ ಡಿಕ್ಲೇರ್ ಮಾಡಲಾಗುವುದು. |
06:14 | '$', ‘ಗ್ಲೋಬಲ್ ವೇರಿಯೆಬಲ್’ಅನ್ನು (global variable) ಪ್ರತಿನಿಧಿಸುತ್ತದೆ. |
06:18 | ಸಣ್ಣ ಅಕ್ಷರಗಳು ಮತ್ತು ‘ಅಂಡರ್ಸ್ಕೋರ್’, ‘ಲೋಕಲ್ ವೇರಿಯೆಬಲ್’ಅನ್ನು (local variable) ಪ್ರತಿನಿಧಿಸುತ್ತವೆ. |
06:25 | '@', ಒಂದು ‘ಇನ್ಸ್ಟನ್ಸ್ ವೇರಿಯೆಬಲ್’ಅನ್ನು (instance variable) ಪ್ರತಿನಿಧಿಸುತ್ತದೆ. |
06:29 | ಎರಡು '@@' ಚಿಹ್ನೆಗಳು, ‘ಕ್ಲಾಸ್ ವೇರಿಯೆಬಲ್’ಅನ್ನು (class variable) ಪ್ರತಿನಿಧಿಸುತ್ತವೆ. |
06:33 | ದೊಡ್ಡಕ್ಷರಗಳು ‘ಕಾನ್ಸ್ಟಂಟ್’ಅನ್ನು (constant) ಪ್ರತಿನಿಧಿಸುತ್ತವೆ. |
06:37 | ಇದರ ಬಗ್ಗೆ ಬೇರೊಂದು ಟ್ಯುಟೋರಿಯಲ್ ನಲ್ಲಿ ನಾವು ವಿವರವಾಗಿ ಕಲಿಯುವೆವು. |
06:42 | ನಾವು ಈ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ. ಸಂಕ್ಷಿಪ್ತವಾಗಿ, |
06:48 | ಈ ಟ್ಯುಟೋರಿಯಲ್ ನಲ್ಲಿ- |
06:51 | * ‘ವೇರಿಯೆಬಲ್’ಅನ್ನು ಡಿಕ್ಲೇರ್ ಮಾಡಲು, ಉದಾ: var1=10 |
06:56 | * 'to_f, to_s' ಮೆಥಡ್ ಗಳನ್ನು ಬಳಸಿ, ವೇರಿಯೆಬಲ್ ನ ಪ್ರಕಾರವನ್ನು (type) ಬದಲಾಯಿಸಲು ಮತ್ತು |
07:04 | * ವಿವಿಧ ವೇರಿಯೆಬಲ್ ಸ್ಕೋಪ್ ಗಳನ್ನು ನಾವು ಕಲಿತಿದ್ದೇವೆ. |
07:06 | ಒಂದು ಅಸೈನ್ಮೆಂಟ್ - |
07:08 | ಒಂದು ‘ವೇರಿಯೆಬಲ್’ಅನ್ನು ಡಿಕ್ಲೇರ್ ಮಾಡಿ ಮತ್ತು ಅದನ್ನು ‘ಆಕ್ಟಲ್’ (octal) ಹಾಗೂ ‘ಹೆಕ್ಸಾಡೆಸಿಮಲ್’ (hexadecimal) ರೂಪಕ್ಕೆ ಪರಿವರ್ತಿಸಿ. |
07:14 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
07:17 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
07:20 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
07:24 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: |
07:27 | * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
07:30 | * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
07:34 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ.contact@spoken-tutorial.org' |
07:41 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
07:45 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
07:51 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ. |
07:57 | IIT Bombay ಯಿಂದ, 'ಸ್ಕ್ರಿಪ್ಟ್'ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ . ವಂದನೆಗಳು. |