Ruby/C2/Ruby-Methods/Kannada

From Script | Spoken-Tutorial
Jump to: navigation, search
Time Narration
00:01 Ruby Methods ಎಂಬ Spoken Tutorialಗೆ ನಿಮಗೆ ಸ್ವಾಗತ.
00:05 ಈ ಟ್ಯುಟೋರಿಯಲ್ ನಲ್ಲಿ ನಾವು,
00:07 * ’method’ (ಮೆಥಡ್) ಎಂದರೇನು?
00:09 * 'method'ಗಾಗಿ ಸಿಂಟ್ಯಾಕ್ಸ್ ಇವುಗಳನ್ನು ಕಲಿಯುವೆವು ಮತ್ತು
00:11 ನಾವು ಕೆಲವು ಉದಾಹರಣೆಗಳನ್ನು ನೋಡುವೆವು.
00:13 ಇಲ್ಲಿ ನಾವು:

Ubuntu Linux ಆವೃತ್ತಿ 12.04 Ruby 1.9.3 ಇವುಗಳನ್ನು ಬಳಸುತ್ತಿದ್ದೇವೆ.

00:21 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, 'Linux' ನಲ್ಲಿ ‘ಟರ್ಮಿನಲ್’ ಮತ್ತು ’ಟೆಕ್ಸ್ಟ್ ಎಡಿಟರ್’ ಅನ್ನು ಉಪಯೋಗಿಸುವುದನ್ನು ನೀವು ತಿಳಿದಿರಬೇಕು.
00:28 ನಾವು ಈಗ 'ಮೆಥಡ್'ಗಳ (method) ಪರಿಚಯದೊಂದಿಗೆ ಆರಂಭಿಸೋಣ.
00:31 'ಮೆಥಡ್', ಒಂದು ನಿರ್ದಿಷ್ಟ ಕೆಲಸವನ್ನು ಎಕ್ಸಿಕ್ಯೂಟ್ ಮಾಡುವ ಸ್ವಪರ್ಯಾಪ್ತ ಪ್ರೊಗ್ರಾಂ ಆಗಿದೆ.
00:37 'ರೂಬಿ ಮೆಥಡ್', ಬೇರೆ ಯಾವುದೇ ಪ್ರೊಗ್ರಾಮಿಂಗ್ ಭಾಷೆಯಲ್ಲಿಯ 'ಫಂಕ್ಷನ್' ಗಳ ಹಾಗೆಯೇ ಇರುತ್ತದೆ.
00:42 'ಮೆಥಡ್ ನೇಮ್', (ಮೆಥಡ್ ನ ಹೆಸರು) ಸಣ್ಣಕ್ಷರದೊಂದಿಗೆ ಆರಂಭವಾಗಬೇಕು.
00:45 'ಮೆಥಡ್'ಗಳನ್ನು ’ಕಾಲ್’ ಮಾಡುವ ಮೊದಲು ಅವುಗಳನ್ನು ಡಿಫೈನ್ ಮಾಡಿರಬೇಕು.
00:49 ’ಮೆಥಡ್'ಗಾಗಿ ನಾವು ಸಿಂಟ್ಯಾಕ್ಸ್ ಅನ್ನು ನೋಡೋಣ.
00:52 ’ಮೆಥಡ್’ಗಳನ್ನು, ’ಕೀವರ್ಡ್’ “def” ಹಾಗೂ ಆನಂತರ ‘ಮೆಥಡ್ ನೇಮ್’ಅನ್ನು ಬಳಸಿ ಡಿಫೈನ್ ಮಾಡಲಾಗುವುದು.
00:57 arguments (ಆರ್ಗ್ಯೂಮೆಂಟ್ ಗಳು), ಪ್ರೊಸೆಸ್ ಮಾಡಲು ‘ಮೆಥಡ್’ಗೆ ಪಾಸ್ ಮಾಡಲಾದ ವ್ಯಾಲ್ಯೂ ಗಳನ್ನು ಸೂಚಿಸುತ್ತವೆ.
01:02 ruby code ವಿಭಾಗವು, ‘ಮೆಥಡ್’ನ ’ಪ್ರೊಸೆಸಿಂಗ್’ ಮಾಡುವ ಭಾಗವನ್ನು ಪ್ರತಿನಿಧಿಸುತ್ತದೆ.
01:09 ‘ಮೆಥಡ್’ನ ಮುಖ್ಯಭಾಗವು, ಮೇಲ್ಗಡೆ ಈ ವ್ಯಾಖ್ಯಾನ (definition) ಮತ್ತು ಕೆಳಗೆ "end" ಶಬ್ದ ಇವುಗಳ ನಡುವೆ ಇರುತ್ತದೆ.
01:16 ಇದು, 'ಆರ್ಗ್ಯೂಮೆಂಟ್'ಗಳನ್ನು ಹೊಂದಿದ ‘ಮೆಥಡ್’ ಎಂದು ಕರೆಯಲ್ಪಡುತ್ತದೆ.
01:19 'ಮೆಥಡ್'ಗಾಗಿ ಇನ್ನೊಂದು ಸಿಂಟ್ಯಾಕ್ಸ್ ಹೀಗಿದೆ:
01:23 ಕೀವರ್ಡ್ "def", ಹಾಗೂ ಆನಂತರ ‘ಮೆಥಡ್ ನೇಮ್’ ಮತ್ತು ಒಂದು ಖಾಲಿ 'ಆರ್ಗ್ಯೂಮೆಂಟ್ ಲಿಸ್ಟ್'.
01:28 ‘ಮೆಥಡ್’ನ ಮುಖ್ಯಭಾಗವನ್ನು ಪ್ರತಿನಿಧಿಸುವ Ruby codeನ ವಿಭಾಗ.
01:32 ಮತ್ತು, ‘ಮೆಥಡ್’ನ ಕೊನೆಯನ್ನು ಗುರುತಿಸುವ "end" ಎಂಬ ಶಬ್ದ.
01:36 ಇದು, 'ಆರ್ಗ್ಯೂಮೆಂಟ್'ಗಳಿಲ್ಲದ ‘ಮೆಥಡ್’ ಎಂದು ಕರೆಯಲ್ಪಡುತ್ತದೆ.
01:39 ‘ಮೆಥಡ್’ಅನ್ನು ಹೇಗೆ ಉಪಯೋಗಿಸುವುದೆಂದು ನೋಡೋಣ.
01:42 ನಾನು gedit ಎಡಿಟರ್ ನಲ್ಲಿ, ಈಗಾಗಲೇ ಒಂದು ಪ್ರೊಗ್ರಾಮ್ ಅನ್ನು ಟೈಪ್ ಮಾಡಿದ್ದೇನೆ ಮತ್ತು
01:46 ಅದನ್ನು ಓಪನ್ ಮಾಡುತ್ತೇನೆ.
01:48 ದಯವಿಟ್ಟು ಗಮನಿಸಿ- ನಮ್ಮ ಫೈಲ್ ನ ಹೆಸರು method hyphen without hyphen argument dot rb ಎಂದು ಆಗಿದೆ.
01:55 ನಾನು rubyprogram ಎಂಬ ಫೋಲ್ಡರ್ ನಲ್ಲಿ, ಫೈಲನ್ನು ಸೇವ್ ಮಾಡಿದ್ದೇನೆ.
01:59 ಈ ಪ್ರೊಗ್ರಾಂನಲ್ಲಿ, ನಾವು ‘ಮೆಥಡ್’ಅನ್ನು ಬಳಸಿ ಎರಡು ಸಂಖ್ಯೆಗಳ ಮೊತ್ತವನ್ನು ಕಂಡುಹಿಡಿಯುವೆವು.
02:03 ನಾವು ಪ್ರೊಗ್ರಾಂಅನ್ನು ನೋಡೋಣ.
02:05 ಇಲ್ಲಿ, ನಾವು 'a' ಎಂಬ ಗ್ಲೋಬಲ್ ವೇರಿಯೆಬಲ್ ಅನ್ನು ಡಿಕ್ಲೇರ್ ಮಾಡಿದ್ದೇವೆ.
02:08 ಮತ್ತು ಅದಕ್ಕೆ '5' ಅನ್ನು ಅಸೈನ್ ಮಾಡಿ ಅದನ್ನು ಇನಿಶಿಯಲೈಸ್ ಮಾಡಿದ್ದೇವೆ.
02:13 ’ಗ್ಲೋಬಲ್ ವೇರಿಯೆಬಲ್’ ಹೆಸರುಗಳು ಡಾಲರ್ ಚಿಹ್ನೆಯಿಂದ ಆರಂಭವಾಗುತ್ತವೆ ($).
02:17 ರೂಬಿ ಪ್ರೊಗ್ರಾಂನಲ್ಲಿ, ’ಗ್ಲೋಬಲ್ ವೇರಿಯೆಬಲ್’ಗಳನ್ನು ಎಲ್ಲಿ ಡಿಕ್ಲೇರ್ ಮಾಡಿದ್ದರೂ, ಅವುಗಳನ್ನು ಎಲ್ಲಿಂದ ಬೇಕಾದರೂ ಆಕ್ಸೆಸ್ ಮಾಡಬಹುದು.
02:25 ಇಲ್ಲಿ, ನಾವು add ಎಂಬ 'ಆರ್ಗ್ಯೂಮೆಂಟ್'ಗಳಿಲ್ಲದ ಒಂದು ’ಮೆಥಡ್’ಅನ್ನು ಡಿಕ್ಲೇರ್ ಮಾಡಿದ್ದೇವೆ.
02:31 ಇಲ್ಲಿ, ಎರಡನೆಯ ಸಂಖ್ಯೆಯನ್ನು ಎಂಟರ್ ಮಾಡಲು ನಾವು ’ಯೂಸರ್’ನಿಗೆ ಕೇಳುತ್ತೇವೆ.
02:35 ಯೂಸರ್, ವ್ಯಾಲ್ಯೂಅನ್ನು ಎಂಟರ್ ಮಾಡುವನು/ಳು.
02:38 'gets' ಮೆಥಡ್', ’ಸ್ಟ್ರಿಂಗ್’ ಫಾರ್ಮ್ಯಾಟ್ ನಲ್ಲಿ ಕನ್ಸೋಲ್ ನಿಂದ ಇನ್ಪುಟ್ ಅನ್ನು ಪಡೆಯುತ್ತದೆ.
02:44 ಹೀಗಾಗಿ, ನಾವು 'to_i' ಮೆಥಡ್ ಅನ್ನು ಬಳಸಿ ಇದನ್ನು ’ಇಂಟೀಜರ್’ಗೆ ಪರಿವರ್ತಿಸಬೇಕಾಗಿದೆ.
02:50 ನಂತರ ಪರಿವರ್ತಿತ ವ್ಯಾಲ್ಯೂಅನ್ನು ವೇರಿಯೇಬಲ್ 'b' ಯಲ್ಲಿ ಸ್ಟೋರ್ ಮಾಡಲಾಗುವುದು. 'b', ಒಂದು ಲೋಕಲ್ ವೇರಿಯೇಬಲ್ ಆಗಿದೆ.
02:56 ಯಾವ ‘ಮೆಥಡ್’ನ ಒಳಗೆ ಇದನ್ನು ಡಿಕ್ಲೇರ್ ಮಾಡಲಾಗಿದೆಯೋ ಆ ಮೆಥಡ್ ಗೆ ಮಾತ್ರ ಇದು ಲಭ್ಯವಿದೆ.
03:01 ಇಲ್ಲಿ, ನಾವು ಗ್ಲೋಬಲ್ ವೇರಿಯೇಬಲ್ 'a' ಮತ್ತು ವೇರಿಯೇಬಲ್ 'b' ಗಳ ವ್ಯಾಲ್ಯೂಗಳನ್ನು ಕೂಡಿಸುತ್ತೇವೆ.
03:07 ಆಮೇಲೆ, ಫಲಿತಾಂಶವನ್ನು 'sum' ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡಲಾಗುವುದು.
03:10 ನಂತರ 'sum' ಅನ್ನು ಪ್ರಿಂಟ್ ಮಾಡುತ್ತೇವೆ.
03:13 ಇದು, ’ಸ್ಟ್ರಿಂಗ್’ನ ಒಳಗೆ ಒಂದು ವೇರಿಯೇಬಲ್ ಅನ್ನು ಸೇರಿಸುವ ವಿಧಾನವನ್ನು ತೋರಿಸುತ್ತದೆ.
03:18 ಇಲ್ಲಿ, 'sum' ನಲ್ಲಿ ಇರುವ ವ್ಯಾಲ್ಯೂಅನ್ನು ’ಸ್ಟ್ರಿಂಗ್’ನ ರೂಪದಲ್ಲಿ ರಿಟರ್ನ್ ಮಾಡಲಾಗುವುದು ಮತ್ತು ಹೊರಗಿನ ’ಸ್ಟ್ರಿಂಗ್’ನಲ್ಲಿ ಬದಲಿಯಾಗಿ ಸೇರಿಸಲಾಗುವುದು.
03:25 'end', ಮೆಥಡ್ ನ ಕೊನೆಯನ್ನು ಗುರುತಿಸುವುದು.
03:28 ಮೆಥಡ್ ನಲ್ಲಿ ಎರಡು ಪ್ರಕಾರಗಳಿವೆ.
03:31 'ಯೂಸರ್ ಡಿಫೈನ್ಡ್ ಮೆಥಡ್' (User-defined method) – ಎಂದರೆ ನಮ್ಮ 'add' ಮೆಥಡ್.
03:35 'ಪ್ರಿ ಡಿಫೈನ್ಡ್ ಮೆಥಡ್' (Pre-defined method)- ಎಂದರೆ 'print', 'gets' ಮತ್ತು 'to_i' ಎಂಬ ಮೆಥಡ್ ಗಳು.
03:42 ಇಲ್ಲಿ, ನಾವು ನಮ್ಮ add ಮೆಥಡ್ ಅನ್ನು ’ಕಾಲ್’ ಮಾಡುತ್ತೇವೆ.
03:45 ಸಂಕಲನ ಕ್ರಿಯೆಯನ್ನು ಮಾಡಲಾಗುವುದು ಮತ್ತು ಫಲಿತಾಂಶವನ್ನು ಪ್ರಿಂಟ್ ಮಾಡಲಾಗುವುದು.
03:50 ಈಗ, ನಾವು Save ಬಟನ್ ನ ಮೇಲೆ ಕ್ಲಿಕ್ ಮಾಡೋಣ.
03:53 ಮೊದಲೇ ಹೇಳಿದಂತೆ, ಪ್ರೊಗ್ರಾಂಅನ್ನು rubyprogram ಎಂಬ ಫೋಲ್ಡರ್ ನಲ್ಲಿ ಸೇವ್ ಮಾಡಲಾಗುವುದು.
03:59 ಈಗ, ನಾವು ಪ್ರೊಗ್ರಾಂಅನ್ನು ಎಕ್ಸಿಕ್ಯೂಟ್ ಮಾಡೋಣ.
04:02 'Ctrl, Alt' ಮತ್ತು 'T' ಕೀಗಳನ್ನು ಒಟ್ಟಿಗೇ ಒತ್ತುವುದರ ಮೂಲಕ ಟರ್ಮಿನಲ್ ಅನ್ನು ಓಪನ್ ಮಾಡಿ.
04:07 ನಿಮ್ಮ ಸ್ಕ್ರೀನ್ ಮೇಲೆ ಒಂದು ’ಟರ್ಮಿನಲ್ ವಿಂಡೋ’ ಕಾಣಿಸಿಕೊಳ್ಳುತ್ತದೆ.
04:11 ಪ್ರೊಗ್ರಾಂಅನ್ನು ಎಕ್ಸಿಕ್ಯೂಟ್ ಮಾಡಲು, ನಾವು rubyprogram ಎಂಬ ಸಬ್-ಡಿರೆಕ್ಟರೀಗೆ ಹೋಗಬೇಕು.
04:16 ಆದ್ದರಿಂದ, ನಾವು ಹೀಗೆ ಟೈಪ್ ಮಾಡೋಣ: 'cd' space Desktop/rubyprogram ಮತ್ತು 'Enter' ಅನ್ನು ಒತ್ತಿ.
04:26 ಈಗ, ಟೈಪ್ ಮಾಡಿ: ruby space ‘method’ hyphen 'without' hyphen 'argument dot rb' ಮತ್ತು 'Enter' ಅನ್ನು ಒತ್ತಿ.
04:40 “Enter the second number” ಎಂದು ತೋರಿಸಲಾಗುವುದು.
04:44 ನಾನು ವ್ಯಾಲ್ಯೂಅನ್ನು '4' ಎಂದು ಕೊಡುವೆನು. 4 ಅನ್ನು ಟೈಪ್ ಮಾಡಿ ಮತ್ತು ‘Enter’ ಅನ್ನು ಒತ್ತಿ.
04:48 ನಮಗೆ ಔಟ್ಪುಟ್ ಹೀಗೆ ಸಿಗುತ್ತದೆ: “Sum of two numbers 5 and 4 is 9”.
04:53 ಈಗ ನಾವು, ’ಆರ್ಗ್ಯೂಮೆಂಟ್'ಗಳನ್ನು ಹೊಂದಿದ ‘ಮೆಥಡ್’ನ ಒಂದು ಉದಾಹರಣೆಯನ್ನು ನೋಡೋಣ.
04:58 ನಾನು ಈಗಾಗಲೇ gedit ಎಡಿಟರ್ ನಲ್ಲಿ, ಈ ಪ್ರೊಗ್ರಾಂಅನ್ನು ಟೈಪ್ ಮಾಡಿದ್ದೇನೆ. ನಾನು ಅದನ್ನು ಓಪನ್ ಮಾಡುತ್ತೇನೆ.
05:03 ನಮ್ಮ ಫೈಲ್ ನ ಹೆಸರು method hyphen with hyphen argument dot rb ಎಂದು ಇರುವುದನ್ನು ದಯವಿಟ್ಟು ಗಮನಿಸಿ.
05:10 ನಾನು ಈ ಫೈಲನ್ನು ಸಹ rubyprogram ಎಂಬ ಫೋಲ್ಡರ್ ನಲ್ಲಿ ಸೇವ್ ಮಾಡಿದ್ದೇನೆ.
05:15 ನಾವು ಈ ಪ್ರೊಗ್ರಾಂಅನ್ನು ಅರ್ಥಮಾಡಿಕೊಳ್ಳೋಣ.
05:18 ಇಲ್ಲಿ, ನಾವು add ಎಂಬ ಒಂದು ‘ಮೆಥಡ್’ಅನ್ನು ಡಿಕ್ಲೇರ್ ಮಾಡಿದ್ದೇವೆ. a ಮತ್ತು b ಗಳು add ಮೆಥಡ್ ನ ಆರ್ಗ್ಯೂಮೆಂಟ್ ಗಳಾಗಿವೆ.
05:26 ಇಲ್ಲಿ, 'a' ಮತ್ತು 'b' ಯ ವ್ಯಾಲ್ಯೂಗಳು ಕೂಡಿಸಲ್ಪಟ್ಟಿವೆ
05:29 ಮತ್ತು ಮೊತ್ತವನ್ನು (sum) ’ಮೆಥಡ್ ಕಾಲ್’ಗೆ ರಿಟರ್ನ್ ಮಾಡಲಾಗುತ್ತದೆ.
05:31 'end', ಮೆಥಡ್ ನ ಕೊನೆಯನ್ನು ಗುರುತಿಸುತ್ತದೆ.
05:35 ಇಲ್ಲಿ, ನಾವು ಇನ್ಪುಟ್ ಗಾಗಿ ಯೂಸರ್ ಅನ್ನು ಕೇಳುತ್ತಿದ್ದೇವೆ.
05:38 ಯೂಸರ್, a ಮತ್ತು b ಗಳ ವ್ಯಾಲ್ಯೂಗಳನ್ನು ಎಂಟರ್ ಮಾಡುವನು/ಳು.
05:41 ಈ ವ್ಯಾಲ್ಯೂಗಳನ್ನು ಕ್ರಮವಾಗಿ a ಮತ್ತು b ವೇರಿಯೆಬಲ್ ಗಳಲ್ಲಿ, ಸ್ಟೋರ್ ಮಾಡಲಾಗುವುದು.
05:46 ಇಲ್ಲಿ, ನಾವು add ಎಂಬ ‘ಮೆಥಡ್’ಅನ್ನು ಕಾಲ್ ಮಾಡುತ್ತೇವೆ.
05:49 ಆಮೇಲೆ ನಾವು a ಮತ್ತು b ಎಂಬ ಆರ್ಗ್ಯೂಮೆಂಟ್ ಗಳನ್ನು ಪಾಸ್ ಮಾಡುತ್ತೇವೆ.
05:52 ಸಂಕಲನವನ್ನು ಮಾಡಿದ ನಂತರ, 'add' ಎಂಬ ‘ಮೆಥಡ್’ನಿಂದ ರಿಟರ್ನ್ ಮಾಡಲಾದ ವ್ಯಾಲ್ಯೂಅನ್ನು 'c' ಯಲ್ಲಿ ಸ್ಟೋರ್ ಮಾಡಲಾಗುವುದು.
05:59 ಇಲ್ಲಿ, ನಾವು 'c' ಯಲ್ಲಿ ಸ್ಟೋರ್ ಮಾಡಲಾದ ಮೊತ್ತವನ್ನು ಪ್ರಿಂಟ್ ಮಾಡುತ್ತೇವೆ.
06:03 ಈ ಕೋಡ್ ಅನ್ನು ನಾವು ಎಕ್ಸಿಕ್ಯೂಟ್ ಮಾಡೋಣ. ಟರ್ಮಿನಲ್ ಗೆ ಹೋಗಿ.
06:07 ನಾವು ಮೊದಲು ಟರ್ಮಿನಲ್ ಅನ್ನು ತೆರವು ಮಾಡೋಣ. clear ಎಂದು ಟೈಪ್ ಮಾಡಿ ‘Enter’ ಅನ್ನು ಒತ್ತಿ.
06:14 ನಾವು ಈಗಾಗಲೇ rubyprogram ಎಂಬ ಸಬ್-ಡಿರೆಕ್ಟರೀಯಲ್ಲಿ ಇದ್ದೇವೆ.
06:17 ಈಗ, ಹಿಂದಿನ ಕಮಾಂಡನ್ನು ಪಡೆಯಲು, ಅಪ್-ಆರೋ ಕೀಯನ್ನು ಎರಡು ಸಲ ಒತ್ತಿ.
06:22 'method hyphen without hyphen arguments dot rb' ಎಂಬುದನ್ನು 'method hyphen with hyphen arguments dot rb' ಯಿಂದ ಬದಲಾಯಿಸಿ.
06:32 ಮತ್ತು ‘Enter’ ಅನ್ನು ಒತ್ತಿ.
06:35 Enter the values of a and b ಎಂದು ತೋರಿಸಲಾಗುವುದು.
06:38 ನಾನು '8' ಮತ್ತು'9' ಗಳನ್ನು ಎಂಟರ್ ಮಾಡುವೆನು.
06:41 8 ಅನ್ನು ಟೈಪ್ ಮಾಡಿ ಮತ್ತು ‘Enter’ ಅನ್ನು ಒತ್ತಿ.
06:43 9 ಅನ್ನು ಟೈಪ್ ಮಾಡಿ ಮತ್ತು ‘Enter’ ಅನ್ನು ಒತ್ತಿ.
06:46 ನಮಗೆ ಔಟ್ಪುಟ್ ಹೀಗೆ ಸಿಗುತ್ತದೆ:
06:47 ”Sum of two numbers 8 and 9 is 17”.
06:52 ಈಗ, ನಾನು Ruby ಮೆಥಡ್ ನ ಒಂದು ಮುಖ್ಯ ವೈಶಿಷ್ಟ್ಯವನ್ನು ನಿಮಗೆ ತೋರಿಸುವೆನು.
06:56 ನಾವು ಟೆಕ್ಸ್ಟ್-ಎಡಿಟರ್ ನಲ್ಲಿಯ ಪ್ರೊಗ್ರಾಂಗೆ ಹಿಂದಿರುಗೋಣ.
06:59 'return' ಎಂಬ ಕೀವರ್ಡ್ ಅನ್ನು ಡಿಲೀಟ್ ಮಾಡಿ.
07:02 ಈಗ 'Save' ಬಟನ್ ನ ಮೇಲೆ ಕ್ಲಿಕ್ ಮಾಡಿ.
07:05 ನಾವು ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡೋಣ. ಟರ್ಮಿನಲ್ ಗೆ ಹೋಗಿ.
07:09 ಹಿಂದಿನ ಕಮಾಂಡ್ ಅನ್ನು ಪಡೆಯಲು, ಅಪ್-ಆರೋ ಕೀಯನ್ನು ಒತ್ತಿ ಮತ್ತು ‘Enter’ ಅನ್ನು ಒತ್ತಿ.
07:14 “Enter the values of a and b” ಎಂದು ತೋರಿಸಲಾಗುವುದು.
07:18 ನಾನು 10 ಮತ್ತು 15 ಅನ್ನು ಎಂಟರ್ ಮಾಡುವೆನು.
07:21 10 ಅನ್ನು ಟೈಪ್ ಮಾಡಿ, ‘Enter ಒತ್ತಿ. 15 ಅನ್ನು ಟೈಪ್ ಮಾಡಿ ಮತ್ತು ‘Enter’ ಅನ್ನು ಒತ್ತಿ.
07:27 ನಮಗೆ ಔಟ್ಪುಟ್ ಹೀಗೆ ಸಿಗುತ್ತದೆ:
07:29 “Sum of two numbers 10 and 15 is 25”.
07:33 return ಎಂಬ ಕೀವರ್ಡ್ ಅನ್ನು ಡಿಲೀಟ್ ಮಾಡಿದರೂ ಸಹ ಪ್ರೊಗ್ರಾಂ, ಯಾವುದೇ ’ಎರರ್’ಗಳಿಲ್ಲದೆ ಎಕ್ಸಿಕ್ಯೂಟ್ ಮಾಡಲ್ಪಟ್ಟಿದೆ ಎಂಬುದನ್ನು ನಾವು ನೋಡಬಹುದು.
07:40 ಏಕೆಂದರೆ, ರೂಬಿ, ಮೆಥಡ್ ನಲ್ಲಿ ಕಂಡುಹಿಡಿಯಲಾದ ವ್ಯಾಲ್ಯೂ ಅನ್ನು ತನ್ನಷ್ಟಕ್ಕೆ ತಾನೇ ’ರಿಟರ್ನ್’ ಮಾಡುತ್ತದೆ.
07:46 ರೂಬಿಯ ‘ಮೆಥಡ್’ನಲ್ಲಿ, ಕೀವರ್ಡ್ 'return' ಐಚ್ಛಿಕ (optional) ವಾಗಿದೆ.
07:50 ಇಲ್ಲಿಗೆ, ನಾವು ಸ್ಪೋಕನ್ ಈ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ.
07:53 ನಾವು ಸ್ಲೈಡ್ ಗಳಿಗೆ ಹಿಂದಿರುಗೋಣ.
07:55 ಸಂಕ್ಷಿಪ್ತವಾಗಿ,
07:57 ಈ ಟ್ಯುಟೋರಿಯಲ್ ನಲ್ಲಿ, ನಾವು:
07:59 * ಮೆಥಡ್ ಗಳ ಬಗ್ಗೆ
08:01 * ಆರ್ಗ್ಯೂಮೆಂಟ್ ಗಳಿಲ್ಲದ ‘ಮೆಥಡ್’
08:04 * ಮತ್ತು ಆರ್ಗ್ಯೂಮೆಂಟ್ ಗಳನ್ನು ಹೊಂದಿದ ‘ಮೆಥಡ್’ ಗಳಿಗಾಗಿ ಸಿಂಟ್ಯಾಕ್ಸ್
08:06 * ‘ಮೆಥಡ್’ನಿಂದ ವ್ಯಾಲ್ಯೂಅನ್ನು ರಿಟರ್ನ್ ಮಾಡುವುದು, ಇವುಗಳನ್ನು ಕಲಿತಿದ್ದೇವೆ.
08:08 ಒಂದು ಅಸೈನ್ಮೆಂಟ್ -
08:10 ಮೆಥಡ್ ಅನ್ನು ಬಳಸಿ ಮತ್ತು
08:13 ಯೂಸರ್ ನಿಂದ ಇನ್ಪುಟ್ ಅನ್ನು ಪಡೆದು
08:14 ಒಂದು ಚೌಕದ ವಿಸ್ತೀರ್ಣವನ್ನು ಕಂಡುಹಿಡಿಯಲು ಪ್ರೊಗ್ರಾಂಅನ್ನು ಬರೆಯಿರಿ.
08:17 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
08:20 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
08:23 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
08:28 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
08:30 * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
08:33 * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
08:36 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:contact@spoken-tutorial.org
08:44 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
08:49 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
08:55 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ.
09:00 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ ಭಟ್ಟ ಉಪ್ಪಿನಪಟ್ಟಣ
09:04 ವಂದನೆಗಳು.

Contributors and Content Editors

NaveenBhat, Pratik kamble, Sandhya.np14