Ruby/C2/Control-Statements/Kannada

From Script | Spoken-Tutorial
Jump to: navigation, search
Time Narration
00:01 Ruby ಯಲ್ಲಿ, Control Statements (ಕಂಟ್ರೋಲ್ ಸ್ಟೇಟ್ಮೆಂಟ್ಸ್) ಎಂಬ Spoken Tutorial ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ, ನಾವು:
00:08 * 'if' (ಇಫ್)ಸ್ಟೇಟ್ಮೆಂಟ್
00:09 * 'elsif' (ಎಲ್ಸಿಫ್) ಸ್ಟೇಟ್ಮೆಂಟ್
00:11 * 'else' (ಎಲ್ಸ್)
00:12 * 'case' (ಕೇಸ್) ಸ್ಟೇಟ್ಮೆಂಟ್, ಇವುಗಳನ್ನು ಬಳಸಲು ಕಲಿಯುವೆವು.
00:14 ಇಲ್ಲಿ ನಾವು:
00:15 * Ubuntu ಆವೃತ್ತಿ 12.04
00:18 * Ruby 1.9.3 ಇವುಗಳನ್ನು ಬಳಸುತ್ತಿದ್ದೇವೆ.
00:21 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು: * 'ಇಂಟರ್ನೆಟ್'ನ ಸಂಪರ್ಕವನ್ನು ಪಡೆದಿರಬೇಕು.
00:24 * 'Linux' ಕಮಾಂಡ್ ಗಳು, ‘ಟರ್ಮಿನಲ್’ ಮತ್ತು 'ಟೆಕ್ಸ್ಟ್ ಎಡಿಟರ್' ಗಳನ್ನು ತಿಳಿದಿರಬೇಕು.
00:30 ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೆಟ್ಟಿಕೊಡಿ.
00:34 ಈಮೊದಲು ನಾವು “ttt” ಎಂಬ ಡಿರೆಕ್ಟರೀಯನ್ನು ಕ್ರಿಯೇಟ್ ಮಾಡಿದ್ದೆವು ಎಂಬುದನ್ನು ನೆನಪಿಸಿಕೊಳ್ಳಿ.
00:38 ನಾವು ಆ ಡಿರೆಕ್ಟರೀಗೆ ಹೋಗೋಣ.
00:41 ಆಮೇಲೆ, 'ruby hyphen tutorial' 'control hyphen statements' ಗೆ ಹೋಗೋಣ.
00:47 ಈಗ ನಾವು ಅದೇ ಫೋಲ್ಡರ್ ನಲ್ಲಿ ಇರುವುದರಿಂದ ಮುಂದೆ ನಡೆಯೋಣ.
00:52 Ruby ಯಲ್ಲಿ, 'if' ಸ್ಟೇಟ್ಮೆಂಟ್ ನ ಸಿಂಟ್ಯಾಕ್ಸ್ ಈಕೆಳಗಿನಂತಿದೆ:
00:56 'if' 'ಕಂಡೀಶನ್'
00:58 'ರೂಬಿ ಕೋಡ್'
00:59 'end'
01:01 ನಾವು ಒಂದು ಉದಾಹರಣೆಯನ್ನು ನೋಡೋಣ.
01:03 ಪ್ರಾಥಮಿಕ ಹಂತದ (basic level) Ruby tutorials ನಲ್ಲಿ ತೋರಿಸಿದಂತೆ, 'gedit' ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ.
01:08 ಇದನ್ನು 'if hyphen statement dot rb' ಎಂದು ಹೆಸರಿಸಿ.
01:12 ನನ್ನ ಹತ್ತಿರ 'if ಸ್ಟೇಟ್ಮೆಂಟ್'ನ ಒಂದು ಉದಾಹರಣೆ ಇದೆ.
01:15 ನಾವು ಮುಂದುವರಿಯುತ್ತಿದ್ದಂತೆ, ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ (pause) ಕೋಡ್ ಅನ್ನು ಟೈಪ್ ಮಾಡಬಹುದು.
01:19 ಈ ಉದಾಹರಣೆಯಲ್ಲಿ, ನಾನು ಒಂದು 'if ಸ್ಟೇಟ್ಮೆಂಟ್'ಅನ್ನು ಡಿಕ್ಲೇರ್ ಮಾಡಿದ್ದೇನೆ.
01:23 ಮೊದಲು, ನಾನು 'my_num' ಎಂಬ ಒಂದು 'ಲೋಕಲ್ ವೇರಿಯೆಬಲ್'ಅನ್ನು ಡಿಕ್ಲೇರ್ ಮಾಡಿ, ಅದಕ್ಕೆ 2345 ಎಂದು ವ್ಯಾಲ್ಯೂಅನ್ನು ಅಸೈನ್ ಮಾಡುತ್ತೇನೆ.
01:31 ಆಮೇಲೆ ಒಂದು 'if ಸ್ಟೇಟ್ಮೆಂಟ್'ಅನ್ನು ಡಿಕ್ಲೇರ್ ಮಾಡುತ್ತೇನೆ.
01:34 'if ಸ್ಟೇಟ್ಮೆಂಟ್'ನ ಒಳಗಡೆ ಡಿಕ್ಲೇರ್ ಮಾಡಲಾದ 'puts' ಮೆಥಡ್, ಔಟ್ಪುಟ್ ಅನ್ನು ತೋರಿಸುವುದು.
01:39 'if ಸ್ಟೇಟ್ಮೆಂಟ್', 'my_num'ನ ವ್ಯಾಲ್ಯೂ, 0 (ಸೊನ್ನೆ)ಗಿಂತ ಹೆಚ್ಚಾಗಿದೆಯೋ ಎಂಬುದನ್ನು ಪರೀಕ್ಷಿಸುವುದು.
01:43 ಒಂದುವೇಳೆ ಹೆಚ್ಚು ಇದ್ದರೆ, ಇದು ನಿಗದಿತ 'ಸ್ಟ್ರಿಂಗ್' ಅನ್ನು ಪ್ರಿಂಟ್ ಮಾಡುವುದು.
01:47 ಟರ್ಮಿನಲ್ ಗೆ ಬದಲಾಯಿಸೋಣ ಮತ್ತು ಹೀಗೆ ಟೈಪ್ ಮಾಡೋಣ:
01:51 'ruby space if hyphen statement dot rb'
01:57 ಔಟ್ಪುಟ್, “The value of my_num is greater than 0” ಎಂದು ತೋರಿಸುವುದು.
02:02 'if ಕಂಡೀಶನ್', 'true' ಎಂದು ಹಿಂದಿರುಗಿಸಿದೆ ಎಂಬುದನ್ನು ಈ ಔಟ್ಪುಟ್, ಧೃಢಪಡಿಸುತ್ತದೆ.
02:07 ಈಗ ನಿಮಗೆ 'ರೂಬಿ'ಯಲ್ಲಿ, ನಿಮ್ಮ ಸ್ವಂತದ 'if ಸ್ಟೇಟ್ಮೆಂಟ್'ಅನ್ನು ಬರೆಯಲು ಸಾಧ್ಯವಾಗಬೇಕು.
02:12 ನಂತರ, ನಾವು 'if-else' ಸ್ಟೇಟ್ಮೆಂಟ್ ಅನ್ನು ನೋಡೋಣ.
02:16 'else' ಅನ್ನು ಬಳಸಲು ಸಿಂಟ್ಯಾಕ್ಸ್ ಹೀಗಿದೆ:
02:18 'if' 'ಕಂಡೀಶನ್'
02:19 'ರೂಬಿ ಕೋಡ್'
02:20 'else'
02:21 'ರೂಬಿ ಕೋಡ್'
02:22 'end'
02:24 ನಾವು ಒಂದು ಉದಾಹರಣೆಯನ್ನು ನೋಡೋಣ.
02:26 ಪ್ರಾಥಮಿಕ ಹಂತದ Ruby tutorials ನಲ್ಲಿ ತೋರಿಸಿದಂತೆ, 'gedit'ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ.
02:30 ಅದನ್ನು 'if hyphen else hyphen statement dot rb' ಎಂದು ಹೆಸರಿಸಿ.
02:37 ನನ್ನ ಹತ್ತಿರ 'if-else' ಸ್ಟೇಟ್ಮೆಂಟ್ ನ ಒಂದು ಉದಾಹರಣೆಯಿದೆ.
02:40 ನಾವು ಇದರಲ್ಲಿ ಮುಂದುವರೆಯುತ್ತಿದ್ದಂತೆ, ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ (pause) ಕೋಡ್ ಅನ್ನು ಟೈಪ್ ಮಾಡಬಹುದು.
02:44 ಈ ಉದಾಹರಣೆಯಲ್ಲಿ, ನಾನು ಒಂದು 'if-else' ಸ್ಟೇಟ್ಮೆಂಟ್ ಅನ್ನು ಡಿಕ್ಲೇರ್ ಮಾಡಿದ್ದೇನೆ.
02:48 ಮೊದಲು, ನಾನು 'my_num' ಎಂಬ ಒಂದು ಲೋಕಲ್ ವೇರಿಯೆಬಲ್ ಅನ್ನು ಡಿಕ್ಲೇರ್ ಮಾಡಿ ಅದಕ್ಕೆ -1 ಅನ್ನು (ಮೈನಸ್ ಒಂದು) ಅಸೈನ್ ಮಾಡುತ್ತೇನೆ.
02:55 ಆಮೇಲೆ, ನಾನು ಒಂದು 'if ಸ್ಟೇಟ್ಮೆಂಟ್'ಅನ್ನು ಡಿಕ್ಲೇರ್ ಮಾಡುತ್ತೇನೆ.
02:58 ಈ 'if ಸ್ಟೇಟ್ಮೆಂಟ್', 'my_num' ಎಂಬುದರ ವ್ಯಾಲ್ಯೂ 0 (ಸೊನ್ನೆ) ಗಿಂತ ಹೆಚ್ಚಾಗಿದೆಯೋ ಎಂದು ಪರೀಕ್ಷಿಸುತ್ತದೆ.
03:03 ಹೆಚ್ಚಾಗಿದ್ದರೆ, ಅದು ನಿಗದಿತ ಸ್ಟ್ರಿಂಗ್ ಅನ್ನು ಪ್ರಿಂಟ್ ಮಾಡುವುದು.
03:06 ಇಲ್ಲದಿದ್ದರೆ, ಅದು 'else' ಸ್ಟೇಟ್ಮೆಂಟ್ ಗೆ ಹೋಗುವುದು
03:10 ಮತ್ತು ಅಲ್ಲಿ ನಿಗದಿಮಾಡಿದ 'ಸ್ಟ್ರಿಂಗ್' ಅನ್ನು ಪ್ರಿಂಟ್ ಮಾಡುವುದು.
03:13 ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ:
03:18 'ruby space if hyphen else hyphen statement dot rb'
03:26 ಮತ್ತು ಔಟ್ಪುಟ್ ಅನ್ನು ನೋಡೋಣ.
03:27 ಔಟ್ಪುಟ್ ಹೀಗೆ ತೋರಿಸುವುದು: “The value of my_num is lesser than 0”.
03:32 'else ಸ್ಟೇಟ್ಮೆಂಟ್', ಎಕ್ಸಿಕ್ಯೂಟ್ ಮಾಡಲ್ಪಟ್ಟಿದೆ ಎಂದು ಇದು ತೋರಿಸುತ್ತದೆ.
03:35 ಈಗ, ನಿಮಗೆ 'ರೂಬಿ'ಯಲ್ಲಿ ನಿಮ್ಮ ಸ್ವಂತದ 'if-else ಸ್ಟೇಟ್ಮೆಂಟ್'ಅನ್ನು ಬರೆಯಲು ಸಾಧ್ಯವಾಗಬೇಕು.
03:41 ಇನ್ನುಮುಂದೆ ನಾವು 'if-elsif ಸ್ಟೇಟ್ಮೆಂಟ್'ಅನ್ನು ನೋಡೋಣ.
03:45 'elsif' ಅನ್ನು ಬಳಸಲು ಸಿಂಟ್ಯಾಕ್ಸ್ ಹೀಗಿದೆ:
03:48 'if' 'ಕಂಡೀಶನ್', 'ರೂಬಿ ಕೋಡ್'
03:50 'elsif' 'ಕಂಡೀಶನ್', 'ರೂಬಿ ಕೋಡ್'
03:52 'else' 'ರೂಬಿ ಕೋಡ್'
03:54 'end'
03:55 ನಾವು ಒಂದು ಉದಾಹರಣೆಯನ್ನು ನೋಡೋಣ.
03:58 ಪ್ರಾಥಮಿಕ ಹಂತದ Ruby tutorials ನಲ್ಲಿ ತೋರಿಸಿದಂತೆ, 'gedit'ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ.
04:01 ಅದನ್ನು 'if hyphen elsif hyphen statement dot rb' ಎಂದು ಹೆಸರಿಸಿ.
04:07 ನನ್ನ ಹತ್ತಿರ 'if-elsif' ಸ್ಟೇಟ್ಮೆಂಟ್ ನ ಒಂದು ಉದಾಹರಣೆಯಿದೆ.
04:10 ನಾವು ಇದರಲ್ಲಿ ಮುಂದುವರೆಯುತ್ತಿದ್ದಂತೆ ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ (pause) ಕೋಡ್ ಅನ್ನು ಟೈಪ್ ಮಾಡಬಹುದು.
04:14 ಈ ಉದಾಹರಣೆಯಲ್ಲಿ, ನಾನು ಒಂದು 'if-elsif' ಸ್ಟೇಟ್ಮೆಂಟ್ ಅನ್ನು ಡಿಕ್ಲೇರ್ ಮಾಡಿದ್ದೇನೆ.
04:19 ಇಲ್ಲಿ ಸಹ, ನಾನು 'my_num' ಎಂಬ ಒಂದು ಲೋಕಲ್ ವೇರಿಯೆಬಲ್ ಅನ್ನು ಡಿಕ್ಲೇರ್ ಮಾಡಿ, ಅದಕ್ಕೆ -1 ಅನ್ನು (ಮೈನಸ್ ಒಂದು) ಅಸೈನ್ ಮಾಡಿದ್ದೇನೆ.
04:25 ಆಮೇಲೆ ಒಂದು 'if' ಸ್ಟೇಟ್ಮೆಂಟ್ ಅನ್ನು ಡಿಕ್ಲೇರ್ ಮಾಡುತ್ತೇನೆ.
04:28 ಈ 'if' ಸ್ಟೇಟ್ಮೆಂಟ್, 'my_num' ಎಂಬುದರ ವ್ಯಾಲ್ಯೂ 0 (ಸೊನ್ನೆ) ಗಿಂತ ಹೆಚ್ಚಾಗಿದೆಯೋ ಎಂದು ಪರೀಕ್ಷಿಸುವುದು.
04:32 ಅದು ಹೆಚ್ಚಾಗಿದ್ದರೆ, ಇದು ನಿಗದಿತ ಸ್ಟ್ರಿಂಗ್ ಅನ್ನು ಪ್ರಿಂಟ್ ಮಾಡುವುದು.
04:35 ಅದು 'true' ಎಂದು ಆಗಿಲ್ಲದಿದ್ದರೆ, ಇದು 'elsif' ವಿಭಾಗದಲ್ಲಿ ಹೋಗುವುದು.
04:39 ಅದು ಈಗ 'my_num' ಎಂಬುದರ ವ್ಯಾಲ್ಯೂ, -1 (ಮೈನಸ್ ಒಂದು) ಆಗಿದೆಯೋ ಎಂದು ಪರೀಕ್ಷಿಸುವುದು.
04:43 ಅದು 'true' ಎಂದು ಆಗಿದ್ದರೆ, ಅಲ್ಲಿ ನಿಗದಿಮಾಡಿದ ಸ್ಟ್ರಿಂಗ್ ಅನ್ನು ಪ್ರಿಂಟ್ ಮಾಡುವುದು.
04:46 ಒಂದುವೇಳೆ, 'my_num'ನ ವ್ಯಾಲ್ಯೂ, ಸೊನ್ನೆ(0)ಗಿಂತ ಹೆಚ್ಚಾಗಿಲ್ಲ, -1 ಕ್ಕೆ ಸಮವೂ ಆಗಿಲ್ಲ ಎಂದಾದರೆ, ಆಗ ಅದು 'else' ವಿಭಾಗಕ್ಕೆ ಹೋಗುವುದು.
04:54 ಆದರೆ, 'my_num = -1' ಇರುವುದರಿಂದ ಅದು 'else' ಬ್ಲಾಕ್ ಗೆ ಹೋಗುವುದಿಲ್ಲ
05:00 ಮತ್ತು ಅದು 'ಕಂಡೀಶನಲ್ ಸ್ಟೇಟ್ಮೆಂಟ್'ನಿಂದ ನಿರ್ಗಮಿಸುವುದು.
05:03 ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ.
05:07 'ruby space if hyphen elsif hyphen statement dot rb'
05:15 ಮತ್ತು ಔಟ್ಪುಟ್ ಅನ್ನು ನೋಡಿ.
05:17 ಔಟ್ಪುಟ್ ಹೀಗೆ ತೋರಿಸುವುದು: “The value of my_num is -1 and is lesser than 0”.
05:23 ನಾವು ನಮ್ಮ ಫೈಲ್ ಗೆ ಹಿಂದಿರುಗಿ 'my_num'ನ ವ್ಯಾಲ್ಯೂಅನ್ನು 5 ಎಂದು ಬದಲಾಯಿಸೋಣ.
05:29 ಕೋಡ್ ಅನ್ನು ಸೇವ್ ಮಾಡೋಣ ಮತ್ತು ಅದನ್ನು ಟರ್ಮಿನಲ್ ನ ಮೇಲೆ ಎಕ್ಸೀಕ್ಯೂಟ್ ಮಾಡೋಣ.
05:35 ಹೀಗೆ, ಈಗ ಅದು 'if' ಕಂಡೀಶನ್ ಅನ್ನು ಪೂರೈಸುತ್ತದೆ ಮತ್ತು ನಿಗದಿಪಡಿಸಿದ ಸ್ಟ್ರಿಂಗ್ ಅನ್ನು ಪ್ರಿಂಟ್ ಮಾಡಲಾಗುತ್ತದೆ.
05:42 "The value of 'my_num' is greater than 0".
05:45 ನಾವು ನಮ್ಮ ಫೈಲ್ ಗೆ ಹಿಂದಿರುಗಿ 'my_num'ನ ವ್ಯಾಲ್ಯೂಅನ್ನು -5 ಎಂದು ಬದಲಾಯಿಸೋಣ.
05:50 ಕೋಡ್ ಅನ್ನು ಸೇವ್ ಮಾಡೋಣ ಮತ್ತು ಅದನ್ನು ಟರ್ಮಿನಲ್ ನ ಮೇಲೆ ಎಕ್ಸೀಕ್ಯೂಟ್ ಮಾಡೋಣ.
05:55 ಈ ಸಂದರ್ಭದಲ್ಲಿ, ಅದು 'else' ಕಂಡೀಶನ್ ಅನ್ನು ಪೂರೈಸುತ್ತದೆ ಮತ್ತು 'else' ಬ್ಲಾಕ್ ನ ಒಳಗಿರುವ 'puts' ಸ್ಟೇಟ್ಮೆಂಟ್, ಎಕ್ಸೀಕ್ಯೂಟ್ ಮಾಡಲ್ಪಡುತ್ತದೆ.
06:03 ಈಗ, ನಿಮಗೆ 'ರೂಬಿ'ಯಲ್ಲಿ ನಿಮ್ಮ ಸ್ವಂತದ 'if-elsif ಸ್ಟೇಟ್ಮೆಂಟ್'ಅನ್ನು ಬರೆಯಲು ಸಾಧ್ಯವಾಗಬೇಕು.
06:08 ಇನ್ನುಮುಂದೆ, ನಾವು 'case ಸ್ಟೇಟ್ಮೆಂಟ್'ಅನ್ನು ನೋಡೋಣ.
06:12 'case ಸ್ಟೇಟ್ಮೆಂಟ್', ಒಂದು ನಿರ್ದಿಷ್ಟ ಆಯ್ಕೆಯನ್ನು ಆಧರಿಸಿದ 'ಕಂಟ್ರೋಲ್ ಫ್ಲೋ' ಸ್ಟೇಟ್ಮೆಂಟ್ ಆಗಿದೆ.
06:17 ನಾವು 'case ಸ್ಟೇಟ್ಮೆಂಟ್'ಅನ್ನು ಅರ್ಥಮಾಡಿಕೊಳ್ಳಲು, ಅದರ ಸಿಂಟ್ಯಾಕ್ಸ್ ಅನ್ನು ನೋಡೋಣ.
06:22 'case' ಅನ್ನು ಬಳಸಲು ಸಿಂಟ್ಯಾಕ್ಸ್ ಹೀಗಿದೆ:
06:24 'case ವೇರಿಯೇಬಲ್'
06:26 “value 1” ಇದ್ದಾಗ
06:28 'ರೂಬಿ ಕೋಡ್'
06:29 “value 2” ಇದ್ದಾಗ
06:30 'ರೂಬಿ ಕೋಡ್'
06:31 'else'
06:32 'ರೂಬಿ ಕೋಡ್'
06:34 'end'
06:35 ನಾವು ಒಂದು ಉದಾಹರಣೆಯನ್ನು ನೋಡೋಣ.
06:37 ಪ್ರಾಥಮಿಕ ಹಂತದ Ruby tutorials ನಲ್ಲಿ ತೋರಿಸಿದಂತೆ, 'gedit'ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ.
06:41 ಅದನ್ನು 'case hyphen statement dot rb' ಎಂದು ಹೆಸರಿಸಿ.
06:44 ನನ್ನ ಹತ್ತಿರ 'case' ಸ್ಟೇಟ್ಮೆಂಟ್ ನ ಒಂದು ಉದಾಹರಣೆಯಿದೆ.
06:48 ನಾವು ಇದರಲ್ಲಿ ಮುಂದುವರೆಯುತ್ತಿದ್ದಂತೆ, ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ (pause) ಕೋಡ್ ಅನ್ನು ಟೈಪ್ ಮಾಡಬಹುದು.
06:52 ಈ ಉದಾಹರಣೆಯಲ್ಲಿ, ನಾನು ಒಂದು 'case' ಸ್ಟೇಟ್ಮೆಂಟ್ ಅನ್ನು ಡಿಕ್ಲೇರ್ ಮಾಡಿದ್ದೇನೆ.
06:55 ಇಲ್ಲಿ, ನನ್ನ ಹತ್ತಿರ ಒಂದು 'print' ಸ್ಟೇಟ್ಮೆಂಟ್ ಇದೆ. ಇದು ಟರ್ಮಿನಲ್ ನ ಮೇಲೆ ಒಂದು ಪ್ರಶ್ನೆಯನ್ನು ಪ್ರಿಂಟ್ ಮಾಡುವುದು.
07:01 ಆಮೇಲೆ, ನಾನು 'gets'ಅನ್ನು ಕಾಲ್ ಮಾಡುತ್ತೇನೆ. ಇದು, 'ಸ್ಟ್ಯಾಂಡರ್ಡ್ ಇನ್ಪುಟ್'ನಿಂದ ಡೇಟಾದ ಒಂದೇ ಸಾಲನ್ನು ಪಡೆಯುತ್ತದೆ.
07:09 ನಂತರ 'chomp' ಎಂಬುದನ್ನು ಬಳಸಿ, ಇನ್ಪುಟ್ ಡೇಟಾದಿಂದ 'ನ್ಯೂ ಲೈನ್' ಅಕ್ಷರಗಳನ್ನು ತೆಗೆದುಹಾಕುತ್ತೇನೆ.
07:15 ಫಲಿತಾಂಶವನ್ನು 'domain' ಎಂಬ ಒಂದು ವೇರಿಯೇಬಲ್ ಗೆ ಅಸೈನ್ ಮಾಡುತ್ತೇನೆ.
07:18 ಆಮೇಲೆ, ಒಂದು 'case' ಸ್ಟೇಟ್ಮೆಂಟ್ ಅನ್ನು ಡಿಕ್ಲೇರ್ ಮಾಡುತ್ತೇನೆ.
07:22 ಅದರ ಒಳಗೆ, ನಾನು ಒಂದು 'when' ಸ್ಟೇಟ್ಮೆಂಟ್ ಅನ್ನು ಡಿಕ್ಲೇರ್ ಮಾಡುತ್ತೇನೆ.
07:25 ನಿಗದಿಗೊಳಿಸಿದ ಸ್ಟ್ರಿಂಗ್, 'domain'ನ ವ್ಯಾಲ್ಯೂಗೆ ಹೊಂದುತ್ತದೆಯೋ ಎಂಬುದನ್ನು ಇದು ಪರೀಕ್ಷಿಸುತ್ತದೆ.
07:30 ಮೊದಲು, 'domain'ನ ವ್ಯಾಲ್ಯೂ, “UP” ಎಂದು ಇದೆಯೋ ಎಂಬುದನ್ನು ಇದು ಪರೀಕ್ಷಿಸುತ್ತದೆ.
07:34 ಅದು ಹಾಗೆಯೇ ಇದ್ದರೆ, ಇದು “Uttar Pradesh” ಎಂದು ಪ್ರಿಂಟ್ ಮಾಡುತ್ತದೆ ಮತ್ತು 'case' ಸ್ಟೇಟ್ಮೆಂಟ್ ನಿಂದ ನಿರ್ಗಮಿಸುತ್ತದೆ.
07:39 ಒಂದುವೇಳೆ 'domain', “UP” ಎಂದು ಆಗಿರದಿದ್ದರೆ, 'domain'ನ ವ್ಯಾಲ್ಯೂ, “MP” ಎಂದು ಇದೆಯೋ ಎಂಬುದನ್ನು ಇದು ಪರೀಕ್ಷಿಸುತ್ತದೆ.
07:44 ಅದು ಹಾಗೆಯೇ ಇದ್ದರೆ, ಇದು “Madhya Pradesh” ಎಂದು ಪ್ರಿಂಟ್ ಮಾಡುತ್ತದೆ..ಹೀಗೆಯೇ ಇದು ಮುಂದುವರೆಯುತ್ತದೆ.
07:48 ಇಲ್ಲಿಯವರೆಗೆ, ಸರಿಹೊಂದುವ ವ್ಯಾಲ್ಯೂ ಸಿಕ್ಕಿರದಿದ್ದರೆ, ಇದು 'domain'ನ ವ್ಯಾಲ್ಯೂಅನ್ನು ಪರೀಕ್ಷಿಸುವುದನ್ನು ಮುಂದುವರೆಸುತ್ತದೆ.
07:53 ಮೇಲೆ ಹೇಳಿದ ಯಾವುದೇ ಕಂಡೀಶನ್ ಗಳು 'true' ಆಗಿಲ್ಲದೇ ಇರುವುದರಿಂದ,
07:56 ಈ ಹಂತದಲ್ಲಿ ಅದು 'else' ಸ್ಟೇಟ್ಮೆಂಟ್ ಅನ್ನು ಎದುರಿಸುವುದು.
07:59 ಆನಂತರದಲ್ಲಿ ಅದು 'else' ಡಿಕ್ಲೆರೇಶನ್ ಅನ್ನು ಅನುಸರಿಸುವ 'ರೂಬಿ ಕೋಡ್' ಅನ್ನು ಎಕ್ಸೀಕ್ಯೂಟ್ ಮಾಡುವುದು.
08:03 ನಮ್ಮ ಉದಾಹರಣೆಯ ಪ್ರಕಾರ ಇದು “Unknown” ಎಂದು ಪ್ರಿಂಟ್ ಮಾಡುವುದು.
08:07 ಈಗ, ಫೈಲನ್ನು ಸೇವ್ ಮಾಡಿ. ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ:
08:11 'ruby space case hyphen statement dot rb'
08:18 ಟರ್ಮಿನಲ್ ನ ಮೇಲೆ “Enter the state you live in:” ಎಂದು ತೋರಿಸಲ್ಪಡುವುದು.
08:22 “UP” ಎಂದು ಟೈಪ್ ಮಾಡಿ ಮತ್ತು ಔಟ್ಪುಟ್ ಅನ್ನು ನೋಡಿ.
08:25 ಔಟ್ಪುಟ್, “Uttar Pradesh” ಎಂದು ತೋರಿಸುವುದು.
08:28 ನಂತರ, ಹಿಂದೆ ಮಾಡಿದಂತೆ ರೂಬಿ ಫೈಲನ್ನು ಮತ್ತೊಮ್ಮೆ ಎಕ್ಸೀಕ್ಯೂಟ್ ಮಾಡಿ.
08:31 ಈ ಸಲ, ಪ್ರಾಂಪ್ಟ್ ನಲ್ಲಿ “KL” ಎಂದು ಟೈಪ್ ಮಾಡಿ ಮತ್ತು ಔಟ್ಪುಟ್ ಅನ್ನು ನೋಡಿ.
08:36 ಅದು “Kerala” ಎಂದು ಪ್ರಿಂಟ್ ಮಾಡುವುದು.
08:38 ನಂತರ, ಫೈಲನ್ನು ಇನ್ನೊಂದು ಸಲ ಎಕ್ಸೀಕ್ಯೂಟ್ ಮಾಡಿ.
08:41 ಈ ಬಾರಿ, ಪ್ರಾಂಪ್ಟ್ ನಲ್ಲಿ “TN” ಎಂದು ಟೈಪ್ ಮಾಡಿ ಮತ್ತು ಔಟ್ಪುಟ್ ಅನ್ನು ನೋಡಿ.
08:47 ಅದು “Unknown” ಎಂದು ಪ್ರಿಂಟ್ ಮಾಡುವುದು.
08:50 ಏಕೆಂದರೆ, ಇವುಗಳಲ್ಲಿ ಯಾವುದೇ ಒಂದು 'case'ಅನ್ನು ಸಹ ಪೂರೈಸಲಾಗಿಲ್ಲ. ಹೀಗಾಗಿ, ಡೀಫಾಲ್ಟ್ ಆಗಿ 'else' ಸ್ಟೇಟ್ಮೆಂಟ್ ಎಕ್ಸೀಕ್ಯೂಟ್ ಮಾಡಲ್ಪಟ್ಟಿದೆ.
08:58 ಈಗ, ನಿಮಗೆ 'ರೂಬಿ'ಯಲ್ಲಿ ನಿಮ್ಮ ಸ್ವಂತದ 'case ಸ್ಟೇಟ್ಮೆಂಟ್'ಗಳನ್ನು ಬರೆಯಲು ಸಾಧ್ಯವಾಗಬೇಕು.
09:03 ಇದರೊಂದಿಗೆ, ನಾವು ಈ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ.
09:07 ಸಂಕ್ಷಿಪ್ತವಾಗಿ,
09:08 ಈ ಟ್ಯುಟೋರಿಯಲ್ ನಲ್ಲಿ, ನಾವು:
09:10 * 'if' ಸ್ಟೇಟ್ಮೆಂಟ್
09:12 * 'else' ಕನ್ಸ್ಟ್ರಕ್ಟ್
09:13 * 'if-elsif' ಮತ್ತು
09:15 * 'case' ಸ್ಟೇಟ್ಮೆಂಟ್ ಗಳನ್ನು ಉಪಯೋಗಿಸಲು ಕಲಿತಿದ್ದೇವೆ.
09:17 ಒಂದು ಅಸೈನ್ಮೆಂಟ್ -
09:18 ಈ ಕೆಳಗೆ ಹೇಳಿದಂತೆ ಒಂದು 'Ruby' ಪ್ರೊಗ್ರಾಂಅನ್ನು ಬರೆಯಿರಿ.
09:20 ಬಳಕೆದಾರನಿಗೆ, (user) ಒಂದು ಸಂಖ್ಯೆಯನ್ನು ಎಂಟರ್ ಮಾಡಲು ಪ್ರಾಂಪ್ಟ್ ಮಾಡಬೇಕು.
09:23 ಆಮೇಲೆ ಸಂಖ್ಯೆಯು 2 ರ ಗುಣಕ (multiple) ಆಗಿದೆಯೋ ಎಂಬುದನ್ನು ಪರೀಕ್ಷಿಸಲು
09:26 ಸೂಕ್ತವಾದ ಕಂಟ್ರೋಲ್ ಸ್ಟೇಟ್ಮೆಂಟ್ ಅನ್ನು ಬಳಸಬೇಕು.
09:29 ಹೌದು ಎಂದಾದರೆ, ಆಗ ಹೀಗೆ ಪ್ರಿಂಟ್ ಮಾಡಬೇಕು: “The number entered is a multiple of 2”.
09:35 ಇಲ್ಲದಿದ್ದರೆ, ಅದು (ಸಂಖ್ಯೆಯು) 3 (ಮೂರು)ರ ಗುಣಕ (multiple) ಆಗಿದೆಯೋ ಎಂಬುದನ್ನು ಪರೀಕ್ಷಿಸಬೇಕು.
09:38 ಹೌದು ಎಂದಾದರೆ, ಆಗ ಹೀಗೆ ಪ್ರಿಂಟ್ ಮಾಡಬೇಕು: “The number entered is a multiple of 3”.
09:43 ಇಲ್ಲದಿದ್ದರೆ, ಅದು (ಸಂಖ್ಯೆಯು) 4 (ನಾಲ್ಕು) ರ ಗುಣಕ (multiple) ಆಗಿದೆಯೋ ಎಂಬುದನ್ನು ಪರೀಕ್ಷಿಸಬೇಕು.
09:47 ಹೌದು ಎಂದಾದರೆ, ಆಗ ಹೀಗೆ ಪ್ರಿಂಟ್ ಮಾಡಬೇಕು: “The number entered is a multiple of 4”.
09:51 ಇಲ್ಲದಿದ್ದರೆ, ಅದು ಹೀಗೆ ಪ್ರಿಂಟ್ ಮಾಡಬೇಕು: “The number is not a multiple of 2, 3 or 4”.
09:56 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
10:00 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
10:03 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
10:07 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
10:09 * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
10:13 * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
10:16 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:

contact@spoken-tutorial.org

10:21 "ಸ್ಪೋಕನ್ ಟ್ಯುಟೋರಿಯಲ್" ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
10:26 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
10:32 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

spoken hyphen tutorial dot org slash NMEICT hyphen Intro.

10:41 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ ಭಟ್ಟ ಉಪ್ಪಿನಪಟ್ಟಣ .

ವಂದನೆಗಳು.

Contributors and Content Editors

NaveenBhat, Sandhya.np14