KiCad/C2/Mapping-components-in-KiCad/Kannada

From Script | Spoken-Tutorial
Jump to: navigation, search
Time Narration
00:01 Mapping components with footprints in KiCad ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಸ್ಪೋಕನ್ ಟ್ಯುಟೋರಿಯಲ್ ನಲ್ಲಿ, ನಾವು
00:10 ಕಾಂಪೋನೆಂಟ್ ಗಳನ್ನು ಅವುಗಳಿಗೆ ಸಂಬಂಧಿತ ಫುಟ್-ಪ್ರಿಂಟ್ ಗಳೊಂದಿಗೆ ಮ್ಯಾಪ್ ಮಾಡಲು ಕಲಿಯಲಿದ್ದೇವೆ.
00:13 ಈ ಟ್ಯುಟೋರಿಯಲ್ ಅನ್ನು ಅಭ್ಯಾಸಮಾಡಲು, ನೀವು ಇಲೆಕ್ಟ್ರಾನಿಕ್ ಸರ್ಕೀಟ್ ಗಳ ಬಗ್ಗೆ ಸ್ವಲ್ಪ ತಿಳಿದಿರಬೇಕು.
00:18 ಯೂಸರ್ ನಿಗೆ, KiCad ನಲ್ಲಿ circuit schematic ಅನ್ನು ಡಿಸೈನ್ ಮಾಡಲು ತಿಳಿದಿರಬೇಕು.
00:23 ಹಾಗೂ ‘ಇಲೆಕ್ಟ್ರಿಕ್ ರೂಲ್ ಚೆಕ್’ (electric rule check) ಮತ್ತು ‘ನೆಟ್-ಲಿಸ್ಟ್ ಜನರೇಶನ್’ (netlist generation) ಗಳನ್ನು ಮಾಡಲು ಅರಿತಿರಬೇಕು.
00:26 ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು ಸಂಪರ್ಕಿಸಿ:

spoken hyphen tutorial.org

00:33 ಈ ಟ್ಯುಟೋರಿಯಲ್ ಗಾಗಿ ನಾವು, Ubuntu 12.04 ಆಪರೆಟಿಂಗ್ ಸಿಸ್ಟಮ್ ಮತ್ತು
00:37 KiCad 2011 hyphen 05 hyphen 25 ಇವುಗಳನ್ನು ಬಳಸುತ್ತಿದ್ದೇವೆ .
00:47 KiCad ಅನ್ನು ಪ್ರಾರಂಭಿಸಲು-
00:49 Ubuntu ಡೆಸ್ಕ್ಟಾಪ್ ಸ್ಕ್ರೀನ್ ನ ಮೇಲ್ತುದಿಯ ಎಡಮೂಲೆಗೆ ಹೋಗಿ.
00:52 ಮೊದಲನೆಯ ಐಕಾನ್, ಎಂದರೆ Dash home ನ ಮೇಲೆ ಕ್ಲಿಕ್ ಮಾಡಿ.
00:56 ಸರ್ಚ್ ಬಾರ್ ನಲ್ಲಿ 'KiCad' ಎಂದು ಟೈಪ್ ಮಾಡಿ Enter ಕೀ ಯನ್ನು ಒತ್ತಿ.
01:04 ಇದು KiCad ಮೇನ್ ವಿಂಡೊ ವನ್ನು ಒಪನ್ ಮಾಡುತ್ತದೆ.
01:07 'EEschema' ಅನ್ನು ಒಪನ್ ಮಾಡಲು, ಮೇಲ್ತುದಿಯ ಪ್ಯಾನಲ್ ಗೆ ಹೋಗಿ. EEschema ಎಂಬ ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
01:17 Info ಎಂಬ ಒಂದು ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುವುದು. ಇದು, ಸ್ಕಿಮ್ಯಾಟಿಕ್ ಅನ್ನು ಹುಡುಕಲು ಸಾಧ್ಯವಿಲ್ಲ ಎಂದು ಹೇಳುತ್ತದೆ.
01:21 OK ಮೇಲೆ ಕ್ಲಿಕ್ ಮಾಡಿ.
01:24 ನಾನು ಈ ಮೊದಲೇ ಕ್ರಿಯೇಟ್ ಮಾಡಲಾದ, ‘ಅಸ್ಟೇಬಲ್ ಮಲ್ಟಿವೈಬ್ರೇಟರ್’ ನ (Astable multivibrator) ‘ಸರ್ಕೀಟ್ ಸ್ಕಿಮ್ಯಾಟಿಕ್’ ಅನ್ನು (circuit schematic) ಬಳಸುವೆನು.
01:30 ಇದನ್ನು ಮಾಡಲು, ನಾನು File ಮೆನ್ಯುಗೆ ಹೋಗಿ, Open ಅನ್ನು ಕ್ಲಿಕ್ ಮಾಡುತ್ತೇನೆ.
01:37 ಈ ವಿಂಡೊವನ್ನು, ಇಲ್ಲಿ ನಮಗೆ ಕಾಣುತ್ತಿರುವ ಈ ಜಾಗಕ್ಕೆ ತರುತ್ತೇನೆ.
01:44 ಈ ಫೈಲ್ ಅನ್ನು ಸೇವ್ ಮಾಡಿರುವ ಫೋಲ್ಡರ್ ಅನ್ನು ಆಯ್ದುಕೊಂಡು
01:50 Open ಮೇಲೆ ಕ್ಲಿಕ್ ಮಾಡುತ್ತೇನೆ.
01:55 ಇದು ‘ಸರ್ಕೀಟ್ ಸ್ಕಿಮ್ಯಾಟಿಕ್’ ಅನ್ನು ಒಪನ್ ಮಾಡುತ್ತದೆ.
01:57 ನಾನು ಮೌಸ್ ನ ಸ್ಕ್ರೋಲ್-ಬಟನ್ ಅನ್ನು ಬಳಸಿ, ಝೂಮ್-ಇನ್ ಮಾಡುವೆನು.
02:02 ಈ ಸರ್ಕೀಟ್ ಗಾಗಿ, ನಾವು ಈಗಾಗಲೇ netlist ನ್ನು ತಯಾರಿಸಿದ್ದೇವೆ.
02:07 ಈಗ ನಾವು ಸ್ಕಿಮ್ಯಾಟಿಕ್ ನಲ್ಲಿ ಬಳಸಿದ ಕಾಂಪೋನೆಂಟ್ ಗಳನ್ನು, ಫುಟ್-ಪ್ರಿಂಟ್ ಗಳೊಂದಿಗೆ ಮ್ಯಾಪ್ ಮಾಡುವ ವಿಧಾನವನ್ನುನೋಡೋಣ.
02:14 Footprint, ಕಾಂಪೋನೆಂಟ್ ನ ಲೇ-ಔಟ್ ಆಗಿದೆ. ಇದನ್ನು Printed Circuit Board ನಲ್ಲಿ ಇರಿಸಲಾಗುತ್ತದೆ.
02:21 ಕಾಂಪೋನೆಂಟ್ ಗಳ ಮ್ಯಾಪಿಂಗ್ ಅನ್ನು ಆರಂಭಿಸಲು-
02:24 'EEschema' ವಿಂಡೋದ, ಮೆಲ್ತುದಿಯ ಪ್ಯಾನಲ್ ಗೆ ಹೋಗಿ.
02:28 Run Cvpcb ಬಟನ್ ಮೇಲೆ ಕ್ಲಿಕ್ ಮಾಡಿ.
02:33 ಇದು Cvpcb ವಿಂಡೊವನ್ನು ತೆರೆಯುವುದು.
02:37 ಇದು Component Library Error ಎಂಬ ಡೈಲಾಗ್-ಬಾಕ್ಸ್ ಅನ್ನು ಕೂಡ ತೆರೆಯುವುದು.
02:42 ಇದನ್ನು ಕ್ಲೋಸ್ ಮಾಡಲು, OK ಬಟನ್ ಮೇಲೆ ಕ್ಲಿಕ್ ಮಾಡಿ.
02:47 ಗಮನಿಸಿ, ಇದು 'project1.net' ಎಂಬ ಫೈಲ್ ಅನ್ನು ಒಪನ್ ಮಾಡುತ್ತದೆ. Netlist generation tutorial ನಲ್ಲಿ, ನಾವು ಈ ಫೈಲ್ ನ್ನು ತಯಾರಿಸಿದ್ದನ್ನು ದಯವಿಟ್ಟು ನೆನಪಿಸಿಕೊಳ್ಳಿ.
02:58 'Cvpcb' ವಿಂಡೊವನ್ನು ಎರಡು ಪ್ಯಾನಲ್ ಗಳಲ್ಲಿ ವಿಭಾಗಿಸಲಾಗಿದೆ.
03:03 ಎಡ ಪ್ಯಾನಲ್ ನಲ್ಲಿರುವ ಮೊದಲನೆಯ ಕಾಲಮ್, ಕ್ರಮಸಂಖ್ಯೆಯಾಗಿದೆ.
03:07 ಎರಡನೆಯ ಕಾಲಮ್, ಸ್ಕೀಮ್ಯಾಟಿಕ್ ನಲ್ಲಿ ಬಳಸಿದ ಕಾಂಪೋನೆಂಟ್ ಗಳ ಪಟ್ಟಿಗಾಗಿ reference id ಯನ್ನು ತೋರಿಸುತ್ತದೆ.
03:14 ಮೂರನೆಯ ಕಾಲಮ್, ಸಂಬಂಧಿತ ಕಾಂಪೋನೆಂಟ್ ಗಳ ವ್ಯಾಲ್ಯೂಗಳನ್ನು ತೋರಿಸುತ್ತದೆ.
03:19 ಬಲಭಾಗದ ಪ್ಯಾನಲ್, ಲಭ್ಯವಿರುವ Footprints ಗಳ ಪಟ್ಟಿಯನ್ನು ತೋರಿಸುತ್ತದೆ.
03:25 ಈಗ ನಾವು, ಕಾಂಪೋನೆಂಟ್ ಗಳನ್ನು, ಅವುಗಳಿಗೆ ಸಂಬಂಧಿಸಿದ ಫುಟ್-ಪ್ರಿಂಟ್ ಗಳೊಂದಿಗೆ ಮ್ಯಾಪ್ ಮಾಡುವೆವು.
03:30 ಆಯ್ದ ಕಾಂಪೋನೆಂಟ್ ಗಾಗಿ, ಎಂದರೆ 'C1' ಗಾಗಿ, ಲಭ್ಯವಿರುವ ಫುಟ್-ಪ್ರಿಂಟ್ ಗಳ ಪಟ್ಟಿಯನ್ನು 'Cvpcb' ವಿಂಡೋದ ಬಲಭಾಗದಲ್ಲಿ ನಾವು ನೋಡಬಹುದು.
03:41 ಆಯ್ದ ಕಾಂಪೋನೆಂಟ್ ಗೆ ಅನುಗುಣವಾದ footprint ಅನ್ನು ಈಗ ನೋಡುವೆವು.
03:45 'Cvpcb' ವಿಂಡೋದ ಮೇಲ್ತುದಿಯ ಪ್ಯಾನಲ್ ನಲ್ಲಿರುವ View selected footprint ನ ಮೇಲೆ ಕ್ಲಿಕ್ ಮಾಡಿ.
03:53 ಇದು, ಆಯ್ಕೆಮಾಡಿದ ಫುಟ್-ಪ್ರಿಂಟ್ ನ ಇಮೇಜನ್ನು ಪ್ರದರ್ಶಿಸುವ, Footprint ವಿಂಡೊವನ್ನು ಒಪನ್ ಮಾಡುವುದು.
04:02 ನಾವು ವಿವಿಧ ಫುಟ್-ಪ್ರಿಂಟ್ ಗಳ ಇಮೇಜ್ ಗಳ ಮೇಲೆ ಕ್ಲಿಕ್ ಮಾಡಿ, ಅವುಗಳನ್ನು ಸಹ ನೋಡಬಹುದು.
04:12 ಈಗ, ನಾನು Footprint ವಿಂಡೋವನ್ನು ಕ್ಲೋಸ್ ಮಾಡುವೆನು.
04:15 ಮೊದಲನೆಯ ಕಾಂಪೋನೆಂಟ್ 'C1' ಗಾಗಿ, ನಾವು ಬಲಗಡೆಯ ಪ್ಯಾನಲ್ ನಲ್ಲಿಯ 'C1' ಎಂಬ Footprint ಅನ್ನು ಆಯ್ಕೆಮಾಡುವೆವು.
04:22 ಮೊದಲನೆಯ ಕಾಂಪೋನೆಂಟ್ ಗಾಗಿ, 'C1' ಫುಟ್-ಪ್ರಿಂಟ್ ಅನ್ನು ಅಸೈನ್ ಮಾಡಲು, ಫುಟ್-ಪ್ರಿಂಟ್ ನ ಮೇಲೆ ಡಬಲ್-ಕ್ಲಿಕ್ ಮಾಡಿ.
04:27 ನೀವು ನೋಡುವ ಹಾಗೆ, 'C1' ಫುಟ್-ಪ್ರಿಂಟ್, ಪಟ್ಟಿಯಲ್ಲಿಯ ಮೊದಲನೆಯ ಕಾಂಪೋನೆಂಟ್ ಗಾಗಿ ಅಸೈನ್ ಮಾಡಲ್ಪಡುತ್ತದೆ.
04:34 ಅದೇ ರೀತಿ, ಎರಡನೆಯ ಕಾಂಪೋನೆಂಟ್ 'C2' ಗಾಗಿ, ನಾವು ಫುಟ್-ಪ್ರಿಂಟ್ 'C1' ನ ಮೇಲೆ ಡಬಲ್ ಕ್ಲಿಕ್ ಮಾಡಿ, ಅದನ್ನು ಆಯ್ಕೆಮಾಡುವೆವು.
04:43 ಮುಂದಿನ ಕಾಂಪೋನೆಂಟ್ 'D1' ಗಾಗಿ, ನಾವು LED hyphen 3MM ಅನ್ನು ಆಯ್ಕೆಮಾಡುವೆವು.
04:50 'P1' ಎಂಬ ಕನೆಕ್ಟರ್ ಗಾಗಿ, ನಾವು ಬಲಭಾಗದ ಪ್ಯಾನಲ್ ನಲ್ಲಿರುವ SIL hyphen 2 ಅನ್ನು ಆಯ್ಕೆಮಾಡುತ್ತೇವೆ.
05:02 ಇದನ್ನು ಆಯ್ಕೆಮಾಡಲು, ನಾನು ಬಲಭಾಗದ ಪ್ಯಾನಲ್ ನಲ್ಲಿ, ಕೆಳಗಡೆಗೆ ಸ್ಕ್ರೋಲ್ ಮಾಡುತ್ತೇನೆ.
05:09 'R1' ಗಾಗಿ, ನಾವು 'R3' ಯನ್ನು ಆಯ್ಕೆಮಾಡುತ್ತೇವೆ.
05:13 'R2' ಗಾಗಿ, ನಾವು 'R3' ಯನ್ನು ಆಯ್ಕೆಮಾಡುತ್ತೇವೆ.
05:17 'R3' ಗಾಗಿ, ನಾವು 'R3' ಯನ್ನು ಆಯ್ಕೆಮಾಡುತ್ತೇವೆ.
05:22 'U1' ಗಾಗಿ, ಎಂದರೆ 'LM555' ಗಾಗಿ, ನಾವು DIP hyphen 8 underscore 300 underscore ELL ಅನ್ನು ಆಯ್ಕೆಮಾಡುತ್ತೇವೆ. ಇದು eight pin IC footprint ಆಗಿದೆ.
05:38 ಈಗ, 'Cvpcb' ವಿಂಡೊವಿನ ಮೇಲ್ತುದಿಯ ಪ್ಯಾನಲ್ ನಲ್ಲಿರುವ, Save netlist and footprint files ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ, ನಾವು netlist ಅನ್ನು ಸೇವ್ ಮಾಡುವೆವು.
05:48 ಇದು Save Net and Component List ಎಂಬ ವಿಂಡೊವನ್ನು ಒಪನ್ ಮಾಡುವುದು.
05:54 ಇದು ಚೆನ್ನಾಗಿ ಕಾಣುವಂತೆ ನಾನು ಈ ವಿಂಡೊಅನ್ನು ರಿಸೈಜ್ ಮಾಡುವೆನು.
06:00 ಈ ಫೈಲ್ ಅನ್ನು ಸೇವ್ ಮಾಡಲು, Save ಮೇಲೆ ಕ್ಲಿಕ್ ಮಾಡಿ. ಇದು ಫೈಲ್ ಅನ್ನು ಸೇವ್ ಮಾಡುತ್ತದೆ ಮತ್ತು 'Cvpcb' ವಿಂಡೊವನ್ನು ಸಹ ತಾನಾಗಿಯೇ ಕ್ಲೊಸ್ ಮಾಡುತ್ತದೆ.
06:13 ಈಗ, ಫುಟ್-ಪ್ರಿಂಟ್ಸ್ ನ ಮಾಹಿತಿಯೊಂದಿಗೆ, ನೆಟ್ಲಿಸ್ಟ್ ಅನ್ನು ಅಪ್-ಡೇಟ್ ಮಾಡಲಾಗಿದೆ.
06:18 ಇಲ್ಲಿಗೆ, ಕಾಂಪೋನೆಂಟ್ ಗಳನ್ನು ಮ್ಯಾಪ್ ಮಾಡುವ ಕೆಲಸವು ಪೂರ್ತಿಗೊಂಡಿದೆ.
06:21 'EEschema' ವಿಂಡೋಗೆ ಹೋಗಿ. ಈಗ ಈ ವಿಂಡೊವನ್ನು ಕ್ಲೋಸ್ ಮಾಡಿ.
06:29 KiCad ಮೇನ್ ವಿಂಡೊವನ್ನು ಸಹ ಕ್ಲೋಸ್ ಮಾಡಿ.
06:35 ಇಲ್ಲಿಗೆ, ನಾವು ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
06:38 ಈ ಟ್ಯುಟೋರಿಯಲ್ ನಲ್ಲಿ ನಾವು,
06:40 'Cvpcb' ವಿಂಡೊವನ್ನು ಬಳಸಿ, ಕಾಂಪೋನೆಂಟ್ ಗಳನ್ನು, ಅವುಗಳಿಗೆ ಸಂಬಂಧಿತ ಫುಟ್-ಪ್ರಿಂಟ್ ಗಳೊಂದಿಗೆ ಮ್ಯಾಪ್ ಮಾಡಲು ಕಲಿತಿದ್ದೇವೆ.
06:47 ಕೆಳಗಿನ ತೋರಿಸಿದ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋಅನ್ನು ವೀಕ್ಷಿಸಿ.
06:51 ಇದು ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್ ನ ಸಾರಾಂಶವಾಗಿದೆ.
06:56 ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಬಹುದು.
07:02 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್ ತಂಡವು:
07:04 ಸ್ಪೋಕನ್- ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು
07:07 ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ನೀಡುತ್ತದೆ.
07:11 ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಈ ಕೆಳಗಿನ ಲಿಂಕ್ ಗೆ ಬರೆಯಿರಿ:

contact@spoken-tutorial.org

07:19 Spoken Tutorial ಪ್ರೊಜೆಕ್ಟ್, Talk to a Teacher ಪ್ರೊಜೆಕ್ಟ್ ನ ಒಂದು ಭಾಗವಾಗಿದೆ.
07:23 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಸಹಯೋಗವನ್ನು ಹೊಂದಿದೆ.
07:29 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:
07:32 spoken hyphen tutorial dot org slash NMEICT hyphen Intro.
07:38 ಈ ಸ್ಕ್ರಿಪ್ಟ್, ಅಭಿಷೇಕ ಪವಾರ ಅವರ ಕೊಡುಗೆಯಾಗಿದೆ.
07:41 ಈ ಸ್ಕ್ರಿಪ್ಟ್ ನ ಅನುವಾದಕಿ ಸುಚೇತಾ ವಸುವಜ ಹಾಗೂ ಧ್ವನಿ ಶ್ರೀ ನವೀನ ಭಟ್ ಉಪ್ಪಿನಪಟ್ಟಣ.

ವಂದನೆಗಳು.

Contributors and Content Editors

NaveenBhat