Java/C2/User-Input/Kannada

From Script | Spoken-Tutorial
Jump to: navigation, search
Time Narration
00:02 ಜಾವಾದಲ್ಲಿ BufferedReader (ಬಫರ್ ರೀಡರ್ ) ಉಪಯೋಗಿಸಿ ಬಳಕೆದಾರರಿಂದ ಇನ್ ಪುಟ್ ಪಡೆಯುವ ಪ್ರೋಗ್ರಾಂ ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:09 ಈ ಟ್ಯುಟೋರಿಯಲ್ ನಲ್ಲಿ ನಾವು
00:11 ಜಾವಾ ದಲ್ಲಿ ಬಳಕೆದಾರರಿಂದ ಇನ್ ಪುಟ್ ಪಡೆಯುವುದು,
00:13 InputStreamReader (ಇನ್ ಪುಟ್ ಸ್ಟ್ರೀಮ್ ರೀಡರ್ ) ಮತ್ತು BufferedReader (ಬಫ್ಫರ್ಡ್ ರೀಡರ್) ಗಳ ಬಗ್ಗೆ ಕಲಿಯೋಣ.
00:17 ಈ ಟ್ಯುಟೋರಿಯಲ್ ಅನ್ನುಕಲಿಯಲು ನೀವು,
00:19 ಎಕ್ಲಿಪ್ಸ್ ಅನ್ನು ಉಪಯೋಗಿಸಿ ಸುಲಭವಾದ ಜಾವಾ ಪ್ರೋಗ್ರಾಮ್ ಅನ್ನು ರಚಿಸಲು, ಕಂಪೈಲ್ ಮಾಡಿ ರನ್ ಮಾಡಲು ತಿಳಿದಿರಬೇಕು.
00:24 ಮತ್ತು ಜಾವಾದ ಡೇಟಾ ಟೈಪ್ಸ್ ಬಗ್ಗೆ ಕೂಡಾ ತಿಳಿದಿರಬೇಕು.
00:27 ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ಕೆಳಕಂಡ ಅಂತರ್ಜಾಲ ತಾಣವನ್ನು ಭೇಟಿಕೊಡಿ.

(http://www.spoken-tutorial.org)

00:35 ಇಲ್ಲಿ ನಾನು

Ubuntu v 11.10 (ಉಬಂಟು ವರ್ಶನ್ ೧೧.೧೦) JDK 1.6 (ಜೆಡಿಕೆ ೧.೬ ) ಮತ್ತು Eclipse IDE 3.7.0 ಮತ್ತು (ಎಕ್ಲಿಪ್ಸ್ ಐಡಿಇ ೩.೭.೦) ಗಳನ್ನು ಉಪಯೋಗಿಸುತ್ತೇನೆ.

00:44 ಈಗ ನಾವು BufferedReader (ಬಫ್ಫರ್ಡ್ ರೀಡರ್) ಎಂದರೇನು ಎಂದು ಕಲಿಯೋಣ.
00:48 ಇದೊಂದು ಇನ್ ಪುಟ್ ಸ್ಟ್ರೀಮ್ ನಿಂದ ಅಕ್ಷರಗಳನ್ನು ಓದಲು ಬಳಸುವ ಕ್ಲಾಸ್ ಆಗಿದೆ.
00:53 ಇದು ಅಕ್ಷರ ಗಳ array (ಅರೇ) ಅಥವಾ ಸಾಲುಗಳನ್ನು ಓದಲು ಸೂಕ್ತ ಮಾರ್ಗವನ್ನು ನೀಡುತ್ತದೆ.
00:59 BufferedReader (ಬಫ್ಫರ್ಡ್ ರೀಡರ್) ಅನ್ನು ಉಪಯೋಗಿಸಲು , ನಾವು ಮೂರು ಕ್ಲಾಸ್ ಗಳನ್ನು java ಡಾಟ್ io package (ಪ್ಯಾಕೇಜ್) ನಿಂದ ಇಂಪೋರ್ಟ್ ಮಾಡಿಕೊಳ್ಳಬೇಕು.
01:05 ಆ ಮೂರು ಕ್ಲಾಸ್ ಗಳು

'IOException (ಐ ಓ ಎಕ್ಸೆಪ್ಷನ್) “InputStreamReader(ಇನ್ ಪುಟ್ ಸ್ಟ್ರೀಮ್ ರೀಡರ್ )” ಮತ್ತು BufferedReader'(ಬಫ್ಫರ್ಡ್ ರೀಡರ್)

01:12 ನಾವು ಪ್ಯಾಕೇಜ್ ಗಳ ಬಗ್ಗೆ ಮತ್ತು ಕ್ಲಾಸ್ ಗಳನ್ನು ಇಂಪೋರ್ಟ್ ಮಾಡುವುದರ ಬಗ್ಗೆ ಬರುವ ಟ್ಯುಟೋರಿಯಲ್ ಗಳಲ್ಲಿ ಕಲಿಯುತ್ತೇವೆ.
01:18 ಇನ್ ಪುಟ್ ಅನ್ನು ಹೇಗೆ ಪಡೆಯುವುದು? ಎಂದು ನೋಡೋಣ.
01:21 ನಾವು ಬಳಕೆದಾರರಿಂದ ಪಡೆಯುವ ಎಲ್ಲಾ ಇನ್ ಪುಟ್ ಗಳು “String (ಸ್ಟ್ರಿಂಗ್ )” ನ ರೂಪದಲ್ಲಿರುತ್ತದೆ.
01:26 ಇದನ್ನು ನಂತರ ಸರಿಯಾದ ಡೇಟಾಟೈಪ್ ಗೆ typecaste(ಟೈಪ್ ಕ್ಯಾಸ್ಟ್) ಮಾಡಬೇಕು ಅಥವಾ ಬದಲಾಯಿಸಬೇಕು.
01:31 ನಾವು ಬಳಕೆದಾರರಿಂದ ಇನ್ ಪುಟ್ ಪಡೆಯುವ ಪ್ರೋಗ್ರಾಮ್ ಬರೆಯುವಾಗ ಇದರ ಬಗ್ಗೆ ತಿಳಿಯುತ್ತೇವೆ.
01:35 BufferedReader(ಬಫ್ಫರ್ಡ್ ರೀಡರ್) ಅನ್ನು ಉಪಯೋಗಿಸುವ ಕ್ರಮವನ್ನು ನೋಡೋಣ.
01:39 ಒಮ್ಮೆ ಮೂರು ಕ್ಲಾಸ್ ಗಳನ್ನು ಇಂಪೋರ್ಟ್ ಮಾಡಿದ ನಂತರ 'InputStreamReader' (ಇನ್ ಪುಟ್ ಸ್ಟ್ರೀಮ್ ರೀಡರ್ )” ನ ಒಂದು ಒಬ್ಜೆಕ್ಟ್ ಅನ್ನು ರಚನೆ ಮಾಡಬೇಕು.
01:45 ಮತ್ತು BufferedReasder ಬಫ್ಫರ್ಡ್ ರೀಡರ್ ನ ಒಂದು ಒಬ್ಜೆಕ್ಟ್ ಅನ್ನೂ ರಚನೆ ಮಾಡಬೇಕು.
01:49 ನಾವು ಪ್ರೋಗ್ರಾಮ್ ಅನ್ನು ಬರೆದಾಗ ಇದರ ಬಗ್ಗೆ ಹೆಚ್ಚಿನದನ್ನು ತಿಳಿಯುತ್ತೇವೆ.
01:54 ಹಾಗಾಗಿ ಈಗ ಎಕ್ಲಿಪ್ಸ್ ಗೆ ಹೋಗೋಣ.
01:56 ನಾನು ಮೊದಲೇ InputBufferedReader ಎಂಬ ಕ್ಲಾಸ್ ಅನ್ನು ತೆರೆದಿದ್ದೇನೆ.
02:00 'java.io package ಅನ್ನು ಇಂಪೋರ್ಟ್ ಮಾಡುವದರೊಂದಿಗೆ ಪ್ರಾರಂಭಿಸೋಣ.
02:04 ಅದಕ್ಕಾಗಿ ಕ್ಲಾಸ್ ಗೂ ಮೊದಲು import ಸ್ಪೇಸ್ java ಡಾಟ್ io ಡಾಟ್ ಸ್ಟಾರ್ ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
02:14 InputStreamReader(ಇನ್ ಪುಟ್ ಸ್ಟ್ರೀಮ್ ರೀಡರ್ ), BufferedReader ಬಫ್ಫರ್ಡ್ ರೀಡರ್ ಮತ್ತು IOException (ಐ ಓ ಎಕ್ಸೆಪ್ಷನ್).' ಎಂಬ ಕ್ಲಾಸ್ ಗಳು ಇಂಪೋರ್ಟ್ ಆಗುತ್ತವೆ.
02:20 ಈಗ ನಾವು BufferedReader (ಬಫ್ಫರ್ಡ್ ರೀಡರ್)” ಅನ್ನು main( ಮೇನ್) ಮೆಥಡ್ ನ ಒಳಗೆ ಉಪಯೋಗಿಸೋಣ.
02:25 ಯಾವುದೇ ರೀತಿಯಲ್ಲಿ 'BufferedReader (ಬಫ್ಫರ್ಡ್ ರೀಡರ್) ಉಪಯೋಗಿಸಿದರೂ ನಾವು IOException(ಐಓಎಕ್ಸೆಪ್ಷನ್ ) ಅನ್ನು throw (ಥ್ರೋ) ಮಾಡಬೇಕು.
02:31 ಹಾಗಾಗಿ main (ಮೇನ್) ಮೆಥಡ್ ಆದ ತಕ್ಷಣ ಬಲಗಡೆಗೆ throws IOException(ಥ್ರೋಸ್ ಐಓಎಕ್ಸೆಪ್ಷನ್ ) ಎಂದು ಟೈಪ್ ಮಾಡಿ.
02:42 ಹಾಗಂದರೇನು? ಎಂದು ನೋಡೋಣ.
02:45 Exceptions' ಅಂದರೆ ಜಾವಾದಲ್ಲಿ ಅಯೋಚಿತ ಸಂದರ್ಭದಲ್ಲುಂಟಾಗುವ ದೋಷಗಳು.
02:52 Exception (ಎಕ್ಸೆಪ್ಷನ್)” ದೋಷ ಗಳನ್ನು ಪರಿಹರಿಸಲು 'throws ಥ್ರೋಸ್' ಕೀವರ್ಡ್ ಅನ್ನು ಬಳಸುತ್ತೇವೆ.
02:57 Throws ' (ಥ್ರೋಸ್) ಎನ್ನುವುದು Exception handling (ಎಕ್ಸೆಪ್ಷನ್ ಹ್ಯಾಂಡ್ಲಿಂಗ್) ನಲ್ಲಿ ಬಳಸುವ ಕೀವರ್ಡ್.
03:00 Exception (ಎಕ್ಸೆಪ್ಷನ್)' ದೋಷವು ಖಂಡಿತವಾಗಿಯು ಸಂಭವಿಸುವುದೆಂದು ತಿಳಿದಾಗ ಈ ಕೀವರ್ಡ್ ಅನ್ನು ಉಪಯೋಗಿಸುತ್ತೇವೆ.
03:05 ನಾವು ಯಾವಾಗ BufferedReader (ಬಫ್ಫರ್ಡ್ ರೀಡರ್)” ಅನ್ನು ಉಪಯೋಗಿಸುತ್ತೇವೋ ಆಗೆಲ್ಲ ಎಕ್ಸೆಪ್ಷನ್ ದೋಷವು ಸಂಭವಿಸುತ್ತದೆ.
03:10 Exception (ಎಕ್ಸೆಪ್ಷನ್)' ದೋಷವು ಸಂಭವಿಸದಂತೆ ತಡೆಯಲು ನಾವು throws IOException (ಥ್ರೋಸ್ ಐಓಎಕ್ಸೆಪ್ಷನ್ ) ಅನ್ನು ಉಪಯೋಗಿಸುತ್ತೇವೆ.
03:16 ನಾವು Exception Handling (ಎಕ್ಸೆಪ್ಷನ್ ಹ್ಯಾಂಡ್ಲಿಂಗ್ ) ನ ಬಗ್ಗೆ ಮುಂಬರುವ ಟ್ಯುಟೋರಿಯಲ್ ನಲ್ಲಿ ತಿಳಿಯೋಣ.
03:20 ನಾವು ಈಗ InputStreamReader' ನ ಒಂದು ಒಬ್ಜೆಕ್ಟ್ ಅನ್ನು ರಚನೆ ಮಾಡೋಣ.
03:24 ಅದಕ್ಕಾಗಿ main (ಮೇನ್) ಮೆಥಡ್ ನಲ್ಲಿ InputStreamReader(ಇನ್ಪುುಟ್ಸ್ಟ್ರೀ ಮ್ರೀಳಡರ್) ಸ್ಪೇಸ್ isr ಸಮ new ಸ್ಪೇಸ್ InputStreamReader(ಇನ್ಪು್ಟ್ಸ್ಟ್ರೀ ಮ್ರೀೆಡರ್) ಎಂದು ಟೈಪ್ ಮಾಡಿ
03:44 ಬ್ರ್ಯಾಕೆಟ್ ನಲ್ಲಿ Systemಡಾಟ್ in ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
03:52 InputStreamReader(ಇನ್ಪುnಟ್ಸ್ಟ್ರೀ ಮ್ರೀೈಡರ್) ಇದೊಂದು ಜಾವಾದಲ್ಲಿ ಬಳೆಕೆದಾರರಿಂದ ಇನ್ ಪುಟ್ ಅನ್ನು ಪಡೆಯಲು ಉಪಯೋಗಿಸುವ ಕ್ಲಾಸ್ ಆಗಿದೆ.
04:01 System ಡಾಟ್ in ಎಂಬುದು ಜಾವಾ ಕಂಪೈಲರ್ ಗೆ ಬಳಕೆದಾರರಿಂದ ಕೀಬೋರ್ಡ್ ಅನ್ನು ಉಪಯೋಗಿಸಿ ಇನ್ ಪುಟ್ ಅನ್ನು ಪಡೆಯಲು ತಿಳಿಸುತ್ತದೆ.
04:10 System ಡಾಟ್ in ಪಡೆದ ಇನ್ ಪುಟ್ ಕೆಲವುಸಮಯ 'InputStreamReader(ಇನ್ಪು ಟ್ಸ್ಟ್ರೀ ಮ್ರೀಟಡರ್) ನ ಒಬ್ಜೆಕ್ಟ್ ನಲ್ಲಿ ಉಳಿದುಕೊಂಡಿರುತ್ತದೆ.
04:17 ಅದಾದ ಮೇಲೆ 'BufferedReader (ಬಫ್ಫರ್ಡ್ ರೀಡರ್) ನ ಒಂದು ಒಬ್ಜೆಕ್ಟ್ ಅನ್ನು ರಚನೆ ಮಾಡೋಣ.
04:22 ಹಾಗಾಗಿ BufferedReader (ಬಫ್ಫರ್ಡ್ ರೀಡರ್) ಸ್ಪೇಸ್ br ಸಮ new ಸ್ಪೇಸ್ BufferedReader(ಬಫ್ಫರ್ಡ್ ರೀಡರ್) ಎಂದು ಟೈಪ್ ಮಾಡಿ, ಬ್ರ್ಯಾಕೆಟ್ ಹಾಕಿ,
04:36 ಬ್ರ್ಯಾಕೆಟ್ ನಲ್ಲಿ InputStreamReader(ಇನ್ಪು ಟ್ಸ್ಟ್ರೀ ಮ್ರೀ ಡರ್) ನ ಒಬ್ಜೆಕ್ಟ್ ಅನ್ನು ಅಂದರೆ isr ಎಂದು ಟೈಪ್ ಮಾಡಿ.
04:43 ಈಗ ಬಳಕೆದಾರರಿಂದ ಇನ್ ಪುಟ್ ಅನ್ನು ಪಡೆಯಲು ಈ isr ಸಹಾಯ ಮಾಡುತ್ತದೆ.
04:48 BufferedReader (ಬಫ್ಫರ್ಡ್ ರೀಡರ್), ಬೆಲೆಯನ್ನು “BufferedReader object(ಬಫ್ಫರ್ಡ್ ರೀಡರ್ ಒಬ್ಜೆಕ್ಟ್) ನಲ್ಲಿ ಸಂಗ್ರಹಿಸಲು ಸಹಾಯ ಮಾಡುತ್ತದೆ.
04:54 isr, ಈ ಬೆಲೆಯನ್ನು BufferedReader object (ಬಫ್ಫರ್ಡ್ ರೀಡರ್ ಒಬ್ಜೆಕ್ಟ್) ಗೆ ಸಂಗ್ರಹಿಸಲು ಪಾಸ್ ಮಾಡುತ್ತದೆ.
05:01 ಈಗ ಬಳಕೆದಾರರಿಂದ ಇನ್ ಪುಟ್ ಅನ್ನು ಪಡೆಯಲು ಪ್ರಾರಂಭಿಸೋಣ.
05:06 ನಾವು ಮೊದಲು ಬಳಕೆದಾರರಿಗೆ ಸ್ಟ್ರಿಂಗ್ ಅನ್ನು ನಮೂದಿಸಲು ಹೇಳೋಣ. ಆದ್ದರಿಂದ String ಟೈಪ್ ನ ವೇರಿಯೇಬಲ್ ಅನ್ನು ರಚಿಸಿ.
05:14 String ಸ್ಪೇಸ್ str ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
05:19 ಈಗ ಬಳಕೆದಾರರಿಗೆ ಅವರ ಹೆಸರನ್ನು ನಮೂದಿಸಲು ಹೇಳಿ.
05:23 System ಡಾಟ್ out ಡಾಟ್ println ಎಂದು ಟೈಪ್ ಮಾಡಿ, ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿ 'Enter your name ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
05:33 String ವಿಧದ ಇನ್ ಪುಟ್ ಅನ್ನು ಪಡೆಯಲು ನಾವು
05:37 str ಸಮ br ಡಾಟ್ readLine ಎಂದು ಟೈಪ್ ಮಾಡಿ ಬ್ರ್ಯಾಕೆಟ್ ತೆರೆದು ಮುಚ್ಚಿ ಸೆಮಿಕೋಲನ್ ಹಾಕಿ.
05:45 readLine(ರೀಡ್ ಲೈನ್) ಎಂಬ ಮೆಥಡ್ ಬಳಕೆದಾರರಿಂದ ಇನ್ ಪುಟ್ ಅನ್ನು ಓದುತ್ತದೆ.
05:51 ಈಗ ನಾವು 'integer' ವಿಧದ ಇನ್ ಪುಟ್ ಅನ್ನು ತೆಗೆದುಕೊಳ್ಳೋಣ. ಹಾಗಾಗಿ 'int' ಟೈಪ್ ನ ವೇರಿಯೇಬಲ್ ಅನ್ನು ರಚಿಸಿ.
06:01 int n ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
06:05 ಬಳಕೆದಾರರಿಗೆ ಅವರ ವಯಸ್ಸನ್ನು ನಮೂದಿಸಲು ತಿಳಿಸಿ.
06:08 ಅದಕ್ಕಾಗಿ System ಡಾಟ್ out ಡಾಟ್ println ಎಂದು ಟೈಪ್ ಮಾಡಿ, ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿ 'Enter your age ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
06:21 ಇನ್-ಪುಟ್ ಅನ್ನು ಪಡೆದುಕೊಳ್ಳಲು ಇನ್ನೊಂದು 'String' ವಿಧದ 'str1' ಎಂಬ ವೇರಿಯೇಬಲ್ ಅನ್ನು ರಚಿಸಿ.
06:31 ಇನ್-ಪುಟ್ ಅನ್ನು ಪಡೆಯಲು str1 ಸಮ br ಡಾಟ್ readLine ಎಂದು ಟೈಪ್ ಮಾಡಿ ಬ್ರ್ಯಾಕೆಟ್ ತೆರೆದು ಮುಚ್ಚಿ ಸೆಮಿಕೋಲನ್ ಹಾಕಿ.
06:45 ಈಗ ಇದನ್ನು ಇಂಟೀಜರ್ ಡೇಟಾಟೈಪ್ ಗೆ ಪರಿವರ್ತಿಸಲು n ಸಮ Integer ಡಾಟ್ parseInt ಬ್ರ್ಯಾಕೆಟ್ ನಲ್ಲಿ str1 ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
07:05 Integer ಒಂದು ಕ್ಲಾಸ್ ಮತ್ತು parseInt ಒಂದು ಮೆಥಡ್ ಆಗಿದೆ.
07:11 ಈ ಮೆಥಡ್ ಬ್ರ್ಯಾಕೆಟ್ ನಲ್ಲಿ ಕಳುಹಿಸಿದ ಆರ್ಗ್ಯುಮೆಂಟ್ ಅನ್ನು integer ಗೆ ಪರಿವರ್ತಿಸುತ್ತದೆ.
07:18 ಈಗ ನಾವು name ಮತ್ತು age ಗಳಿಗೆ ಫಲಿತವನ್ನುಪ್ರದರ್ಶಿಸೋಣ.
07:22 System ಡಾಟ್ out ಡಾಟ್ println ಎಂದು ಟೈಪ್ ಮಾಡಿ, ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿ The name is + (ಪ್ಲಸ್) str ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
07:38 ಮುಂದಿನ ಸಾಲಿನಲ್ಲಿ, System ಡಾಟ್out ಡಾಟ್println ಎಂದು ಟೈಪ್ ಮಾಡಿ, ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿ The age is + (ಪ್ಲಸ್) n ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
07:50 ಫೈಲ್ ಅನ್ನು ಸೇವ್ ಮಾಡಿ, ಅಂದರೆ Ctrl S ಒತ್ತಿರಿ. ಈಗ ಪ್ರೋಗ್ರಾಮ್ ಅನ್ನು ರನ್ ಮಾಡೋಣ .
07:55 ಹಾಗಾಗಿ Control F11 ಅನ್ನು ಒತ್ತಿರಿ.
08:00 ಫಲಿತದಲ್ಲಿ ನೀವು ನಿಮ್ಮ ಹೆಸರನ್ನು ನಮೂದಿಸಲು ಕೇಳಲ್ಪಡುತ್ತೀರಿ.
08:03 ನಿಮ್ಮ ಹೆಸರನ್ನು ಟೈಪ್ ಮಾಡಿರಿ. ನಾನು ಇಲ್ಲಿ Ramu ಎಂದು ಟೈಪ್ ಮಾಡಿದ್ದೇನೆ. Enter ಒತ್ತುತ್ತೇನೆ.
08:08 ಫಲಿತದಲ್ಲಿ ನೀವು ನಿಮ್ಮ ವಯಸ್ಸನ್ನು ನಮೂದಿಸಲು ಕೇಳಲ್ಪಡುತ್ತೀರಿ.
08:11 ನಾನು ಇಲ್ಲಿ 20 ಎಂದು ನಮೂದಿಸಿ Enter ಒತ್ತುತ್ತೇನೆ.
08:13 ನಾವು
08:15 The name is Ramu'. The age is 20 ಎಂಬ ಫಲಿತವನ್ನು ಪಡೆಯುತ್ತೇವೆ .
08:18 ನಾವು ಬಳಕೆದಾರರಿಂದ ಇನ್ ಪುಟ್ ಅನ್ನು ಪಡೆಯುವುದು ಹೇಗೆಂದು ತಿಳಿದೆವು.
08:24 ಈ ಟ್ಯುಟೋರಿಯಲ್ ನಲ್ಲಿ ನಾವು
08:26 InputStreamReader (ಇನ್ ಪುಟ್ ಸ್ಟ್ರೀಮ್ ರೀಡರ್)' ನ ಕುರಿತು,
08:28 ' BufferedReader (ಬಫ್ಫರ್ಡ್ ರೀಡರ್)' ನ ಕುರಿತು ಮತ್ತು 'String' ಡೇಟಾ ಟೈಪ್ ನಿಂದ ಇತರ ಡೇಟಾಟೈಪ್ ಗಳಿಗೆ ಪರಿವರ್ತಿಸಲು ಕಲಿತಿದ್ದೇವೆ.
08:33 ಸ್ವಂತ ಅಭ್ಯಾಸಕ್ಕಾಗಿ , ಒಂದು float (ಫ್ಲೋಟ್), ಒಂದು byte (ಬೈಟ್)ಮತ್ತು ಒಂದು character (ಕ್ಯಾರೆಕ್ಟರ್) ಇನ್ ಪುಟ್ ಗಳನ್ನುಬಳಕೆದಾರರಿಂದ ಪಡೆದು ನಂತರ ಫಲಿತವನ್ನು ತೋರಿಸಿ.
08:42 ಮತ್ತು ಒಂದು ಸಂಖ್ಯೆಯನ್ನು ಇನ್ ಪುಟ್ ಆಗಿ ಪಡೆದು ಅದನ್ನು 3 ರಿಂದ ಭಾಗಿಸಿ ಫಲಿತವನ್ನು ತೋರಿಸಿ.
08:49 ಹೆಚ್ಚಿನ ಮಾಹಿತಿಗಾಗಿ ಮತ್ತು ವೀಡಿಯೋಗಳಿಗಾಗಿ [1] ಅಂತರ್ಜಾಲ ತಾಣವನ್ನು ಭೇಟಿಕೊಡಿ.
08:54 ಇದು ಈ ಸ್ಪೋಕನ್ ಟ್ಯುಟೋರಿಯಲ್ ಯೋಜನೆಯ ಬಗ್ಗೆ ತಿಳಿಸುತ್ತದೆ.
08:57 ನೀವು ಒಳ್ಳೆಯ ಬ್ಯಾಂಡ್ವಿಿಡ್ತ್ ಹೊಂದಿರದಿದ್ದಲ್ಲಿ ವಿಡಿಯೋ ವನ್ನು ಡೌನ್ಲೋ/ಡ್ ಮಾಡಿ ನೋಡಬಹುದು.
09:02 ಸ್ಪೋಕನ್ ಟ್ಯುಟೋರಿಯಲ್ ಯೋಜನಾ ತಂಡವು
09:04 ಸ್ಪೋಕನ್ ಟ್ಯುಟೋರಿಯಲ್ ಗಳ ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ.
09:07 ಓನ್ಲೈನನ್ ಪರೀಕ್ಷೆ ಯಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನು ನೀಡುತ್ತದೆ.
09:11 ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಗೆ ಬರೆಯಿರಿ.
09:18 ಸ್ಪೋಕನ್ ಟ್ಯುಟೋರಿಯಲ್ ಯೋಜನೆಯು ಟಾಕ್ ಟು ಎ ಟೀಚರ್ ಯೋಜನೆಯ ಒಂದು ಭಾಗವಾಗಿದೆ.
09:21 ಇದು ICT ದ್ವಾರಾ ರಾಷ್ಟ್ರೀಯ ಸಾಕ್ಷರತಾ ಮಿಶನ್ MHRD, ಭಾರತ ಸರ್ಕಾರದಿಂದ ಸಮರ್ಥಿತವಾಗಿದೆ.
09:27 ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಂತರ್ಜಾಲ ತಾಣವನ್ನು ಭೇಟಿಕೊಡಿ http://spoken-tutorial.org\NMEICT-Intro
09:36 ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್, ಉಪ್ಪಿನಪಟ್ಟಣ. ಧನ್ಯವಾದಗಳು .ನಮಸ್ಕಾರ..

Contributors and Content Editors

NaveenBhat, PoojaMoolya, Pratik kamble, Vasudeva ahitanal