Java/C2/For-Loop/Kannada
From Script | Spoken-Tutorial
Time | Narration |
00:02 | ಜಾವಾದಲ್ಲಿfor loop ನ ಕುರಿತಾದ ಸ್ಪೋಕ ನ್ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು ಜಾವಾದಲ್ಲಿfor loop ಅನ್ನು ಹೇಗೆ ಉಪಯೋಗಿಸುವುದು ಎಂದು ಕಲಿಯುತ್ತೇವೆ. |
00:12 | ಈ ಟ್ಯುಟೋರಿಯಲ್ ಗಾಗಿ ನಾನು
Ubuntu 11.10 JDK 1.6 ಮತ್ತು Eclipse 3.7.0 ಗಳನ್ನು ಉಪಯೋಗಿಸುತ್ತೇನೆ. |
00:24 | ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು ಜಾವಾದಲ್ಲಿ relational operators ಮತ್ತು if statement ಗಳ ಕುರಿತು ತಿಳಿದುಕೊಂಡಿರಬೇಕು. |
00:32 | ತಿಳಿದಿರದಿದ್ದಲ್ಲಿ ನಮ್ಮ ಈ ವೆಬ್ ಸೈಟ್ ಅನ್ನು ನೋಡಿ. [1] |
00:40 | ಇಲ್ಲಿ for loopಗೆ ಸಿಂಟ್ಯಾಕ್ಸ್ ಇದೆ. |
00:44 | ಇದು initialization, loop condition ಮತ್ತು increment ಗಳನ್ನು ಹೊಂದಿದೆ. |
00:51 | ನಂತರ ಇದು ಫಾರ್ ಬ್ಲಾಕ್ ಅನ್ನು ಹೊಂದಿದೆ. ಇದು ಲೂಪ್ ಕಂಡಿಷನ್ ಸರಿ ಇರುವವರೆಗೂ ಎಕ್ಸಿಕ್ಯೂಟ್ ಆಗುತ್ತಲೇ ಇರುತ್ತದೆ. |
01:00 | ಈಗ Eclipse ನಲ್ಲಿ ಒಂದು ಉದಾಹರಣೆಯನ್ನು ನೋಡೋಣ. |
01:04 | ಈಗ eclipse ಗೆ ಹೋಗೋಣ. |
01:07 | ನಾವು ಈಗಾಗಲೇ ForLoopDemo ಎಂಬ ಕ್ಲಾಸ್ ಅನ್ನು ಹೊಂದಿದ್ದೇವೆ. |
01:12 | ಈಗ main method ನಲ್ಲಿ for loop ಅನ್ನು ಸೇರಿಸೋಣ. |
01:17 | ಹಾಗಾಗಿ main method ನಲ್ಲಿ int i ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ. |
01:24 | ನಂತರ for ಎಂದು ಟೈಪ್ ಮಾಡಿ ಬ್ರ್ಯಾಕೆಟ್ ನಲ್ಲಿ i ಸಮ 0 ಸೆಮಿಕೋಲನ್ i ಚಿಕ್ಕದು ಚಿಹ್ನೆ 10 ಸೆಮಿಕೋಲನ್ i ಸಮ i ಪ್ಲಸ್ 1 ಎಂದು ಟೈಪ್ ಮಾಡಿ. |
01:45 | ಈ ಹೇಳಿಕೆಯು ಲೂಪ್ ಹೇಗೆ ಪ್ರಗತಿಹೊಂದುತ್ತದೆ ಎಂಬುದನ್ನು ನಿರ್ಧರಿಸುತ್ತದೆ. |
01:53 | i =0 ಇದು ಲೂಪ್ ನ ಪ್ರಾರಂಭಿಕ ಷರತ್ತು. |
01:58 | ಈ ಹೇಳಿಕೆಯು ವೇರಿಯೇಬಲ್ ಅನ್ನು ಇನಿಷಿಯಲೈಜ್ ಮಾಡಿಕೊಳ್ಳಲು ಬಿಡುತ್ತದೆ. |
02:05 | i<10 ಇದು loop running condition. |
02:09 | ಷರತ್ತು ನಿಜವಾಗಿದ್ದರೆ for block ಎಕ್ಸಿಕ್ಯೂಟ್ ಆಗುತ್ತದೆ. |
02:14 | ಇಲ್ಲವಾದಲ್ಲಿ ಅದು ನಿರ್ಲಕ್ಷಿಸಲ್ಪಡುತ್ತದೆ. |
02:17 | ಅಂದರೆ, 'i' ಯ ಬೆಲೆಯು 10 ಕ್ಕಿಂತ ಹೆಚ್ಚು ಅಥವಾ ಸಮವಾದಾಗ ಬ್ಲಾಕ್ ಎಕ್ಸಿಕ್ಯೂಟ್ ಆಗುವುದಿಲ್ಲ. |
02:25 | ನಂತರ i= i+1 ಇದು ಲೂಪ್ ವೇರಿಯೇಬಲ್ ಹೇಗೆ ಬದಲಾಗುತ್ತದೆ ಎಂದು ಹೇಳುತ್ತದೆ. |
02:32 | ಇಲ್ಲಿ 'i' ನ ಬೆಲೆಯು ಸೊನ್ನೆಯಿಂದ ಪ್ರಾರಂಭವಾಗುತ್ತದೆ. |
02:35 | ಇದು ಲೂಪ್ ನ ಪ್ರತಿ ಪುನರಾವರ್ತನೆಗೆ ಅದು 10 ಆಗುವವರೆಗೂ ಒಂದರಿಂದ ಹೆಚ್ಚಾಗುತ್ತಾ ಹೋಗುತ್ತದೆ. |
02:42 | ಈಗ 'i' ನೊಂದಿಗೆ ಏನಾದರೂ ಮಾಡೋಣ. |
02:46 | ಕರ್ಲಿ ಬ್ರ್ಯಾಕೆಟ್ ಅನ್ನು ತೆರೆದು ಮುಚ್ಚಿರಿ. |
02:49 | ಕರ್ಲಿ ಬ್ರ್ಯಾಕೆಟ್ ನ ಒಳಗೆ System ಡಾಟ್ out ಡಾಟ್ println ಎಂದು ಟೈಪ್ ಮಾಡಿ ಮತ್ತು i ಗುಣಿಸು i ಎಂದು ಟೈಪ್ ಮಾಡಿ. |
03:06 | ಇದು 0 ಯಿಂದ 9 ರವರೆಗಿನ ಎಲ್ಲ ಸಂಖ್ಯೆಗಳ ವರ್ಗ ವನ್ನುಪ್ರಿಂಟ್ ಮಾಡುತ್ತದೆ. |
03:11 | ಈಗ ಫಲಿತಾಂಶವನ್ನು ನೋಡೋಣ. |
03:13 | ಹಾಗಾಗಿ ಪ್ರೋಗ್ರಾಂ ಅನ್ನು save ಮಾಡಿ ಮತ್ತು run ಮಾಡಿ. |
03:17 | ನಾವು ನೋಡುವಂತೆ ಲೂಪ್ 0 ಯಿಂದ 9 ರವರೆಗೆ ರನ್ ಆಗುತ್ತದೆ. |
03:23 | ಪ್ರತಿ ಪುನರಾವರ್ತನೆಯಲ್ಲೂ ಸಂಖ್ಯೆಯ ವರ್ಗ ಪ್ರಿಂಟ್ ಆಗುತ್ತದೆ. |
03:28 | ಈಗ ನಾವು 3 ಅಥವಾ 5 ರ ಎರಡು ಅಂಕೆಗಳ ಎಲ್ಲ ಅಪವರ್ತನ ಗಳನ್ನು ಪ್ರಿಂಟ್ ಮಾಡೋಣ. |
03:37 | ಅಂದರೆ i ನ ಬೆಲೆಯು 10 ರಿಂದ 99 ರವರೆಗೆ ಇರಬೇಕು. |
03:42 | ಹಾಗಾಗಿ, i ಸಮ 0 ಯನ್ನು i ಸಮ 10 ಎಂದು ಬದಲಿಸಿ. |
03:48 | ಮತ್ತು i ಚಿಕ್ಕದು 10 ಅನ್ನು i ಚಿಕ್ಕದು 100 ಎಂದು ಬದಲಿಸಿ. |
03:54 | ನಂತರ ಕರ್ಲಿ ಬ್ರ್ಯಾಕೆಟ್ ನ ಒಳಗೆ, ನಾವು ಕೇವಲ ಆ ಸಂಖ್ಯೆಯು 3 ಅಥವಾ 5 ರ ಅಪವರ್ತನ ವಾಗಿದ್ದರೆ ಮಾತ್ರ ಪ್ರಿಂಟ್ ಮಾಡುತ್ತೇವೆ. |
04:03 | ಹಾಗಾಗಿif ಬ್ರ್ಯಾಕೆಟ್ ನಲ್ಲಿ i ಮಾಡ್ 3 ಸಮ ಸಮ 0 OR ಬ್ರ್ಯಾಕೆಟ್ ನಲ್ಲಿ i ಮಾಡ್ 5 ಸಮ ಸಮ 0 ಎಂದು ಟೈಪ್ ಮಾಡಿ. |
04:32 | ಈ ಸ್ಟೇಟ್ ಮೆಂಟ್ 'i' ಯು '3' ಅಥವಾ '5' ರಿಂದ ಭಾಗಿಸಲ್ಪಡುತ್ತದೆಯೇ ಎಂದು ಪರೀಕ್ಷಿಸುತ್ತದೆ. |
04:38 | ನಂತರ ಕರ್ಲಿ ಬ್ರ್ಯಾಕೆಟ್ ನಲ್ಲಿ 'i' ನ ಬೆಲೆಯನ್ನು ಪ್ರಿಂಟ್ ಮಾಡಿ. |
04:50 | ಈಗ ಫಲಿತಾಂಶವನ್ನು ನೋಡೋಣ. |
04:52 | ಹಾಗಾಗಿ ಈ ಪ್ರೋಗ್ರಾಂ ಅನ್ನು save ಮಾಡಿ run ಮಾಡೋಣ. |
04:56 | ಈಗ ನಾವು ಆ ಸಂಖ್ಯೆಗಳು 3 ಅಥವಾ 5 ರ ಅಪವರ್ತನಗಳಾಗಿರುವುದನ್ನು ನೋಡಬಹುದು. ಈ ರೀತಿಯಲ್ಲಿ ಜಾವಾದಲ್ಲಿ for loop ಅನ್ನು ಉಪಯೋಗಿಸಬಹುದು. |
05:11 | ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
|
05:14 | ಈ ಟ್ಯುಟೋರಿಯಲ್ ನಲ್ಲಿ ನಾವು ಜಾವಾದಲ್ಲಿ for loop ಅನ್ನು ಉಪಯೋಗಿಸುವದನ್ನು ಕಲಿತಿದ್ದೇವೆ. |
05:20 | ಸ್ವಂತ ಅಭ್ಯಾಸಕ್ಕಾಗಿ, ಮೂರು ಅಂಕೆಗಳ ಸಂಖ್ಯೆಯನ್ನು ತೆಗೆದುಕೊಳ್ಳಿ. ಅದರ ಪ್ರತಿ ಅಂಕೆಯ ಘನದ ಮೊತ್ತವು ಆ ಸಂಖ್ಯೆಗೆ ಸಮವಾಗಿದ್ದರೆ ಅದನ್ನು ಆರ್ಮ್ ಸ್ಟ್ರಾಂಗ್ ಸಂಖ್ಯೆ ಎನ್ನುತ್ತಾರೆ. |
05:29 | ಉದಾಹರಣೆಗೆ 153 ಇದು '1 ರ ಘನ' ಪ್ಲಸ್ '5 ರ ಘನ' ಪ್ಲಸ್ '3 ರ ಘನ'.ಕ್ಕೆ ಸಮ. |
05:36 | ಇಂತಹ ಎಲ್ಲ 3 ಅಂಕೆಗಳ ಸಂಖ್ಯೆಯನ್ನು ಕಂಡುಹಿಡಿಯಿರಿ. |
05:40 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಕುರಿತು ಹೆಚ್ಚಿನ ವಿಷಯವನ್ನು ತಿಳಿಯಲು |
05:42 | ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋಗಳನ್ನು ನೋಡಿ. spoken-tuitorial.org/What_is_a_Spoken-Tuitorial? |
05:49 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಕುರಿತು ತಿಳಿಸಿಕೊಡುತ್ತದೆ. ನೀವು ಒಳ್ಳೆಯ ಬ್ಯಾಂಡ್ ವಿಡ್ತ್ ಹೊಂದಿಲ್ಲದಿದ್ದಲ್ಲಿ ಡೌನ್ ಲೋಡ್ ಮಾಡಿ ನೋಡಿಕೊಳ್ಳಬಹುದು. |
05:56 | ಸ್ಪೋಕನ್ ಟ್ಯುಟೋರಿಯಲ್ ತಂಡವು : ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ. |
06:01 | ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ |
06:04 | ಹೆಚ್ಚಿನ ವಿವರಗಳಿಗೆ contact ಅಟ್ spoken ಹೈಫನ್ tutorial ಡಾಟ್ org. ಗೆ ಬರೆಯಿರಿ. |
06:10 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಟಾಕ್ ಟು ಎ ಟೀಚರ್ ನ ಒಂದು ಭಾಗವಾಗಿದೆ. ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD,ಭಾರತ ಸರ್ಕಾರದಿಂದ ಪ್ರಮಾಣಿತವಾಗಿದೆ. |
06:20 | ಇದರ ಕುರಿತು ಹೆಚ್ಚಿನ ವಿವರಗಳು spoken ಹೈಫನ್ tutorial ಡಾಟ್ org ಸ್ಲ್ಯಾಶ್ NMEICT ಹೈಫನ್Intro ನಲ್ಲಿ ದೊರೆಯುತ್ತದೆ. |
06:28 | ಈ ಸ್ಕ್ರಿಪ್ಟ್ ಅನ್ನು TalentSprint ನಿಂದ ಪಡೆದುಕೊಳ್ಳಲಾಗಿದೆ. ಅನುವಾದ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ ಉಪ್ಪಿನ ಪಟ್ಟಣ. ಧನ್ಯವಾದಗಳು. |