Java/C2/Creating-class/Kannada

From Script | Spoken-Tutorial
Jump to: navigation, search
Time Narration
00:02 ಜಾವದಲ್ಲಿ Creating Classes ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:05 ಈ ಟ್ಯುಟೋರಿಯಲ್ ನಲ್ಲಿ ನಾವು
00:08 ಪ್ರಾಪಂಚಿಕವಾಗಿ class ನ ಪರಿಕಲ್ಪನೆ,
00:10 ಜಾವಾದಲ್ಲಿ class ನ ಪರಿಕಲ್ಪನೆ,
00:12 Java class ರಚನೆ
00:14 Java class ನ ಸಿಂಟ್ಯಾಕ್ಸ್
00:16 ಮತ್ತು Java class ನ ಉದಾಹರಣೆಗಳನ್ನು ಕಲಿಯುತ್ತೇವೆ.
00:19 ಇಲ್ಲಿ ನಾವು

Ubuntu version 11.10 OS ( ಉಬಂಟು ಓಪರೇಟಿಂಗ್ ಸಿಸ್ಟಮ್ ನ ಆವೃತ್ತಿ ೧೧.೧೦) Java Development kit 1.6 (ಜಾವಾ ಡೆವೆಲೊಪ್‍ಮೆಂಟ್ ಕಿಟ್ ೧.೬) ಹಾಗೂ Eclipse 3.7.0 (ಎಕ್ಲಿಪ್ಸ್ ೩.೭.೦) ಗಳನ್ನು ಉಪಯೋಗಿಸುತ್ತೇವೆ.

00:30 ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು ಎಕ್ಲಿಪ್ಸ್ ನಲ್ಲಿ ಜಾವಾದ ಸುಲಭವಾದ ಪ್ರೋಗ್ರಾಮ್ ಅನ್ನುಬರೆಯಲು, ಕಂಪೈಲ್ ಮಾಡಲು ಮತ್ತು ರನ್ ಮಾಡಲು ತಿಳಿದಿರಬೇಕು.
00:37 ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ಈ ಜಾಲತಾಣವನ್ನು ಭೇಟಿ ಮಾಡಿ.
00:46 ಈಗ ಪ್ರಾಪಂಚಿಕವಾಗಿ ಕ್ಲಾಸ್ ಎಂದರೇನು ಎಂದು ನೋಡೋಣ.
00:50 ನಾವು ಏನನ್ನು ನೋಡಬಲ್ಲೆವೋ ಅವೆಲ್ಲವನ್ನೂ ವಸ್ತುಗಳು ಎನ್ನುತ್ತಾರೆ.
00:54 ಮತ್ತು ಎಲ್ಲಾ ವಸ್ತುಗಳನ್ನೂ ಕೆಲವು ಪಂಗಡಗಳನ್ನಾಗಿ ವಿಂಗಡಿಸಬಹುದು.
00:59 ಈ ಪಂಗಡಗಳನ್ನು ಕ್ಲಾಸ್ ಎಂದು ಕರೆಯಬಹುದು.
01:02 ಉದಾಹರಣೆಗೆ ಮನುಷ್ಯರು ಒಂದು ಕ್ಲಾಸ್.
01:05 ನಾವೆಲ್ಲ ಈ ಕ್ಲಾಸ್ ನ ಬೇರೆ ಬೇರೆ ಒಬ್ಜೆಕ್ ಗಳು.
01:08 ನಾವೆಲ್ಲರೂ ಬೇರೆ ಬೇರೆ ಗುಣಗಳನ್ನು ಹೊಂದಿದ್ದೇವೆ.. ಉದಾಹರಣೆಗೆ ಕಣ್ಣು, ಕಾಲು, ಕೈ ಮುಂತಾದವು..
01:13 ಇವೆಲ್ಲವೂ ಮನುಷ್ಯ ಎಂಬ ಕ್ಲಾಸ್ ನಲ್ಲಿ ಸಾಮಾನ್ಯವಾದ ಅಂಶಗಳು.
01:15 ನೋಡುವುದು, ತಿನ್ನುವುದು , ನಡೆಯುವುದು ಮುಂತಾದವು ಮನುಷ್ಯ ಎಂಬ ಕ್ಲಾಸ್ ನ ಸಾಮಾನ್ಯವಾದ ಕೆಲವು ನಡವಳಿಕೆಗಳು.
01:22 ಈಗ ನಾವು ಜಾವಾದಲ್ಲಿ ಕ್ಲಾಸ್ ಎಂದರೇನು ಎಂದು ನೋಡೋಣ.
01:26 ಕ್ಲಾಸ್ಅಂದರೆ ರಚನೆಯಾದ ಪ್ರತಿಯೊಂದು ಒಬ್ಜೆಕ್ಟ್ ಗಳಿಗೂ ಒಂದು ನೀಲನಕ್ಷೆ.
01:31 ಜಾವಾ ಕ್ಲಾಸ್ ನ ಸ್ವರೂಪ ಹೀಗಿದೆ :
01:35 ಒಂದು ಕ್ಲಾಸ್ ಒಬ್ಜೆಕ್ಟ್ ನ ಗುಣಗಳು ಅಂದರೆ ವೇರಿಯೇಬಲ್ಸ್
01:37 ಮತ್ತು ನಡವಳಿಕೆಗಳು ಅಂದರೆ ಮೆಥಡ್ಸ್ ಗಳನ್ನು ಡಿಫೈನ್ ಮಾಡುತ್ತದೆ.
01:40 ಈಗ ನಾವು ಕ್ಲಾಸ್ ಅನ್ನು ಡಿಕ್ಲೇರ್ ಮಾಡುವ ಸಿಂಟ್ಯಾಕ್ಸ್ ಅನ್ನು ನೋಡೋಣ.
01:44 modifier – class –classname ಗಳನ್ನು ಟೈಪ್ ಮಾಡಿ ಕರ್ಲೀ ಬ್ರ್ಯಾಕೆಟ್ ನಲ್ಲಿ ವೇರಿಯೇಬಲ್, ಕನ್ಸ್-ಟ್ರಕ್ಟರ್ ಮತ್ತು ಮೆಥಡ್ ಗಳ ಡಿಕ್ಲೇರ್ ಮಾಡಬೇಕು.
01:52 ಇವುಗಳ ಬಗ್ಗೆ ಮುಂದಿನ ಟ್ಯುಟೋರಿಯಲ್ ಗಳಲ್ಲಿ ಸವಿಸ್ತಾರವಾಗಿ ಕಲಿಯುತ್ತೇವೆ.
01:58 ಈಗ ಎಕ್ಲಿಪ್ಸ್ ಅನ್ನು ಉಪಯೋಗಿಸಿ ಒಂದು ಸುಲಭವಾದ ಕ್ಲಾಸ್ ಅನ್ನು ರಚನೆ ಮಾಡೋಣ.
02:03 ನಾನು ಆಗಲೇ ಎಕ್ಲಿಪ್ಸ್ ಅನ್ನು ತೆರೆದಿದ್ದೇನೆ.
02:09 ಈಗ ನಾವು ಒಂದು ಪ್ರಕಲ್ಪವನ್ನು ರಚನೆ ಮಾಡೋಣ.
02:11 File ಅನ್ನು ಕ್ಲಿಕ್ ಮಾಡಿ, New ಗೆ ಹೋಗಿ Java Project ಮೇಲೆ ಕ್ಲಿಕ್ ಮಾಡಿ.
02:20 'New Project Wizard' ನಲ್ಲಿ , Project name ' ಅಲ್ಲಿ 'ClassDemo ಎಂದು ಟೈಪ್ ಮಾಡಿ. C ಮತ್ತು D ಕ್ಯಾಪಿಟಲ್ ಅಕ್ಷರಗಳಾಗಿರಲಿ.
02:34 Finish ಮೇಲೆ ಕ್ಲಿಕ್ ಮಾಡಿ.
02:38 Project ClassDemo ರಚನೆಯಾಗಿರುವುದನ್ನು ನೋಡಬಹುದು.
02:43 ಈಗ ನಾವು Student ಎಂಬ ಹೆಸರಿನ ಜಾವಾ ಕ್ಲಾಸ್ ಅನ್ನು ರಚನೆ ಮಾಡೋಣ.
02:47 ClassDemo ಮೇಲೆ ರೈಟ್ ಕ್ಲಿಕ್ ಮಾಡಿ New ಗೆ ಹೋಗಿ Class ನ ಮೇಲೆ ಕ್ಲಿಕ್ ಮಾಡಿ.
02:56 New Java Class wizard ನಲ್ಲಿ Name ನಲ್ಲಿ Student ಎಂದು ಟೈಪ್ ಮಾಡಿ.
03:03 ಇಲ್ಲಿ ನಾವು public ಎಂಬ modifier ಅನ್ನು ನೋಡಬಹುದು.
03:07 ಇದು ಈ ಕ್ಲಾಸ್ ಎಲ್ಲ ಕ್ಲಾಸ್ ಗಳಿಂದಲೂ ನೋಡಲ್ಪಡಬಹುದು ಎಂದು ತೋರಿಸುತ್ತದೆ.
03:11 ಒಂದು ವೇಳೆ ಕ್ಲಾಸ್ modifier ಅನ್ನು ಹೊಂದಿರದಿದ್ದಲ್ಲಿ ಅದು default ಆರಿಸಿಕೊಳ್ಳಿ, ಅಂದರೆ ಆ ಕ್ಲಾಸ್ ಕೇವಲ ಅದರ ಪ್ಯಾಕೇಜ್ ನಲ್ಲಿ ಮಾತ್ರ ನೋಡಲ್ಪಡುತ್ತದೆ.
03:18 ನಾವು ಪ್ಯಾಕೇಜ್ ಗಳ ಕುರಿತು ಮುಂದಿನ ಟ್ಯುಟೋರಿಯಲ್ ಗಳಲ್ಲಿ ಕಲಿಯುತ್ತೇವೆ.
03:23 ನಾನು public ಅನ್ನು ಆರಿಸಿಕೊಂಡಿದ್ದೇನೆ.
03:26 method stubs ನಲ್ಲಿpublic static void main ಅನ್ನು ಆರಿಸಿಕೊಳ್ಳಿ.
03:31 ನಂತರ Finish ಮೇಲೆ ಕ್ಲಿಕ್ ಮಾಡಿ.
03:36 ನಾವು Student ಹೆಸರಿನ ಕ್ಲಾಸ್ ರಚನೆಯಾಗಿರುವುದನ್ನು ನೋಡಬಹುದು.
03:40 ಈಗ ಕಾಮೆಂಟ್ ಗಳನ್ನು ಅಳಿಸೋಣ.
03:51 Student ಕ್ಲಾಸ್ಇದು , Name, Roll Number, Marks ಮೊದಲಾದ ಪ್ರಾಪರ್ಟಿ ಗಳನ್ನು ಹೊಂದಿರಬಹುದು.
03:57 ಹಾಗಾಗಿ class Student ನ ಒಳಗೆ ನಾನು ಈಗ Roll Number ಮತ್ತು Name ಎಂಬ ಎರಡು ವೇರಿಯೇಬಲ್ ಗಳನ್ನು ಡಿಕ್ಲೇರ್ ಮಾಡುತ್ತೇನೆ.
04:04 ಹಾಗಾಗಿ int roll ಅಂಡರ್ ‍ಸ್ಕೋರ್ number ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
04:14 String name ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
04:19 ನಾನು ಎರಡು ವೇರಿಯೇಬಲ್ ಗಳನ್ನು ಡಿಕ್ಲೇರ್ ಮಾಡಿದಂತಾಯಿತು.
04:22 ಕ್ಲಾಸ್ ಮೆಥಡ್ ಗಳನ್ನು ಕೂಡ ಹೊಂದಿರುತ್ತದೆ.
04:25 ಹಾಗಾಗಿ StudentDetail ಎಂಬ ಮೆಥಡ್ ಅನ್ನು ರಚನೆ ಮಾಡೋಣ.
04:30 ಈ ಮೆಥಡ್ ಪ್ರತಿಯೊಬ್ಬ ವಿದ್ಯಾರ್ಥಿಯ ವಿವರವನ್ನೂ ನೀಡುತ್ತದೆ.
04:34 ಹಾಗಾಗಿ void studentDetail ಎಂದು ಟೈಪ್ ಮಾಡಿ ಬ್ರ್ಯಾಕೆಟ್ ಅನ್ನು ತೆರೆದು ಮುಚ್ಚಿ. ಕರ್ಲೀ ಬ್ರ್ಯಾಕೆಟ್ ತೆರೆಯಿರಿ.
04:49 ಈ ಮೆಥಡ್ ವಿದ್ಯಾರ್ಥಿಯ ರೋಲ್ ನಂಬರ್ ಮತ್ತು ಹೆಸರನ್ನು ನೀಡುತ್ತದೆ.
04:53 ಹಾಗಾಗಿ Systemಡಾಟ್outಡಾಟ್ println ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿThe roll number is ಎಂದು ಟೈಪ್ ಮಾಡಿ ಅಥವಾ ನಾವು number is ಎಂದು ಕೂಡಾ ಟೈಪ್ ಮಾಡಬಹುದು, ಡಬಲ್ ಕೋಟ್ಸ್ ಅನ್ನು ಕ್ಲೋಸ್ ಮಾಡಿ ಪ್ಲಸ್ roll_number ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
05:23 ಮುಂದಿನ ಸಾಲಿನಲ್ಲಿSystem ಡಾಟ್outಡಾಟ್println ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿThe name is ಪ್ಲಸ್ name ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
05:40 ಮೇಯ್ನ್ ಮೆಥಡ್ ನಲ್ಲಿ System ಡಾಟ್outಡಾಟ್println ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿ We have created a class with two variables and 1 method. ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
06:10 ಹೀಗೆ ನಾವು student ಕ್ಲಾಸ್ ಅನ್ನು ರಚನೆ ಮಾಡಿದ್ದೇವೆ.
06:20 Control ಮತ್ತು S ಕೀಲಿಗಳನ್ನು ಒಟ್ಟಿಗೇ ಒತ್ತಿ ಫೈಲ್ ಅನ್ನು ಸೇವ್ ಮಾಡಿರಿ.
06:26 Control ಮತ್ತು F11 ಕೀಲಿಗಳನ್ನು ಒಟ್ಟಿಗೇ ಒತ್ತಿ ಪ್ರೋಗ್ರಾಮ್ ಅನ್ನು ರನ್ ಮಾಡಿರಿ.
06:33 ನಾವು, We have created a class with 2 variables and 1 method ಎಂಬ ಫಲಿತವನ್ನು ಪಡೆಯುತ್ತೇವೆ.
06:38 ಮೇಯ್ನ್ ಮೆಥಡ್ ನಲ್ಲಿ ಟೈಪ್ ಮಾಡಿದಂತೆ ಮೇಲಿನ ಫಲಿತವನ್ನು ಪಡೆಯುತ್ತೇವೆ.
06:46 ನಾವು ಕ್ಲಾಸ್ ಅನ್ನು ಯಶಸ್ವಿಯಾಗಿ ರಚಿಸಿದ್ದೇವೆ.
06:50 ಹಾಗಾಗಿ ನಾವು ಈ ಟ್ಯುಟೋರಿಯಲ್ ನಲ್ಲಿ ಕ್ಲಾಸ್ ನ ಕುರಿತು ಮತ್ತು ಜಾವಾದಲ್ಲಿ ಕ್ಲಾಸ್ ಅನ್ನು ರಚಿಸಲು ಕಲಿತಿದ್ದೇವೆ.
06:59 ಸ್ವಂತ ಅಭ್ಯಾಸಕ್ಕಾಗಿ, emp ಅಂಡರ್ ಸ್ಕೋರ್number ಮತ್ತು empಅಂಡರ್ ಸ್ಕೋರ್name ಎಂಬ ವೇರಿಯೇಬಲ್ ಗಳನ್ನೊಳಗೊಂಡ Employee ಎಂಬ ಹೆಸರಿನ ಕ್ಲಾಸ್ ಅನ್ನು ರಚನೆ ಮಾಡಿ.
07:10 ಮತ್ತು ನೌಕರರ ಮಾಹಿತಿಯನ್ನು ನೀಡುವ printEmployee ಎಂಬ ಹೆಸರಿನ ಮೆಥಡ್ ಅನ್ನು ರಚನೆ ಮಾಡಿ.
07:16 ಸ್ಪೋಕನ್ ಟ್ಯುಟೋರಿಯಲ್ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ,
07:19 ಮತ್ತು ವೀಡಿಯೋಗಾಗಿ [1] ಅಂತರ್ಜಾಲ ತಾಣವನ್ನು ಭೇಟಿಕೊಡಿ.
07:22 ಇದು ಈ ಸ್ಪೋಕನ್ ಟ್ಯುಟೋರಿಯಲ್ ಕುರಿತು ತಿಳಿಸಿಕೊಡುತ್ತದೆ.
07:25 ನೀವು ಒಳ್ಳೆಯ ಬ್ಯಾಂಡ್‍ವಿಡ್ತ್ ಹೊಂದಿರದಿದ್ದಲ್ಲಿ ವಿಡಿಯೋ ವನ್ನು ಡೌನ್‍ಲೋಡ್ ಮಾಡಿ ಕೂಡಾ ನೋಡಬಹುದು.
07:30 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು
07:32 ಸ್ಪೋಕನ್ ಟ್ಯುಟೋರಿಯಲ್ ಗಳ ಕುರಿತು ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ.
07:35 ಅಂತರ್ಜಾಲಾಧಾರಿತ ಪರೀಕ್ಷೆಯಲ್ಲಿ ಉತೀರ್ಣರಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
07:38 ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಗೆ ಬರೆಯಿರಿ
07:44 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಟಾಕ್ ಟು ಎ ಟೀಚರ್ ಯೋಜನೆಯ ಒಂದು ಭಾಗವಾಗಿದೆ.
07:48 ಇದು ICT ದ್ವಾರಾ ರಾಷ್ಟ್ರೀಯ ಸಾಕ್ಷರತಾ ಮಿಶನ್ MHRD, ಭಾರತ ಸರ್ಕಾರ ದಿಂದ ಸಮರ್ಥಿತವಾಗಿದೆ.
07:55 ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಂತರ್ಜಾಲ ತಾಣವನ್ನು ಭೇಟಿಕೊಡಿ.http://spoken-tutorial.org/NMEICT-Intro
08:04 ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
08:07 ಕೇಳಿದ್ದಕ್ಕೆ ಧನ್ಯವಾದ. ಅನುವಾದಕ ಮತ್ತು ವಾಚಕ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ.

Contributors and Content Editors

NaveenBhat, PoojaMoolya, Pratik kamble