Java/C2/Constructor-overloading/Kannada

From Script | Spoken-Tutorial
Jump to: navigation, search
Time Narration
00:03 ಜಾವಾದಲ್ಲಿ ಕನ್ಸ್-ಟ್ರಕ್ಟರ್ ಓವರ್-ಲೋಡಿಂಗ್ ಎಂಬ ವಿಷಯದ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:08 ಈ ಟ್ಯುಟೋರಿಯಲ್ ನಲ್ಲಿ ನಾವು,
00:10 ಕನ್ಸ್-ಟ್ರಕ್ಟರ್ ಓವರ್-ಲೋಡಿಂಗ್ ಎಂದರೇನು? ಎಂದು
00:13 ಮತ್ತು ಕನ್ಸ್-ಟ್ರಕ್ಟರ್ ಓವರ್-ಲೋಡ್ ಮಾಡಲು ಕಲಿಯುತ್ತೇವೆ.
00:16 ಇಲ್ಲಿ ನಾವು

Ubuntu version 11.10 OS ( ಉಬಂಟು ಓಪರೇಟಿಂಗ್ ಸಿಸ್ಟಮ್ ನ ಆವೃತ್ತಿ ೧೧.೧೦) Java Development kit 1.6 (ಜಾವಾ ಡೆವೆಲೊಪ್ಮೆಂ ಟ್ ಕಿಟ್ ೧.೬) ಹಾಗೂ Eclipse 3.7.0 ಮತ್ತು (ಎಕ್ಲಿಪ್ಸ್ ೩.೭.೦) ಯನ್ನು ಉಪಯೋಗಿಸುತ್ತೇವೆ.

00:27 ಈ ಟ್ಯುಟೋರಿಯಲ್ ಅನ್ನು ಕಲಿಯಲು ನಾವು
00:30 ಜಾವಾದಲ್ಲಿ ಎಕ್ಲಿಪ್ಸ್ ಅನ್ನು ಉಪಯೋಗಿಸಿ ಕನ್ಸ್-ಟ್ರಕ್ಟರ್ ಅನ್ನು ರಚನೆ ಮಾಡಲು ತಿಳಿದಿರಬೇಕು.
00:34 ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ಕೆಳಕಂಡ ಅಂತರ್ಜಾಲ ತಾಣವನ್ನು ಭೇಟಿಕೊಡಿ.

(http://www.spoken-tutorial.org)

00:40 ಕನ್ಸ್-ಟ್ರಕ್ಟರ್ ಓವರ್-ಲೋಡಿಂಗ್ ಎಂದರೇನು?
00:43 ಒಂದು ಕ್ಲಾಸ್-ಗೆ ಅನೇಕ ಕನ್ಸ್-ಟ್ರಕ್ಟರ್ ಗಳನ್ನು ಡಿಫೈನ್ ಮಾಡುವುದು.
00:46 ಅವುಗಳ ಪ್ಯಾರಾಮೀಟರ್ ಗಳ ವಿಧ ಅಥವಾ ಸಂಖ್ಯೆಗಳಲ್ಲಿ ವ್ಯತ್ಯಾಸವಿರಬೇಕು.
00:50 ಈಗ ನಾವು ಕನ್ಸ್-ಟ್ರಕ್ಟರ್ ಓವರ್-ಲೋಡ್ ಮಾಡುವುದು ಹೇಗೆಂದು ನೋಡೋಣ.
00:54 ಎಕ್ಲಿಪ್ಸ್ ನಲ್ಲಿ ನಾನು ಎರಡು ವೇರಿಯೇಬಲ್ ಮತ್ತು ಒಂದು ಮೆಥಡ್ ಹೊಂದಿರುವ ಕ್ಲಾಸ್ ಆದ Class Student' ಅನ್ನು ರಚಿಸಿದ್ದೇನೆ.
01:03 ನಾವು ಮೊದಲು ಒಂದು ಪ್ಯಾರಾಮೀಟರೈಜ್ಡ್ ಕನ್ಸ್-ಟ್ರಕ್ಟರ್ ಅನ್ನು ರಚನೆ ಮಾಡೋಣ.
01:07 ಹಾಗಾಗಿ Student ಎಂದು ಟೈಪ್ ಮಾಡಿ ಬ್ರ್ಯಾಕೆಟ್ ನ ಒಳಗೆ int number ಅಲ್ಪವಿರಾಮ String the_name ಎಂದು ಟೈಪ್ ಮಾಡಿ.
01:26 ಕರ್ಲಿ ಬ್ರ್ಯಾಕೆಟ್ ನ ಒಳಗೆ roll_number ಸಮ number ಸೆಮಿಕೋಲನ್,
01:38 ಮತ್ತು name ಸಮ the_name ಸೆಮಿಕೋಲನ್ ಎಂದು ಟೈಪ್ ಮಾಡಿ.
01:46 ಹಾಗಾಗಿ ನಾವು ಎರಡು ಪ್ಯಾರಾಮೀಟರ್ ಗಳುಳ್ಳ ಕನ್ಸ್-ಟ್ರಕ್ಟರ್ ಅನ್ನು ರಚಿಸಿದ್ದೇವೆ.
01:51 ಈಗ ಕನ್ಸ್-ಟ್ರಕ್ಟರ್ ಅನ್ನು ಕಾಲ್ ಮಾಡೋಣ.
01:53 ಹಾಗಾಗಿ main ಮೆಥಡ್ ನಲ್ಲಿ new Student ಎಂದು ಟೈಪ್ ಮಾಡಿ ಬ್ರ್ಯಾಕೆಟ್ ತೆರೆದು ಮುಚ್ಚಿ ಸೆಮಿಕೋಲನ್ ಹಾಕಿರಿ.
02:03 ನಾವು constructor Student is undefined (ಕನ್ಸ್-ಟ್ರಕ್ಟರ್ ಸ್ಟುಡೆಂಟ್ ಅನ್-ಡಿಫೈನ್ಡ್) ಎಂಬ ದೋಷವನ್ನು ನೋಡುತ್ತೇವೆ..
02:10 ಏಕೆಂದರೆ ನಾವು ಎರಡು ಪ್ಯಾರಾಮೀಟರ್ ಗಳನ್ನು ಹೊಂದಿರುವ ಕನ್ಸ್-ಟ್ರಕ್ಟರ್ ಅನ್ನು ಡಿಫೈನ್ ಮಾಡಿದ್ದೇವೆ.
02:16 ಮತ್ತು ಪ್ಯಾರಾಮೀಟರ್ ಗಳನ್ನು ಹೊಂದಿರದ ಕನ್ಸ್-ಟ್ರಕ್ಟರ್ ಅನ್ನು ಕಾಲ್ ಮಾಡಿದ್ದೇವೆ.
02:22 ಹಾಗಾಗಿ ನಾವು ಆರ್ಗ್ಯುಮೆಂಟ್ಸ್ ಗಳನ್ನು ಕಳುಹಿಸಬೇಕು.
02:26 ಹಾಗಾಗಿ ಬ್ರ್ಯಾಕೆಟ್ ನ ಒಳಗೆ 22 ಅಲ್ಪವಿರಾಮ ಡಬಲ್ ಕೋಟ್ಸ್ ನಲ್ಲಿ Ram ಎಂದು ಟೈಪ್ ಮಾಡಿ.
02:33 ಈಗ ದೋಷ ಪರಿಹಾರವಾದದ್ದನ್ನು ನೋಡುತ್ತಿದ್ದೇವೆ.
02:36 ಈಗ ಮೆಥಡ್ ಅನ್ನು ಕಾಲ್ ಮಾಡೋಣ.
02:38 ಹಾಗಾಗಿ new ಗೆ ಹಿಂದೆ Student s ಸಮ new student ಎಂದು ಟೈಪ್ ಮಾಡಿ.
02:45 ಈಗ ಒಬ್ಜೆಕ್ಟ್ s ಅನ್ನು ಉಪಯೋಗಿಸಿ studentDetail() ಎಂಬ ಮೆಥಡ್ ಅನ್ನು ಪುನಃ ಕಾಲ್ ಮಾಡಿ.
02:53 ಸೇವ್ ಮಾಡಿ ರನ್ ಮಾಡಿರಿ.
02:58 ನಾವು 22 ಮತ್ತು Ram ಎಂಬ ಫಲಿತವನ್ನು ನೋಡುತ್ತೇವೆ.
03:03 ಈಗ ನಾವು ಪ್ಯಾರಾಮೀಟರ್ ಗಳಿಲ್ಲದ ಕನ್ಸ್-ಟ್ರಕ್ಟರ್ ಅನ್ನು ಡಿಫೈನ್ ಮಾಡೋಣ.
03:07 Student ಎಂದು ಟೈಪ್ ಮಾಡಿ ಬ್ರ್ಯಾಕೆಟ್ ತೆರೆದು ಮುಚ್ಚಿರಿ.
03:12 ಕರ್ಲೀ ಬ್ರ್ಯಾಕೆಟ್ ನ ಒಳಗೆ roll_number ಸಮ 0 ಎಂದು ಟೈಪ್ ಮಾಡಿ.
03:21 ಮತ್ತು name ಸಮ ಡಬಲ್ ಕೋಟ್ಸ್ ನಲ್ಲಿ –(ಹೈಪನ್) ಅನ್ನು ಟೈಪ್ ಮಾಡಿ. ಇದು ಹೆಸರಿಲ್ಲ ಎಂದು ಸೂಚಿಸುತ್ತದೆ.
03:30 ಹಾಗಾಗಿ ನಾವು ಈಗ ಪ್ಯಾರಾಮೀಟರ್ ಗಳನ್ನು ಹೊಂದಿರದ ಕನ್ಸ್-ಟ್ರಕ್ಟರ್ ಅನ್ನುಕಾಲ್ ಮಾಡೋಣ.
03:35 ಹಾಗಾಗಿ Student s1 ಸಮ new Student ಎಂದು ಟೈಪ್ ಮಾಡಿ ಬ್ರ್ಯಾಕೆಟ್ ತೆರೆದು ಮುಚ್ಚಿ ಸೆಮಿಕೋಲನ್ ಹಾಕಿ.
03:47 ಈ ಬಾರಿ ದೋಷಗಳಿರುವುದಿಲ್ಲ ಏಕೆಂದರೆ ನಾವು ಪ್ಯಾರಾಮೀಟರ್ ಗಳಿಲ್ಲದ ಕನ್ಸ್-ಟ್ರಕ್ಟರ್ ಅನ್ನು ಡಿಫೈನ್ ಮಾಡಿದ್ದೇವೆ.
03:55 s1 ಡಾಟ್ studentDetail ಎಂದು ಟೈಪ್ ಮಾಡಿ.
04:01 ಸೇವ್ ಮಾಡಿ ರನ್ ಮಾಡಿರಿ.
04:04 ಹಾಗಾಗಿ ನಾವು 0(ಸೊನ್ನೆ) ಮತ್ತು -(ಡ್ಯಾಶ್) ಎಂಬ ಫಲಿತವನ್ನುಪಡೆಯುತ್ತೇವೆ. ಮತ್ತು ಡಿಫಾಲ್ಟ್ ಕನ್-ಸ್ಟ್ರಕ್ಟರ್ ಕಾಲ್ ಆಗಿದೆ.
04:11 ಇದು ಕನ್ಸ್-ಟ್ರಕ್ಟರ್ ಓವರ್-ಲೋಡಿಂಗ್.
04:13 ನಾವು ಬೇರೆ ಬೇರೆ ಪ್ಯಾರಾಮೀಟರ್ ಗಳನ್ನು ಹೊಂದಿರುವ ಎರಡು ಕನ್ಸ್-ಟ್ರಕ್ಟರ್ ಗಳನ್ನು ಹೊಂದಿದ್ದೇವೆ.
04:17 ಸಹಜವಾಗಿ ಎರಡೂ ಕನ್ಸ್-ಟ್ರಕ್ಟರ್ ಗಳೂ ಒಂದೇ ಹೆಸರನ್ನು ಹೊಂದಿವೆ.
04:20 ಪ್ಯಾರಾಮೀಟರ್ ಗಳ ವಿಧ ಅಥವಾ ಸಂಖ್ಯೆಗಳಲ್ಲಿರುವ ವ್ಯತ್ಯಾಸದ ಪ್ರಕಾರ ಕನ್ಸ್-ಟ್ರಕ್ಟರ್ ಕಾಲ್ ಆಗುತ್ತದೆ.
04:26 ನಾವೀಗ ಕನ್ಸ್-ಟ್ರಕ್ಟರ್ ಓವರ್-ಲೋಡಿಂಗ್ ನ ಪ್ರಯೋಜನಗಳನ್ನು ನೋಡೋಣ
04:30 ಒಂದುವೇಳೆ ನಾವು ಎರಡು ಪ್ಯಾರಾಮೀಟರ್ ಗಳಿರುವ ಕನ್ಸ್-ಟ್ರಕ್ಟರ್ ಅನ್ನು ಕಾಲ್ ಮಾಡಿದರೆ
04:35 ಹಾಗಾಗಿ Student s3= new Student();ಎಂದು ಟೈಪ್ ಮಾಡಿ.
04:51 ಬ್ರ್ಯಾಕೆಟ್ ನ ಒಳಗೆ, ಒಂದುವೇಳೆ name ಆರ್ಗ್ಯುಮೆಂಟ್ ಅನ್ನು ಮೊದಲು ಬರೆದು ನಂತರ “roll number” ಅನ್ನು ಟೈಪ್ ಮಾಡಿದರೆ
04:58 ಏನಾಗುತ್ತದೆಂದು ನೋಡೋಣ. ಡಬಲ್ ಕೋಟ್ ನಲ್ಲಿ Raju ಅಲ್ಪವಿರಾಮ 45 ಎಂದು ಟೈಪ್ ಮಾಡಿ.
05:08 ನಾವು constructor student with the parameter String , int is undefined. ಎಂಬ ದೋಷವನ್ನು ಕಾಣುತ್ತಿದ್ದೇವೆ.
05:18 ಈಗ ನಾವು ಕನ್ಸ್-ಟ್ರಕ್ಟರ್ ಅನ್ನು ಡಿಫೈನ್ ಮಾಡೋಣ.
05:22 ಹಾಗಾಗಿ Student ಎಂದು ಟೈಪ್ ಮಾಡಿ ಬ್ರ್ಯಾಕೆಟ್ ನ ಒಳಗೆ String the_name ಅಲ್ಪವಿರಾಮ int r_no ಎಂದು ಟೈಪ್ ಮಾಡಿ.
05:42 ಇಲ್ಲಿ ಮೊದಲನೇ ಪ್ಯಾರಾಮೀಟರ್string(ಸ್ಟ್ರಿಂಗ್) ಮತ್ತು ಎರಡನೇ ಪ್ಯಾರಾಮೀಟರ್ int (ಇಂಟ್) ಆಗಿದೆ.
05:52 ಕರ್ಲೀ ಬ್ರ್ಯಾಕೆಟ್ ನಲ್ಲಿ roll_number ಸಮ r_no;
06:05 ಮತ್ತು name ಸಮ the_name ; ಎಂದು ಟೈಪ್ ಮಾಡಿ.
06:15 ಪ್ರೋಗ್ರಾಮ್ ಅನ್ನು ಸೇವ್ ಮಾಡಿ.
06:18 ಈಗ ದೋಷ ಪರಿಹಾರವಾದದ್ದನ್ನು ನಾವು ನೋಡುತ್ತಿದ್ದೇವೆ.
06:22 ಈಗ ಮೆಥಡ್ ಅನ್ನು ಕಾಲ್ ಮಾಡೋಣ.
06:24 s3 ಡಾಟ್ StudentDetail; ಎಂದು ಟೈಪ್ ಮಾಡಿ.
06:29 ಸೇವ್ ಮಾಡಿ ರನ್ ಮಾಡಿರಿ.
06:35 ಹಾಗಾಗಿ 45 ಮತ್ತು Raju ಎಂಬ ಫಲಿತವನ್ನು ಪಡೆಯುತ್ತೇವೆ.
06:40 ಇಲ್ಲಿ ನಾವು ಕನ್ಸ್-ಟ್ರಕ್ಟರ್ ಕಾಲ್ ಮಾಡಿದಾಗ
06:43 ನಾವು ಪಾಸ್ ಮಾಡುವ ಪ್ಯಾರಾಮೀಟರ್ ಗಳ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.
06:47 ಏಕೆಂದರೆ ನಾವು ಬೇರೆ ಬೇರೆ ಪ್ಯಾರಾಮೀಟರ್ ಗಳನ್ನು ಹೊಂದಿರುವ ಬೇರೆ ಬೇರೆ ಕನ್ಸ್-ಟ್ರಕ್ಟರ್ ಗಳನ್ನು ಡಿಫೈನ್ ಮಾಡಿದ್ದೇವೆ.
06:54 ಆದ್ದರಿಂದ ಸರಿಯಾದ ಕನ್ಸ್-ಟ್ರಕ್ಟರ್ ಓವರ್-ಲೋಡ್ ಆಗುತ್ತದೆ.
06:57 ಹಾಗಾಗಿ ನಾವೀಗ ಒಂದೇ ಪ್ಯಾರಾಮೀಟರ್ ಅನ್ನು ಹೊಂದಿರುವ ಒಂದು ಕನ್ಸ್-ಟ್ರಕ್ಟರ್ ಅನ್ನು ಡಿಫೈನ್ ಮಾಡೋಣ.
07:02 ಅದುವೇ roll number.
07:05 Student ಎಂದು ಟೈಪ್ ಮಾಡಿ ಬ್ರ್ಯಾಕೆಟ್ ನಲ್ಲಿ int num ಎಂದು ಟೈಪ್ ಮಾಡಿ.
07:16 ಕರ್ಲೀ ಬ್ರ್ಯಾಕೆಟ್ ನಲ್ಲಿ roll_number ಸಮ num; ಎಂದು ಟೈಪ್ ಮಾಡಿ.
07:25 ಮತ್ತು name ಸಮ no name;
07:33 ಈಗ ಕನ್ಸ್-ಟ್ರಕ್ಟರ್ ಅನ್ನು ಕಾಲ್ ಮಾಡೋಣ.
07:43 ಹಾಗಾಗಿ ನಾವು ಈ ಬಾರಿ ಒಂದೇ ಆರ್ಗ್ಯುಮೆಂಟ್ ಅನ್ನು ಪಾಸ್ ಮಾಡೋಣ. Student s4 ಸಮ new Student (61) ; ಎಂದು ಟೈಪ್ ಮಾಡಿ.
08:04 ನಂತರ s4 ಡಾಟ್ studentDetail
08:10 ಸೇವ್ ಮಾಡಿ ರನ್ ಮಾಡಿರಿ.
08:14 ಹಾಗಾಗಿ ನಾವು 61 ಮತ್ತು no name ಎಂಬ ಫಲಿತವನ್ನು ಪಡೆಯುತ್ತೇವೆ.
08:21 new ಎಕ್ಸಿಕ್ಯೂಟ್ ಆದಾಗ ಸರಿಯಾದ ಕನ್ಸ್-ಟ್ರಕ್ಟರ್ ಓವರ್ ಲೋಡ್ ಆಗುತ್ತದೆ.
08:27 ಪ್ಯಾರಾಮೀಟರ್ ಗಳಿಗೆ ಸರಿಹೊಂದುವಂತೆ ಕನ್ಸ್-ಟ್ರಕ್ಟರ್ ಓವರ್ ಲೋಡ್ ಆಗುತ್ತದೆ.
08:33 ಹೀಗೆ ಕನ್ಸ್-ಟ್ರಕ್ಟರ್ ಓವರ್ ಲೋಡಿಂಗ್ ಪ್ರಕ್ರಿಯೆ ನಡೆಯುತ್ತದೆ.
08:40 ಹಾಗಾಗಿ ಈ ಟ್ಯುಟೋರಿಯಲ್ ನಲ್ಲಿ ನಾವು
08:42 ಕನ್ಸ್-ಟ್ರಕ್ಟರ್ ಓವರ್ ಲೋಡಿಂಗ್ ಬಗ್ಗೆ,
08:45 ಕನ್ಸ್-ಟ್ರಕ್ಟರ್ ಓವರ್ ಲೋಡ್ ಮಾಡುವದನ್ನು ಕಲಿತಿದ್ದೇವೆ.
08:50 ಸ್ವಂತ ಅಭ್ಯಾಸಕ್ಕಾಗಿ Employee ಕ್ಲಾಸ್ ಗೆ ಅನೇಕ ಕನ್ಸ್-ಟ್ರಕ್ಟರ್ ಗಳನ್ನು ರಚನೆ ಮಾಡಿ ಮತ್ತು ಕನ್ಸ್-ಟ್ರಕ್ಟರ್ ಓವರ್ ಲೋಡ್ ಮಾಡಿ.
08:58 ಸ್ಪೋಕನ್ ಟ್ಯುಟೋರಿಯಲ್ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ,
09:00 ಮತ್ತು ವೀಡಿಯೋಗಾಗಿ [1] ಅಂತರ್ಜಾಲ ತಾಣವನ್ನು ಭೇಟಿಕೊಡಿ.
09:06 ಇದು ಈ ಸ್ಪೋಕನ್ ಟ್ಯುಟೋರಿಯಲ್ ಕುರಿತು ತಿಳಿಸಿಕೊಡುತ್ತದೆ.
09:09 ನೀವು ಒಳ್ಳೆಯ ಬ್ಯಾಂಡ್ವಿ್ಡ್ತ್ ಹೊಂದಿರದಿದ್ದಲ್ಲಿ ವಿಡಿಯೋ ವನ್ನು ಡೌನ್ಲೋiಡ್ ಮಾಡಿ ನೋಡಬಹುದು.
09:12 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು
09:15 ಸ್ಪೋಕನ್ ಟ್ಯುಟೋರಿಯಲ್ ಗಳ ಕುರಿತು ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ.
09:17 ಓನ್ಲೈನನ್ ಪರೀಕ್ಷೆ ಯಲ್ಲಿ ತೇರ್ಗಡೆಯಾದವರಿಗೆ ಪ್ರಮಾಣವನ್ನು ನೀಡುತ್ತದೆ.
09:20 ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಗೆ ಬರೆಯಿರಿ
09:26 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಟಾಕ್ ಟು ಎ ಟೀಚರ್ ಯೋಜನೆಯ ಒಂದು ಭಾಗವಾಗಿದೆ.
09:30 ಇದು ICT ದ್ವಾರಾ ರಾಷ್ಟ್ರೀಯ ಸಾಕ್ಷರತಾ ಮಿಶನ್ MHRD, ಭಾರತ ಸರ್ಕಾರ ದಿಂದ ಸಮರ್ಥಿತವಾಗಿದೆ.
09:35 ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಂತರ್ಜಾಲ ತಾಣವನ್ನು ಭೇಟಿಕೊಡಿ.

http://spoken-tutorial.org/NMEICT-Intro

09:43 ನಾವು ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
09:46 ಧನ್ಯವಾದಗಳು. ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್, ಉಪ್ಪಿನಪಟ್ಟಣ. ನಮಸ್ಕಾರ..

Contributors and Content Editors

NaveenBhat, PoojaMoolya, Pratik kamble