GIMP/C2/How-To-Fix-An-Underexposed-Image/Kannada

From Script | Spoken-Tutorial
Jump to: navigation, search
Time Narration
00:23 Meet The GIMP (ಮೀಟ್ ದ ಗಿಂಪ್) ಎನ್ನುವುದಕ್ಕೆ ನಿಮಗೆ ಸ್ವಾಗತ.
00:25 ಇದನ್ನು ರೋಲ್ಫ್ ಸ್ಟೇನೋರ್ಟ್ ಅವರು, ಉತ್ತರ ಜರ್ಮನಿಯ ಬ್ರೆಮೆನ್ ಎನ್ನುವಲ್ಲಿ ರೆಕಾರ್ಡ್ ಮಾಡಿದ್ದಾರೆ.
00:32 ನನಗೆ ಈ ಇಮೇಜ್, ನಾರ್ಮನ್ ಅವರ 'ಇ-ಮೈಲ್’ನೊಂದಿಗೆ ಸಿಕ್ಕಿದೆ.
00:35 ಅದನ್ನು ಸೇವ್ ಮಾಡಲು ಅವರು ಹೇಳಿದ್ದಾರೆ.
00:39 ಈ ಇಮೇಜ್, ಅವರು ‘ರಾ ಕನ್ವರ್ಟರ್’ ಬಳಸಿದ ನಂತರ ಪಡೆದದ್ದಾಗಿದೆ. ಇಲ್ಲಿ, ಇದು ಮೂಲ ಇಮೇಜ್ ಆಗಿತ್ತು.
00:48 ‘ಇಮೇಜ್’ಗಳನ್ನು ಹೋಲಿಸಿದಾಗ, ನಾರ್ಮನ್ ಅವರು ಮಾಡಿದ್ದು ಸ್ಪಷ್ಟವಾಗಿತ್ತು.
00:53 ಮೊದಲು ಇಮೇಜನ್ನು ‘ರೊಟೇಟ್’ ಮಾಡಿ, ನಂತರ ‘ಫೋರ್ಗ್ರೌಂಡ್’ನಲ್ಲಿ ಸರಿಯಾದ ಬಣ್ಣ ಮತ್ತು ಹೊಳಪುಗಳನ್ನು ಪಡೆಯಲು, ಅದನ್ನು ‘ಕರ್ವ್ಸ್ ಟೂಲ್’ನಿಂದ ಎಡಿಟ್ ಮಾಡಿದ್ದಾರೆ ಮತ್ತು ಮೋಡಗಳನ್ನು ಗಾಢಗೊಳಿಸದೇ ಇರಲು ಪ್ರಯತ್ನಿಸಿದ್ದಾರೆ.
01:09 ನೀವು ಈ ‘ಇಮೇಜ್’ನತ್ತ ನೋಡಿದಾಗ, ಇಲ್ಲಿ, ಮೋಡಗಳು ಬಹಳ ಸುಂದರವಾಗಿವೆ.
01:14 ನಾನು ಅವುಗಳನ್ನು ಇಷ್ಟಪಡುತ್ತೇನೆ.ಈ ಇಮೇಜನ್ನು ‘ಶೋ’ನಲ್ಲಿ ತೋರಿಸಲು ಅವರ ಅನುಮತಿಗಾಗಿ ಕೇಳಿದ್ದೇನೆ. ಅವರ ಕೆಲಸವನ್ನು ನಾನು ಪುನಃ ಈಗ ಮಾಡಲು ಪ್ರಯತ್ನಿಸುತ್ತೇನೆ. ಆಮೇಲೆ, ಅವರ ‘ಇಮೇಜ್’ನಲ್ಲಿ ಮೋಡವನ್ನು ಇನ್ನೂ ಚೆನ್ನಾಗಿ ಪಡೆಯಲು ಪ್ರಯತ್ನಿಸುತ್ತೇನೆ.
01:33 ಆದರೆ, ಏನು ತಪ್ಪಾಗಿದೆ ಎನ್ನುವ ಸುಳಿವು ಕೊಡುವ ಏನಾದರೂ, EXIF ಮಾಹಿತಿಯಲ್ಲಿ, ಈ ಇಮೇಜ್’ನ ಬಗ್ಗೆ ನಮಗೆ ಸಿಗುತ್ತದೋ ಎಂದು ಮೊದಲು ನಾವು ಹುಡುಕೋಣ.
01:43 ಇದು ಪ್ಯಾನಾಸೋನಿಕ್ ಕ್ಯಾಮೆರಾ ಆಗಿದ್ದು ಬಹಳ ಚಿಕ್ಕದಾದ ‘ಸೆನ್ಸರ್’ಅನ್ನು ಹೊಂದಿದೆ ಎಂದು ನೀವು ನೋಡಬಹುದು.
01:51 ನೀವು ಈ ಕ್ಯಾಮೆರಾವನ್ನು, ನಿಮ್ಮ ‘ಶರ್ಟ್’ನ ಕಿಸೆಯಲ್ಲಿ ಇಡಬಹುದು.
01:57 ಇಲ್ಲಿ, ನಮಗೆ ಬಹಿರಂಗಪಡಿಸಿದ ಡೇಟಾ ಸಿಕ್ಕಿದೆ.
02:02 Exposure Time (ಎಕ್ಸ್ಪೋಜರ್ ಟೈಮ್), ಒಂದು ‘ಸೆಕೆಂಡ್’ನ ಸಾವಿರದ ಒಂದನೇ ಭಾಗ ಮತ್ತು Aperture (ಅಪರ್ಚರ್), 5.6 (ಐದು ಪಾಯಿಂಟ್ ಆರು) ಆಗಿದೆ.
02:09 ಫ್ಲಾಶ್ ‘ಆನ್’ ಆಗಿತ್ತು. ಕ್ಯಾಮೆರಾ, ಇಮೇಜ್ನಲ್ಲಿ ಫ್ಲಾಶ್’ನ ಪರಿಣಾಮವನ್ನು ಲೆಕ್ಕಹಾಕಿದೆ
02:16 ಇದರಂತಹ ಪುಟ್ಟ ಕ್ಯಾಮೆರಾದ ಫ್ಲಾಶ್, ಇಂತಹ ದೃಶ್ಯದೊಂದಿಗೆ ಕೆಲಸ ಮಾಡುವದಿಲ್ಲ.
02:24 ಇಮೇಜ್ನ ಈ ಭಾಗವನ್ನು ಬೆಳಗಿಸಲು, ನಿಮ್ಮ ಹಿಂದೆ ಸಣ್ಣ ಪರಮಾಣು ಬಾಂಬ್’ನಂತಹ ಏನಾದರೂ ನಿಮಗೆ ಬೇಕಾಗಬಹುದು.
02:36 ಈ ಇಮೇಜ್, JPEG (ಜೇಪೆಗ್) ನಲ್ಲಿ ಸೇವ್ ಮಾಡಲ್ಪಟ್ಟಿದೆ. ಅದು ಇನ್ನೊಂದು ಸಮಸ್ಯೆಯನ್ನು ಕೊಡುತ್ತದೆ.
02:42 ಈ ಇಮೇಜ್ನಲ್ಲಿ, ನಿಜವಾಗಿಯೂ ಆಸಕ್ತಿದಾಯಕ ಭಾಗವಾಗಿರುವ ಈ ಜಾಗವು, ‘JPEG ಕಂಪ್ರೆಷನ್’ನಿಂದಾಗಿ ತುಂಬಾ ಗಾಢವಾಗಿದೆ.
02:53 ನಾನು ದಿಗಂತದಲ್ಲಿ ಝೂಮ್ ಮಾಡಿದಾಗ, ಸರಿಯಾಗಿ ವ್ಯಾಖ್ಯಾನಿಸಲಾದ ಒಂದು ವಿಷಯವನ್ನು ನೋಡಬಹುದು. ಆದರೆ ಸ್ವಲ್ಪ ಹೆಚ್ಚು ‘ಶಾರ್ಪ್’ ಮಾಡಲ್ಪಟ್ಟಿದೆ. ಹಾಗೂ ದಿಗಂತದಲ್ಲಿ ಒಂದು ಹಡಗು ಸಹ ಇದೆ.
03:08 ಮೋಡಗಳು ತುಂಬಾ ವಿವರವಾಗಿವೆ. ಆದರೆ ನಾವು ಗಾಢವಾದ ಭಾಗದಲ್ಲಿ ಹೋದಾಗ ನೀವು ಇಲ್ಲಿ ಒಂದು ಮರವನ್ನು ನೋಡುತ್ತೀರಿ. ಆದರೆ ಏನೂ ಸ್ಪಷ್ಟವಾಗಿ ಗೋಚರಿಸುತ್ತಿಲ್ಲ.
03:19 ಏಕೆಂದರೆ JPEG, ಇಮೇಜ್ನ ಭಾಗಗಳನ್ನು ಬಿಟ್ಟುಬಿಡುತ್ತದೆ. ನೀವು ಅವುಗಳನ್ನು ಎಂದಾದರೂ ನೋಡುವಿರಿ ಎಂದು ಕ್ಯಾಮೆರಾದಲ್ಲಿನ ಕಂಪ್ಯೂಟರ್ ಪ್ರೋಗ್ರಾಂ ಭಾವಿಸುವುದಿಲ್ಲ.
03:32 ಆದರೆ ನನಗೆ ಇಲ್ಲಿ, ಇದನ್ನು ನೋಡಬೇಕಾಗಿದೆ. ನಾನು ಸ್ವಲ್ಪ ‘JPEG ಕಂಪ್ರೆಷನ್’ನೊಂದಿಗೆ ಸಿಕ್ಕಿಕೊಂಡುಬಿಟ್ಟಿದ್ದೇನೆ. ಏಕೆಂದರೆ ಇಲ್ಲಿ ಕಳೆದುಕೊಂಡ ವಿವರಗಳು ಮತ್ತೆ ಎಂದಿಗೂ ಗೋಚರಿಸುವುದಿಲ್ಲ.
03:45 ನೀವು ಇದನ್ನು raw ಆಗಿ ತೆಗೆದಾಗ ಇಂತಹ ಸಮಸ್ಯೆಗಳನ್ನು ತಡೆಗಟ್ಟುತ್ತೀರಿ. ಮುಂದಿನ ‘ಟ್ಯುಟೋರಿಯಲ್’ನಲ್ಲಿ ನಾನು ನಿಮಗೆ ‘UF ರಾ ಕನ್ವರ್ಟರ್’ಅನ್ನು ಮತ್ತು ಅದನ್ನು ‘ಗಿಂಪ್’ನೊಂದಿಗೆ ಬಳಸುವ ಬಗೆಯನ್ನು ತೋರಿಸುತ್ತೇನೆ. ಅದು ಮುಂದಿನ ‘ಟ್ಯುಟೋರಿಯಲ್’ಗಾಗಿ ಸರಿಯಾದ ವಿಷಯವಾಗಿದೆ ಎಂದು ನಾನು ಭಾವಿಸುತ್ತೇನೆ.
04:06 ನಾನು, ಇಮೇಜನ್ನು ಇಲ್ಲಿ, ಟೂಲ್ ಬಾಕ್ಸ್ ನ ಮೇಲೆ ಕೇವಲ ಎಳೆಯುವುದರಿಂದ, ಅದನ್ನು ‘ಗಿಂಪ್’ನಲ್ಲಿ ಲೋಡ್ ಮಾಡುತ್ತೇನೆ ಹಾಗೂ ವಿಂಡೋವನ್ನು ದೊಡ್ಡದು ಮಾಡುತ್ತೇನೆ.
04:17 ಈಗ ನನ್ನ ಮೊದಲನೆಯ ಸ್ಟೆಪ್, ಈ ಇಮೇಜನ್ನು ಸ್ವಲ್ಪ ಸೈಜ್ ಮಾಡುವುದಾಗಿದೆ. ಕಾರಣ ಈ ಇಮೇಜ್, ಎಷ್ಟು ದೊಡ್ಡದಾಗಿದೆ ಎಂದರೆ ಇದರಿಂದ ಪರಿಣಮಿಸುವ ‘XCF’ ಫೈಲ್, 40 ಮೆಗಾ ‘ಬೈಟ್’ಗಳಿಗಿಂತ ದೊಡ್ಡದಾಗಿರುವುದು.
04:29 ‘ಟೂಲ್ ಬಾರ್’ನಲ್ಲಿಯ Image ನ ಮೇಲೆ ಕ್ಲಿಕ್ ಮಾಡಿ, Scale Image ಅನ್ನು ಆಯ್ಕೆಮಾಡಿ, ಕುಗ್ಗಿಸುವುದನ್ನು ಮಾಡಬಹುದು. Width ಅನ್ನು 1000 ಪಿಕ್ಸೆಲ್ ಎಂದು ಬದಲಾಯಿಸುತ್ತೇನೆ. Tab ಅನ್ನು ಒತ್ತಿದಾಗ, ನನಗೆ 750 ಪಿಕ್ಸೆಲ್ ಗಳ Height ಸಿಗುತ್ತದೆ. ಅತ್ಯುತ್ತಮ Interpolation ಆಯ್ಕೆಯಾಗಿದೆ, ಆದ್ದರಿಂದ ನಾನು Scale ನ ಮೇಲೆ ಕ್ಲಿಕ್ ಮಾಡುತ್ತೇನೆ.
05:01 ಇಲ್ಲಿ, ಫ್ರೇಮ್’ನಲ್ಲಿ ಪೂರ್ತಿ ಇಮೇಜನ್ನು ಪಡೆಯಲು shift +ctrl+ E ಒತ್ತಿ. ಈಗ ನಾನು ಈ ಇಮೇಜನ್ನು ಎಡಿಟ್ ಮಾಡಲು ಅಣಿಯಾಗಿದ್ದೇನೆ.
05:11 ಮೊದಲನೆಯ ಹಂತ ‘ರೊಟೇಟಿಂಗ್’ ಎನ್ನುವದಾಗಿದೆ.
05:14 ಹಿಂದಿನ ‘ಟ್ಯುಟೋರಿಯಲ್’ಗಳಲ್ಲಿ ಇಮೇಜನ್ನು ತಿರುಗಿಸುವ ಎರಡು ವಿಧಾನಗಳನ್ನು ನಾನು ತೋರಿಸಿದ್ದೇನೆ. ಈದಿನವು ಮೂರನೆಯ ವಿಧಾನಕ್ಕಾಗಿದೆ.
05:23 ಇಮೇಜ್’ನಲ್ಲಿ ಅಡ್ಡಗೆರೆ ಕಾಣಬಹುದಾದಲ್ಲಿ ಝೂಮ್ ಮಾಡುವ ಅದೇ ‘ಸ್ಟೆಪ್’ಅನ್ನು ನಾನು ಅನುಸರಿಸುತ್ತೇನೆ. ಮತ್ತು ಅದು ದಿಗಂತದ ಮೇಲಿದೆ ಏಕೆಂದರೆ, ದಿಗಂತವು ಅಡ್ಡಗೆರೆಯನ್ನು ವ್ಯಾಖ್ಯಾನಿಸುತ್ತದೆ.
05:39 ಆಮೇಲೆ, ‘ಟೂಲ್ ಬಾಕ್ಸ್’ನಿಂದ Measurement Tool (ಮೆಜರ್ಮೆಂಟ್ ಟೂಲ್) ಅನ್ನು ಆಯ್ಕೆಮಾಡುತ್ತೇನೆ. ನಾನು Info Window (ಇನ್ಫೋ ವಿಂಡೋ) ವನ್ನು ಆಯ್ಕೆಮಾಡುವುದಿಲ್ಲ. ಏಕೆಂದರೆ, ಅದು ‘ಇಮೇಜ್ ಫ್ರೇಮ್’ನ ಮಧ್ಯದಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ನನಗೆ ಇಲ್ಲಿ, ಕೆಳಗೆ ‘ಸ್ಟೇಟಸ್ ಬಾರ್’ನಲ್ಲಿ ಎಲ್ಲ ಮಾಹಿತಿ ಸಿಗಲು ಸಾಧ್ಯವಿದೆ.
06:01 ಈಗ ದಿಗಂತದ ಕೋನವನ್ನು ಪಡೆಯುವುದು ಸರಳವಾಗಿದೆ. ಕೇವಲ ಕರ್ಸರನ್ನು ದಿಗಂತದ ಮೇಲೆ ಇಟ್ಟು, ಮೌಸ್’ನ ಬಟನ್ ಒತ್ತಿ ಅದನ್ನು ಎಳೆಯುತ್ತೇನೆ.
06:15 ಈ ಗೆರೆಯನ್ನು ಇನ್ನೊಂದು ಪಕ್ಕಕ್ಕೆ ಎಳೆಯುತ್ತೇನೆ. ದಿಗಂತಕ್ಕೆ ಸಮಾನಾಂತರವಾಗಿ ಒಂದು ಗೆರೆಯನ್ನು ಎಳೆಯುತ್ತೇನೆ ಹಾಗೂ ಬಟನ್’ಅನ್ನು ಬಿಡುತ್ತೇನೆ.
06:25 ಆಂಗಲ್ ಇನ್ಫೋ’ ಗಾಗಿ, ‘ಸ್ಟೇಟಸ್ ಬಾರ್’ನಲ್ಲಿ ನೋಡಿ. ಇಲ್ಲಿ ನನಗೆ ಕೋನವು 1.64° (ಒಂದು ಪಾಯಿಂಟ್ ಆರು ನಾಲ್ಕು ಅಂಶ) ಗಳೆಂದು ಕಾಣುತ್ತಿದೆ.
06:38 ಈಗ ನಾನು Rotate Tool ಅನ್ನು ಆಯ್ಕೆಮಾಡುತ್ತೇನೆ. ‘ಇಮೇಜ್’ನಲ್ಲಿ ಕ್ಲಿಕ್ ಮಾಡಿ, -1.63°( ಒಂದು ಪಾಯಿಂಟ್ ಆರು ಮೂರು ಅಂಶ) ಎಂದು ಟೈಪ್ ಮಾಡುತ್ತೇನೆ. ಮೈನಸ್ ಏಕೆಂದರೆ ನನಗೆ ಪ್ಲಸ್ 1.63 °(ಅಂಶಗಳು) ವಿರುದ್ಧ ಮಾಡಬೇಕಾಗಿದೆ.
06:58 Rotate ನ ಮೇಲೆ ಕ್ಲಿಕ್ ಮಾಡಿ, ನಿಮಗೆ ತಿರುಗಿಸಿದ ಇಮೇಜ್ ಸಿಗುತ್ತದೆ.
07:05 ದಿಗಂತವನ್ನು ಪರೀಕ್ಷಿಸಲು ನಾವು ಸ್ಕೇಲನ್ನು ಕೆಳಗೆ ಎಳೆಯುತ್ತೇವೆ.ಅದು ಅಡ್ಡಲಾಗಿದೆ.
07:14 ಮುಂದಿನ ‘ಸ್ಟೆಪ್’ ಇಮೇಜನ್ನು ‘ಕ್ರಾಪ್’ ಮಾಡುವುದಾಗಿದೆ. ಆದರೆ ಈಗ ನಾನು ಇಮೇಜನ್ನು ‘ಕ್ರಾಪ್’ ಮಾಡಲು ಸಾಧ್ಯವಿಲ್ಲ. ಏಕೆಂದರೆ, ‘ಇಮೇಜ್’ನ ಈ ಭಾಗವು ಗೋಚರಿಸುತ್ತಿಲ್ಲ. ಹೀಗಾಗಿ, ನನಗೆ ನಿಜವಾಗಿಯೂ ಇದನ್ನು ಇತ್ಯರ್ಥ ಮಾಡಲು ಸಾಧ್ಯವಿಲ್ಲ.
07:31 ಎಲ್ಲಿ ಕ್ರಾಪ್ ಮಾಡಬೇಕೆಂದು ನನಗೆ ಗೊತ್ತಿಲ್ಲ, ಹೀಗಾಗಿ ಮೊದಲು, ಇಮೇಜ್ನ ಈ ಭಾಗದ ಹೊಳಪನ್ನು ಸ್ವಲ್ಪ ಹೆಚ್ಚಿಸುತ್ತೇನೆ.
07:43 ನನಗೆ ‘ಕರ್ವ್ಸ್ ಟೂಲ್’ನೊಂದಿಗೆ ಕೆಲಸ ಮಾಡಬೇಕಾಗಿದೆ. ಆದರೆ ಅದಕ್ಕೆ ಮೊದಲು ನಾನು ‘ಲೇಯರ್’ನ ಒಂದು ‘ಕಾಪಿ’ಯನ್ನು ತಯಾರಿಸುತ್ತೇನೆ.
07:50 ಏಕೆಂದರೆ, ನಾವು ‘ಕರ್ವ್ಸ್ ಟೂಲ್’ಅನ್ನು ಬಳಸಿದಾಗ, ‘ಇಮೇಜ್’ನಲ್ಲಿಯ ಮಾಹಿತಿಯು ನಷ್ಟವಾಗುತ್ತದೆ.
07:56 ‘ಇಮೇಜ್’ನೊಂದಿಗೆ, ನೀವು ಮರಳಿ ಪಡೆಯಲು ಸಾಧ್ಯವಿಲ್ಲದಿರುವುದನ್ನು ಯಾವಾಗಲೂ ಮಾಡಬೇಡಿ.
08:01 ಸರಿ, ನಾನು ಅದನ್ನು ‘ರೊಟೇಟ್’ ಮಾಡಿದ್ದೆ. ಆದರೆ ಮುಂದಿನ ‘ಸ್ಟೆಪ್’ಗಳಲ್ಲಿ ಮೂಲ ಇಮೇಜ್.ನ ಮೇಲೆ ಏನನ್ನೂ ಮಾಡುವುದಿಲ್ಲ.
08:08 ಮೊದಲು ನಾನು ಭೂಮಿಯ ಭಾಗವನ್ನು ಎಡಿಟ್ ಮಾಡುತ್ತೇನೆ ಹೀಗಾಗಿ ಈ ಲೇಯರನ್ನು ನಾನು Land ಎಂದು ಕರೆಯುತ್ತೇನೆ. ಹೆಸರು ಇರುವ ಜಾಗದಲ್ಲಿ, ಡಬಲ್ ಕ್ಲಿಕ್ ಮಾಡುತ್ತೇನೆ. Return ಅನ್ನು ಒತ್ತುತ್ತೇನೆ.
08:22 ಈಗ, ಈ ಲೇಯರನ್ನು Land ಎಂದು ಹೆಸರಿಸಲಾಗಿದೆ.
08:25 ನಾನು Curves Tool ಅನ್ನು ಆಯ್ಕೆಮಾಡುತ್ತೇನೆ. ಇಮೇಜ್ನಲ್ಲಿ ಕ್ಲಿಕ್ ಮಾಡುತ್ತೇನೆ. ಈಗ ನಾನು ಇಮೇಜನ್ನು ಒಳಹೊಕ್ಕುನೋಡುತ್ತೇನೆ.
08:34 ಇಮೇಜ್ನ ಈ ಭಾಗವು ನಿಜವಾಗಿ ಅತ್ಯಧಿಕ ಗಾಢವಾಗಿದೆ. ಇದನ್ನು ಯಾರಾದರೂ ಸುಲಭವಾಗಿ ತಿಳಿಯಬಹುದು ಆದರೆ ಇಲ್ಲಿಯ ಹುಲ್ಲು ಸಹ ಬಹಳ ಗಾಢವಾಗಿದೆ.
08:46 ನೀರು, ಇಲ್ಲಿಯ ‘ಗ್ರೇ ಸ್ಕೇಲ್’ನ, ಈ ಭಾಗವಾಗಿದೆ ಎಂದು ಕಾಣುತ್ತದೆ ಮತ್ತು ಮುಗಿಲು ನಿಸ್ಸಂಶಯವಾಗಿ ಈ ಭಾಗವಾಗಿದೆ.
09:01 ನಾನು ಇಮೇಜ್ನಲ್ಲಿಯ ಭೂಮಿಯನ್ನು ಹೊಳಪಾಗಿಸಬೇಕು. ಇದನ್ನು ಮೇಲೆ ಎಳೆಯುವುದರಿಂದ ಅದನ್ನು ಮಾಡುವೆನು.
09:15 ನಾನು ಇದನ್ನು ಎಷ್ಟು ದೂರ ಎಳೆಯಬೇಕೆಂಬುದು ಈಗ ಮುಂದೆ ಬರುವ ಪ್ರಶ್ನೆ. ಏಕೆಂದರೆ, ನಾನು ತುಂಬಾ ದೂರ ಹೋದರೆ ಅದು ಕೃತಕವಾಗಿ ಕಾಣುವುದು.
09:28 ‘ಕರ್ವ್’ಗಳಲ್ಲಿ, ದೊಡ್ಡ ವ್ಯತ್ಯಾಸಗಳೊಂದಿಗೆ ನನಗೆ ಮುಗಿಲು ಹಾಗೂ ನೆಲಗಳನ್ನು ಸೇರಿಸಬೇಕೆಂದಿದ್ದರೆ, ಅದು ನಿಜವಾದ ‘ಇಮೇಜ್’ನಂತೆ ಕಾಣುವದಿಲ್ಲ.
09:40 ಹೀಗಾಗಿ, ನಾನು ಇದನ್ನು ಸ್ವಲ್ಪ ಕೆಳಗೆ ಎಳೆಯುತ್ತೇನೆ.
09:44 ನಾನು ಇದನ್ನು ಪ್ರಯತ್ನಿಸುತ್ತೇನೆ.
09:49 ಇದು ಇಲ್ಲಿ ಚೆನ್ನಾಗಿ ಕಾಣುತ್ತದೆ.
09:52 ಈ ಸಮುದ್ರವು ತುಂಬಾ ಪ್ರಕಾಶಮಾನವಾಗಿಲ್ಲ ಮತ್ತು ಚಾಪೆಲ್ ಸಹ ಕಾಣುತ್ತಿದೆ.
10:00 ಆದ್ದರಿಂದ ನಾನು OK ಯ ಮೇಲೆ ಕ್ಲಿಕ್ ಮಾಡುತ್ತೇನೆ.
10:06 ಭೂಮಿಯ ಭಾಗವನ್ನು ಎಡಿಟ್ ಮಾಡಿದ ನಂತರ ನಾನು ಮುಗಿಲಿನ ಭಾಗಕ್ಕೆ ಹೋಗುತ್ತೇನೆ.
10:12 ಮತ್ತೆ, ಮೂಲ ‘ಲೇಯರ್’ನ ಕಾಪಿ ಮಾಡಿ, ಅದನ್ನು ಮೇಲಕ್ಕೆ ಸರಿಸಿ, ಅದನ್ನು Sky ಎಂದು ಹೆಸರಿಸುತ್ತೇನೆ.
10:21 ‘ಲೇಯರ್’ನ ಮೇಲೆ ಡಬಲ್ ಕ್ಲಿಕ್ ಮಾಡಿ, ಹೆಸರನ್ನು Sky ಎಂದು ಟೈಪ್ ಮಾಡಿ. Return ಒತ್ತಿದಾಗ ನಮಗೆ Sky ಸಿಗುತ್ತದೆ.
10:28 ಬೇರೆ ‘ಲೇಯರ್’ಗಳಿಗೆ ಹಾನಿಮಾಡದೇ sky ಲೇಯರನ್ನು ಮಾತ್ರ ನನಗೆ ಎಡಿಟ್ ಮಾಡಬೇಕಾಗಿದೆ. ಅದನ್ನು ಮಾಡಲು ನಾನು ಲೇಯರ್ ಮಾಸ್ಕ್’ನೊಂದಿಗೆ ಕೆಲಸ ಮಾಡುತ್ತೇನೆ.
10:37 Sky ‘ಲೇಯರ್’ನ ಮೇಲೆ ರೈಟ್ ಕ್ಲಿಕ್ ಮಾಡಿ, Add Layer Mask ನ ಮೇಲೆ ಕ್ಲಿಕ್ ಮಾಡಿ, White Layer Mask ಅನ್ನು ಆಯ್ಕೆಮಾಡಿ.ಏಕೆಂದರೆ full opacity, ಇದರ ಅರ್ಥ,ಈ ಲೇಯರ್, ಪೂರ್ಣವಾಗಿ ಗೋಚರಿಸುತ್ತದೆ ಮತ್ತು ಅದು ಬಿಳಿಯಾಗಿದೆ.
10:54 ನನಗೆ land ಲೇಯರನ್ನು ಬಚ್ಚಿಡಬೇಕಾಗಿದೆ. ಸಮುದ್ರ ಮತ್ತು ಮುಗಿಲಿನ ನಡುವೆ ನನಗೆ ತೀಕ್ಷ್ಣವಾದ ಅಂಚು ಸಹ ಬೇಕಾಗಿಲ್ಲ. ಅದಕ್ಕಾಗಿ ನಾನು Gradient tool ಅನ್ನು ಬಳಸುತ್ತೇನೆ.
11:07 ’ಗ್ರೇಡಿಯಂಟ್’ ಎನ್ನುವುದು ಕಪ್ಪು ಮತ್ತು ಬಿಳಿಯ ನಡುವೆ ಇರುವಂತಹದ್ದಾಗಿದೆ.
11:13 ಒಂದು ‘ಸ್ಕ್ರ್ಯಾಪ್ ಲೇಯರ್’ನಲ್ಲಿ, ಇದನ್ನು ನಾನು ಇಲ್ಲಿ ನಿಮಗೆ ತೋರಿಸುತ್ತೇನೆ.
11:34 ನಾನು ಗ್ರೇಡಿಯಂಟ್’ ಟೂಲನ್ನು ಆಯ್ಕೆಮಾಡಿದ್ದೇನೆ. ನೀವು ‘ಟೂಲ್ ಐಕಾನ್’ನ ಮೇಲೆ ಡಬಲ್ ಕ್ಲಿಕ್ ಮಾಡಿದಾಗ ‘ಟೂಲ್’ ಆಯ್ಕೆಗಳು ತಾನಾಗಿಯೇ ಆಯ್ಕೆಯಾಗುತ್ತವೆ. ಇದು ನಾನು ಆಕಸ್ಮಿಕವಾಗಿ ಈಗಷ್ಟೇ ಹುಡುಕಿರುವ ಹೊಸದಾದ ವಿಷಯವಾಗಿದೆ.
11:50 ನಿಮಗೆ ಇದು ಹೊಸದಾಗಿರಲಿಕ್ಕಿಲ್ಲ ಆದರೆ ನನಗೆ ಇದು ಹೊಸದಾಗಿದೆ.
11:56 ತಿಳಿಯಲು ಒಳ್ಳೆಯದಾಗಿದೆ.
11:59 ‘ಗ್ರೇಡಿಯಂಟ್’ ಟೂಲ್’ಗೆ ಮರಳಿ ಹೋಗೋಣ. ನಾನು ‘ಮೌಸ್’ನ ಲೆಫ್ಟ್ ಬಟನ್’ಅನ್ನು ಕ್ಲಿಕ್ ಮಾಡಿ ಮತ್ತು ಬಿಡುವುದರಿಂದ ಈ ಗೆರೆಯನ್ನು ಇಲ್ಲಿ ಎಳೆದಾಗ,
12:09 ಆರಂಬಿಕ ‘ಪಾಯಿಂಟ್’ನ ಎಡಭಾಗದಲ್ಲಿರುವ ಜಾಗವು ಕಪ್ಪುಬಣ್ಣದಿಂದ ಹಾಗೂ ‘ಗ್ರೇಡಿಯಂಟ್’ನ ಇನ್ನೊಂದು ಭಾಗವಾಗಿರುವ, ಕೊನೆಯ ‘ಪಾಯಿಂಟ್’ನ ಬಲಭಾಗದಲ್ಲಿರುವ ಜಾಗವು, ಬಿಳಿಬಣ್ಣದಿಂದ ತುಂಬಲ್ಪಟ್ಟಿದೆ.
12:26 ಬಿಳಿ ಹಾಗೂ ಕಪ್ಪುಗಳ ನಡುವಿನ ಜಾಗವು ವಿವಿಧ ಬೂದುಬಣ್ಣಗಳ ಶ್ರೇಣಿಯಾಗಿದೆ ಮತ್ತು ಇದು ‘ಗ್ರೇಡಿಯಂಟ್’ ಎಂದು ಕರೆಯಲ್ಪಡುತ್ತದೆ.
12:38 ನಾನು ಉದ್ದನೆಯ ಅಥವಾ ಬಹಳ ಚಿಕ್ಕ ‘ಗ್ರೇಡಿಯಂಟ್’ಅನ್ನು ಮಾಡಬಹುದು.
12:44 ಇಲ್ಲಿ ವಿವಿಧ ‘ಗ್ರೇಡಿಯಂಟ್’ನ ‘ಟೂಲ್’ಗಳಿವೆ. ನಾನು ಇಲ್ಲಿ, ಈ ‘ಬ್ಲ್ಯಾಕ್ ಆಂಡ್ ವ್ಹೈಟ್’ ಗೆ ಅಂಟಿಕೊಳ್ಳುವೆನು.
12:56 ಇಲ್ಲಿ, ವರ್ತುಲವನ್ನು ಮಾಡಲು ಸಾಧ್ಯವಿರುವ Radial ನಂತಹ ಬಹಳಷ್ಟು ಆಯ್ಕೆಗಳಿವೆ.
13:04 ಅಲ್ಲಿ ನೀವು ಬಳಸಬಹುದಾದ ಸಾಕಷ್ಟು ಹೆಚ್ಚಿನ ಆಯ್ಕೆಗಳಿವೆ.
13:10 ಈ ‘ಟೂಲ್’ನ ಆಯ್ಕೆಗಳನ್ನು ಅನ್ವೇಷಿಸುವುದು ಯೋಗ್ಯವಾಗಿದೆ.
13:15 ನಾನು Shape ಅನ್ನು Linear ಎನ್ನುವುದಕ್ಕೆ ಸೆಟ್ ಮಾಡುತ್ತೇನೆ ಹಾಗೂ ಇಲ್ಲಿಯ ಸ್ಕ್ರ್ಯಾಪ್ ಲೇಯರ್’ಅನ್ನು ತೆಗೆದುಹಾಕುತ್ತೇನೆ.
13:25 ಈಗ ನಾನು ಇಲ್ಲಿ sky ‘ಲೇಯರ್’ನ ಮೇಲೆ ಕೆಲಸ ಮಾಡುತ್ತಿದ್ದೇನೆ. ಇಮೇಜನ್ನು ‘ಟ್ರಾನ್ಸ್ಪರೆಂಟ್’ ಮಾಡುವದರಿಂದ ಅದನ್ನು ಪ್ರಕಟಿಸುವವರೆಗೆ, ಈ Gradient, ಕಪ್ಪಿನಿಂದ ಬಿಳಿಗೆ ಸೆಟ್ ಮಾಡಲ್ಪಟ್ಟಿದೆ. ನಾನು Layer ನ ಡೈಲಾಗ್ ಗೆ ಮರಳಿ ಹೋಗುತ್ತೇನೆ ಮತ್ತು ಲೇಯರನ್ನೇ ಸಕ್ರಿಯಗೊಳಿಸಿರುವೆನೋ ಎಂದು ಪರಿಶೀಲಿಸುತ್ತೇನೆ. ಏಕೆಂದರೆ ನನಗೆ ಮೂಲ ಇಮೇಜ್ನಲ್ಲಿ ಪೇಂಟ್ ಮಾಡುವುದು ಬೇಕಾಗಿಲ್ಲ.
13:54 ನನಗೆ ಲೇಯರ್ ಮಾಸ್ಕನ್ನು ಪೇಂಟ್ ಮಾಡಬೇಕಾಗಿದೆ.
13:59 ಇಮೇಜ್ನಲ್ಲಿ ಝೂಮ್ ಮಾಡಲು, Zoom Tool ಅನ್ನು ಆಯ್ಕೆಮಾಡುತ್ತೇನೆ.
14:04 ಇದಕ್ಕೆ ಸ್ವಲ್ಪ ಅಭ್ಯಾಸದ ಅಗತ್ಯವಿದೆ.
14:14 ನಾನು ಈ ‘ಪಾಯಿಂಟ್’ನಲ್ಲಿ ಆರಂಭಿಸುತ್ತೇನೆ ಹಾಗೂ ಇಲ್ಲಿ ಮುಗಿಸುತ್ತೇನೆ.
14:20 ನನಗೆ ‘ಗ್ರೇಡಿಯಂಟ್’, ನೇರವಾಗಿ ಬೇಕಾಗಿದೆ. ಏಕೆಂದರೆ, ಈ ರೀತಿಯ ‘ಗ್ರೇಡಿಯಂಟ್’, ಇಂತಹ ಇಮೇಜ್ನಲ್ಲಿ ಪರಿಣಮಿಸುತ್ತದೆ. ಅದು ನನಗೆ ಬೇಡವಾಗಿದೆ.
14:32 ಈ ಸ್ಟೆಪ್ ಅನ್ನು ‘ಅನ್-ಡು’ ಮಾಡಲು ctrl + z ಅನ್ನು ಒತ್ತಿ.
14:37 ನಾನು Ctrl ಕೀಯನ್ನು ಒತ್ತುತ್ತೇನೆ. ಈಗ ಇಲ್ಲಿ, ಸ್ಲೈಡರ್ ನ ಚಲನೆಯು 5 ಅಂಶಗಳಿಗೆ ಸೀಮಿತವಾಗಿದೆ.
14:49 ಆದ್ದರಿಂದ, ನಾನು ಇದನ್ನು, ಇಲ್ಲಿಂದ ಈ ಪಾಯಿಂಟ್’ವರೆಗೆ ಮಾಡಲು ಆರಂಭಿಸುತ್ತೇನೆ.
14:58 ನೀವು ಪೂರ್ತಿ ‘ಇಮೇಜ್’ಗೆ ಹೋದಾಗ, ಇದು ನನ್ನ ‘ಗ್ರೇಡಿಯಂಟ್’ ಆಗಿದೆ ಎಂದು ನೀವು ನೋಡಬಹುದು.
15:06 ನಾನು ಉಳಿದ ‘ಲೇಯರ್’ಗಳನ್ನು ‘ಸ್ವಿಚ್-ಆಫ್’ ಮಾಡಿದಾಗ, ಮೇಲಿನ ‘ಲೇಯರ್’ನಲ್ಲಿ ‘ಇಮೇಜ್’ನ ಮೇಲಿನ ಭಾಗ ಮಾತ್ರ ಕಾಣುತ್ತದೆ ಮತ್ತು ಇತರೆ ‘ಬ್ಯಾಕ್ಗ್ರೌಂಡ್’ನಲ್ಲಿ ಇರುತ್ತವೆ.
15:23 ಆದರೆ ಇದು ಮನವರಿಯಾಗುವಂತೆ ಇದೆ ಎಂದು ನನಗೆನಿಸುತ್ತಿಲ್ಲ.
15:27 ಇದು ಸ್ವಲ್ಪ ಕೃತಕವಾಗಿ ಕಾಣಿಸುತ್ತದೆ. ಆದ್ದರಿಂದ, ನನಗೆ ಮುಗಿಲಿನ ಹೊಳಪನ್ನು ಈಗ ಸ್ವಲ್ಪ ಹೆಚ್ಚಿಸಬೇಕಾಗಿದೆ.
15:34 ಅದನ್ನು ಮಾಡಲು, ಮೊದಲು ನಾನು ಲೇಯರ್ ಮಾಸ್ಕನ್ನು ನಿಷ್ಕ್ರಿಯಗೊಳಿಸಬೇಕು ಹಾಗೂ ‘ಲೇಯರ್’ನ ಮೇಲೆ ಕೆಲಸಮಾಡಲು ಅದನ್ನೇ ಸಕ್ರಿಯಗೊಳಿಸಬೇಕು. ಇಲ್ಲದಿದ್ದರೆ, ನಾನು ಲೇಯರ್ ‘ಮಾಸ್ಕ್’ನ ಮೇಲೆ ಕರ್ವ್ಸ್ ಟೂಲನ್ನು ಬಳಸಬಹುದಿತ್ತು.
15:48 ನೀವು ಯಾವಾಗಲೂ ‘ಲೇಯರ್’ನ ಸಕ್ರಿಯ ಭಾಗವನ್ನು, ಅದರ ಸುತ್ತಲೂ ಇರುವ ಬಿಳಿಯ ‘ಫ್ರೇಮ್’ನಿಂದ ಗುರುತಿಸಬಹುದು.
15.56 ಆದ್ದರಿಂದ, ಇದನ್ನು ಇಲ್ಲಿ ಪ್ರಯತ್ನಿಸೋಣ.
15:59 ಈಗ ನಮಗೆ ಮುಗಿಲಿಗೆ ಹೆಚ್ಚು ಹೊಳಪು ಕೊಡಬೇಕಾಗಿದೆ. ಹೀಗಾಗಿ ನಾನು ಇದನ್ನು ಮೇಲೆ ಎಳೆಯುತ್ತೇನೆ.
16:12 ಇದು ಸಾಕಷ್ಟು ಮನವರಿಕೆಯಾಗುವಂತಿದೆ. ಕಾರಣ, ಮುಗಿಲು ಹೊಳಪಾಗಿದೆ ಮತ್ತು ಮುಗಿಲು ಹಾಗೂ ಆಕಾಶಗಳ ನಡುವಿನ ಕೃತಕ ಅಂಚು ಮಾಯವಾಗಿದೆ.
16:29 ಇದು ಕೆಲಸ ಮಾಡುವುದು.
16.32 Sky ಲೇಯರ್ ಮತ್ತು ಅದರ ಕೆಳಗಿನ ‘ಲೇಯರ್’ಗಳನ್ನು ಸ್ವಿಚ್ ಮಾಡುವುದರಿಂದ ನಾವು ಇಮೇಜನ್ನು ಹೋಲಿಸೋಣ.
16:42 ನೀವು ವ್ಯತ್ಯಾಸವನ್ನು ನೋಡಬಹುದು.
16:46 ಇದು ಮೂಲ ಇಮೇಜ್ ಆಗಿದೆ.
16:50 ಈ ಲೇಯರ್, ಹೊಸ Sky ಮತ್ತು ಕೆಳಗಿನದು ಹೊಸ Land ಆಗಿದೆ.
16:57 Land ಸ್ವಲ್ಪ ಹೆಚ್ಚು ಕಾಂಟ್ರಸ್ಟನ್ನು ಬಳಸಬಹುದಿತ್ತು. ಆದರೆ ನನಗೆ ಖಚಿತವಾಗಿಲ್ಲ. ಹೀಗಾಗಿ ನಾನು ಇದನ್ನು ಪ್ರಯತ್ನಿಸಬೇಕಾಗುವದು.
17:07 ಆದ್ದರಿಂದ, land ಲೇಯರನ್ನು ಡಬಲ್ ಕ್ಲಿಕ್ ಮಾಡಿ. Overlay Mode ಅನ್ನು ಆಯ್ಕೆಮಾಡಿ. ಇದು ನಿಮಗೆ ಸ್ವಲ್ಪ ಹೆಚ್ಚು ಕಾಂಟ್ರಸ್ಟನ್ನು ಕೊಡುತ್ತದೆ. ಆದರೆ ಇದು ಖಂಡಿತವಾಗಿ ಬಹಳ ಹೆಚ್ಚು ಆಗಿದೆ. ಆದ್ದರಿಂದ ನಾನು ಓಪ್ಯಾಸಿಟೀಯನ್ನು ಕೆಳಗೆ ಜರುಗಿಸುತ್ತೇನೆ.
17:25 ಇದು ಉತ್ತಮವಾಗಿ ಕಾಣುತ್ತಿದೆಯೋ ಇಲ್ಲವೋ? ಆದರೆ ಇದು ಉತ್ತಮವಾಗಿದೆ ಎಂದು ನನಗೆನಿಸುತ್ತಿದೆ.
17:33 ಈಗ ನನ್ನ ಹತ್ತಿರ ನಾಲ್ಕು ‘ಲೇಯರ್’ಗಳಿವೆ.
17:36 ಬ್ಯಾಕ್ಗ್ರೌಂಡ್-ಇದು ಇನ್ನುಮುಂದೆ ನಿಜವಾಗಿಯೂ ಅಗತ್ಯವಿಲ್ಲದ ಮೂಲ ಇಮೇಜ್, land ಲೇಯರ್, land ಕಾಪಿ ಮತ್ತು ಲೇಯರ್ ‘ಮಾಸ್ಕ್’ನೊಂದಿಗೆ sky.
17:50 ಇಮೇಜ್’ನ ಮಾಹಿತಿಯನ್ನು ಕಳೆದುಕೊಳ್ಳದೆಯೇ ನಾನು, ಇಲ್ಲಿ ಈ ಎಲ್ಲ ವ್ಯಾಲ್ಯೂಗಳನ್ನು ಬದಲಾಯಿಸಬಹುದು.
17:58 ಇದು ‘ಲೇಯರ್ಸ್’ಅನ್ನು ಬಳಸುವದರಿಂದ ಆಗುವ ದೊಡ್ಡ ಅನುಕೂಲವಾಗಿದೆ.
18:03 ಈಗ, ಕೊನೆಯ ಭಾಗ ‘ಕ್ರಾಪಿಂಗ್’ಗಾಗಿ. ನಾರ್ಮನ್ ಅವರು 7: 5 ರೇಶಿಯೋನಲ್ಲಿ ಕ್ರಾಪ್ ಮಾಡಬೇಕೆಂದಿದ್ದರು, ಏಕೆಂದರೆ, ಅವರ ಪ್ರಿಂಟರ್ 7/5 ಇಂಚ್ ಪೇಪರ್ ಬಳಸುತ್ತದೆ.
18:18 ಆದ್ದರಿಂದ, ನಾವು ಅದನ್ನು ಮಾಡೋಣ. 7/5, Fixed Aspect Ratio
18:27 ಎಲ್ಲಿ ಕ್ರಾಪ್ ಮಾಡುವುದು? ನಾರ್ಮನ್, ಈ ಇಮೇಜನ್ನು ಎಲ್ಲಿ ಕ್ರಾಪ್ ಮಾಡಿದ್ದಾರೆ ಎನ್ನುವುದನ್ನು ನಾನು ಮರೆತಿದ್ದೇನೆ.
18:34 ಇಲ್ಲಿ ನಾವು ನಿರ್ಧರಿಸೋಣ.
18:36 ಈ ಮರವನ್ನು ಸೇರಿಸಿಕೊಳ್ಳಬೇಕು ಹಾಗೂ ಒಣ ಹುಲ್ಲನ್ನು ಸೇರಿಸಿಕೊಳ್ಳಬೇಕು.
18:43 ಆದ್ದರಿಂದ ನನಗೆ ಇಲ್ಲಿ, ಬಲಮೂಲೆಯಿಂದ ಆರಂಭಿಸಬೇಕು ಹಾಗೂ ಸುಮ್ಮನೆ Crop tool ಅನ್ನು ಮೇಲೆ ಎಳೆಯಬೇಕು.
18:58 ಇದು ಸುಮ್ಮನೆ ಅಭಿರುಚಿಯ ವಿಷಯವಾಗಿದೆ ಮತ್ತು ಪಂಪಿಂಗ್’ಗೆ ಸಂಬಂಧಿಸಿಲ್ಲ, ಯಾರೂ ಕಲಿಯಬಹುದಿತ್ತು.
19:06 ಅಲ್ಲಿ ‘ರೂಲ್ ಆಫ್ ಥರ್ಡ್ಸ್’ ಇರುತ್ತವೆ.
19:08 ನಾನು ಇದನ್ನು ಒಳಗೆ ಇಡುತ್ತೇನೆ.
19:13 ಇಲ್ಲಿ, ಈಗ ‘ಚಾಪೆಲ್’ನ ಮುಂಭಾಗವು, ಆಸಕ್ತಿಯ ಅಂಶಗಳಲ್ಲಿ ಒಂದಾಗಿದೆ ಎಂದು ನೀವು ನೋಡುತ್ತೀರಿ.
19:20 ಇಲ್ಲಿ ಹೆಚ್ಚು ಕಲಾತ್ಮಕವಾದ Golden section ಇದೆ ಮತ್ತು ಇದು ಸಹಾಯಕವಾಗಬಹುದು. ಆದರೆ ನಿಮ್ಮ ಕಣ್ಣು ಅತ್ಯುತ್ತಮವಾಗಿದೆ ಎಂದು ನನಗೆನಿಸುತ್ತದೆ.
19:33 ಇದು ಕೆಲಸ ಮಾಡುವುದು ಎಂದು ನನ್ನ ಭಾವನೆ.
19:37 ನನಗೆ ಅವರ ಇಮೇಜನ್ನು JEPG (ಜೇಪೆಗ್) ಇಮೇಜ್ ಎಂದು ಸೇವ್ ಮಾಡಬೇಕಾಗಿದೆ.
19:42 ಅದಕ್ಕೂ ಮೊದಲು ನಾನು ಅದನ್ನು ಸ್ವಲ್ಪ ಶಾರ್ಪ್ ಮಾಡಬೇಕು.
19:47 ನನ್ನ ಬದಲಾವಣೆಗಳನ್ನು ನಾನು ಮಾಡುವ ಮೊದಲು ಕಾಣುತ್ತಿದ್ದ ‘ಶಾರ್ಪನಿಂಗ್’ನ ಕುರುಹುಗಳು ಹೋಗಿಬಿಟ್ಟಿವೆ.
19:55 ಹ್ಯಾಲೋಗಳನ್ನು ನೋಡಲು ಬಿಳಿ ಗೆರೆಗಳು ಕಾಣಿಸುತ್ತಿದ್ದವು.
20:00 ಈ ಸಲವೂ ನಾನು ಕ್ರಮವಾಗಿ Filters, Enhance, Sharpen ‘ಮೋಡ್’ಗಳನ್ನು ಉಪಯೋಗಿಸುವೆನು ಎಂದು ನನಗೆನಿಸುತ್ತಿದೆ..
20:16 ಇದು ಮೂಲತಃ ಒಂದು ಅನ್-ಶಾರ್ಪ್ಡ್ ಮಾಸ್ಕ್ ಆಗಿದೆ. ಪೂರ್ವ ನಿರ್ಧರಿತ, ಸ್ಟ್ಯಾಂಡರ್ಡ್ ವ್ಯಾಲ್ಯೂಗಳೊಂದಿಗೆ ಶಾರ್ಪ್ ಮಾಡುವುದಾಗಿದೆ.
20:24 ನಾನು unsharped mask (ಅನ್-ಶಾರ್ಪ್ಡ್ ಮಾಸ್ಕ್) ನ ಬಗ್ಗೆ, ನಂತರದ ಟ್ಯುಟೋರಿಯಲ್’ನಲ್ಲಿ ವಿವರಿಸುವೆನು.
20:30 ನಾನು ಅದನ್ನು ಯಾವಾಗಲೂ ಬಳಸಿಲ್ಲ, ಅದಕ್ಕಾಗಿ ನಾನು ಅದನ್ನು ಸ್ವತಃ ಕಲಿಯಬೇಕು.
20:37 ಇದರಿಂದ ನಾನು ಅದರ ಬಗ್ಗೆ ಏನಾದರೂ ವಿವರಿಸಬಹುದು.
20:44 ಇದು, ಇಲ್ಲಿ ಚೆನ್ನಾಗಿ ಕೆಲಸ ಮಾಡುತ್ತದೆ ಎಂದು ನನಗೆನಿಸುತ್ತದೆ.
20:50 ನಾನು ಹೋಗಿ ಇಮೇಜನ್ನು ಸೇವ್ ಮಾಡಬಹುದು.
21:02 ನಾನು ಇವತ್ತು ಮಜವಾಗಿರುವ ವಿಷಯಗಳನ್ನು ಟೈಪ್ ಮಾಡುತ್ತಿದ್ದೇನೆ.
21:10 ಸರಿ. ‘ಜೇಪೆಗ್’, ಅನೇಕ ‘ಲೇಯರ್’ಗಳಿರುವ ಇಮೇಜನ್ನು ನಿಭಾಯಿಸಲು ಸಾಧ್ಯವಿಲ್ಲವೆಂದು ನನಗೆ ತಿಳಿದಿದೆ. ಹೀಗಾಗಿ ಇಮೇಜ್, ಈಗ ‘ಎಕ್ಸ್ಪೋರ್ಟ್’ ಮಾಡಲ್ಪಟ್ಟಿದೆ ಮತ್ತು ಲೇಯರ್’ನ ಬಗ್ಗೆ ಎಲ್ಲ ಮಾಹಿತಿಯು ಕಳೆದುಹೋಗಿದೆ.
21:22 ಮತ್ತು ಗಿಂಪ್, ಕೇವಲ ಮುನ್ಸೂಚನೆಯನ್ನು ಕೊಡುತ್ತದೆ.
21:26 85% (ಎಂಭತ್ತೈದು ಪ್ರತಿಶತ) ಗುಣಮಟ್ಟವು ಉತ್ತಮವಾಗಿದೆ ಎಂದು ನನ್ನ ಭಾವನೆ.
21:31 ಫೈಲ್ ಸೈಜ್ ಹಾಗೂ ‘ಇಮೇಜ್’ನ ಗುಣಮಟ್ಟಗಳ ನಡುವಿನ ಪರಿಪೂರ್ಣ ಹೊಂದಾಣಿಕೆ.
21:39 ನನ್ನ ‘ಇಮೇಜ್’ನ ‘ಶಾರ್ಪನಿಂಗ್’ ಹಾಗೂ ರಿಸೈಜಿಂಗ್ ನೊಂದಿಗೆ, ‘ಶೋ ನೋಟ್’ಗಾಗಿ ನನ್ನ ‘ಬ್ಲಾಗ್’ನಲ್ಲಿ ಹಾಕಬಹುದು. ಯಾವುದಕ್ಕೂ ಈಗ ನಾನು ಮರಳಿ ಹೋಗಬಹುದು.
21:55 Image/ Scale image ಗೆ ಹೋಗಿ. ನನಗೆ Width, 600 ‘ಪಿಕ್ಸೆಲ್’ಗಳಷ್ಟು ಬೇಕಾಗಿದೆ.
22:08 ಕೇವಲ ಅದನ್ನು ಸ್ಕೇಲ್ ಮಾಡಿ.
22:11 ಈಗ ಅದನ್ನು ಮತ್ತೊಮ್ಮೆ ಶಾರ್ಪ್ ಮಾಡುತ್ತೇನೆ. ನೀವು, ‘ಇಮೇಜ್’ಗೆ ಮಾಡುವ ವಿಷಯಗಳ ಸರಣಿಯಲ್ಲಿ, ‘ಶಾರ್ಪನಿಂಗ್’ ಕೊನೆಯ ಸ್ಟೆಪ್ ಆಗಿರಬೇಕು.
22:23 ಇದು ನಿಜವಾಗಿಯೂ ಕೊನೆಯ ಸ್ಟೆಪ್ ಆಗಿದೆ.
22:33 ಆನಂತರ ನೀವು ಏನನ್ನೂ ಬದಲಾಯಿಸದಿದ್ದರೆ ಮಾತ್ರ ಅಲ್ಗೊರಿದಮ್ ಸರಿಯಾಗಿ ಕೆಲಸ ಮಾಡುತ್ತದೆ.
22:39 ರಿ-ಸೈಜಿಂಗ್ ಸಹ ಇಲ್ಲ.
22:41 ನಾವು ಇದರತ್ತ ನೋಡೋಣ.
22:47 ನನಗೆ ಸ್ವಲ್ಪ ಹೆಚ್ಚು ಸಿಗಬಹುದು ಎಂದು ನನಗೆನಿಸುತ್ತದೆ.
22:52 ಮೂಲತಃ ಅದೇ ಪ್ರಮಾಣದ ಮೇಲೆ ಮುಗಿಸುವುದು.
22:57 ಈಗ ನನಗೆ ಈ ಇಮೇಜ್ ಸರಿಯಾಗಿದೆ. ನಾನು ಇದನ್ನು .600 (ಡಾಟ್ ಆರುನೂರು) ಎಂದು ಸೇವ್ ಮಾಡುತ್ತೇನೆ. ಇದರಿಂದ, ಆಮೇಲೆ ಯಾವ ಇಮೇಜನ್ನು ‘ಬ್ಲಾಕ್’ನಲ್ಲಿ ಇಡಬಹುದು ಎಂದು ನನಗೆ ತಿಳಿಯಲು ಸಾಧ್ಯವಿದೆ.
23:20 ನಾವು ಎರಡೂ ‘ಇಮೇಜ್’ಗಳನ್ನು ಹೋಲಿಸೋಣ.
23:23 ಇದು ನಾರ್ಮನ್ ಅವರು ಮಾಡಿದ್ದು ಹಾಗೂ ಇದು ನಾನು ಮಾಡಿದ್ದು ಆಗಿದೆ.
23:30 ನನ್ನ ಮುಗಿಲು ಖಂಡಿತವಾಗಿ ಉತ್ತಮವಾಗಿದೆ ಹಾಗೂ ನಾರ್ಮನ್, ಸಮುದ್ರ ಹಾಗೂ ಚಾಪೆಲ್’ಗಳೊಂದಿಗೆ ಒಳ್ಳೆಯ ಕೆಲಸ ಮಾಡಿದ್ದಾರೆ.
23:40 ಹಾಗೂ ಇವುಗಳ ಸಂಯೋಜನೆಯು ನಿಜಕ್ಕೂ ಅದ್ಭುತವಾದ ಚಿತ್ರವಾಗುತ್ತದೆ.
23:47 ಇಲ್ಲಿ, ಹೊಳಪಾಗಿಸುವುದನ್ನು ಸ್ವಲ್ಪ ಹೆಚ್ಚಾಗಿ ಮಾಡಿದ್ದೇನೆ ಎಂದು ನನಗೆನಿಸುತ್ತದೆ.
23:54 ಸರಿ, ಸುಲಭವಾದ ರೀತಿಯಲ್ಲಿ Sea ಲೇಯರನ್ನು ಸರಿಪಡಿಸಲು ನಾನು ಇಲ್ಲಿಗೆ ಮರಳಿದ್ದೇನೆ.
24:00 ಬ್ಯಾಕ್ಗ್ರೌಂಡ್ ‘ಲೇಯರ್’ನ ಮೇಲೆ ಮೂಲದ ಒಂದು ಕಾಪಿಯನ್ನು ನಾನು ಮಾಡುತ್ತೇನೆ.
24:06 ಈ ಲೇಯರನ್ನು Sea ಎಂದು ಹೆಸರಿಸುತ್ತೇನೆ.
24:10 ಈಗ ನಾನು ಇದನ್ನು Land copy ಯ ಮೇಲೆ ಹಾಗೂ sky ದ ಕೆಳಗೆ ಎಳೆಯುತ್ತೇನೆ.
24:16 ಈಗ, ಇದರಿಂದ sky ‘ಲೇಯರ್’ಗೆ ತೊಂದರೆಯಾಗಿಲ್ಲ, Land ಮಾತ್ರ ತೊಂದರೆಗೊಳಗಾಗಿದೆ ಎಂದು ನೀವು ನೋಡಬಹುದು.
24:25 ಆದರೆ ನಾನು ಅದಕ್ಕೆ ಮಾಸ್ಕ್ ಮಾಡುವೆನು.
24:27 ಅದನ್ನು ಮಾಡಲು ನಾನು ಲೇಯರ್ ಮಾಸ್ಕನ್ನು ಸೇರಿಸುವೆನು.
24:31 ರೈಟ್ ಕ್ಲಿಕ್ ಮಾಡಿ, Add Layer mask ಮತ್ತು ಈಗ Grayscale copy of layer ಅನ್ನು ತೆಗೆದುಕೊಳ್ಳುತ್ತೇನೆ.
24:40 ಈಗ ಇಲ್ಲಿ ನೆಲವನ್ನು ನೋಡಿ. ಇದು ಹೊಳಪಾಗಿದೆ.
24:45 ಇದು ಇಲ್ಲಿ ಮೊದಲಿದ್ದಂತೆ ಇಲ್ಲ ಆದರೆ ನೀವು ನೀರಿನಲ್ಲಿ ಅತಿ ಹೆಚ್ಚು ಬದಲಾವಣೆಗಳನ್ನು ನೋಡುತ್ತೀರಿ.
24:54 ಈಗ, ಇಲ್ಲಿ ‘ಲೇಯರ್ ಮಾಸ್ಕ್’ನ ಮೇಲೆ ಸ್ವಲ್ಪ ಕೆಲಸ ಮಾಡೋಣ.
24:58 Show Layer Mask ನ ಮೇಲೆ ಕ್ಲಿಕ್ ಮಾಡಿ.
25:01 ನೀವು ಅದನ್ನು ಇಲ್ಲಿ ನೋಡುತ್ತೀರಿ. Sky ಯನ್ನು ಸ್ವಿಚ್ ಆಫ್ ಮಾಡಿ.
25:05 ಈಗ ನಾನು Curves Tool ಅನ್ನು ಆಯ್ಕೆಮಾಡುತ್ತೇನೆ. ಭೂಮಿಯು ಗಾಢವಾಗುವಂತೆ, ಹಾಗೂ
25:17 ಸಮುದ್ರ ಹಾಗೂ ಮುಗಿಲುಗಳು ಹೊಳಪಾಗುವ ರೀತಿಯಲ್ಲಿ ‘ಕರ್ವ್ಸ್’ಅನ್ನು ಹೊಂದಿಸುತ್ತೇನೆ.
25:29 ಈಗ ನಾವು ‘ಇಮೇಜ್’ನತ್ತ ನೋಡೋಣ.
25:33 Show Layer mask ಅನ್ನು ಅನ್-ಕ್ಲಿಕ್ ಮಾಡಿ.
25:39 ಈಗ, ಹೆಚ್ಚೂಕಡಿಮೆ ಏನೂ ವ್ಯತ್ಯಾಸವಿಲ್ಲದೆ ಅದು, ಭೂಮಿಗಾಗಿ ಸಾಕಷ್ಟು ಚೆನ್ನಾಗಿದೆ ಹಾಗೂ ಸಮುದ್ರವು ಉತ್ತಮವಾಗಿದೆ ಎಂದು ನೀವು ನೋಡುತ್ತೀರಿ.
25:51 ಈಗ, ನಾನು sea ಲೇಯರನ್ನು ಆಯ್ಕೆಮಾಡಿದಾಗ ಸಮುದ್ರವು ಉತ್ತಮವಾಗಿದೆ ಎಂದು ನೀವು ನೋಡಬಹುದು.
25:59 ಕರ್ವ್ಸ್ ಟೂಲನ್ನು ಬಳಸಿ, ಈಗ ನಾನು ಇಮೇಜ್ನಲ್ಲಿಯ ವ್ಯಾಲ್ಯೂಗಳನ್ನು ಬದಲಾಯಿಸುತ್ತೇನೆ.
26:09 ನನಗೆನಿಸುವಂತೆ,
26:16 ಸಮುದ್ರಕ್ಕೆ ಸ್ವಲ್ಪ ಹೆಚ್ಚು ಕಾಂಟ್ರಾಸ್ಟನ್ನು ನಾನು ಕೊಡಬೇಕು.
26:24 ಇಲ್ಲಿ, ಸ್ವಲ್ಪ ಇದರಂತೆ.
26:31 ಇಮೇಜ್ನಲ್ಲಿ, ಇಲ್ಲಿ ಇಳಿಜಾರಿನ ತೀವ್ರತೆಯು ಹೆಚ್ಚು ಕಾಂಟ್ರಾಸ್ಟ್ ಆಗಿದೆ.
26:37 ‘ಹಿಸ್ಟೋಗ್ರಾಮ್’ನ ಈ ಭಾಗವು ಸಮುದ್ರವಾಗಿತ್ತು.
26:41 ಆದ್ದರಿಂದ ಇಲ್ಲಿ ನನಗೆ ಸಾಕಷ್ಟು ಕಾಂಟ್ರಾಸ್ಟ್ ಸಿಗುತ್ತದೆ.
26:49 ಅದು ಸ್ವಲ್ಪ ಸರಿಹೊಂದುವವರೆಗೆ ‘ಕರ್ವ್’ನೊಂದಿಗೆ ಸುತ್ತಮುತ್ತ ತುಂಬಿಸಿ.
26:56 ನಾನು ಇದನ್ನು ಮೊದಲು ಪ್ರಯತ್ನಿಸಿಲ್ಲ. ಆದ್ದರಿಂದ ಇಲ್ಲಿ ನಾನು ಸ್ವಲ್ಪ ಪ್ರಯೋಗವನ್ನು ಮಾಡಬೇಕು.
27:10 ನನ್ನ ಹತ್ತಿರ ಮೊದಲು ಇದ್ದುದಕ್ಕಿಂತ ಇದು ಬಹಳೇ ಉತ್ತಮವಾಗಿದೆ.
27:17 ಈಗ ಇಲ್ಲಿಯ ಬಂಡೆಗಳು ಮತ್ತು ಸಮುದ್ರದ ನಡುವಿನ ಅಂಚನ್ನು ನಾವು ನೋಡೋಣ.
27:24 ಮೊದಲು, ಅಲ್ಲಿ ನನಗೆ ಒಂದು ದೊಡ್ಡ ಸಮಸ್ಯೆ ಇತ್ತು.
27:28 ಹೀಗಾಗಿ, ಈ ಸಲ ನನಗೆ ಗೋಚರಿಸುವ ‘ಹ್ಯಾಲೋ’ಗಳು ಅಷ್ಟೇನೂ ಸಿಗಲಿಲ್ಲ.
27:34 ನಾನು ಇಲ್ಲಿ,ಇದರಲ್ಲಿ ಝೂಮ್ ಮಾಡಿದಾಗ,
27:41 ನೀವು ‘ಹ್ಯಾಲೋ’ದ ಹಾಗಿರುವ ಏನನ್ನೋ ನೋಡಬಹುದು. ಆದರೆ ಇದು ಸುಮ್ಮನೆ ಇಲ್ಲಿಯ ಸಮುದ್ರದ ದಡಕ್ಕೆ ಹೊಡೆಯುವ ನೊರೆಯಾಗಿದೆ.
27:51 ಅಲ್ಲಿ ‘ಹ್ಯಾಲೋ’ ಇಲ್ಲ.
27:56 ನನ್ನ ಮೊದಲಿನ ಯತ್ನಗಳಲ್ಲಿ, ನೆಲ, ಸಮುದ್ರ ಹಾಗೂ ಆಕಾಶದ ನಡುವೆ ವ್ಯತ್ಯಾಸವನ್ನು ಪಡೆಯಲು ನಾನು ಪ್ರಯತ್ನಿಸಿದ್ದೆ.
28:05 ನಾನು ಸುಮ್ಮನೆ ಹೆಚ್ಚಾಗಿ ಮಾಡಿದ್ದೇನೆ.
28:08 ಆದರೆ ಈ ರೀತಿ, ಇಲ್ಲಿ ಅದು ಚೆನ್ನಾಗಿ ಕೆಲಸ ಮಾಡುತ್ತದೆ ಎಂದು ನನ್ನ ಭಾವನೆ. ಇಲ್ಲಿ ಮಾಡುವುದು ಏನಾದರೂ ಉಳಿದಿದೆಯೇ?
28:18 ಹೆಚ್ಚಿನ ಮಾಹಿತಿಯು ಈ ಕೆಳಗಿನ ‘ಲಿಂಕ್’ನಲ್ಲಿ ಲಭ್ಯವಿದೆ. meetthegimp.org
28:25 ನಿಮ್ಮ ಅಭಿಪ್ರಾಯವನ್ನು ತಿಳಿಸಲು ದಯವಿಟ್ಟು ಈ ಕೆಳಗಿನ ಲಿಂಕ್’ಗೆ ಬರೆಯಿರಿ. info@meetthegimp.org
28:35 ಮುಂದಿನ ಸಲ ನಿಮ್ಮನ್ನು ನೋಡಲು ಆಶಿಸುತ್ತೇನೆ.

ವಂದನೆಗಳು.

28:41 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದಿಂದ, ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ.

Contributors and Content Editors

NaveenBhat, Sandhya.np14