GIMP/C2/Adjusting-Colours-Using-Layers/Kannada

From Script | Spoken-Tutorial
Jump to: navigation, search
Time Narration
00:22 ಮೀಟ್ ದ ಗಿಂಪ್ ಎನ್ನುವುದಕ್ಕೆ ನಿಮಗೆ ಸ್ವಾಗತ. ಇದನ್ನು ರೋಲ್ಫ್ ಸ್ಟೇನೋರ್ಟ್ ಅವರು ಉತ್ತರ ಜರ್ಮನಿಯ ಬ್ರೆಮೆನ್ ಎನ್ನುವಲ್ಲಿ ರೆಕಾರ್ಡ್ ಮಾಡಿದ್ದಾರೆ.
00:29 ಹಿಂದಿನ ಆವೃತ್ತಿಯಲ್ಲಿ ಎಡಿಟ್ ಮಾಡಿದ ನಂತರ ಈ ಇಮೇಜನ್ನು ಇಲ್ಲಿ ನಾನು ಪಡೆದಿದ್ದೇನೆ.
00:33 ಮತ್ತು ಈದಿನ ನಾನು ಬಣ್ಣಗಳನ್ನು ಸೆಟ್ ಮಾಡಲು ಏನಾದರೂ ಮಾಡಬೇಕೆಂದಿದ್ದೇನೆ.
00:39 ಏಕೆಂದರೆ ಈ ಇಮೇಜ್, ತುಂಬಾ ಹಸಿರಾಗಿದೆ.
00:41 ಇಲ್ಲಿ ಬಣ್ಣವನ್ನು ಹೊಂದಿಸಲು ಬೇಕಾದಷ್ಟು ವಿಧಾನಗಳಿವೆ, Curve ಟೂಲ್ ಎನ್ನುವುದು ಅವುಗಳಲ್ಲಿ ಒಂದಾಗಿದೆ.
00:47 ನಾನು ಟೂಲ್ ಬಾಕ್ಸ್ನಲ್ಲಿಯ Curves ಟೂಲ್ ನ ಮೇಲೆ ಕ್ಲಿಕ್ ಮಾಡುತ್ತೇನೆ. ಆಮೇಲೆ ಹಸಿರು ‘ಚಾನೆಲ್’ಅನ್ನು ಆಯ್ಕೆಮಾಡಿ ಕರ್ವ್ ಅನ್ನು ಕೆಳಗೆ ಎಳೆಯುತ್ತೇನೆ.
00:55 ಈಗ ಬಣ್ಣದ ಚಾನೆಲ್ ಗಳನ್ನು ಮತ್ತು ಇಮೇಜ್ನಲ್ಲಿಯ ಮಂಜು ನಿಜವಾದ ಮಂಜಿನ ಹಾಗೆ ಕಾಣುವದನ್ನು ನೀವು ನೋಡಬಹುದು.
01:02 ಈಗ ನಾನು ಬೂದುಬಣ್ಣದ ಇಮೇಜನ್ನು ಪಡೆಯುವಂತೆ ಕರ್ವನ್ನು ಹೊಂದಿಸಬೇಕಾಗಿದೆ, ಹಸಿರು ಅಥವಾ ಮಗೆಂಡಾ ಬಣ್ಣದ ಇಮೇಜ್ ಅಲ್ಲ.
01:13 ನನಗೆ Curves ಟೂಲನ್ನು ಬಳಸಬೇಕಾಗಿಲ್ಲ ಏಕೆಂದರೆ ಅದು ಇಮೇಜ್ನ ವಿವರಗಳನ್ನು ಹಾನಿಗೊಳಿಸುತ್ತದೆ ಮತ್ತು ಆ ಹಾನಿಯನ್ನು ಆಮೇಲೆ ನಾನು ಸರಿಪಡಿಸಲು ಸಾಧ್ಯವಿಲ್ಲ.
01:23 ನಾನು Undo ಎನ್ನುವ ಟೂಲನ್ನು ಬಳಸಬಹುದಿತ್ತು ಆದರೆ ಆನಂತರ ನಾನು ಎಲ್ಲ ಹಂತಗಳನ್ನು ಮತ್ತೆ ಮಾಡಬೇಕಾಗುವುದು.
01:28 ಆದ್ದರಿಂದ, ಇಮೇಜ್ ಗೆ ಹಾನಿ ಮಾಡದಿರುವ ಮತ್ತು ನಾನು ಆಮೇಲೆ ಸರಿಹೊಂದಿಸಲು ಸಾಧ್ಯವಿರುವ ಏನೋ ಒಂದು ನನಗೆ ಬೇಕಾಗಿದೆ.
01:34 ಲೇಯರ್ಸ್ನೊಂದಿಗೆ ಸಾದಾ ಫಿಲ್ಟರ್ ಬಳಸುವ ಇಂತಹ ಒಂದು ವಿಧಾನವಿದೆ.
01:39 ಇಲ್ಲಿ ಲೇಯರ್ ನ ಡೈಲಾಗನ್ನು ಓಪನ್ ಮಾಡಿದ್ದೇನೆ.
01:43 ನಮ್ಮ ಮೂಲ ಇಮೇಜ್, ಬ್ಯಾಕ್ಗ್ರೌಂಡ್ ಆಗಿರುವುದನ್ನು ನೀವು ಇಲ್ಲಿ ನೋಡುವಿರಿ.
01:47 ನಾನು ಸುಮ್ಮನೆ ಒಂದು ಹೊಸ ಲೇಯರನ್ನು ಸೇರಿಸುತ್ತೇನೆ ಹಾಗೂ Layer Fill Type ಎನ್ನುವುದರಲ್ಲಿ White ಅನ್ನು ಆಯ್ಕೆಮಾಡುತ್ತೇನೆ. ಅದಕ್ಕೆ ‘ಕಲರ್ ಕರೆಕ್ಶನ್ ಗ್ರೀನ್’ ಎಂಬ ಹೆಸರನ್ನು ಕೊಡುತ್ತೇನೆ.
01:59 ಈಗ ನನ್ನ ಇಮೇಜ್, ಪೂರ್ತಿಯಾಗಿ ಬಿಳಿ ಬಣ್ಣದ್ದಾಗಿದೆ ಆದರೆ ನಾನು ಲೇಯರ್ ಮೋಡನ್ನು ಬದಲಾಯಿಸಲು ಸಾಧ್ಯವಿದೆ.
02:05 ಈ ಲೇಯರ್ ಮೋಡ್ ಎನ್ನುವುದು ಮೂಲ ಬ್ಯಾಕ್ಗ್ರೌಂಡ್ ಲೇಯರ್ ಮತ್ತು ಹೊಸದಾಗಿ ಕ್ರಿಯೇಟ್ ಮಾಡಿದ ಲೇಯರ್, ಎರಡು ಲೇಯರ್ಗಳನ್ನು, ಒಗ್ಗೂಡಿಸುವ ಒಂದು ಅಲ್ಗೋರಿದಮ್ ಆಗಿದೆ.
02:16 ಹೀಗಾಗಿ, ನಾನು ಇಲ್ಲಿ Multiply ಮೋಡ್ ಎನ್ನುವುದನ್ನು ಆರಿಸಿಕೊಳ್ಳುತ್ತೇನೆ.
02:22 ಮತ್ತು ನೀವು ಮೂಲ ಇಮೇಜನ್ನು ಮೊದಲಿದ್ದಂತೆಯೇ ಮರಳಿ ಪಡೆಯುವಿರಿ.
02:27 ಈ Multiply ಮೋಡ್ ಎನ್ನುವುದು ಫೋರ್ಗ್ರೌಂಡ್ ಪಿಕ್ಸೆಲ್ಸ್ಗಳನ್ನು ಬ್ಯಾಕ್ಗ್ರೌಂಡ್ ಪಿಕ್ಸೆಲ್ಸ್ಗಳಿಂದ ಗುಣಿಸುತ್ತದೆ ಮತ್ತು ಗುಣಲಬ್ಧವನ್ನು 255 ರಿಂದ ಭಾಗಿಸುತ್ತದೆ.
02:37 ಮತ್ತು ಬಿಳಿ ಬಣ್ಣದ ಚಿತ್ರದಲ್ಲಿ ಎಲ್ಲ ಬಣ್ಣದ ಚಾನೆಲ್ಗಳು 255 ಆಗಿರುತ್ತವೆ, ಹೀಗಾಗಿ 255ರಿಂದ ಗುಣಿಸಿ ನಂತರ 255ರಿಂದ ಭಾಗಿಸಿದಾಗ ಆರಂಭಿಕ ಪಾಯಿಂಟ್ಅನ್ನು ಎಂದರೆ ಬ್ಯಾಕ್ಗ್ರೌಂಡ್ಅನ್ನು ಕೊಡುತ್ತದೆ.
02:52 ಆದರೆ ನಾನು ಹೊಸ ಲೇಯರ್ನಲ್ಲಿ ಒಂದು ಚಾನೆಲ್ಅನ್ನು ಕಡಿಮೆ ಮಾಡಿದರೆ ಅದು ಬ್ಯಾಕ್ಗ್ರೌಂಡ್ ನಲ್ಲಿಯೂ ಕಡಿಮೆ ಆಗುತ್ತದೆ ಏಕೆಂದರೆ 200 ರಿಂದ ಗುಣಿಸಿ, 255 ರಿಂದ ಭಾಗಿಸಿದಾಗ ಕಡಿಮೆ ಲಭಿಸುತ್ತದೆ.
03:06 ಈಗ ನನಗೆ ಕಡಿಮೆ ಹಸಿರು ಚಾನೆಲ್ ಇರುವಂತಹ ಬಣ್ಣ ವನ್ನು ಆಯ್ಕೆಮಾಡಬೇಕಾಗಿದೆ.
03:12 ಇಲ್ಲಿ ನಾನು ಕಪ್ಪು ಬಣ್ಣವನ್ನು ‘ಫೋರ್ಗ್ರೌಂಡ್’ನ ಬಣ್ಣವನ್ನಾಗಿ ಪಡೆದಿದ್ದೇನೆ, ಇದನ್ನು ನಾನು ‘ಬ್ಯಾಕ್ಗ್ರೌಂಡ್’ನ ಬಣ್ಣವನ್ನಾಗಿ ಮತ್ತು ಬಿಳಿ ಬಣ್ಣವನ್ನು ‘ಫೋರ್ಗ್ರೌಂಡ್’ನ ಬಣ್ಣವನ್ನಾಗಿ ಬದಲಾಯಿಸುತ್ತೇನೆ. ಮತ್ತು ಕೆಂಪು, ಹಸಿರು ಹಾಗೂ ನೀಲಿ ಬಣ್ಣಗಳ ಚಾನೆಲ್ಗಳು ಒಂದೇ ವ್ಯಾಲ್ಯೂವನ್ನು ಎಂದರೆ 255 ನ್ನು ಹೊಂದಿರುವುದನ್ನು ನೀವು ನೋಡಬಹುದು.
03:31 ಅಂದಹಾಗೆ ಇಲ್ಲಿ ಸ್ಲೈಡರ್ ಮೇಲಿರುವ ಬಣ್ಣಗಳಿಂದ ವಿಚಲಿತರಾಗಬೇಡಿರಿ.
03:36 ಇದು ನೀಲಿ ಆಗಿಲ್ಲ, ಇದು ಹಳದಿ ಆಗಿದೆ ಆದರೆ ನಾನು ಇದನ್ನು ಒಂದು ನಿರ್ದಿಷ್ಟ ಪಾಯಿಂಟ್ ವರೆಗೆ ಕೆಳಗೆ ಸ್ಲೈಡ್ ಮಾಡಿದಾಗ ಎಲ್ಲ ಸ್ಲೈಡರ್ಗಳಲ್ಲಿಯ ಬಣ್ಣಗಳು ತಾನಾಗಿಯೇ ಬದಲಾಗುವುದನ್ನು ನೀವು ನೋಡುತ್ತೀರಿ.
03:50 ಸರಿ, ನಾನು ಇಲ್ಲಿ ಹಸಿರು ಸ್ಲೈಡರನ್ನು ಆಯ್ಕೆಮಾಡುತ್ತೇನೆ ಮತ್ತು ಸ್ಲೈಡರನ್ನು ಸುಮಾರು 211 ರ ಹತ್ತಿರ ಎಳೆಯುತ್ತೇನೆ.
03:59 ನಾನು ‘ಫೋರ್ಗ್ರೌಂಡ್’ನ ಬಣ್ಣವನ್ನಾಗಿ ಪಡೆದಿರುವದನ್ನು ನನ್ನ ಇಮೇಜ್ನಲ್ಲಿ ಎಳೆಯುತ್ತೇನೆ ಹಾಗೂ ನನಗೆ ಸಿಗುವ ಪರಿಣಾಮ ಮಗೆಂಟಾ ಬಣ್ಣದ ಹಾಗಿದೆ.
04:10 ಆದರೆ ನಾನು ನನ್ನ ಹಸಿರು ಬಣ್ಣದ ಕಡಿತದ ತೀವ್ರತೆಯನ್ನು ಒಪ್ಯಾಸಿಟೀ ಸ್ಲೈಡರ್ನ ಸಹಾಯದಿಂದ ಸರಿಹೊಂದಿಸಬಹುದು.
04:19 ಮತ್ತು ನಾನು ಸೊನ್ನೆಗೆ ಮರಳಿ ಹೋದಾಗ ಹಳೆಯ ಇಮೇಜನ್ನು ಪಡೆಯುತ್ತೇನೆ. ಸ್ಲೈಡರನ್ನು ಮೇಲೆ ಎಳೆದಾಗ ನಾನು ಇಮೇಜ್ನಲ್ಲಿಯ ಹಸಿರು ಬಣ್ಣದ ಚಾನೆಲನ್ನು ಕಡಿಮೆ ಮಾಡಬಹುದು ಹಾಗೂ ಇಮೇಜ್, ಮಗೆಂಟಾ ಬಣ್ಣ ಪಡೆಯುವದನ್ನು ತಪ್ಪಿಸಬಹುದು.
04:35 ಇದು ಚೆನ್ನಾಗಿ ಕಾಣುತ್ತಿದೆಯೆಂದು ನನ್ನ ಭಾವನೆ.
04:38 Layers ಎನ್ನುವ ಟೂಲನ್ನು ಬಳಸಿ ನಾನು ನನಗೆ ಬೇಕಾದ ಯಾವುದೇ ಸಮಯದಲ್ಲಿ ಬದಲಾವಣೆಗಳನ್ನು ಮಾಡಬಹುದು ಮತ್ತು ಅದರ ಮೇಲೆ ಹೆಚ್ಚು ಲೇಯರ್ಗಳನ್ನು ಪೇರಿಸಿದಾಗ ಸೂಕ್ಷ್ಮ ಹೊಂದಾಣಿಕೆಗಳನ್ನು ಮಾಡಬಹುದು ಹಾಗೂ ನಾನು ಆಧಾರವಾಗಿರುವ ಚಿತ್ರದಲ್ಲಿ ಏನನ್ನಾದರೂ ಬದಲಾಯಿಸಿದರೂ ಸಹ ಈ ಬದಲಾವಣೆಗಳು ಉಳಿದುಕೊಳ್ಳುವವು.
04:55 ಈಗ ಇದು ಬೂದುಬಣ್ಣದ್ದಾಗಿ ಕಾಣುತ್ತಿದೆ ಮತ್ತು ನನಗೆ ಸ್ವಲ್ಪ ನೀಲಿ ಬಣ್ಣವನ್ನು ಸೇರಿಸಬೇಕಾಗಿದೆ. ಹೀಗಾಗಿ ಈ ಲೇಯರ್ನಲ್ಲಿ ಇನ್ನೂ ಬದಲಾವಣೆಗಳನ್ನು ಮಾಡಬೇಕಾಗಿದೆ.
05:03 ಮತ್ತೆ ನಾನು ಅದೇ ವಿಧಾನವನ್ನು ಅನುಸರಿಸುತ್ತೇನೆ ಹಾಗೂ ಒಂದು ಹೊಸ ಲೇಯರನ್ನು ಮಾಡಿ ಅದನ್ನು ‘ಕಲರ್ ಕರೆಕ್ಶನ್ ಬ್ಲೂ’ ಎಂದು ಕರೆದಿದ್ದೇನೆ.
05:11 ಮತ್ತು ಈಗ ನನಗೆ ಸ್ವಲ್ಪ ನೀಲಿ ಬಣ್ಣವನ್ನು ಸೇರಿಸಬೇಕಾಗಿದೆ.
05:15 ಇಮೇಜ್ನಲ್ಲಿ ನೀಲಿ ಬಣ್ಣವನ್ನು ಸೇರಿಸಲು ನಾನು Screen ಮೋಡನ್ನು ಬಳಸುತ್ತೇನೆ. ಇದು Multiply ಮೋಡ್ ಗಿಂತ ಸ್ವಲ್ಪ ಹೆಚ್ಚು ಜಟಿಲವಾಗಿದೆ.
05:24 ಸ್ಕ್ರೀನ್ ಮೋಡ್ನಲ್ಲಿ ಬಣ್ಣಗಳು ಮೊದಲು ಇನ್ವರ್ಟ ಮಾಡಲ್ಪಟ್ಟು ನಂತರ ಗುಣಿಸಲ್ಪಟ್ಟು ನಂತರ ಭಾಗಿಸಲ್ಪಡುತ್ತವೆ ಮತ್ತು ಇದು ತುಂಬಾ ಜಟಿಲವಾಗಿದೆ.
05:33 ನಾನು ‘ಫೋರ್ಗ್ರೌಂಡ್’ನ್ನು ಕಪ್ಪು ಬಣ್ಣಕ್ಕೆ ಬದಲಾಯಿಸುತ್ತೇನೆ ಮತ್ತು ನನಗೆ ಬೇಕಾದ ಬಣ್ಣವನ್ನು ನೇರವಾಗಿ ಸೇರಿಸುತ್ತೇನೆ ಹಾಗೂ ಈಗ ನನಗೆ ಸ್ವಲ್ಪ ನೀಲಿ ಬಣ್ಣವನ್ನು ಸೇರಿಸಬೇಕಾಗಿದೆ.
05:43 ಆದ್ದರಿಂದ ನೀಲಿ ಸ್ಲೈಡರನ್ನು ಸ್ವಲ್ಪ ಕೆಳಗೆ ಜರುಗಿಸುತ್ತೇನೆ.
05:47 ಮತ್ತು ಈ ಬಣ್ಣವನ್ನು ಈ ಇಮೇಜ್ನಲ್ಲಿ ಎಳೆದು ತರುತ್ತೇನೆ.
05:51 ಈಗಲೂ ಕಪ್ಪು ಬಣ್ಣದ್ದಾಗಿ ಕಾಣುತ್ತಿರುವ ಇದು ಇಲ್ಲಿ ನೀಲಿ ಇರಬೇಕಾಗಿತ್ತು ಆದರೆ ಇದು ಗಾಢವಾದ ನೀಲಿ ಬಣ್ಣದ್ದಾಗಿದೆ.
05:59 ಇಲ್ಲಿಯ ಇಮೇಜನ್ನು ನೋಡಿರಿ ಮತ್ತು ಇದನ್ನು ನಾನು ಸ್ವಿಚ್ ಆಫ್ ಮಾಡಿದಾಗ ನೀವು ಬದಲಾವಣೆಯನ್ನು ನೋಡುತ್ತೀರಿ.
06:04 ಈ ಇಮೇಜ್ ಖಂಡಿತವಾಗಿ ನೀಲಿ ಛಾಯೆಯನ್ನು ಹೊಂದಿರುತ್ತದೆ.
06:08 ನಾನು ಎರಡೂ ಹೊಸ ಲೇಯರ್ಗಳನ್ನು ಸ್ವಿಚ್ ಆಫ್ ಮಾಡಬಹುದು ಮತ್ತು ಅದರಿಂದ ನೀವು ಆರಂಭದ ಪಾಯಿಂಟನ್ನು ಪಡೆಯುತ್ತೀರಿ.
06:13 ನಾನು ಮೊದಲನೆಯ ಲೇಯರ್ನ ಮೇಲೆ ಕ್ಲಿಕ್ ಮಾಡಿದಾಗ ನಾವು ಕಡಿಮೆಯಾದ ಹಸಿರು ಚಾನೆಲ್ ಅನ್ನು ನೋಡುತ್ತೇವೆ ಮತ್ತು ಎರಡನೆಯ ಲೇಯರ್ನ ಮೇಲೆ ಕ್ಲಿಕ್ ಮಾಡಿದಾಗ ಅದು ಸ್ವಲ್ಪ ನೀಲಿ ಬಣ್ಣವನ್ನು ಸೇರಿಸುತ್ತದೆ.
06:22 ಇದು ತುಂಬಾ ನೀಲಿಯಾಗಿದೆ. ಆದ್ದರಿಂದ ನಾನು ಒಪ್ಯಾಸಿಟೀಯನ್ನು ಕಡಿಮೆ ಮಾಡುತ್ತೇನೆ.
06:27 ಇದು ಚೆನ್ನಾಗಿ ಕಾಣಿಸುತ್ತದೆ.
06:30 ನಾನು ಅದನ್ನು ನಂತರ ಯಾವಾಗಲೂ ಮಾಡಬಹುದು.
06:33 ಈ ಲೇಯರ್ ಟೂಲ್, ಬಹಳ ಪ್ರಭಾವಶಾಲಿಯಾಗಿದೆ ಏಕೆಂದರೆ ನೀವು ಲೇಯರ್ ಮೇಲೆ ಲೇಯರಗಳನ್ನು ಕ್ರಿಯೇಟ್ ಮಾಡಬಹುದು ಮತ್ತು ಪ್ರತಿಯೊಂದು ಲೇಯರ್ನಲ್ಲಿ ಕೆಳಗಿನ ಲೇಯರ್ನಿಂದ ಮೇಲೆ ಬರುವ ಪಿಕ್ಸೆಲ್ಗಳನ್ನು ನೀವು ಬದಲಾಯಿಸಬಹುದು.
06:44 ಸರಿಪಡಿಸುವ ಸಾಧ್ಯತೆಗಳು ಅಪಾರವಾಗಿವೆ ಮತ್ತು ನಿಮಗೆ ಬೇಕೆನಿಸಿದಾಗ ನೀವು ಅದನ್ನು ಮಾಡಬಹುದು.
06:51 ಉತ್ತಮವಾದ ಬಣ್ಣವನ್ನು ಪಡೆಯಲು ಬಹುಶಃ ಇಲ್ಲಿ ನೀವು ಒಪ್ಯಾಸಿಟೀ ಸ್ಲೈಡರನ್ನು ಸ್ವಲ್ಪ ಕೆಳಗೆ ಜಾರಿಸಬಹುದು. ಇಲ್ಲಿ ಬಣ್ಣವನ್ನು ಬದಲಾಯಿಸಲು ನಿಜವಾಗಿ ಕೈತುಂಬ ಸಾಧ್ಯತೆಗಳನ್ನು ಕೊಡುವ ಈ ಸ್ಲೈಡರ್ಗಳ ಜೊತೆಗೆ ನೀವು ಆಡಬಹುದು.
07:05 ಲೇಯರ್ ಟೂಲನ್ನು ವಿಶೇಷವಾದ ಪ್ರದರ್ಶನದಲ್ಲಿ ನಾನು ವಿಸ್ತಾರವಾಗಿ ವಿವರಿಸಬೇಕೆಂಬುದು ನನ್ನ ಎಣಿಕೆ. ಆದರೆ ಇವತ್ತಿಗೆ ಇಷ್ಟು ಸಾಕು.
07:13 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದಿಂದ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ ಭಟ್ಟ ಉಪ್ಪಿನಪಟ್ಟಣ ನಮಸ್ಕಾರ ಮತ್ತೆ ಭೇಟಿಯಾಗೋಣ.

Contributors and Content Editors

NaveenBhat, Sandhya.np14