BASH/C3/More-on-Redirection/Kannada
From Script | Spoken-Tutorial
Time | Narration |
00:01 | ಬ್ಯಾಶ್ ನಲ್ಲಿMore on redirection ಕುರಿತಾದ ಸ್ಪೊಕನ್-ಟ್ಯುಟೊರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು standard error ಮತ್ತು output ಗಳೆರಡರ Redirection, |
00:13 | redirected output ಅನ್ನು ಸೇರಿಸುವುದು |
00:15 | ಇವುಗಳ ಕುರಿತು ಉದಾಹರಣೆ ಗಳೊಂದಿಗೆ ಕಲಿಯುತ್ತೇವೆ |
00:19 | ಈ ಟ್ಯುಟೋರಿಯಲ್ ಅನ್ನು ತಿಳಿದುಕೊಳ್ಳಲು ಬ್ಯಾಶ್ ನಲ್ಲಿ ಶೆಲ್ ಸ್ಕ್ರಿಪ್ಟಿಂಗ್ ನ ಕುರಿತು ಕಲಿತಿರಬೇಕು. |
00:25 | ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ನಮ್ಮ ಜಾಲತಾಣವನ್ನು ಭೇಟಿಮಾಡಿ. |
00:30 | ಈ ಟ್ಯುಟೋರಿಯಲ್ ಗಾಗಿ ನಾನು'Ubuntu Linux 12.04 OS ಮತ್ತು |
00:35 | GNU BASH ಆವೃತ್ತಿ 4.2 ಗಳನ್ನು ಉಪಯೋಗಿಸುತ್ತೇನೆ. |
00:39 | ತಿಳಿದಿರಲಿ GNU bash version 4 ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ. |
00:46 | ಹಿಂದಿನ ಟ್ಯುಟೋರಿಯಲ್ ನಲ್ಲಿ ನಾವು standard output ಮತ್ತು standard error ಗಳ ಕುರಿತು ಕಲಿತಿದ್ದೇವೆ. |
00:52 | stderr ಮತ್ತು stdout ಗಳೆರಡನ್ನೂ ಒಂದೇ ಫೈಲ್ ಗೆ ರಿಡೈರೆಕ್ಟ್ ಮಾಡಬಹುದು. |
00:58 | ಇದನ್ನು ಬೇರೆ ಬೇರೆ ವಿಧಾನಗಳಿಂದ ಮಾಡಬಹುದು. |
01:01 | ನಾವು ಈ ಟ್ಯುಟೋರಿಯಲ್ ನಲ್ಲಿ redirection ನ ಎರಡು ಮುಖ್ಯ ವಿಧಾನಗಳನ್ನು ನೋಡೋಣ. |
01:08 | standard output ಮತ್ತು error ಗಳೆರಡನ್ನೂ ರಿಡೈರೆಕ್ಟ್ ಮಾಡುವ ಮೊದಲ ವಿಧಾನ- &>(ಆಂಪರ್ಸೆಂಡ್)ಚಿಹ್ನೆ ನಂತರ ದೊಡ್ಡದು ಚಿಹ್ನೆ. |
01:18 | ಸಿಂಟ್ಯಾಕ್ಸ್- command ಸ್ಪೇಸ್ ಆಂಪರ್ಸೆಂಡ್ ದೊಡ್ಡದು ಚಿಹ್ನೆ ಸ್ಪೇಸ್ filename. |
01:25 | redirect.sh ಎಂಬ ಫೈಲ್ ಅನ್ನು ತೆರೆಯೋಣ. |
01:30 | ನಾನು ಈ ಫೈಲ್ ನಲ್ಲಿ ಕೋಡ್ ಅನ್ನು ಟೈಪ್ ಮಾಡಿದ್ದೇನೆ. |
01:32 | ಇದು shebang line. |
01:36 | ls ಇದು /usr ಮತ್ತು /user ಎಂಬ ಎರಡು ಡೈರಕ್ಟರಿಗಳಲ್ಲಿರುವ ವಿಷಯಗಳನ್ನು ಪಟ್ಟಿ ಮಾಡುತ್ತದೆ. |
01:44 | ಗಮನಿಸಿ /user ಎಂಬ ಡೈರಕ್ಟರಿ ಇಲ್ಲ. |
01:48 | ಹಾಗಾಗಿ ls ಕಮಾಂಡ್ error ಅನ್ನು ಕಳುಹಿಸುತ್ತದೆ. |
01:52 | '&'(ಆಂಪರ್ಸೆಂಡ್) ನಂತರ ದೊಡ್ಡದು ಚಿಹ್ನೆಯು stdout ಮತ್ತು stderr' ಗಳನ್ನು out_(ಅಂಡರ್ ಸ್ಕೋರ್)file.txt ಫೈಲ್ ಗೆ ರಿಡೈರೆಕ್ಟ್ ಮಾಡುತ್ತದೆ. |
02:03 | ಈಗ ಫೈಲ್ ಅನ್ನು ಸೇವ್ ಮಾಡಿ. |
02:05 | redirect.sh. ಫೈಲ್ ಅನ್ನು ರಿಡೈರೆಕ್ಟ್ ಮಾಡೋಣ. |
02:07 | ಕೀ ಬೋರ್ಡ್ ನಲ್ಲಿCTRL ALT ಮತ್ತು T ಕೀಲಿಗಳನ್ನು ಒಟ್ಟಿಗೆ ಒತ್ತಿ ಟರ್ಮಿನಲ್ ಅನ್ನು ತೆರೆಯೋಣ. |
02:15 | chmod ಸ್ಪೇಸ್ ಪ್ಲಸ್ x ಸ್ಪೇಸ್ redirect ಡಾಟ್ sh ಎಂದು ಟೈಪ್ ಮಾಡಿ. |
02:23 | Enter ಅನ್ನು ಒತ್ತಿರಿ. |
02:25 | ಡಾಟ್ ಸ್ಲ್ಯಾಶ್ redirect ಡಾಟ್ sh ಎಂದು ಟೈಪ್ ಮಾಡಿ. |
02:28 | Enter ಅನ್ನು ಒತ್ತಿರಿ. |
02:30 | out_(ಅಂಡರ್ ಸ್ಕೋರ್)file.(ಡಾಟ್)txt ಫೈಲ್ ನಲ್ಲಿ ಫಲಿತವನ್ನು ನೋಡಬಹುದು. |
02:36 | cat ಸ್ಪೇಸ್ out_(ಅಂಡರ್ ಸ್ಕೋರ್)file.(ಡಾಟ್)txt ಎಂದು ಟೈಪ್ ಮಾಡಿ. |
02:42 | ನಾವು error ಮತ್ತು output ಗಳೆರಡನ್ನೂ ನೋಡಬಹುದು. |
02:48 | /user ಎಂಬ ಡೈರಕ್ಟರಿಗೆ ದೋಷವು ಈ ಫೈಲ್ ನಲ್ಲಿ ನಮೂದಿಸಲ್ಪಟ್ಟಿದೆ. |
02:51 | ಇದು '/user' ಎಂಬ ಡೈರಕ್ಟರಿಯು ಸಿಕ್ಕಿಲ್ಲ ಎಂದು ಸೂಚಿಸುತ್ತದೆ. |
02:56 | /usr ಡೈರಕ್ಟರಿಯ ವಿಷಯಗಳು ಡಿಸ್ಪ್ಲೇ ಆಗಿದೆ. |
03:00 | ಗಮನಿಸಿ '/usr' directory ಯಲ್ಲಿರುವ ವಿಷಯಗಳು ನಿಮ್ಮ ಸಿಸ್ಟಮ್ ನಲ್ಲಿ ಬೇರೆಯೇ ಇರಬಹುದು. |
03:06 | ಈಗ ಈ ಫೈಲ್ ಅನ್ನು ಅಳಿಸೋಣ.ಅದಕ್ಕಾಗಿ ಟರ್ಮಿನಲ್ ನಲ್ಲಿ: rm ಸ್ಪೇಸ್ out_(ಅಂಡರ್ ಸ್ಕೋರ್)file. (ಡಾಟ್)txt ಎಂದು ಟೈಪ್ ಮಾಡಿ. |
03:15 | ಇನ್ನೊಂದು ವಿಧಾನ – ಫೈಲ್ ನ ಹೆಸರಿನ ನಂತರ 2 ದೊಡ್ಡದು ಚಿಹ್ನೆ ಆಂಪರ್ಸೆಂಡ್ 1 ಎಂದು ಟೈಪ್ ಮಾಡುವುದು. |
03:24 | ಸಿಂಟ್ಯಾಕ್ಸ್- command ಸ್ಪೇಸ್ ದೊಡ್ಡದು ಚಿಹ್ನೆ filename ಸ್ಪೇಸ್ 2 ದೊಡ್ಡದು ಚಿಹ್ನೆ ಆಂಪರ್ಸೆಂಡ್ 1. |
03:33 | ನಾವು ಇದನ್ನು ಸ್ಲ್ಯಾಶ್ dev ಸ್ಲ್ಯಾಶ್ null (/dev/null) ಫೈಲ್ ಗೆ ಕೂಡ ರಿಡೈರೆಕ್ಟ್ ಮಾಡಬಹುದು. |
03:39 | ಈಗ ನಾವು ಸ್ಲ್ಯಾಶ್ dev ಸ್ಲ್ಯಾಶ್ null (/dev/null) ಫೈಲ್ ನ ಕುರಿತು ಇನ್ನೂ ಸ್ವಲ್ಪ ತಿಳಿದುಕೊಳ್ಳೋಣ. |
03:45 | ಇದು ಒಂದು ವಿಶೇಷ ರೀತಿಯ ಫೈಲ್. |
03:48 | ಇದೊಂದು null file ಅಥವಾ ನಾವು ಏನನ್ನಾದರೂ ಡಂಪ್ ಮಾಡಲು ಇದನ್ನು ಬಳಸುತ್ತೇವೆ. |
03:52 | ಇದು output ಮತ್ತು error ಸಂದೇಶಗಳನ್ನು ಹೊಂದಿರುತ್ತದೆ. |
03:57 | ಇದನ್ನು bit bucket ಎಂದೂ ಕರೆಯುತ್ತಾರೆ. |
04:00 | ಈಗ ನಾವು gedit ನಲ್ಲಿ ನಮ್ಮ code ಗೆ ಹಿಂದಿರುಗೋಣ. |
04:04 | ಈಗ standard output ಮತ್ತು error ಗಳೆರಡನ್ನೂnull file ಗೆ redirect ಮಾಡೋಣ. |
04:11 | ನಾನು ಕೋಡ್ ನ ಈ ಸಾಲನ್ನು ನಕಲು ಮಾಡಿ ಇಲ್ಲಿ ಪೇಸ್ಟ್ ಮಾಡುತ್ತೇನೆ. |
04:16 | ನಾನು output ಮತ್ತು error ಸಂದೇಶಗಳೆರಡೂ ತ್ಯಜಿಸಲ್ಪಡಬೇಕೆಂದು ಬಯಸುತ್ತೇನೆ. |
04:21 | ಅದಕ್ಕಾಗಿ ನಾನು ನಕಲು ಮಾಡಿದ ಕೋಡ್ ನ ಈ ಭಾಗವನ್ನು ಬದಲಿಸುತ್ತೇನೆ. > (ದೊಡ್ಡದು ಚಿಹ್ನೆ ) ಅಂದರೆ truncate ಅಥವಾ write ಎಂದು ಅರ್ಥ. |
04:30 | ಸ್ಲ್ಯಾಶ್ dev ಸ್ಲ್ಯಾಶ್ null ಇದು null file. 2>&1 (2 ದೊಡ್ಡದು ಚಿಹ್ನೆ ಆಂಪರ್ಸೆಂಡ್ 1) |
04:37 | ಸಂಖ್ಯೆ “2” standard error ಅನ್ನು “1” ರಿಂದ ಸೂಚಿಸಿದ standard output, ಗೆ ರಿಡೈರೆಕ್ಟ್ ಮಾಡುತ್ತದೆ. |
04:45 | Save ಮೇಲೆ ಕ್ಲಿಕ್ ಮಾಡಿ ಕೋಡ್ ಅನ್ನು ಸೇವ್ ಮಾಡಿ. |
04:48 | ಈಗ redirect.sh ಫೈಲ್ ಅನ್ನು ರನ್ ಮಾಡೋಣ. |
04:52 | terminal ಗೆ ಹಿಂದಿರುಗಿ. |
04:54 | up-arrow ಕೀಲಿಯನ್ನು ಒತ್ತಿ ಹಿಂದಿನ ಕಮಾಂಡ್ ಅಂದರೆ ಡಾಟ್ ಸ್ಲ್ಯಾಶ್ redirect.sh ಅನ್ನು ಪುನರಾವರ್ತಿಸಿ ಮತ್ತು Enter ಅನ್ನು ಒತ್ತಿರಿ. |
05:03 | ಈಗ cat out_(ಅಂಡರ್ ಸ್ಕೋರ್)file.(ಡಾಟ್ )txt ಎಂದು ಟೈಪ್ ಮಾಡಿ ಫಲಿತವನ್ನು ನೋಡಬಹುದು. |
05:11 | slides ಗೆ ಹಿಂದಿರುಗಿ. |
05:15 | ನಾವು standard output ಅಥವಾ error ಗಳನ್ನು ಸೆರೆಹಿಡಿಯಬಹುದು ಅಥವಾ ಫೈಲ್ ಗೆ ಸೇರಿಸಬಹುದು. |
05:21 | output ಅಥವಾ error ಫೈಲ್ ನ ಕೊನೆಯಲ್ಲಿ ಸೇರಿಕೊಳ್ಳುತ್ತದೆ. |
05:26 | ಆ ಫೈಲ್ ಇಲ್ಲವಾದಲ್ಲಿ ಇದು ಹೊಸ ಫೈಲ್ ಅನ್ನು ರಚಿಸಿಕೊಳ್ಳುತ್ತದೆ. |
05:31 | ಸಿಂಟ್ಯಾಕ್ಸ್ command ಸ್ಪೇಸ್ ದೊಡ್ಡದು ಚಿಹ್ನೆ ಸ್ಪೇಸ್ ನಂತರ filename . |
05:41 | ಈಗ ಇದನ್ನು ಉದಾಹರಣೆಯೊಂದಿಗೆ ಅರ್ಥಮಾಡಿಕೊಳ್ಳೋಣ. |
05:45 | redirect.(ಡಾಟ್)sh ಫೈಲ್ ಅನ್ನು ತೆರೆಯುತ್ತೇನೆ. |
05:49 | ಈಗ ಇಲ್ಲಿ : date ಸ್ಪೇಸ್ ದೊಡ್ಡದು ಚಿಹ್ನೆ ದೊಡ್ಡದು ಚಿಹ್ನೆ ಸ್ಪೇಸ್ out_(ಅಂಡರ್ ಸ್ಕೋರ್)file.(ಡಾಟ್)txt ಎಂದು ಟೈಪ್ ಮಾಡಿ. |
06:00 | 'date' ಕಮಾಂಡ್ output ಆಗಿ system date ಅನ್ನು ಡಿಸ್ಪ್ಲೇ ಮಾಡುತ್ತದೆ. |
06:06 | ನಾವು terminal ನಲ್ಲಿ 'date' ಎಂದು ಟೈಪ್ ಮಾಡಿ ಈ command ಅನ್ನು ಪರೀಕ್ಷಿಸಬಹುದು. |
06:11 | terminal ಗೆ ಹಿಂದಿರುಗಿ. date ಎಂದು ಟೈಪ್ ಮಾಡಿ. ನೀವು ಸಿಸ್ಟಮ್ ನ ಪ್ರಸ್ತುತ ದಿನಾಂಕ ಡಿಸ್ಪ್ಲೇ ಆಗುವುದನ್ನು ನೋಡಬಹುದು. |
06:23 | date ಕಮಾಂಡ್ ನ ಫಲಿತವು out_(ಅಂಡರ್ ಸ್ಕೋರ್)file.(ಡಾಟ್)txt ಫೈಲ್ ನಲ್ಲಿ ಸೇರಿರುವುದನ್ನು ನೋಡಬಹುದು. |
06:31 | ನಾವು ಈ ಫೈಲ್ ಅನ್ನು 'ls' ಕಮಾಂಡ್ ನ standard output ಮತ್ತು error ಗಳನ್ನು ಹಿಡಿದಿಡಲು ಬಳಸುತ್ತೇವೆ. |
06:39 | Save ಮೇಲೆ ಕ್ಲಿಕ್ ಮಾಡಿ. terminal ಗೆ ಹಿಂದಿರುಗಿ. |
06:43 | up-arrow ಕೀಲಿಯನ್ನು ಒತ್ತಿ ಡಾಟ್ ಸ್ಲ್ಯಾಶ್ redirect ಡಾಟ್ sh ಕಮಾಂಡ್ ಅನ್ನು ಪುನರಾವರ್ತಿಸಿ. |
06:50 | ಮತ್ತು Enter ಅನ್ನು ಒತ್ತಿರಿ. |
06:52 | ಈಗ out_(ಅಂಡರ್ ಸ್ಕೋರ್) file.(ಡಾಟ್)txt ಯನ್ನು ತೆರೆದು ಫಲಿತವನ್ನು ನೋಡೋಣ. |
06:59 | cat ಸ್ಪೇಸ್ out_(ಅಂಡರ್ ಸ್ಕೋರ್)file.(ಡಾಟ್)txt ಎಂದು ಟೈಪ್ ಮಾಡಿ. |
07:05 | 'date' ಕಮಾಂಡ್ ನ ಫಲಿತವು ಫೈಲ್ ನ ಕೊನೆಯಲ್ಲಿ ಸೇರಿಕೊಂಡಿರುವುದನ್ನು ಗಮನಿಸಿ. |
07:12 | ಇಲ್ಲಿಗೆ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. |
07:15 | ಸಾರಾಂಶವನ್ನು ನೋಡೋಣ. |
07:17 | ಈ ಟ್ಯುಟೋರಿಯಲ್ ನಲ್ಲಿ ನಾವು |
07:19 | standard error ಮತ್ತು output ಗಳೆರಡರ Redirection,redirected output ಅನ್ನು ಫೈಲ್ ನ ಕೊನೆಯಲ್ಲಿ ಸೇರಿಸುವುದರ ಕುರಿತು ಕಲಿತಿದ್ದೇವೆ. |
07:27 | ಸ್ವಂತ ಅಭ್ಯಾಸಕ್ಕಾಗಿ, |
07:29 | X_(ಅಂಡರ್ ಸ್ಕೋರ್)file.(ಡಾಟ್ )txt ಫೈಲ್ ಅನ್ನು ಸ್ವಲ್ಪ ವಿಷಯಗಳ ಸಮೇತ ರಚನೆ ಮಾಡಿ. |
07:34 | out_(ಅಂಡರ್ ಸ್ಕೋರ್)file.(ಡಾಟ್)txt ಮತ್ತು X_(ಅಂಡರ್ ಸ್ಕೋರ್) file.(ಡಾಟ್)txt ಫೈಲ್ ಗಳಲ್ಲಿರುವುದನ್ನು ಹೊಸ ಫೈಲ್ ಗೆ ರಿಡೈರೆಕ್ಟ್ ಮಾಡಿ. |
07:44 | ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ spoken-tutorial.org/What_is_a_Spoken_Tutorial |
07:47 | ಅದು Spoken Tutorial projectನ ಕುರಿತು ತಿಳಿಸಿಕೊಡುತ್ತದೆ. |
07:51 | ನಿಮ್ಮಲ್ಲಿ ಒಳ್ಳೆಯ ಬೇಂಡ್-ವಿಡ್ತ್ ಇರದಿದ್ದರೆ ಡೌನ್ಲೋಡ್ ಮಾಡಿಕೊಂಡೂ ನೋಡಬಹುದು. |
07:56 | Spoken Tutorial Project Team ಇದು spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ. online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ |
08:06 | ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆ ಬರೆಯಿರಿ |
08:13 | Spoken Tutorial Projectಇದು Talk to a Teacher ಯೋಜನೆಯ ಭಾಗವಾಗಿದೆ. |
08:17 | ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ
ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. Spoken- tutorial.org\NMEICT-Intro |
08:30 | ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ. |
08:37 | ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ. ಧನ್ಯವಾದಗಳು. |